Tag: oscars 2023

  • Oscar Winner List:ಆಸ್ಕರ್ 2023 ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

    Oscar Winner List:ಆಸ್ಕರ್ 2023 ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

    ಸ್ಕರ್ 2023 (Oscars 2023) ಅವಾರ್ಡ್ ಸಮಾರಂಭವು ಪೂರ್ಣಗೊಂಡಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಅನೇಕ ಸಿನಿ ತಾರೆಯರು ಭಾಗಿಯಾಗಿದ್ದರು. ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಯನ್ನ ಬಾಚಿಕೊಂಡಿದೆ. `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ (Naatu Naatu Song) ಸಾಂಗ್ ಮತ್ತು `ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿ ಪ್ರತಿಷ್ಠಿತ ಆಸ್ಕರ್ ಗೆದ್ದು (Winner) ಬೀಗಿದೆ. ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಭಾರತಕ್ಕೆ ಒಲಿದ ಎರಡು ಪ್ರಶಸ್ತಿ

    ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಪಡೆಯಿತು. ಹಾಗೂ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ವಿಬಾಗದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರಕ್ಕೆ ಪ್ರಶಸ್ತಿ ದಕ್ಕಿದೆ.

    ಅತ್ಯುತ್ತಮ ಚಿತ್ರ

    ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ ನಿರ್ದೇಶನದ `ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್’

    ಅತ್ಯುತ್ತಮ ನಿರ್ದೇಶನ

    ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ – ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್

    ಅತ್ಯುತ್ತಮ ನಟ

    ಬ್ರೆಂಡನ್ ಫ್ರೆಸರ್- ದಿ ವೇಲ್

    ಅತ್ಯುತ್ತಮ ನಟಿ

    ಮಿಶೆಲ್ ಯೋ- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್ ಸಿನಿಮಾ

    ಅತ್ಯುತ್ತಮ ಪೋಷಕ ನಟ

    ಕಿ ಹು ಕ್ವಾನ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್

    ಅತ್ಯುತ್ತಮ ಪೋಷಕ ನಟಿ

    ಜೇಮಿ ಲೀ ಕರ್ಟಿಸ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್

    ಅತ್ಯುತ್ತಮ ಛಾಯಾಗ್ರಹಣ

    ಜೇಮ್ಸ್ ಫ್ರೆಂಡ್- ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್

    ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ

    ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್

    ಬೆಸ್ಟ್ ಡಾಕ್ಯುಮೆಂಟರಿ ಫೀಚರ್

    ನವಾಲ್ನಿ

    ಅತ್ಯುತ್ತಮ ಸಂಕಲನ

    ಪೌಲ್ ರೋಜರ್ಸ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್

    ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್

    ಅವತಾರ್: ದಿ ವೇ ಆಫ್ ವಾಟರ್

    ಅತ್ಯುತ್ತಮ ವಸ್ತ್ರವಿನ್ಯಾಸ

    ರುತ್ ಕಾರ್ಟರ್- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್

  • ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

    ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

    ಸ್ಕರ್ 2023 (Oscars 2023) ಪ್ರಶಸ್ತಿ ಪ್ರದಾನ ಆರಂಭವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ತೆಲುಗಿನ ʻಆರ್‌ಆರ್‌ಆರ್ʼ ಚಿತ್ರದ `ನಾಟು ನಾಟು’ (Naatu Naatu Song) ಸಾಂಗ್ ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಗೆಲ್ಲುವ ಭರವಸೆ ಕೂಡ ಮೂಡಿಸಿದೆ. ಈ ವೇದಿಕೆಯ ಮೇಲೆ ರಾಹುಲ್ ಸಿಪ್ಲಿಗಂಜ ಮತ್ತು ಕಾಲಭೈರವ ಅವರು ಲೈವ್ ಆಗಿ ಹಾಡಲಿದ್ದಾರೆ. ಅವರ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಬದಲು ಅಮೆರಿಕದ ಯುವತಿಯೊಬ್ಬರು ಹೆಜ್ಜೆ ಹಾಕಲಿದ್ದಾರೆ.

    ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಚಿತ್ರದ ನಾಟು ನಾಟು ಸಾಂಗ್ ಈಗಾಗಲೇ `ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಇದೇ ಹಾಡು ಈಗ ಆಸ್ಕರ್ ಅವಾರ್ಡ್‌ಗೆ ನಾಮಿನೇಟ್ ಆಗಿದೆ. ಈ ಹಿಂದೆ ನಾಟು ನಾಟು ಹಾಡಿಗೆ ರಾಮ್‌ಚರಣ್- ಜ್ಯೂ.ಎನ್‌ಟಿಆರ್ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಮಯದ ಅಭಾವದಿಂದ ಕೈಬೀಡಲಾಯಿತು. ಈ ಸುವರ್ಣಾವಕಾಶ ಅಮೆರಿಕದ ನಟಿ ಲಾರೆನ್ ಗೋತ್ಲಿಬ್ ಅವರ  (Lauren Gottileb) ಪಾಲಾಗಿದೆ.

    ಅಮೆರಿಕದ ನಟಿ ಲಾರೆನ್ (Lauren) ಅವರು ಈಗಾಗಲೇ ಹಿಂದಿ ಸಿನಿಮಾ ಮತ್ತು ಕಿರುತೆರೆಯ ಡ್ಯಾನ್ಸ್‌ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ. ಖ್ಯಾತ ನಟ ಪ್ರಭುದೇವ ನಟಿಸಿ, ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದ `ಎಬಿಸಿಡಿ’ ಸಿನಿಮಾದಲ್ಲಿಯೂ ನಟಿಸಿದರು. ಆ ಬಳಿಕ ಸಾಲು ಸಾಲು ಹಿಂದಿ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.

    ತಮಗೆ ನಾಟು-ನಾಟು ಹಾಡಿಗೆ ಆಸ್ಕರ್‌ನಲ್ಲಿ ಡ್ಯಾನ್ಸ್‌ಗೆ ಅವಕಾಶ ದೊರತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದ ಲಾರೆನ್, ವಿಶೇಷ ಸುದ್ದಿ, ನಾನು ಆಸ್ಕರ್‌ನಲ್ಲಿ ನಾಟು-ನಾಟು ಹಾಡಿಗೆ ವಿಶೇಷ ಪ್ರದರ್ಶನ ನೀಡಲಿದ್ದೇನೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಬರೆದುಕೊಂಡಿದ್ದರು. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

     

    View this post on Instagram

     

    A post shared by Lauren Gottlieb (@laurengottlieb)

    ʻನಾಟು-ನಾಟುʼ ಹಾಡಿಗೆ ತಾವು ತಮ್ಮ ತಂಡದೊಂದಿಗೆ ತಯಾರಿ ಮಾಡುತ್ತಿರುವ ಕೆಲವು ವಿಡಿಯೋಗಳನ್ನು ಸಹ ಲಾರೆನ್ ಹಂಚಿಕೊಂಡಿದ್ದರು. ಮಾರ್ಚ್ 12 ರಂದು (ಭಾರತದ ಕಾಲಮಾನದಂತೆ ಮಾರ್ಚ್ 13) ಲಾಸ್ ಏಂಜಲಸ್‌ನ ಆಸ್ಕರ್ ಮುಖ್ಯ ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಲಾರೆನ್ ನಾಟು-ನಾಟು ಹಾಡಿಗೆ ಕುಣಿಯಲಿದ್ದಾರೆ.

  • Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    ಖ್ಯಾತ ನಿರ್ದೇಶಕ ರಾಜಮೌಳಿ (Director Rajamouli) ನಿರ್ದೇಶನದ `RRR’ ಸಿನಿಮಾದ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಚಿತ್ರದ `ನಾಟು ನಾಟು’ ಸಾಂಗ್‌ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿಕೊಂಡ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu Song) ಹಾಡು ಪ್ರದರ್ಶನಗೊಳ್ಳುವುದರ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ.

    ಆಸ್ಕರ್ (Oscars 2023) ಅಂಗಳಕ್ಕೆ ಹೋಗೋದು ಪ್ರತೀ ಫಿಲಂ ಮೇಕರ್‌ನ ಬಹುದೊಡ್ಡ ಕನಸು. ಆಸ್ಕರ್ ವೇದಿಕೆಯಲ್ಲಿ ಜಗತ್ತಿನ ವಿವಿಧ ಭಾಷೆಗಳ ವಿವಿಧ ದೇಶಗಳ ನಾನಾ ಮೈ ಬಣ್ಣದ ನಟ- ನಟಿಯರ ಮೇಳವೇ ನಡೆಯುತ್ತೆ. ಆದರೆ ಈ ಬಾರಿ ಆಸ್ಕರ್‌ನಲ್ಲಿ ಪ್ರಸಿದ್ಧ `ಆರ್‌ಆರ್‌ಆರ್’ ಸಿನಿಮಾದ್ದೇ ಸಮಾಚಾರ. ಈ ಚಿತ್ರ ಬಂದು ವರ್ಷ ಕಳೆದರೂ `ಆರ್‌ಆರ್‌ಆರ್’ ಚಿತ್ರದ `ನಾಟು ನಾಟು’ ಹಾಡು ಇಡೀ ಜಗತ್ತನ್ನೇ ಕುಣಿಸುತ್ತಿದೆ. ಹಾಗಾಗಿ ಮಾ.12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆ ಮೇಲೆ `ನಾಟು ನಾಟು’ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

    ಚಂದ್ರಬೋಸ್ ಸಾಹಿತ್ಯ ಬರೆದಿರುವ `ನಾಟು ನಾಟು’ ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯ ಮೂಲಕ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ದಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ ‘RRR’ ಸಿನಿಮಾ ನೋಡಿ ಮೆಚ್ಚಿ ಹೊಗಳಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (M.M Keeravani) ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಅವರು ಆಸ್ಕರ್ ವೇದಿಕೆಯಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಅವರ ಬರುವಿಕೆಯ ಬಗ್ಗೆ ನಿರೀಕ್ಷೆಯಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ಚಿತ್ರದ ನಾಟು ನಾಟು ಸಾಂಗ್ ಅನ್ನ ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿತ್ತು. ಪ್ರೇಮ್ ರಕ್ಷಿತ್ ಕೊರಿಯೋಗ್ರಾಫಿಯಲ್ಲಿ ತಾರಕ್- ಚರಣ್ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಿನಿಮಾ ಗೆಲುವಿಗೆ ರಾಜಮೌಳಿ ಅವರ ನಿರ್ದೇಶನವಷ್ಟೇ ಸಾಥ್ ನೀಡಿರುವುದಲ್ಲ. ಚಿತ್ರಕಥೆಯ ಜೊತೆ ತಾರಕ್ ಮತ್ತು ರಾಮ್ ಚರಣ್ ಅಭಿನಯ ಕೂಡ ಗೆಲುವಿಗೆ ಕಾರಣವಾಗಿದೆ.