Tag: Ottawa

  • ʻಒಂದ್‌ ಸಲ ಕಮಿಟ್‌ ಆದ್ರೆ ತನ್ನ ಮಾತ್‌ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್‌, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

    ʻಒಂದ್‌ ಸಲ ಕಮಿಟ್‌ ಆದ್ರೆ ತನ್ನ ಮಾತ್‌ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್‌, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

    ವಾಷಿಂಗ್ಟನ್‌/ಒಟ್ಟಾವ: ಕೆನಾಡದ ಆಮದುಗಳ ಮೇಲೆ 10% ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ.

    MLB ವಿಶ್ವ ಸರಣಿಯ ಮೊದಲ ಪಂದ್ಯದಲ್ಲಿ ಒಂಟಾರಿಯೋ (Ontario) ಸರ್ಕಾರ 75 ದಶಲಕ್ಷ ಡಾಲರ್‌ (USD)‌ ವ್ಯಯಿಸಿ ಟಿವಿ ಜಾಹೀರಾತು ಪ್ರಕಟಿಸಿತ್ತು. ಟ್ರಂಪ್‌ ಅವರು ಒಮ್ಮೆ ದೃಢನಿಶ್ಚಯ ಮಾಡಿದ್ರೆ ಅದನ್ನು ಮಾಡೇ ಮಾಡುತ್ತಾರೆ, ತನ್ನ ಮಾತನ್ನ ತಾನೇ ಕೇಳಲ್ಲ ಅಂತ ಜಾಹೀರಾತು ಪ್ರಸಾರ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಟ್ರಂಪ್‌ ಕೆನಡಾ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

    ಕೆನಾಡದ ಮೇಲಿನ ಒಟ್ಟು ಸುಂಕ 45% ಗೆ ಏರಿಕೆಯಾಗಿದೆ. ಕೆನಡಾ (Canada) ಮೇಲಿನ ಸುಂಕ ಏರಿಕೆಯು ವ್ಯಾಪಾರ ಉದ್ವಿಗ್ನತೆಗೆ ಕಾರಣವಾಗಲಿದೆ. ಏಕೆಂದರೆ ಕೆನಡಾ ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ.

    ಕೆನಡಾ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಐಕಾನ್ ರೊನಾಲ್ಡ್ ರೇಗನ್ ಅವರ ವೀಡಿಯೊ ಕ್ಲಿಪ್ ಇತ್ತು. ಅದರಲ್ಲಿ ಸುಂಕದ ಕ್ರಮವು ವ್ಯಾಪಾರ ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದರು. ಈ ಜಾಹೀರಾತನ್ನು ಟ್ರಂಪ್‌ ಟೀಕಿಸಿದ್ದರು. ಇದು ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತು ಎಂದು ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಸುಂಕ ಹೆಚ್ಚಿಸುವ ಕ್ರಮ ಕೈಗೊಂಡಿದ್ದಾರೆ ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಔಟ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಇನ್ನೂ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಶುಕ್ರವಾರ ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧ ಎಂದು ಹೇಳಿದ್ದರು. ಆದ್ರೆ ಶ್ವೇತಭವನ, ಯುಎಸ್ ವಾಣಿಜ್ಯ ಇಲಾಖೆ ಅಥವಾ ಕಾರ್ನಿ ಕಚೇರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

    ಕೆನಡಾಕ್ಕೆ ಸುಂಕದ ಬರೆ
    ಕೆನಡಾ ಸರಕುಗಳ ಮೇಲೆ ಅಮೆರಿಕ ಕಳೆದ ಮಾರ್ಚ್‌ನಲ್ಲಿ 25% ಇದ್ದ ಸುಂಕದ ಪ್ರಮಾಣವನ್ನ 30%ಗೆ ಏರಿಕೆ ಮಾಡಿತ್ತು. ಇದೀಗ 10% ಹೆಚ್ಚಿಗೆ ಮಾಡಿದ್ದು, 45%ಗೆ ತಲುಪಿದೆ.

  • ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ

    ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ

    ಒಟ್ಟಾವಾ: ಭಾರತೀಯ ಪ್ರಜೆಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆನಡಾದ(Canada) ರಾಕ್‌ಲ್ಯಾಂಡ್(Rockland) ಪ್ರದೇಶದಲ್ಲಿ ನಡೆದಿದೆ ಎಂದು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ(Indian Embassy in Canada) ಶನಿವಾರ ತಿಳಿಸಿದೆ.

    `ಒಟ್ಟಾವಾ(Ottawa) ಬಳಿಯ ರಾಕ್‌ಲ್ಯಾಂಡ್‌ನಲ್ಲಿ ಚಾಕುವಿನಿಂದ ಇರಿದು ಭಾರತೀಯನನ್ನು ಕೊಲೆ ಮಾಡಿರುವ ದುರಂತದ ಘಟನೆಗೆ ನಾವು ತೀವ್ರ ದುಃಖಿತರಾಗಿದ್ದೇವೆ. ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಸಮುದಾಯ ಸಂಘದ ಮೂಲಕ ಕೊಲೆಯಾದ ವ್ಯಕ್ತಿಯ ಸಂಬಂಧಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ಭಾರತೀಯ ರಾಯಭಾರಿ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಇದನ್ನೂ ಓದಿ: ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್‌ ಮೇಲೆ ರಷ್ಯಾ ದಾಳಿ – 18 ಮಂದಿ ಸಾವು

    ಇಂದು ಬೆಳಿಗ್ಗೆ ಕ್ಲಾರೆನ್ಸ್-ರಾಕ್‌ಲ್ಯಾಂಡ್‌ನಲ್ಲಿ ಓರ್ವನನ್ನು ಕೊಲೆ ಮಾಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯದಲ್ಲಿ ಏ.8ರವರೆಗೆ ಮಳೆಯ ಮುನ್ಸೂಚನೆ

  • ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಒಟ್ಟಾವಾ: ರಷ್ಯಾ ಮತ್ತು ಉಕ್ರೇನ್ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು, ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆ ಉಕ್ರೇನ್ ನಿಂದ ಪಲಾಯನ ಮಾಡುವವರು ಕೆನಡಾದಲ್ಲಿ ಉಳಿದುಕೊಳ್ಳಬಹುದು ಎಂದು ಕೆನಡಾ ರಾಜಧಾನಿ ಒಟ್ಟಾವಾ ಗುರುವಾರ ತಿಳಿಸಿದೆ.

    ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಪಲಾಯನ ಮಾಡುವ ಉಕ್ರೇನಿಯನ್ನರಿಗೆ ಮೂರು ವರ್ಷಗಳವರೆಗೆ ತಾತ್ಕಾಲಿಕ ಕೆನಡಾದ ನಿವಾಸ ಪರವಾನಗಿಯನ್ನು ನೀಡುವ ಹೊಸ ವಲಸೆ ಕಾರ್ಯಕ್ರಮವನ್ನು ಸ್ಥಾಪಿಸುವುದಾಗಿ ಒಟ್ಟಾವಾ ಘೋಷಿಸಿತು. ಇದರ ಜೊತೆಗೆ ಉಕ್ರೇನಿಯನ್ನರು ತಮ್ಮ ಕೆಲಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಈ ವೇಳೆ ತಿಳಿಸಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

    ಹೆಚ್ಚು ಉಕ್ರೇನಿಯನ್ ವಲಸೆಗಾರರನ್ನು ಕೆನಡಾ ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಕೆನಡಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಉಕ್ರೇನ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆ ಕೆನಡಾ ಸರ್ಕಾರ ಉಕ್ರೇನಿಯನ್ನರು ಮೂರು ವರ್ಷಗಳವರೆಗೆ ತಾತ್ಕಾಲಿಕ ನಿವಾಸಿಗಳಾಗಿ ಕೆನಡಾದಲ್ಲಿ ಉಳಿಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

    ಅರ್ಜಿದಾರರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಫಿಂಗರ್‌ಪ್ರಿಂಟ್‌ಗಳು ಮತ್ತು ಫೋಟೋ ರೂಪದಲ್ಲಿ ಒದಗಿಸಬೇಕಾಗುತ್ತದೆ. ಉಕ್ರೇನಿಯನ್ ನಿರಾಶ್ರಿತರು ಏಕಕಾಲದಲ್ಲಿ ಕೆಲಸ ಮತ್ತು ಅಧ್ಯಯನ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.

    ಕೆನಡಾದ ಈಗಾಗಲೇ ನೆಲೆಸಿರುವ ಉಕ್ರೇನಿಯನ್ನರು ಮತ್ತು ಅವರ ಕುಟುಂಬಗಳು ಈ ಹೊಸ ಕ್ರಮಗಳಿಂದ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಗುರುವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಎಣಿಕೆಯ ಪ್ರಕಾರ, ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ನಡೆಸುತ್ತಿರುವ ಮಾರಣಾಂತಿಕ ಆಕ್ರಮಣದಿಂದ ಇಲ್ಲಿವರೆಗೂ ಮೂರು ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.

  • ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    – ಶಿಕ್ಷಕಿ ನಡೆಗೆ ಪೋಷಕರ ವಿರೋಧ

    ಒಟ್ಟಾವಾ: ತರಗತಿಗೆ ವಿಭಿನ್ನವಾದ ಡ್ರೆಸ್ ಧರಿಸಿ ಹೋಗಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿ ಶಾಲೆಯಿಂದ ಹೊರ ಹಾಕಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಕಮ್ಲೂಪ್ಸ್‍ನಲ್ಲಿರುವ ನಾರ್ಕಾಮ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.

    ಕರಿಸ್ ವಿಲ್ಸನ್ ಎಂಬ ವಿದ್ಯಾರ್ಥಿನಿ ಬಿಳಿ ಬಣ್ಣದ ಉದ್ದ ತೋಳಿನ ಟಿ-ಶರ್ಟ್ ಹಾಗೂ ಮೊಣಕಾಲು ಉದ್ದ ಬರುವ ಕಪ್ಪು ಬಣ್ಣದ ಟಾಪ್ ಧರಿಸಿದ್ದಳು. ಅಲ್ಲದೆ ಈ ನೀ ಲೆಂಥ್ ಟಾಪ್‍ನನ್ನು ಭುಜದ ಮೇಲೆ ಲೇಸ್ ಮಾದರಿ ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿನಿ ಧರಿಸಿದ್ದ ಈ ಡ್ರೆಸ್ ಟೈಟ್ ಫಿಟ್‍ನಿಂದ ಕೂಡಿದ್ದು, ಶಾಲೆಯಲ್ಲಿರುವ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯನ್ನು ಪ್ರಿನ್ಸಿಪಾಲ್ ಕಚೇರಿಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ. ಬಳಿಕ ಆಕೆಯನ್ನು ಶಾಲೆಯಿಂದ ಹೊರಹಾಕಿದ್ದಾರೆ.

    ಈ ವಿಚಾರವಾಗಿ ಬಾಲಕಿಯ ತಂದೆ ಕ್ರಿಸ್ಟೋಫರ್ ವಿಲ್ಸನ್ ವೀಡಿಯೋವೊಂದನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮಗಳು ಇಂದು ಶಾಲೆಗೆ ಹೊರಡುವಾಗ ಬಹಳ ಉತ್ಸುಕಳಾಗಿ ಹೋದಳು. ಆದರೆ ಮನೆಗೆ ಹಿಂದಿರುಗುವ ವೇಳೆ ಕಣ್ಣೀರಿಡುತ್ತಾ ಬಂದಿದ್ದಾಳೆ. ನನ್ನ ಮಗಳು ಧರಿಸಿದ್ದ ಡ್ರೆಸ್ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಶಾಲೆಯಿಂದ ಹೊರದಬ್ಬಿದ್ದಾರೆ. ಆದರೆ ಆಕೆ ಧರಿಸಿದ್ದ ಡ್ರೆಸ್ ಕೆಟ್ಟ ರೀತಿಯಲ್ಲಿರಲಿಲ್ಲ. ಇದೊಂದು ಸಾಧಾರಣ ಉಡುಪಾಗಿದೆ. ನಾನು ಈ ವ್ಯವಸ್ಥೆಯನ್ನು ಖಂಡಿಸುತ್ತೇನೆ. 2021ನೇ ಇಸವಿಯಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿದೆ ಎಂಬುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

  • ಕೆನಡಾದಲ್ಲಿ ಯುವತಿಯನ್ನು ಕೊಲೆ ಮಾಡಿ ಯುವಕ ಆತ್ಮಹತ್ಯೆ

    ಕೆನಡಾದಲ್ಲಿ ಯುವತಿಯನ್ನು ಕೊಲೆ ಮಾಡಿ ಯುವಕ ಆತ್ಮಹತ್ಯೆ

    ಒಟ್ಟಾವಾ: ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿದ ನಂತರ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕೆನಡಾದಲ್ಲಿ ನಡೆದಿದೆ.

    ಶರಣ್‍ಜೀತ್ ಕೌರ್ (27) ಹಾಗೂ ನವ್‍ದೀಪ್ ಸಿಂಗ್(35) ಮೃತದೇಹ ಸೋಮವಾರ ಅಪಾರ್ಟ್‌ಮಂಟ್ ನ ಬೇಸ್‍ಮೆಂಟ್‍ನಲ್ಲಿ ಪತ್ತೆಯಾಗಿದೆ. ಇಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಯುವಕ ಕೊಲೆ ಮಾಡಿದ್ದು ಏಕೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

    ಸೋಮವಾರ ಸುಮಾರು 2 ಗಂಟೆಗೆ ಅಪಾರ್ಟ್ ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಶರಣ್‍ಜೀತ್ ಹಾಗೂ ನವ್‍ದೀಪ್ ಶವ ಪೊಲೀಸರಿಗೆ ಸಿಕ್ಕಿತ್ತು. ಇಬ್ಬರ ಪರಿಚಯ ಪಂಜಾಬ್‍ನ ಜಲಂದರ್ ಜಿಲ್ಲೆಯಲ್ಲಿ ಆಗಿತ್ತು. ಕೆನಡಾದಲ್ಲಿ ನವ್‍ದೀಪ್ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲೇ ಇಬ್ಬರ ಮೃತದೇಹ ಪತ್ತೆಯಾಗಿದೆ.

    ಕೆನಡಾದ ಮಾಧ್ಯಮಗಳ ಪ್ರಕಾರ, ಶರಣ್‍ಜೀತ್ ಹಾಗೂ ನವ್‍ದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇಬ್ಬರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಘಟನೆಯ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ಘಟನೆ ಬಗ್ಗೆ ಶರಣ್‍ಜೀತ್ ತಂದೆ ಪ್ರತಿಕ್ರಿಯಿಸಿ, ಕೆನಡಾ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು. ಅಲ್ಲದೆ ಅವರು ತಮ್ಮ ಮಗಳ ಅಂತಿಮ ಸಂಸ್ಕಾರವನ್ನು ಗ್ರಾಮದಲ್ಲಿಯೇ ಮಾಡಬೇಕು ಎಂದು ಬಯಸಿದ್ದಾರೆ.

  • ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಒಟ್ಟಾವಾ: ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ವೈದ್ಯೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.

    ಡಾ. ಪ್ರಿಯಾ ಶರತ್, ಡೆರ್ಮಾಟೋಲೊಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಕಾಸ್ಮೆಟಾಲಜಿಸ್ಟ್ ಆಗಿದ್ದು, ಇತ್ತೀಚೆಗೆ ಟೊರೊಂಟೊದಲ್ಲಿ ನಡೆದ ಮಿಸೆಸ್ ಯೂನೈಟೆಡ್ ನೇಶನ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆ 2019ರಲ್ಲಿ ಭಾಗವಹಿಸಿದ್ದರು. ಪ್ರಿಯಾ ಶರತ್ ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

    2018ರಲ್ಲಿ ಮಿಸೆಸ್ ಇಂಡಿಯಾ ಗ್ಯಾಲೆಕ್ಸಿ ಸ್ಪರ್ಧೆಯಲ್ಲಿ ಪ್ರಿಯಾ ತನ್ನ ಸಾಮಾಜಿಕ ಕೆಲಸಕ್ಕಾಗಿ ಮಿಸೆಸ್ ಸೋಶಿಯಲ್ ಐಕಾನ್ ಕಿರೀಟವನ್ನು ಗೆದಿದ್ದರು. ಬಳಿಕ ಪ್ರಿಯಾ ಅವರು ನವದೆಹಲಿಯಲ್ಲಿ ನಡೆದ ಮಿಸೆಸ್. ಇಂಡಿಯಾ ಯೂನೈಟೆಡ್ ನೇಶನ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಗೆಲ್ಲಲು ಹೋಗಿದ್ದರು.

    ಪ್ರಿಯಾ ಶರತ್ ಮೂಲತಃ ಮಂಗಳೂರಿನವರಾಗಿದ್ದು, ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು. ಬಳಿಕ  ಮಂಗಳೂರಿನ ಮುಲ್ಲರ್ ಕಾಲೇಜಿನಿಂದ ಎಂಡಿ ಪದವಿಯನ್ನು ಪಡೆದುಕೊಂಡಿದ್ದರು. ಸದ್ಯ ಪ್ರಿಯಾ ಅವರು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್ ನಲ್ಲಿ ಚರ್ಮರೋಗ ತಜ್ಞೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ನಾನು ರ‍್ಯಾಂಪ್‌ ಮೇಲೆ ನಡೆಯಬೇಕು ಎಂಬುದು ನನ್ನ ಬಾಲ್ಯದ ಕನಸು. ನಾನು ಕಾಲೇಜಿನಲ್ಲಿ ಇದ್ದಾಗ ಓದುವುದರಲ್ಲಿ ಬ್ಯುಸಿಯಿದ್ದೆ. ಬಳಿಕ ನನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡೆ. ಈಗ ನನ್ನ ಮಗ ಅನುಜ್ 8ನೇ ತರಗತಿ ಓದುತ್ತಿದ್ದು, ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾನೆ. ಹಾಗಾಗಿ ನಾನು ಮಾಡೆಲಿಂಗ್ ಮಾಡೋಣ ಎಂದುಕೊಂಡೆ ಎಂದು ಪ್ರಿಯಾ ತಿಳಿಸಿದ್ದಾರೆ.

    ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಜೊತೆ ಕೆಲಸ ಮಾಡುವುದು ನನ್ನ ಕನಸು. ಅವರು ನನ್ನ ಮೊದಲ ಆದ್ಯತೆಯಾಗಿರುತ್ತಾರೆ. ನನ್ನ ಬಳಿ ಈಗ ಒಂದು ಯೋಜನೆ ಇದೆ. ನಾನು ಈಗಾಗಲೇ ಈ ಯೋಜನೆ ಬಗ್ಗೆ ಕೆಲವರ ಹತ್ತಿರ ಮಾತನಾಡಿದ್ದೇನೆ. ಅವರು ಕೂಡ ಈ ಯೋಜನೆಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯ ನಿರ್ವಹಣೆ ಮಾಡುವುದು ಒಂದು ಸವಾಲಾಗಿದೆ. ನನ್ನ ಕುಟುಂಬಸ್ಥರ ಹಾಗೂ ಸ್ನೇಹಿತರ ಬೆಂಬಲದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು ಎಂದು ಪ್ರಿಯಾ ಹೇಳಿದ್ದಾರೆ.

  • ಕೆನಡಾದ ಬೀದಿಯಲ್ಲಿ ಅಭಿಮಾನಿಗಳಿಂದ ಕತ್ರಿನಾ ಕೈಫ್‍ಗೆ ಅವಮಾನ-ವಿಡಿಯೋ ನೋಡಿ

    ಕೆನಡಾದ ಬೀದಿಯಲ್ಲಿ ಅಭಿಮಾನಿಗಳಿಂದ ಕತ್ರಿನಾ ಕೈಫ್‍ಗೆ ಅವಮಾನ-ವಿಡಿಯೋ ನೋಡಿ

    ಒಟ್ಟಾವಾ: ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ತನ್ನ ಗೆಳೆಯ ಸಲ್ಮಾನ್ ಖಾನ್ ಜೊತೆ ‘ದ-ಬ್ಯಾಂಗ್’ ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದರು. ಆಗ ಅಲ್ಲಿ ಯುವತಿಯರು ನಡುಬೀದಿಯಲ್ಲೇ ನಟಿಗೆ ಅವಮಾನ ಮಾಡಿದ್ದಾರೆ.

    ಕತ್ರಿನಾ ಕಾರ್ಯಕ್ರಮವನ್ನು ಮುಗಿಸಿಕೊಂಡು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಅಲ್ಲಿ ಇದ್ದ ಯುವತಿಯರು ನಡುರಸ್ತೆಯಲೇ ನಿಂತು “ಕತ್ರಿನಾ ನಮಗೆ ನಿಮ್ಮ ಜೊತೆ ಫೋಟೋ ಬೇಡ ಭೂ…” ಎಂದು ಕಿರುಚಾಡಿದ್ದಾರೆ. ಯುವತಿಯರ ವರ್ತನೆಯಿಂದ ಕೋಪಗೊಂಡ ಕತ್ರಿನಾ “ನಿಮಗೆ ಒಂದು ವಿಷಯ ಗೊತ್ತಾ? ನೀವು ಹೀಗೆ ಮಾಡಬಾರದು. ನಾನು ಒಂದು ದೊಡ್ಡ ಕಾರ್ಯಕ್ರಮ ಮುಗಿಸಿ ಆಯಾಸಗೊಂಡಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದರು.

    ಆಗ ಯುವತಿಯರು “ನೀವು ಒಳ್ಳೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಜನರು ನಿಮ್ಮನ್ನು ನಟಿ ಎಂದು ಕರೆಯುತ್ತಾರೆ. ಆದರೆ ಜನರು ನಿಮ್ಮ ಹತ್ತಿರ ಬಂದಾಗ ನೀವು ಅವರನ್ನು ದೂರ ಮಾಡುತ್ತೀರಿ” ಎಂದಾಗ ಕತ್ರಿನಾ “ಕಾಮ್ ಡೌನ್”(ಸಮಾಧಾನ) ಎಂದು ಹೇಳಿದ್ದಾರೆ. ಆಗ ಯುವತಿ “ನಾನು ಪಬ್ಲಿಕ್ ಪ್ರಾರ್ಪಟಿ ಅಲ್ಲ. ನೀವು ನನಗೆ ಸಮಾಧಾನ ಎಂದೂ ಹೇಳೋಕ್ಕೆ ಆಗಲ್ಲ” ಎಂದು ಮರು ಉತ್ತರ ನೀಡಿದ್ದಾಳೆ.

    ನಡೆದಿದ್ದೇನು?
    ಕಾರ್ಯಕ್ರಮ ಮುಗಿದ ಮೇಲೆ ಯುವತಿಯರು ಕತ್ರಿನಾ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅವರು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರು. ಇದ್ದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋದರು. ನಂತರ ಕತ್ರಿನಾ ಹೋಟೆಲ್‍ನಿಂದ ಹೊರಬಂದು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದಾರೆ.

    ಯುವತಿಯರ ಈ ವರ್ತನೆ ಕಂಡು ಕತ್ರಿನಾ ತನ್ನ ತಾಳ್ಮೆಯನ್ನು ಕಳೆದುಕೊಳ್ಳದೇ ಆ ಸಂದರ್ಭವನ್ನು ಶಾಂತಿಯಿಂದ ನಿಭಾಯಿಸಿದ್ದರು. ಕತ್ರಿನಾ ಅಲ್ಲಿದ್ದ ಬೇರೆ ಅಭಿಮಾನಿಗಳ ಜೊತೆ ಶಾಂತಿಯಿಂದ ಫೋಟೋಗೆ ಪೋಸ್ ಕೊಟ್ಟರು. ಅಲ್ಲದೇ ಅಭಿಮಾನಿಗಳಿಗೆ ತಮ್ಮ ಆಟೋಗ್ರಾಫ್ ಕೂಡ ನೀಡಿದ್ದರು. ಕತ್ರಿನಾ ಬೇರೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆ ಯುವತಿಯರು ಕತ್ರಿನಾ ಬಗ್ಗೆ ಕಮೆಂಟ್ ಮಾಡಿ ಅವಮಾನ ಮಾಡಿದ್ದಾರೆ.

    https://www.youtube.com/watch?time_continue=46&v=OZt7ze5XYYU