Tag: Oslo

  • ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

    ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

    ಓಸ್ಲೋ: ನೈಟ್‍ಕ್ಲಬ್ ಹಾಗೂ ಹತ್ತಿರದ ಬೀದಿಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡ ಘಟನೆ ನಾರ್ವೆ ರಾಜಧಾನಿಯ ಓಸ್ಲೋದಲ್ಲಿ ನಡೆದಿದೆ.

    ಲಂಡನ್ ಪಬ್ ಓಸ್ಲೋದ ಮಧ್ಯಭಾಗದಲ್ಲಿರುವ ಜನಪ್ರಿಯ ಸಲಿಂಗಕಾಮಿ ಬಾರ್ ಮತ್ತು ನೈಟ್‍ಕ್ಲಬ್‍ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಶನಿವಾರ ಪಬ್‍ಗೆ ಬಂದು ತನ್ನ ಬ್ಯಾಗ್‍ನಲ್ಲಿದ್ದ ಗನ್ ಅನ್ನು ತೆಗೆದಿದ್ದಾನೆ. ನಂತರ ಆ ಗನ್‍ನಿಂದ ಫೈರಿಂಗ್‍ನ್ನು ಪಬ್‍ನಿಂದ ಪ್ರಾರಂಭಿಸಿ ಅಲ್ಲೇ ಹತ್ತಿರವಿದ್ದ ಬೀದಿವರೆಗೆ ಕೆಲ ನಿಮಿಷಗಳ ಕಾಲ ದಾಳಿ ಮಾಡಿದ್ದಾನೆ.

    ದಾಳಿಯ ಉದ್ದೇಶವೇನು ಎಂಬುದು ಈವರೆಗೆ ಸ್ಪಷ್ಟವಾಗಲಿಲ್ಲ ಸ್ಪಷ್ಟವಾಗಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮೃತಪಟ್ಟಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಜೊತೆಗೆ 14 ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್ – 16 ರೆಬೆಲ್ ಶಾಸಕರಿಗೆ ನೊಟೀಸ್

    Live Tv

  • ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷಗಟ್ಟಲೇ ದಂಡ ಕಟ್ಟಿದ ಪ್ರಧಾನಿ

    ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷಗಟ್ಟಲೇ ದಂಡ ಕಟ್ಟಿದ ಪ್ರಧಾನಿ

    ಓಸ್ಲೋ: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಪ್ರಧಾನಿಗೆ ದಂಡ ಹಾಕುವ ಮೂಲಕವಾಗಿ ತಮ್ಮ ಪ್ರಾಮಾಣಿಕತೆಯನ್ನು ಯರೋಪಿನ ನಾರ್ವೆ ಪೋಲಿಸರು ಮೆರೆದಿದ್ದಾರೆ.

    ನಾರ್ವೆ ಪ್ರಧಾನಿ ಎರ್ನಾ ಸೊಲ್ಬೆರ್ಗ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ಕುಟುಂಬದೊಂದಿಗೆ ಕೋವಿಡ್ ನಿಯಮವಾದ ಸಾಮಾಜಿಕ ಅಂತರವನ್ನು ಉಲ್ಲಂಘಿಸಿದ್ದರು. ಇದಕ್ಕಾಗಿ ಪೊಲೀಸರು ಬರೋಬ್ಬರಿ 20 ಸಾವಿರ ನಾರ್ವೆ ಕ್ರೌನ್ಸ್(ಅಂದಾಜು 1.75 ಲಕ್ಷ ರೂ.) ದಂಡವನ್ನು ವಿಧಿಸಿದ್ದಾರೆ.

    ಕಳೆದ ತಿಂಗಳು ಎರ್ನಾ ಸೋಲ್ಬೆರ್ಗ್ ತಮ್ಮ ಕುಟುಂಬದವರ ಜೊತೆಗೆ ಜನ್ನದಿನಾಚರಣೆಯನ್ನು ಆಚರಿಸಿಕೊಂಡಿದ್ದರು. ದಂಡವನ್ನು ಕಟ್ಟುವುದರ ಜೊತೆಗೆ ಎರ್ನಾ ಸೊಲ್ಬೆರ್ಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ ಎಂದು ವರದಿಯಾಗಿದೆ.