Tag: oppression

  • ವಿದ್ಯಾರ್ಥಿ ಮೇಲೆ ಎಎಸ್‍ಐ ದರ್ಪ

    ವಿದ್ಯಾರ್ಥಿ ಮೇಲೆ ಎಎಸ್‍ಐ ದರ್ಪ

    ದಾವಣಗೆರೆ: ವಾಹನ ತಪಾಸಣೆ ವೇಳೆ ವಿದ್ಯಾರ್ಥಿಯ ಮೇಲೆ ಎಎಸ್‍ಐ ದರ್ಪ ತೋರಿದ ಘಟನೆ ನಗರದ ಕೆಟಿಜೆ ಪೊಲೀಸ್ ಠಾಣೆ ಬಳಿ ನಡೆದಿದೆ.

    ಗುರುವಾರ ರಾತ್ರಿ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಮಹೇಶ್ವರಪ್ಪ ಹಾಗೂ ಪೇದೆಗಳು ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ವಾಹನ ದಾಖಲೆ ತೋರಿಸುವ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ಎಎಸ್‍ಐ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಮಹೇಶ್ವರಪ್ಪ ವಿದ್ಯಾರ್ಥಿಗಳ ಪುಸ್ತಕಗಳನ್ನು ಕಸಿದುಕೊಂಡು, ರಸ್ತೆಯ ಕೆಸರಿನಲ್ಲಿ ಹಾಕಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಮಹೇಶ್ವರಪ್ಪ ಈ ರೀತಿ ದಬ್ಬಾಳಿಕೆ ನಡೆಸುತ್ತಿರುವುದು ಮೊದಲೇನಲ್ಲ, ಈ ಮೊದಲು ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಎಎಸ್‍ಐ ಮಹೇಶ್ವರಪ್ಪ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಎಸ್‍ಐ ಮಹೇಶ್ವರಪ್ಪನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಗಣಿ ನಾಡಲ್ಲಿ ಪರಮೇಶ್ವರ ನಾಯ್ಕ್ ಬೆಂಬಲಿಗರ ದಬ್ಬಾಳಿಕೆ- ಪ್ರಶ್ನೆ ಮಾಡಿದ್ರೆ ಒದ್ದು ಒಳಗೆ ಹಾಕ್ತಾರಂತೆ ಪೊಲೀಸ್ರು

    ಗಣಿ ನಾಡಲ್ಲಿ ಪರಮೇಶ್ವರ ನಾಯ್ಕ್ ಬೆಂಬಲಿಗರ ದಬ್ಬಾಳಿಕೆ- ಪ್ರಶ್ನೆ ಮಾಡಿದ್ರೆ ಒದ್ದು ಒಳಗೆ ಹಾಕ್ತಾರಂತೆ ಪೊಲೀಸ್ರು

    ಬಳ್ಳಾರಿ: ದರ್ಪ ದಬ್ಬಾಳಿಕೆಯಿಂದ ಪರಮೇಶ್ವರ ನಾಯ್ಕ್ ಅವರು ತನ್ನ ಸಚಿವ ಸ್ಥಾನ ಕಳೆದುಕೊಂಡು ಶಾಸಕರಾಗಿದ್ದು, ಇದೀಗ ಇವರ ಬೆಂಬಲಿಗರ ದಬ್ಬಾಳಿಕೆ ಮಾತ್ರ ಇನ್ನೂ ಮುಂದುವರೆದಿದೆ.

    ಶಾಸಕರ ಬೆಂಬಲಿಗರ ಅಕ್ರಮಗಳು, ದರ್ಪ ದಬ್ಬಾಳಿಕೆಗಳಿಗೆ ಇದೀಗ ಪೊಲೀಸರು ಸಹ ಕೈಜೋಡಿಸಿದ್ದಾರೆ. ಹೂವಿನ ಹಡಗಲಿ ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಐದು ಎಕರೆ ಸರ್ಕಾರಿ ಜಾಗದ ಸಶ್ಮಾನದ ವಿಚಾರದಲ್ಲಿ ಪೊಲೀಸರು ತಮ್ಮ ದರ್ಪ ದಬ್ಬಾಳಿಕೆ ತೋರಿದ್ದಾರೆ.

    ಹಿರೇಬನ್ನಿಮಟ್ಟಿ ಗ್ರಾಮದ ಐದು ಎಕರೆ ಸಶ್ಮಾನದಲ್ಲಿ ಈ ಹಿಂದಿನಿಂದಲೂ ವೀರಶೈವ ಸಮಾಜದ ಬಾಂಧವರು ಅಂತ್ಯ ಕ್ರಿಯೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗ್ರಾಮ ಪಂಚಾಯತ್ ಸದಸ್ಯ ಸಿದ್ದನಗೌಡ, ಗುರುಪಾದಗೌಡ, ಸಿಂದನೂರಿನಲ್ಲಿ ಎಫ್‍ಡಿಎ ಆಗಿರುವ ನಾಗರಾಜಗೌಡ ನಿಂಗನಗೌಡ್ರ ಉಳುಮೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮದ ಹಾಲೇಶ ಎಂಬವರಿಗೆ ಹುಸೇನ್ ಪೀರ್ ಸಾಬ್ ಮೂಲಕ ಹಡಗಲಿ ಠಾಣೆಯ ಸಿಪಿಐ ಸುಧೀರ ಜಮೀನಿನ ವಿಷಯಕ್ಕೆ ಬಂದ್ರೆ ಒದ್ದು ಒಳಗೆ ಹಾಕುತ್ತೇನೆ ಎಂದು ದಮ್ಕಿ ಹಾಕಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಧಮ್ಕಿ ಹಾಕಿದ ಆಡಿಯೋ ಬಹಿರಂಗವಾಗುತ್ತಿದ್ದಂತೆ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಶಾಸಕ ಪರಮೇಶ್ವರ ನಾಯ್ಕ್ ಹಾಗೂ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಸಶ್ಮಾನದ ಜಾಗದ ವಿಚಾರದಲ್ಲಿ ಅನಗತ್ಯವಾಗಿ ಪ್ರವೇಶ ಮಾಡುತ್ತಿರುವ ಪೊಲೀಸರ ವಿರುದ್ಧ ಹಾಲೇಶ ಅವರು ಗೃಹಸಚಿವರು ಹಾಗೂ ಎಸ್‍ಪಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.