Tag: Our Elections

  • ಸರ್ಕಾರ ರಚನೆಗೂ ಮೊದಲೇ ಉಗ್ರ ‘ಪ್ರತಾಪ’ ತೋರಿದ ‘ಸಿಂಹ’

    ಸರ್ಕಾರ ರಚನೆಗೂ ಮೊದಲೇ ಉಗ್ರ ‘ಪ್ರತಾಪ’ ತೋರಿದ ‘ಸಿಂಹ’

    ಬೆಂಗಳೂರು: ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚನೆಗೂ ಮೊದಲೇ ಸಂಸದ ಪ್ರತಾಪ ಸಿಂಹ ಟ್ವಟ್ಟರ್ ನಲ್ಲಿ ಗುಡುಗಿದ್ದಾರೆ.

    ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಜೋಕೆ!! 24 ಜನರನ್ನು ಕಳೆದುಕೊಂಡ ನೋವಿಗೆ ಅಂತಿಮ ತೆರೆ ಬೀಳಲಿದೆ ಅಂತಾ ಸಂಸದ ಪ್ರತಾಪ್ ಸಿಂಹ ಅಂತಾ ಟ್ವಿಟ್ಟರ್‍ನಲ್ಲಿ ಗುಡುಗಿದ್ದಾರೆ. ಪ್ರತಾಪ್ ಸಿಂಜ ಟ್ವೀಟ್ ಮಾಡುತ್ತಿದ್ದಂತೆ ಸಾಮಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಇದನ್ನೂ ಓದಿ: ಯಡಿಯೂರಪ್ಪ ಪ್ರಮಾಣವಚನಕ್ಕಿಲ್ಲ ತಡೆ- ಸುಪ್ರೀಂಕೋರ್ಟ್ ನಲ್ಲೂ ಕಾಂಗ್ರೆಸ್, ಜೆಡಿಎಸ್‍ಗೆ ಹಿನ್ನಡೆ

    27ನೇ ಮುಖ್ಯಮಂತ್ರಿಯಾಗಿ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಬುಧವಾರ ಇಡೀ ದಿನ ಹೈಡ್ರಾಮಾದ ಬಳಿಕ ಕೇಂದ್ರ ಅಟಾರ್ನಿ ಜನರಲ್ ರೋಹಟಗಿ ಅಭಿಪ್ರಾಯ ಸಂಗ್ರಹಿಸಿ ರಾತ್ರಿ 8.05ರ ಹೊತ್ತಿಗೆ ರಾಜಭವನದಿಂದ ಅಧಿಕೃತ ಪ್ರಕಟಣೆ ಹೊರಬಿತ್ತು. ಇನ್ನು ಬಹುಮತ ಸಾಬೀತಿಗೆ 15 ದಿನಗಳ ಅವಕಾಶವನ್ನು ರಾಜ್ಯಪಾಲರು ಕೊಟ್ಟಿದ್ದಾರೆ. ಇನ್ನು ಬಿ.ಎಸ್.ಯಡಿಯೂರಪ್ಪ ಜೊತೆಗೆ 4 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶ್ರೀರಾಮುಲು, ಗೋವಿಂದ ಕಾರಜೋಳ, ಈಶ್ವರಪ್ಪ, ಆರ್.ಅಶೋಕ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

  • ಆಪರೇಷನ್ ಕಮಲಕ್ಕೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್

    ಆಪರೇಷನ್ ಕಮಲಕ್ಕೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರು ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಬಿಜೆಪಿ ಆಪರೇಷನ್ ಫ್ಲವರ್ ಹೆಸರಿನಡಿ ಬಿಜೆಪಿ ಹೈಕಮಾಂಡ್ ರಣತಂತ್ರಕ್ಕಿಳಿದಿತ್ತು. ಆದರೆ ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಿಂದಲೂ ರಣತಂತ್ರ ಆರಂಭವಾಗಿದೆ.

    ಕಾಂಗ್ರೆಸ್ ಬಿಜೆಪಿಯಿಂದ ಆಯ್ಕೆಯಾಗಿರುವ ನಾಯಕರನ್ನು ಸೆಳೆಯಲು ಮುಂದಾಗಿದ್ದು, ಬಿಜೆಪಿ ನಾಯಕರ ಜೊತೆ ಕಾಂಗ್ರೆಸ್ ಸಮಾಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ. ಈಗ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದು ತಮ್ಮ ಸರ್ಕಾರವನ್ನೇ ರಚಿಸಲು ಪ್ಲಾನ್ ಮಾಡಿತ್ತು. ಇದಕ್ಕೆ ನಾವೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ ಅಂತಾ ಹೇಳಲಾಗ್ತಿದೆ.

    ಕೆಪಿಸಿಸಿ ಕಚೇರಿಯ ಒಂದು ಪ್ರತ್ಯೇಕ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಜಿಯಾರ್, ಕೆಪಿಸಿಸಿ ಅಧ್ಯಕ್ಷ ಪರಮೆಶ್ವರ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸಚಿವ ಡಿ.ಕೆ ಶಿವಕುಮಾರ್ ನಾಲ್ಕು ಮಂದಿ ಒಟ್ಟಾಗಿ ಸೇರಿದ್ದು, ಈಗಾಗಲೇ ಏಂಟು 8 ಮಂದಿ ಬಿಜೆಯ ಶಾಸಕರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೀವು ಬನ್ನಿ ನಮ್ಮ ಪಕ್ಷಕ್ಕೆ, ನಾವು ಬೇರೆ ನಿಮಗೆ ಅವಕಾಶ ಮಾಡಿಕೊಡುತ್ತೇವೆ ಹೇಳಿದ್ದಾರೆ ಎಂದು ಪಬ್ಲಿಕ್ ಮೂಲಗಳು ತಿಳಿಸಿವೆ.

    ಸದ್ಯಕ್ಕೆ ಕಾಂಗ್ರೆಸ್ ಬಿಜೆಪಿಯ ನಾಯಕರನ್ನು ಸೆಳೆಯುವಲ್ಲಿ ತೊಡಗಿದೆ. ಇತ್ತ ಬಿಜೆಪಿ ಬೇರೆ ಶಾಸಕರನ್ನು ಸೆಳೆಯುವ ಬದಲು ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಫ್ಲವರ್ ಆಪರೇಶನ್ ಗೆ ಕಾಂಗ್ರೆಸ್ ಹೊಸ ರಣತಂತ್ರ ಮಾಡಿದೆ.

    ಎಲ್ಲ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರ ಸಹಿ ಸಂಗ್ರಹಿಸಲಾಗುತ್ತದೆ. ನಂತರ ಎರಡು ಪಕ್ಷದ ನಾಯಕರ ಸಹಿಯನ್ನು ಸಂಗ್ರಹಿಸಿ ರಾಜ್ಯಪಾಲರ ಮುಂದೆ ಇಡಲಾಗುತ್ತದೆ. ಎರಡು ಪಕ್ಷದ ಶಾಸಕರನ್ನು ರಾಜ್ಯಪಾಲರ ಮುಂದೆ ಕರೆದುಕೊಂಡು ಹೋಗಿ ಪೆರೇಡ್ ಮಾಡಿಸುವ ತೀರ್ಮಾನಕ್ಕೆ ಕಾಂಗ್ರೆಸ್ ಬರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

  • ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಬಳ್ಳಾರಿ: ಚುನಾವಣಾ ಮತಗಟ್ಟೆಯ ಮುಂಭಾಗದಲ್ಲಿ ಸೇರಿದ್ದ ಜನರನ್ನ ಚದುರಿಸಲು ಕೈಯಲ್ಲಿ ಲಾಠಿ ಹಿಡಿದಿದ್ದ ದೃಶ್ಯವನ್ನು ಚಿತ್ರೀಕರಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಹೊಸಪೇಟೆ ಚುನಾವಣಾ ಅಧಿಕಾರಿ ಗಾರ್ಗಿ ಜೈನ್ ದರ್ಪ ಮೆರೆದಿದ್ದಾರೆ.

    ಮೊಬೈಲ್‍ ನಲ್ಲಿ ಸೆರೆ ಹಿಡಿದ ದೃಶ್ಯಗಳು ಚಾನೆಲ್‍ ನಲ್ಲಿ ಪ್ರಸಾರ ಮಾಡಿದರೆ ಚಾನೆಲ್ ಬಂದ್ ಮಾಡಿಸುವ ಬೆದರಿಕೆಯನ್ನ ಕೂಡ ಹಾಕಿದ್ದಾರೆ. ಶನಿವಾರ ಸಂಜೆ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿನ ಪಿಂಕ್ ಮತಗಟ್ಟೆ ಸಂಖ್ಯೆ 9ರ ಮುಂಭಾಗದಲ್ಲಿ ತಡವಾಗಿ ಮತದಾನಕ್ಕೆ ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಸೇರಿದ್ದರು.

    ಈ ವೇಳೆ ಸೇರಿದ್ದ ಜನರನ್ನು ನಿಯಂತ್ರಿಸುವುದಕ್ಕಾಗಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಟಿ ಹಿಡಿದು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಲಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಖಾಸಗಿ ವಾಹಿನಿಯ ವರದಿಗಾರ ಎಸಿ ಗಾರ್ಗಿ ಜೈನ್ ಲಾಟಿದು ರಸ್ತೆಯಲ್ಲಿ ಓಡಾಡುವುದುನ್ನ ಚಿತ್ರೀಕರಿಸಿ ಸುದ್ದಿಮಾಡಲು ಮುಂದಾಗಿದ್ದಾರೆ. ಆಗ ಎಸಿ ಗಾರ್ಗಿ ಜೈನ್ ನನ್ನ ವೀಡಿಯೋ ಯಾಕೆ ಚಿತ್ರೀಕರಣ ಮಾಡುತ್ತಿದ್ದೀರಿ? ವಿಡಿಯೋ ಡಿಲೀಟ್ ಮಾಡಿ ಅಂತಾ ಧಮ್ಕಿ ಹಾಕಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿರುವ ವೇಳೆಯಲ್ಲಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಠಿ ಹಿಡಿದು ದರ್ಪ ಮೆರೆದಿದ್ದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

  • ನಟ ಸುದೀಪ್ ರೋಡ್ ಶೋ ರದ್ದು

    ನಟ ಸುದೀಪ್ ರೋಡ್ ಶೋ ರದ್ದು

    ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಟಾರ್ ಗಳ ದಂಡೇ ಪ್ರಚಾರವನ್ನು ಮಾಡುತ್ತಿದ್ದು, ಇಂದು ನಟ ಸುದೀಪ್ ಬಳ್ಳಾರಿಯ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದ್ದಾರೆ.

    ಚುನಾವಣಾ ಅಧಿಕಾರಿಗಳು ನಟ ಸುದೀಪ್ ರೋಡ್ ಶೋವನ್ನು ರದ್ದು ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳ ಅನುಮತಿ ಸಿಗದ ಹಿನ್ನೆಲೆಯಲ್ಲಿ ನಟ ಸುದೀಪ್ ನ ನಾಯಕನಟ್ಟಿ ಪ್ರಚಾರ ಸಭೆಯನ್ನು ರದ್ದು ಮಾಡಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ಸುದೀಪ್ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ನಂತರ ಕೊಂಡ್ಲಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ದೇಗುಲದ ಆವರಣದಲ್ಲಿ ಚುನಾವಣಾ ಅಧಿಕಾರಿಗಳು ಅನುಮತಿ ನೀಡದ ಕಾರಣ ನಾಯಕನಟ್ಟಿಯಲ್ಲಿ ರೋಡ್ ಶೋ ರದ್ದು ಮಾಡಿದ್ದಾರೆ. ಆದರೆ ಕಾಲೇಜು ಆವರಣದಲ್ಲಿ ಸಭೆಗೆ ಮಾತ್ರ ಅನುಮತಿ ನೀಡಿದ್ದಾರೆ.

    ಚುನಾವಣಾ ಅಧಿಕಾರಿಗಳಿಂದ ಸುದೀಪ್ ವೀಕ್ಷಿಸಲು ಬೆಳಿಗ್ಗೆಯಿಂದ ಬಿಸಿಲಲ್ಲಿ ಕಾದಿದ್ದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಆಗಿದೆ. ದೇಗುಲದ ಆವರಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಪ್ರಚಾರದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುದೀಪ್ ರೋಡ್ ಶೋಗೆ ಅನುಮತಿ ನೀಡಲಿಲ್ಲ.

  • ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    – ಕೊರಳಿಗೆ ಹಾರ ಬೀಳುವ ಮುಂಚೆಯೇ ಜಿಗಿದು ಜಿಗಿದು ಸೇಬು ಕಿತ್ಕೊಂಡ ಕಾರ್ಯಕರ್ತರು

    ಬೆಂಗಳೂರು: ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಪ್ತಗಿರಿ ಅವರು ನಾಮಿನೇಷನ್ ಸಲ್ಲಿಸುವಾಗ ಪತ್ನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.

    ನಾನು ನಾಮಿನೇಷನ್ ಸಲ್ಲಿಕೆಗೆ ಬಂದಿದ್ದೆ. ನನ್ನ ಜೊತೆ ಪಿ.ಸಿ ಮೋಹನ್, ತಂದೆ ರಾಮಚಂದ್ರೇಗೌಡ ಸೇರಿದಂತೆ ಇಬ್ಬರು ಬೆಂಬಲಿಗರು ಕೇಂದ್ರದೊಳಗೆ ಬಂದಿದ್ದರು. ಆದರೆ ನನ್ನ ಪತ್ನಿ ಕೊಂಚ ತಡವಾಗಿ ಬಂದು ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಗೇಟ್‍ನಲ್ಲೆ ತಡೆದಿದ್ದಾರೆ. ನಾನವರ ಪತ್ನಿ ಕಣ್ರೀ ಅಂತಾ ದುಂಬಾಲು ಬಿದ್ದರೂ `ರೂಲ್ಸ್ ಈಸ್ ರೂಲ್ಸ್’ ಅಂತಾ ಹೊರಕಳಿಸಿದ್ದಾರೆ ಎಂದು ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಹೇಳಿದ್ದಾರೆ.

    ವಿಜಯನಗರದಲ್ಲಿ ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರು, ಕೃಷ್ಣಪ್ಪರಿಗೂ ಹಾಗೂ ಮಗ ಪ್ರಿಯಾಕೃಷ್ಣಗೂ ಸೇಬಿನ ಹಾರ ಹಾಕಿದ್ದರು. ಆದರೆ ಸೇಬಿನ ಹಾರ ಅವರ ಕೊರಳಿಗೆ ಬೀಳುವ ಮುಂಚೆ ಕಾರ್ಯಕರ್ತರು ಆಪಲ್ ಕಿತ್ತುಕೊಳ್ಳುವುದಕ್ಕೆ ಸೆಣಸಾಡಿದ್ದಾರೆ. ಅಷ್ಟೇ ಅಲ್ಲದೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಕೊರಳಿಗೆ ಎಗರಿ ಎಗರಿ ಸೇಬು ಕಿತ್ತುಕೊಂಡಿದ್ದಾರೆ.

    ಚಾಮರಾಜಪೇಟೆಯ ಅಲ್ತಾಫ್ ಖಾನ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಬೆಂಬಲಿಗರು ಕೇಂದ್ರದೊಳಗೆ ನುಗ್ಗಲು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ನಾಮಪತ್ರ ಸಲ್ಲಿಕೆಯಲ್ಲಿ ಮಹಿಳಾಮಣಿಗಳು ಗ್ರೌಂಡ್‍ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.