Tag: Order

  • ತಾಯಿಯ ಅಮೆಜಾನ್ ಖಾತೆಯಲ್ಲಿ ಬರೋಬ್ಬರಿ 2.47 ಲಕ್ಷದ ಸಾಮಾಗ್ರಿ ಆರ್ಡರ್ ಮಾಡಿದ ಬಾಲಕಿ

    ತಾಯಿಯ ಅಮೆಜಾನ್ ಖಾತೆಯಲ್ಲಿ ಬರೋಬ್ಬರಿ 2.47 ಲಕ್ಷದ ಸಾಮಾಗ್ರಿ ಆರ್ಡರ್ ಮಾಡಿದ ಬಾಲಕಿ

    ವಾಷಿಂಗ್ಟನ್: ತಾಯಿಯ ಅಮೆಜಾನ್ (Amazon) ಖಾತೆಯಿಂದ ಪುಟ್ಟ ಬಾಲಕಿ ಬರೋಬ್ಬರಿ 3 ಸಾವಿರ ಡಾಲರ್(ಅಂದಾಜು 2.47 ಲಕ್ಷ ರೂ.) ಮೌಲ್ಯದ ವಸ್ತುಗಳನ್ನು ಆರ್ಡರ್ (Order) ಮಾಡಿದ ಘಟನೆ ಅಮೇರಿಕದಲ್ಲಿ (America) ನಡೆದಿದೆ.

    ಅಮೇರಿಕಾದ ಮ್ಯಾಸಾಚೂಸೆಟ್ಸ್‌ನಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಲೀಲಾ ವರಿಸ್ಕೋ ಎಂಬ ಬಾಲಕಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ತನ್ನ ತಾಯಿಯ ಮೊಬೈಲ್‌ನಲ್ಲಿ (Mobile) ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಾ ಅರಿವಿಲ್ಲದೆ ತಾಯಿಯ ಅಮೆಜಾನ್ ಖಾತೆಯಿಂದ 3 ಸಾವಿರ ಡಾಲರ್ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿದ್ದಳೆ. ಇದನ್ನೂ ಓದಿ: ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್ 

    ಈ ಆರ್ಡರ್ 10 ಮೋಟಾರ್ ಸೈಕಲ್‌ಗಳು (Motar Cycle) ಹಾಗೂ 10 ಜೋಡಿ ಕೌಗರ್ಲ್ ಬೂಟುಗಳನ್ನು (Cowgirl Boots) ಒಳಗೊಂಡಿತ್ತು. ಅಮೆಜಾನ್ ಖಾತೆಯಿಂದ ಯಾರು ಆರ್ಡರ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ತಾಯಿ ಜೆಸ್ಸಿಕಾ ನ್ಯೂನ್ಸ್ ತನ್ನ ಅಮೆಜಾನ್ ಖಾತೆಯ ಹಿಸ್ಟರಿ ಪರಿಶೀಲಿಸಿದ್ದಾರೆ. ಈ ವೇಳೆ ಸತ್ಯಾಂಶ ಹೊರಬಂದಿದೆ. ಇದನ್ನೂ ಓದಿ: ಅಬ್ಬಾ..! ಇದೆಂಥಾ ಮೀನು? – ಡೆಡ್ಲಿ ಫಿಶ್‌ ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಪತಿ

    ಮಗಳು ಅರಿವಿಲ್ಲದೇ ತನಗೆ ಬೇಕಾದ ಆಟಿಕೆಗಳು ಹಾಗೂ ಬೂಟುಗಳನ್ನು ಆಯ್ಕೆ ಮಾಡಿ ಅಮೆಜಾನ್ ಅಪ್ಲಿಕೇಷನ್‌ನಲ್ಲಿ ‘ಬಯ್ ನೌ’ (Buy Now) ಎಂಬುವುದರ ಮೇಲೆ ಕ್ಲಿಕ್ ಮಾಡಿದ್ದಾಳೆ ಎಂದು ತಾಯಿ ಜೆಸ್ಸಿಕಾ ನ್ಯೂನ್ಸ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಬೂಟುಗಳು ಹಾಗೂ ಅರ್ಧದಷ್ಟು ಮೋಟಾರ್ ಸೈಕಲ್‌ಗಳನ್ನು ರದ್ದುಗೊಳಿಸಿದ್ದೇನೆ. ಆದರೆ ಉಳಿದ ಐದು ಮೋಟಾರ್ ಸೈಕಲ್‌ಗಳು ಹಾಗೂ ಒಂದು ಜೀಪ್ ಅದಾಗಲೇ ಶಿಪ್ (Ship) ಆಗಿದ್ದರಿಂದ ಅದನ್ನು ರದ್ದುಗೊಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ 

    ಮಗಳು ಅರಿವಿಲ್ಲದೇ ಮಾಡಿರುವ ತಪ್ಪಿನಿಂದ ತಾಯಿ ಆಕೆಯನ್ನು ಶಿಕ್ಷಿಸದೇ ಆಕೆಗೆ ಕಲಿಕೆಯ ಪಾಠವನ್ನು ಹೇಳಿದ್ದಾರೆ. ಇದನ್ನೂ ಓದಿ: ಚೀನಾದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲವ್‌ ಮಾಡಲು ಒಂದು ವಾರ ರಜೆ

  • ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು, ಸದಸ್ಯರ ನೇಮಕಾತಿ ಆದೇಶ ವಾಪಸ್‌

    ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು, ಸದಸ್ಯರ ನೇಮಕಾತಿ ಆದೇಶ ವಾಪಸ್‌

    ಬೆಂಗಳೂರು: 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕಾತಿ ಸಂಬಂಧ ಹೊರಡಿಸಿದ ಆದೇಶವನ್ನು ಸರ್ಕಾರ ವಾಪಸ್‌ ಪಡೆದಿದೆ.

    ಕೆಲವರಿಂದ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನ ನಿರಾಕರಣೆ, ನೇಮಕಾತಿಯಲ್ಲಿ ಕೆಲವು ಎಡವಟ್ಟುಗಳು ನಡೆದ ಹಿನ್ನೆಲೆಯಲ್ಲಿ ಆದೇಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾಪಸ್‌ ಪಡೆದಿದೆ. ಇದನ್ನೂ ಓದಿ: ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

    ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ತೇಜಸ್ವಿ ಪತ್ನಿ ರಾಜೇಶ್ವರಿ ಅವರನ್ನು ನೇಮಕ ಮಾಡಲಾಗಿತ್ತು. ರಾಜೇಶ್ವರಿ ಅವರು ಕಳೆದ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು. ನಿಧನರಾಗಿದ್ದರೂ ಸರ್ಕಾರ ಮತ್ತೆ ಅವರ ಹೆಸರನ್ನು ಆಯ್ಕೆ ಮಾಡಿದ್ದಕ್ಕ ಟೀಕೆ ವ್ಯಕ್ತವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ ಅಮೆರಿಕ – ಭುಗಿಲೆದ್ದ ಪ್ರತಿಭಟನೆ

    ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ ಅಮೆರಿಕ – ಭುಗಿಲೆದ್ದ ಪ್ರತಿಭಟನೆ

    ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಈ ಆದೇಶದಿಂದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.

    ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದನ್ನು ವಿರೋಧಿಸುತ್ತಿರುವ ಮಹಿಳೆಯರು ‘ನಮ್ಮ ದೇಹ, ನಮ್ಮ ಹಕ್ಕು’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದೇಶದ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳು ಗರ್ಭಪಾತವನ್ನು ನಿರ್ಬಂಧಿಸುವ ನಿರೀಕ್ಷೆಯಿದೆ. ಮಹಿಳೆಯರು ತಮ್ಮ ಗರ್ಭಪಾತ ಮಾಡಿಸಲೇ ಬೇಕೆಂದರೆ ಅನುಮತಿಯಿರುವ ದೇಶಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಇದನ್ನೂ ಓದಿ: ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

    ಅಮೆರಿಕದಲ್ಲಿ ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ್ದರೂ ವಾಲ್ಟ್ ಡಿಸ್ನಿ, ಮೆಟಾದಂತಹ ಹಲವಾರು ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರ್ಭಪಾತ ಮಾಡಿಸಲು ಇತರ ದೇಶಗಳಿಗೆ ಹೋಗಲು ಸಹಾಯ ಮಾಡುವುದಾಗಿ ತಿಳಿಸಿದೆ.

    ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.

    Live Tv

  • ಪಾಕಿಸ್ತಾನದಲ್ಲಿ ಗನ್ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭ!

    ಪಾಕಿಸ್ತಾನದಲ್ಲಿ ಗನ್ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭ!

    ಇಸ್ಲಾಮಾಬಾದ್: ಸಾಮಾಜಿಕ ಮಾಧ್ಯಮದ ಮೂಲಕ ಗನ್‍ಗಳನ್ನು ತರಿಸಿಕೊಳ್ಳಬಹುದು ಹಾಗೂ ಈ ಸೇವೆ ಪಾಕಿಸ್ತಾನದಾದ್ಯಂತ ಚಾಲ್ತಿಯಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

    ಹೌದು, ಪಾಕಿಸ್ತಾನದಲ್ಲಿ ಗನ್‍ಗಳನ್ನು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭವಾಗಿ ತರಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಜನರು ಸಾಮಾಜಿಕ ಮಾಧ್ಯಮದ ಮೂಲಕ ತಮಗಿಷ್ಟದ ಗನ್‍ಗಳನ್ನು ಆಯ್ಕೆ ಮಾಡಿ, ವಿತರಕರಿಗೆ ಫೋನ್ ಕರೆ ಮಾಡಿ, ಬೆಲೆಯ ಬಗ್ಗೆ ಚರ್ಚಿಸಿ, ಅಡ್ವಾನ್ಸ್ ನೀಡಿದರಾಯ್ತು. ಕೆಲವೇ ದಿನಗಳಲ್ಲಿ ಆರ್ಡರ್ ಮಾಡಿದ ವ್ಯಕ್ತಿಯ ಮನೆ ಮುಂದೆ ಗನ್ ಹಾಜರಿರುತ್ತದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ

    ಈ ವಹಿವಾಟು ರಹಸ್ಯವಾಗಿ ನಡೆಯುತ್ತದೆ ಎಂದು ಜನರು ಭಾವಿಸಬಹುದು. ಆದರೆ ಈ ಪ್ರಕ್ರಿಯೆಗಳು ಫೇಸ್‍ಬುಕ್ ಹಾಗೂ ವಾಟ್ಸಪ್‍ಗಳಲ್ಲೇ ಯಾವುದೇ ಮುಚ್ಚು ಮರೆ ಇಲ್ಲದೆ ನಡೆಯುತ್ತದೆ ಎನ್ನುವುದು ಆಘಾತಕಾರಿ ವಿಷಯ.

    ಗನ್ ಅನ್ನು ತರಿಸಿಕೊಂಡ ಪಾಕ್ ಪ್ರಜೆಯೊಬ್ಬ ಈ ರಹಸ್ಯವನ್ನು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. 38 ಸಾವಿರ ರೂ.ಯ ಗನ್ ತರಿಸಿಕೊಳ್ಳಲು ವಿತರಕ ಯಾವುದೇ ಪರವಾನಗಿಯನ್ನೂ ಕೇಳಿರಲಿಲ್ಲ. ಫೋನ್ ಮೂಲಕವೇ ಸಂಪೂರ್ಣ ವ್ಯವಹಾರ ನಡೆದಿದ್ದು, 10 ಸಾವಿರ ರೂ.ಯನ್ನು ಮುಂಗಡ ಪಾವತಿಯಾಗಿ ನೀಡಿದ್ದ. ಗನ್ ಆತನ ಕೈಗೆ ತಲುಪಿದ ಬಳಿಕ ಉಳಿದ ಹಣವನ್ನು ಪಾವತಿ ಮಾಡಿದ್ದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್‌ ಆಗಿ ಬಳಸುತ್ತೇನೆ

    ಕರಾಚಿಯಲ್ಲಿ ಅತ್ಯಂತ ಸುಲಭವಾಗಿ ಗನ್ ಖರೀದಿಸುವ ಜಾಲಗಳಿವೆ ಎಂಬುದು ತಿಳಿದು ಬಂದಿದೆ. ಶಸ್ತ್ರಾಸ್ತ್ರ ವಿತರಕರ ಹಾಗೂ ಅದನ್ನು ತಲುಪಿಸುವವರ ಪ್ರತ್ಯೇಕ ಎರಡು ನೆಟ್ವರ್ಕ್‍ಗಳು ಇವೆ. ಶಸ್ತ್ರಾಸ್ತ್ರ ಪ್ರಕಾರಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಮಿತಿಗಳಿಲ್ಲ. 9 ಎಂಎಂ ಪಿಸ್ತುಲ್‍ನಿಂದ ಹಿಡಿದು ಎಕೆ-47 ವರೆಗಿನ ಎಲ್ಲಾ ರೀತಿಯ ಅಸ್ತ್ರಗಳು ಮಾರಾಟವಾಗುತ್ತವೆ ಎಂದು ವರದಿಗಳು ತಿಳಿಸಿವೆ.

  • ಸೋದರಳಿಯನಿಗಾಗಿ whiskey ಆರ್ಡರ್ ಮಾಡಿ 3 ಲಕ್ಷ ಕಳೆದುಕೊಂಡ ನಟಿ

    ಸೋದರಳಿಯನಿಗಾಗಿ whiskey ಆರ್ಡರ್ ಮಾಡಿ 3 ಲಕ್ಷ ಕಳೆದುಕೊಂಡ ನಟಿ

    ಮುಂಬೈ: ಸೋದರಳಿಯನಿಗಾಗಿ ವಿಸ್ಕಿ ಬಾಟಲಿಯನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಹಿರಿಯ ನಟಿಯೊಬ್ಬರ ಬ್ಯಾಂಕ್ ಖಾತೆಯಿಂದಲೇ ಸೈಬರ್ ಕಳ್ಳರು, 3 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    BRIBE

    ಹಿಂದಿ ಧಾರಾವಾಹಿಯ ಹಿರಿಯ ನಟಿಯೊಬ್ಬರು ಮದುವೆಯಾಗುತ್ತಿರುವ ಸೋದರಳಿಯನಿಗೆ ಕೊಡಲೆಂದು, ಆನ್‍ಲೈನ್‍ನಲ್ಲಿ 4,800 ರೂಪಾಯಿ ಮೌಲ್ಯದ ವಿಸ್ಕಿ ಬಾಟಲಿ ಆರ್ಡರ್ ಮಾಡಿದ್ದರು. ಆದರೆ ಅದು ಡೆಲಿವರಿಯಾಗದ ಹಿನ್ನೆಲೆಯಲ್ಲಿ ಅಲ್ಲಿದ್ದ ಸಂಖ್ಯೆಗೆ ಕರೆ ಮಾಡಿ, ಹಣವನ್ನು ಮರುಪಾವತಿಸಲು ಕೋರಿದ್ದಾರೆ. ಮರುಪಾವತಿಗೆ ನೀವು ನಮ್ಮ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೈಬರ್ ಕಳ್ಳರು ಹೇಳಿದ್ದಾರೆ. ಇದನ್ನೂ ಓದಿ: ಕೊಹ್ಲಿ ಭಾವನಾತ್ಮಕ ಪೋಸ್ಟ್- ನಗುವೇ ಪತ್ನಿಯ ಉತ್ತರ

    ನಟಿ, ಕ್ರೆಡಿಟ್ ಕಾರ್ಡ್ ಬಳಸಿ ನೋಂದಣಿ ಮಾಡಿಕೊಂಡಿದ್ದು, ಒಟಿಪಿಯನ್ನೂ ಹಂಚಿಕೊಂಡಿದ್ದಾರೆ. ಅವರ ಉಳಿತಾಯ ಖಾತೆಯಲ್ಲಿದ್ದ ಹಣವನ್ನೆಲ್ಲ ಡ್ರಾ ಮಾಡಿಕೊಂಡ ಕಳ್ಳರು, ಬಳಿಕ ಡೆಬಿಟ್ ಕಾರ್ಡ್‍ನಿಂದಲೂ ನೋಂದಣಿ ಮಾಡಿಸಿಕೊಂಡಿದ್ದು, ಒಟ್ಟು 3.05 ಲಕ್ಷ ರೂಪಾಯಿ ದೋಚಿದ್ದಾರೆ. ಈ ವಿಚಾರವಾಗಿ ನಟಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀ

  • ಪಾರ್ಸಲ್ ಕೊಡಲು ತಡ- ರೆಸ್ಟೋರೆಂಟ್ ಮಾಲೀಕನನ್ನ ಗುಂಡಿಕ್ಕಿ ಕೊಂದ ಫುಡ್ ಡೆಲಿವರಿ ಬಾಯ್

    ಪಾರ್ಸಲ್ ಕೊಡಲು ತಡ- ರೆಸ್ಟೋರೆಂಟ್ ಮಾಲೀಕನನ್ನ ಗುಂಡಿಕ್ಕಿ ಕೊಂದ ಫುಡ್ ಡೆಲಿವರಿ ಬಾಯ್

    ನವದೆಹಲಿ: ಫುಡ್ ಡೆಲಿವರಿ ಬಾಯ್ ಒಬ್ಬ ಪಾರ್ಸಲ್ ನೀಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಸುನಿಲ್ ಅಗರ್‍ವಾಲ್ ಮೃತನಾಗಿದ್ದಾನೆ. ಮಿತ್ರ ಎಂಬ ಸ್ವಂತ ರೆಸ್ಟೋರೆಂಟ್ ಹೊಂದಿದ್ದರು. ರಾತ್ರಿ ಫುಡ್ ಡೆಲಿವರಿ ಬಾಯ್‍ನಿಂದ ಕೊಲೆಯಾಗಿದ್ದಾರೆ. ಫುಡ್ ತಡವಾಗುತ್ತದೆ ಎನ್ನುವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

     

    ಮಿತ್ರ ರೆಸ್ಟೋರೆಂಟ್‍ಗೆ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ಆರ್ಡರ್ ಬಂದಿತ್ತು. ಆ ಆರ್ಡರ್ ಅನ್ನು ತೆಗೆದುಕೊಂಡು ಹೋಗಲು ಮಂಗಳವಾರ ರಾತ್ರಿ ಡೆಲಿವರಿ ಬಾಯ್ ಬಂದಿದ್ದ. ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿತ್ತು. ಆದರೆ ಪೂರಿ, ಸಬ್ಜಿ ಪಾರ್ಸಲ್ ರೆಡಿ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್‍ನವರು ಹೇಳಿದ್ದರು. ಇದೇ ವಿಷಯಕ್ಕೆ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ 20 ವರ್ಷದಲ್ಲಿ ನಿರ್ನಾಮ ಆಗುತ್ತೆ: ಉಮೇಶ್ ಕತ್ತಿ

    ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಮನಬಂದಂತೆ ಬೈದಿದ್ದ. ಇದರಿಂದ ಕೋಪಗೊಂಡ ಆ ಸಿಬ್ಬಂದಿ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದ. ಜಗಳ ನಿಲ್ಲಿಸಲು ಅಲ್ಲಿಗೆ ಬಂದ ಸುನಿಲ್ ಹಣೆಗೆ ಈ ವೇಳೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಗುಂಡು ಹಾರಿಸಿದ್ದಾನೆ. ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಡೆಲಿವರಿ ಬಾಯ್ ನಾಪತ್ತೆಯಾಗಿದ್ದು, ಆತನನ್ನು ಹಿಡಿಯಲು ಮೂರು ಪೊಲೀಸರ ತಂಡ ರಚಿಸಲಾಗಿದೆ.

  • ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ನಿರ್ಬಂಧ ಸಡಿಲಿಕೆ

    ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ನಿರ್ಬಂಧ ಸಡಿಲಿಕೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನ ಸಂಚಾರದ ನಿರ್ಬಂಧ ವಿಧಿಸಿ ಹೊರಡಿಸಲಾದ ಆದೇಶವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾರ್ಪಾಡು ಮಾಡಿದ್ದಾರೆ.

    ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ವಾಹನಗಳನ್ನು ಮಾತ್ರ ನಿರ್ಭಂದಿಸಲಾಗಿದೆ. ಉಳಿದ ವಾಹನಗಳು ಸಂಚರಿಸಬಹುದಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಹಾಗೂ ಆಗಸ್ಟ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

    ಉಳಿದಂತೆ ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳ(ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಅಥವಾ ಇಲಾಖೆ ವತಿಯಿಂದ ಚಾಲ್ತಿಯಲ್ಲಿರುವ ಆದೇಶ, ನಿಯಮ, ನಿರ್ಬಂದ, ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ. ಉಲ್ಲಂಘನೆಯು ಸಂಬಂಧಪಟ್ಟ ಕಾಯ್ದೆಯಡಿ ದಂಡನೀಯವಾಗಿದೆ ಎಂದು ಹೇಳಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

    ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮತ್ತಷ್ಟು ಅನ್‍ಲಾಕ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿದ್ದು, ಬಸ್ ಸಂಚಾರ ಸೇರಿ ಎಲ್ಲ ಚಟುವಟಿಕೆಗಳಿಗೆ ಸಂಜೆ 5ರವರೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

    ಅನ್‍ಲಾಕ್ ಇದ್ದರೂ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಈ ಬಾರಿಯ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿದೆ ಅವಕಾಶ ಇದ್ದು, ಹಾಲು, ತರಕಾರಿ, ಮೀನು, ಮಾಂಸ ಮತ್ತು ದಿನಸಿ ಖರೀದಿಗಷ್ಟೇ ವಾರಾಂತ್ಯ ಅವಕಾಶವಿದೆ.

    ವೀಕೆಂಡ್ ವೇಳೆ ಅಗತ್ಯ ವಸ್ತು ಹೊರತುಪಡಿಸಿ ಯಾವುದೇ ಅಂಗಡಿ ತೆರೆಯಲು ಹಾಗೂ ಬಸ್ ಸಂಚಾರಕ್ಕೂ ಅವಕಾಶ ಇಲ್ಲ. ಈ ಹೊಸ ಆದೇಶ ಜುಲೈ 5ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

  • ದಕ್ಷಿಣ ಕನ್ನಡದಲ್ಲಿ ಜು.5ರವರೆಗೆ ಲಾಕ್‍ಡೌನ್ ವಿಸ್ತರಣೆ- ಡಿಸಿ ಆದೇಶ

    ದಕ್ಷಿಣ ಕನ್ನಡದಲ್ಲಿ ಜು.5ರವರೆಗೆ ಲಾಕ್‍ಡೌನ್ ವಿಸ್ತರಣೆ- ಡಿಸಿ ಆದೇಶ

    – ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 5ರವರೆಗೂ ಲಾಕ್‍ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.

    ದ.ಕ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅನ್‍ಲಾಕ್ 1.0 ಭಾಗವಾಗಿ ಅಗತ್ಯವಸ್ತುಗಳ ಖರೀದಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿಬದಿ ವ್ಯಾಪಾರ ಮತ್ತು ಮದ್ಯ ಪಾರ್ಸಲ್ ಗಷ್ಟೇ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ನಿರ್ಮಾಣ ಚಟುವಟಿಕೆ ಮತ್ತು ಸ್ಟೀಲ್, ಸಿಮೆಂಟ್ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?

    ಈ ಸಮಯದಲ್ಲಿ ಮಾತ್ರ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಇಬ್ಬರು ಪ್ರಯಾಣಿಕರ ಸಹಿತ ಸಂಚರಿಸಬಹುದು. ಜಿಲ್ಲೆಯಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಉದ್ಯಾನ ತೆರೆಯಲು ಅವಕಾಶ ಇಲ್ಲ. ಖಾಸಗಿ ಹಾಗೂ ಕೆಎಸ್‍ಆರ್ ಟಿಸಿ ಬಸ್‍ಗಳು ಜಿಲ್ಲೆಯಿಂದ ಹೊರಗೆ ಹಾಗೂ ಒಳಗೆ ಓಡಾಟ ಮಾಡುವಂತಿಲ್ಲ. ಅಲ್ಲದೆ ಹೊರ ಜಿಲ್ಲೆಗಳಿಂದಲೂ ಕೆಎಸ್‍ಆರ್ ಟಿಸಿ ಬಸ್‍ಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

    ಜುಲೈ 5 ರವರೆಗೂ ಜಿಲ್ಲೆಯಾದ್ಯಂತ ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ನೈಟ್ ಕಪ್ರ್ಯೂ ಜಾರಿ ಇರುತ್ತದೆ, ಯಾವುದೇ ವಾಹನ ಓಡಾಟಕ್ಕೂ ಅನುಮತಿ ಇಲ್ಲ. ಅಲ್ಲದೆ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕಪ್ರ್ಯೂ ಜಾರಿ ಇದ್ದು, ಈ ವೇಳೆ ಯಾರೂ ಮನೆಯಿಂದ ಹೊರ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

  • ಗ್ರಾಹಕಿಯ ಮೂಗಿಗೆ ಪಂಚ್ ಮಾಡಿದ್ದ ಫುಡ್ ಡೆಲಿವರಿ ಬಾಯ್ ಅರೆಸ್ಟ್

    ಗ್ರಾಹಕಿಯ ಮೂಗಿಗೆ ಪಂಚ್ ಮಾಡಿದ್ದ ಫುಡ್ ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಫುಡ್ ಡೆಲಿವರಿ ತಡವಾಗಿಕೊಟ್ಟಿದ್ದು ಅಲ್ಲದೆ, ಮಹಿಳೆಗೆ ರಕ್ತ ಬರುವಂತೆ ಹೊಡೆದಿದ್ದ ಜೊಮ್ಯಾಟೊ ಸಿಬ್ಬಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಕಾಮರಾಜ್ ಆಗಿದ್ದಾನೆ. ಈತ ಫುಡ್ ಆರ್ಡರ್ ಮಾಡಿದ್ದ ಹಿತೇಶಾ ಚಂದ್ರಾಣಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಇಲೆಕ್ಟ್ರಾನಿಕ್ ಪೊಲೀಸರು ಡೆಲಿವರಿಬಾಯ್‍ನನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    ಮಂಗಳವಾರ ಮಧ್ಯಾಹ್ನ ಚಂದ್ರಾಣಿ ಜೊಮ್ಯಾಟೊದಲ್ಲಿ ಊಟವನ್ನು ಆರ್ಡರ್ ಮಾಡಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ಊಟ ಡೆಲಿವರಿ ಆಗುವುದಾಗಿ ಆ್ಯಪ್‍ನಲ್ಲಿ ತಿಳಿಸಲಾಗಿತ್ತು. ಆದರೆ ಡೆಲಿವರಿ ಬಾಯ್ ಕಾಮರಾಜ್ 4:30ಕ್ಕೆ ಬಂದಿದ್ದಾನೆ. ಊಟ ಬರುವುದು ತಡವಾಗಿದೆ ಎಂದು ಯುವತಿ ಜೊಮ್ಯಾಟೊ ತಿಳಿಸಿ ಆರ್ಡರ್ ರದ್ದು ಮಾಡಿದ್ದರು. ನಂತರ ಡೆಲಿವರಿ ಬಾಯ್ ಊಟ ಹಿಡಿದುಕೊಂಡು ಮನೆ ಬಾಗಿಲಿಗೆ ಬಂದಿದ್ದಾನೆ. ಆರ್ಡರ್ ಅನ್ನು ನಾನು ಕ್ಯಾನ್ಸಲ್ ಮಾಡಿದ್ದೇನೆ ಎಂದು ಹಿತೇಶಾ ತಿಳಿಸಿದ್ದಾರೆ ಈ ವೇಳೆ ಕೋಪಗೊಂಡ ಕಾಮರಾಜ್ ಬಾಗಿಲನ್ನು ದೂಡಿ ಮನೆಯೊಳಗೆ ನುಗ್ಗಿ ಊಟವನ್ನು ಇಟ್ಟು ಬಂದಿದ್ದಾನೆ.

    ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ಗುಲಾಮ ನಾನಲ್ಲ ಎಂದು ಡೆಲವರಿ ಬಾಯ್ ಕಾಮರಾಜ್ ಹೇಳಿದ್ದಾನೆ. ಹಿತೇಶಾ ಮತ್ತು ಡೆಲಿವರಿ ಬಾಯ್ ಜಗಳದಲ್ಲಿ ಆಕೆಯ ಮೂಗಿಗೆ ಪಂಚ್ ಮಾಡಿದ್ದಾನೆ. ನಂತರ ಯುವತಿ ಕಣ್ಣೀರು ಹಾಕುತ್ತಾ ನಡೆದಿರುವ ಘಟನೆಯನ್ನು ಹೇಳಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ಡೆಲವರಿಬಾಯ್ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಡೆಲವರಿಬಾಯ್‍ನ್ನು ಕೆಲಸದಿಂದ ಕಿತ್ತು ಹಾಕಿದ್ದೇವೆ. ಕ್ಷಮಿಸಿ ಎಂದು ಹೇಳಲು ಸಾಧ್ಯವಿಲ್ಲ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಈ ಆಘಾತಕಾರಿ ಅನುಭವಕ್ಕಾಗಿ ಹಿತೇಶಾಗೆ ಕ್ಷಮೆಯಾಚಿಸುತ್ತೇವೆ. ನಾವು ಹಿತೇಶಾರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಗತ್ಯವಾದ ವೈದ್ಯಕೀಯ ಆರೈಕೆ ಮತ್ತು ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಜೊಮ್ಯಾಟೊ ಟ್ವೀಟ್ ಮಾಡಿದೆ.