Tag: overnight protest

  • ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರದಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಹಲವು ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಗುತ್ತಿದೆ. ಅಹೋರಾತ್ರಿ ಧರಣಿಗೆ ಇಬ್ಬರಿಗೆ ವಿನಾಯ್ತಿ ನೀಡಿದ್ದಾರಂತೆ. ಸ್ವತಃ ಸಿದ್ದರಾಮಯ್ಯ ಅವರೇ ಆ ಇಬ್ಬರ ಹೆಸರನ್ನ ಮೊಗಸಾಲೆಯಲ್ಲಿ ಹೇಳಿ ಹಾಸ್ಯ ಮಾಡಿದ್ದಾರೆ.

    ಶುಕ್ರವಾರ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಆ ಸ್ಥಳಕ್ಕೆ ಮಾಜಿ ಸಚಿವ ದೇಶಪಾಂಡೆ ಕೂಡ ಬಂದು ಸಿದ್ದರಾಮಯ್ಯ ಪಕ್ಕ ಕುಳಿತರು. ಆಗ ಸಿದ್ದರಾಮಯ್ಯ ದೇಶಪಾಂಡೆಯವರ ಕಾಲೆಳೆಯಲು ಪ್ರಾರಂಬಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಅಹೋರಾತ್ರಿ ಧರಣಿಗೆ ನಮ್ ಶಾಮನೂರು ಶಿವಶಂಕರಪ್ಪ, ಈ ದೇಶಪಾಂಡೆ ಇಬ್ಬರಿಗೂ ವಿನಾಯ್ತಿ ಕೊಟ್ಟಿದ್ದೇವೆ. ಇಬ್ಬರಿಗೂ ವಯಸ್ಸಾಗಿದೆ ಪಾಪ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.

    ಇದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ದೇಶಪಾಂಡೆ. ನಾನೇನು ಮುದುಕ ಅಲ್ಲ, ನನಗೇನು ವಯಸ್ಸಾಗಿದೆ. ನಿನಗಿಂತ ನಾನು 6 ತಿಂಗಳು ದೊಡ್ಡವನು. ಹಾಗಾದ್ರೆ ನೀನು ಮುದುಕನಾ? ಎಂದು ಸಿದ್ದರಾಮಯ್ಯಗೆ ಕೇಳಿದ್ದಾರೆ. ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್‍ನ್ನು ತಿವಿದ ಎಚ್‍ಡಿಕೆ

    ನೋಡಪ್ಪಾ, ನನಗೆ ವಯಸ್ಸಾಗಿದ್ರೂ ನಾನು ಹಾಗೆ ಕಾಣಲ್ಲ. ನೀನು ಮಾಗಿ ಬಿಟ್ಟಿದ್ದೀಯಾ. ಅದಕ್ಕೆ ಹಂಗೆ ಹೇಳ್ದೆ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಆಗ ಅಕ್ಕ ಪಕ್ಕ ಇದ್ದ ಶಾಸಕರು ನಗೆಡಲಲ್ಲಿ ತೇಲಿದ್ದಾರೆ.

  • ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ – ಫ್ರೀಡಂ ಪಾರ್ಕ್‍ನಲ್ಲಿ ನ್ಯಾಯಕ್ಕಾಗಿ ಹೋರಾಟ

    ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ – ಫ್ರೀಡಂ ಪಾರ್ಕ್‍ನಲ್ಲಿ ನ್ಯಾಯಕ್ಕಾಗಿ ಹೋರಾಟ

    ಬೆಂಗಳೂರು: ನಿಗದಿತ ವೇತನ, ಸಹಾಯಧನ ಮತ್ತು ಸೇವಾಭದ್ರತೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಮುಂದುವರಿದಿದೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಾವಿರಾರು ಕಾರ್ಯಕರ್ತೆಯರು ರಾತ್ರಿಯಿಂದ ಅಲ್ಲೇ ಮಲಗಿ ಪ್ರತಿಭಟನೆ ನಡೆಸ್ತಿದ್ದಾರೆ. ಗುರುವರದಂದು ಪ್ರತಿಭಟನಾ ಸ್ಥಳಕ್ಕೆ ಬಂದ ಆರೊಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, 5 ಸಾವಿರ ಸಹಾಯಧನ ನೀಡಲು ಒಪ್ಪಿಗೆ ನೀಡಿ ಆದೇಶ ಹೊರಡಿಸಿದ್ರು. ಆದ್ರೆ ಆಶಾ ಕಾರ್ಯಕರ್ತೆಯರು 6 ಸಾವಿರಕ್ಕೆ ಪಟ್ಟು ಹಿಡಿದ್ರು.

    ಸ್ವತಃ ಆರೋಗ್ಯ ಸಚಿವರೇ ಬಂದು ಸಂಧಾನ ನಡೆಸಿದ್ರೂ ಪ್ರಯೋಜನವಾಗಿಲ್ಲ. ಬಳಿಕ ಆರೋಗ್ಯ ಸಚಿವ ರಮೇಶ್ ಕುಮಾರ್ ಸಹ ಭೇಟಿ ನೀಡಿ ಚರ್ಚೆ ನಡೆಸಿದ್ರು. ಇವತ್ತು ಮಧ್ಯಾಹ್ನ 3 ಗಂಟೆಗೆ ಆರೋಗ್ಯ ಸಚಿವರು ಸಭೆ ಕರೆದಿದ್ದಾರೆ.