Tag: Ornaments

  • ಬಾಗಿಲು ಮುರಿದು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದವನ ಬಂಧನ

    ಬಾಗಿಲು ಮುರಿದು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದವನ ಬಂಧನ

    ರಾಮನಗರ: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೋಲೂರು ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು (Ornaments) ವಶಪಡಿಸಿಕೊಳ್ಳಲಾಗಿದೆ.

    ಕಳೆದ ಜೂ.25ರಂದು ಮಾಗಡಿ (Magadi) ತಾಲೂಕಿನ ಬಿಟ್ಟಸಂದ್ರ ಗ್ರಾಮದ ಮಂಜುನಾಥ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಆಗಿತ್ತು. ಈ ವೇಳೆ ಕಳ್ಳರು 6ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಮಂಜುನಾಥ್ ಸೋಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ಸಿಟ್ಟಿನಿಂದ ಮಾವನನ್ನು ಗೋಡೆಗೆ ತಳ್ಳಿ ಕೊಂದ ಅಳಿಯ!

    ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿ ರಘು (37) ಎಂಬಾತನನ್ನ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

    ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

    ಭುವನೇಶ್ವರ: ಕಳ್ಳನೊಬ್ಬ ದೇಗುಲದಿಂದ ಆಭರಣ (Ornaments) ಗಳನ್ನು ಕದ್ದು ಬರೋಬ್ಬರಿ 9 ವರ್ಷಗಳ ಬಳಿಕ ಅದನ್ನು ವಾಪಸ್ ಮಾಡಿದ ಪ್ರಸಂಗವೊಂದು ಭುವನೇಶ್ವರದ ಹೊರವಲಯದಲ್ಲಿರುವ ಗೋಪಿನಾಥಪುರದಲ್ಲಿ ನಡೆದಿದೆ.

    ಹೌದು. ಕಳ್ಳನೊಬ್ಬ ದೇವಸ್ಥಾನದಿಂದ ಕೆಲವು ಆಭರಣಗಳನ್ನು ಕದಿದ್ದನು. ಇದಾದ 9 ವರ್ಷಗಳ ನಂತರ ಇದೀಗ ಆತ ಕದ್ದ ಮಾಲನ್ನು ಹಿಂದಿರುಗಿಸಿದ್ದಾನೆ. ಈ ಘಟನೆಯ ನಂತರ ಇದೀಗ ದೇಗುಲದ ಸ್ಥಳೀಯ ನಿವಾಸಿಗಳಲ್ಲಿ ದೇವರ ಮೇಲಿದ್ದ ಭಕ್ತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಕಳ್ಳನು ದೇವಾಲಯದ ಅರ್ಚಕನಿಗೆ 200 ರೂಪಾಯಿಯ ದಕ್ಷಿಣೆ (ದೇಣಿಗೆ) ಮತ್ತು ಮಾಡಿದ ತಪ್ಪಿಗೆ ದಂಡವಾಗಿ 100 ರೂಪಾಯಿಯನ್ನು ಸಹ ಬಿಟ್ಟು ಹೋಗಿದ್ದಾನೆ.

    ವರದಿಗಳ ಪ್ರಕಾರ, 2014 ರಲ್ಲಿ ಗೋಪಿನಾಥಪುರ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಯಜ್ಞದ ವೇಳೆ ಅರ್ಚಕರು ಸಮೀಪದ ದೇವಸ್ಥಾನಕ್ಕೆ ಹೋಗಿದ್ದಾಗ  ಕಳ್ಳರು ರಾಧಾ-ಕೃಷ್ಣರ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು ಎಂದು ಸ್ಥಳೀಯ ನಿವಾಸಿ ಶಶಿಭೂಷಣ ಮೊಹಾಂತಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದು ಹತ್ಯೆ

    ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಇತ್ತ ಎಲ್ಲಾ ಕಡೆ ಹುಡುಕಿದರೂ ಗ್ರಾಮಸ್ಥರಿಗೆ ಕಳ್ಳನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೆ ಕಳ್ಳತನವಾದ ಆಭರಣಗಳು ಕೂಡ ಪತ್ತೆಯಾಗಲಿಲ್ಲ. ಹೀಗಾಗಿ ಕಳವಾದ ಸೊತ್ತನ್ನು ಮರಳಿ ಪಡೆದೇ ಪಡೆಯುತ್ತೇವೆ ಎಂದು ಗ್ರಾಮದ ಜನ ನಂಬಿದ್ದರು. ಇದೀಗ ದೇಗುಲದ ಆಭರಣಗಳನ್ನು ವಾಪಸ್ ಪಡೆದಿರುವುದು ಪವಾಡ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

     

  • ದೆಹಲಿ ಗಲಭೆ – ಅತ್ತ ಪತ್ನಿಯ ಒಡವೆ ಕದ್ದೊಯ್ದರು, ಇತ್ತ 15 ಲಕ್ಷ ಖರ್ಚು ಮಾಡಿದ್ದ ಮನೆಗೇ ಬೆಂಕಿ ಇಟ್ಟರು

    ದೆಹಲಿ ಗಲಭೆ – ಅತ್ತ ಪತ್ನಿಯ ಒಡವೆ ಕದ್ದೊಯ್ದರು, ಇತ್ತ 15 ಲಕ್ಷ ಖರ್ಚು ಮಾಡಿದ್ದ ಮನೆಗೇ ಬೆಂಕಿ ಇಟ್ಟರು

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಬಗೆದಷ್ಟು ಕಣ್ಣೀರ ಕಥೆಗಳು ಹೊರ ಬರುತ್ತಿವೆ. ಹಿಂಸಚಾರದ ವೇಳೆ ನಡೆದ ಅಗ್ನಿ ದುರಂತದಿಂದ ಹಲವು ಕುಟುಂಬಗಳು ಅಕ್ಷರ ಸಹ ಬೀದಿಗೆ ಬಂದಿದೆ. ಮನೆ ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದ ಶಿವ ವಿಹಾರ್ ನಗರದ ಅರುಣ್ ಮಿಶ್ರಾ ಕಥೆ ಇದಕ್ಕೆ ಹೊರತಾಗಿಲ್ಲ.

    ಉತ್ತರ ಪ್ರದೇಶ ಮೂಲದ ಅರುಣ್ ಮಿಶ್ರಾ ಕಳೆದ 14 ವರ್ಷಗಳಿಂದ ಈಶಾನ್ಯ ದೆಹಲಿ ಶಿವ್ ವಿಹಾರ್ ನಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಬೆಂಕಿ ಅನಾಹುತದಲ್ಲಿ ಅರುಣ್ ಮಿಶ್ರಾರ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೇ ಇತ್ತೀಚೆಗೆ ಅರುಣ್ ಅವರ ಮದುವೆಯಾಗಿತ್ತು, ಆದರೆ ಬೆಂಕಿ ಅನಾಹುತದ ಮೊದಲು ಅರಣ್ ಅವರ ಪತ್ನಿಯ ಒಡೆವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

    ಗಲಭೆ ವೇಳೆ ಪ್ರಾಣ ಭೀತಿಯಲ್ಲಿ ಮನೆಗೆ ಬೀಗ ಹಾಕಿ ಶಿವ ವಿಹಾರ್ ನಿಂದ ಸಂಬಂಧಿಕರ ಮನೆಗೆ ಅರುಣ್ ಕುಟುಂಬ ತೆರಳಿ ನೆರವು ಪಡೆದುಕೊಂಡಿತ್ತು. ಗಲಭೆಯ ಮೊದಲ ದಿನ ಅರುಣ್ ಮನೆಯನ್ನು ಸಂಪೂರ್ಣ ದೋಚಲಾಗಿದೆ. ಮನೆಗೆ ಹಾಕಿದ್ದ ಬೀಗ ಒಡೆದು ಒಳ ನುಗ್ಗಿರುವ ದುಷ್ಕರ್ಮಿಗಳು ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ದೋಚಿದ್ದಾರೆ. ಅರುಣ್ ಮಾರನೇ ದಿನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿದ್ದು ಬೆಳಕಿಗೆ ಬಂದಿದ್ದು, ಒಡವೆ ಹೋದರೆ ಹೋಗಲಿ ಮನೆ ಉಳಿತಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ವಾಪಸ್ ಬರುವ ಪ್ಲಾನ್ ಮಾಡಿಕೊಂಡು ಮತ್ತೆ ಸಂಬಂಧಿಕರ ಮನೆಗೆ ಅರುಣ್ ತೆರಳಿದ್ದರು.

    ಎರಡನೇ ದಿನದ ಘರ್ಷಣೆ ವೇಳೆ ದುಷ್ಕರ್ಮಿಗಳು ಅರುಣ್ ಮನೆಗೆ ಬೆಂಕಿ ಹಚ್ಚಿದ್ದು, ಎರಡು ಅಂತಸ್ತಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಇತ್ತೀಚೆಗೆ ಅರುಣ್ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ತಮ್ಮ ಹಳೆ ಮನೆಯನ್ನು ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದರು. ಘಟನೆಯಲ್ಲಿ ಪತ್ನಿಯ ಒಡವೆ ಮತ್ತು ಮನೆ ಎರಡನ್ನೂ ಕಳೆದುಕೊಂಡು ಅರುಣ್ ಕುಟುಂಬ ಈಗ ಬೀದಿಗೆ ಬಂದಿದ್ದು ಕಣ್ಣಿರಿಡುತ್ತಿದ್ದಾರೆ.

  • ಬೆಳ್ಳಿ ಒಡವೆಗಾಗಿ ಪಕ್ಕದ ಮನೆಯ ಒಂದೂವರೆ ವರ್ಷದ ಮಗುವನ್ನು ಕೊಲೆಗೈದ ಪಾಪಿ ಮಹಿಳೆ!

    ಬೆಳ್ಳಿ ಒಡವೆಗಾಗಿ ಪಕ್ಕದ ಮನೆಯ ಒಂದೂವರೆ ವರ್ಷದ ಮಗುವನ್ನು ಕೊಲೆಗೈದ ಪಾಪಿ ಮಹಿಳೆ!

    ಕೊಪ್ಪಳ: ಬೆಳ್ಳಿಯ ಒಡವೆಗಾಗಿ ಪಕ್ಕದ ಮನೆ ಮಹಿಳೆಯೊಬ್ಬಳು ಮಗುವನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರಿನ ಯಡಿಯಾಪುರದಲ್ಲಿ ನಡೆದಿದೆ.

    ಒಂದೂವರೆ ವರ್ಷದ ಪ್ರತಿಭಾ ಕೊಲೆಯಾಗಿರುವ ಮಗು. ಅಂಬವ್ವ ಕೊಲೆ ಮಾಡಿರುವ ಆರೋಪಿ. ಪ್ರತಿಭಾ ಒಡವೆಗಳನ್ನು ಹಾಕಿಕೊಂಡು ಸಂಜೆ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದಳು. ಇದನ್ನ ಗಮನಿಸಿದ ಅಂಬವ್ವ ಆಕೆಯನ್ನು ಮನೆಗೆ ಕರೆದೊಯ್ದು ಒಡವೆಗಳನ್ನು ಬಿಚ್ಚಿಕೊಂಡು ಮಗುವನ್ನು ಕೊಂದಿದ್ದಾಳೆ.

    ಪ್ರತಿಭಾ ಕಾಣೆಯಾಗಿದ್ದ ಕಾರಣ ತಂದೆ ಶಿವಲಿಂಗ ಹಾಗೂ ಕುಟುಂಬದವರು ಅಕ್ಕಪಕ್ಕದ ಮನೆಯಲೆಲ್ಲಾ ಹುಡುಕಾಡಿದ್ದರು. ನಂತರ ಅಂಬವ್ವ ವಿಚಿತ್ರವಾಗಿ ವರ್ತಿಸುತ್ತಿದ್ದ ಕಾರಣ ಆಕೆಯ ಮೇಲೆ ಅನುಮಾನಗೊಂಡು ಮನೆಯೊಳಗೆ ಹೋಗಿ ನೋಡಿದಾಗ ಮಗುವಿನ ಮೃತದೇಹವನ್ನು ಚೀಲದಲ್ಲಿ ಕಟ್ಟಿದ್ದಳು.

    ಸುಮಾರು 4,000 ರೂ. ಬೆಲೆ ಬಾಳುವ ಒಡವೆಗಳನ್ನು ದೋಚಿ, ಅಂಬವ್ವ ಮಗುವಿಗೆ ಉರುಳು ಹಾಕಿ ಕೊಂದಿದ್ದಾಳೆ ಎಂದು ಹೇಳಲಾಗಿದೆ. ಸದ್ಯ ಆರೋಪಿ ಅಂಬವ್ವಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.