Tag: orphans

  • ಎಂಜಿನಿಯರ್, ಡಿಸಿ ಆಗ್ತೀವಿ ಎಂದ ಬುಡಕಟ್ಟು ಜನಾಂಗದ ಅನಾಥ ಮಕ್ಕಳು – ಕೈ ಹಿಡಿದು ಪ್ರಶಂಸಿಸಿದ ಮೋದಿ

    ಎಂಜಿನಿಯರ್, ಡಿಸಿ ಆಗ್ತೀವಿ ಎಂದ ಬುಡಕಟ್ಟು ಜನಾಂಗದ ಅನಾಥ ಮಕ್ಕಳು – ಕೈ ಹಿಡಿದು ಪ್ರಶಂಸಿಸಿದ ಮೋದಿ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣಾ ಪ್ರಚಾರಕ್ಕಾಗಿ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಆರೋಪಿಸಿರುವ ಬೆನ್ನಲ್ಲೇ ಮೋದಿ ಗುಜರಾತ್‌ನಲ್ಲಿ (Gujarat) ಬುಡಕಟ್ಟು ಜನಾಂಗದ ಇಬ್ಬರು ಅನಾಥ ಬಾಲಕರನ್ನು (Orphans) ಭೇಟಿಯಾಗಿ, ಅವರನ್ನು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ.

    ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಚುನಾವಣಾ ರ‍್ಯಾಲಿಯಲ್ಲಿ ಇಬ್ಬರು ಬಾಲಕರ ಬಗ್ಗೆ ಪ್ರಧಾನಿ ಮಾತನಾಡಿರುವ ವೀಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಗೌರವಾನ್ವಿತ ಪ್ರಧಾನಿಯವರಿಂದ ಅವಿ ಮತ್ತು ಜೈ ಎಂಬ ಭವಿಷ್ಯದ ಕನಸಿನ ಕಥೆ ಕೇಳಿ ಎಂದು ಪಟೇಲ್ ಬರೆದಿದ್ದಾರೆ.

    ವೀಡಿಯೋದಲ್ಲೇನಿದೆ?
    ಮೋದಿ ಅವರು, ಬುಡಕಟ್ಟು ಜನಾಂಗದ 6 ವರ್ಷಗಳ ಹಿಂದೆ ತಮ್ಮ ಪೋಷಕರನ್ನು ಕಳೆದುಕೊಂಡ ಅವಿ ಹಾಗೂ ಜೈ ಹೆಸರಿನ ಬಾಲಕರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನೇತ್ರಂಗ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಬಾಲಕರ ವಿವರಗಳನ್ನು ಮೋದಿ ಹಂಚಿಕೊಂಡಿದ್ದಾರೆ.

    ನಮ್ಮ ಸರ್ಕಾರ ಕೈಗೊಂಡಿರುವ ಉಪಕ್ರಮಗಳಿಂದ ಇಬ್ಬರು ಅನಾಥ ಮಕ್ಕಳ ಜೀವನ ಇದೀಗ ಉತ್ತಮವಾಗಿದ್ದು, ಅವರನ್ನು ಭೇಟಿಯಾಗುವಲ್ಲಿ ಸ್ವಲ್ಪ ತಡವಾಗಿದೆ. ಈ ಇಬ್ಬರೂ ಬಾಲಕರು 6 ವರ್ಷಗಳ ಹಿಂದೆ ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರಿಬ್ಬರಿಗೆ ಇದೀಗ ಕೇವಲ 8 ಹಾಗೂ 6 ವರ್ಷ ವಯಸ್ಸು. ಅವರಿಬ್ಬರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದರೂ ಅವರಿಬ್ಬರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದರು ಎಂದು ನುಡಿದಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಹೆದರಬೇಡಿ, ಬೇಕಾದ್ರೆ ಅವರ ಮೇಲೆ ಬಾಂಬ್ ಹಾಕಿ: ʼಕೈʼ ನಾಯಕಿ ವಿವಾದಾತ್ಮಕ ಹೇಳಿಕೆ

    ಈ ಬಾಲಕರ ಬಗ್ಗೆ ನಾನು ತಿಳಿದುಕೊಂಡಾಗ ಅವರಿಗೆ ಸಹಾಯ ಮಾಡುವಂತೆ ನಮ್ಮ ಪಕ್ಷದ ಸದಸ್ಯ ಸಿಆರ್ ಪಾಟೀಲ್ ಅವರನ್ನು ಕೇಳಿದೆ. ಇದೀಗ ಈ ಬಾಲಕರಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಹಾಗೂ ಮನೆಯನ್ನೂ ನೀಡಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

    ಡಿಸಿ ಹಾಗೂ ಎಂಜಿನಿಯರ್ ಆಗಲು ಬಯಸುವ ಈ ಬಾಲಕರನ್ನು ನೋಡಿದಾಗ ನನ್ನ ಹೃದಯ ಹೆಮ್ಮೆಯಿಂದ ಉಬ್ಬುತ್ತಿದೆ. ತಮ್ಮ ಹೆತ್ತವರ ಅನುಪಸ್ಥಿತಿಯಲ್ಲೂ, ಸ್ವಂತ ಆಶ್ರಯವಿಲ್ಲದ ಸ್ಥಿತಿಯಲ್ಲೂ ಈ ಬಾಲಕರ ದೊಡ್ಡ ಕನಸಿನ ಬಗ್ಗೆ ಕೇಳಿ ನನಗೆ ಸ್ಪೂರ್ತಿಯೆನಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: `ಏರೋ ಇಂಡಿಯಾ 2023′ ಏರ್ ಶೋಗೆ ದಿನಾಂಕ ಫಿಕ್ಸ್

    Live Tv
    [brid partner=56869869 player=32851 video=960834 autoplay=true]

  • ಅನಾಥರಿಗೆ, ನಿರ್ಗತಿಕರಿಗೆ ಬಿಸಿಬಿಸಿ ಚಿತ್ರಾನ್ನ ಹಂಚಿದ ಮಂಗಳಮುಖಿಯರು

    ಅನಾಥರಿಗೆ, ನಿರ್ಗತಿಕರಿಗೆ ಬಿಸಿಬಿಸಿ ಚಿತ್ರಾನ್ನ ಹಂಚಿದ ಮಂಗಳಮುಖಿಯರು

    ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿಕೊಂಡು ಅನಾಥರು ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕನೇಯ ವಾರ್ಡಿನ ಮಾಜಿ ಸದಸ್ಯೆ ಪರ್ವೀನ್ ಬಾನು ನೇತೃತ್ವದಲ್ಲಿ ಮಂಗಳಮುಖಿಯರು ಸೇರಿ ಈ ಕೆಲಸ ಮಾಡುತ್ತಿದ್ದಾರೆ. ಪಾದಾಚಾರಿ ರಸ್ತೆ, ಬಸ್ ಹಾಗೂ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಹಸಿವಿನಿಂದ ಮಲಗಿಕೊಂಡಿದ್ದ ಅನಾಥರು, ನಿರ್ಗತಿಕರು ಹಾಗೂ ಬಸ್‍ಗಳಿಲ್ಲದೇ ಅಲ್ಲಿಯೇ ಠೀಕಾಣಿ ಹೂಡಿದ್ದ ದೂರದೂರಿನ ಪ್ರಯಾಣಿಕರಿಗೂ ಬಿಸಿಬಿಸಿ ಚಿತ್ರಾನ್ನ ಪ್ಯಾಕೇಟ್ ನೀಡುವ ಮೂಲಕ ಅವರ ಹಸಿವಿನ ಚೀಲ ತುಂಬಿಸಲು ಮುಂದಾಗಿದ್ದಾರೆ.

    ಸಾಮಾನ್ಯವಾಗಿ ಸಂಘ, ಸಂಸ್ಥೆಗಳು, ಎನ್‍ಜಿಓಗಳು ಹಾಗೂ ರಾಜಕಾರಣಿಗಳ ಹಿಂಬಾಲಕರು ಅಥವಾ ಧನಿಕರು ಊಟದ ಪ್ಯಾಕೇಟ್ ಹಂಚಿಕೆ ಮಾಡೋದನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಆದರೆ ಗಣಿನಗರಿಯ ಮಂಗಳಮುಖಿಯರು ಇಂತಹ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನಾರ್ಹ.

  • ಅನಾಥ ಮಕ್ಕಳಿಗೆ ಉಚಿತ ಹೇರ್ ಕಟಿಂಗ್, ಹಾಸಿಗೆ – ಮಾದರಿಯಾದ ದಚ್ಚು ಅಭಿಮಾನಿ

    ಅನಾಥ ಮಕ್ಕಳಿಗೆ ಉಚಿತ ಹೇರ್ ಕಟಿಂಗ್, ಹಾಸಿಗೆ – ಮಾದರಿಯಾದ ದಚ್ಚು ಅಭಿಮಾನಿ

    – ಅಂಧ್ರದವರಾದರೂ ದರ್ಶನ್ ಎಂದರೆ ವಿಶೇಷ ಪ್ರೀತಿ

    ಮಂಡ್ಯ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ 43 ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದು, ಅವರ ಅಭಿಮಾನಿ ಓಂಕಾರ್ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇತರೆ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

    ತಂದೆ, ತಾಯಿಯಿಂದ ದೂರಾಗಿ ನಗರದ ಹೊರವಲಯದ ವಿಕಸನ ಸಂಸ್ಥೆಯ ಆಶ್ರಯದಲ್ಲಿರುವ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ನ ಜನ್ಮದಿನವನ್ನು ಆಚರಿಸಿದರು. ಇದೇ ವೇಳೆ 30ಕ್ಕೂ ಹೆಚ್ಚು ಮಕ್ಕಳಿಗೆ ಹೊದಿಕೆಯನ್ನು ವಿತರಿಸಿದರು. ಅವರಿಂದಲೇ ಕೇಕ್ ಕತ್ತರಿಸಿ ದರ್ಶನ್ ಅವರಿಗೆ ಒಳ್ಳೆಯದಾಗಲೆಂದು ಹಾರೈಸಲಾಯಿತು. ಜನ್ಮದಿನದ ಅಂಗವಾಗಿ ಮಕ್ಕಳಿಗೆ ಬಿರಿಯಾನಿ ಊಟ ಮಾಡಿಸಿದರು.

    ಮೂಲತಃ ಆಂಧ್ರಪ್ರದೇಶದ ಓಂಕಾರ್, ಹಲವು ವರ್ಷದಿಂದ ಮಂಡ್ಯ ನಗರದಲ್ಲಿ ಸಲೂನ್ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ದರ್ಶನ್ ಜನ್ಮದಿವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವೇಳೆ ಮಾತನಾಡಿದ ಓಂಕಾರ್, ದರ್ಶನ್ ಅವರ ವ್ಯಕ್ತಿತ್ವ ಮತ್ತು ಸರಳತೆ ನನಗೆ ಇಷ್ಟ. ಅವರ ಗುಣವನ್ನು ಅನುಸರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ನನ್ನಿಂದಾಗುವ ವಸ್ತುಗಳನ್ನು ವಿತರಿಸುತ್ತೇನೆ. ಆದರೆ ಈವರೆಗೂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿರುವುದು ಬೇಸರದ ವಿಷಯ ಎಂದರು.

  • ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ತಾವು ಪ್ರೀತಿಸಿದ ಹುಡುಗಿ ಮೇಘಾ ಜೊತೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ರಂದು ಹಸೆಮಣೆ ಏರಲಿದ್ದಾರೆ.

    ಮದುವೆ ಸಂಭ್ರಮದಲ್ಲಿರುವ ಚೇತನ್ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್, ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸಿಕೊಳ್ಳಲಿರುವ ಚೇತನ್ ಈಗ ಪ್ರೀವೆಡ್ಡಿಂಗ್ ಫೋಟೋ ಕೂಡ ಟ್ರೆಂಡ್ ಆಗಿದೆ.

    ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆದಿದೆ.

  • ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

    ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

    ಚಿಕ್ಕಬಳ್ಳಾಪುರ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಮೃತ ಪಟ್ಟಿದ್ದು, ಎರಡು ಮಕ್ಕಳು ತಬ್ಬಲಿಗಳಾದಂತಹ ಘಟನೆ ಚಿಕ್ಕಬಳ್ಳಾಪುರ ಹೊರಲವಯದ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ತಾಯಿಯನ್ನು ಸರಸ್ವತಿ (24) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 3 ವರ್ಷದ ಮಗಳು ದಿವ್ಯಾ ಹಾಗೂ ಒಂದು ವರ್ಷದ ಮಗ ಶಿವಕುಮಾರ್ ಮತ್ತು ಪತಿ ತಾಯಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಅಕ್ರಂದನ ಮುಗಿಲು ಮುಟ್ಟಿದೆ.

    ಆಂಧ್ರದ ಆಧೋನಿಯಿಂದ ಕೆಲಸಕ್ಕೆ ಎಂದು ತಾಯಪ್ಪ ಹಾಗೂ ಆಕೆಯ ಮಡದಿ ಸರಸ್ವತಿ ಜೊತೆಗೆ ಮಕ್ಕಳು ಸೇರಿ ತನ್ನದೇ ಎಪಿ 21 ಸಿ ಎಚ್ 1855 ಬೈಕಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕೆ.ಎ 40 ಎಂ 2854 ನಂಬರಿನ ಸ್ವಿಫ್ಟ್ ಡಿಝೈರ್ ಕಾರು ದಿಢೀರ್ ಹೈವೆಗೆ ಎಂಟ್ರಿ ಕೊಟ್ಟು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಸರಸ್ವತಿ ಮೃತಪಟ್ಟಿದ್ದಾರೆ.

    ಅದೃಷ್ಟವಶಾತ್ ಬೈಕಿನಲ್ಲಿದ್ದ ತಾಯಪ್ಪ ಹಾಗೂ ಇಬ್ಬರು ಮಕ್ಕಳು ಸಣ್ಣಪುಟ್ಟ ತರುಚಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಸೇರಿದ್ದಾರೆ. ಆದರೆ ಅತ್ತ ಆಸ್ಪತ್ರೆಯಲ್ಲಿ ತಾಯಿಯಿಲ್ಲದೆ ತಬ್ಬಲಿಗಳಾದ ಇಬ್ಬರು ಮಕ್ಕಳನ್ನು ಸಂತೈಸಲಾಗದ ತಾಯಪ್ಪ ಇನ್ನಿಲ್ಲದ ಪರಿತಪಿಸುವಂತಾಗಿದ್ದು ಇದು ನೋಡುಗರ ಕರಳು ಕಿವುಚವಂತಾಗಿದೆ. ಆದರಲ್ಲೂ ಮಗ ಶಿವಕುಮಾರ್ ಚಿಕ್ಕವನಿದ್ದು, ಬಾಟಲಿ ಹಾಲು ಕುಡಿಯದೇ ತಾಯಿ ಎದೆಹಾಲಿಗಾಗಿ ಅಳುತ್ತಿದ್ದನ್ನು ನೋಡಿ ಸ್ಥಳೀಯರು ಕೂಡ ಕಂಬನಿ ಮಿಡಿದಿದ್ದಾರೆ.

    ಅಪಘಾತ ಸಂಬಂಧ ಕಾರು ಹಾಗೂ ಬೈಕ್ ಸಮೇತ ಕಾರು ಚಾಲಕನನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಕಾರು ಚಾಲಕ ಮಾಡಿದ ಆ ಒಂದು ಕ್ಷಣದ ಯಡವಟ್ಟಿನಿಂದ ಇಡೀ ಜೀವನವೆಲ್ಲಾ ತಾಯಿಯಿಲ್ಲದೆ ಇಬ್ಬರು ಮಕ್ಕಳು ತಬ್ಬಲಿಗಳಾಗಿ ಬಾಳುವಂತಯಿತಲ್ಲಾ ಅನ್ನೋದೆ ದುರಂತ.

  • ಮನೆಯಲ್ಲಿ ಸಿಕ್ಕ 96,500 ರೂ. ಹಳೇ ನೋಟ್ ಬದಲಾವಣೆಗೆ ಮೋದಿಗೆ ಪತ್ರ ಬರೆದ ಅನಾಥ ಮಕ್ಕಳು

    ಮನೆಯಲ್ಲಿ ಸಿಕ್ಕ 96,500 ರೂ. ಹಳೇ ನೋಟ್ ಬದಲಾವಣೆಗೆ ಮೋದಿಗೆ ಪತ್ರ ಬರೆದ ಅನಾಥ ಮಕ್ಕಳು

    ಜೈಪುರ: ನವೆಂಬರ್ 8 ರಂದು ಕೇಂದ್ರ ಸರ್ಕಾರ ನೋಟ್‍ಬ್ಯಾನ್ ನಿರ್ಧಾರವನ್ನು ಘೋಷಿಸಿದ ನಂತರ ಹಳೆಯ 500 ಹಾಗೂ 1000 ರೂ. ನೋಟ್‍ಗಳನ್ನು ಬದಲಾಯಿಸಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶ ಈಗಾಗಲೇ ಮುಗಿದಿದೆ. ಆದ್ರೆ ಇಲ್ಲಿಬ್ಬರು ಅನಾಥ ಮಕ್ಕಳು ತಮ್ಮ ಮೃತ ತಾಯಿ ಮನೆಯಲ್ಲಿಟ್ಟಿದ್ದ 96 ಸಾವಿರದ 500 ರೂ. ಮೊತ್ತದ ಹಳೇ ನೋಟ್‍ಗಳನ್ನು ಬದಲಾಯಿಸಿಕೊಳ್ಳಬೇಕಿದ್ದು ಈಗ ಕಂಗಾಲಾಗಿದ್ದಾರೆ.

    ರಾಜಸ್ಥಾನದ ಕೋಟಾದಲ್ಲಿ 16 ವರ್ಷದ ಹುಡುಗ ಹಾಗೂ ಆತನ 12ರ ವಯಸ್ಸಿನ ತಂಗಿ ಈಗ ನೋಟ್ ಬದಲಾವಣೆ ಮಾಡಿಕೊಳ್ಳೋದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ನೋಟ್ ಬಲದಾವಣೆಗೆ ನೀಡಲಾಗಿದ್ದ ಗಡುವು ಈಗಾಗಲೇ ಮುಗಿದಿರೋ ಕಾರಣ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ನೋಟ್ ಬದಲಾವಣೆಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿದ್ದಾರೆ.

    ಇದೇ ತಿಂಗಳ ಆರಂಭದಲ್ಲಿ ಇಲ್ಲಿನ ಸರವಾಡ ಗ್ರಾಮದಲ್ಲಿ ಈ ಮಕ್ಕಳ ತಾಯಿ ವಾಸವಿದ್ದ ಮನೆಯೊಂದರಲ್ಲಿ ಪೊಲೀಸರು ಸರ್ವೇ ಮಾಡಿದಾಗ ಹಳೇ ನೋಟ್‍ಗಳು ಇದ್ದಿದ್ದು ಪತ್ತೆಯಾಗಿದೆ. ಈ ನೋಟ್‍ಗಳನ್ನು ಬದಲಾಯಿಸಿಕೊಡಲು ಆರ್‍ಬಿಐ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಮಕ್ಕಳು ಈಗ ಪ್ರಧಾನಿ ಮೋದಿಗೆ ಪತ್ರ ಬರದಿದ್ದಾರೆ.

    96,500 ರೂಪಾಯಿ ಮಕ್ಕಳ ತಾಯಿ ತನ್ನ ಜೀವಿತಾವಧಿಯಲ್ಲಿ ಕೂಡಿಟ್ಟಿದ್ದ ಹಣ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಗುರುಬಕ್ಸಾನಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಹಣವನ್ನು ಹುಡುಗ ತನ್ನ ತಂಗಿಯ ಹೆಸರಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಮಾಡಲು ಬಯಸಿದ್ದಾನೆ. ತನ್ನ ಕೈಯ್ಯಾರೆ ಬರದಿರೋ ಪತ್ರ ಈಗಾಗಲೇ ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಮಕ್ಕಳ ತಾಯಿ ಪೂಜಾ ಬಂಜಾರಾ ದಿನಗೂಲಿ ನೌಕರರಾಗಿದ್ದು, 2013ರಲ್ಲಿ ಅವರನ್ನು ಕೊಲೆ ಮಾಡಲಾಗಿತ್ತು. ಇನ್ನು ಮಕ್ಕಳ ತಂದೆ ರಾಜು ಬಂಜಾರಾ ಅದ್ಕಕೂ ಮೊದಲೇ ಮೃತಪಟ್ಟಿದ್ದರು. ತಾಯಿಯ ಸಾವಿನ ನಂತರ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದಾರೆ. ಇವರನ್ನು ಕೌನ್ಸೆಲಿಂಗ್ ಮಾಡಿದಾಗ, ಆರ್‍ಕೆ ಪುರಂ ಹಾಗೂ ಸರವಾಡಾ ಗ್ರಾಮದಲ್ಲಿ ಮನೆ ಇರುವುದಾಗಿ ತಿಳಿಸಿದ್ರು. ಇದಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಪೊಲೀಸರು ಬೀಗ ಹಕಲಾಗಿದ್ದ ಸರವಾಡಾ ಮನೆಯಲ್ಲಿ ಸರ್ವೇ ಮಾಡಿದಾಗ ಒಂದು ಬಾಕ್ಸ್‍ನಲ್ಲಿ ಹಳೇ 500 ಹಾಗೂ 1000 ರೂ ನೋಟ್‍ಗಳಲ್ಲಿ 96,500 ರೂ. ಹಣ ಜೊತೆಗೆ ಕೆಲವು ಚಿನ್ನಾಭರಣಗಳು ಪತ್ತೆಯಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಹಳೇ ನೋಟ್‍ಗಳ ಬದಲಾವಣೆಗೆ ಸಹಕರಿಸುವಂತೆ ಮಾರ್ಚ್ 17ರಂದು ಮ್ಕಕಳ ಕಲ್ಯಾಣ ಸಮಿತಿ ಆರ್‍ಬಿಐಗೆ ಪತ್ರ ಬರೆದಿತ್ತು. ಆದ್ರೆ ಮಾರ್ಚ್ 22ರಂದು ಆರ್‍ಬಿಐ ಇ-ಮೇಲ್ ಮಾಡಿ ನೋಟ್ ಬದಲಾವಣೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳ ಬಳಿಯಿರುವ ಒಟ್ಟು ಹಣದಲ್ಲಿ 500 ಹಾಗೂ 1000 ರೂ. ಮುಖಬೆಲೆಯ 171 ನೋಟ್‍ಗಳಿವೆ ಎಂದು ಹರೀಶ್ ತಿಳಿಸಿದ್ದಾರೆ.

    ನವೆಂಬರ್ 8 ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ನೋಟ್‍ಗಳ ಮೇಲೆ ನಿಷೇಧ ಹೇರಿ, ಬ್ಯಾಂಕ್‍ಗಳಲ್ಲಿ ಹಳೇ ನೋಟ್ ಬದಲಾವಣೆ ಮಾಡಿಕೊಳ್ಳಲು ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಇನ್ನು ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ವಿದೇಶದಲಿದ್ದ ಭಾರತೀಯರು ಆರ್‍ಬಿಐ ಕಚೇರಿಗಳಲ್ಲಿ ಮಾರ್ಚ್ 31ರವರೆಗೆ ನೋಟ್ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು.