Tag: Our Election

  • ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪಕ್ಷೇತರ ಅಭ್ಯರ್ಥಿ ಬೆಂಬಲಿಗರಿಗೆ ಚಾಕು ಇರಿತ!

    ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪಕ್ಷೇತರ ಅಭ್ಯರ್ಥಿ ಬೆಂಬಲಿಗರಿಗೆ ಚಾಕು ಇರಿತ!

    ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಹೋದಾಗ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಗಲಾಟೆ ನಡೆದು ಓರ್ವ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಹೊರವಲಯದ ಮಹದೇವಪುರದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಪೊಲೀಸರ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಸ್ಥಳೀಯರ ಗುಂಪಿನಿಂದ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ.

    ತಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹದೇವಪುರ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಶನಿವಾರ ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ 10.30ರ ಸುಮಾರಿಗೆ ಮಹದೇವಪುರದ ಭೈರತಿ ಬಳಿ ಪ್ರಚಾರದ ವೇಳೆ ಗಲಾಟೆ ನಡೆದಿದ್ದು, ತಮ್ಮ ಬೆಂಬಲಿಗ ಮಾರುತೇಶ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಚೂರಿ ಇರಿದಿದ್ದಾರೆ ಅಂತ ನಾಗೇಶ್ ಆರೋಪಿಸಿದ್ದಾರೆ.

    ನನ್ನ ಏಳಿಗೆ ಸಹಿಸದ ಈ ರೀತಿ ಮಾಡಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ದಾರೆ. ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾಚಣಾ ಕಣದಿಂದ ಹಿಂದೆ ಸರಿಯುವಂತೆ ಜಿಲ್ಲೆಯ ಬೈಂದೂರಿನ ಜೆಡಿಎಸ್ ಅಭ್ಯರ್ಥಿಗೆ ದುಬೈನಿಂದ ಕೊಲೆ ಬೆದರಿಕೆ ಕರೆ ಬಂದಿದೆ.

    ಬೈಂದೂರು ಅಭ್ಯರ್ಥಿ ರವಿ ಶೆಟ್ಟಿಗೆ ದುಬೈನಿಂದ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರವಿ ಶೆಟ್ಟಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ರವಿ ಶೆಟ್ಟಿಗೆ ಗನ್ ಮ್ಯಾನ್ ನೀಡಿದ್ದಾರೆ.

    ಫೀಲ್ಡ್ ನಲ್ಲಿ ಸೈಲೆಂಟ್ ಆಗು. ಇಲ್ಲದಿದ್ದರೆ ಮನೆಗೆ ಹೋಗಲ್ಲ ಅಂತ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷನಾಗಿರುವ ರವಿ ಶೆಟ್ಟಿ ಕಳೆದ ಒಂದು ವರ್ಷದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುಕ ಹುಟ್ಟಿದ್ದು, ತಮ್ಮ ಮತಗಳ ವಿಭಜನೆಯಾಗಬಹುದೆಂದು ಈ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ರವಿ ಶೆಟ್ಟಿ ದೂರಿದ್ದಾರೆ. ಆದ್ರೆ ನಾನು ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಅಂತ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಹೇಳಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಬೈಂದೂರು ಜಿಲ್ಲೆಯ ಪೈಕಿ ಅತೀ ಹೆಚ್ಚು ಜೆಡಿಎಸ್ ಮತದಾರರು ಇರುವ ಕ್ಷೇತ್ರ. ನಮ್ಮ ಅಭ್ಯರ್ಥಿ ಪ್ರತೀ ಮನೆಗಳಿಗೂ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ. ನೈತಿಕ ಸ್ಥೈರ್ಯ ಕಸಿದುಕೊಳ್ಳಲು ಯತ್ನ ನಡೆಯುತ್ತಿದ್ದು, ಇದಕ್ಕೆಲ್ಲಾ ನಮ್ಮ ಪಕ್ಷ ಜಗ್ಗುವುದಿಲ್ಲ ಅಂತ ಹೇಳಿದ್ದಾರೆ. ಇನ್ನೂ ಉತ್ಸಾಹದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.

  • ಅಂಬರೀಶ್‌ಗೆ ಟಿಕೆಟ್ ಕೊಟ್ಟಿದ್ದೀವಿ, ಅವರು ನಿಂತ್ಕೋಬೇಕು ಅಷ್ಟೇ: ಸಿಎಂ ಸಿದ್ದರಾಮಯ್ಯ

    ಅಂಬರೀಶ್‌ಗೆ ಟಿಕೆಟ್ ಕೊಟ್ಟಿದ್ದೀವಿ, ಅವರು ನಿಂತ್ಕೋಬೇಕು ಅಷ್ಟೇ: ಸಿಎಂ ಸಿದ್ದರಾಮಯ್ಯ

    ಮೈಸೂರು: ನಾನು ಅಂಬರೀಶ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ರೆಬಲ್ ಸ್ಟಾರ್ ಅಂಬರೀಶ್‍ಗೆ ಮಂಡ್ಯದ ಬಿ ಫಾರಂ ಕೊಟ್ಟಿದ್ದೀವಿ. ಅವರು ನಿಂತುಕೊಳ್ಳಬೇಕು ಅಷ್ಟೇ. ಅಲ್ಲದೇ ಸ್ಪರ್ಧಿಸೋದು ಬಿಡೋದು ಅವರಿಗೆ ಬಿಟ್ಟಿದ್ದು. ಅಂಬರೀಶ್ ಬಿ ಫಾರಂ ರಿಸೀವ್ ಮಾಡ್ತಿಲ್ಲ ಎಂಬ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರು ಬಿ ಫಾರಂ ಕೊಡ್ತಾರೆ ಹೊರತು ನಾನಲ್ಲ ಅಂತಾ ಅಂದ್ರು.

    ಇದೇ ವೇಳೆ ಅಂಬರೀಶ್‍ರನ್ನು ಭೇಟಿ ಮಾಡುತ್ತೀರಿ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಅಂಬರೀಶ್ ಭೇಟಿ ಮಾಡುವುದಿಲ್ಲ. ಯಾರೋ ತಪ್ಪಾಗಿ ಮಾಹಿತಿ ನೀಡಿದ್ದಾರೆ ಎಂದು ಕೋಪದಿಂದ ಹೇಳಿದ್ರು.

  • ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಬೆಳಗಾವಿ: ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ಈ ಬಾರಿ ಚುನಾವಣೆಯಲ್ಲಿ ನಮ್ಮೆಲ್ಲರ ಮತ ಕಾಂಗ್ರೆಸ್ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಸುಳೆಬಾವಿ ಗ್ರಾಮದಲ್ಲಿ ಪ್ರಚಾರಕೈಗೊಂಡಿದ್ದ ವೇಳೆ ಮಾತನಾಡಿದ ಶಾಸಕರು, ಭಾರತ ಹಿಂದೂ ರಾಷ್ಟ್ರ. ರಾಮ ಮಂದಿರ ನಿರ್ಮಾಣ ಆಗಬೇಕಿದ್ದು, ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ. ನಾವು ರಾಮ ಮಂದಿರ ನಿರ್ಮಾಣ ಮಾಡೋರು, ಅವರು ಬಾಬರಿ ಮಸೀದಿ ಕಟ್ಟುವರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಬಾರಿ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ನಾವೆಲ್ಲರೂ ಕಾಂಗ್ರೆಸ್‍ಗೆ ಮತ ಹಾಕೋಣ ಅಂತಾ ಹೇಳಿದ್ದಾರೆ.

    ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಇಲ್ಲ. ಇದು ಹಿಂದು, ಮುಸ್ಲಿಂ ಧರ್ಮದ ಬಗ್ಗೆ ಇದೆ. ಯಾರಿಗೆ ಬಾಬಾರಿ ಮಸೀದಿ, ಟಿಪ್ಪು ಜಯಂತಿ ಮಾಡೋದು ಇಷ್ಟವೋ ಅವರೆಲ್ಲರು ಕಾಂಗ್ರೆಸ್‍ಗೆ ಬೆಂಬಲ ನೀಡಿ, ಶಿವಾಜಿ ಮಹರಾಜರು ಬೇಕಿದರೆ ಬಿಜೆಪಿಗೆ ನಿಮ್ಮ ಬೆಂಬಲ ನೀಡಿ ಎಂಬ ಹೇಳಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಮತ ಕೇಳಲು ಬಂದಿದ್ದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆ 500ರೂ. ನೀಡಿದ ಮತದಾರ!

    ಮತ ಕೇಳಲು ಬಂದಿದ್ದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆ 500ರೂ. ನೀಡಿದ ಮತದಾರ!

    ಕಾರವಾರ: ಚುನಾವಣೆ ಬಂದರೆ ರಾಜಕಾರಣಿಗಳು ಮತ ಬೇಟೆಗಾಗಿ ಮತದಾರರಿಗೆ ಹಣ ಚೆಲ್ಲುತ್ತಾರೆ. ಆದರೆ, ಚುನಾವಣಾ ಪ್ರಚಾರಕ್ಕೆ ಬಂದ ಅಭ್ಯರ್ಥಿಗೆ ಮತದಾರನೋರ್ವ ತಾನೇ ಹಣ ನೀಡಿರುವುದು ಅಂಕೋಲದಲ್ಲಿ ನಡೆದಿದೆ.

    ಪಟ್ಟಣದ ಲಕ್ಷ್ಮೀಶ್ವರ ನಗರದ ಪ್ರಕಾಶ್ ನಾಯ್ಕ ಅವರ ಮನೆಗೆ ಮತ ಕೇಳಲು ಹೋಗಿದ್ದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಐನೂರು ರೂಪಾಯಿಯನ್ನು ತನ್ನ ಜೇಬಿನಿಂದ ತೆಗೆದು ಕೊಟ್ಟು, ಮತದಾನ ಜಾಗೃತಿ ಮೂಡಿಸಿ ಜನಸಾಮಾನ್ಯರಿಂದ ಮೆಚ್ಚುಗೆ ಪಡೆದಿದ್ದಾರೆ.

    ಚುನಾವಣೆ ಬಂದರೆ ಅಭ್ಯರ್ಥಿಗಳು ಮತದಾರರಿಗೆ ಹಣದ ಆಮಿಷ ಒಡ್ಡುತ್ತಾರೆ. ಇದು ನಿಲ್ಲಬೇಕು ಎನ್ನುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಹಣ ನೀಡಿ ಜಾಗೃತಿ ಮೂಡಿಸುತ್ತಿರುವೆ ಎಂದು ಪ್ರಕಾಶ್ ನಾಯ್ಕ ಹೇಳಿದ್ದಾರೆ.

  • ಪೊಲೀಸ್ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

    ಪೊಲೀಸ್ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

    ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಚುನಾವಣಾ ಅಧಿಕಾರಿಗಳು, ರಾಜಕೀಯ ನಾಯಕರು ಸೇರಿದಂತೆ ಎಲ್ಲ ವಿಭಾಗಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡುವ ಮೂಲಕ ದಾಖಲೆಯಿಲ್ಲದ ಅಪಾರ ಹಣವನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗಳ ಮೇಲೆಯೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

    ಕೆಲ ಪೊಲೀಸ್ ಅಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಸಹಕಾರ ನೀಡ್ತಾರೆ ಅಂತಾ ಆರ್‍ಟಿಐ ಕಾರ್ಯಕರ್ತ ಹನುಮೇಗೌಡ ಎಂಬವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ದಿನಚರಿ ಬರೆಯಬೇಕು.

    ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದಿನಚರಿ ಬಗ್ಗೆ ಎಚ್ಚರಿಸಿ ಚುನಾವಣಾ ಆಯೋಗ ಪತ್ರ ಬರೆದಿದೆ. ಚುನಾವಣಾ ನೀತಿ ಸಂಹಿತೆಯಲ್ಲಿ ಪೊಲೀಸ್ ಅಧಿಕಾರಿಗಳು ದಿನಚರಿ ಬರೆಯಬೇಕೆಂಬ ಅಂಶವಿದೆ. ಆದ್ರೆ ಇಲ್ಲಿಯವರೆಗೂ ಈ ನಿಯಮವನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿ ಪೊಲೀಸ್ ಅಧಿಕಾರಿಗಳ ದಿನಚರಿ ಬಗ್ಗೆ ಚುನಾವಣಾ ಆಯೋಗ ಎಚ್ಚರಿಸಿದೆ.