Tag: Outsourcing Job

  • ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    – ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸ್ಪಷ್ಟನೆ

    ಚಾಮರಾಜನಗರ: ಕೆಎಸ್‌ಆರ್‌ಟಿಸಿ ಚಾಲಕರ (KSRTC Driver) ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಅಲ್ಲದೇ ಪನ್ನಗ ಎಂಟರ್ ಪ್ರೈಸಸ್ (Pannaga Enterprises) ಏಜೆನ್ಸಿ ವಿರುದ್ಧ ನೋಟೀಸ್ ಜಾರಿಗೊಳಿಸಿದ್ದು, ನಿಮ್ಮ ಏಜೆನ್ಸಿ ಅವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನ ಏಕೆ ರದ್ದುಗೊಳಿಸಬಾರದು? ಈ ಬಗ್ಗೆ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಿದೆ.

    KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    ನೋಟಿಸ್‌ನಲ್ಲಿ ಏನಿದೆ?
    ಕೆಎಸ್‌ಆರ್‌ಟಿಸಿ ನಿಗಮದ ಚಾಮರಾಜನಗರ ವಿಭಾಗದಲ್ಲಿ ಚಾಲಕರ ಹೊರಗುತ್ತಿಗೆಯ ನಿಯೋಜನೆಯಲ್ಲಿ ಆಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಗೂ ಕೆಎಸ್‌ಆರ್‌ಟಿಸಿಗೂ ಯಾವುದೇ ಸಂಬಂಧವಿರುವುದಿಲ್ಲ.

    KSRTC ಗೆ ಪನ್ನಗ ಏಜೆನ್ಸಿ ಹೊರಗುತ್ತಿಗೆ ಚಾಲಕರ ಸೇವೆ ಒದಗಿಸುತ್ತಿದೆ. ಚಾಮರಾಜನಗರ ಡಿಪೋಗೆ 125 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೀಜಿಸಲು ಒಪ್ಪಂದವಾಗಿದೆ. ಆದ್ರೆ ಹೊರಗುತ್ತಿಗೆ ಮೇಲೆ ಚಾಲರನ್ನು ನಿಯೋಜಿಸಲು 30 ರಿಂದ 40,000 ರೂ. ವರೆಗೆ ಹಣ ಪಡೆಯುತ್ತಿದ್ದಾರೆ, ಅಲ್ಲದೇ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸದೇ ಇರುವವರನ್ನೂ ಹಣ ಪಡೆದು ಹೊರಗುತ್ತಿಗೆ ಮೇಲೆ ಚಾಲಕರಾಗಿ ನಿಯೋಜಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    KSRTC ನಿಗಮದ ಕರಾರು ಒಪ್ಪಂದ ಷರತ್ತು ಮತ್ತು ನಿಬಂಧನೆಗಳಲ್ಲಿ ಹೊರಗುತ್ತಿಗೆ ಚಾಲಕರನ್ನು ನಿಯೋಜಿಸುವ ವೇಳೆ ಹಣ ಪಡೆಯುವಂತಿಲ್ಲ. ಅಲ್ಲದೇ ಚಾಲನಾ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿ, ತೇರ್ಗಡೆ ಹೊಂದಿದವರನ್ನು ಮಾತ್ರ ನಿಯೋಜಿಸಲಾಗುತ್ತಿದೆ. ಆದಾಗ್ಯೂ ನಿಮ್ಮದೇ ಹೊರಗುತ್ತಿಗೆ ಚಾಲಕರಿಂದ ಹಣ ಪಡೆದು ನಿಯೋಜಿಸುತ್ತಿರುವ ಬಗ್ಗೆ ವರದಿಯಾಗಿದೆ. ಆರೋಪ ಹಿನ್ನಲೆ ನಿಮ್ಮ ಏಜೆನ್ಸಿಯವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಏಕೆ ರದ್ದುಗೊಳಿಸಬಾರದು? ಎಂಬುದರ ಬಗ್ಗೆ ಸೂಕ್ತ ಸಮಜಾಯಿಷಿಯನ್ನು ಕೂಡಲೇ ನೀಡಿ, ಕಚೇರಿಗೆ ಕಳುಹಿಸಬೇಕು ಎಂದು ತಿಳಿಸಿದೆ.

    ಮುಂದುವರಿದು ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಇರುವುದಿಲ್ಲ. ನೇಮಕಾತಿ ವೇಳೆ ಅಭ್ಯರ್ಥಿಗೂ, ನಿಗಮಕ್ಕೂ ನೇರವಾಗಿ ಯಾವುದೇ ಪತ್ರ ವ್ಯವಹಾರ ನಡೆಯುದಿಲ್ಲವೆಂದು ಸಾರಿಗೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಡ್ರೈವರ್‌ಗಳು ಪನ್ನಗ ಏಜೆನ್ಸಿ ಮೂಲಕವೇ ನೇಮಕ ಆಗಿದ್ದಾರೆ ಎಂದು ಚಾಮರಾಜನಗರದ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.  ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    – ಲಂಚಾವತಾರದ ಬಗ್ಗೆ ಚಾಲಕ ಮಾತನಾಡಿದ ವೀಡಿಯೋ ವೈರಲ್

    ಚಾಮರಾಜನಗರ: ಕೆಎಸ್‌ಆರ್‌ಟಿಸಿ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

    ಕೆಎಸ್‌ಆರ್‌ಟಿಸಿ ಚಾಲಕರ ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಚಾಲಕನೊಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹಣ ಕೊಟ್ಟರೆ ಟ್ರ‍್ಯಾಕ್ ಪರೀಕ್ಷೆ ಕೂಡ ಪಾಸ್ ಮಾಡುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಡ್ರೈವರ್ ಒಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಟ್ರ‍್ಯಾಕ್ ಪರೀಕ್ಷೆ ಪಾಸ್ ಆದರೆ 30 ಸಾವಿರ ಕೊಟ್ರೆ ಸಾಕು, ಟ್ರ‍್ಯಾಕ್ ಪರೀಕ್ಷೆ ಪಾಸ್ ಆಗಿಲ್ಲ ಅಂದ್ರೆ 40 ಸಾವಿರ ಕೊಡಬೇಕೆಂದು ಮತ್ತೊಬ್ಬ ವ್ಯಕ್ತಿಗೆ ಹೇಳುತ್ತಾನೆ. ನಾನು ಕೂಡ ಹಣ ಕೊಟ್ಟು ಟ್ರ‍್ಯಾಕ್ ಪರೀಕ್ಷೆ ಪಾಸ್ ಆದೆ ಎಂದು ಡ್ರೈವರ್ ತಿಳಿಸಿದ್ದಾನೆ. ಲಂಚ ಪಡೆದು ಪರೀಕ್ಷೆ ಪಾಸ್ ಮಾಡುತ್ತಿದ್ದಾರೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಗಳ ವಿಧೇಯಕ ಅಂಗೀಕಾರ

    ಇನ್ನೂ ಶಕ್ತಿ ಯೋಜನೆ ಬಳಿಕ ಸಾವಿರಾರು ಪ್ರಯಾಣಿಕರು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ನೂರಾರು ಜನರನ್ನು ಹೊತ್ತೊಯ್ಯುವ ಬಸ್ ಚಾಲಕನನ್ನು ಹಣ ಪಡೆದು ನೇಮಕಾತಿ ಮಾಡಿದರೆ ಜನರ ಪ್ರಾಣಕ್ಕೆ ಹೊಣೆ ಯಾರೆಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳ ವಿರುದ್ಧ ಕನ್ನಡ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಬಾರದವರನ್ನು ಅಕ್ರಮ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸಿ ಜನರ ಪ್ರಾಣಕ್ಕೂ ಕೂಡ ಕುತ್ತು ಉಂಟಾಗಲಿದೆಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿಲ್ಲ, ಇದು ಪಿಕ್ನಿಕ್‍ನಂತಿದೆ – ಬಿಜೆಪಿಯಿಂದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸ: ವಿಜಯೇಂದ್ರ

    ಒಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಚಾಲಕರ ಹೊರಗುತ್ತಿಗೆ ನೇಮಕದಲ್ಲೂ ಕೂಡ ಅಕ್ರಮದ ವಾಸನೆ ಬಂದಿದೆ. ಬಸ್ ಸಾರಥಿಯನ್ನು ಹಣದ ಮೂಲಕ ನೇಮಕಾತಿ ಮಾಡಿಕೊಂಡ್ರೆ ಪ್ರಯಾಣಿಕರ ಗತಿಯೇನು? ಅವರ ಪ್ರಾಣಕ್ಕೆ ಗ್ಯಾರಂಟಿ ಯಾರೆಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಇದರಲ್ಲಿ ಯಾರೂ ಭಾಗಿ ಆಗಿದ್ದಾರೆಂಬುದು ತನಿಖೆಯ ಮೂಲಕವಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ವೈದ್ಯ ಸೈಯದ್‌ ದೋಷಿ -‌ NIA ವಿಶೇಷ ನ್ಯಾಯಾಲಯ ಆದೇಶ