Tag: oscars 2023

  • `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾದ `ನಾಟು ನಾಟು’ (Naatu Naatu Song)  ಹಾಡಿಗೆ ಆಸ್ಕರ್ ಬಂದಿರೋದು ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾಟು ನಾಟು ಸಾಂಗ್ ಆಸ್ಕರ್ ಗೆದ್ದಿರೋದ್ದಕ್ಕೆ ಇಡೀ ತಂಡದ ಶ್ರಮವಿದೆ. ಹೀಗಿರುವಾಗ ಹಿಂದಿ ನಟ ಅಜಯ್ ದೇವಗನ್ ಅವರು ʻನಾಟು ನಾಟು ಆಸ್ಕರ್ ಗೆದ್ದಿದ್ದಕ್ಕೆ ನಾನೇ ಕಾರಣʼ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

    ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಟಿಸಿ, ನಿರ್ದೇಶಿಸಿರುವ `ಭೋಲಾ’ (Bhola) ಸಿನಿಮಾ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸದ್ಯ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಾಟು ನಾಟು ಹಾಡಿನ ಬಗ್ಗೆ ಅಜಯ್ ದೇವಗನ್ ತಮಾಷೆ ಮಾಡಿದ್ದಾರೆ.

    `ನಾಟು ನಾಟು’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ. ನಾಟು ನಾಟು’ ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ ಎಂದಿದ್ದಾರೆ. ಈ ಮೂಲಕ ತಮಗೆ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದಿದ್ದಾರೆ.

    ಇದೀಗ ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ಅವರು ನಗೋದನ್ನ ನೋಡಿದೆವು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

  • ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    `ಆರ್‌ಆರ್‌ಆರ್’ ಸಿನಿಮಾ ರಿಲೀಸ್ ಆದ ದಿನದಿಂದ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಆಸ್ಕರ್ ವೇದಿಕೆಯಲ್ಲಿ ಇಂಡಿಯನ್ ಸಿನಿಮಾ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ (Oscars 2023) ಗೆದ್ದು ಬೀಗಿದೆ. ಇದೀಗ ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ (Ram Charan) ನೋಡಲು ದೆಹಲಿ ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ.

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. `ನಾಟು ನಾಟು’ ಹಾಡಿಗೆ ಓರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿ `ನಾಟು ನಾಟು’ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇಬ್ಬರ ಸ್ಟಾರ್ಸ್‌ ಡ್ಯಾನ್ಸ್‌ಗೆ ಸಿನಿಪ್ರಿಯರು ಬೋಲ್ಡ್ ಆಗಿದ್ದರು. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

    ಆಸ್ಕರ್ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಕಾದು ನಿಂತಿದ್ದರು. ಅಪಾರ ಸಂಖ್ಯೆಯ ಜನ ರಾಮ್ ಚರಣ್ ಕಾರನ್ನು ಸುತ್ತುವರೆದರು. ರಾಮ್ ಚರಣ್ ಎಂದು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಮ್ ಚರಣ್ ಎಲ್ಲರತ್ತ ಕೈ ಬೀಸಿ ಕಾರಿನಲ್ಲಿ ಸಾಗಿದರು. ಚರಣ್ ಎಂಟ್ರಿ ಕೊಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಪತ್ನಿ ಉಪಾಸನಾ (Upasana) ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಮುದ್ದು ನಾಯಿ ಕೂಡ ಇರುವುದು ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಈ ವೇಳೆ ರಾಮ್ ಚರಣ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಸುತ್ತುವರೆದ ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದೇ ಪೊಲೀಸ್‌ರಿಗೆ ಹರಸಾಹಸ ಪಡುವಂತೆ ಆಗಿದೆ.

  • ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

    ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

    ಮೆಗಾ ಫ್ಯಾಮಿಲಿಯಲ್ಲಿ (Mega Family) ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳಿದ್ದಾರೆ. ಒಬ್ಬರು ರಾಮ್ ಚರಣ್ (Ram Charan) ಮತ್ತೊಬ್ಬರು ಅಲ್ಲು ಅರ್ಜುನ್. ಇಬ್ಬರ ಇದೀಗ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದೆ. `ನಾಟು ನಾಟು’ ಹಾಡಿಗೆ ಅಲ್ಲು ಅರ್ಜುನ್ (Allu Arjun) ಟ್ವೀಟ್ ಮಾಡಿರುವ ರೀತಿ ರಾಮ್ ಚರಣ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ (Naatu Naatu) ಹಾಡಿಗೆ ಇತ್ತೀಚಿಗೆ ಆಸ್ಕರ್ (Oscars 2023) ಪ್ರಶಸ್ತಿ ಲಭಿಸಿದೆ. ಟಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಿಂದ ತಂಡಕ್ಕೆ ಶುಭಕೋರುತ್ತಿದ್ದಾರೆ. ಅದರಂತೆಯೇ ಅಲ್ಲು ಅರ್ಜುನ್ ಕೂಡ ಟ್ವೀಟ್ ಮೂಲಕ ಇಡೀ `ಆರ್‌ಆರ್‌ಆರ್’ ಟೀಮ್‌ಗೆ ಶುಭಕೋರಿದ್ದರು. ಈ ವೇಳೆ ಜೂ.ಎನ್‌ಟಿಆರ್‌ಗೆ ಕುರಿತು ಮಾಡಿದ ಒಂದೇ ಒಂದು ಟ್ವೀಟ್ ರಾಮ್ ಚರಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಇದನ್ನೂ ಓದಿ: ಜಿನಿವಾದಲ್ಲಿ ನಾಳೆ ‘ಕಾಂತಾರ’ ಸಿನಿಮಾ ಪ್ರದರ್ಶನ : ರಿಷಬ್ ಶೆಟ್ಟಿ ಭಾಗಿ

    ಭಾರತಕ್ಕೆ (India) ಇದೊಂದು ಅದ್ಭುತ ಕ್ಷಣ. ತೆಲುಗು ಹಾಡೊಂದು ಆಸ್ಕರ್ ವೇದಿಕೆಯಲ್ಲಿ ಶೇಕ್ ಮಾಡುವುದನ್ನು ನೋಡಿ ಖುಷಿಯಾಗುತ್ತಿದೆ. ಎಂ.ಎಂ ಕೀರವಾಣಿಯವರಿಗೆ, ಚಂದ್ರಬೋಸ್ ಅವರಿಗೆ, ಪ್ರೇಮ್ ರಕ್ಷಿತ್ ಅವರಿಗೆ, ಕಾಲ ಭೈರವ ಅವರಿಗೆ, ರಾಹುಲ್ ಅವರಿಗೆ, ನನ್ನ ಸಹೋದರ ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

    ಹಾಗೆಯೇ ನಮ್ಮ ತೆಲುಗಿನ ಹೆಮ್ಮೆ, ತಮ್ಮ ಹೆಜ್ಜೆಗಳಿಂದ ಪ್ರಪಂಚವನ್ನೇ ಕುಣಿಯುವಂತೆ ಮಾಡಿದ ಜ್ಯೂ.ಎನ್‌ಟಿಆರ್ ಅವರಿಗೆ, ಈ ಎಲ್ಲಾ ಮ್ಯಾಜಿಕ್ ಹಿಂದಿರುವ ವ್ಯಕ್ತಿ ರಾಜಮೌಳಿಯವರಿಗೆ ಅಭಿನಂದನೆ ಎಂದಿದ್ದರು. ಭಾರತೀಯ ಸಿನಿಮಾ ರಂಗಕ್ಕೆ ಹೃದಯ ಸ್ಪರ್ಷಿಸಿದ ಕ್ಷಣ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

    ಐಕಾನ್ ಸ್ಟಾರ್ ಅವರು ತಾರಕ್‌ಗೆ ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್ ಚರಣ್ ಫ್ಯಾನ್ಸ್ ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ʻಪುಷ್ಪʼ ಸ್ಟಾರ್ ವಿರುದ್ಧ ಚರಣ್‌ ಅಭಿಮಾನಿಗಳು ಕಿಡಿಕಾರಿದ್ದಾರೆ.

  • ಆಸ್ಕರ್‌ನಲ್ಲಿ ದೀಪಿಕಾ ಧರಿಸಿದ್ದ ಈ ಬಟ್ಟೆಯ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

    ಆಸ್ಕರ್‌ನಲ್ಲಿ ದೀಪಿಕಾ ಧರಿಸಿದ್ದ ಈ ಬಟ್ಟೆಯ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

    ನ್ನಡತಿ ದೀಪಿಕಾ ಪಡುಕೋಣೆ (Deepika Padukone) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ ಆಸ್ಕರ್ ವೇದಿಕೆಯಲ್ಲಿ ದೀಪಿಕಾ ನಿರೂಪಣೆ ಮಾಡಿದ ಮೇಲೆ ದೇಶದ ಎಲ್ಲೆಡೆ ಅವರು ಗಮನ ಸೆಳೆದಿದ್ದಾರೆ. ಈಗ ಆಸ್ಕರ್ (Oscars 2023) ಪಾರ್ಟಿಯಲ್ಲಿ ನಟಿ ಧರಿಸಿದ್ದ ಬಟ್ಟೆ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಬಟ್ಟೆಯ ಅಸಲಿ ಬೆಲೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ.

    ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ ನಟನೆ, ಡ್ಯಾನ್ಸ್, ಫಿಟ್‌ನೆಸ್‌ಗಷ್ಟೇ ಅಲ್ಲ, ಫ್ಯಾಷನ್‌ಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಇತ್ತೀಚಿನ ಆಸ್ಕರ್ ಇವೆಂಟ್‌ನಲ್ಲಿ ಚೆಂದದ ಡ್ರೆಸ್ ತೊಟ್ಟು ನಿರೂಪಣೆ ಮಾಡಿದ್ದ ನಟಿಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಇದನ್ನೂ ಓದಿ: ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ಈ ಕಾರ್ಯಕ್ರಮದ ಬಳಿಕ ಪಿಂಕ್ ಡ್ರೆಸ್‌ನಲ್ಲಿ (Pink Dress) ನಟಿ ಕಂಗೊಳಿಸಿದ್ದಾರೆ. ಇವೆಂಟ್‌ನಲ್ಲಿ ದೀಪಿಕಾ ಧರಿಸಿದ್ದ ದುಬಾರಿ ಡ್ರೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈ ಡ್ರೆಸ್ ನ್ಯೂಯಾರ್ಕ್ ಸಿಟಿ ಮೂಲದ ವಿನ್ಯಾಸಗಾರ ನಯೀಮ್ ಖಾನ್ ಅವರ ಕಲೆಕ್ಷನ್‌ನಲ್ಲಿದೆ. ಈ ಡ್ರೆಸ್ ನಯೀಮ್ ಖಾನ್ ಅವರ 2022ರ ಕಲೆಕ್ಷನ್‌ಗೆ ಸೇರಿದ್ದು, ಇದರ ಬೆಲೆ 819,775  ರೂ. ಮೊತ್ತದಾಗಿದೆ.

    ನೆಟ್ಟಿಗರು ಮಾತ್ರ ಆ ಡ್ರೆಸ್ ಬೆಲೆಗೆ ಸುಂದವಾದ ಒಂದು ಕಾರು ಖರೀದಿಸ್ಬೋದಿತ್ತಲ್ಲ ಅಂತಿದ್ದಾರೆ. ದೀಪಿಕಾ ಅವರ ದುಬಾರಿ ಬಟ್ಟೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

  • ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ತೆಲುಗಿನ (Telagu) ನಟ ಜ್ಯೂ.ಎನ್‌ಟಿಆರ್ (Jr.Ntr) ಮತ್ತು ರಾಮ್ ಚರಣ್ (Ram Charan) ಜಬರ್‌ದಸ್ತ್ ಆಗಿ ಕುಣಿದಿದ್ದ `ನಾಟು ನಾಟು’ (Naatu Naatu) ಹಾಡಿಗೆ ಈ ವರ್ಷ ಆಸ್ಕರ್ ಅವಾರ್ಡ್ (Oscar Award) ಒಲಿದಿದೆ. ವಿಶ್ವದ ಎಲ್ಲೆಡೆ ಈ ಹಾಡು ಈಗ ಸಂಚಲನ ಮೂಡಿಸುತ್ತಿದೆ. ಹೀಗಿರುವಾಗ ಆಸ್ಕರ್ ವೇದಿಕೆಯಲ್ಲಿ ತಾರಕ್- ಚರಣ್ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಬೇಕಿತ್ತು. ಕೊನೆಯ ಹಂತದಲ್ಲಿ ಪ್ರದರ್ಶನ ಕ್ಯಾನ್ಸಲ್ ಆಗಿದ್ದೇಕೆ ಎಂಬುದನ್ನ ನಿರ್ಮಾಪಕ ರಾಜ್‌ ಕಪೂರ್  ಅಸಲಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.

    `ಆರ್‌ಆರ್‌ಆರ್’ (RRR) ಸಿನಿಮಾಗಾಗಿ ರಾಜಮೌಳಿ ಮತ್ತು ಟೀಮ್ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. `ನಾಟು ನಾಟು’ ಹಾಡನ್ನ ಉಕ್ರೇನ್‌ನಲ್ಲಿ ಅದ್ದೂರಿಯಾಗಿ ಶೂಟಿಂಗ್ ಮಾಡಲಾಗಿತ್ತು. ತೆರೆಯ ಮೇಲೆ ಕಮಾಲ್ ಮಾಡಿದ್ದಂತಹ ನಾಟು ನಾಟು ಸಾಂಗ್‌ಗೆ ಆಸ್ಕರ್ ವೇದಿಕೆಯಲ್ಲೂ ಪ್ರದರ್ಶನ ಮಾಡುವ ಯೋಜನೆ ಇತ್ತು. ಕಡೆಯ ಕ್ಷಣದಲ್ಲಿ ಬದಲಾಗಿದ್ದು ಯಾಕೆ ಎಂಬುದನ್ನ ನಿರ್ಮಾಪಕ ರಾಜ್ ಕಪೂರ್ (Raj Kapoor) ಇದೀಗ ತಿಳಿಸಿದ್ದಾರೆ.

    ರಾಮ್ ಚರಣ್ ಮತ್ತು ತಾರಕ್ ಇಬ್ಬರೂ ಪ್ರತಿಷ್ಠಿತ ವೇದಿಕೆಯಲ್ಲಿ ಡಾನ್ಸ್ ಮಾಡಲು ಆರಾಮದಾಯಕವಾಗಿರದ ಕಾರಣ ಪ್ರದರ್ಶನ ನೀಡಿಲ್ಲ ಎಂದು ರಾಜ್ ಕಪೂರ್ ಬಹಿರಂಗಪಡಿಸಿದ್ದಾರೆ. ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವ ಮುನ್ನ ಮತ್ತೆ ಕಾರ್ಯಕ್ರಮದ ಸಿದ್ಧತೆ ಸಮಯದ ಅಭಾವವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಗಾಯಕರ ಜೊತೆ ಇವರಿಬ್ಬರೂ ಪ್ರದರ್ಶನ ನೀಡಬೇಕಿತ್ತು. ಎಂ.ಎಂ ಕೀರವಾಣಿ ಹೇಳಿದ ಬಳಿಕ ನಾವು ರಾತ್ರೋರಾತ್ರಿ ಭಾರತದ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೋರಿಯೋಗ್ರಾಫರ್‌ಗಳಿಗೆ ಕರೆ ಮಾಡಿ ಮಾತನಾಡಿದೆವು. ನಾವು ಕಾಸ್ಟಿಂಗ್ ಆಯ್ಕೆಗಳು, ವಸ್ತ್ರ ವಿನ್ಯಾಸ ಮತ್ತು ಭಾರತದ ತಂಡದೊಂದಿಗೆ ಸ್ಟೇಜ್ ರೆಂಡರಿಂಗ್ ಎಲ್ಲವೂ ಸಿದ್ಧತೆ ಮಾಡಿಕೊಂಡಿದ್ದೇವು. ಆದರೆ ಎಲ್ಲದಕ್ಕೂ ಸಮಯದ ಅಭಾವವಿತ್ತು ಎಂದಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಮಾಡೋದಾದ್ರೆ ಅದಕ್ಕೆ ಸಿದ್ಧತೆ ಕೂಡ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಪ್ರದರ್ಶನ ನೀಡಲಾಗಲಿಲ್ಲ‌ ಬಳಿಕ ಹಾಲಿವುಡ್‌ ನಟಿ ಲಾರೆನ್‌ ಮತ್ತು ಅವರ ತಂಡ ಅದ್ಭುತವಾಗಿ ಪ್ರದರ್ಶಿಸಿದರು ಎಂದು ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

  • ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    `ಪಠಾಣ್’ (Pathaan) ಹೀರೋಯಿನ್ ದೀಪಿಕಾ ಪಡುಕೋಣೆ (Deepika Padukone) ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಈ ವರ್ಷ ಆಸ್ಕರ್ (Oscar) ವೇದಿಕೆಯಲ್ಲಿ ನಿರೂಪಣೆ (Anchoring) ಮಾಡುವ ಮೂಲಕ ನಟಿ ಗಮನ ಸೆಳೆದಿದ್ದಾರೆ. ಇದೀಗ ಮೊದಲ ಬಾರಿಗೆ ನಟಿ ದೀಪಿಕಾರನ್ನ ಕಂಗನಾ ರಣಾವತ್ ಹಾಡಿ ಹೊಗಳಿದ್ದಾರೆ. ದೀಪಿಕಾ ನಮ್ಮ ಭಾರತದ ಹೆಮ್ಮೆ ಎಂದಿದ್ದಾರೆ.

    ಕನ್ನಡತಿ ದೀಪಿಕಾ ಪಡುಕೋಣೆ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆಸ್ಕರ್ ವೇದಿಕೆಯಲ್ಲಿ ನಿರೂಪಣೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗ ಪಡಿಸಿಕೊಂಡು ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿನ ವಿಶೇಷತೆ ಬಗ್ಗೆ ಅದ್ಭುತವಾಗಿ ಮಾತನಾಡಿ ನಟಿ ಗಮನ ಸೆಳೆದರು. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    ದೀಪಿಕಾ ಆಸ್ಕರ್ ಸಮಾರಂಭದಲ್ಲಿ ಕಪ್ಪು ಡ್ರೆಸ್ ತೊಟ್ಟು ಕಂಗೊಳಿಸಿದ್ದಾರೆ. `ಆರ್‌ಆರ್‌ಆರ್’ (RRR) ಚಿತ್ರದ ನಾಟು ನಾಟು ಹಾಡಿನ ಬಗ್ಗೆ ಮಸ್ತ್ ಆಗಿ ನಿರೂಪಣೆ ಮಾಡಿದ್ದಾರೆ. ಅವರ ಡ್ರೆಸ್ ಸೆನ್ಸ್‌ಗೆ ಮತ್ತು ನಿರೂಪಣೆ ಶೈಲಿಗೆ ಹಲವರು ಫಿದಾ ಆಗಿದ್ದಾರೆ. ಈಗ ದೀಪಿಕಾ ಬಗ್ಗೆ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯೆ ನೀಡಿದ್ದಾರೆ.

    ದೀಪಿಕಾ ಪಡುಕೋಣೆ ಎಷ್ಟು ಸುಂದರ (Beautiful). ಭಾರತ (India) ಪ್ರತಿನಿಧಿಸಿ ಆಸ್ಕರ್ ವೇದಿಕೆ ಮೇಲೆ ನಿಲ್ಲುವುದು ಅಷ್ಟು ಸುಲಭವಲ್ಲ. ಈ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸದಿಂದ ಮಾತನಾಡುತ್ತಾ ಭಾರತದ ಘನತೆಯನ್ನು ಕಾಪಾಡಿದ್ದು ಮಾತ್ರ ಅವಿಸ್ಮರಣೀಯ. ಇದು ಭಾರತದ ಮಹಿಳೆ ಸಾಮರ್ಥ್ಯ ಹೇಗಿರುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ದೀಪಿಕಾರನ್ನ ಮನಸಾರೆ ಕಂಗನಾ ಹಾಡಿ ಹೊಗಳಿದ್ದಾರೆ.

    ಸದಾ ಒಂದಲ್ಲಾ ಒಂದು ವಿವಾದಾತ್ಮಕ ಮಾತುಗಳಿಂದ ಸುದ್ದಿಯಲ್ಲಿರುತ್ತಿದ್ದ ನಟಿ ಕಂಗನಾ ನಡೆಗೆ ಈಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಆಸ್ಕರ್ ವೇದಿಕೆಯಲ್ಲಿ ದೀಪಿಕಾ ನಿರೂಪಣೆ ಮಾಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

  • ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

    ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

    ಬಾಲಿವುಡ್ (Bollywood) ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಫ್ಯಾಷನ್‌ಗೆ ಹೆಚ್ಚು ಒತ್ತು ಕೊಡುವ ನಟಿ. ಆಗಾಗ ಬಗೆ ಬಗೆಯ ಲುಕ್‌ನಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಏರಿಸುತ್ತಿರುತ್ತಾರೆ. ಇದೀಗ ಆಸ್ಕರ್ ಪಾರ್ಟಿಯಲ್ಲಿ (Oscar Party) ಜಾಕ್ವೆಲಿನ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಜೊತೆ ರಕ್ಕಮ್ಮಳಾಗಿ ಹೆಜ್ಜೆ ಹಾಕಿ ಗಮನ ಸೆಳೆದ ಜಾಕ್ವೆಲಿನ್ ಬಾಲಿವುಡ್‌ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ತನ್ನ ನಯಾ ಲುಕ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದನ್ನೂ ಓದಿ:ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಕನ್ನಡದ ರಾ ರಾ ರಕ್ಕಮ್ಮ ಈಗ ಆಸ್ಕರ್ (Oscars 2023) ಅಂಗಳದಲ್ಲಿ ದರ್ಬಾರ್ ಶುರು ಮಾಡಿದ್ದಾರೆ. ಕಪ್ಪು ಬಣ್ಣ ಮಾಡ್ರನ್ ಡ್ರೆಸ್ ತೊಟ್ಟು ಜಾಕ್ವೆಲಿನ್ ಕಂಗೊಳಿಸಿದ್ದಾರೆ. ರಕ್ಕಮ್ಮಳ ನೋಟ ಮತ್ತು ಮೈ ಮಾಟಕ್ಕೆ ಪಡ್ಡೆ ಹೈಕ್ಳು ಬೋಲ್ಡ್ ಆಗಿದ್ದಾರೆ. ಈ ಸದ್ಯ ಜಾಕ್ವೆಲಿನ್ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ರಿಯಾಕ್ಷನ್

    ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ರಿಯಾಕ್ಷನ್

    ಸ್ಕರ್ (Oscars 2023) ಅಂಗಳದಲ್ಲಿ ಭಾರತದ 2 ಸಿನಿಮಾಗಳು ಸದ್ದು ಮಾಡಿದೆ. ಅದರಲ್ಲಿ `ಆರ್‌ಆರ್‌ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಸಿನಿಮಾಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

    `ದಿ ಎಲಿಫೆಂಟ್ ಎಸ್ಪರರ್ಸ್’ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಲಭಿಸಿದೆ. ತೆಲುಗಿನ `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಟ್ಟಿಸಿಕೊಂಡಿದೆ. ಆಸ್ಕರ್ (Oscar) ಗೆದ್ದು ಬೀಗುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

    `ನಾಟು ನಾಟು’ ಹಾಡು ಉಕ್ರೇನ್‌ನಲ್ಲಿ ಚಿತ್ರೀಕರಣವಾಗಿತ್ತು. ರಾಮ್ ಚರಣ್- ಜ್ಯೂ.ಎನ್‌ಟಿಆರ್ ಜಬರ್‌ದಸ್ತ್ ಆಗಿ ಕುಣಿದಿದ್ದರು. `ಆರ್‌ಆರ್‌ಆರ್’ ತಂಡ ಆಸ್ಕರ್ ಗೆದ್ದಿರುವುದ್ದಕ್ಕೆ ಮೆಗಾಸ್ಟಾರ್ ಸಂಭ್ರಮಿಸಿದ್ದಾರೆ. ಮಗನ ಸಿನಿಮಾ ಎಂದು ಖುಷಿಪಟ್ಟಿದ್ದಾರೆ. ನಾಟು ನಾಟು ಗೆದ್ದಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ರಾಜಮೌಳಿ, ಕೀರವಾಣಿ, ಚರಣ್, ಜ್ಯೂ.ಎನ್‌ಟಿಆರ್ ಸೇರಿದಂತೆ ಇಡೀ `ಆರ್‌ಆರ್‌ಆರ್’ ತಂಡಕ್ಕೆ ಅಭಿನಂದನೆಗಳು ಎಂದು ಚಿರಂಜೀವಿ ಶುಭಕೋರಿದ್ದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸತ್ಯ’ ಸೀರಿಯಲ್ ನಟ ಸೀರುಂಡೆ ರಘು

    ಆಸ್ಕರ್ ಗೆದ್ದಿರುವ ಸಂಭ್ರಮದಲ್ಲಿ ಮಗ ರಾಮ್ ಚರಣ್ (Ramcharan) ಕೂಡ ಪಾಲಿರೋದ್ರಲ್ಲಿ ನಮಗೆ ಗರ್ವವಿದೆ ಖುಷಿಯಿದೆ ಎಂದು ಮಾಧ್ಯಮಕ್ಕೆ ಮೆಗಾಸ್ಟಾರ್ ಚಿರಂಜೀವಿ ರಿಯಾಕ್ಟ್ ಮಾಡಿದ್ದಾರೆ.

  • ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್ (Bollywood) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಅವರು ಭಾರತೀಯ ಚಿತ್ರರಂಗವನ್ನು (India) ಪ್ರತಿನಿಧಿಸಿ ಆಸ್ಕರ್ ಅವಾರ್ಡ್‌ನಲ್ಲಿ ನಿರೂಪಣೆ ಮಾಡಿದ್ದರು. ʻನಾಟು ನಾಟುʼ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ, ಹಾಡಿನ ವಿಶೇಷತೆಯನ್ನು ವಿವರಿಸಿದರು. ಇದೀಗ ಆಸ್ಕರ್ ಸಮಾರಂಭದಲ್ಲಿ ನಟಿ ಬೋಲ್ಡ್ ಲುಕ್‌ನಿಂದ ಕಂಗೊಳಿಸಿದ್ದಾರೆ. ಈ ಫೋಟೋಶೂಟ್ ಸದ್ಯ ಸದ್ದು ಮಾಡ್ತಿದೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಒಂದ್ ಕಡೆ ನಿರೂಪಣೆಯ ವಿಚಾರವಾಗಿ ಗಮನ ಸೆಳೆದಿದ್ದರೆ, ಇನ್ನೊಂದ್ ಕಡೆ ತನ್ನ ಭಿನ್ನ ಡ್ರೆಸ್ ಸೆನ್ಸ್‌ನಿಂದ ನಟಿ ಹೈಲೈಟ್ ಆಗಿದ್ದಾರೆ.

    ಕ್ಲಾಸಿ ಕಪ್ಪು ಬಣ್ಣದ ಗೌನ್‌ನಲ್ಲಿ ದೀಪಿಕಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕಪ್ಪು ಬಣ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ, ಪಿಂಕ್ ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ಇನ್ನೂ ಆಸ್ಕರ್ ವೇದಿಕೆಯಲ್ಲಿ ಭಾರತವು ಎರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ. ಬೆಸ್ಟ್ ಕಿರುಚಿತ್ರ ವಿಭಾಗದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಮತ್ತು ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಸಾಂಗ್ ಪ್ರಶಸ್ತಿ ಬಾಚಿಕೊಂಡಿದೆ. ʻನಾಟು ನಾಟುʼ ಹಾಡಿಗೆ ಚಿತ್ರತಂಡ ಪ್ರಶಸ್ತಿ ಪಡೆಯುವಾಗ ದೀಪಿಕಾ ಭಾವುಕರಾಗಿದ್ದಾರೆ.

  • `ನಾಟು ನಾಟು’ ಆಸ್ಕರ್‌ ಗೆದ್ದಿದ್ದಕ್ಕೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

    `ನಾಟು ನಾಟು’ ಆಸ್ಕರ್‌ ಗೆದ್ದಿದ್ದಕ್ಕೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

    ಡೀ ವಿಶ್ವವೇ ಕಾಯುತ್ತಿದ್ದ ಆಸ್ಕರ್ 2023 ಸಮಾರಂಭಕ್ಕೆ ತೆರೆಬಿದ್ದಿದೆ. ಭಾರತವು 2 ಪ್ರಶಸ್ತಿಯನ್ನ ಬಾಚಿಕೊಂಡಿದೆ. ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu) ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ತನ್ನದಾಗಿಸಿಕೊಂಡಿದೆ. ಈ ವೇಳೆ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ. ಎಂ.ಎಂ ಕೀರವಾಣಿ ಅವರು ಪ್ರಶಸ್ತಿ ಪಡೆಯುವಾಗ ದೀಪಿಕಾ ಗಳಗಳನೆ ಅತ್ತಿದ್ದಾರೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಹಾಡಿಗೆ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದರು. ವಿಶ್ವದೆಲ್ಲೆಡೆ ಈ ಸಾಂಗ್ ಟ್ರೆಂಡ್ ಸೃಷ್ಟಿಸಿತ್ತು. ಈಗ ಆಸ್ಕರ್ ವೇದಿಕೆಯಲ್ಲೂ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದೆ.

    ಈ ವರ್ಷದ ಆಸ್ಕರ್ (Oscars 2023) ವೇದಿಕೆಯಲ್ಲಿ ದೀಪಿಕಾ ಪಡುಕೋಣೆ (Deepika Padukone) ನಿರೂಪಣೆ (Anchoring) ಮಾಡಿರೋದು ಮತ್ತೊಂದು ಹೆಮ್ಮೆಯ ಸಂಗತಿ. ವೇದಿಕೆಯಲ್ಲಿ ನಾಟು ನಾಟು ಸಾಂಗ್‌ನ ವಿಶೇಷತೆ ಬಗ್ಗೆ ನಟಿ ಹೇಳಿದರು. ಚಿತ್ರದ ಬಗ್ಗೆ ದೀಪಿಕಾ ಮೆಚ್ಚುಗೆ ಸೂಚಿದರು. ವಿನ್ನರ್ ಅನೌನ್ಸ್‌ಮೆಂಟ್ ಬಳಿಕ `ಆರ್‌ಆರ್‌ಆರ್’ (RRR) ಟೀಂ ವೇದಿಕೆ ಮೇಲೆ ಏರುತ್ತಿದ್ದಂತೆ ಕೆಳಗೆ ಕುಳಿತಿದ್ದ ದೀಪಿಕಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇಂಡಿಯಾ ಸಿನಿಮಾಗೆ ಸಂದ ಗೌರವಕ್ಕೆ ನಟಿ ಹೆಮ್ಮೆ ಪಟ್ಟಿದ್ದಾರೆ.

    `ಆರ್‌ಆರ್‌ಆರ್’ ತಂಡದಿಂದ ನಟಿ ದೂರ ಕುಳಿತಿದ್ದರು ಕೂಡ. ತಂಡಕ್ಕೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ. ಭಾರತಕ್ಕೆ ಎರಡು ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲಿ ನಟಿ ಭಾವುಕರಾಗಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.