Tag: Owaisi Dance

  • ರ‌್ಯಾಲಿ ಕೊನೆಗೆ ಓವೈಸಿ ಮಸ್ತ್ ಡ್ಯಾನ್ಸ್

    ರ‌್ಯಾಲಿ ಕೊನೆಗೆ ಓವೈಸಿ ಮಸ್ತ್ ಡ್ಯಾನ್ಸ್

    ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ಔರಾಂಗಬಾದ್ ನಲ್ಲಿ ಪ್ರಚಾರ ಕೈಗೊಂಡಿದ್ದರು. ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಓವೈಸಿ ಹೆಜ್ಜೆ ಹಾಕಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಔರಾಂಗಬಾದ್ ಪೈಠಾಣ ಗೇಟ್ ಬಳಿ ನಡೆದ ಸಮಾವೇಶದಲ್ಲಿ ಒವೈಸಿ ವಿಚಿತ್ರವಾಗಿ ಹೆಜ್ಜೆ ಹಾಕಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಗುರುವಾರ ನಡೆದ ಪ್ರಚಾರ ಸಮಯದಲ್ಲಿ ಓವೈಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಿಂದ ಇಳಿಯುವಾಗ ಡ್ಯಾನ್ಸ್ ಮಾಡಿ ಸ್ಥಳದಲ್ಲಿದ್ದವರನ್ನು ಅಚ್ಚರಿಗೊಳಿಸಿದ್ದಾರೆ. ಎಐಎಂಎ ಕಾರ್ಯಕರ್ತರು ಮತ್ತು ಬೆಂಬಲಿಗರು ತಮ್ಮ ನೆಚ್ಚಿನ ನಾಯಕನ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.