Tag: out

  • Breaking-‘ಬಿಗ್ ಬಾಸ್’ ಮನೆಯಿಂದ ಹೊರಬಂದ ಡ್ರೋನ್ ಮತ್ತು ಸಂಗೀತಾ

    Breaking-‘ಬಿಗ್ ಬಾಸ್’ ಮನೆಯಿಂದ ಹೊರಬಂದ ಡ್ರೋನ್ ಮತ್ತು ಸಂಗೀತಾ

    ದೊಡ್ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ಟೆಲಿಕಾಸ್ಟ್ ಆಗುತ್ತಿದ್ದು, ಅಲ್ಲಿಯೂ ಇಬ್ಬರೂ ಕಾಣಿಸಿಕೊಳ್ಳುತ್ತಿಲ್ಲ.

    ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್. ಈ ವಿಷಯದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ.

    ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ. ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು.

    ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ (Bigg Boss Kannada) ಮನೆಗೆ ಕರೆತರಲಾಗಿತ್ತು. ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಗ್ ಬಾಸ್ ಆಟದಲ್ಲಿ ಎಂದಿನಂತೆ ಟಾಸ್ಕ್ ಆಡಲು ಎರಡು ತಂಡಗಳಾಗಿ ವಿಂಗಡಿಸಿದ್ದರು. ಮನೆಯವರ ವೋಟ್ ಮೇರೆಗೆ ಡ್ರೋನ್ ಪ್ರತಾಪ್ ಮತ್ತು ಮೈಕಲ್ ಅವರನ್ನ ಕ್ಯಾಪ್ಟನ್ ಆಗಿ ಕಣಕ್ಕೆ ಬಿಡಲಾಯಿತು. ಎರಡು ಟೀಮ್‌ನ ಜಟಾಪಟಿ ನಂತರ ಗೆದ್ದಿರುವ ತಂಡ ಕ್ಯಾಪ್ಟನ್ ರೇಸ್‌ಗೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು

    ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್‌ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.

    ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್‌ಗೆ ಬರೋದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ.

    ದೊಡ್ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಗಟ್ಟಿ ಸ್ಪರ್ಧಿಯಾಗಿ ತನಿಷಾ ಸೆಡ್ಡು ಹೊಡೆದಿದ್ದಾರೆ. ಎದುರಾಳಿಗೆ ಮಸ್ತ್ ಠಕ್ಕರ್ ಕೊಟ್ಟಿದ್ದಾರೆ. ಸದ್ಯ ತನಿಷಾ ಮನೆಯಿಂದ ಹೊರಹೋಗಿರೋದು ಬಿಗ್ ಬಾಸ್ ಮನೆಮಂದಿಗೂ ಬೇಸರ ಮೂಡಿಸಿದೆ. ತಮ್ಮ ನೆಚ್ಚಿನ ನಟಿಯು ಬೇಗ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  • ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?

    ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?

    ಮೋಹಕ ತಾರೆ ರಮ್ಯಾ (Ramya) ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಹಲವು ವರ್ಷಗಳ ನಂತರ ಮತ್ತೆ ರಮ್ಯಾ ಸ್ಯಾಂಡಲ್ ವುಡ್ ಗೆ ಬಂದರಲ್ಲ ಅಂತ ಸಂಭ್ರಮಿಸುವ ಹೊತ್ತಿನಲ್ಲೇ, ಏನೋ ಯಡವಟ್ಟಾದ ವಿಚಾರವೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅವರೇ ನಿರ್ಮಾಣ ಮಾಡುತ್ತಿದ್ದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ರಮ್ಯಾ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ಆ್ಯಪಲ್ ಬಾಕ್ಸ್ ತಿಳಿಸಿದಂತೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swati Muttina Malehaniye) ಸಿನಿಮಾವನ್ನು ರಮ್ಯಾ ಅವರೇ ನಿರ್ಮಾಣ ಮಾಡಿ, ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ನಾಯಕಿಯ ಸ್ಥಾನವನ್ನು ಬೇರೊಬ್ಬರು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ಆ್ಯಪಲ್ ಬಾಕ್ಸ್ (apple box) ಅಧಿಕೃತ ಪೇಜಿನಲ್ಲಿ ಹಾಕಿರುವಂತೆ, ‘ಸಿರಿ ರವಿಕುಮಾರ್ (Siri Ravikumar) ನಮ್ಮ ನಿರ್ಮಾಣದ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಆದರೆ, ರಮ್ಯಾ ಬೆಳ್ಳಿಪರದೆಯ ಮೇಲೆ ಆದಷ್ಟು ಬೇಗ ಮರಳಲಿದ್ದಾರೆ’ ಎಂದು ಬರೆಯಲಾಗಿದೆ. ಅಲ್ಲಿಗೆ ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿಯಲಿದ್ದಾರಾ ಅಥವಾ ಇಬ್ಬರು ನಾಯಕಿಯರು ಈ ಸಿನಿಮಾದಲ್ಲಿ ಇದ್ದಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

    ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಜ್ ಬಿ ಶೆಟ್ಟಿ (Raj B. Shetty) ಈ ಚಿತ್ರದ ನಿರ್ದೇಶಕರು. ಅವರು ಕೂಡ ಪ್ರಧಾನ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ನಿರ್ಮಾಣದಲ್ಲೂ ಹೂಡಿಕೆ ಮಾಡಿದ್ದಾರೆ. ರಮ್ಯಾ ಈ ಸಿನಿಮಾದಲ್ಲಿ ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತಾರಾ? ಅಥವಾ ನಟಿಯಾಗಿಯೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ವಾರ ವಾರದಿಂದ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಎರಡು ವಾರಗಳ ಕಾಲ ದೊಡ್ಮನೆಯಲ್ಲಿ ನಾನಾ ರೀತಿಯ ಆಟಗಳನ್ನು ಆಡುತ್ತಿರುವ ಸ್ಪರ್ಧಿಗಳು ವಾರಂತ್ಯದ ಕಿಚ್ಚನ ಪಂಚಾಯತಿಗಾಗಿ ಭಯದಿಂದಲೇ ಕಾಯುತ್ತಾರೆ. ಆಯಾ ವಾರ ಮನೆಯಲ್ಲಿ ಉಳಿದುಕೊಳ್ಳುವವರು ಯಾರು, ಮನೆಯಿಂದ ಹೊರ ಬರುವವರು ಯಾರು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ತಾನು ಸೇಫ್ ಆಗಿ ಮನೆಯಲ್ಲೇ ಉಳಿಯಲಿ ಎನ್ನುವುದು ಬಹುತೇಕ ಆಸೆ. ಆದರೆ, ಒಬ್ಬರು ಮನೆಯಿಂದ ಹೊರ ಹೋಗಲೇಬೇಕಾದ ಅನಿವಾರ್ಯ.

    ಈಗಾಗಲೇ ಮನೆಯಿಂದ ಇಬ್ಬರು ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಇಬ್ಬರಿಗೆ ಗಾಯವಾಗಿದ್ದರಿಂದ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಒಟ್ಟು ನಾಲ್ಕು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದಿದ್ದು ಆಗಿದೆ. ಇದೀಗ ಉಳಿದವರ ಮಧ್ಯ ಪೈಪೋಟಿ ನಡೆದಿದೆ. ಈ ಬಾರಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಅವರಲ್ಲಿ ಯಾರು ಹೊರ ಬರುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಆದರೆ, ಸತತವಾಗಿ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ವಾರ ಬಚಾವ್ ಆಗಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಈ ವಾರ ನಾಮಿನೇಟ್ ಪ್ರಕ್ರಿಯೆಗಾಗಿ ಬಿಗ್ ಬಾಸ್ ಎರಡು ಬಾಕ್ಸ್ ಕಳುಹಿಸಿದ್ದರು. ಒಂದು ಬಾಕ್ಸ್ ನಲ್ಲಿ ಕಣ್ಣಿನ ಚಿತ್ರ ಮತ್ತೊಂದು ಬಾಕ್ಸ್ ನಲ್ಲಿ ಕನ್ಫೆಷನ್ ರೂಮ್ ಎಂದು ಬರೆಯಲಾಗಿದೆ. ಕಣ್ಣಿನ ಚಿತ್ರ ಇದ್ದವರು ನೇರವಾಗಿ, ಕನ್ಫೆಷನ್ ರೂಮ್ ಅಂತ ಇದ್ದರೆ ಕನ್ಫೆಷನ್ ರೂಮ್ ಗೆ ತೆರಳಿ ನಾಮಿನೇಟ್ ಮಾಡಬೇಕಿತ್ತು. ಚೈತ್ರಾ, ಜಯಶ್ರೀ, ಆರ್ಯವರ್ಧನ್, ನಂದಿನಿ, ಅಕ್ಷತಾ, ರೂಪೇಶ್, ಸೋಮಣ್ಣ ಹೀಗೆ ಏಳು ಜನರು ವೋಟು ಪಡೆದುಕೊಂಡು ನಾಮಿನೇಟ್ ಆದರು. ಆದರೆ, ಸೋನು ಶ್ರೀನಿವಾಸ್ ಗೌಡಗೆ ಯಾರೂ ವೋಟು ಮಾಡದೇ ಇರುವ ಕಾರಣಕ್ಕಾಗಿ ಸೇಫ್ ಆದರು.

    Live Tv
    [brid partner=56869869 player=32851 video=960834 autoplay=true]

  • Bigg Boss OTT- ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್: ಕಣ್ಣೀರಿಟ್ಟ ದೊಡ್ಮನೆ

    Bigg Boss OTT- ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್: ಕಣ್ಣೀರಿಟ್ಟ ದೊಡ್ಮನೆ

    ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಕುತೂಹಲ ಮೂಡಿತ್ತು. ಅಂದುಕೊಂಡಂತೆ ಆಗಿದ್ದರೆ ಸ್ಪೂರ್ತಿ ಗೌಡ ಅಥವಾ ಅಕ್ಷತಾ ಕುಕ್ಕಿ ದೊಡ್ಮನೆಯಿಂದ ಆಚೆ ಬರಲಿದ್ದಾರೆ ಎಂದು ಊಹಿಸಲಾಗಿತ್ತು. ಈ ಊಹೆಗೂ ನಿಲುಕದಂತಹ ಘಟನೆಯೊಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್ ಆಗಿದ್ದಾರೆ.

    ಅರ್ಜುನ್ ರಮೇಶ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದರು. ಮನೆಯಲ್ಲಿದ್ದವರೇ ಪ್ರೀತಿಯಿಂದಲೇ ಅರ್ಜುನ್ ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದರು. ಅವರ ಖಾಸಗಿ ವಿಚಾರಗಳನ್ನು ಹಂಚಿಕೊಂಡಾಗ ಅನೇಕರು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಹಾಗಾಗಿಯೇ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದರು. ಈ ಕ್ಯಾಪ್ಟನ್ ಶಿಪ್ ಅವರಿಗೆ ಮುಳುವಾಯಿತು. ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಿನಿಂದಲೇ ಇಷ್ಟು ದಿನ ಕಳೆದಿದ್ದಾರೆ. ನೋವು ನಿವಾರಣೆ ಆಗದೇ ಇರುವ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

    ಸತತ ಒಂದು ವಾರದಿಂದ ಕೈಗೆ ನೋವು ಮಾಡಿಕೊಂಡೇ ಆಟದಲ್ಲಿ ಭಾಗಿಯಾಗುತ್ತಿದ್ದ ಅರ್ಜುನ್  ರಮೇಶ್ ಅವರನ್ನು ಎಲಿಮಿನೇಟ್ ಮಾಡದೇ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಹೀಗಾಗಿ ಇಡೀ ಮನೆಯಲ್ಲಿ ಭಾವುಕತೆ ತುಂಬಿತ್ತು. ಕೆಲವರಂತೂ ಅತ್ತೆ ಬಿಟ್ಟರು. ಮನೆಯಿಂದ ಅವರನ್ನು ಕಳುಹಿಸುವಾಗಲ ಆದಷ್ಟು ಬೇಗ ಗುಣಮುಖರಾಗಿ ಎಂದು ಶುಭ ಹಾರೈಸಿ ಕಳುಹಿಸಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟು ಶೂಟಿಂಗ್ ಮುಂದುವರೆಸಿದ್ದಾರಂತೆ ನಿರ್ದೇಶಕರು. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರು ಮತ್ತು ನಿರ್ಮಾಪಕರು ಆಗಿರುವ ಆರೂರು ಜಗದೀಶ್, ಇಂದು ಕೂಡ ಚಿತ್ರೀಕರಣವನ್ನು ಮುಂದುವರೆಸಿದ್ದಾರಂತೆ. ಈ ನಡುವೆ ಅನಿರುದ್ಧ ನಿರ್ವಹಿಸುತ್ತಿದ್ದ ಪಾತ್ರಕ್ಕಾಗಿ ಹೊಸ ಕಲಾವಿದರನ್ನೂ ಹುಡುಕುತ್ತಿದ್ದಾರಂತೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ ಧಾರಾವಾಹಿ ನಡೆಯಲೇಬೇಕು. ಈ ಧಾರಾವಾಹಿ ನಂಬಿಕೊಂಡು ನನ್ನನ್ನೂ ಸೇರಿದಂತೆ ಹಲವರು ಇದ್ದಾರೆ. ಹಾಗಾಗಿ ಚಿತ್ರೀಕರಣ ಮುಂದುವರೆಸಲೇಬೇಕಿದೆ’ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅನಿರುದ್ಧ ಅವರು ವಾಪಸ್ಸು ಬರದೇ ಇದ್ದರೂ, ಯಾರೇ ಬಂದರೂ ಶೂಟಿಂಗ್ ನಡೆಯಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ನಿನ್ನೆ ನಡೆಯುತ್ತಿದ್ದ ಶೂಟಿಂಗ್ ನಲ್ಲಿ ಅನಿರುದ್ಧ ಅವರೇ ಬಿಟ್ಟು ಹೋಗಿರುವುದರಿಂದ, ಅವರನ್ನು ಧಾರಾವಾಹಿ ತಂಡ ಮತ್ತೆ ಕರೆಯುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಆರೂರು ಜಗದೀಶ್ ಮತ್ತು ಅನಿರುದ್ಧ ಕೂಡಿಸಿಕೊಂಡು ವಾಹಿನಿಯು ಮಾತನಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾಹಿನಿಯ ಮಧ್ಯಸ್ಥಿಕೆಯಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆಯಾ ಅನ್ನುವ ಕುತೂಹಲ ಕೂಡ ಮೂಡಿದೆ. ಈಗಾಗಲೇ ಹಲವಾರು ಬಾರಿ ಇದೇ ರೀತಿಯಲ್ಲೇ ಮನಸ್ತಾಪ ಆಗಿರುವುದರಿಂದ ಧಾರಾವಾಹಿ ನಿರ್ಮಾಪಕರು ಇದಕ್ಕೆ ಒಪ್ಪುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

    ಇಂದು ಸಂಧಾನ ನಡೆಯುವ ಸಾಧ್ಯತೆಯಿದ್ದು, ಧಾರಾವಾಹಿ ತಂಡದೊಂದಿಗೆ ಮಾತನಾಡುವುದಾಗಿ ಈಗಾಗಲೇ ಅನಿರುದ್ಧ ಹೇಳಿಕೊಂಡಿದ್ದಾರೆ. ಒಂದು ವೇಳೆ ಧಾರಾವಾಹಿಯಿಂದ ಕೈ ಬಿಟ್ಟರೆ, ಪತ್ರಿಕಾಗೋಷ್ಠಿ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಈ ಕುರಿತು ಮಾತನಾಡಲು ನಿರ್ಮಾಪಕ ಕಂ ನಿರ್ದೇಶಕ ಆರೂರು ಜಗದೀಶ್ ನಿರಾಕರಿಸಿದ್ದಾರೆ. ಅನಿರುದ್ಧ ಅವರ ನಡೆ ನೋಡಿಕೊಂಡು ಪ್ರತಿಕ್ರಿಯೆ ನೀಡಲಿದ್ದೇನೆ ಎಂದೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ

    ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ

    ಟ ಅನಿರುದ್ಧ ಜನಪ್ರಿಯ ಧಾರಾವಾಹಿಯಿಂದ ಹೊರ ನಡೆದ ಸುದ್ದಿ ನಿನ್ನೆಯಿಂದಲೂ ಸಖತ್ ಸದ್ದು ಮಾಡುತ್ತಿದೆ. ಧಾರಾವಾಹಿಯಿಂದ ಅನಿರುದ್ಧ ಅವರೇ ಹೊರ ನಡೆದಿದ್ದಾರೆ ಎಂದು ಒಂದು ಕಡೆ ಸುದ್ದಿ ಆಗುತ್ತಿದ್ದರೆ, ಧಾರಾವಾಹಿ ತಂಡವೇ ಅವರನ್ನು ಹೊರ ಕಳುಹಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಎರಡೂ ಕಡೆ ಈ ಕುರಿತು ಸ್ಪಷ್ಟತೆ ಇಲ್ಲ. ಧಾರಾವಾಹಿ ತಂಡದ ಸದಸ್ಯರು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅನಿರುದ್ಧ ಈ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.

    ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ ಎಂದು ಹೇಳುವ ಮೂಲಕ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ. ಧಾರಾವಾಹಿಯಿಂದ ತಮ್ಮನ್ನು ಹೊರ ಹಾಕುತ್ತಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ವಾಹಿನಿಯಾಗಲಿ ಅಥವಾ ಧಾರಾವಾಹಿ ತಂಡವಾಗಲಿ, ಈ ಕುರಿತು ಮಾತನಾಡಲು ತಮ್ಮನ್ನು ಸಂಪರ್ಕಿಸಿಲ್ಲ ಎಂದಿರುವ ಅವರು, ಈ ಸುದ್ದಿಯ ಕುರಿತಾಗಿ ಮಾತನಾಡಲು ಚಾನೆಲ್ ಗೆ ಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಧಾರಾವಾಹಿಯಿಂದ ಹೊರ ನಡೆಯುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣಕ್ಕಾಗಿ ತಂಡದೊಂದಿಗೆ ಮಾತನಾಡುವುದಾಗಿ ತಿಳಿಸಿರುವ ಅನಿರುದ್ಧ, ಒಂದು ವೇಳೆ ಆ ರೀತಿಯಲ್ಲಿ ಏನಾದರೂ ನಡೆದರೆ, ಪತ್ರಿಕಾಗೋಷ್ಠಿ ಮಾಡಿಯೇ ಎಲ್ಲ ವಿಷಯವನ್ನೂ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲ ನಿರ್ಧಾರವೂ ಧಾರಾವಾಹಿ ತಂಡದ ಮೇಲೆಯೇ ನಿಂತಿದೆ ಎಂದು ಅನಿರುದ್ಧ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಮೆರಾಗೆ ಕೈ ಮುಗಿದು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದ ಅನಿರುದ್ಧ?: ಶೂಟಿಂಗ್ ಸೆಟ್ ನಲ್ಲಿ ಆಗಿದ್ದೇನು?

    ಕ್ಯಾಮೆರಾಗೆ ಕೈ ಮುಗಿದು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದ ಅನಿರುದ್ಧ?: ಶೂಟಿಂಗ್ ಸೆಟ್ ನಲ್ಲಿ ಆಗಿದ್ದೇನು?

    ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಹೊರ ನಡೆದ ಸುದ್ದಿ ಧಾರಾವಾಹಿ ಲೋಕದಲ್ಲಿ ಕೋಲಾಹಲ ಉಂಟು ಮಾಡಿದೆ. ಈ ಧಾರಾವಾಹಿ ಅನಿರುದ್ಧ ಅವರಿಗೆ ವೃತ್ತಿ ಜೀವನದಲ್ಲಿ ದೊಡ್ಡದೊಂದು ಬ್ರೇಕ್ ನೀಡಿದ್ದು ಸುಳ್ಳಲ್ಲ. ಅವರ ಮೂಲ ಹೆಸರನ್ನು ಮರೆತು, ಅನಿರುದ್ಧ ಅವರನ್ನು ಆರ್ಯವರ್ಧನ್ ಹೆಸರಿನಿಂದಲೇ ಅಭಿಮಾನಿಗಳು ಕರೆಯುವಷ್ಟು ದೊಡ್ಡ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಹೆಸರು ಮಾತ್ರವಲ್ಲ ಕೈ ತುಂಬಾ ಸಂಬಳವನ್ನೂ ಅದು ನೀಡಿತ್ತು.

    ಈ ಮಧ್ಯೆ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೆ ಮನಸ್ತಾಪವಾಗಿ, ನಿನ್ನೆಯಷ್ಟೇ ಶೂಟಿಂಗ್ ಗೆ ಬಂದಿದ್ದ ಅನಿರುದ್ಧ ಕ್ಯಾಮೆರಾಗೆ ಕೈ ಮುಗಿದು, ಶೂಟಿಂಗ್ ಸ್ಥಳದಿಂದ ಹೊರ ನಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮನಸ್ತಾಪ ನಿನ್ನೆಯಷ್ಟೇ ಆದದ್ದು ಅಲ್ಲವಂತೆ. ಹಲವು ದಿನಗಳಿಂದ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೂ ಮುಸುಕಿನ ಗುದ್ದಾಟ ನಡೆದೇ ಇತ್ತಂತೆ. ನಿನ್ನೇ ಅದು ಸ್ಪೋಟವಾಗಿ ಧಾರಾವಾಹಿ ಸೆಟ್ ನಿಂದ ಹೊರ ಹೋಗುವಂತೆ ಮಾಡಿದೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    ಧಾರಾವಾಹಿಯ ತಂಡದ ಸದಸ್ಯರು ಹೇಳುವಂತೆ, ಅನಿರುದ್ಧ ಅವರು ಹಲವು ತಿಂಗಳಿಂದ ತಂಡದೊಂದಿಗೆ ಕಿರಿಕಿರಿ ಮಾಡುತ್ತಲೇ ಇದ್ದರಂತೆ. ಶೂಟಿಂಗ್ ಗೆ ತಡವಾಗಿ ಬರುವುದು, ಡೇಟ್ ಕೊಡದೇ ಇರುವುದು ಹಾಗೂ ಬರೆದು ಡೈಲಾಗ್ ಅನ್ನು ಹೇಳದೇ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಮಾಡುತ್ತಲೇ ಇದ್ದರಂತೆ. ನಿನ್ನೆ ಕೂಡ ಇದನ್ನೇ ಮಾಡಿದ್ದರಿಂದ, ನಿರ್ಮಾಪಕರಿಗೂ ಮತ್ತು ಅನಿರುದ್ಧ ಮಧ್ಯೆ ಸಣ್ಣದೊಂದು ಗಲಾಟೆ ಕೂಡ ಆಗಿದೆಯಂತೆ.

    ನಿನ್ನೆ ಶೂಟಿಂಗ್ ಸ್ಪಾಟ್ ನಿಂದ ಹೊರ ಹೋದ ಅನಿರುದ್ಧ ಅವರನ್ನು ಮನವೊಲಿಸುವ ಪ್ರಯತ್ನಕ್ಕಿಂತ, ಅವರ ಪಾತ್ರಕ್ಕೆ ಬೇರೆ ಕಲಾವಿದರನ್ನು ಹುಡುಕುವ ಕೆಲಸ ಈಗಾಗಲೇ ನಡೆದಿದೆಯಂತೆ. ಈ ವಿಷಯದ ಕುರಿತು ವಾಹಿನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗುತ್ತದೆ. ಹೊಸ ಕಲಾವಿದರನ್ನು ಹುಡುಕಲು ವಾಹಿನಿಯೂ ಗ್ನೀನ್ ಸಿಗ್ನಲ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅನಿರುದ್ಧ ಬದಲಾಗಿ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಶೂಟ್ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲೇ ಅವರು ನಿರ್ಮಾಪಕ ಕಂ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡರು ಅನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಇದೇ ರೀತಿ ಅನಿರುದ್ಧ ಅವರು ತಂಡದೊಂದಿಗೆ ನಡೆದುಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಡಿದೆ.

    ಈ ಪ್ರಕರಣದ ಕುರಿತಂತೆ ಈಗಾಗಲೇ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ಗೆ ಕಂಪ್ಲೆಂಟ್ ಕೂಡ ಮಾಡಿದ್ದು ಅನಿರುದ್ಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಯಾವುದೇ ಮಾಹಿತಿ ಕೂಡ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    “ಒಂದು ಸೀರಿಯಲ್ ನಿಂದ ಕಲಾವಿದರು ಬದಲಾಗುವುದು ಕಾಮನ್. ಆದರೆ, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಏನಾಗಿದೆ ಎನ್ನುವುದು ಗೊತ್ತಿಲ್ಲ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಗೂ ಯಾವುದೇ ದೂರು ಕೂಡ ಬಂದಿಲ್ಲ. ಹಾಗೇನಾದರೂ ಬಂದರೆ, ಕೂರಿಸಿ ಮಾತನಾಡುತ್ತೇವೆ. ಉದ್ಯಮದ ಉಳುವಿಗಾಗಿಯೇ ನಮ್ಮ ಸಂಘಟನೆ ಇರುವುದು. ವೈಯಕ್ತಿಕವಾಗಿ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ನಟ ಅನಿರುದ್ಧ ಅವರು ಹಲವು ವರ್ಷಗಳಿಂದ ಪರಿಚಿತರು. ಹಾಗೆ ಆಗಿರಲಿಕ್ಕಿಲ್ಲ ಎಂದು ಭಾವಿಸುವೆ’ ಎಂದಿದ್ದಾರೆ ಎಸ್.ವಿ. ಶಿವಕುಮಾರ್.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಮನೆಯಿಂದ ಬರುತ್ತಿದ್ದಂತೆ ನಿಧಿ ಮನೆಗೆ ಹೊರಟ ರಘು

    ಬಿಗ್ ಮನೆಯಿಂದ ಬರುತ್ತಿದ್ದಂತೆ ನಿಧಿ ಮನೆಗೆ ಹೊರಟ ರಘು

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ 2ನೇ ವಾರದ ಎಲಿಮಿನೇಷನ್‍ನಲ್ಲಿ ಬಿಗ್ ಮನೆಯಿಂದ ಆಚೆ ಬಂದಿರುವ ಸ್ಪರ್ಧಿ ರಘು. ಮನೆಗೆ ಬರುತ್ತಿದ್ದಂತೆ ರಘುಗೆ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಬಿಗ್‍ಬಾಸ್ ಜರ್ನಿ ನಂತರ ಹೊಸದೊಂದು ಪ್ರವಾಸಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಇದನ್ನೂ ಓದಿ:  ಬಿಗ್‍ಬಾಸ್ ಮನೆಯಿಂದ ರಘು ಔಟ್

    ಕನ್ನಡ ಬಿಗ್‍ಬಾಸ್ ಮನೆಯಲ್ಲಿ 91 ದಿನಗಳ ಜರ್ನಿ ರಘು ಪಾಲಿಗೆ ಭಾನುವಾರ ಅಂತ್ಯವಾಗಿದೆ. ಸೀಸನ್ 2ರಲ್ಲಿ ಎರಡನೇ ಸ್ಪರ್ಧಿಯಾಗಿ ರಘು ಎಲಿಮಿನೇಟ್ ಆಗಿದ್ದಾರೆ. ರಘು ಮನೆಗೆ ತೆರಳುತ್ತಿದ್ದಂತೆ ಪಟಾಕಿ ಹೊಡೆಯಲಾಗಿದೆ. ಮನೆಯಲ್ಲಿ ವೆಲ್‍ಕಮ್ ಬ್ಯಾಕ್ ಎಂದು ಕೇಕ್ ಕತ್ತರಿಸಿ ಸ್ವಾಗತಿಸಲಾಗಿದೆ. ಈ ಫೋಟೋ ಹಾಗೂ ವೀಡಿಯೋಗಳನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಸಂತಸ ಹೊರ ಹಾಕಿದ್ದಾರೆ. ನಾನು ಮೈಸೂರಿಗೆ ಬರುತ್ತಿದ್ದೇನೆ ನಿಮ್ಮ ಅಮ್ಮನಿಗೆ ರುಚಿಯಾದ ಅಡುಗೆಯನ್ನು ತಯಾರಿಸಲು ಹೇಳಿ ನಿಧಿ ಎಂದು ರಘು ನಿಧಿ ಸುಬ್ಬಯ್ಯ ಅವರನ್ನು ಟ್ಯಾಗ್ ಮಾಡಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬನ್ನಿ ರಘು ಅಮ್ಮಾ ಚಿಲ್ಲಿ ಪೋರ್ಕ್ ಮಾಡುತ್ತಾರೆ ಎಂದು ನಿಧಿ ರಘು ಅವರ ಪೋಸ್ಟ್‍ಗೆ ಪ್ರತಿಕ್ರಿಯಿಸಿದ್ದಾರೆ.

    ರಘು ಅವರು ಬಿಗ್‍ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ, ರಘು ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಬಿಗ್‍ಬಾಸ್ ಮನೆಯಿಂದ ಶುರುವಾದ ಈ ಸ್ನೇಹ ಹೊರಗೆ ಬಂದ ಮೇಲೂ ಅಷ್ಟೆ ಚೆನ್ನಾಗಿದೆ. ಸಿಧಿ ಮನೆಗೆ ಹೋಗಲು ಸಿದ್ಧರಾಗಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು ಗೌಡ, ಶಮಂತ್ ಬ್ರೋ ಗೌಡ, ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಮೊದಲು ಮಂಜು ಸೇವ್ ಆದರು. ನಂತರ ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಪ್ರಿಯಾಂಕಾ ತಿಮ್ಮೇಶ್ ಸೇವ್ ಆದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ರಘು ಉಳಿದುಕೊಂಡರು. ಚಕ್ರವರ್ತಿ ಸೇವ್ ಆಗಿ, ರಘು ಔಟ್ ಆದರು.