Tag: opposition party

  • ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಶಕ್ತಿ ಪ್ರದರ್ಶನ – ಜುಲೈ 13, 14ಕ್ಕೆ ಸಭೆ

    ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಶಕ್ತಿ ಪ್ರದರ್ಶನ – ಜುಲೈ 13, 14ಕ್ಕೆ ಸಭೆ

    ನವದೆಹಲಿ: ವಿರೋಧ ಪಕ್ಷದ ನಾಯಕರ (Opposition Parties) ಸಭೆ ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ (Bengaluru) ನಡೆಯಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ (Sharad Pawar) ಹೇಳಿದ್ದಾರೆ.

    ಜಂಟಿ ಕಾರ್ಯತಂತ್ರವನ್ನು ರೂಪಿಸಲು ಎರಡನೇ ಸಭೆ ಶಿಮ್ಲಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಈಗ ಜುಲೈ 13 ಮತ್ತು 14ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.  ಜೂನ್ 23 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ 17 ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಯ ಶುರುವಾಗಿದೆ ಎಂದರು. ಇದನ್ನೂ ಓದಿ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ನೋಟಿಸ್

    ಪಾಟ್ನಾ ಸಭೆಯಲ್ಲಿ ಕಾಂಗ್ರೆಸ್ (Congress) ಸೇರಿದಂತೆ 17 ಪಕ್ಷಗಳು 2024 ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಲು ನಿರ್ಧರಿಸಿವೆ. ಎರಡನೇ ಸಭೆಯನ್ನು ಕಾಂಗ್ರೆಸ್ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಿವೆ.


    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮೊದಲ ಸಭೆಯಲ್ಲಿ ವಿವಿಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಮಾಯಾವತಿ (ಬಿಎಸ್‌ಪಿ), ನವೀನ್ ಪಟ್ನಾಯಕ್ (ಬಿಜೆಡಿ), ಕೆ ಚಂದ್ರಶೇಖರ್ ರಾವ್ (ಬಿಆರ್‌ಎಸ್) ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) ಅವರನ್ನು ಆಹ್ವಾನಿಸಿದ್ದರೂ ಸಭೆಗೆ ಗೈರಾಗಿದ್ದರು. ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಪೂರ್ವನಿರ್ಧರಿತ ಕುಟುಂಬ ಕಾರ್ಯಕ್ರಮದಿಂದಾಗಿ ಸಭೆಗೆ ಹಾಜರಾಗಲಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ (Nagaland) ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ (NDPP-BJP) ಮೈತ್ರಿಕೂಟ ಬಹುಮತದೊಂದಿಗೆ ಜಯದ ನಗೆ ಬೀರಿದೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಇತರೆ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದು, ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.

    ಮಾ.2 ರಂದು ನಾಗಾಲ್ಯಾಂಡ್‌ (Nagaland Opposition) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಸದನದ ಒಟ್ಟು ಸದಸ್ಯ ಬಲ 60. ಈ ಬಾರಿ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 37 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಕ್ರಮವಾಗಿ 25 ಮತ್ತು 12 ಸ್ಥಾನಗಳ ಗೆಲುವು ಸಾಧಿಸಿದವು. ಆ ಮೂಲಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

    ಎನ್‌ಸಿಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು 7 ಸ್ಥಾನಗಳನ್ನು ಗೆದ್ದಿವೆ. ಎನ್‌ಪಿಪಿ – 5, ಎಲ್‌ಜೆಪಿ (ರಾಮ್ ವಿಲಾಸ್), ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಆರ್‌ಪಿಐ (ಅಠವಾಲೆ) – ತಲಾ 2, ಜೆಡಿ (ಯು) – 1 ಮತ್ತು ಸ್ವತಂತ್ರರು – 4. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್ ರಾಜ್ಯ ವಿಧಾನಸಭೆ ಚುನಾವಣೆಯು ಹಲವು ರಾಜಕೀಯ ಪಕ್ಷಗಳ ಗೆಲುವಿಗೆ ಸಾಕ್ಷಿಯಾಗಿದೆ. LJP(RV) ಮತ್ತು RPI (Athawale) ರಾಜ್ಯ ರಾಜಕಾರಣದಲ್ಲಿ ಹೊಸ ಪಕ್ಷಗಳು.

    ಎನ್‌ಡಿಪಿಪಿ-ಬಿಜೆಪಿ ಇನ್ನೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಇದರ ನಡುವೆಯೇ ಇತರ ರಾಜಕೀಯ ಪಕ್ಷಗಳಿಂದ ಬೇಷರತ್ ಬೆಂಬಲ ಪಡೆದಿವೆ. ಎಲ್‌ಜೆಪಿ (ರಾಮ್ ವಿಲಾಸ್), ಆರ್‌ಪಿಐ (ಅಠವಳೆ), ಜೆಡಿಯು ಈಗಾಗಲೇ ಮೈತ್ರಿಕೂಟಕ್ಕೆ ಅಧಿಕೃತ ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಲಾಲು ಪತ್ನಿ, ಮಾಜಿ ಸಿಎಂ Rabri Devi ನಿವಾಸದ ಮೇಲೆ ಸಿಬಿಐ ದಾಳಿ

    ಮೂರನೇ ಏಕೈಕ ಅತಿ ದೊಡ್ಡ ಪಕ್ಷವಾಗಿರುವ ಎನ್‌ಸಿಪಿ, ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿಗೆ ಶನಿವಾರ ‘ಬೇಷರತ್’ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿರುವುದರಿಂದ, ನಾಗಾಲ್ಯಾಂಡ್‌ನಲ್ಲಿ ಸರ್ವಪಕ್ಷ ಸರ್ಕಾರವಾಗುವ ಸಾಧ್ಯತೆ ದಟ್ಟೈಸಿದೆ.

  • ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಇಲ್ಲ- ವಿರೋಧ ಪಕ್ಷದವರಿಗೆ ಎಂಟಿಬಿ ತಿರುಗೇಟು

    ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಇಲ್ಲ- ವಿರೋಧ ಪಕ್ಷದವರಿಗೆ ಎಂಟಿಬಿ ತಿರುಗೇಟು

    ಬೆಂಗಳೂರು: ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ವಿರೋಧ ಪಕ್ಷದವರ ಆರೋಪ, ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಂಗೇ ಪಾಠ ಹೇಳಿಕೊಡೋದಾ?, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿದ್ದಾರೆ: ಸಿದ್ದು

    ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆಗೆ ಎಂ.ಟಿ.ಬಿ.ನಾಗರಾಜ್ ಬಾಗಿನ ಅರ್ಪಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಆರೋಪಗಳು, ಪ್ರತ್ಯಾರೋಪಗಳನ್ನು ಮೀಡಿಯಾದಲ್ಲಿ ಮಾಡಿದ್ದಾರೆ. ಯಾವ ಯಾವ ಕಾಲದಲ್ಲಿ ಯಾರ‍್ಯಾರು ಮುಖ್ಯಮಂತ್ರಿಗಳಾಗಿದ್ದರು. ಯಾವ ಮುಖ್ಯಮಂತ್ರಿ ಕಾಲದಲ್ಲಿ ಎಷ್ಟೆಷ್ಟು ಹಗರಣ ಆಗಿದ್ದಾವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜರು ಇಲ್ಲ ಎಂದು ಹೇಳಿದರು.

    ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಆರೋಪ, ಪ್ರತ್ಯಾರೋಪಗಳನ್ನು ಬದಿಗೊತ್ತಿ. ಇಂದು ನಾವು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದರೆ ಈ ಸಮಯದಲ್ಲಿ ಬೇಡ. ಶಾಸಕರು, ಸಚಿವರು, ಜನಪ್ರತಿನಿಧಿಗಳಾಗಲಿ ಎಲ್ಲರೂ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಉಸ್ತುವಾರಿ ವಹಿಸಿಕೊಂಡು ಕೊರೊನಾ ನಿಯಂತ್ರಿಸಲು ಕೆಲಸ ಮಾಡಬೇಕು ಎಂದು ಹೇಳಿದರು.

    ವಿರೋಧ ಪಕ್ಷದವರು ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು. ನಮ್ಮ ಬಳಿ ಎಲ್ಲದಕ್ಕೂ ದಾಖಲಾತಿ ಇದೆ. ಆದರೆ ಈಗ ರಾಜಕೀಯ ಮಾಡುವ ಸಮಯವಲ್ಲ. ಚುನಾವಣೆ ಬರುತ್ತದೆ ಅಂದು ರಾಜಕೀಯ ಮಾಡಿ. ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದೆ. ಆದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಎಂ.ಟಿ.ಬಿ.ನಾಗರಾಜ್ ಕಿಡಿಕಾರಿದರು.

  • 1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ, ಅನ್ನಭಾಗ್ಯ ಅಕ್ಕಿ ಯಥಾಸ್ಥಿತಿ -ತೈಲ, ವಿದ್ಯುತ್ ಸೆಸ್ ಇಳಿಕೆ ಇಲ್ಲ

    1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ, ಅನ್ನಭಾಗ್ಯ ಅಕ್ಕಿ ಯಥಾಸ್ಥಿತಿ -ತೈಲ, ವಿದ್ಯುತ್ ಸೆಸ್ ಇಳಿಕೆ ಇಲ್ಲ

    ಬೆಂಗಳೂರು: ಬಜೆಟ್ ಹಾಗೂ ಸಾಲಮನ್ನಾ ವಿಚಾರವಾಗಿ ದೋಸ್ತಿಗಳು, ಸ್ವಪಕ್ಷೀಯರು, ಪ್ರತಿಪಕ್ಷ ಹಾಗೂ ರೈತಾಪಿ ವರ್ಗದ ಮನವಿ ಮತ್ತು ಒತ್ತಡಕ್ಕೆ ಸಿಎಂ ಕುಮಾರಸ್ವಾಮಿ ಕೊನೆಗೂ ಮಣಿದಿದ್ದು ಅನ್ನ ಭಾಗ್ಯದ ಅಡಿಯಲ್ಲಿ 7 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದ್ದಾರೆ.

    ಸಂಪೂರ್ಣ ಸಾಲಮನ್ನಾ ಆಗದಿದ್ದರೂ ಇದೀಗ ಸಹಕಾರಿ ಸಂಘಗಳಲ್ಲಿನ 1 ಲಕ್ಷ ರೂಪಾಯಿವರೆಗಿನ `ಚಾಲ್ತಿ ಸಾಲ’ವನ್ನು ಮನ್ನಾ ಮಾಡೋದಾಗಿ ಘೋಷಿಸಿದ್ದಾರೆ. ಈ ಮೂಲಕ, ರೈತರ ಹೊರೆ ಇಳಿಸಿದ್ದಾರೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

    ಸಾಲಮನ್ನಾಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಬ್ಯಾಂಕುಗಳ ಅಧ್ಯಕ್ಷರು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಳಗಾವಿ ವಿಭಾಗದ 9,500 ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ಬೆಂಗಳೂರು ವಿಭಾಗಕ್ಕೆ 6,300 ಕೋಟಿ ಸಾಲಮನ್ನಾ, ಮೈಸೂರು ವಿಭಾಗದ 6,760 ಕೋಟಿ ರೂ ಸಾಲಮನ್ನಾ, ಕಲಬುರ್ಗಿ 5,563 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

    ಬೆಳೆ ಸಾಲ ಇರುವುದು 48 ಸಾವಿರದ 90 ಕೋಟಿ. ಅದಕ್ಕಾಗಿ ಸುಸ್ತಿ ಸಾಲವನ್ನು ಮನ್ನಾ ಮಾಡಿದ್ದೇನೆ. ಎಲ್ಲಾ ಖಾಸಗಿ ಬ್ಯಾಂಕುಗಳಲ್ಲಿ ರೈತರ 41 ಸಾವಿರ ಕೋಟಿ ಸಾಲವಿದೆ. ಒಟ್ಟು 21,000 ಕೋಟಿ ರೂಪಾಯಿ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದಿಂದ 4 ವರ್ಷಗಳಲ್ಲಿ ಕರ್ನಾಟಕಕ್ಕೆ ಹಣ ಬಂದಿಲ್ಲ. ಬೆಂಬಲ ಬೆಲೆಯಡಿ ಕರ್ನಾಟಕಕ್ಕೆ ಹಣ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

    ರೈತರ 43 ಲಕ್ಷದ 56 ಸಾವಿರ ಖಾತೆಗಳಿವೆ. ಎಲ್ಲಾ ರೈತರ ಬೆಳೆಸಾಲ 48 ಸಾವಿರ ಕೋಟಿ. ಸುಸ್ತಿ ಸಾಲಮನ್ನಾದ ಘೋಷಣೆ ಮಾಡಿದ್ದೇನೆ. ಸುಸ್ತಿ ಸಾಲಕ್ಕೆ 22,900 ಕೋಟಿ ರೂಪಾಯಿ, ಪ್ರೋತ್ಸಾಹ ಧನ ಸೇರಿ 29 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ತಿಳಿಸಿದರು.

    ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡ ಅವರು, ಯಡಿಯೂರಪ್ಪ ಸಾಲಮನ್ನಾ ಮಾಡಲು ವ್ಯಾಟ್ ಏರಿಸಿದ್ರು. ಜಿಎಸ್‍ಟಿ ಬಂದ್ಮೇಲೆ ರಾಜ್ಯ ತೆರಿಗೆ ಸಂಗ್ರಹಕ್ಕೆ ಆದಾಯ ಇಲ್ಲದೆ ಸೆಸ್ ಏರಿಕೆ ಮಾಡಿದ್ದೇವೆ. ಇದೇನು ದೊಡ್ಡ ಅಪರಾಧವಲ್ಲವೆಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

    ಬಜೆಟ್ ವಿಚಾರದ ಚರ್ಚೆಗೂ ಮುನ್ನ ಮಾತನಾಡಿದ ಸಿಎಂ ಅವರು ನಮ್ಮ ಬಜೆಟ್ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು, ಇದು ದೊಡ್ಡ ಮಟ್ಟದ ಟೀಕೆಗಳ ಬಜೆಟ್, ಅಪ್ಪ ಮಕ್ಕಳ ಬಜೆಟ್, ಅಣ್ಣತಮ್ಮಂದಿರ ಬಜೆಟ್ ಎಂದು ಪ್ರತಿಪಕ್ಷದವರು ಟೀಕೆ ಮಾಡಿದ್ದೀರಿ, ಅಲ್ಲದೇ ಈ ಬಜೆಟ್ ಅನ್ನು ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಬಜೆಟ್ ಅಂತಾಲೂ ಟೀಕೆ ಮಾಡಿದ್ದೀರ ಈ ಎಲ್ಲಾ ಟೀಕೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ ಬಜೆಟ್ ಬಗ್ಗೆ ಏನೇ ಟೀಕೆ ಬಂದರೂ ನಮ್ಮದು ರೈತ ಪರ ಸರ್ಕಾರ ಅಂತ ಟೀಕಾಕಾರರ ಬಾಯಿ ಮುಚ್ಚಿಸೋ ಯತ್ನ ಮಾಡಿದ್ರು.

    ಸಿಎಂ ಉತ್ತರಕ್ಕೆ ತೃಪ್ತಿಯಾಗದ ಬಿಜೆಪಿ ನಾಯಕರು ಮಧ್ಯೆ ಮಧ್ಯೆ ತಗಾದೆ ಪ್ರಶ್ನಿಸುತ್ತಿದ್ದರು. ಕೊನೆಗೆ ಸಭಾತ್ಯಾಗ ಮಾಡಿದರು. ಇವತ್ತಿಗೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನ ನಾಳೆ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ.

  • ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವ ಸರ್ಕಾರ ಏನು ನೀಡಿದೆ, ಚರ್ಚೆ ನಡೆಯಲಿ: ಎಚ್‍ಡಿಕೆ

    ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವ ಸರ್ಕಾರ ಏನು ನೀಡಿದೆ, ಚರ್ಚೆ ನಡೆಯಲಿ: ಎಚ್‍ಡಿಕೆ

    ಬೆಂಗಳೂರು: ಸ್ವಾತಂತ್ರ್ಯ ಬಂದ ಬಳಿಕ ಉತ್ತರ ಕರ್ನಾಟಕಕ್ಕೆ ನೀಡಿರೋ ಅನುದಾನಗಳ ಬಗ್ಗೆ ಚರ್ಚೆಗೆ ಸಿದ್ಧ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

    ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಎಚ್‍ಡಿಕೆ, ನಾನು ಯಾವುದೋ ಒಂದು ಜಾತಿಗೆ ಸಿಎಂ ಅಲ್ಲ. ಆರು ಕೋಟಿ ಕನ್ನಡಿಗರಿಗೆ ಸಿಎಂ. ಈ ಹಿಂದೆ ಹಾಸನಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತಾನೂ ಚರ್ಚೆ ನಡೆಯಲಿ. ಈ ಚರ್ಚೆ ಎರಡು ವಾರ ಬೇಕಾದರೂ ನಡೆಯಲಿ ಎಂದ ಅವರು, ವಿಭೂತಿ ಹಾಕಿಕೊಂಡು ಬಂದವ್ರಿಗೆ ಸಹಾಯ ಮಾಡಿದ್ದೇನೆ ಅಂತ ವಿಪಕ್ಷಕ್ಕೆ ತಿರುಗೇಟು ನೀಡಿದ್ರು.

    ನಾನು ವಚನಭ್ರಷ್ಟ ಅಲ್ಲ. 12 ವರ್ಷಗಳ ಹಿಂದೆ ನಾವು 38 ಮಂದಿ ಶಾಸಕರಿದ್ವಿ. ಆಗ ಯಾಕೆ 80 ಶಾಸಕರಿದ್ದ ನೀವೇ ಯಾಕೆ ನನಗೆ ಅಧಿಕಾರ ಕೊಟ್ರಿ? ಇದು 37 ಶಾಸಕರ ಸರ್ಕಾರವಲ್ಲ. 114 ಮಂದಿ ಶಾಸಕರ ಸರ್ಕಾರ. 104 ಶಾಸಕರಿದ್ದ ನಿಮಗೆ ರಾಜ್ಯಪಾಲರು ಆಹ್ವಾನ ಕೊಟ್ಟಿದ್ರು. ಆದ್ರೆ ಬಹುಮತ ಸಾಬೀತುಪಡಿಸ್ಲಿಲ್ಲ ಅಂತ ತಿರುಗೇಟು ನೀಡಿದ್ದಾರೆ.

    ನಮ್ಮ ಸಕಾರ ರಚನೆಯಾಗಿ ಕೆಲವೇ ತಿಂಗಳಾಗಿದೆ. ಮೈತ್ರಿ ಸರ್ಕಾರ ರೈತರ ಪರವಾಗಿದೆ. ಯಾರೂ ಕೂಡ ಆತ್ಮಹತ್ಯೆಗೆ ಮುಂದಾಗಬಾರದು. ಸಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರ ಪೂರೈಸುತ್ತೆ. ಈ ಬಗ್ಗೆ ಯಾರಿಗೂ ಭಯ, ಆತಂಕ ಬೇಡ ಅಂದ್ರು.

    ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ಮುಂದಾಗಿದೆ ಅಂತ ಅವರು ಹೇಳಿದ್ರು.