Tag: Organization

  • ಕಾನೂನು ವಿರುದ್ಧ ಯಾವುದೇ ಸಂಘಟನೆ ನಡೆದುಕೊಂಡರೂ ಕ್ರಮ ಗ್ಯಾರಂಟಿ: ಪರಮೇಶ್ವರ್

    ಕಾನೂನು ವಿರುದ್ಧ ಯಾವುದೇ ಸಂಘಟನೆ ನಡೆದುಕೊಂಡರೂ ಕ್ರಮ ಗ್ಯಾರಂಟಿ: ಪರಮೇಶ್ವರ್

    ಬೆಂಗಳೂರು: ಯಾವುದೇ ವ್ಯಕ್ತಿಗಳು, ಸಂಘಟನೆಗಳು (Organization) ಕಾನೂನು ವಿರುದ್ಧ ನಡೆದುಕೊಂಡರೆ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಎಚ್ಚರಿಕೆ ಕೊಟ್ಟಿದ್ದಾರೆ.

    ಬಜರಂಗದಳದ (Bajarang Dal)  ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸ್ (Deportation Notice) ನೀಡಿರುವ ವಿಚಾರವಾಗಿ ಪೇಜಾವರ ಶ್ರೀ, ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಹೊರತುಪಡಿಸಿ ಪೊಲೀಸ್ ಇಲಾಖೆ ಯಾವ ಕೆಲಸ ಮಾಡಲ್ಲ. ಬಜರಂಗದಳ ಆಗಲಿ ಯಾವುದೇ ಸಂಘ ಸಂಸ್ಥೆಗಳು ಆಗಲಿ, ವೈಯಕ್ತಿಕವಾಗಿ ಕಾನೂನು ಪ್ರಕಾರ ಏನೇ ಮಾಡಿದರೂ ನಮ್ಮ ಸರ್ಕಾರ ಅವರ ಜೊತೆ ಇರುತ್ತೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಇರೋದು ಕಾನೂನು ಹಾಗೂ ಶಾಂತಿ ಕಾಪಾಡಲು. ಆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗಡಿಪಾರು ನೋಟಿಸ್ ಅನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: 68 ಸಾವಿರ ರೂ. ದಂಡ ಪಾವತಿಸಿದ್ದೇನೆ – ಲುಲು ಮಾಲ್‌ಗೆ ಕರೆಂಟ್‌ ಶಾಕ್‌ ಕೊಟ್ಟ ಕುಮಾರಸ್ವಾಮಿ

    ಯಾರನ್ನೋ ಹತ್ತಿಕ್ಕಬೇಕು ಅಥವಾ ರಾಜಕೀಯ ದುರುದ್ದೇಶಕ್ಕೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಪೊಲೀಸರು ಮಾಡಲ್ಲ. ನಮ್ಮ ಸರ್ಕಾರ ಜನ ಸಮುದಾಯಕ್ಕೆ, ರಾಜ್ಯದ ಜನರಿಗೆ ಶಾಂತಿ ಕಾಪಾಡುತ್ತೇವೆ ಅಂತ ಮಾತು ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹಾಕಿದ್ದೇವೆ. ಸಂಘಟನೆಗಳು ಶಾಂತಿಯುತವಾಗಿ ಸಹಕಾರ ಮಾಡಿದರೆ ನಾವು ಅವರ ಜೊತೆ ಇರುತ್ತೇವೆ. ಇಲ್ಲದೆ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

  • ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

    ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಜೊತೆಗೆ ಮತ್ತಷ್ಟು ಬೆಳೆಸಬೇಕಿದೆ. ಹೀಗಾಗಿ ನನಗೆ ಯಾವುದೇ ಸ್ಥಾನಮಾನ ಇಲ್ಲದಿದ್ದರೂ, ನನ್ನ ಕೊನೆಯ ಉಸಿರು ಇರುವವರೆಗೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಪಡೆದು ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

    ಮುಂದಿನ 10-15 ದಿನಗಳ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ನಡೆಸುತ್ತೇನೆ. ಈ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ಪ್ರವಾಸ ನಡೆಸಲಿದ್ದೇನೆ. ನಾನು ಸಾಯುವವರೆಗೂ ಪಕ್ಷ ಸಂಘಟನೆ ಮಾಡುತ್ತೇನೆ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

    ಸಿದ್ದರಾಮಯ್ಯರಿಂದ ಪ್ರಜಾತಂತ್ರಕ್ಕೆ ದ್ರೋಹ
    ಕಾಂಗ್ರೆಸ್ ನವರು ಸದನದಲ್ಲಿ ಕೋವಿಡ್ ಬಗ್ಗೆ ಚರ್ಚೆ ನಡೆಸದೇ ವಿನಾಕಾರಣ ಸಭಾತ್ಯಾಗ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಒಳ್ಳೆಯ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಪ್ರಜಾತಂತ್ರಕ್ಕೆ ದ್ರೋಹ ಎಸಗಿದ್ದಾರೆ. ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು.

    ಬೆಲೆ ಏರಿಕೆ ವಿಚಾರ ಒಂದನ್ನೇ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಸಂಬಂಧಪಟ್ಟ ಸಚಿವರು ಸದನದಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲು ಸಿದ್ಧರಿದ್ದರೂ ಕೇಳುವ ತಾಳ್ಮೆ ಇಲ್ಲದೇ ಪಲಾಯನ ಮಾಡಿದರು. ಸದನಕ್ಕೆ ಲೋಕಸಭಾ ಸ್ಪೀಕರ್ ಭೇಟಿ ನೀಡಿದ ಸಂದರ್ಭದಲ್ಲೂ ಸಭಾತ್ಯಾಗ ಮಾಡಿದರು. ಸ್ಪೀಕರ್ ಬಂದಾಗ ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇದು ಪ್ರತಿಪಕ್ಷಕ್ಕೆ ಶೋಭೆ ತರುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ನಿಶ್ಚಿತ ಎಂದು ಭಾವಿಸಿರುವ ಕಾರಣ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

    ಭಾರತ್ ಬಂದ್ ಅವಶ್ಯವಿಲ್ಲ
    ಜನತೆ ಮೊದಲೇ ಕೋವಿಡ್ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ಭಾರತ್ ಬಂದ್ ಅವಶ್ಯಕತೆ ಇಲ್ಲ. ಈಗಾಗಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಆದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಬಂದ್ ಗೆ ಯಾರೂ ಬೆಂಬಲ ಕೊಡಬಾರದು ಎಂದು ಬಿಎಸ್ ವೈ ತಿಳಿಸಿದರು.

  • ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಇರುವಾಗ ಇಲ್ಲೊಂದು ಸಂಸ್ಥೆಯ ಪ್ರಾಣಿ ಪ್ರೀಯರು ಬೀದಿ ನಾಯಿಗಳಿಗೆ ಊಟವನ್ನು ನೀಡುತ್ತಾ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.

    ಲಾಕ್‍ಡೌನ್‍ ಎಫೆಕ್ಟ್ ನಿಂದಾಗಿ, ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳು ಪರದಾಡುವಂತಾಗಿದೆ. ತುತ್ತು ಅನ್ನ, ಬೊಗಸೆ ನೀರಿಗಾಗಿ ಬೀದಿ ನಾಯಿಗಳು, ಪಕ್ಷಿಗಳು ಅಲೆದಾಡುತ್ತಿವೆ. ಬೀದಿನಾಯಿಗಳಿಗೆ ಊಟ ಹಾಕೋರು ಇಲ್ಲ. ಇದನ್ನ ಅರಿತ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ, ನಗರದ ಹಲವು ಭಾಗಗಳಿಗೆ ತೆರಳಿ ಬೀದಿ ನಾಯಿಗಳಿಗೆ ಊಟ ನೀಡುತ್ತಿದ್ದಾರೆ.

    ನಗರದ ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವೆಡೆ ಪ್ರತಿದಿನ 150ಕ್ಯೂ ಹೆಚ್ಚು ಬೀದಿ ನಾಯಿಗಳಿಗೆ ಮೂರು ಹೊತ್ತಿನ ಊಟ ನೀಡುತ್ತಿದ್ದಾರೆ. ಜೊತೆಗೆ ಪುಟ್ಟ ಪುಟ್ಟ ನಾಯಿ ಮರಿಗಳಿಗೂ ಊಟ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ

    ಮನುಷ್ಯರಿಗೆ ಊಟ ಸಿಗುತ್ತದೆ. ಆದರೆ ಬೀದಿ ನಾಯಿಗಳು ಊಟ ಸಿಗದೇ ಪರದಾಡುತ್ತಿವೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾಗದೇ ಇರೋದ್ರಿಂದ ಹಸಿವಿನಿಂದ ಸಾಯುತ್ತಿವೆ. ಹೀಗಾಗಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಅಧ್ಯಕ್ಷ, ಅಭಿಷೇಕ್ ಹೇಳಿದ್ದಾರೆ.

  • ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಬೆಂಗಳೂರು: ಫೆಬ್ರವರಿ 13ಕ್ಕೆ ಕರ್ನಾಟಕ ಸ್ತಬ್ಧವಾಗಲಿದ್ದು, ಅಂದು ಯಾವುದೇ ಓಲಾ, ಊಬರ್, ಆಟೋ, ಟ್ಯಾಕ್ಸಿಗಳು, ರಸ್ತೆಗಿಳಿಯಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಅಖಂಡ ಕರ್ನಾಟಕ ಮುಷ್ಕರಕ್ಕೆ ಕರೆ ನೀಡಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, 400ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಓಲಾ, ಊಬರ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘ, ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆ, ವಿವಿಧ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ಸಿಕ್ಕಿದೆ.

    ಅಂದು ಬೆಳಗ್ಗೆ 11 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂಪಾರ್ಕ್ ತನಕ ಬೃಹತ್ ರ‍್ಯಾಲಿ ಮಾಡಲಾಗುತ್ತೆ. ವರದಿ ಜಾರಿಗೆ ಆಗ್ರಹಿಸಿ ನಗರದ ಮೌರ್ಯ ಸರ್ಕಲ್ ಬಳಿ ಕಳೆದ 96 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಇದೇ 13ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

    ಏನಿದು ಸರೋಜಿನಿ ಮಹಿಷಿ ವರದಿ?
    1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು.

    ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.

    1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ.

    ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

  • ಭಾರತದಲ್ಲಿ ಐಸಿಸ್ ಸೆಲ್ ಸ್ಥಾಪಿಸಲು ದುಬೈನಲ್ಲಿ ಹಣ ಸಂಗ್ರಹಣೆ

    ಭಾರತದಲ್ಲಿ ಐಸಿಸ್ ಸೆಲ್ ಸ್ಥಾಪಿಸಲು ದುಬೈನಲ್ಲಿ ಹಣ ಸಂಗ್ರಹಣೆ

    ಚೆನ್ನೈ: ತಮಿಳುನಾಡಿನ ಹದಿನಾಲ್ಕು ಮಂದಿ ಶಂಕಿತ ಉಗ್ರರು ದುಬೈನಲ್ಲಿ ಇದ್ದುಕೊಂಡು ಭಾರತದಲ್ಲಿ ಐಸಿಸ್‍ನ ಭಯೋತ್ಪಾದಕ ಸೆಲ್‍ಗಳನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಬಂಧಿತರು ದುಬೈನಿಂದಲೇ ವಹಾದತ್-ಎ-ಇಸ್ಲಾಂ, ಜಮಾತ್ ವಹಾದತ್-ಇ-ಇಸ್ಲಾಂ ಅಲ್ ಜಿಹಾದಿಯೆ ಮತ್ತು ಜಿಹಾದಿ ಇಸ್ಲಾಮಿಕ್ ಘಟಕ ಸೇರಿದಂತೆ ವಿವಿಧ ಭಯೋತ್ಪಾದಕ ಗುಂಪುಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರನ್ನು ದುಬೈ ಪೊಲೀಸರು ಬಂಧಿಸಿ 6 ತಿಂಗಳು ಅಲ್ಲಿಯೇ ಜೈಲಿನಲ್ಲಿ ಇರಿಸಿ ಕಳೆದ ವಾರ ಭಾರತಕ್ಕೆ ಒಪ್ಪಿಸಿದ್ದರು.

    ಸೋಮವಾರ ಆರೋಪಿಗಳನ್ನು ಎನ್‍ಐಎ ಚೆನ್ನೈ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿತ್ತು. ನ್ಯಾಯಾಲಯ ಜುಲೈ 25ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಈ 14 ಜನರಲ್ಲಿ ಹಲವರು ನಿರ್ವಹಣಾ ವೃತ್ತಿಪರರಾಗಿದ್ದು, ಇವರು ಯುಎಇಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರು ಮತ್ತು ಇವರಲ್ಲಿ ಒಬ್ಬ 32 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ.

    ಈ ವಿಚಾರದ ಬಗ್ಗೆ ಮಾತನಾಡಿರುವ ಎನ್‍ಐಎ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಸ್. ಪಿಳ್ಳೈ ಅವರು, “ಭಯೋತ್ಪಾದಕಾ ದಾಳಿ ನಡೆಸುವ ಸಲುವಾಗಿ ಅವರು ಉದ್ದೇಶಪೂರ್ವಕವಾಗಿಯೇ ಹಣವನ್ನು ಸಂಗ್ರಹಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಮೂಲಕ ಭಾರತದಲ್ಲಿ ಐಸಿಸ್ ಸಂಘಟನೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು” ಎಂದು ತಿಳಿಸಿದ್ದಾರೆ.

    ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಅನ್ವಯ ಎನ್‍ಐಎ ನಾಗಪಟ್ಟಣಂನಲ್ಲಿ ಹರೀಶ್ ಮುಹಮ್ಮದ್ ಮತ್ತು ಹಸನ್ ಅಲಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಇದರಲ್ಲಿ ಹಸನ್ ಅಲಿ ಐಸಿಸ್ ಆಪರೇಟಿವ್ ಆಗಿದ್ದು, ಅವನು ಭಾರತದಲ್ಲಿ ದಾಳಿ ಮಾಡಲು ಜನರನ್ನು ನೇಮಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

    ಹಸನ್ ಅಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ ಅವನು ವಾಹನಗಳನ್ನು ಸಾಧನಗಳಾಗಿ ಉಪಯೋಗಿಸಿ ಚಾಕು ಮತ್ತು ಸ್ಫೋಟಕವನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ತನ್ನ ಬೆಂಬಲಿಗರಲ್ಲಿ ಕೇಳಿಕೊಂಡಿದ್ದ. ಕಳೆದ ಕೆಲ ತಿಂಗಳುಗಳಿಂದ ಶಂಕಿತ ಐಸಿಸ್ ಗುಂಪುಗಳ ಮೇಲೆ ಕಣ್ಣಿಟ್ಟಿರುವ ಎನ್‍ಐಎ ಹಲವಾರು ಪ್ರಕರಣಗಳನ್ನು ಭೇದಿಸಿದೆ.

    ಶ್ರೀಲಂಕಾದಲ್ಲಿ ನಡೆದ ಈಸ್ಟರ್ ದಾಳಿಯ ಹಿಂದೆ ಇದ್ದ ಆತ್ಮಾಹುತಿ ಬಾಂಬರ್‍ನೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಆರೋಪದ ಮೇಲೆ ಐದು ಜನರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.

  • ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.

    ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.

    ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ಮನೆ ಖರೀದಿಸುವುದೇ ದೊಡ್ಡ ಕಷ್ಟ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ನಿಗದಿಯಾಗಿದೆ. ಹೀಗಾಗಿ ಯಾವ ಪ್ರದೇಶದಲ್ಲಿ ಎಷ್ಟು ರೂ. ದರ ಇದೆ ಎನ್ನುವ ಮಾಹಿತಿಯನ್ನು ಮನೆ ಖರೀದಿಸುವ ಜನ ಹುಡುಕುತ್ತಿರುತ್ತಾರೆ.

    ದೇಶದ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾಹಿತಿ datalabs.proptiger.ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎನ್ನುವುದನ್ನು ಅಂದಾಜಿಸಿದೆ. ಇದರಲ್ಲಿ ಸಿಂಗಲ್ ಬೆಡ್ ರೂಂ, ಡಬ್ಬಲ್ ಬೆಡ್ ರೂಂ ಹಾಗೂ ತ್ರಿಬ್ಬಲ್ ಬೆಡ್ ರೂಂ ಮನೆಗಳ ದರವನ್ನು ಪ್ರಕಟಿಸಿದೆ.

    50 ಲಕ್ಷ ರೂಪಾಯಿ, 50 ರಿಂದ 75 ಲಕ್ಷ ರೂಪಾಯಿಯೊಳಗಿನ ಮನೆಗಳು ಹಾಗೂ 75 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಮನೆಗಳು ಎಂದು ವಿಂಗಡಿಸಿ ಈ ಮಾಹಿತಿಯನ್ನು ಪ್ರಕಟಿಸಿದೆ.

    ಯಾವ ಪ್ರದೇಶದಲ್ಲಿ ಎಷ್ಟು?
    ಚಂದಾಪುರ ಏರಿಯಾದ 1 ಬೆಡ್ ರೂಂನ 970 ಚದರ ಅಡಿಯಲ್ಲಿನ ಮನೆಯ ಪ್ರತಿ ಅಡಿಗೆ 2,550 ರೂಪಾಯಿಯಂತೆ ಅಂದಾಜು 24.76 ಲಕ್ಷ ರೂಪಾಯಿ ಇದ್ದರೆ, ಎಲೆಕ್ಟ್ರಾನಿಕ್ ಸಿಟಿ ಪೇಸ್ 1 ರಲ್ಲಿ 1 ಬೆಡ್ ರೂಂನ 990 ಚದರ ಅಡಿ ಮನೆಯ ಪ್ರತಿ ಅಡಿಗೆ 3,400 ರೂಪಾಯಿಯಂತೆ ಅಂದಾಜು 33.66 ಲಕ್ಷ ರೂಪಾಯಿ ನಿಗದಿಯಾಗಿದೆ.

    ಎಲೆಕ್ಟ್ರಾನಿಕ್ ಸಿಟಿ ಪೇಸ್ 2 ರಲ್ಲಿ 1 ಬೆಡ್ ರೂಂನ 1,030 ಚದರ ಅಡಿ ಮನೆಯ ಪ್ರತಿ ಅಡಿಗೆ 3,600 ರೂಪಾಯಿಯಂತೆ, ಅಂದಾಜು 37.08 ಲಕ್ಷ ರೂಪಾಯಿ ಆಗಲಿದೆ. ಗೊಟ್ಟಿಗೆರೆಯಲ್ಲಿ 2 ಬೆಡ್ ರೂಂನ 1,140 ಚದರ ಅಡಿ ಮನೆಯ ಪ್ರತಿ ಅಡಿಗೆ 3,450 ರೂಪಾಯಿಯಂತೆ ಅಂದಾಜು 39.33 ಲಕ್ಷ ರೂಪಾಯಿ ಆಗಲಿದೆ.

    ಜಕ್ಕೂರು ಪ್ರದೇಶದಲ್ಲಿ 2 ಬೆಡ್ ರೂಂನ 1,110 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 43.29 ಲಕ್ಷ ರೂಪಾಯಿ ಆಗಲಿದೆ. ನಾಗರಭಾವಿ ಪ್ರದೇಶದಲ್ಲಿ 1 ಬೆಡ್ ರೂಂನ 930 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 41.38 ಲಕ್ಷ ರೂಪಾಯಿ ನಿಗದಿಯಾಗಿದೆ

    ಸರ್ಜಾಪುರ ಪ್ರದೇಶದಲ್ಲಿ 1 ಬೆಡ್ ರೂಂನ 1,050 ಚದರ ಅಡಿ ಮನೆಯ ಪ್ರತಿ ಅಡಿಗೆ 3,050 ರೂಪಾಯಿಯಂತೆ ಅಂದಾಜು 32.02 ಲಕ್ಷ ರೂಪಾಯಿ ಆಗಲಿದ್ದು, ಥಣಿಸಂದ್ರ ಪ್ರದೇಶದಲ್ಲಿ 1 ಬೆಡ್ ರೂಂನ 1,020 ಚದರ ಅಡಿ ಮನೆಯ ಪ್ರತಿ ಅಡಿಗೆ 4,300 ರೂಪಾಯಿಯಂತೆ ಅಂದಾಜು 43.86 ಲಕ್ಷ ರೂಪಾಯಿ ಆಗಲಿದೆ.

    ವರ್ತೂರು ಪ್ರದೇಶದಲ್ಲಿ 1 ಬೆಡ್ ರೂಂನ 1,040 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 40.56 ಲಕ್ಷ ರೂಪಾಯಿ ಆಗಲಿದ್ದು, ಯಲಹಂಕ ಪ್ರದೇಶದಲ್ಲಿ 1 ಬೆಡ್ ರೂಂನ 970 ಚದರ ಅಡಿ ಮನೆಯ ಪ್ರತಿ ಅಡಿಗೆ 4,250 ರೂಪಾಯಿಯಂತೆ ಅಂದಾಜು 41.22 ಲಕ್ಷ ರೂಪಾಯಿ ನಿಗದಿಯಾಗಿದೆ.

    50 ರಿಂದ 75 ಲಕ್ಷ ರೂ.:
    ಥಣಿಸಂದ್ರ ಮುಖ್ಯ ರಸ್ತೆ ಕಣ್ಣೂರಿನ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 61.42 ಲಕ್ಷ ರೂಪಾಯಿ ಆದರೆ, ಕೆಂಗೇರಿ ಪ್ರದೇಶದಲ್ಲಿ 2 ಬೆಡ್ ರೂಂನ 1,440 ಚದರ ಅಡಿ ಮನೆಯ ಪ್ರತಿ ಅಡಿಗೆ 4,050 ರೂಪಾಯಿಯಂತೆ ಅಂದಾಜು 58.32 ಲಕ್ಷ ರೂಪಾಯಿ ನಿಗದಿಯಾಗಿದೆ.

    ಕೆ.ಆರ್.ಪುರಂ ಪ್ರದೇಶದಲ್ಲಿ 2 ಬೆಡ್ ರೂಂನ 1,320 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 60.06 ಲಕ್ಷ ರೂಪಾಯಿ ನಿಗದಿಯಾಗಿದ್ದರೆ, ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ 2 ಬೆಡ್ ರೂಂನ 1,260 ಚದರ ಅಡಿ ಮನೆಯ ಪ್ರತಿ ಅಡಿಗೆ 5,100 ರೂಪಾಯಿಯಂತೆ ಅಂದಾಜು 64.26 ಲಕ್ಷ ರೂಪಾಯಿ ಆಗಲಿದೆ.

    ವೈಟ್‍ಫೀಲ್ಡ್‍ನ ಹೋಪ್ ಫಾರ್ಮ್ ಜಂಕ್ಷನ್ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 60.07 ಲಕ್ಷ ರೂಪಾಯಿ ಆಗಲಿದೆ.

    75 ಲಕ್ಷ ರೂ. ಮೇಲ್ಪಟ್ಟು ಎಲ್ಲಿ ಮನೆ ಸಿಗುತ್ತೆ?
    ಹೆಣ್ಣೂರು ಮುಖ್ಯ ರಸ್ತೆಯ ಅಂಗಾಲಾಪುರ ಪ್ರದೇಶದಲ್ಲಿ 3 ಬೆಡ್ ರೂಂನ 2,020 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 129.28 ಲಕ್ಷ ರೂಪಾಯಿ ಆಗಲಿದೆ. ಹೊಸ ರೋಡ್ ಪ್ರದೇಶದಲ್ಲಿ 2 ಬೆಡ್ ರೂಂನ 1,770 ಚದರ ಅಡಿ ಮನೆಯ ಪ್ರತಿ ಅಡಿಗೆ 5,500 ರೂಪಾಯಿಯಂತೆ ಅಂದಾಜು 93.35 ಲಕ್ಷ ರೂಪಾಯಿ ಆಗಲಿದೆ.

    ಕಲ್ಯಾಣ ನಗರ ಪ್ರದೇಶದಲ್ಲಿ 2 ಬೆಡ್ ರೂಂನ 1,870 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 119.68 ಲಕ್ಷ ರೂಪಾಯಿ ಆಗಲಿದೆ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ 2 ಬೆಡ್ ರೂಂನ 1,990 ಚದರ ಅಡಿ ಮನೆಯ ಪ್ರತಿ ಅಡಿಗೆ 6,650 ರೂಪಾಯಿಯಂತೆ ಅಂದಾಜು 132.33 ಲಕ್ಷ ರೂಪಾಯಿ ಆಗಲಿದೆ.

    ಮಾರತಹಳ್ಳಿ ಪ್ರದೇಶದಲ್ಲಿ 3 ಬೆಡ್ ರೂಂನ 2,440 ಚದರ ಅಡಿ ಮನೆಯ ಪ್ರತಿ ಅಡಿಗೆ 7,350 ರೂಪಾಯಿಯಂತೆ ಅಂದಾಜು 179.34 ಲಕ್ಷ ರೂಪಾಯಿ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಗುರುವಾರ ಕರೆ ನೀಡಿದ್ದ 13 ಜಿಲ್ಲೆಗಳ ಬಂದ್‍ಗೆ ಒಮ್ಮತ ಮೂಡದ ಕಾರಣ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

    ಬಂದ್ ಆಚರಣೆ ವಿಷಯದಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳ ಮಧ್ಯೆಯೇ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಮುಖಂಡರ ಜೊತೆಗೆ ಮಹದಾಯಿ ಹೋರಾಟಗಾರರೂ ಕೂಡ ಬಂದ್‍ನಿಂದ ದೂರ ಸರಿದಿದ್ದಾರೆ. ಮುಖ್ಯಮಂತ್ರಿಗಳು ನಿನ್ನೆ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕೂಡ ಬಂದ್ ಹಿಂಪಡೆಯಲು ಬಯಸಿದೆ.

    ಇದರ ನಡುವೆ ಉತ್ತರ ಕರ್ನಾಟಕ ರೈತ ಸಂಘ ಮಾತ್ರ ನಾಳೆ ಬಂದ್ ಆಚರಿಸುವುದಾಗಿ ಘೋಷಿಸಿತ್ತು. ಆದರೆ, ಸಂಜೆ ವೇಳೆಗೆ ಬಹುತೇಕ ಸಂಘಟನೆಗಳು ಬಂದ್ ವಾಪಸ್ ಪಡೆದಿರುವುದಾಗಿ ಘೋಷಿಸಿದವು. ಬಂದ್ ಬದಲಾಗಿ ನಾಳೆ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿವೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಸಹ ನಾಳೆ ಯಾವುದೇ ಕಾರಣಕ್ಕೂ ಬಂದ್ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

    ಒಮ್ಮತ ಮೂಡದಿರಲು ಕಾರಣವೇನು?
    ನಾಳಿನ ಬಂದ್ ಆಚರಣೆ ವಿಚಾರದಲ್ಲಿ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರಲ್ಲೇ ಭಿನ್ನಮತಕ್ಕೆ ಉಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ನೋಡುವುದಾದರೆ ಹೈದರಬಾದ್ ಕರ್ನಾಟಕದ ಸವಲತ್ತನ್ನು ಮುಂಬೈ ಕರ್ನಾಟಕ ಪಡೆದ ಆರೋಪವಿದೆ. ಈ ಹಿಂದೆ ಹೈ-ಕ ಹೋರಾಟಕ್ಕೆ ಮುಂಬೈ ಕರ್ನಾಟಕ ಸ್ಪಂದಿಸಿರಲಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದೆ. ಹೈದ್ರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ವಿರೋಧಿಸಿ ಮುಂಬೈ ಕರ್ನಾಟಕ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ವೇಳೆಯೂ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರ ನಡುವೆ ಘರ್ಷಣೆ ನಡೆದಿತ್ತು.

    ಪರ-ವಿರೋಧ ಪ್ರತಿಭಟನೆ: ಬಂದ್ ವಿಚಾರದಲ್ಲಿ ಅಪಸ್ವರ ವ್ಯಕ್ತವಾಗಿದ್ದರ ಬೆನ್ನಲ್ಲೇ ರಾಜ್ಯ ಹಲವೆಡೆ ಪರ-ವಿರೋಧ ಪ್ರತಿಭಟನೆಗಳೂ ನಡೆದಿವು. ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿಸಿದವು. ಮತ್ತೊಂದೆಡೆ ಪ್ರತ್ಯೇಕ ರಾಜ್ಯ ಒತ್ತಾಯವನ್ನು ವಿರೋಧಿಸಿ ದಾವಣಗೆರೆ ಹಾಗೂ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

  • ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ- ಉತ್ತರ ಕರ್ನಾಟಕ ಸಂಘಟನೆಗಳಿಂದ ವಿರೋಧ

    ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ- ಉತ್ತರ ಕರ್ನಾಟಕ ಸಂಘಟನೆಗಳಿಂದ ವಿರೋಧ

    ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಅಪಸ್ವರ ಕಂಡುಬಂದಿದ್ದು, ಜಿಲ್ಲೆಯ ಹಲವು ಸಂಘಟನೆಗಳು ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಹೇಳಿವೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಳಸಾ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಆಗಸ್ಟ್ 2 ರಂದು ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಬಂದ್ ಗೆ ನಮ್ಮ ಬೆಂಬಲವಿಲ್ಲ. ಪ್ರತ್ಯೇಕ ರಾಜ್ಯದ ಕೂಗಿಗೆ ಬಿಜೆಪಿಯವರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

    ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಜನಪ್ರತಿನಿಧಿಗಳು ಇದುವರೆಗೂ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಮೊದಲು ಇಲ್ಲಿನ ಜನಪ್ರತಿನಿಧಿಗಳು ಉತ್ತರ ಕರ್ನಾಟಕ ಅಭಿವೃದ್ದಿಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ಮನವರಿಕೆ ಮಾಡಿಕೊಳ್ಳಲಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

    ಪ್ರತ್ಯೇಕತೆಯ ಕೂಗಿಗೆ ಅವಕಾಶ ಕೊಡದೆ, ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿ. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಸರ್ಕಾರಗಳು ಎಚ್ಚೆತ್ತುಕೊಂಡು ವಿವಿಧ ತಜ್ಞರು ಹಾಗೂ ಚಿಂತಕರ ಜೊತೆ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿ ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸಬೇಕೆಂದು ಒತ್ತಾಯಿಸಬೇಕು. ಒಂದು ವೇಳೆ ಹೀಗೆ ನಿರ್ಲಕ್ಷ್ಯ ಮುಂದುವರಿಸಿದರೆ, ಉಗ್ರ ಹೋರಾಟ ಕೈಗೊಳ್ಳುವುದು ನಿಶ್ಚಿತ ಎಂದು ಸಂಘಟನೆಯ ಮುಖಂಡರುಗಳು ತಿಳಿಸಿದರು.

    ಬಂದ್‍ಗೆ ಕಳಸಾ ಸಮನ್ವಯ ಸಮಿತಿ ಸೇರಿದಂತೆ ಕನ್ನಡಪರ ಸಂಘಟನೆ, ರೈತಪರ ಸಂಘಟನೆ, ಆಟೋ ಚಾಲಕರ ಸಂಘಟನೆ ಹಾಗೂ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿವೆ.

  • ಸಲ್ಮಾನ್ ಖಾನ್ ಥಳಿಸಿದ್ರೆ 2 ಲಕ್ಷ ರೂ. ಬಹುಮಾನ – ಹಿಂದೂ ಸಂಘಟನೆಯಿಂದ ಘೋಷಣೆ

    ಸಲ್ಮಾನ್ ಖಾನ್ ಥಳಿಸಿದ್ರೆ 2 ಲಕ್ಷ ರೂ. ಬಹುಮಾನ – ಹಿಂದೂ ಸಂಘಟನೆಯಿಂದ ಘೋಷಣೆ

    ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಸಾರ್ವಜನಿಕವಾಗಿ ಥಳಿಸಿದರೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ `ಹಿಂದೂ ಹೀ ಆಗೇ’ ಸಂಘಟನೆ ಘೋಷಿಸಿದೆ.

    ಸಲ್ಮಾನ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ `ಲವ್‍ರಾತ್ರಿ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು, ನವರಾತ್ರಿ ವೇಳೆ ಬಿಡುಗಡೆಗೆ ಸಿದ್ಧಗೊಳಿಸಿದೆ. ಸಲ್ಮಾನ್ ಖಾನ್ ರ ಸಿನಿಮಾಗೆ `ಲವ್‍ರಾತ್ರಿ’ ಎಂದು ಹೆಸರಿಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂ ಪರ ಸಂಘಟನೆ ಆರೋಪಿಸಿದೆ.

    ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮಾಜಿ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ನೂತನ ಸಂಘಟನೆ ಹಿಂದೂ ಹೀ ಆಗೇಯ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ್ ಪರಾಶರ್ ಈ ಘೋಷಣೆ ಮಾಡಿದ್ದಾರೆ.

    ಸಲ್ಮಾನ್ ಖಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧ ಪರಾಶರ್ ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಗುರುವಾರ ಭಗ್ವಾನ್ ಟಾಕೀಸ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಲ್ಮಾನ್ ಖಾನ್ ಅವರ ಪೋಸ್ಟರ್ ಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದ್ದರು. ಅಲ್ಲದೇ ಸಲ್ಮಾನ್ ರ ನಡೆಯನ್ನು ನಾವು ಖಂಡಿಸುತ್ತಿದ್ದು, ಈ ಸಿನಿಮಾವನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ.

    ಇದೇ ವೇಳೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವುದನ್ನು ಯಾವುದೇ ರೀತಿಯ ನಡೆಯನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಸಂಘಟನೆ ಕಾರ್ಯಕರ್ತರು, ಒಂದು ವೇಳೆ ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ ನಾವು ತೀವ್ರ ರೀತಿಯಲ್ಲಿ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ. ಲವ್‍ರಾತ್ರಿ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ತಂಗಿಯ ಮಗ ಆಯುಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.