Tag: orayan mall

  • ಯೋಧರ ಬಲಿದಾನಕ್ಕೆ ಅವಮಾನ- ಒರಾಯನ್ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

    ಯೋಧರ ಬಲಿದಾನಕ್ಕೆ ಅವಮಾನ- ಒರಾಯನ್ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

    – ಸಾರ್ವಜನಿಕರಿಂದ ಒಬ್ಬನ ಬಂಧನ ಮೂವರು ಪರಾರಿ

    ಬೆಂಗಳೂರು: ಉಗ್ರನ ಆತ್ಮಾಹುತಿ ದಾಳಿಗೆ 40 ಮಂದಿ ಯೋಧರು ಹುತಾತ್ಮರಾಗಿದ್ದು, ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದಿದೆ. ಆದ್ರೂ ಕೆಲ ಪುಂಡರು ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ಪ್ರತಿಷ್ಠಿತ ಒರಾಯನ್ ಮಾಲ್‍ನಲ್ಲಿ ಪಾಕಿಸ್ತಾನದ ಪರ ದೇಶದ್ರೋಹಿಗಳು ಘೋಷಣೆ ಕೂಗಿದ್ದಾರೆ.

    ದೇಶದ್ರೋಹದ ಘೋಷಣೆ ಕೇಳಿದ ಕೂಡಲೇ ಕೆರಳಿದ ಸಾರ್ವಜನಿಕರು ಓರ್ವನನ್ನು ಹಿಡಿದು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಡೆಸಿದ್ದಾರೆ. ಘೋಷಣೆ ಕೂಗಿ ಕೂಡಲೇ ಸಾರ್ವಜನಿಕರು ಜಮಾಯಿಸಿದ್ದನ್ನು ಕಂಡ ಮೂವರು ದೇಶದ್ರೋಹಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ ಪೊಲೀಸರ ವಶಕ್ಕೆ- ಮನೆಗೆ ಬೆಂಕಿ

    ಮಾಲ್‍ನ ವಾಶ್ ರೂಂನಲ್ಲಿ ದಾಸರಹಳ್ಳಿ ಮೂಲದ ಇಬ್ಬರು ವ್ಯಕ್ತಿಗಳು ಪಾಕ್ ಪರ ಘೋಷಣೆ ಕೂಗಿದ್ದರು ಎಂದು ಶಂಕಿಸಲಾಗಿತ್ತು. ಆದ್ರೆ ಅವರನ್ನು ವಶಕ್ಕೆ ಪಡೆದಾಗ ನಾವು ಘೋಷಣೆ ಕೂಗಿಲ್ಲ ಎಂದಿದ್ದರು. ಹೀಗಾಗಿ ಸುಬ್ರಹ್ಮಣ್ಯ ನಗರ ಪೊಲೀಸರು ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಘೋಷಣೆ – ಬೆಂಗ್ಳೂರಲ್ಲಿ ಕಾಶ್ಮೀರಿ ಯುವಕ ಅರೆಸ್ಟ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಏನ್ ನನ್ನನ್ನೇ ಗುರಾಯಿಸ್ತೀಯಾ- ಶಾಸಕ, ಡಿಸಿಪಿ ಮಧ್ಯೆ ಮಾತಿನ ಚಕಮಕಿ

    ಏನ್ ನನ್ನನ್ನೇ ಗುರಾಯಿಸ್ತೀಯಾ- ಶಾಸಕ, ಡಿಸಿಪಿ ಮಧ್ಯೆ ಮಾತಿನ ಚಕಮಕಿ

    ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣದ ಪ್ರೀಮಿಯರ್ ಶೋ ಬಳಿಕದ ಪಾರ್ಟಿಯ ನಂತರ ಜೆಡಿಎಸ್ ಶಾಸಕ ಹಾಗೂ ಡಿಸಿಪಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ರಾಜಕೀಯ ಗಣ್ಯರಿಗಾಗಿ ತಮ್ಮ ಮಗ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣದ ಸಿನಿಮಾದ ಪ್ರೀಮಿಯರ್ ಶೋವನ್ನು ಗುರುವಾರ ಆಯೋಜಿಸಿದ್ದರು.

    ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ನಡೆದಿದ್ದ ಈ ಶೋ ಬಳಿಕ ಪಕ್ಕದ ಡಬ್ಲ್ಯೂಟಿಸಿ ಟವರ್‍ನಲ್ಲಿ ರಾತ್ರಿ ಪಾರ್ಟಿ ಆಯೋಜಿಸಿದ್ದರು. ಡಬ್ಲ್ಯೂಟಿಸಿಯ ಹೈ ಅನ್ನೋ ರೆಸ್ಟೋರೆಂಟ್‍ನಲ್ಲಿ ಎಲ್ಲರೂ ಪಾರ್ಟಿ ಮಾಡಿದ್ದರು. ಪಾರ್ಟಿ ಎಲ್ಲಾ ಮುಗಿಸಿ ವಾಪಸ್ ಹೋಗುವಾಗ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಮತ್ತು ಡಿಸಿಪಿ ದೇವರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋಗೆ ಹರಿದುಬಂತು ರಾಜಕೀಯ ದಂಡು

    ಲಿಫ್ಟ್ ನಲ್ಲಿ ಇಬ್ಬರು ಮುಖಾಮುಖಿ ಆದ ಸಂದರ್ಭದಲ್ಲಿ ಡಿಸಿಪಿ ದೇವರಾಜ್ ಶಾಸಕರನ್ನ ನೋಡಿ ಗುರಾಯಿಸಿದ್ರಂತೆ. ಇದರಿಂದ ಸಿಟ್ಟಿಗೆದ್ದ ಶಾಶಕರು ಏನ್ ನನ್ನನ್ನ ನೋಡಿ ಗುರಾಯಿಸ್ತಿದ್ದೀಯಾ ಅಂತ ಅವಾಜ್ ಹಾಕಿದ್ದಾರೆ. ಶಾಸಕರ ಅವಾಜ್‍ಗೆ ಡಿಸಿಪಿ ಕೂಡಾ ಏನ್ ನೀನ್ಯಾಕೆ ನನ್ನನ್ನ ನೋಡಿ ಗುರಾಯಿಸ್ತಿದ್ದೀಯಾ ಅಂತ ಧ್ವನಿ ಏರಿಸಿ ಮಾತಾಡಿದ್ದಾರೆ. ಈ ವೇಳೆ ಇಬ್ಬರ ನಡುವೆಯೂ ಮಾತಿನ ಚಕಮಕಿಗೆ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv