Tag: Outlaws

  • ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಚಂಡೀಗಢ: ಸಬ್‍ಇನ್ಸ್‌ಪೆಕ್ಟರ್ ಗಸ್ತು ತಿರುಗುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಹರಿಯಾಣದ ಯುಮುನಾನಗರದಲ್ಲಿ ನಡೆದಿದೆ.

    ಯಮುನಾನಗರದ ರಾಡೌರ್ ಪ್ರದೇಶದಲ್ಲಿ ಸಬ್‍ಇನ್ಸ್‌ಪೆಕ್ಟರ್ ಸತೀಶ್ ಕಾಂಬೋಜ್ ತಮ್ಮ ತಂಡದೊಂದಿಗೆ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿ ಸತೀಶ್ ಅವರು ಗಸ್ತು ತಿರುಗುತ್ತಿದ್ದರು. ಈ ವೇಳೆ ಬ್ಯಾಂಕ್‍ನ ಹೊರಗೆ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ನಿಂತಿರುವುದು ಅವರ ಗಮನಕ್ಕೆ ಬಂದಿದೆ. ಆದರೆ ಪೊಲೀಸರ ತಂಡವನ್ನು ಕಂಡ ಇಬ್ಬರು ಯುವಕರು ರದೌರಿ ರಸ್ತೆಯತ್ತ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    police (1)

    ಅನುಮಾನಗೊಂಡ ಪೊಲೀಸ್ ತಂಡವು ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದು, ರಾಡೌರಿ ರಸ್ತೆಯಲ್ಲಿರುವ ಎಫ್‍ಸಿಐ ಗೋಡೌನ್‍ಗಳ ಬಳಿ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಮುಸುಕುಧಾರಿ ಯುವಕರು ಬೈಕ್ ನಿಲ್ಲಿಸುವ ಬದಲು ಎಸ್‍ಐ ಸತೀಶ್ ಕಾಂಬೋಜ್ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

    ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದು, ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ

    ಮತ್ತೊಂದೆಡೆ ದಾಳಿಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದ ಸುರೀಂದರ್ ಪಾಲ್ ಸಿಂಗ್, ಎಸ್ಪಿ ಸ್ವತಃ ಘಟನಾ ಸ್ಥಳವನ್ನು ಪರಿಶೀಲಿಸಿ ಜಿಲ್ಲೆಯಾದ್ಯಂತ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.