Tag: OTT Platform

  • ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

    ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

    ನವದೆಹಲಿ: ಪಾಕಿಸ್ತಾನದ (Pakistan) ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.

    ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಎಲ್ಲಾ ಕಂಟೆಂಟ್‌ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. ಈ ಆದೇಶ ಚಂದಾದಾರಿಕೆ ಆಧಾರಿತ ಮತ್ತು ಉಚಿತ ಪ್ರವೇಶ ವೇದಿಕೆಗಳಲ್ಲಿ ಅನ್ವಯಿಸುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಸುಳಿವು

    ಇದಕ್ಕೂ ಮುನ್ನ ಭಾರತೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಪಾಕಿಸ್ತಾನದ ನಟರು, ಗಾಯಕರು ಹಾಗೂ ಸ್ಟಾರ್‌ಗಳ ಪ್ರೊಫೈಲ್‌ಗಳನ್ನು ಇನ್ಸ್ಟಾ, ಎಕ್ಸ್ ಹಾಗೂ ಯೂಟ್ಯೂಬ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಭಾರತ ಡ್ರೋನ್‌ ದಾಳಿ – ನೂರಾರು ಕೋಟಿ ವೆಚ್ಚದಲ್ಲಿ ನವೀಕರಿಸಿದ್ದ ರಾವಲ್ಪಿಂಡಿ ಸ್ಟೇಡಿಯಂಗೆ ಭಾರಿ ಹಾನಿ

  • ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ

    ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ

    ನವದೆಹಲಿ: ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

    19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು (ಗೂಗಲ್ ಪ್ಲೇ ಸ್ಟೋರ್‌ನಲ್ಲಿ 7, ಆ್ಯಪಲ್ ಆಪ್ ಸ್ಟೋರ್‌ನಲ್ಲಿ 3), ಒಟಿಟಿ ಪ್ಲಾಟ್‌ಫಾರ್ಮ್‌ಗಳ 57 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಪಿಟ್‍ಬುಲ್, ಬುಲ್‍ಡಾಗ್, ರಾಟ್‍ವೀಲರ್: 23 ತಳಿ ಅಪಾಯಕಾರಿ ಶ್ವಾನಗಳ ನಿಷೇಧಕ್ಕೆ ರಾಜ್ಯಗಳಿಗೆ ಕೇಂದ್ರ ಆದೇಶ

    ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್, ಸೃಜನಶೀಲ ಅಭಿವ್ಯಕ್ತಿಯ ಸೋಗಿನಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ನಿಂದನೆ ವಿಷಯಗಳನ್ನು ಪ್ರಚಾರ ಮಾಡಬಾರದು ಎಂದು ವೇದಿಕೆಗಳ ಜವಾಬ್ದಾರಿ ಕುರಿತು ಪದೇ ಪದೇ ಒತ್ತಿಹೇಳಿದ್ದಾರೆ.

    ಸೃಜನಶೀಲ ಅಭಿವ್ಯಕ್ತಿ ಹೆಸರಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆ, ಅಸಭ್ಯ ಕಂಟೆಂಟ್‌ಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವುದು ಆಯಾ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಠಾಕೂರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ, ಯಾವುದೇ ಕಂಟೆಂಟ್‌ ಭಾರತದ ಸಂಸ್ಕೃತಿಯನ್ನು ಅವಮಾನಿಸದಂತೆ ಸಂವೇದನಾಶೀಲವಾಗಿರಬೇಕು ಎಂದು ಪ್ಲಾಟ್‌ಫಾರ್ಮ್‌ಗಳಿಗೆ ಸಚಿವರು ಮನವಿ ಮಾಡಿದ್ದರು.

  • ಒಟಿಟಿಯಲ್ಲಿ ಇನ್ನು ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯ ವಾರ್ನಿಂಗ್

    ಒಟಿಟಿಯಲ್ಲಿ ಇನ್ನು ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯ ವಾರ್ನಿಂಗ್

    ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ (OTT Platform) ತಂಬಾಕು ವಿರೋಧಿ ಎಚ್ಚರಿಕೆ (Anti Tobacco Warning) ನೀಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ (Health ministry) ಕಡ್ಡಾಯಗೊಳಿಸಿದೆ.

    ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆಯನ್ನು ಈ ಹಿಂದೆಯಿಂದಲೂ ಪ್ರದರ್ಶಿಸಲಾಗುತ್ತಿದೆ. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿರಲಿಲ್ಲ. ಇದೀಗ ಆರೋಗ್ಯ ಸಚಿವಾಲಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವನ್ನು ಪ್ಲಾಟ್‌ಫಾರ್ಮ್‌ಗಳು ಅನುಸರಿಸದೇ ಹೋದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸುವಾಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಂಬಾಕು ವಿರೋಧಿ ಆರೋಗ್ಯದ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು. ಅಲ್ಲದೇ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕನಿಷ್ಟ 20 ಸೆಕೆಂಡುಗಳ ವರೆಗೆ ಆಡಿಯೋ ಅಥವಾ ದೃಶ್ಯದ ರೂಪದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಇಲ್ಲವೇ ನಡುವೆ ಪ್ರದರ್ಶಿಸಬೇಕೆಂದು ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

    ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ವೆಬ್‌ಸೀರೀಸ್, ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಧೂಮಪಾನವನ್ನು ವ್ಯಾಪಕವಾಗಿ ಪ್ರದರ್ಶಿಸಲಾಗುತ್ತಿದೆ. ಇದು ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003ರ ಉಲ್ಲಂಘನೆಯಾಗಿದೆ. ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ದೇಶದಲ್ಲಿ ಯುವಕರು ಹಾಗೂ ಮಕ್ಕಳಿಗೆ ತಂಬಾಕು ಬಳಕೆಯನ್ನು ಉತ್ತೇಜಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಗಾ ಭಾಷಣದ ಮಧ್ಯೆ ಮೊಳಗಿತು ಖಲಿಸ್ತಾನ್ ಜಿಂದಾಬಾದ್ ಘೋಷಣೆ

  • ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶಾರೂಖ್ ಖಾನ್ ಪುತ್ರ ಆರ್ಯನ್

    ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶಾರೂಖ್ ಖಾನ್ ಪುತ್ರ ಆರ್ಯನ್

    ಶಾರೂಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಕೊನೆಗೂ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಈಗವರು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ವೆಬ್ ಸರಣಿ ಮತ್ತು ಚಲನಚಿತ್ರದಲ್ಲಿ ಆರ್ಯನ್ ಕೆಲಸ ಮಾಡುತ್ತಿದ್ದಾರೆ.

    ARYAN

    ದೀರ್ಘಕಾಲದವರೆಗೆ, ಆರ್ಯನ್ ಖಾನ್ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ತಮ್ಮ ಪಾತ್ರಕ್ಕಾಗಿ ಸಿದ್ದತೆ ನಡೆಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಅವರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಶುಕ್ರವಾರ ಮತ್ತು ಶನಿವಾರದಂದು ಮುಂಬೈನಲ್ಲಿ ಆರ್ಯನ್ ತನ್ನ ವೆಬ್ ಸರಣಿಗಾಗಿ ಟೆಸ್ಟ್ ಶೂಟ್ ಮಾಡಿದ್ದಾರೆ. ಆದರೆ, ಚಿತ್ರೀಕರಣ ಯಾವಾಗ ಎಂಬ ಬಗ್ಗೆ ಅವರು ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: ಆಲಿಯಾ-ರಣಬೀರ್ ಮದುವೆ ಮುಂದೂಡಿಕೆ: ಕಾರಣ ವಿಚಿತ್ರ

    ಪ್ರಾಜೆಕ್ಟ್ ಬರೆಯುವುದರ ಜೊತೆಗೆ, ಆರ್ಯನ್ ಅದನ್ನು ನಿರ್ದೇಶಿಸಲಿದ್ದಾರೆ. ಶುಕ್ರವಾರ ಮತ್ತು ಶನಿವಾರ ನಡೆದ ಟೆಸ್ಟ್ ಶೂಟ್‍ನಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಮತ್ತು ಸಿಬ್ಬಂದಿಯ ಪೂರ್ವಸಿದ್ಧತೆಯ ಭಾಗವಾಗಿ, ಆರ್ಯನ್ ಅವರು ಅದರ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ಎಲ್ಲರನ್ನೂ ಒಟ್ಟಿಗೆ ಸೇರಿಸಲು ಮತ್ತು ಯೋಜನೆಯನ್ನು ಅರ್ಥಮಾಡಿಕೊಳ್ಳಲು ಬಯಸಿದ್ದರು. ಇನ್ನೂ ಹೆಸರಿಡದ ಈ ಕಾರ್ಯಕ್ರಮದ ಬಗ್ಗೆ ಅವರು ತುಂಬಾ ಉತ್ಸುಕರಾಗಿದ್ದಾರೆ. ಈಗಾಗಲೇ ಪ್ರಿ-ಪೆÇ್ರಡಕ್ಷನ್‍ನ ಕೆಲಸವನ್ನು ಪ್ರಾರಂಭಿಸಿದ್ದಾರೆ. ಆರ್ಯನ್ ಶೀಘ್ರದಲ್ಲೇ ನಿಜವಾದ ಶೂಟಿಂಗ್ ದಿನಾಂಕಗಳನ್ನು ಅಂತಿಮಗೊಳಿಸುತ್ತಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಆರ್ಯನ್ ಮತ್ತು ಸುಹಾನಾ ಇಬ್ಬರೂ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಸುಹಾನಾ ಖಾನ್ ಕೂಡ ಬಾಲಿವುಡ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಆರ್ಚಿ ಕಾಮಿಕ್ಸ್-ಪ್ರೇರಿತ ನೆಟ್‍ಫ್ಲಿಕ್ಸ್ ಸರಣಿಯ ಜೋಯಾ ಅಖ್ತರ್ ತನ್ನ ಮೊದಲ ಪಾತ್ರದಲ್ಲಿ ಸುಹಾನಾ ಅವರನ್ನು ಸೇರಿಸಿಕೊಳ್ಳುತ್ತಾರೆ. ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಕೂಡ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ.