Tag: owl

  • ಇಂದಿನಿಂದ ದೇವಾಲಯಗಳು ಓಪನ್ – ಗರ್ಭಗುಡಿಯ ಮೇಲೆ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪತ್ಯಕ್ಷ

    ಇಂದಿನಿಂದ ದೇವಾಲಯಗಳು ಓಪನ್ – ಗರ್ಭಗುಡಿಯ ಮೇಲೆ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪತ್ಯಕ್ಷ

    ದಾಸರಹಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ಮುಚ್ಚಿದ್ದ ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಇಂದಿನಿಂದ ದೇವಾಲಯಗಳನ್ನು ತರೆಯಲಾಗಿದ್ದು, ದೇವಾಸ್ಥಾನವೊಂದರಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪ್ರತ್ಯಕ್ಷವಾಗಿದೆ.

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿರುವ ರಾಜಮಾತ ಉಚ್ಛಂಗಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅಚ್ಚರಿಯೇ ಕಾದಿದ್ದು, ದೇವರ ಗರ್ಭಗುಡಿಯ ಮೇಲೆ ಅಚ್ಚರಿ ರೂಪದಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ದರ್ಶನವನ್ನು ನೀಡಿದೆ.

    ಶುಭ ಸಂಕೇತವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆಗೆ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಪೂಜೆಯನ್ನು ಸಲ್ಲಿಸಿದರೂ ಕೂಡ ಬಿಳಿ ಗೂಬೆ ದೇವಸ್ಥಾನವನ್ನು ಬಿಟ್ಟು ತೆರಳಲಿಲ್ಲ. ಸದ್ಯ ದೇವಸ್ಥಾನದ ವತಿಯಿಂದ ಬೇಕಾದ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ ಹಾಗೂ ದೇವಾಲಯಕ್ಕೆ ಬಂದಂತಹ ಭಕ್ತಾದಿಗಳಿಗೆ ಮಂಗಳಾರತಿ ಮಾತ್ರ ನೀಡಲಾಗುತ್ತಿದೆ. ಅಲ್ಲದೇ ದೇವಸ್ಥಾನದಲ್ಲಿ ಯಾವುದೇ ವಿಶೇಷ ಪೂಜೆಯನ್ನು ಹಾಗೂ ದೇವರ ಪ್ರಸಾದವನ್ನು ಕೂಡ ನೀಡಲಾಗುತ್ತಿಲ್ಲ. ದೇವಸ್ಥಾನಕ್ಕೆ ನಿಧಾನವಾಗಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

  • ಗುಗ್ಗಳದ ಸದ್ದಿಗೆ ತಲೆಯಾಡಿಸಿದ ಗೂಬೆ

    ಗುಗ್ಗಳದ ಸದ್ದಿಗೆ ತಲೆಯಾಡಿಸಿದ ಗೂಬೆ

    ಹಾವೇರಿ: ವೀರಮಹೇಶ್ವರನ ಗುಗ್ಗಳದ ವೇಳೆ ಸಾಮಾಳದ ಸದ್ದಿಗೆ ಗೊಬೆ ಕತ್ತು ಹೊರಳಾಡಿಸುತ್ತಿದ್ದ ನೋಡಿ ಭಕ್ತರು ಆಚ್ಚರ್ಯ ವ್ಯಕ್ತಪಡಿಸಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ವೀರಮಹೇಶ್ವರನ ಜಾತ್ರೆ ನಡೆಯುತ್ತಿತ್ತು. ದೇವಸ್ಥಾನದ ಮುಂದೆ ವೀರಮಹೇಶ್ವರನ ಗುಗ್ಗಳ ನಡೆದಿದ್ದ ವೇಳೆ ಪಕ್ಕದ ದ್ಯಾಮವ್ವದೇವಿ ದೇವಸ್ಥಾನದ ಮೇಲೆ ಕುಳಿತು ಕತ್ತು ಗೂಬೆ ಹೊರಳಾಡಿಸ್ತಿದೆ. ಸಾಮಾಳದ ಸದ್ದಿಗೆ ಕತ್ತು ಹೊರಳಾಡಿಸ್ತಿದ್ದ ಗೂಬೆಯನ್ನ ಕಂಡ ಜನ ಒಂದು ಕ್ಷಣ ಆಶ್ಚರ್ಯ ಚಕಿತರಾಗಿ ದೃಶ್ಯಗಳನ್ನ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

    ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಳಿತಲ್ಲೇ ಕುಳಿತು ಗೂಬೆ ಸಂಗೀತಕ್ಕೆ ಮನಸೋತಂತೆ ತಲೆಯಾಡಿಸಿದೆ. ಗೂಬೆಯ ವಿಡಿಯೋವನ್ನ ಸ್ಥಳೀಯರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯಮಟ್ಟದಲ್ಲಿ ವಿಡಿಯೋ ವೈರಲ್ ಆಗಿದೆ.

  • ಗೂಬೆ ಹಿಡಿದು ಟಿಕ್ ಟಾಕ್ ಮಾಡಿ 25 ಸಾವಿರ ರೂ. ದಂಡ ಕಟ್ಟಿದ ಯುವತಿ

    ಗೂಬೆ ಹಿಡಿದು ಟಿಕ್ ಟಾಕ್ ಮಾಡಿ 25 ಸಾವಿರ ರೂ. ದಂಡ ಕಟ್ಟಿದ ಯುವತಿ

    – ಗೂಬೆ ಕೊಟ್ಟವರಿಗೂ ಬಿತ್ತು 10 ಸಾವಿರ ರೂ. ದಂಡ

    ಗಾಂಧಿನಗರ: ಯುವತಿಯೊಬ್ಬಳು ಗೂಬೆ ಹಿಡಿದು ಟಿಕ್ ಟಾಕ್ ಮಾಡಿ 25 ಸಾವಿರ ರೂ. ದಂಡ ಕಟ್ಟಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

    ಸೂರತ್ ನಿವಾಸಿ ಕೀರ್ತಿ ಪಟೇಲ್ ದಂಡ ಪಾವತಿಸಿದ ಯುವತಿ. ಕೀರ್ತಿ ಪಟೇಲ್ ಇತ್ತೀಚೆಗೆ ಗೂಬೆ ಹಿಡಿದು ವಿಡಿಯೋ ಮಾಡಿ ತನ್ನ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಕೀರ್ತಿ ಪಟೇಲ್ ಅಳಿವಿನಂಚಿನಲ್ಲಿರುವ ವಿಶಿಷ್ಟ ಗೂಬೆ ಹಿಡಿದು ಟಿಕ್ ಟಾಕ್ ಮಾಡಿದ್ದಕ್ಕೆ ಪ್ರಾಣಿ ಪ್ರಿಯರು ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವಾಗಿ ವನ್ಯ ಜೀವಿ ಹಾಗೂ ಪ್ರಕೃತಿ ಕಲ್ಯಾಣ ಟ್ರಸ್ಟ್ ಅರಣ್ಯ ಇಲಾಖೆಗೆ ದೂರು ನೀಡಿತ್ತು. ವಿಡಿಯೋವನ್ನು ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. 1972ರ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದ ಕೀರ್ತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಯುವತಿಯ ಕೈಗೆ ಗೂಬೆಯನ್ನು ಕೊಟ್ಟ ವ್ಯಕ್ತಿಗೂ 10 ಸಾವಿರ ರೂ. ದಂಡ ಹಾಕಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಕೀರ್ತಿ ಪಟೇಲ್, ತನ್ನ ವಿಡಿಯೋದಲ್ಲಿ ಗೂಬೆಗಳನ್ನು ಮನುಷ್ಯನಿಗೆ ಹೋಲಿಕೆ ಮಾಡಿದ್ದಳು. ರಾತ್ರಿ ವೇಳೆ ಮಾತ್ರ ಗೂಬೆಗಳಿಗೆ ದೃಷ್ಟಿ ಇರುತ್ತದೆ. ಅವು ಕೆಟ್ಟ ಸಂಗತಿಗಳನ್ನು ನೋಡುವುದಿಲ್ಲ. ಆದರೆ ನಮಗೆ 24 ಗಂಟೆಯೂ ದೃಷ್ಟಿ ಇದ್ದರೂ ಕೆಟ್ಟ ಕೆಲಸಗಳನ್ನೇ ಮಾಡುತ್ತೇವೆ ಎಂದು ಗೂಬೆಯನ್ನು ಕೈನಲ್ಲಿ ಹಿಡಿದು ಭಾಷಣ ಬಿಗಿದಿದ್ದಳು.

    https://twitter.com/schintan19882/status/1221051852868870144

  • ಪೈಲಟ್ ಜಾಗದಲ್ಲಿ ಕುಳಿತ ಗೂಬೆ

    ಪೈಲಟ್ ಜಾಗದಲ್ಲಿ ಕುಳಿತ ಗೂಬೆ

    ಮುಂಬೈ: ನಗರದ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಬೋಯಿಂಗ್ 777 ವಿಮಾನದ ಪೈಲಟ್ ಗಳು ಕುಳಿತುಕೊಳ್ಳುವ ಜಾಗದಲ್ಲಿ ಗೂಬೆ ನೋಡಿ ವಿಮಾನ ಎಂಜಿನಿಯರ್ಸ್ ಆಶ್ಚರ್ಯಗೊಂಡಿದ್ದಾರೆ.

    ವಿಮಾನದ ಕಿಟಕಿ ಪಕ್ಕದಲ್ಲಿರುವ ಕಮಾಂಡರ್ ಸೀಟಿನಲ್ಲಿ ಗೂಬೆ ಕುಳಿತಿತ್ತು. ಅದರ ಮುಖ ಹೃದಯಾಕಾರದಲ್ಲಿ ಇರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ವಿಮಾನದಲ್ಲಿ ಗೂಬೆಯನ್ನು ನೋಡಿದ ಅಧಿಕಾರಿಗಳು ಅದನ್ನು ಹಿಡಿದು ಬಳಿಕ ಮುಂಬೈ ವಿಮಾನ ನಿಲ್ದಾಣದ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಿದ್ದಾರೆ.

    ಸಿಬ್ಬಂದಿ ವಿಮಾನದಿಂದ ಹೊರಕ್ಕೆ ಬರುತ್ತಿದ್ದಾಗಲೂ ಏನು ಗದ್ದಲವನ್ನು ಉಂಟುಮಾಡದೇ ಗೂಬೆ ಸುಮ್ಮನೆ ಕುಳಿತಿತ್ತು. ಈ ವೇಳೆ ಸಿಬ್ಬಂದಿ ಅದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಭಾನುವಾರ ರಾತ್ರಿ ವಿಮಾನವನ್ನು ನಿಲ್ಲಿಸಿದಾಗ, ಬಾಗಿಲು ತೆರೆದಿದ್ದರಿಂದ ಗೂಬೆ ಒಳಗೆ ಆಹಾರ ಹುಡುಕುತ್ತಾ ಬಂದಿದೆ. ಸೋಮವಾರ ಹಾರಾಟಕ್ಕೆ ವಿಮಾನ ಸಿದ್ಧಗೊಳಿಸಲು ಒಳಬಂದ ಸಿಬ್ಬಂದಿಗೆ ಗೂಬೆ ಕಾಣಿಸಿದೆ.

    ಈ ಮಧ್ಯಮ ಗಾತ್ರದ ಗೂಬೆಗಳು ಸುದೀರ್ಘವಾದ, ದುಂಡಾದ ರೆಕ್ಕೆಗಳು ಮತ್ತು ಸಣ್ಣ ಬಾಲಗಳನ್ನು ಹೊಂದಿರುತ್ತವೆ. ಅವುಗಳು ಸರಾಗವಾಗಿ ವಿಮಾನದ ಶೈಲಿಯಲ್ಲಿ ಹಾರಾಟ ಮಾಡುತ್ತವೆ. ಇವುಗಳಿಗೆ ಕಿವಿ ಇಲ್ಲದ ಕಾರಣ ತಲೆ ದುಂಡಾಗಿರುತ್ತದೆ. ಮುಂಬೈ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶ ಜೋಪಡಿಗಳಿಂದ ಕೂಡಿದ್ದು, ಅರಣ್ಯ ಪ್ರದೇಶವನ್ನು ಹೊಂದಿದೆ. ಈ ಪ್ರದೇಶದಿಂದ ಈ ಗೂಬೆ ಆಹಾರ ಅರಸುತ್ತಾ ವಿಮಾನ ನಿಲ್ದಾಣಕ್ಕೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚುನಾವಣೆ ಸಮೀಪಿಸುತ್ತಿದ್ದಂತೆ ಲಕ್ಷಾಂತರ ರೂ.ಗೆ ಗೂಬೆಗಳ ಮಾರಾಟ- ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ

    ಚುನಾವಣೆ ಸಮೀಪಿಸುತ್ತಿದ್ದಂತೆ ಲಕ್ಷಾಂತರ ರೂ.ಗೆ ಗೂಬೆಗಳ ಮಾರಾಟ- ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ

    ಚಾಮರಾಜನಗರ: ವಿಧಾನಸಭೆ ಚುನಾವಣೆ ಹತ್ತಿರವಾಗ್ತಿರುವಂತೆ ರಾಜಕಾರಣಿಗಳು ಗೂಬೆಗಳ ಹಿಂದೆ ಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಲಕ್ಷ-ಲಕ್ಷ ರೂಪಾಯಿಗೆ ಗೂಬೆಗಳು ಮಾರಾಟವಾಗ್ತಿವೆ. ಹೀಗೆ ಗೂಬೆಗಳನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಳ್ಳೆಗಾಲದಲ್ಲಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

    ಅದೃಷ್ಟದ ಗೂಬೆಗಳನ್ನು ಖರೀದಿಸಿದ್ರೆ ಲಕ್ ಖುಲಾಯಿಸುತ್ತೆ, ಎಲೆಕ್ಷನ್‍ನಲ್ಲಿ ಪಕ್ಕಾ ಗೆಲ್ತೀವಿ ಅನ್ನೋದು ಕೆಲ ರಾಜಕಾರಣಿಗಳ ನಂಬಿಕೆ. ಇದನ್ನೇ ಬಂಡವಾಳ ಮಾಡ್ಕೊಂಡಿರುವ ಮಂದಿ ಗೂಬೆಗಳನ್ನು ಮಾರಾಟ ಮಾಡ್ತಿದ್ದಾರೆ.

    ಈ ದಂಧೆ ನಡೆಸ್ತಿದ್ದ ಕೊಳ್ಳೆಗಾಲ ತಾಲೂಕಿನ ಸೂಳೆಕೋಬೆಯ ಕೆಂಪಯ್ಯ ಮತ್ತು ಸಂಬೇಗೌಡ ಅನ್ನೋರನ್ನು ಪೊಲೀಸರು ಬಂಧಿಸಿದ್ದು, 2.5 ಕೆ.ಜಿ ತೂಕದ ಗೂಬೆಯನ್ನು ವಶಕ್ಕೆ ಪಡೆದಿದ್ದಾರೆ.

    ಒಂದು ಕಡೆ ರಾಜ್ಯದಲ್ಲಿ ರಾಜಕೀಯದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೊಂದೆಡೆ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ರಾಜಕೀಯ ಮುಖಂಡರು ಮೂಢನಂಬಿಕೆಯ ಮೊರೆ ಹೋಗ್ತಿದ್ದಾರೆ.

     

  • ಹಾವು, ಗೂಬೆ ಕಳ್ಳ ಸಾಗಾಣಿಕೆ ಮಾಡ್ತಿದ್ದ ಆರು ಜನ ಅರೆಸ್ಟ್

    ಹಾವು, ಗೂಬೆ ಕಳ್ಳ ಸಾಗಾಣಿಕೆ ಮಾಡ್ತಿದ್ದ ಆರು ಜನ ಅರೆಸ್ಟ್

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹಾವು ಹಾಗೂ ಗೂಬೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರು ಜನರನ್ನ ಬಂಧಿಸಿದ್ದಾರೆ.

    ಮಂಗಳೂರು ಮೂಲದ ಖಾದರ್, ಶಂಬು, ವೀರೇಂದ್ರ, ಜಗದೀಶ್ ಮತ್ತು ಹರಪ್ಪನಹಳ್ಳಿ ತಾಲೂಕಿನ ನಂದಿ ಬೇಗೂರಿನ ಅಲ್ಲಾಬಷ್ಕ್ ಹಾಗೂ ಲೋಕೇಶ್ ಬಂಧಿತ ಆರೋಪಿಗಳು. ಹಾವು ಮತ್ತು ಗೂಬೆಯನ್ನು ಮಾರಾಟ ಮಾಡಲು ಬಂದಾಗ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿ ಹಾವು, ಗೂಬೆ ಹಾಗೂ ಸ್ಯಾಂಟ್ರೋ ಕಾರನ್ನ ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ನಾಲ್ಕುವರೆ ಕೆಜಿ ತೂಕದ ಹಾವು ಹಾಗೂ 20 ಲಕ್ಷ ರೂ. ಮೌಲ್ಯದ ಒಂದು ಗೂಬೆಯನ್ನ ವಶಕ್ಕೆ ಪಡೆದಿದ್ದಾರೆ.

    ಈ ಬಗ್ಗೆ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಲೆಕ್ಷನ್ ಬಂದ್ರೆ ಗೂಬೆ, ಆಮೆಗಳಿಗೆ ಕಂಟಕ – ಮಾಟಕ್ಕೆ ಮೊರೆ ಹೋಗ್ತಾರಂತೆ ರಾಜಕಾರಣಿಗಳು!

    ಎಲೆಕ್ಷನ್ ಬಂದ್ರೆ ಗೂಬೆ, ಆಮೆಗಳಿಗೆ ಕಂಟಕ – ಮಾಟಕ್ಕೆ ಮೊರೆ ಹೋಗ್ತಾರಂತೆ ರಾಜಕಾರಣಿಗಳು!

    ಬೆಂಗಳೂರು: ಎಲೆಕ್ಷನ್ ಬಂದ್ರೆ ಗೂಬೆಗಳಿಗೆ ಕಂಟಕವಾದ್ರೆ, ಕಾಡುಪಾಪ-ಆಮೆಗಳ ಪ್ರಾಣಹರಣವಾಗುತ್ತೆ. ಅಚ್ಚರಿಯಾದ್ರೂ ಇದು ಘೋರ ಸತ್ಯ. ರಾಜಕೀಯ ಚದುರಂಗದಾಟಕ್ಕೆ ಆಮೆ, ಗೂಬೆ, ಕಾಡುಪಾಪ ವಿಲವಿಲನೆ ಒದ್ದಾಡಿ ಕೊನೆಯುಸಿರೆಳೆಯುತ್ತವಂತೆ. ಇದು ಖುದ್ದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದವರು ಪಬ್ಲಿಕ್ ಟಿವಿಗೆ ಕೊಟ್ಟ ಶಾಕಿಂಗ್ ಮಾಹಿತಿ.

    ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಗೂಬೆಗಳ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಕಾಡುಪಾಪ, ಆಮೆಗಳನ್ನು ಕೂಡ ಕೂಡಿ ಹಾಕಿ ರಾಜಕೀಯ ನೇತಾರರ ಮನೆಗೆ ಕಳಿಸೋದಕ್ಕೆ ಮಾಫಿಯಾದ ಟೀಮ್ ರೆಡಿಯಾಗಿ ನಿಂತಿವೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

    ಗೂಬೆಗೂ ಪಾಲಿಟಿಕ್ಸ್ ಗೂ ಲಿಂಕ್ ಹೇಗೆ?: ಸಾಮಾನ್ಯವಾಗಿ ಗೂಬೆ ಅಂದ್ರೆ ಅಪಶಕುನ. ಆದ್ರೆ ರಾಜಕೀಯಕ್ಕೂ ಈ ಗೂಬೆ ಮಾರಾಟಕ್ಕೂ ಲಿಂಕ್ ಏನಂದ್ರೆ ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಪ್ರತಿಸ್ಪರ್ಧಿಯ ಮನಸ್ಸು ಕುಗ್ಗಿಸಲು, ಮಾನಸಿಕವಾಗಿ ಹಿಂಸೆ ನೀಡಲು ಗೂಬೆಗಳ ರೆಕ್ಕೆ ಕತ್ತರಿಸಿ ಅದನ್ನು ರಾಜಕೀಯ ನಾಯಕರ ಮನೆಯ ಬಳಿಯೋ ಅಥವಾ ಅವರ ಕಚೇರಿಗೋ ಬಿಟ್ಟು ಬಿಡುತ್ತಾರಂತೆ. ಇದ್ರಿಂದ ಧೃತಿಗೆಟ್ಟ ಅದೆಷ್ಟೋ ನಾಯಕರು ಕೋಟಿ ಕೋಟಿ ಖರ್ಚು ಮಾಡಿ ಜ್ಯೋತಿಷ್ಯ, ದೇವರ ಮೊರೆ ಹೋಗುತ್ತಾರಂತೆ. ಬೆಂಗಳೂರಿನ ಶಿವಾಜಿನಗರ ಟ್ಯಾನರಿ ರೋಡ್‍ನಲ್ಲಿ ಈಗಾಗಲೇ ಗೂಬೆಗಳನ್ನು ಒಟ್ಟುಹಾಕುವ ಕೆಲಸವನ್ನು ಮಾಫಿಯಾದ ಕೈಗಳು ಮಾಡುತ್ತಿದೆ ಅನ್ನೋ ಮಾಹಿತಿ ಲಭಿಸಿದೆ.

    ಎಲೆಕ್ಷನ್ ಬಂತು ಅಂದ್ರೆ ಕಾಡುಪಾಪಗಳಿಗೆ, ಆಮೆಗೆ ಸಾವಿನ ಭಾಗ್ಯ! ತನಗಾಗದವನನ್ನು ನರಳಿಸೋದಕ್ಕೆ ಕಾಡುಪಾಪವನ್ನು ಮಾಟ ಮಂತ್ರಕ್ಕೆ ಬಳಸುತ್ತಾರೆ. ಕಾಡುಪಾಪದ ಕೈ, ಕಾಲನ್ನು ಹಗ್ಗದಿಂದ ಅಥವಾ ವೈರ್‍ನಿಂದ ಕಟ್ಟಿ ಹಾಕಿ ಅದಕ್ಕೆ ಊಟ ನೀರು ಕೊಡದೆ ಚಿತ್ರ ಹಿಂಸೆ ಕೊಡ್ತಾರೆ. ಇಲ್ಲಿ ಪ್ರಾಣಿ ನರಳಿದಷ್ಟು ಎದುರಾಳಿಗೆ ಹಿಂಸೆ ಸಿಗುತ್ತೆ ಅನ್ನೋ ವಿಚಿತ್ರ ನಂಬಿಕೆ.

    ಕಳೆದ ವರ್ಷ ಮೂವತ್ತು ಕಾಡುಪಾಪ, ಆಮೆ, ಗೂಬೆಗಳು ಸಾವನ್ನಪ್ಪಿದ್ದು ಈಗಾಗಲೇ ಈ ಬಾರಿಯ ಎಲೆಕ್ಷನ್‍ಗೂ ಈ ಮಾಫಿಯಾ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅರಣ್ಯ ಘಟಕದವರು ಈಗಾಗಲೇ ಸಾಕಷ್ಟು ಕಡೆ ರೇಡ್ ಮಾಡಿ ಈ ಮಾಫಿಯಾಗೆ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದಾರೆ. ವಿಚಿತ್ರ ಅಂದ್ರೆ ಇಲ್ಲಿ ಈ ಪ್ರಾಣಿ, ಪಕ್ಷಿಗಳನ್ನು ಹಿಡಿದುಕೊಡುವವರು ಕಾಡಿನಲ್ಲಿ ವಾಸಿಸೋ ಆದಿವಾಸಿಗಳು ಎಂದು ತಿಳಿದುಬಂದಿದೆ.

  • ಗೂಬೆ ಬಳಸಿ ಮನೆ ದರೋಡೆ ಮಾಡ್ತಿದ್ದ ಚೋರರು ಅರೆಸ್ಟ್!- ಇವರ ದರೋಡೆ ಪ್ಲ್ಯಾನ್ ಕೇಳಿದ್ರೆ ಅಚ್ಚರಿ ಪಡ್ತೀರ

    ಗೂಬೆ ಬಳಸಿ ಮನೆ ದರೋಡೆ ಮಾಡ್ತಿದ್ದ ಚೋರರು ಅರೆಸ್ಟ್!- ಇವರ ದರೋಡೆ ಪ್ಲ್ಯಾನ್ ಕೇಳಿದ್ರೆ ಅಚ್ಚರಿ ಪಡ್ತೀರ

    ಬೆಂಗಳೂರು: ನಗರದಲ್ಲಿ ಖತಾರ್ನಾಕ್ ಗ್ಯಾಂಗ್‍ವೊಂದು ಆಕ್ಟಿವ್ ಆಗಿದೆ. ಐಷಾರಾಮಿ ಮನೆಗಳೇ ಇವರೇ ಟಾರ್ಗೆಟ್. ಯಾರ್ ಮನೆ ಬೇಕಾದ್ರೂ ಖಾಲಿ ಮಾಡಿಸ್ತಾರೆ. ಯಾವ್ ಮನೆ ಬೇಕಾದ್ರು ದರೋಡೆ ಮಾಡ್ತಾರೆ. ಇದರ ಪ್ರಮುಖ ಪಾತ್ರಧಾರಿನೇ ಈ ಗೂಬೆ. ಗೂಬೆಯನ್ನು ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೋದನ್ನ ಕೇಳಿದ್ರೆ ಶಾಕ್ ಆಗ್ತೀರ.

    ಹೌದು. ಇಂತದ್ದೊಂದು ಇಂಟಿಸ್ಟಿಂಗ್ ಸ್ಟೋರಿ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕಾಟನ್ ಪೇಟೆಯ ಕೆಲ ಹಣವಂತ ಸೇಟುಗಳನ್ನು ಟಾರ್ಗೆಟ್ ಮಾಡುತ್ತಿದ್ದ ತಂಡವೊಂದು, ದೂರದ ಕಾಡುಗಳಿಂದ ಗೂಬೆಗಳನ್ನು ಹಿಡಿದು ತಂದು ಮನೆಯವರಿಗೆ ಗೊತ್ತಾಗದ ಹಾಗೇ ಒಳಗೆ ಬಿಡ್ತಾರೆ. ನಂತರ ಅವರೇ ಹೋಗಿ ನಿಮ್ಮ ಮನೆಗೆ ಗೂಬೆ ನುಗ್ಗಿದೆ. ಅದು ಅನಿಷ್ಟದ ಸಂಕೇತ. ಅದಷ್ಟು ಬೇಗ ಮನೆ ಖಾಲಿ ಮಾಡಿ. ಇಲ್ಲ ಅಂದ್ರೆ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿ ಬನ್ನಿ ಅಂತಾರೆ. ಅವರ ಮಾತನ್ನು ನಂಬಿ ದೇವಸ್ಥಾನಕ್ಕೆ ಹೋದ್ರೆ ಆ ಮನೆ ರಾತ್ರೋ ರಾತ್ರಿ ದರೋಡೆ ಆಗಿರುತ್ತೆ.

     

    ಒಂದು ವೇಳೆ ಮನೆ ಮಾರಾಟ ಮಾಡಬೇಕು ಅನ್ನಿಸಿದ್ರೆ ಅದಕ್ಕೂ ಈ ಖತಾರ್ನಾಕ್ ಗ್ಯಾಂಗ್ ರೆಡಿ ಇರುತ್ತೆ. ಒಂದು ಕೋಟಿ ಮನೆಯನ್ನು 60 ಲಕ್ಷಕ್ಕೆ ಮಾರಿಬಿಡಿ ಅಂತಾ ಭಯಪಡಿಸಿ ಮನೆ ಮಾರಾಟ ಮಾಡಿ ಎಸ್ಕೇಪ್ ಆಗ್ತಾರೆ. ಯಾವುದೇ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಅಣ್ಣ ತಮ್ಮ, ಸಂಬಂಧಿಗಳ ಮಧ್ಯೆ ಗಲಾಟೆ ಇದ್ರೆ ಇವರಿಗೆ ಡೀಲ್ ಕೊಟ್ರೆ ಇದೇ ಉಪಾಯ ಮಾಡಿ ಡೀಲ್ ಮಾಡಿ ಕೊಡ್ತಾರೆ.

    ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಫಾರೆಸ್ಟ್ ಡಿರ್ಪಾಟ್‍ಮೆಂಟ್ ದಾಳಿ ನಡೆಸಿ ಗೂಬೆ ಸೇರಿದಂತೆ ಐವರನ್ನು ಅರೆಸ್ಟ್ ಮಾಡಿ ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ತನಿಖೆ ಮುಂದುವರೆಸಿದ್ದು, ಈ ಗೂಬೆಯ ಆಟಕ್ಕೆ ಯಾರೆಲ್ಲಾ ಬಲಿಯಾಗಿದ್ದಾರೆ ಅನ್ನೋದು ತಿಳಿಯಬೇಕಿದೆ.