Tag: organ donation

  • Explainer: ಕರ್ನಾಟಕದಲ್ಲಿ ಹೇಗಿದೆ ಅಂಗಾಂಗ ದಾನ ಜಾಗೃತಿ?- ಕಿಡ್ನಿ, ಹೃದಯ ಕಸಿ ಆಪರೇಷನ್‌ಗೆ BPL ಕಾರ್ಡುದಾರರು ಎಷ್ಟು ಕಟ್ಟಬೇಕು?

    Explainer: ಕರ್ನಾಟಕದಲ್ಲಿ ಹೇಗಿದೆ ಅಂಗಾಂಗ ದಾನ ಜಾಗೃತಿ?- ಕಿಡ್ನಿ, ಹೃದಯ ಕಸಿ ಆಪರೇಷನ್‌ಗೆ BPL ಕಾರ್ಡುದಾರರು ಎಷ್ಟು ಕಟ್ಟಬೇಕು?

    – ಸಾವಿನಲ್ಲೂ ಮೆರೆಯಬಹುದು ಸಾರ್ಥಕತೆ; ಅಂಗಾಂಗ ದಾನದ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

    ಬ್ಬ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡು ಬದುಕುಳಿಯಲ್ಲ ಎನ್ನುವಂತಿದ್ದರೆ, ಅಂಗಾಂಗ ದಾನದಿಂದ 8 ಜೀವಗಳನ್ನು ಉಳಿಸಬಹುದು. ಬ್ರೇನ್‌ ಡೆಡ್‌ ಆದರೆ ವ್ಯಕ್ತಿ ಸತ್ತಂತೆ. ಮೃತ ವ್ಯಕ್ತಿ ದಾನಿಯಾಗಿದ್ದಲ್ಲಿ ಅವರ ಅಂಗಾಂಗ ದಾನದಿಂದ ಹಲವರ ಜೀವ ಉಳಿಯುತ್ತದೆ. ಅಂಗಾಂಗ ದಾನ ಅನ್ನೋದು ಮಾನವೀಯತೆಯ ಅತ್ಯಂತ ಉದಾತ್ತ ಕಾರ್ಯಗಳಲ್ಲಿ ಒಂದು. ಇನ್ನೊಬ್ಬರಿಗೆ ನೀಡುವ ಜೀವನ ದಾನ. ಆರೋಗ್ಯವಂತ ವ್ಯಕ್ತಿ ಕಣ್ಣು, ಕಿಡ್ನಿ, ಹೃದಯ, ಪಿತ್ತಜನಕಾಂಗ, ಶ್ವಾಸಕೋಶ ಅಂಗಾಂಗಗಳನ್ನು ದಾನ ಮಾಡಿದರೆ, ತುರ್ತು ಅಗತ್ಯ ಇರುವವರಿಗೆ ಹೊಸ ಜೀವನ ಕೊಟ್ಟಂತಾಗುತ್ತದೆ. ದೇಶ, ಜಗತ್ತಿನಲ್ಲಿ ಅಂಗಾಂಗಗಳ ತುರ್ತಿನ ಹೋರಾಟದಲ್ಲಿ ಲಕ್ಷಾಂತರ ಜನರಿದ್ದಾರೆ. ಸೂಕ್ತ ಸಮಯಕ್ಕೆ ಅಂಗಾಂಗ ಸಿಗದೇ ಪ್ರಾಣ ಬಿಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ, ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದೊಂದು ಮಹತ್ಕಾರ್ಯವೆಂದು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

    ಆಗಸ್ಟ್‌ 13 ಅನ್ನು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತದೆ. ಆದರೆ, ಅಂಗಾಂಗ ದಾನದ ಮಹತ್ವ ಮತ್ತು ಜಾಗೃತಿ ಕೊರತೆ ಎಲ್ಲೆಡೆ ಇದೆ. ಇದಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರ್ಕಾರವು ನಿರಂತರ ಪ್ರಯತ್ನ ನಡೆಸುತ್ತಿದೆ. ಮಿದುಳು ನಿಷ್ಕ್ರಿಯ ನಂತರ ಅಂಗಾಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡಿದ ಕುಟುಂಬದ ಸದಸ್ಯರನ್ನು ಗೌರವಿಸಲು, ಅವರಿಗೆ ಕೃತಜ್ಜತೆ ಸಲ್ಲಿಸಲು ಹಾಗೂ ಆ ಮೂಲಕ ರಾಜ್ಯದ ನಾಗರಿಕರನ್ನು ಪ್ರೇರೇಪಿಸಲು ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಸಹಿ ಇರುವ ಪ್ರಶಂಸಾ ಪತ್ರ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು, ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ.

    ವಿಶ್ವ ಅಂಗಾಂಗ ದಿನ ಹೇಗೆ ಬಂತು?
    ಜಗತ್ತಿನಲ್ಲೇ ಅಂಗಾಂಗ ದಾನ ಮಾಡಿದ ಮೊದಲ ವ್ಯಕ್ತಿ ರೊನಾಲ್ಡ್ ಲೀ ಹೆರಿಕ್. ಇವರು 1954 ರಲ್ಲಿ ತಮ್ಮ ಅವಳಿ ಸಹೋದರನಿಗೆ ಮೂತ್ರಪಿಂಡವನ್ನು ನೀಡಿದರು. ಈ ಅಂಗ ಕಸಿಯನ್ನು ವೈದ್ಯರಾದ ಡಾ. ಜೋಸೆಫ್ ಮುರ್ರೆ ಯಶಸ್ವಿಯಾಗಿ ನಡೆಸಿದರು. ನಂತರ 1990 ರಲ್ಲಿ ಅಂಗಾಂಗ ಕಸಿಯಲ್ಲಿ ಪ್ರಗತಿಯನ್ನು ತಂದಿದ್ದಕ್ಕಾಗಿ ಅವರಿಗೆ ಶರೀರಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅಂಗಾಂಗ ದಾನದ ಮಹತ್ವವನ್ನು ಸಾರುವುದಕ್ಕಾಗಿ ಆ.13ನ್ನು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತದೆ.

    ಭಾರತದಲ್ಲಿ ಅಂಗಾಂಗ ದಿನ ಯಾವಾಗ?
    1994ರ ಆಗಸ್ಟ್ 3 ರಂದು ಭಾರತದ ಮೊದಲ ಯಶಸ್ವಿ ಹೃದಯ ಕಸಿ ನಡೆಸಲಾಯಿತು. ಈ ಕಾರ್ಯಕ್ರಮದ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 3 ರಂದು ಭಾರತೀಯ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿವಿಧ ಸಂಸ್ಥೆಗಳ ಜನರು ಅಂಗಾಂಗ ದಾನಿಗಳ ಜೀವನವನ್ನು ಗೌರವಿಸುತ್ತಾರೆ.

    ಅಂಗಾಂಗ ದಾನ ದಿನದ ಮಹತ್ವವೇನು?
    ಜೀವಗಳನ್ನು ಉಳಿಸುವಲ್ಲಿ ಅಂಗಾಂಗ ದಾನವು ಮಹತ್ವದ ಪಾತ್ರ ವಹಿಸುತ್ತದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಜನರಿಗೆ ಈ ದಾನವು ಹೊಸ ಜೀವನವನ್ನು ನೀಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಾಂಗ ದಾನವನ್ನು ಯಾವುದೇ ವಯಸ್ಸಿನಲ್ಲಿ ಮಾಡಬಹುದು. ಆದರೆ, 18 ವರ್ಷದೊಳಗಿನ ದಾನಿಗಳು ನೋಂದಾಯಿಸಲು ಪೋಷಕ ಪೋಷಕರ ಒಪ್ಪಿಗೆ ಇರಬೇಕು.

    ಅಂಗಾಂಗ ದಾನದಲ್ಲಿದೆ 2 ವಿಧ
    ಅಂಗ ದಾನದಲ್ಲಿ ಎರಡು ವಿಧಗಳಿವೆ. ಒಂದು ಜೀವಂತ ವ್ಯಕ್ತಿ ನೀಡುವ ದಾನ, ಮತ್ತೊಂದು ಮರಣದ ನಂತರ ನೀಡುವ ದಾನ. ಜೀವಂತ ವ್ಯಕ್ತಿ ನೀಡುವ ದಾನದಲ್ಲಿ ದಾನಿ ಜೀವಂತವಾಗಿರುತ್ತಾನೆ. ಮತ್ತೊಂದರಲ್ಲಿ ವ್ಯಕ್ತಿ ಮರಣದ ನಂತರ ಅಂಗಾಂಗ ದಾನ ಪಡೆಯಲಾಗುತ್ತದೆ. ಜೀವಂತ ದಾನಿಗಳು ಮೂತ್ರಪಿಂಡ ಮತ್ತು ಯಕೃತ್ತಿನ ಭಾಗಗಳಂತಹ ಅಂಗಗಳನ್ನು ದಾನ ಮಾಡಬಹುದು. ದಾನಿಗಳು ಒಂದು ಮೂತ್ರಪಿಂಡದೊಂದಿಗೆ ಬದುಕಬಲ್ಲರು. ಯಕೃತ್ತು ದೇಹದಲ್ಲಿ ಪುನರುತ್ಪಾದನೆಗೆ ಹೆಸರುವಾಸಿಯಾದ ಏಕೈಕ ಅಂಗವಾಗಿದೆ. ಇದು ದಾನಿ ಇನ್ನೂ ಜೀವಂತವಾಗಿರುವಾಗ ಅಂಗಗಳನ್ನು ಕಸಿ ಮಾಡಲು ಸಾಧ್ಯವಾಗಿಸುತ್ತದೆ. ಮಹತ್ವಾಕಾಂಕ್ಷಿ ಅಂಗ ದಾನಿಗಳು ಹೆಚ್ಐವಿ, ಕ್ಯಾನ್ಸರ್, ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯ.

    ದಾನ ಮಾಡಬಹುದಾದ ಅಂಗಗಳ್ಯಾವುವು?

    ಜೀವಂತ ದಾನಿಗಳಿಂದ ದಾನ ಮಾಡಬಹುದಾದ ಅಂಗಗಳು
    * ಒಂದು ಮೂತ್ರಪಿಂಡ
    * ಒಂದು ಶ್ವಾಸಕೋಶ
    * ಯಕೃತ್ತಿನ ಒಂದು ಭಾಗ
    * ಮೇದೋಜೀರಕದ ಒಂದು ಭಾಗ
    * ಕರುಳಿನ ಒಂದು ಭಾಗ

    ದಾನಿ ಮರಣ ಹೊಂದಿದಾಗ (ಬ್ರೇನ್‌ ಡೆಡ್‌) ದಾನ ಮಾಡಬಹುದಾದ ಅಂಗಗಳು
    * ಮೂತ್ರಪಿಂಡಗಳು (2)
    * ಯಕೃತ್ತು
    * ಶ್ವಾಸಕೋಶ (2)
    * ಹೃದಯ
    * ಮೇದೋಜೀರಕ ಗ್ರಂಥಿ
    * ಕರುಳುಗಳು

    ನಿತ್ಯ 20 ರೋಗಿಗಳು ಸಾವು
    2020 ರ ಮಾರ್ಚ್‌ ಅಂಕಿಅಂಶಗಳ ಪ್ರಕಾರ, 1,12,000 ಕ್ಕೂ ಹೆಚ್ಚು ಭಾರತೀಯರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿ 10 ನಿಮಿಷಗಳಿಗೊಮ್ಮೆ ರಾಷ್ಟ್ರೀಯ ಕಸಿ ಕಾಯುವ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗೊಳ್ಳುತ್ತಿದೆ. ಭಾರತದಲ್ಲಿ 2020 ರ ಸಂಶೋಧನಾ ವರದಿಯ ಪ್ರಕಾರ, ಪ್ರತಿದಿನ ಅಂಗಾಂಗ ಕಸಿ ಅಗತ್ಯವಿರುವ 20 ರೋಗಿಗಳು ಅಂಗಾಂಗಗಳ ಲಭ್ಯತೆಯ ಕೊರತೆಯಿಂದಾಗಿ ಸಾಯುತ್ತಾರೆ. ಅಂಗಾಂಗ ಕಸಿ ಅಗತ್ಯವಿರುವ ವ್ಯಕ್ತಿಗಳ ಸಂಖ್ಯೆ ಮತ್ತು ದಾನಿಗಳ ಸಂಖ್ಯೆಯ ನಡುವಿನ ಅಂತರವನ್ನು ನಿವಾರಿಸಲು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಪ್ರಮುಖ ಮಾರ್ಗವಾಗಿದೆ.

    ಅಂಗಾಂಗ ಕಸಿಯಲ್ಲಿ ಭಾರತಕ್ಕೆ 3ನೇ ಸ್ಥಾನ
    ಅಂಗಾಂಗ ಕಸಿಯಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ನಂತರದ ಸ್ಥಾನದಲ್ಲಿ ಭಾರತ ಇದೆ. ಇದು ದೇಶದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸಾಮರ್ಥ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. 2023 ರಲ್ಲಿ ಪ್ರಾರಂಭಿಸಲಾದ ಆಧಾರ್ ಆಧಾರಿತ NOTTO ಆನ್‌ಲೈನ್ ಪ್ರತಿಜ್ಞೆ ವೆಬ್‌ಸೈಟ್ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ. 3.30 ಲಕ್ಷಕ್ಕೂ ಹೆಚ್ಚು ನಾಗರಿಕರು ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಇದು ಐತಿಹಾಸಿಕ ಮೈಲಿಗಲ್ಲು.

    ‘ಜೀವಸಾರ್ಥಕತೆ’
    ‘ಜೀವಸಾರ್ಥಕತೆ’ (ಕರ್ನಾಟಕದ ಕಸಿ ಪ್ರಾಧಿಕಾರ) 2017 ರಿಂದ ನೋಂದಾಯಿತ ಸೊಸೈಟಿ ಆಗಿದೆ. ಈ ಸಂಸ್ಥೆ ಅಂಗಾಂಗ ದಾನವನ್ನು ಉತ್ತೇಜಿಸುತ್ತದೆ. ಕರ್ನಾಟಕದಲ್ಲಿ ಮಿದುಳು ನಿಷ್ಕ್ರಿಯಗೊಂಡ ದಾನಿ ಕಸಿ ಮಾಡುವಿಕೆಯನ್ನು ಸಂಯೋಜಿಸುತ್ತದೆ. ಜೀವಸಾರ್ಥಕತೆಯ ಧ್ಯೇಯವೆಂದರೆ, ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವ ಉಳಿಸಲು ಅಂಗಾಂಗ ದಾನದ ಮೂಲಕ ಮರುಜೀವ ನೀಡುವುದು. ಜೀವಸಾರ್ಥಕತೆಯನ್ನು 2020 ರಿಂದ SOTTO (State Organ Tissue & Transplant Organisation) ‘ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ ಎಂದು ಮರುನಾಮಕರಣ ಮಾಡಲಾಯಿತು. SOTTO/ಜೀವಸಾರ್ಥಕತೆಯು 2 ರೀತಿಯ ಅನ್‌ಲೈನ್ ನೋಂದಣಿಯ ವಿವರವನ್ನು ನಿರ್ವಹಿಸುತ್ತಿದೆ (ಅಂಗಾಂಗ ಕಸಿ ಸ್ವೀಕರಿಸುವವರು ಮತ್ತು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವವರು). ವ್ಯಕ್ತಿಯು ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದು. 2025ರ ಜುಲೈ 30ರವರೆಗೆ ಒಟ್ಟಾರೆಯಾಗಿ 43,221 ಮಂದಿ ಸಾರ್ವಜನಿಕರು ಅಂಗಾಂಗದಾನಕ್ಕಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.

    ರಾಜ್ಯದಲ್ಲೇ ಧಾರವಾಡಕ್ಕೆ ಮೊದಲ ಸ್ಥಾನ
    ಧಾರವಾಡ ಜಿಲ್ಲೆಯಲ್ಲಿ 11,186 ಮಂದಿ ಪ್ರತಿಜ್ಞೆ ಮಾಡಿ, ಜಿಲ್ಲಾಮಟ್ಟದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವವನ್ನು ಉಳಿಸಲು ಬೇಕಾಗುವ ಅವಶ್ಯಕತೆಗೆ ಹೋಲಿಸಿದರೆ, ಮಾನವ ಅಂಗಗಳು ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಕಾರ್ನಿಯಾಗಳು, ಹೃದಯ ಕವಾಟಗಳು, ಚರ್ಮ ಮತ್ತು ವಿವಿಧ ಅಂಗಾಂಶಗಳ ಅಗತ್ಯವಿರುವ ಹಲವಾರು ವ್ಯಕ್ತಿಗಳು ಇದಕ್ಕೆ ಸೇರಿದ್ದಾರೆ.

    ರಾಜ್ಯದಲ್ಲಿ ಅಂಗ ಕಸಿಗೆ ಕಾಯುತ್ತಿರುವ ರೋಗಿಗಳೆಷ್ಟು? (30-07-2025 ರಂತೆ)

    ಮೂತ್ರಪಿಂಡಗಳು: 4582
    ಯಕೃತ್: 583
    ಹೃದಯ: 133
    ಶ್ವಾಸಕೋಶಗಳು: 31
    ಹೃದಯ ಮತ್ತು ಶ್ವಾಸಕೋಶಗಳು: 13
    ಯಕೃತ್ ಮತ್ತು ಮೂತ್ರಪಿಂಡ: 23
    ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ: 21
    ಹೃದಯ ಮತ್ತು ಮೂತ್ರಪಿಂಡ: 1
    ಸಣ್ಣ ಕರುಳು: 0

    ಒಬ್ಬ ದಾನಿ ಎಷ್ಟು ಜೀವ ಉಳಿಸಬಹುದು?
    ಒಬ್ಬ ಅಂಗಾಂಗ ದಾನಿ 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿಯು ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಉಳಿಸಬಹುದು. ಅಂಗಾಂಗ ದಾನಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ದಾನ ಮಾಡಬಹುದಾದ ಅಂಗಾಂಶಗಳೆಂದರೆ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಣ್ಣುಗಳು.

    ಸರ್ಕಾರ ಕೈಗೊಂಡಿರುವ ಕ್ರಮಗಳೇನು?
    Trauma Care & Emergency Center (TCEC) ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ Non Transplant Organ Retrieval Centre (NTORC)- ಈ ಕೇಂದ್ರಗಳಲ್ಲಿ ಅಂಗಾಂಗಗಳನ್ನು ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಶರೀರದಿಂದ ಪಡೆದು ಕಸಿ ಕೇಂದ್ರಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ತಲುಪಿಸಲಾಗುವುದು. ಪ್ರತಿ ಜಿಲ್ಲಾ ಅಸ್ಪತ್ರೆ & ಮೆಡಿಕಲ್‌ ಕಾಲೇಜುಗಳಲ್ಲಿ NTORC ಗಳನ್ನು ಸ್ಥಾಪಿಸಲಾಗುವುದು. ಮಂಗಳೂರಿನ ವೆನ್‌ಲಾಕ್‌ ಜಿಲ್ಲಾ ಆಸ್ಪತ್ರೆಯು NTORC ಆಗಿ ನೋಂದಣಿ ಪಡೆದಿದ್ದು, 2025 ನೇ ಸಾಲಿನಲ್ಲಿ ಒಂದು ಅಂಗದಾನ ಕಾರ್ಯ ಕೂಡ ನಡೆದಿದೆ. SOTTO/ ಜೀವಸಾರ್ಥಕತೆಯನ್ನು ಸ್ಥಳೀಯ ಉಪಯೋಗಕ್ಕಾಗಿ 5 ವಲಯವನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು. ಮೆದುಳು ನಿಷ್ಕ್ರಿಯ ಹೊಂದಿದ ರೋಗಿಗಳನ್ನು ಗುರುತಿಸಿ ಘೋಷಣೆ ಮಾಡಲು Brain Death Declaration Committee ಗಳನ್ನು ಪ್ರತಿ ಜಿಲ್ಲಾ ಆಸ್ಪತ್ರೆ & ಮೆಡಿಕಲ್‌ ಕಾಲೇಜುಗಳಲ್ಲಿ ರಚಿಸಲಾಗುವುದು. ಸರ್ಕಾರದ ವತಿಯಿಂದ ಸುವರ್ಣಾ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ಮೂತ್ರಪಿಂಡ, ಹೃದಯ, ಯಕೃತ್ & ಬಹು ಅಂಗಾಂಗಗಳಿಗೆ ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್‌ ದರ ನಿಗದಿಪಡಿಸಲಾಗಿದೆ.

    ಬಡವರಿಗೆ ಸಹಕಾರಿ
    ಅಂಗಾಂಗ ಕಸಿ ಅಗ್ಗದ ಕೆಲಸವಲ್ಲ. ಅದಕ್ಕೆ ತುಂಬಾ ಖರ್ಚಾಗುತ್ತದೆ. ಅಂಗಾಂಗ ಕಸಿ ಅಗತ್ಯವಿರುವ ಬಡವರಿಗೆ ಇದು ದೂರದ ಕನಸು. ಅಂತಹವರಿಗೆ ನೆರವಾಗಲೆಂದು ಸರ್ಕಾರ ಯೋಜನೆವೊಂದನ್ನು ರೂಪಿಸಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್‌ ನಿಗದಿಪಡಿಸಿದೆ.

    ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್‌ ದರ ನಿಗದಿ
    * ಕಿಡ್ನಿ ಕಸಿಗಾಗಿ: 2 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು ಮೂರು ಲಕ್ಷ ನೀಡಲಾಗುವುದು.
    * ಲಿವರ್ ಕಸಿ: 11 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 12 ಲಕ್ಷ ರೂ. ನೀಡಲಾಗುವುದು.
    * ಹೃದಯ ಕಸಿ: 10 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 11 ಲಕ್ಷ ರೂ. ನೀಡಲಾಗುವುದು.
    * ಶ್ವಾಸಕೋಶ ಕಸಿ: 15 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 16 ಲಕ್ಷ ರೂ. ನೀಡಲಾಗುವುದು.
    * ಹೃದಯ & ಶ್ವಾಸಕೋಶ ಕಸಿ: 22.50 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 23.50 ಲಕ್ಷ ರೂ. ನೀಡಲಾಗುವುದು.

    ಯಾವ್ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ?
    ಸರ್ಕಾರಿ ಆಸ್ಪತ್ರೆಗಳಾದ ನೆಪ್ರೋ-ಯುರಾಲಜಿ ಸಂಸ್ಥೆ, ಬೆಂಗಳೂರು ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ ಕಿಮ್ಸ್, ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ, ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಕಸಿ ಮತ್ತು Institute of Gastro-enterology Sciences & Organ Transplant (IGOT)ನಲ್ಲಿ ಲಿವರ್‌ ಕಸಿ ಮಾಡಲಾಗುತ್ತಿದೆ.

    ವಲಯವಾರು ಅಂಗಾಂಗ ಕಸಿಗೆ ನೋಂದಾಯಿತ ಆಸ್ಪತ್ರೆಗಳ ಸಂಖ್ಯೆ: 82
    ಬೆಂಗಳೂರು ವಲಯ: 51
    ಮಂಗಳೂರು: 12
    ಹುಬ್ಬಳ್ಳಿ/ಧಾರವಾಡ: 07
    ಕಲಬುರಗಿ: 04
    ಮೈಸೂರು: 08

    ದಾನಿಗಳ ಸಂಖ್ಯೆಯಲ್ಲಿ ಏರಿಕೆ
    SOTTO Karnataka/ ಜೀವಸಾರ್ಥಕತೆಯ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದ್ದು, 2025 ನೇ ಸಾಲಿನಲ್ಲಿ ಈಗಾಗಲೇ 121 ಅಂಗಾಂಗ ದಾನ ನಡೆದಿದೆ.

  • ಇಬ್ಬರು ಯುವಕರಿಂದ ಅಂಗಾಂಗ ದಾನ – 6 ಜನರಿಗೆ ಮರುಜನ್ಮ!

    ಇಬ್ಬರು ಯುವಕರಿಂದ ಅಂಗಾಂಗ ದಾನ – 6 ಜನರಿಗೆ ಮರುಜನ್ಮ!

    ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ಇಬ್ಬರು ಯುವಕರ ಅಂಗಾಂಗಗಳನ್ನ ಪಡೆಯುವಲ್ಲಿ ನಿಮಾನ್ಸ್ ಆಸ್ಪತ್ರೆಯ (Nimhans Hospital) ಡಿಸಿಪ್ಲನರಿ ಟೀಂ, ಬ್ರೀಫ್ ಕೌನ್ಸಲರ್‌ಗಳು ಯಶಸ್ವಿಯಾಗಿದ್ದಾರೆ. ನಿಮಾನ್ಸ್ ಆಸ್ಪತ್ರೆಯ ಇತಿಹಾಸದಲ್ಲಿಯೇ ಏಕಕಾಲಕ್ಕೆ 2 ಕುಟುಂಬದವರನ್ನ ಮನವೊಲಿಸಿ, ಸಾವಿನಂಚಿನಲ್ಲಿದ್ದ ರೋಗಿಗಳಿಗೆ ಅಂಗಾಂಗಳನ್ನ ದಾನ (Organ donation) ಮಾಡುವ ಮೂಲಕ ನಿಮಾನ್ಸ್ ಆಸ್ಪತ್ರೆ ಆ ರೋಗಿಗಳಿಗೆ ಮರುಜನ್ಮ ನೀಡಿದೆ.

    ಕಳೆದ 15 ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಗೊಣಗಿ ಗ್ರಾಮದ 33 ವರ್ಷದ ಕೈಲಾಸ್ ಹಾಗೂ ಆಂಧ್ರಪ್ರದೇಶ ಕಡಪದ 27 ವರ್ಷದ ಸುರೇಂದ್ರ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾದೇ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ಹೆಗಲ ಮೇಲೆ ಹೊತ್ತು ಕಾರ್ಯಕರ್ತರ ಸಂಭ್ರಮ

    ಈ ವೇಳೆ ಮೃತ ಯುವಕರ ಕುಟುಂಬಸ್ಥರನ್ನ ಸಂಪರ್ಕಿಸಿದ ಡಾ. ಕಣ್ಮಣಿ ತಂಡದ ಬ್ರೀಫ್ ಕೌನ್ಸಲರ್‌ಗಳು ಸತತ 27 ಬಾರಿ ಅವ್ರನ್ನ ಮನವೊಲಿಸಿ ಅಂಗಾಂಗ ದಾನಗಳನ್ನ ಮಾಡಲು ಒಪ್ಪಿಸಿದ್ದಾರೆ.

    ಕಣ್ಣು ಕಿಡ್ನಿ, ಹಾರ್ಟ್ ವಾಲ್ಸ್, ಲಿವರ್ ಅಂಗಾಂಗಗಳನ್ನ ದಾನ ಮಾಡಲು ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದು, ಇನ್ನೊಬ್ಬರ ಬದುಕಿಗೆ ಕುಟುಂಬಸ್ಥರು ನೆರವಾಗಿದ್ದಾರೆ.

    https://youtu.be/YlG_OlaLqTs?si=lSo-h5mJkp1GX1qv

    ಈ ವರ್ಷದಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ 6 ಜನರ ಅಂಗಾಂಗಗಳನ್ನ ಪಡೆಯಲಾಗಿದ್ದು, ಅಂಗಾಂಗ ದಾನದ ಬಗ್ಗೆಯೂ ಜಾಗೃತಿ ಮೂಡಿಸ್ತಿದ್ದಾರೆ. ಇದನ್ನೂ ಓದಿ: ಜರ್ಮನಿಯ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿ – ಇಬ್ಬರು ಸಾವು, 60 ಮಂದಿಗೆ ಗಾಯ

  • ಅಪಘಾತದಲ್ಲಿ ಪುತ್ರನ ಮೆದುಳು ನಿಷ್ಕ್ರಿಯ – ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

    ಅಪಘಾತದಲ್ಲಿ ಪುತ್ರನ ಮೆದುಳು ನಿಷ್ಕ್ರಿಯ – ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

    ಹಾಸನ: ಅಪಘಾತದಲ್ಲಿ (Accident) ಮೆದುಳು ನಿಷ್ಕ್ರಿಯಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಪುತ್ರನ ಅಂಗಾಂಗ ದಾನ  (Organ Donation) ಮಾಡುವ ಮೂಲಕ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿರುವುದು ಚನ್ನರಾಯಪಟ್ಟಣ ತಾಲ್ಲೂಕಿನ ಮಾಚಭೂವನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಸುರೇಶ್ ಹಾಗೂ ಶಾಂತಲಾ ದಂಪತಿ ಪುತ್ರ ಸುಹಾಸ್‌ಗೌಡ‌ ಬೆಂಗಳೂರಿನಲ್ಲಿ ಬ್ಯಾಟರಿ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಡಿ.9ರ ಸಂಜೆ ಬೈಕ್‌ನಲ್ಲಿ ಸುಹಾಸ್‌ಗೌಡ ಹಾಗೂ ಸ್ನೇಹಿತ ಹರ್ಷ ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತಿದ್ದ ವೇಳೆ ಟಿ.ನರಸೀಪುರ ಬಳಿಯ ತಿರುವಿನಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಸುಹಾಸ್‌ಗೌಡ ತೀವ್ರವಾಗಿ ಗಾಯಗೊಂಡಿದ್ದ.

    ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಹಾಸ್‌ಗೌಡ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಗನ ಅಂಗಾಂಗ ದಾನ ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

  • ನಟಿ ಕಾರುಣ್ಯ ಆಲೋಚನೆ:  ಅಂಗಾಂಗ ದಾನ ಶಿಬಿರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್

    ನಟಿ ಕಾರುಣ್ಯ ಆಲೋಚನೆ: ಅಂಗಾಂಗ ದಾನ ಶಿಬಿರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್

    ನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಾರುಣ್ಯ ರಾಮ್ (Karunya Ram) ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ (Organ Donation) ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

    ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, ‘ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತೆ, ಎಲ್ಲರೂ ಅಂಗಾಂಗ ದಾನ ಮಾಡಿ’ ಎಂದು ಮನವಿ ಮಾಡಿದರು. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

    ನಂತರ ಮಾತನಾಡಿದ ಧ್ರುವ ಸರ್ಜಾ, ‘ಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಯಾರು ಯೂಸ್ ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂಥ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು, ಹೆಚ್ಚು ಹೆಚ್ಚು ಆಗಬೇಕು’ ಎಂದರು.

    ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್  ಭಾಗಿಯಾಗಿತ್ತು. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ನ ಫೌಂಡರ್ ಸಂತೋಷ್  ಕೂಡ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಂಜಿನಿಯರ್‌ ಮಿದುಳು ನಿಷ್ಕ್ರಿಯ – ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ

    ಎಂಜಿನಿಯರ್‌ ಮಿದುಳು ನಿಷ್ಕ್ರಿಯ – ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ

    ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಐಟಿ ಎಂಜಿನಿಯರ್‌ ಮಿದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಹೈಟಿ ಎಂಜಿನಿಯರ್‌ ವಿಷ್ಣು ತೀರ್ಥ ವಡವಿ (54) ಮೃತ ದುರ್ದೈವಿ. ಮಿದುಳು ಸಂಬಂಧಿ ಕಾಯಿಲೆಯಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಸಾವಿನ ಬಳಿಕ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇದನ್ನೂ ಓದಿ: ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಹೈವೋಲ್ಟೇಜ್ ಸಭೆ

    ವಡವಿ ಅವರ ಎರಡು ಕಣ್ಣು, ಎರಡು ಕಿಡ್ನಿ, ಒಂದು ಹೃದಯ, ಒಂದು ಲಿವರ್ ದಾನ ಮಾಡಲಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಅಂಬುಲೆನ್ಸ್‌ ಮೂಲಕ ಇಂದು ಬೆಳಗ್ಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.

    2001 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮೊದಲ ಐಟಿ ಇಂಜಿನಿಯರ್ ಆಗಿ ನೇಮಕ ವಿಷ್ಣು ತೀರ್ಥ ವಡವಿ ನೇಮಕಗೊಂಡಿದ್ದರು. ಕಳೆದ ಸೆಪ್ಟೆಂಬರ್ 7 ನೇ ತಾರೀಖು ಮಿದುಳು ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಮಿದುಳು ನಿಷ್ಕ್ರಿಯಗೊಂಡಿತು. ಬಳಿಕ ಅಂಗಾಂಗ ದಾನ ಮಾಡಿ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಸ್, ಕಾರು ಮುಖಾಮುಖಿ ಡಿಕ್ಕಿ – 9 ಮಂದಿಗೆ ಗಂಭೀರ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

    ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

    ಹಾಸನ: ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರನ ಅಂಗಾಂಗ ದಾನ (Organ Donation) ಮಾಡುವ ಮೂಲಕ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

    ಹಾಸನ (Hassan) ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಹರಳಹಳ್ಳಿ ಗ್ರಾಮದ ಯೋಗೇಶ್, ರಾಣಿ ದಂಪತಿಯ ಏಕೈಕ ಪುತ್ರ ಕಿರಣ್ (23) ಅಪಘಾತದ ಬಳಿಕ ಮೆದುಳು ನಿಷ್ಕ್ರಿಯವಾಗಿದ್ದ ಹಿನ್ನೆಲೆ ಅಂಗಾಂಗ ದಾನ ಮಾಡಲಾಗಿದೆ.

    ದಂಪತಿ ಬೆಂಗಳೂರಿನಲ್ಲಿ ವಾಸವಿದ್ದು, ಕಳೆದ 2 ದಿನಗಳ ಹಿಂದೆ ಕಿರಣ್ ನಗರದಲ್ಲಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಮಗನ ಅಂಗಾಂಗ ದಾನ ಮಾಡಿದ್ದಾರೆ. ಇದನ್ನೂ ಓದಿ: ಗೇ ಡೇಟಿಂಗ್ ಆ್ಯಪ್‌ನಲ್ಲಿ ಯುವಕರಿಗೆ ವಂಚನೆ- 6 ಮಂದಿ ಅರೆಸ್ಟ್

    ಕಿರಣ್ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದು, ಬುಧವಾರ ಮಧ್ಯಾಹ್ನ ತನ್ನ ಹುಟ್ಟೂರು ಹರಳಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಆಹ್ವಾನ

    ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಆಹ್ವಾನ

    ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ (Ashwini Puneeth Rajkumar) ಅವರನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಆಹ್ವಾನಿಸಿದ್ದಾರೆ. ದೊಡ್ಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುದನ್ನ ಗಮನಿಸಿರುವ ಸಚಿವರು, ಆರೋಗ್ಯ ಇಲಾಖೆಯ ವತಿಯಿಂದ ಆಗಸ್ಟ್ 3 ರಂದು ಆಚರಿಸುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ.

    ವರನಟ ಡಾ.ರಾಜ್‌ಕುಮಾರ್ ಅವರಂತೆಯೇ ಪುನೀತ್ ರಾಜ್‌ಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರು ಕಣ್ಣುಗಳ ದಾನವು ರಾಜ್ಯದಲ್ಲಿ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಅಲ್ಲದೇ ರಾಜ್ಯದಲ್ಲಿ ಅಂಗಾಂಗ ದಾನ ಪ್ರಮಾಣ ಏರಿಕೆ ಕೂಡಾ ಕಂಡಿತ್ತು. ಅನೇಕರು ದಿ. ಪುನೀತ್ ರಾಜ್‌ಕುಮಾರ್ ಅವರನ್ನೇ ಮಾದರಿಯನ್ನಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಆಹ್ವಾನ ನೀಡಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಅಲ್ಲದೇ ಅಂಗಾಂಶ ದಾನದ ಮೂಲಕ 50 ಜನರ ಜೀವವನ್ನ ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನ ರೂಪಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

    ಆಗಸ್ಟ್ 3 ರಂದು ಅಂಗಾಂಗ ದಾನ ದಿನಾಚರಣೆ ಆಚರಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಗಾಂಗ ದಾನದ ಪ್ರಮಾಣ ಪ್ರತಿ ಮಿಲಿಯನ್‌ ಜನಸಂಖ್ಯೆಗೆ 0.08 ರಷ್ಟಿದೆ. ಸುಮಾರು 3 ಲಕ್ಷ ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ವರ್ಷ ಕೇವಲ 10,000 ಜನರು ಮಾತ್ರ ಕಸಿ ಪಡೆಯುತ್ತಾರೆ. ಇದನ್ನೂ ಓದಿ: ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ

    ಭಾರತದಲ್ಲಿ ಸುಮಾರು 50,000 ರೋಗಿಗಳಿಗೆ ಹೃದಯ ಕಸಿ ಅಗತ್ಯವಿದೆ. ಆದರೆ 1% ಜನರು ಮಾತ್ರ ಅಂಗಾಂಗವನ್ನು ಪಡೆಯುತ್ತಿದ್ದಾರೆ. 2 ಲಕ್ಷ ಭಾರತೀಯರಿಗೆ ಕಾರ್ನಿಯಾ ಕಸಿ ಅಗತ್ಯವಿದೆ. ಆದರೆ ಪ್ರತಿ ವರ್ಷ ಕೇವಲ 50,000 ಕಾರ್ನಿಯಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರ್ಕಾರವು ಮಾನವ ಅಂಗಾಂಗಗಳ ಕೊರತೆಯನ್ನು ನೀಗಿಸಲು ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದು, ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಅಂಗಾಂಗ ಹಿಂಪಡೆಯುವಿಕೆ ಪ್ರಾರಂಭಿಸಲಾಗಿದೆ. ಮೆದುಳು ನಿಷ್ಕ್ರಿಯ ಹೊಂದಿದ ರೋಗಿಗಳನ್ನು ಗುರುತಿಸಿ ಅಂಗಾಂಗ ದಾನ ಮಾಡುವ ಕುರಿತು ಸಮಾಲೋಚನೆಗಳನ್ನ ಸಂಬಂಧಿಸಿದವರೊಂದಿಗೆ ನಡೆಸಲಾಗುತ್ತಿದೆ.‌

    ಸರ್ಕಾರದ ವತಿಯಿಂದ ಬಡರೋಗಳಿಗೆ ಉಚಿತ ಅಂಗಾಂಗ ಕಸಿ ಮಾಡುವ ಯೋಜನೆ ಆರಂಭಿಸಲಾಗಿದ್ದು, ಇದುವರೆಗೂ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ನರವಿಜ್ಞಾನ ಸಂಸ್ಥೆ ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ, ಕಿಮ್ಸ್ ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರ್ಮಿಕ ಕಟ್ಟುಪಾಡು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ- ದಿನೇಶ್ ಗುಂಡೂರಾವ್ ಮೆಚ್ಚುಗೆ

    ಧಾರ್ಮಿಕ ಕಟ್ಟುಪಾಡು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ- ದಿನೇಶ್ ಗುಂಡೂರಾವ್ ಮೆಚ್ಚುಗೆ

    ಬೆಂಗಳೂರು: ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬದ ಕಾರ್ಯವನ್ನ ಆರೋಗ್ಯ ಸಚಿವ (Health Minister) ದಿನೇಶ್ ಗುಂಡೂರಾವ್ (Dinesh Gundu Rao) ಶ್ಲಾಘಿಸಿದ್ದಾರೆ. ಅಲ್ಲದೇ ಅಂಗಾಂಗ ದಾನ (Organ Donation) ಮಾಡಿದ್ದ ಫಾರ್ದಿನ್ ಖಾನ್ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಸನ್ಮಾನಿಸಿದ್ದಾರೆ.

    ಅಂಗಾಂಗ ದಾನ ನಿಜವಾಗಿಯೂ ಆತ್ಮಚೈತನ್ಯ ನೀಡುವ ಕಾರ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ. ಆದರೆ ಫಾರ್ದಿನ್ ಕುಟುಂಬ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಮರುಜೀವ ನೀಡಿದ್ದಾರೆ ಎಂದು ಅವರು ಪ್ರಶಂಶಿಸಿದ್ದಾರೆ. ಇದನ್ನೂ ಓದಿ: ಹೆಲ್ಪ್‌ಲೈನ್ ಹೆಸರಲ್ಲಿ ಒಬ್ಬರಿಗೆ 4 ಲಕ್ಷ ರೂ. ವೇತನ- ತನಿಖೆಗೆ ಆದೇಶಿಸಿದ ಸಚಿವ ಜಮೀರ್

    22 ವರ್ಷದ ಫಾರ್ದಿನ್ ಖಾನ್ ಜೂ.4 ರಂದು ಮದುವೆ ಸಮಾರಂಭ ಮುಗಿಸಿ ವಾಪಸ್ ಬರುತ್ತಿದ್ದಾಗ ತುಮಕೂರಿನ (Tumkur) ಶಿರಾ ಬಳಿ ಅಪಘಾತಕ್ಕೀಡಾಗಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಬಳಿಕ ಜೂ.7ರ ಬೆಳಗ್ಗೆ ಫಾರ್ದಿನ್ ಖಾನ್ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ (SPARSH Hospital) ವೈದ್ಯರು ಘೋಷಿಸಿದ್ದರು. ಆದರೆ ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು.

    ಈ ದುಃಖದ ಸ್ಥಿತಿಯಲ್ಲೂ ಫಾರ್ದಿನ್ ಕುಟುಂಬದವರು ಆತನ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಹೃದಯವನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ 57 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಪಿತ್ತಜನಕಾಂಗವನ್ನು ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಗೆ ಕಸಿ ಮಾಡಲಾಗಿದೆ. ಎಡ ಮೂತ್ರಪಿಂಡ ಮತ್ತು ಫ್ಯಾಂಕ್ರಿಯಾಸ್‍ನ್ನು ಅಪೆÇೀಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಬಹು ಅಂಗಾಂಗ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ

  • ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

    ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

    ನವದೆಹಲಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ (Organ Donation) 8ರಿಂದ 9 ಮಂದಿಗೆ ಜೀವದಾನ ಮಾಡಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನತೆಗೆ ಅಂಗಾಂಗ ದಾನದ ಮಹತ್ವವನ್ನು ತಿಳಿಸಿದ್ದಾರೆ. ಅಂಗಾಂಗ ದಾನ ಮಾಡುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.

    ಮನ್‌ ಕಿ ಬಾತ್‌ (Mann Ki Baat) ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರರಿಗೆ ಹೊಸ ಜೀವನ ನೀಡುವ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಲು ಸರ್ಕಾರವು ಹಲವಾರು ನಿಯಮಗಳನ್ನು ಸಡಿಲಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನರ್ಹಗೊಂಡ ಸಂಸದ – ಅಧಿಕೃತ ಟ್ವಿಟ್ಟರ್ ಖಾತೆಯ ಬಯೋದಲ್ಲಿ ಬರೆದುಕೊಂಡ ರಾಹುಲ್ ಗಾಂಧಿ

    ಇಂದು ನಾವು ಆಜಾದಿ ಕಾ ಅಮೃತಕಲ್ ಅನ್ನು ಆಚರಿಸುತ್ತಿದ್ದೇವೆ. ಜೊತೆಗೆ ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿದ್ದೇವೆ. ಈಗ ‘ಮನ್‌ ಕಿ ಬಾತ್‌’ 99ನೇ ಸಂಚಿಕೆ ಮುಗಿಸಿದ್ದು, 100ನೇ ಸಂಚಿಕೆಗೆ ನಿಮ್ಮೆಲ್ಲರ ಸಲಹೆಗಳನ್ನು ಪಡೆಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಸಲಹೆಗಳು 100 ನೇ ಸಂಚಿಕೆಯನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಹೇಳಿದ್ದಾರೆ.

    ಅಂಗಾಂಗ ದಾನ ಮಹತ್ವ ಕುರಿತು ಮಾತನಾಡಿದ ಮೋದಿ, ಒಬ್ಬ ವ್ಯಕ್ತಿಯು ಮರಣದ ನಂತರ ತನ್ನ ಅಂಗಗಳನ್ನು ದಾನ ಮಾಡಿದಾಗ, ಅದು 8ರಿಂದ 9 ಜನರಿಗೆ ಹೊಸ ಜೀವನ ನೀಡಲು ಸಾಧ್ಯವಾಗುತ್ತದೆ. ಅಂಗಾಂಗ ದಾನವನ್ನು ಉತ್ತೇಜಿಸಲು, ಇಡೀ ದೇಶದಲ್ಲಿ ಇದೇ ರೀತಿಯ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ವೃದ್ಧ ರೋಗಿಯನ್ನು ಎಳೆದೊಯ್ದರು!

    ಅಂಗಾಂಗ ದಾನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಅದಕ್ಕೆ ಸಂಬಂಧಿಸಿದ ಕನಿಷ್ಠ ವಯೋಮಿತಿ ಮತ್ತು ವಾಸಸ್ಥಳ ನಿಯಮವನ್ನು ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.

    ವ್ಯಕ್ತಿಯು ಯಾವುದೇ ರಾಜ್ಯಕ್ಕೆ ಹೋಗಿ ಅಂಗಾಂಗ ದಾನಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಅಂಗಾಂಗ ದಾನಕ್ಕೆ ಕನಿಷ್ಠ ವಯಸ್ಸು 65 ವರ್ಷ ಎಂಬ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದೆ. ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕೆಂದು ನಾನು ಕೋರುತ್ತೇನೆ. ನಿಮ್ಮ ಒಂದು ನಿರ್ಧಾರವು ಅನೇಕ ಜೀವಗಳನ್ನು ಉಳಿಸಬಹುದು. ಅನೇಕ ಜೀವಗಳಿಗೆ ಜೀವದಾನ ಮಾಡಬಹುದು ಎಂದು ಕರೆ ನೀಡಿದ್ದಾರೆ.

  • ಪವರ್ ಸ್ಟಾರ್ ಪ್ರೇರಣೆ – 150ಕ್ಕೂ ಹೆಚ್ಚು ಜನರಿಂದ ಅಂಗಾಂಗ ದಾನಕ್ಕೆ ಪ್ರತಿಜ್ಞೆ

    ಪವರ್ ಸ್ಟಾರ್ ಪ್ರೇರಣೆ – 150ಕ್ಕೂ ಹೆಚ್ಚು ಜನರಿಂದ ಅಂಗಾಂಗ ದಾನಕ್ಕೆ ಪ್ರತಿಜ್ಞೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮನ್ನೆಲ್ಲಾ ಅಗಲಿ ವರ್ಷವೇ ಉರುಳಿದೆ. ಆದರೂ ಅವರ ಕಾರ್ಯಗಳು ಮಾತ್ರ ಜನರನ್ನು ಪದೇ ಪದೇ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಉತ್ತೇಜಿಸುತ್ತಲೇ ಇದೆ. ಅದರಂತೆ ಬೆಂಗಳೂರಿನಲ್ಲೊಂದು (Bengaluru) ವಿಶೇಷ ಕಾರ್ಯಕ್ರಮ ಪುನೀತ್ ಜೀವನದ ಸಾರ್ಥಕತೆಗೆ ಸಾಕ್ಷಿಯಾಗಿದೆ.

    ಇತ್ತೀಚೆಗೆ ಕರ್ನಾಟಕ ಅಂಗಾಂಗ ದಾನದಲ್ಲಿ (Organ Donation) ದೇಶದಲ್ಲೇ ಅತಿ ಹೆಚ್ಚು ಅಂಗಾಂಗ ದಾನ ಮಾಡುತ್ತಿರುವ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲ್ಲ. ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ತಮ್ಮ ಅಂಗಾಂಗ ದಾನಗಳ ಮೂಲಕ ಇಡೀ ಪ್ರಪಂಚಕ್ಕೆ ಸ್ಪೂರ್ತಿಯಾದರು. ಅವರನ್ನೇ ಅನುಸರಿಸಿದ ಅನೇಕರು ಇಂದಿಗೂ ಪ್ರತಿನಿತ್ಯ ಅಂಗಾಂಗ ದಾನಗಳ ಫಾರಂ ಸಹಿ ಹಾಕುತ್ತಿದ್ದಾರೆ.

    ಬೆಂಗಳೂರಿನಲ್ಲಿ ಬೃಹತ್ ಅಂಗಾಂಗ ದಾನ ಶಿಬಿರ ನಡೆದಿದ್ದು ಬರೊಬ್ಬರಿ 150 ಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ನಗರದ ಪದ್ಮನಾಭನಗರ ಎನ್‌ಯು ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 150 ಕ್ಕೂ ಹೆಚ್ಚು ಜನರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಅಂಗಾಂಗ ದಾನಕ್ಕೆ ಪಾಲಿಸಬೇಕಾದ ನಿಯಮಗಳ ಫಾರಂ ಸಹಿ ಹಾಕುವ ಮೂಲಕ ಅಪ್ಪು ಹಾದಿಯಲ್ಲೇ ಸಮಾಜಕ್ಕೆ ಒಳ್ಳೆಯದಾಗುವಂತೆ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಗಾಂಗ ದಾನಕ್ಕೆ ಸಹಿ ಮಾಡಿದ ಮಹಿಳೆಯೊಬ್ಬರು ಮಾತಾನಾಡಿ, ನಮಗೆಲ್ಲ ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಅವರೇ ಸ್ಪೂರ್ತಿ. ನಾವು ಪುನರ್ಜನ್ಮದ ಮೇಲೆ ನಂಬಿಕೆ ಇಡುವುದಕ್ಕಿಂತ ಈ ರೀತಿ ಅಂಗಾಂಗಗಳ ದಾನ ಮಾಡುವ ಮೂಲಕ ಮತ್ತಷ್ಟು ಜನರ ಜೀವನಕ್ಕೆ ಅವಕಾಶ ಮಾಡಿಕೊಡಬಹುದು. ನಾನು ಕೂಡ ಇದರ ಅರಿವನ್ನು ಜನರಿಗೆ ಮೂಡಿಸುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

    ಈ ಹಿಂದೆ ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಯುವಜನರು ಕೃಷಿಯತ್ತ ಮುಖಮಾಡಿದ್ದರು. ಅದೇ ರೀತಿ ಅಪ್ಪುವಿನ ಒಳ್ಳೆಯ ಕೆಲಸ ಕೂಡಾ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತಿರುವುದು ಒಂದು ಒಳ್ಳೆಯ ಬದಲಾವಣೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k