Tag: Owaisi

  • ಶಾಲು ಹಾಕಲು ಬಂದ ಕಾರ್ಯಕರ್ತನನ್ನು ದೂಡಿದ ಓವೈಸಿ ವೀಡಿಯೋ ವೈರಲ್

    ಶಾಲು ಹಾಕಲು ಬಂದ ಕಾರ್ಯಕರ್ತನನ್ನು ದೂಡಿದ ಓವೈಸಿ ವೀಡಿಯೋ ವೈರಲ್

    ಮುಂಬೈ: ಎಐಎಂಐಎಂ (AIMIM) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ತಾಳ್ಮೆ ಕಳೆದುಕೊಂಡು ತಮ್ಮ ಕಾರ್ಯಕರ್ತನನ್ನು ದೂಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೌದು. ಅಮರಾವತಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಅವರು ಭಾನುವಾರ (ಜೂನ್ 25) ಅಕೋಲಾಗೆ ಭೇಟಿ ನೀಡಿದ್ದರು. ಅಕೋಲಾ ತಲುಪಿ ತನ್ನ ವಾಹನದಿಂದ ಹೊರಬಂದಾಗ ಕಾರ್ಯಕರ್ತ ಅಜಾಗರೂಕತೆಯಿಂದ ವರ್ತಿಸಿದ್ದರಿಂದ ಓವೈಸಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.

    ಓವೈಸಿ ಅವರ ಕಾರು ನಿಲ್ಲುತ್ತಿದ್ದಂತೆಯೇ ನೆರೆದಿದ್ದ ಬೆಂಬಲಿಗರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮದಿಂದ ಸ್ವಾಗತಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಓವೈಸಿ ಕಾರಿನಿಂದ ಹೊರಬರುತ್ತಿದ್ದಂತೆ ಅವರ ಬೆಂಬಲಿಗರು ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಒವೈಸಿ ಅವರನ್ನು ಸನ್ಮಾನಿಸಲು ಬೆಂಬಲಿಗರೊಬ್ಬರು ಶಾಲು (shawl) ಹೊದಿಸಲೆಂದು ಮುಂದೆ ಬಂದಿದ್ದಾರೆ. ಆದಾಗ್ಯೂ ಬೆಂಬಲಿಗ ಓವೈಸಿ ಅವರ ಮುಖಕ್ಕೆ ಶಾಲು ಹಾಕುತ್ತಾರೆ. ಈ ವೇಳೆ ಸಿಟ್ಟುಗೊಂಡ ಓವೈಸಿ ಶಾಲನ್ನು ಎಳೆದು, ಮುಖದ ಮೇಲೆ ಶಾಲು ಹಾಕಿದ ವ್ಯಕ್ತಿಗೆ ಬೈದು ಆತನನ್ನು ದೂಡಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ, ಗುಡ್ಡಕುಸಿತ- ಹಿಮಾಚಲ, ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ ಅವಾಂತರ

    ಸದ್ಯ ಈ 15 ಸೆಕೆಂಡ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಾಳ್ಮೆ ಕಳೆದುಕೊಂಡ ಓವೈಸಿ ಬಗ್ಗೆ ನೆಟ್ಟಿಗರು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ

    ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ

    ಭೋಪಾಲ್: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಟೈಲರ್ ಹತ್ಯೆ ಮಾಡಿರುವುದನ್ನು ಖಂಡಿಸಿದ್ದಾರೆ.

    ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದ ಭಾಗವಾಗಿ ಭೋಪಾಲ್‍ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ. ಯಾರನ್ನಾದರೂ ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರೂ ಇತರರನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಇದೊಂದು ಅಪರಾಧ. ಆದರೆ ನೂಪುರ್ ಶರ್ಮಾ ಅವರನ್ನೂ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಭೀಕರವಾಗಿದೆ, ದಯವಿಟ್ಟು ವೀಕ್ಷಿಸಬೇಡಿ: ರಾಜಸ್ಥಾನ ಪೊಲೀಸರು ಮನವಿ

    ಟೈಲರ್ ಹತ್ಯೆಯನ್ನು ಘೋರ ಎಂದು ಬಣ್ಣಿಸಿದ ಅವರು, ಸರ್ಕಾರವು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಹಿಂಸಾಚಾರವನ್ನು ವಿರೋಧಿಸುವುದು ಎಐಎಂಐಎಂ ಸ್ಥಿರವಾದ ನಿಲುವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮ್ಮ ಭಾಷಣದ ವೇಳೆ ಓವೈಸಿ ಅವರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಟೀಕಿಸಿದ್ದು, ಈ ಘಟನೆಗೆ ಅವರ ಪರಸ್ಪರ ಹಗ್ಗಜಗ್ಗಾಟವೇ ಕಾರಣ ಎಂದು ಆರೋಪಿಸಿದ್ದಾರೆ.

    ನಡೆದಿದ್ದೇನು?
    ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಮುಸ್ಲಿಂ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆ ಹಲವು ಮುಸ್ಲಿಂ ಸಮುದಾಯದವರು ಆಕೆಯನ್ನು ವಿರೋಧಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಓವೈಸಿ ಅವರು ಸಹ ನೂಪುರ್ ಶರ್ಮಾ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಇತ್ತೀಚೆಗೆ ಹಿಂದೂ-ಮುಸ್ಲಿಂ ಜಗಳ, ಪ್ರತಿಭಟನೆಗಳು ಹಿಂಸಾಚಾರದ ರೂಪವನ್ನು ಪಡೆಯುತ್ತಿದೆ.

    NUPUR OWAISI

    ಟೈಲರ್ ಬರ್ಬರ ಹತ್ಯೆ
    ಮೃತ ಟೈಲರ್ ಕನ್ಹಯ್ಯಾ ಲಾಲ್ ಅವರು ಉದಯಪುರದ ಜನನಿಬಿಡ ಮಾರುಕಟ್ಟೆಯಲ್ಲಿ ತಮ್ಮ ಅಂಗಡಿಯಲ್ಲಿದ್ದರು. ಕನ್ಹಯ್ಯ ನೂಪರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಕೋಪಗೊಂಡ ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಟೈಲರ್‌ನನ್ನು ಬರ್ಬರವಾಗಿ ಶಿರಚ್ಛೇದ ಮಾಡಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಈ ಘಟನೆ ನಡೆದಿತ್ತು. ಸಂಜೆ ವೇಳೆಗೆ ಇಬ್ಬರೂ ಆರೋಪಿಗಳನ್ನು ರಾಜಾಸ್ಥಾನದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

    ವೀಡಿಯೋದಲ್ಲಿ ಏನಿದೆ?
    ನಾನು ರಿಯಾಜ್ ಅಹ್ಮದ್. ಇವನು ನನ್ನಣ್ಣ ಮೊಹಮ್ಮದ್. ಉದಯಪುರದಲ್ಲಿರುವ ಮಾಲ್ಡಾಸ್ ಸ್ಟ್ರೀಟ್‍ನಲ್ಲಿರುವ ಹಿಂದೂ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದೇವೆ. ನಾವು ಬದುಕುತ್ತಿದ್ದೇವೆ ಪ್ರವಾದಿ ಸಲುವಾಗಿ. ಪ್ರವಾದಿಗಾಗಿ ಜೀವ ಬಿಡಲು ಸಿದ್ಧ. ಏಯ್ ನರೇಂದ್ರ ಮೋದಿ ಬೆಂಕಿ ಹಬ್ಬಿಸಿದ್ದು ನೀನು. ಅದನ್ನು ಆರಿಸುತ್ತೇವೆ ನಾವು. ನಾನು ಜೀವಂತವಿದ್ದರೆ ಈ ನನ್ನ ಕತ್ತಿ ನಿನ್ನ ಕುತ್ತಿಗೆ ತಲುಪಿ, ನಿನ್ನನ್ನು ಸಂಹಾರ ಮಾಡುತ್ತೇನೆ.

    Live Tv

  • ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ಎದುರಿಸಲು ನಿಮಗೆ ಗಟ್ಸ್ ಇದೆಯಾ?: ಮೋದಿಗೆ ಓವೈಸಿ ಟೀಕೆ

    ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ಎದುರಿಸಲು ನಿಮಗೆ ಗಟ್ಸ್ ಇದೆಯಾ?: ಮೋದಿಗೆ ಓವೈಸಿ ಟೀಕೆ

    ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ನಿಮ್ಮ ಅಜಾಗರೂಕ ನಿರ್ಧಾರ ಹಾಗೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, ದಯವಿಟ್ಟು ಮಿಲಿಟರಿ ಮುಖ್ಯಸ್ಥರು ಮೋದಿಯವರ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಾಗೂ ಪರಿಣಾಮಗಳನ್ನು ಎದುರಿಸಲು ನಿಮ್ಮಲ್ಲಿ ಗಟ್ಸ್(ಧೈರ್ಯ) ಇದೆಯಾ? ದೇಶದ ಯುವಕರ ಭವಿಷ್ಯದ ಬಗೆಗಿನ ಆಕ್ರೋಶ ಕೇವಲ ನಿಮ್ಮನ್ನೇ ಗುರಿಯಾಗಿಸಿಕೊಂಡಿದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಇಂಡಿಯನ್ ಆರ್ಮಿ ವಿಶ್ವದಲ್ಲೇ ಫೈನೆಸ್ಟ್ ಆರ್ಮಿ, ಇದಕ್ಕೆ ಡಿಸ್ಟರ್ಬ್ ಮಾಡ್ಬೇಡಿ: ನಿವೃತ್ತ ಸೇನಾಧಿಕಾರಿ ಎಚ್ಚರಿಕೆ

    ಅಗ್ನಿಪಥ್ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಜನರು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹಚ್ಚುವುದರ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿಯವರೆಗೆ 300ಕ್ಕೂ ಹೆಚ್ಚು ರೈಲುಗಳು ಸ್ಥಗಿತಗೊಂಡಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

    ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಯುವ ಸೈನಿಕರಿಗಾಗಿ 4 ವರ್ಷಗಳ ಕಾಲಾವಧಿಗೆ ಸೀಮಿತವಾಗಿದ್ದು, ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ನೇಮಿಸಿಕೊಳ್ಳುವ ಯೋಜನೆಯಾಗಿದೆ.

    Live Tv

  • ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

    ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

    ಮುಂಬೈ: ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ – ಅಮಿತ್ ಶಾ ಅವರದ್ದಲ್ಲ, ಭಾರತ ದ್ರಾವಿಡರು ಮತ್ತು ಆದಿವಾಸಿಗಳದ್ದು ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

    ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ- ಅಮಿತ್ ಶಾ ಅವರದ್ದಲ್ಲ, ಭಾರತವು ಯಾರದ್ದು ಎಂದರೆ ಅದು ದ್ರಾವಿಡರು ಮತ್ತು ಆದಿವಾಸಿಗಳದ್ದು. ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾ ಭಾಗದಿಂದ ಜನರು ವಲಸೆ ಬಂದ ನಂತರ ಭಾರತ ರಚನೆಯಾಗಿದೆ. ಆದರೆ ದೇಶದಲ್ಲಿ ಮೊಘಲರ ನಂತರವೇ BJP – RSS ನವರು ಎಂದು ಕಿಡಿಕಾರಿದ್ದಾರೆ.

    modi (1)

    ಇದೇ ವೇಳೆ ಶಿವಸೇನಾ, ಎನ್‌ಸಿಪಿ ಹಾಗೂ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ಈ ಎಲ್ಲ ಪಕ್ಷಗಳು ಜಾತ್ಯಾತೀತ ಪಕ್ಷದ ನಾಯಕರು ಜೈಲಿಗೆ ಹೋಗಬಾರದು ಎಂದು ಭಾವಿಸುತ್ತಾರೆ. ಆದರೆ ಮುಸ್ಲಿಂ ನಾಯಕರು ಜೈಲಿಗೆ ಹೋದರೆ ಏಕೆ ಎಂದು ಪ್ರಶ್ನಿಸುವುದಿಲ್ಲ. ಅವರು ಜೈಲಿಗೆ ಹೋದರೂ ಪರ್ವಾಗಿಲ್ಲ ಎಂದು ಹೇಳುತ್ತಾರೆ ಎಂದು ಕಿಡಿ ಕಾರಿದರು.

    ncp bjp congress

    3 ಪಕ್ಷಗಳಲ್ಲಿ ವಧು ಯಾರು?:  ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ, ಶಿವಸೇನೆಯನ್ನು ಸೋಲಿಸಲು ಒವೈಸಿಗೆ ಮತ ನೀಡುವಂತೆ ಎನ್‌ಸಿಪಿ ನಾಯಕರು ಕೇಳುತ್ತಿದ್ದರು. ಚುನಾವಣೆ ಮುಗಿದ ನಂತರ ಎನ್‌ಸಿಪಿ ಶಿವಸೇನೆಯೊಂದಿಗೆ ವಿವಾಹವಾಗಿದೆ. ಆದರೆ ಮೂರು ಪಕ್ಷಗಳಲ್ಲಿ ವಧು ಯಾರು ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.

  • ಸಿಎಂ ಬದಲಾವಣೆ ಮಾಡಿದ್ರೆ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ: ಮುತಾಲಿಕ್

    ಸಿಎಂ ಬದಲಾವಣೆ ಮಾಡಿದ್ರೆ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ: ಮುತಾಲಿಕ್

    – ಓವೈಸಿಯನ್ನು ನಾಯಿ ಹೋಲಿಸಿದ ಪ್ರಮೋದ್

    ಕೊಪ್ಪಳ: ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ರೆ, ಅಂತವರನ್ನ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

    ಕೊಪ್ಪಳದಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ರಾಜಕೀಯ ದುಷ್ಟತನ ಮಾಡಬೇಡಿ. ಒಂದು ವೇಳೆ ರಾಜಕೀಯ ದುಷ್ಟತನ ಮಾಡಿದರೆ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ. ಈ ಹಿಂದೆ ಅನಂತ್ ಕುಮಾರ್ ಹೆಗಡೆ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿದ್ರು. ಹಿಂದೆ ಕತ್ತಿ ನಾನೇ ಮುಖ್ಯಮಂತ್ರಿ ಎಂದರು. ಇದೆಲ್ಲ ಸುಳ್ಳು, ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮುತಾಲಿಕ್ ಮನವಿ ಮಾಡಿದರು.

    ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕೈ ಬಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ನಾನು ಇದನ್ನು ಸ್ವಾಗತ ಮಾಡ್ತೀನಿ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಈತನನ್ನು ಪಠ್ಯಪುಸ್ತಕದಿಂದ ತೆಗೆದಿರುವ ವಿಚಾರವನ್ನು ಸ್ವಾಗತಿಸುತ್ತೇನೆ ಎಂದರು.

    ಇದೇ ವೇಳೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮೋದಿ ಭಾಗಿಯಾಗಬಾರದು ಎಂದು ಓವೈಸಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿ ಆನೆ ಇದ್ದಂಗೆ. ಓವೈಸಿ ನಾಯಿ ಇದ್ದಂಗೆ, ಅದೊಂದು ಕಸದ ತುಂಡು. ಹೀಗಾಗಿ ಅಂತವರು ಬೊಗಳಿದ್ರೆ ಏನೂ ಆಗಲ್ಲ ಎನ್ನುವ ಮೂಲಕ ಓವೈಸಿಯನ್ನು ನಾಯಿಗೆ ಹೋಲಿಸಿದರು.

    ಯಾವುದೇ ಗದ್ದಲ ಗಲಭೆ ಇಲ್ಲದೆ ರಾಮಮಂದಿರ ನಿರ್ಮಾಣ ಕಾರ್ಯ ಆಗತ್ತೆ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.

  • ಒವೈಸಿ ವಿರುದ್ಧ ಗುಡುಗಿದ ಶಾ – ಲೋಕಸಭೆಯಲ್ಲಿ ಎನ್‍ಐಎ ಮಸೂದೆ ಪಾಸ್

    ಒವೈಸಿ ವಿರುದ್ಧ ಗುಡುಗಿದ ಶಾ – ಲೋಕಸಭೆಯಲ್ಲಿ ಎನ್‍ಐಎ ಮಸೂದೆ ಪಾಸ್

    ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಅವರ ಭಾಷಣವನ್ನು ಅಡ್ಡಿಪಡಿಸಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇಂದು ನಡೆದ ಲೋಕಸಭಾ ಕಲಾಪದಲ್ಲಿ ಬಿಜೆಪಿಯ ಉತ್ತರ ಪ್ರದೇಶದ ಸಂಸದ ಸತ್ಯಪಾಲ್ ಸಿಂಗ್ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಲ ತುಂಬಲು ತಂದಿರುವ ಮಸೂದೆಯ ಬಗ್ಗೆ ಮಾತನಾಡುತ್ತಿರುವಾಗ, ಹೈದರಾಬಾದಿನ ಸಂಸದ ಒವೈಸಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸತ್ಯಪಾಲ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.

    ಅಲ್ಲದೇ ಓವೈಸಿ, ಸತ್ಯಪಾಲ್ ಸಿಂಗ್ ಅವರು ಮಸೂದೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸದನದಕ್ಕೆ ಸಲ್ಲಿಸಿ ನಂತರ ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಕೋಪಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಲ್ಪ ಸತ್ಯಪಾಲ್ ಸಿಂಗ್ ಹೇಳುವುದನ್ನು ತಾಳ್ಮೆಯಿಂದ ಕೇಳಿ ಎಂದು ಹೇಳಿದರು.

    ಅಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಸದಸ್ಯರ ಭಾಷಣದ ವೇಳೆ ಯಾವುದೇ ರೀತಿಯ ತೊಂದರೆ ನೀಡಲಿಲ್ಲ. ಆದ್ದರಿಂದ ಪ್ರತಿಪಕ್ಷದ ಸದಸ್ಯರು ಕೂಡ ಅದೇ ರೀತಿ ನಾವು ಮಾಡುವ ಭಾಷಣವನ್ನು ತಾಳ್ಮೆಯಿಂದ ಕೇಳಬೇಕು ಎಂದು ಹೇಳಿದರು. ಈ ಸಮಯದಲ್ಲಿ ಒವೈಸಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ಕೇಳಿಸಿಕೊಳ್ಳುವ ತಾಳ್ಮೆ ಕಲಿತುಕೊಳ್ಳಿ ಒವೈಸಿ ಸಾಬ್ ಎಂದು ಹೇಳಿದರು.

    ಇದಕ್ಕೆ ಆಕ್ರೋಶಗೊಂಡು ಉತ್ತರಿಸಿದ ಒವೈಸಿ, ಅಮಿತ್ ಶಾ ಅವರು ನನಗೆ ಬೆರಳು ತೋರಿಸಬಾರದು. ಅಮಿತ್ ಶಾ ಅವರ ಮಾತಿಗೆ ನಾವು ಹೆದರಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಸತ್ಯಪಾಲ್ ಅವರ ಮಾತಿಗೆ ಅಡ್ಡಿ ಪಡಿಸುತ್ತಿಲ್ಲ ಬದಲಿಗೆ ಅವರನ್ನು ಸಾಕ್ಷಿ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.

    https://twitter.com/ShobhaBJP/status/1150747222062952448

    ಇದಕ್ಕೆ ಉತ್ತರಿಸಿದ ಅಮಿತ್ ಶಾ ಅವರು ನಾವು ಯಾರನ್ನು ಹೆದರಿಸುವ ಕೆಲಸ ಇಲ್ಲಿ ಮಾಡುತ್ತಿಲ್ಲ. ನಮ್ಮ ಸದಸ್ಯರು ಹೇಳುವ ಮಾತುಗಳನ್ನು ಕೇಳುವ ತಾಳ್ಮೆ ಇರಬೇಕು ಎಂದು ಹೇಳುತ್ತಿದ್ದೇವೆ. ನಿಮ್ಮ ಮನಸ್ಸಿನಲ್ಲಿ ಭಯ ಇದ್ದಾಗ ನಾವು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ತಿರುಗೇಟು ನೀಡಿದರು.

    ಮಸೂದೆಯಲ್ಲಿ ಏನಿದೆ?
    ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕ ಪ್ರಕರಣಗಳ ತನಿಖೆಗಾಗಿ ಎನ್‍ಐಎಗೆ ಹೆಚ್ಚಿನ ಶಕ್ತಿ ನೀಡುವ ನಿಟ್ಟಿನಲ್ಲಿ ಇಂದು ಲೋಕಸಭೆ ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ಪಾಸ್ ಮಾಡಿದೆ. ಮಸೂದೆಯ ಪರ 278 ಮಂದಿ ಮತ ಹಾಕಿದರೆ 6 ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

    ಈ ಮಸೂದೆ ರಾಜ್ಯಸಭೆಯಲ್ಲೂ ಪಾಸಾಗಿ ಕಾಯ್ದೆಯಾಗಿ ಬಂದರೆ ಭದ್ರತೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇವಲ ಭಾರತ ಮಾತ್ರವಲ್ಲದೇ ಹೊರದೇಶಕ್ಕೂ ಹೋಗಿ ತನಿಖೆ ಮಾಡುಬಹುದಾಗಿದೆ. ಈ ತಿದ್ದುಪಡಿಯ ಪ್ರಕಾರ ಎನ್‍ಐಎ ತನಿಖಾ ಸಂಸ್ಥೆ ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಣಿಕೆ ಪ್ರಕರಣಗಳನ್ನು ಹೊರದೇಶಗಳಿಗೂ ಹೋಗಿ ಭೇದಿಸುವ ಶಕ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಅಪರಾಧ ಮಾಡಿ ಆರೋಪಿ ವಿದೇಶಕ್ಕೆ ಪಲಾಯನ ಮಾಡಿದರೆ ಎನ್‍ಐಎಗೆ ವಿದೇಶಕ್ಕೆ ಹೋಗಿ ತನಿಖೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಮಸೂದೆಯಿಂದ ಎನ್‍ಐಎಗೆ ಹೊಸ ಶಕ್ತಿ ಬಂದಂತೆ ಆಗಿದೆ.

    ವಿದೇಶಗಳಲ್ಲಿನ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳ ಮೇಲಿನ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡುವ ಅಂಶ ಈ ಮಸೂದೆಯಲ್ಲಿದೆ.

    2009 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಈ ಪ್ರಕರಣ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ ಎನ್‍ಐಎಯನ್ನು ಆರಂಭಿಸಿತ್ತು.

  • ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ – ಯೋಗಿ ಆದಿತ್ಯನಾಥ್

    ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ – ಯೋಗಿ ಆದಿತ್ಯನಾಥ್

    ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖಂಡ ನಾಯಕ ಅಸಾದುದ್ದೀನ್ ಓವೈಸಿ, ನಿಜಾಮರಂತೆ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ವಿಕರಾಬಾದ್ ಜಿಲ್ಲೆಯ ತಂದೂರ್ ನಗರದಲ್ಲಿ ಏರ್ಪಡಿಸಲಾಗಿದ್ದ ಯಾತ್ರೆಯಲ್ಲಿ ಭಾಗವಹಿಸಿ ಯೋಗಿ ಆದಿತ್ಯನಾಥ್ ಮಾತನಾಡಿದರು. ಬಳಿಕ ಸಂಗಾರೆಡ್ಡಿ ಜಿಲ್ಲೆ ಸೇರಿದಂತೆ ಹಲವು ಯಾತ್ರೆಯಲ್ಲಿ ಭಾಗವಹಿಸಿದ್ದರು.

    ಉಗ್ರಗಾಮಿ ಹಾಗೂ ಐಸಿಸ್ ಸಂಘಟನೆಗಳೊಂದಿಗೆ ಸಂಬಂಧಗಳನ್ನು ಹೊಂದಿರುವ ಸಂಘಟನೆಗಳ ಕೈಯಲ್ಲಿ ದೇಶದ ರಕ್ಷಣೆ ಸಾಧ್ಯವೇ? ದೇಶದ ಕುರಿತು ಬದ್ಧತೆ ಹೊಂದಿರುವ ಯುವಕರ ಸಂಘಟನೆಯಿಂದ ದೇಶ ನಡೆಯಬೇಕೇ ಅಥವಾ ಕಾಂಗ್ರೆಸ್ ನಂತಹ ಪಕ್ಷ ನಾಯಕರ ಮುಂದಾಳತ್ವದಲ್ಲಿ ದೇಶ ನಡೆಯಬೇಕೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ ಎಂದರು. ಅಲ್ಲದೇ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಪಕ್ಷಗಳು ನಕ್ಸಲ್ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

    ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಸಿಎಂ ಯೋಗಿ ಆದಿತ್ಯನಾಥ್ ಇಂದಿನಿಂದ ತೆಲಂಗಾಣ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಕರಾಬಾದ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಲ್ಲಾ ಸೋಲಿಸುತ್ತಾನೆ ಎಂದು ವಾಗ್ದಾಳಿ ನಡೆಸಿದ್ದರು. ಸದ್ಯ ಓವೈಸಿ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಟಾಂಗ್ ನೀಡಿದ್ದಾರೆ. ಅಂದಹಾಗೇ ಕಳೆದ 2014 ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದನ್ನು ಓದಿ : ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಬೀಫ್ ಬಿರಿಯಾನಿ ಪಾರ್ಸಲ್ ಕಳುಹಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಗೆ ಹೇಳ್ತಿನಿ ಅಂದಿದ್ದ ಓವೈಸಿಯ ಕಲ್ಯಾಣಿ ಬಿರಿಯಾನಿ ಗುರುವಾರದಿಂದ ಭಾರೀ ಸುದ್ದಿಯಲ್ಲಿದೆ.

    ಸಾರ್ವಜನಿಕ ಸಭೆಯಲ್ಲಿ ಮಜಲೀಸ್-ಈ- ಮಸ್ಲಿಮೀನ್ (ಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಾತನಾಡಿ, ಚಂದ್ರಶೇಖರ್ ರಾವ್ ಅವರು ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದರೆಂದು ಅಮಿತ್ ಶಾ ಹೊಟ್ಟೆ ಉರಿಸಿಕೊಳ್ಳುವುದು ಯಾಕೆ? ಅಮಿತ್ ಶಾ ಅವರಿಗೆ ಬಿರಿಯಾನಿ ಅಷ್ಟೊಂದು ಇಷ್ಟ ಅಂತಾ ನಂಗೆ ಗೊತ್ತಿರಲಿಲ್ಲ. ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಅವರಿಗೊಂದು ಕಲ್ಯಾಣಿ ಬಿರಿಯಾನಿ ಪಾರ್ಸಲ್ ಕಳಿಹಿಸಲು ನಾನು ಕೆಸಿಆರ್ ಅವರಿಗೆ ಮಾನವಿ ಮಾಡುತ್ತೇನೆ ಎಂದು ಓವೈಸಿ ವ್ಯಂಗವಾಗಿ ಮಾತನಾಡಿದ್ದರು.

    ಈ ಮೂಲಕ ತೆಲಂಗಾಣ ಚುನಾವಣೆ ಅಖಾಡದಲ್ಲಿ ಈಗ ಬೀಫ್ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆಯ ಪ್ರಚಾರದ ವೇಳೆ ಈ ರೀತಿ ಸಂಸದ ಓವೈಸಿ ಅವರು ಕೇಂದ್ರ ಸರ್ಕಾರದ ನಾಯಕರಿಗೆ ವ್ಯಂಗವಾಡಿರುವ ಸುದ್ದಿ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

    ಕ್ಯಾಣಿ ಬಿರಿಯಾಣಿ ಕರ್ನಾಟಕದ್ದು:
    ಹೈದರಾಬಾದ್ ನಲ್ಲಿ ಪ್ರಸಿದ್ಧಿ ಪಡೆದಿರುವ ಈ ಕಲ್ಯಾಣಿ ಬಿರಿಯಾನಿ ಮೂಲ ಮಾತ್ರ ಕರ್ನಾಟಕದ್ದು. 1634ರಲ್ಲಿ ಬೀದರ್‍ನಲ್ಲಿದ್ದ ದೇಶದ ಅತೀ ದೊಡ್ಡ ಬಹುಮನಿ ಸಾಮ್ರಾಜ್ಯದಲ್ಲಿ ಕಲ್ಯಾಣಿಯ ಬೀಫ್ ಮಾಂಸ ಮತ್ತು ನಿರ್ಣಾ ಗ್ರಾಮದ ಅಕ್ಕಿ ಹಾಕಿ ಕಲ್ಯಾಣಿ ಬಿರಿಯಾನಿ ತಯಾರಿ ಮಾಡಲಾಗ್ತಿತ್ತು. ಬಳಿಕ ಇದು ಕಲ್ಯಾಣಿ ಬಿರಿಯಾನಿ ಅಂತಲೇ ಫೇಮಸ್ ಆಯ್ತು. ಕಲ್ಯಾಣಿಯ ಮೂಲ ಕರ್ನಾಟಕ ಅಂತ ತಿಳಿಯಲು ಸದ್ಯ ತೆಲಂಗಾಣ ಎಲೆಕ್ಷನ್ ವೇದಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್

    ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್

    ನವದೆಹಲಿ: ತಾಜ್ ಮಹಲ್ ಜೊತೆಗೆ ರಾಷ್ಟ್ರಪತಿ ಭವನವೂ ಗುಲಾಮಗಿರಿಯ ಸಂಕೇತವಾಗಿದ್ದು, ಇವುಗಳನ್ನು ನೆಲಸಮಗೊಳಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ.

    ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್ ಮಹಲ್ ಗುಲಾಮಗಿರಿಯ ಸಂಕೇತವಾಗಿದ್ದು, ಇದನ್ನು ಕೆಡವಬೇಕೆಂಬ ಹೇಳಿಕೆ ನೀಡಿದ ಮರುದಿನ ಅಜಂ ಖಾನ್ ಈ ಹೇಳಿಕೆ ನೀಡಿದ್ದಾರೆ.

    ನಮ್ಮ ಮೇಲೆ ಆಳ್ವಿಕೆ ಮಾಡಿದವರ ಎಲ್ಲಾ ಗುಲಾಮಗಿರಿಯ ಸಂಕೇತಗಳನ್ನು ನಾಶಮಾಡಬೇಕು. ಈ ಮೊದಲೇ ನಾನು ಸಂಸತ್, ಕುತುಬ್ ಮಿನಾರ್, ರಾಷ್ಟ್ರಪತಿ ಭವನ, ಕೆಂಪು ಕೋಟೆ ಮತ್ತು ಆಗ್ರಾದ ತಾಜ್‍ಮಹಲ್ ಇವುಗಳೆಲ್ಲವನ್ನು ಧ್ವಂಸಗೊಳಿಸಬೇಕು ಎಂದು ಅಜಂ ಖಾನ್ ಹೇಳಿದರು.

    ಮೊಘಲ್ ಚಕ್ರವರ್ತಿಗಳು, ಬಾಬರ್, ಅಕ್ಬರ್ ಹಾಗೂ ಔರಂಗಜೇಬರನ್ನು ದ್ರೋಹಿಗಳು ಎಂದು ನಾನು ಮುಂಚೆಯೇ ಕರೆದಿದ್ದೆ. ಮೊಘಲ್ ಚಕ್ರವರ್ತಿ ಷಹಜಹಾನ್ ನಂತವರು ಹಿಂದೂಗಳನ್ನು ಅಳಿಸಿ ಹಾಕಲು ಪ್ರಯತ್ನಿಸಿದವರು. ತಾಜ್ ಮಹಲ್ ಅನ್ನು ಕಟ್ಟಿದವರು ಸಹ ದ್ರೋಹಿಗಳು. ಆದ್ದರಿಂದ ಅದಕ್ಕೆ ನಮ್ಮ ಭಾರತದ ಪರಂಪರೆ ಮತ್ತು ಇತಿಹಾಸದಲ್ಲಿ ಸ್ಥಾನವಿಲ್ಲ. ಅದೊಂದು ಕಪ್ಪು ಚುಕ್ಕೆ ಎಂದು ಹೇಳಿದರು.

    ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್ ಮಹಲ್ ಹೆಸರನ್ನು ಕೈಬಿಟ್ಟಿದ್ದಕ್ಕೆ ಹಲವರು ಬೇಸರ ಪಟ್ಟಿದ್ದಾರೆ. ತಾಜ್ ಮಹಲ್ ಕಟ್ಟಿಸಿದ ಷಹಜಹಾನ್ ತನ್ನ ಸ್ವಂತ ತಂದೆಯನ್ನೇ ಜೈಲಿಗೆ ಕಳಿಸಿದ್ದ. ಭಾರತದ ಎಲ್ಲಾ ಭಾಗಗಳಲ್ಲೂ ಹಿಂದುಗಳನ್ನು ಅಳಿಸಬೇಕೆಂದು ಬಯಸಿದ್ದ. ಅಂತಹ ವ್ಯಕ್ತಿಗಳು ನಮ್ಮ ಇತಿಹಾಸದ ಭಾಗವಾದರೇ ನಾವು ಇತಿಹಾಸವನ್ನೇ ಬದಲಾಯಿಸುತ್ತೇವೆ ಎಂದು ಸಂಗೀತ್ ಸೋಮ್ ಹೇಳಿದ್ದರು.

    ಸೋಮ್ ಅವರ ಹೇಳಿಕೆಗೆ ಈಗ ಎಸ್‍ಪಿ ವಕ್ತಾರರೂ ಸೇರಿದಂತೆ ಹಲವಾರು ವಿರೋಧಿ ರಾಜಕಾರಣಿಗಳು ಅವರನ್ನು ಟೀಕಿಸಿದ್ದು, ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು, ಕೆಂಪುಕೋಟೆಯನ್ನು ಸಹ ದ್ರೋಹಿಗಳೇ ನಿರ್ಮಿಸಿದ್ದು, ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರಾ ಎಂದು ಪ್ರಶ್ನಿಸಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

    ಕಳೆದ ತಿಂಗಳು ಉತ್ತರ ಪ್ರದೇಶ ಪ್ರವಾಸಿ ತಾಣಗಳ ಕಿರು ಪುಸ್ತಕವನ್ನು ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ತಾಜ್ ಮಹಲ್ ಅನ್ನು ಕೈ ಬಿಟ್ಟಿತ್ತು. ಆದರೆ ಯುನೆಸ್ಕೋ ವಿಶ್ವ ಐತಿಹಾಸಿಕ ತಾಣಗಳಲ್ಲಿ ಸ್ಥಾನ ಪಡೆದಿರುವ ತಾಜ್ ಮಹಲ್ ವೀಕ್ಷಿಸಲು ಸುಮಾರು 60 ಲಕ್ಷಕ್ಕಿಂತ ಹೆಚ್ಚಿನ ಪ್ರವಾಸಿಗರು ಪ್ರತಿ ವರ್ಷ ನೋಡಲು ಬರುತ್ತಾರೆ. ಅವರನ್ನು ಬರಬೇಡಿ ಎಂದು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಲ್ಲಿಸುತ್ತಾರಾ ಎಂದು ಓವೈಸಿ ಆಕ್ರೋಶದಿಂದ ಹೇಳಿದ್ದಾರೆ.

    ಸೋಮ್ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು, ಇನ್ನು ಮುಂದೆ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಬದಲಾಗಿ ದೆಹಲಿಯ ನೆಹರೂ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರಾ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.