Tag: Orissa

  • ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

    ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

    ಕಾರವಾರ: ಓರಿಸ್ಸಾ (Orissa) ಮೂಲದ ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ (Cylinder) ಸ್ಫೋಟಗೊಂಡು ಐದಕ್ಕೂ ಅಧಿಕ ಕಾರ್ಮಿಕರ ಶೆಡ್‍ಗಳು ಸುಟ್ಟು ಭಸ್ಮವಾದ ಘಟನೆ ಕಾರವಾರದ (Karwar) ಮುದಗಾದ ನೌಕಾ ನೆಲೆಯ (Navy) ವ್ಯಾಪ್ತಿಯಲ್ಲಿರುವ ಲೇಬರ್ ಕಾಲೋನಿಯಲ್ಲಿ ನಡೆದಿದೆ.

    ಲೇಬರ್ ಕಾಲೋನಿಯಲ್ಲಿ ಶೆಡ್ ಒಂದರಲ್ಲಿ ಇರಿಸಿದ್ದು, ಒಂದು ದೊಡ್ಡ ಸಿಲಿಂಡರ್, ಎರಡು ಸಣ್ಣ ಸಿಲಿಂಡರ್‌ಗಳು ಸ್ಪೋಟಗೊಂಡಿದೆ. ಮಾಹಿತಿ ಪ್ರಕಾರ ಸಿಲೆಂಡರ್‌ನ ವಾಲ್‍ನಲ್ಲಿ ಲೀಕೇಜ್ ಆದ ಕಾರಣ ಈ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಐದು ಸೆಡ್‍ಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಹಾನಿಯಾಗಿದ್ದು, ಎಲ್ಲಾ ವಸ್ತುಗಳು ಸುಟ್ಟುಹೋಗಿದ್ದು, 25 ಮೊಬೈಲ್‍ಗಳು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

    ಅದೃಷ್ಟವಶಾತ್ ಶೆಡ್‍ನಲ್ಲಿ ಇದ್ದ ಜನರು ಬೆಂಕಿ ಕಾಣಿಸುತಿದ್ದಂತೆ ಹೊರಬಂದಿದ್ದು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಡ್ವಾಣಿ ಭೇಟಿಯಾದ ಪೇಜಾವರಶ್ರೀ- ರಾಮಮಂದಿರ ಹೋರಾಟ ದಿನಗಳ ಮೆಲುಕು

    Live Tv
    [brid partner=56869869 player=32851 video=960834 autoplay=true]

  • ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಲಾಗುತ್ತದೆ. ಅದೇ ರೀತಿ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಇದೇ ಮಾದರಿಯಲ್ಲಿ ಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‍ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರು ಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

    ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ ನಿರ್ಮಾಣ:
    ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಾಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಂದಿ ಬೆಟ್ಟಕ್ಕೆ ರೋಪ್ ವೇ: ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ನಿರ್ಧಾರ

    ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂದಾಜು 100.00ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ THE INDIA EXPO-2023 ಬೃಹತ್ ಮೇಳವನ್ನು ಆಯೋಜಿಸಲು ಕಾರ್ಯೋನ್ಮಖರಾಗುವಂತೆ ಯೋಗೇಶ್ವರ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತರ್ ರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸಬೇಕು ಎಂದರು.

    ಇದೇ ವೇಳೆ ONE IRIS ಕಂಪನಿಯವರು ಪ್ರವಾಸೋದ್ಯಮ ಮೇಳದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

  • ಪ್ಯಾಲೇಸ್ ಗ್ರೌಂಡ್ ಬಳಿ 3 ಕಿ.ಮೀ ಕ್ಯೂ ನಿಂತ ವಲಸೆ ಕಾರ್ಮಿಕರು

    ಪ್ಯಾಲೇಸ್ ಗ್ರೌಂಡ್ ಬಳಿ 3 ಕಿ.ಮೀ ಕ್ಯೂ ನಿಂತ ವಲಸೆ ಕಾರ್ಮಿಕರು

    ಬೆಂಗಳೂರು: ಸರ್ಕಾರದಿಂದ ಮತ್ತೊಂದು ಎಡವಟ್ಟು ಆಗಿದ್ದು, ಸೇವಾಸಿಂಧುನಲ್ಲಿ ತವರು ರಾಜ್ಯಗಳಿಗೆ ಹೋಗಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಒಂದೇ ದಿನ 6 ಸಾವಿರ ಮಂದಿಗೆ ಸಮ್ಮತಿಸಲಾಗಿದೆ. ಅರಮನೆ ಮೈದಾನದ ಬಳಿ ಸುಮಾರು 6 ಸಾವಿರ ಮಂದಿ ಜಮಾಯಿಸಿದ್ದಾರೆ.

    ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಇಲ್ಲ, ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಇಂದು ಎರಡು ರೈಲುಗಳು ಒರಿಸ್ಸಾ ಮತ್ತು ಮಣಿಪುರಕ್ಕೆ ಹೊರಡಲಿವೆ. ಚಿಕ್ಕಬಾಣವಾರದಿಂದ ಮಧ್ಯಾಹ್ನದ ನಂತರ ಹೊರಡಲಿವೆ. 2,800 ಜನಕ್ಕಷ್ಟೇ ,ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮೇಖ್ರಿ ಸರ್ಕಲ್ ನಿಂದ ಕಾವೇರಿ ಥಿಯೇಟರ್ ವರೆಗೂ ಜನಸಾಗರವೇ ನೆರೆದಿದ್ದು, ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಪ್ಯಾಲೇಸ್ ಗ್ರೌಂಡ್ ಬಳಿ ಹೊರ ರಾಜ್ಯದ ನಿವಾಸಿಗಳ ದಂಡು ನೆರೆದಿದ್ದು, ಸುಮಾರು ಮೂರು ಕಿಲೋಮೀಟರ್ ನಷ್ಟು ಜನ ಕ್ಯೂ ನಿಂತಿದ್ದಾರೆ. ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವ, ಡಿಸಿಪಿ ರೋಹಿಣಿ ಕಟೋಚ್ ಹಾಗೂ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿದ್ದಾರೆ.

  • ಶಿವರಾತ್ರಿ ವಿಶೇಷ – ಪೆನ್ಸಿಲ್ ನಿಬ್ಬಿನಲ್ಲಿ ಮೂಡಿದ ಪುಟಾಣಿ ಶಿವಲಿಂಗ

    ಶಿವರಾತ್ರಿ ವಿಶೇಷ – ಪೆನ್ಸಿಲ್ ನಿಬ್ಬಿನಲ್ಲಿ ಮೂಡಿದ ಪುಟಾಣಿ ಶಿವಲಿಂಗ

    – ಕಲ್ಲಿನಲ್ಲಿ ಅರಳಿದ 0.5 ಇಂಚಿನ ಮಹಾದೇವ

    ಭುವನೇಶ್ವರ: ಶಿವರಾತ್ರಿ ಹಬ್ಬದ ಪ್ರಯುಕ್ತ ಒರಿಸ್ಸಾದ ಹೆಸರಾಂತ ಮಿನಿಯೇಚರ್ ಆರ್ಟಿಸ್ಟ್ ಎಲ್. ಈಶ್ವರ್ ರಾವ್ ಅವರು ಪೆನ್ಸಿಲ್ ನಿಬ್ಬಿನಲ್ಲಿ ಹಾಗೂ ಕಲ್ಲಿನಲ್ಲಿ 0.5 ಇಂಚಿನ ಶಿವಲಿಂಗವನ್ನು ಕೆತ್ತನೆ ಮಾಡಿ ಭಕ್ತಿ ಮೆರೆದಿದ್ದಾರೆ.

    ಈಶ್ವರ್ ರಾವ್ ಅವರು ಒರಿಸ್ಸಾದ ಖುರ್ದಾ ಜಿಲ್ಲೆಯ ಜಟ್ನಿ ಗ್ರಾಮದ ನಿವಾಸಿಯಾಗಿದ್ದು, ಮಿನಿಯೇಚರ್ ಆರ್ಟಿಸ್ಟ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದ, ಶಿವರಾತ್ರಿ ಪ್ರಯುಕ್ತ ಈ ಪುಟಾಣಿ ಶಿವಲಿಂಗವನ್ನು ಮಾಡಿದ್ದೇನೆ. ಸಣ್ಣ ಬಾಟಲಿನಲ್ಲಿ ಮೃದು ಕಲ್ಲಿನಿಂದ 0.5 ಇಂಚಿನ ಶಿವಲಿಂಗವನ್ನು ತಯಾರಿಸಿದ್ದೇನೆ. ಹಾಗೆಯೇ ಪೆನ್ಸಿಲ್ ನಿಬ್ಬಿನಲ್ಲಿ ಕೂಡ 0.5 ಇಂಚಿನ ಶಿವಲಿಂಗ ಮಾಡಿದ್ದೇನೆ ಎಂದರು.

    ಸಣ್ಣ ಬಾಟಲಿಯೊಳಗೆ ಚಿಕ್ಕ ಕಲ್ಲಿನ ಶಿವಲಿಂಗವನ್ನು ತಯಾರಿಸಲು 2 ದಿನ ಸಮಯ ತಗುಲಿತು, ಆದರೆ ಪೆನ್ಸಿಲ್ ನಿಬ್ಬಿನಲ್ಲಿ ಮಾಡಿರುವ ಶಿವಲಿಂಗವನ್ನು ಒಂದು ದಿನದಲ್ಲಿ ತಯಾರಿಸಿದೆ. ಅದರಲ್ಲೂ ಮೃದು ಕಲ್ಲಿನ ಶಿವಲಿಂಗವನ್ನು ಸಣ್ಣ ಬಾಟಲಿಯೊಳಗೆ ಇರಿಸಲು ಸುಮಾರು 4 ಗಂಟೆ ಸಮಯ ಬೇಕಾಯ್ತು. ಇದು ತುಂಬ ಕಷ್ಟಕರ ಕೆಲಸವಾಗಿತ್ತು ಎಂದು ಕಲಾವಿದ ತಿಳಿಸಿದರು.

    ಕಲಾವಿದನ ಕೈಚಳಕದಲ್ಲಿ ಮೂಡಿದ ಪುಟಾಣಿ ಶಿವಲಿಂಗಗಳು ಭಕ್ತರ ಮನ ಗೆದ್ದಿದ್ದು, ಕಲಾವಿದನ ಪ್ರತಿಭೆಗೆ ಸಲಾಂ ಎಂದಿದ್ದಾರೆ. ಈ ಹಿಂದೆ ಕೂಡ ಕಲಾವಿದ ಈಶ್ವರ್ ರಾವ್ ತಮ್ಮ ಕಲೆಯ ಮೂಲಕ ಎಲ್ಲರ ಮನಗೆದ್ದಿದ್ದರು. ಕಳೆದ ವರ್ಷ ಪೆನ್ಸಿಲ್ ಟಿಪ್ ಮೇಲೆ ಹುಣಿಸೆ ಬೀಜದಲ್ಲಿ ಪುರುಷರ ಹಾಕಿ ವಲ್ರ್ಡ್ ಕಪ್ ಅನ್ನು ಕೆತ್ತಿ ಭಾರತ ತಂಡಕ್ಕೆ ಗೌರವ ಸಲ್ಲಿಸಿದ್ದರು. ಅಲ್ಲದೇ ಕ್ರಿಸ್ಮಸ್ ಹಬ್ಬದಂದು ಚರ್ಚ್‍ವೊಂದನ್ನು ಬಾಟಲಿಯೊಳಗೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.

    ಹಾಗೆಯೇ 4ನೇ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರುವರೆ ಇಂಚಿನ ಪ್ರತಿಮೆಯನ್ನು ಕೆತ್ತಿದ್ದರು. ಬಾಟಲಿಯೊಳಗೆ ಸೋಪಿನಲ್ಲಿ ಈ ಕಲಾಕೃತಿಯನ್ನು ಈಶ್ವರ್ ರಾವ್ ಕೆತ್ತಿದ್ದರು.

  • ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ಬೆಂಗಳೂರು: ದಕ್ಷಿಣ ಭಾರತ ಸೇರಿದಂತೆ ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಭಾಗದಲ್ಲಿ ‘ಫನಿ’ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

    ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿಗೆ ಹೊರಡುವ ವಿವಿಧ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೇ ವಲಯ ರದ್ದು ಮಾಡಿದ್ದು, ಗುರುವಾರ ರಾತ್ರಿ 10 ರೈಲುಗಳ ಸಂಚಾರ ರದ್ದಾಗಿದೆ. ಚಂಡಮಾರುತದ ಪ್ರಭಾವದಿಂದ ಉಂಟಾಗಬಹುದಾದ ಅಪಾಯದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಬೆಂಗಳೂರಿನಿಂದ ಹೊರಟು ಮೈಸೂರು, ಪುರಿ, ಭುವನೇಶ್ವರ ಮಾರ್ಗವಾಗಿ ಒರಿಸ್ಸಾಗೆ ಪ್ರಯಾಣ ಬೆಳೆಸಬೇಕಾಗಿದ್ದ ರೈಲುಗಳ ಸಂಚಾರ ರದ್ದಾಗಿದೆ. ಅಲ್ಲದೆ ಪುರಿ ಮತ್ತು ಭುವನೇಶ್ವರ, ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಮಿನ ಗುವಾಹಟಿ ಕಡೆಗೆ ಹೊರಡುವ ರೈಲುಗಳ ಸಂಚಾರ ಸ್ಥಗಿತವಾಗಿದೆ. ಪ್ರಮುಖವಾಗಿ ಯಶವಂತಪುರ – ಹೌರಾ ಮಾರ್ಗದ 12246, 2888, 12864 ರೈಲು, ಸಂಗೊಳ್ಳಿ ರಾಯಣ್ಣ ನಿಲ್ದಾಣ – ಭುವನೇಶ್ವರ ಮಾರ್ಗದ 18464 ರೈಲು, ಗೋವಾ – ಹೌರಾ ಮಾರ್ಗದ 18048 ಹಾಗೂ ಹೌರ – ಭುವನೇಶ್ವರ – ಬೆಂಗಳೂರು – ಮೈಸೂರು – ಗೋವಾ ಮಾರ್ಗದ ರೈಲು ಸಂಚಾರ ರದ್ದಾಗಿದೆ.

    ಫನಿ ಚಂಡಮಾರುತದಿಂದ ಉಂಟಾಗಬಹುದಾದ ಪರಿಣಾಮಗಳನ್ನು ನೋಡಿಕೊಂಡು ಮತ್ತೆ ಸಂಚಾರ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಫನಿ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಹಾನಿ ಸಂಭವಿಸಿದರೆ ಸಂಚಾರ ಆರಂಭವಾಗುವುದು ಮತ್ತಷ್ಟು ವಿಳಂಬ ಆಗಲಿದೆ.

    ಸದ್ಯದ ಮಾಹಿತಿಯ ಅನ್ವಯ ತಾತ್ಕಾಲಿಕವಾಗಿ ಮೇ 06ರ ವರೆಗೂ ರಾಜ್ಯದಿಂದ ಹೊರಡುವ ರೈಲುಗಳ ಸಂಚಾರ ರದ್ದಾಗಿದ್ದು, ಈ ಅವಧಿಯವರೆಗೂ ಒಡಿಸ್ಸಾ ಮಾರ್ಗವಾಗಿ ರೈಲು ಸಂಚಾರ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಲಭಿಸಿದೆ.

  • ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ 400 ವರ್ಷದ ಸಂಪ್ರದಾಯ ಮುರಿದ ಗಂಡಸರು!

    ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ 400 ವರ್ಷದ ಸಂಪ್ರದಾಯ ಮುರಿದ ಗಂಡಸರು!

    ಭುವನೇಶ್ವರ್: ಸಮುದ್ರದ ಮಟ್ಟ ಏರಿಕೆಯಾಗಿ ಒಡಿಶಾದ 400 ವರ್ಷ ಹಳೆಯ ದೇವಸ್ಥಾನದಲ್ಲಿನ ವಿಗ್ರಹಗಳನ್ನು ಸ್ಥಳಾಂತರಿಸಲಾಗಿದೆ.

    ಸತಾಭಯ ಹಳ್ಳಿಯ ಸಮುದ್ರ ತೀರದ ಮಾ ಪಂಚಬರಾಹಿ ದೇವಾಲಯದಲ್ಲಿರುವ ಗರ್ಭಗುಡಿಯ ವಿಗ್ರಹಗಳನ್ನು ಗಂಡಸರು ಮುಟ್ಟುವ ಅಥವಾ ಪೂಜೆ ಮಾಡುವ ಹಾಗೆ ಇರಲಿಲ್ಲ. ಸ್ಥಳೀಯ ಮೀನುಗಾರ ಸಮುದಾಯದ ಮದುವೆಯಾದ ಮಹಿಳೆಯರು ಮಾತ್ರ ದೇವರುಗಳನ್ನು ಪೂಜಿಸಬಹುದಾಗಿತ್ತು.

    ಪೂಜೆಗೆ 400 ವರ್ಷಗಳಲ್ಲಿ ಯಾವುದೇ ಅಡಚಣೆಯಾಗಿರಲಿಲ್ಲ. ಆದರೆ ಈಗ ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ದೇವಸ್ಥಾನದ ಅಸ್ತಿತ್ವಕ್ಕೆ ಪ್ರಶ್ನೆಯಾಗಿದೆ. ಈ ಕಾರಣಕ್ಕೆ ಸಮುದ್ರ ತೀರದಿಂದ ಸುಮಾರು 12 ಕಿಮೀ ದೂರವಿರುವ ಬಾಗಪತ್ಯ ದೇವಸ್ಥಾನಕ್ಕೆ ವಿಗ್ರಹಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದೊಂದು ವಿಗ್ರಹವು 1.5 ಟನ್ ತೂಕವಿದ್ದ ಕಾರಣ ಮಹಿಳೆಯರಿಗೆ ಸ್ಥಳಾಂತರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಪುರುಷರು ಈ ಕಾರ್ಯದಲ್ಲಿ ಭಾಗಿಯಾಗುವ ಮೂಲಕ 400 ವರ್ಷದ ಸಂಪ್ರದಾಯವನ್ನು ಮುರಿದಿದ್ದಾರೆ.

    ಭಾರವಾದ ಕಪ್ಪು ವಿಗ್ರಹಗಳನ್ನು ಸ್ಥಳಾಂತರಿಸಲು ಗಂಡಸರು ಮತ್ತು ಶಿಲ್ಪಿಗಳ ಸಹಾಯ ಪಡೆಯಬೇಕಾಯಿತು ಎಂದು ದೇವಾಲಯವನ್ನು ಪೂಜೆ ಮಾಡುತ್ತಿರುವ ಐದು ಮಂದಿ ಮಹಿಳೆಯರಲ್ಲಿ ಒಬ್ಬರಾಗಿರುವ ಸಬಿತಾ ದಾಲಿ ಹೇಳಿದ್ದಾರೆ.

    ಸ್ಥಳಾಂತರಗೊಂಡ ಮೇಲೆ ಮಹಿಳೆಯರು ಶಾಸ್ತ್ರೋಕ್ತವಾಗಿ ಪೂಜೆಗಳನ್ನು ನೆರವೇರಿಸುವ ಮೂಲಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. 50 ವರ್ಷದ ಕೆಳಗೆ ದೇವಸ್ಥಾನ ಸಮುದ್ರದಿಂದ 5 ಕಿಮೀ ದೂರದಲ್ಲಿತ್ತು. ಈಗ ಕೆಲವೇ ಮೀಟರ್ ಹತ್ತಿರಕ್ಕೆ ಬಂದಿರುವ ಕಾರಣ ಮೀನುಗಾರರು ಆತಂಕಗೊಂಡಿದ್ದಾರೆ.

  • ತಾಯಿಯ ಪಕ್ಕ ಮಲಗಿದ್ದ 16 ದಿನದ ಮಗುವನ್ನ ಹೊತ್ತೊಯ್ದ ಮಂಗ!

    ತಾಯಿಯ ಪಕ್ಕ ಮಲಗಿದ್ದ 16 ದಿನದ ಮಗುವನ್ನ ಹೊತ್ತೊಯ್ದ ಮಂಗ!

    ಭುವನೇಶ್ವರ: ತಾಯಿಯ ಪಕ್ಕ ಮಲಗಿದ್ದ 16 ದಿನಗಳ ಮಗುವನ್ನು ಕೋತಿಯೊಂದು ತೆಗೆದುಕೊಂಡು ಹೋಗಿರುವ ಘಟನೆ ಒರಿಸ್ಸಾದ ಕಟ್ಟಕ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಕಟ್ಟರ್ ಜಿಲ್ಲೆಯ ತಲಾಬಸ್ತ ಗ್ರಾಮದ ಮಹಿಳೆಯೊಬ್ಬರು ಶನಿವಾರ ತಮ್ಮ 16 ದಿನಗಳ ಮಗುವನ್ನು ಮನೆಯಲ್ಲಿ ಮಲಗಿಸಿಕೊಂಡಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯ ಕುರಿತು ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವಿನ ರಕ್ಷಣಾ ಕಾರ್ಯಾಚರಣೆ ವೇಳೆ ಮಗುವಿನ ಮೃತ ದೇಹ ಬಾವಿಯೊಂದರಲ್ಲಿ ಪತ್ತೆಯಾಗಿದೆ.

    ತಾಯಿ ತನ್ನ ಮಗುವಿನ ಪಕ್ಕ ಮಲಗಿದ್ದ ವೇಳೆ ಮನೆ ಒಳ ಪ್ರವೇಶಿಸಿದ್ದ ಕೋತಿಯೊಂದು ಕ್ಷಣ ಮಾತ್ರದಲ್ಲಿ ಮಗುವನ್ನು ತೆಗೆದುಕೊಂಡು ಹೋಗಿತ್ತು. ಇದನ್ನು ಕಂಡ ತಾಯಿ ಸ್ಥಳೀಯರ ಸಹಾಯ ಪಡೆಯಲು ಕಿರುಚಿಕೊಂಡಿದ್ದರು, ಬಳಿಕ ಮಗುವಿನ ಪತ್ತೆಗಾಗಿ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದ್ದರು.

    ಕಳೆದ ಕೆಲ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ಕೋತಿಗಳಿಂದ ದಾಳಿಗೆ ಒಳಗಾಗಿ ಕೆಲ ಗ್ರಾಮಸ್ಥರು ಗಾಯಗೊಂಡಿದ್ದರು. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದ್ದರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಸದ್ಯ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=pOPFHmQXcic