Tag: oppo

  • ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ನವದೆಹಲಿ: ಚೀನಾ (China) ಬ್ರ್ಯಾಂಡ್‍ಗಳ ಮೂಬೈಲ್ ಬಳಸದಂತೆ ಮಿಲಿಟರಿ ಗುಪ್ತಚರ ಸಂಸ್ಥೆಗಳು ಸೈನಿಕರಿಗೆ ಸಲಹೆ ನೀಡಿವೆ. ಆಪ್‍ಗಳು ಮಾತ್ರವಲ್ಲದೇ ಮೂಬೈಲ್ ಮೂಲಕವೂ ಚೀನಾ ಬೇಹುಗಾರಿಕೆ (Spyware) ನಡೆಸುವ ಸಾಧ್ಯತೆ ಹಿನ್ನೆಲೆ ಮಾರ್ಚ್ ಅಂತ್ಯದೊಳಗೆ ಮೂಬೈಲ್ ಬದಲಿಸುವಂತೆ ಸೈನಿಕರಿಗೆ ಸಲಹೆ ನೀಡಲಾಗಿದೆ.

    ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ (India) ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆ ಭಾರತೀಯ ಸೈನಿಕರಿಗೆ ಈ ಮಹತ್ವದ ಸಲಹೆ ನೀಡಲಾಗಿದೆ. ವಿಶೇಷವಾಗಿ ಎಲ್‍ಎಸಿಯಲ್ಲಿ ಕರ್ತವ್ಯದಲ್ಲಿರುವ ಸೈನಿಕರು ಕೂಡಲೇ ಚೀನಾ ಮೂಲದ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ಒನ್‍ಪ್ಲಸ್ (OnePlus), ಒಪ್ಪೋ (Oppo), ರಿಯಲ್ ಮೀ (Realme) ಸೇರಿದಂತೆ ಮಾರುಕಟ್ಟೆಯಲ್ಲಿರುವ 11 ಚೀನಾದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್‍ಗಳ ಬಳಕೆಯಿಂದ ದೂರವಿರಲು ಸೂಚಿಸಿದೆ. ಸೈನಿಕರ ಕುಟುಂಬಸ್ಥರು ಈ ಬ್ರ್ಯಾಂಡ್ ಮೂಬೈಲ್‍ಗಳನ್ನು ಬಳಸದಂತೆ ಕೋರಲಾಗಿದೆ.

    ಗಾಲ್ವಾನ್ ಕಣಿವೆ (Galwan valley) ಘರ್ಷಣೆಯ ನಂತರ, ಭಾರತ ಸರ್ಕಾರವು ಹಲವು ಚೀನೀ ಮೊಬೈಲ್ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಆದರೆ ಅಪಾಯ ಅಪ್ಲಿಕೇಶನ್‍ಗಳಿಗೆ ಸೀಮಿತವಾಗಿಲ್ಲ. ಫೋನ್‌ಗಳಿಂದಲೂ ಅಪಾಯವಿರುವ ಬಗ್ಗೆ ತಜ್ಞರು ಅನುಮಾನಿಸಿದ್ದಾರೆ. ಫೋನ್ ಮೂಲಕ ಬೇಹುಗಾರಿಕೆ ಅಥವಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಬಳಸಬಹುದಾದ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

  • ಟೀಂ ಇಂಡಿಯಾ ಜೆರ್ಸಿ ಮೇಲೆ ಬೆಂಗ್ಳೂರು ಮೂಲದ ಕಂಪನಿ ಲೋಗೋ

    ಟೀಂ ಇಂಡಿಯಾ ಜೆರ್ಸಿ ಮೇಲೆ ಬೆಂಗ್ಳೂರು ಮೂಲದ ಕಂಪನಿ ಲೋಗೋ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಧರಿಸುತ್ತಿದ್ದ ಬ್ಲೂ ಜೆರ್ಸಿ ಮೇಲೆ ಇತ್ತೀಚಿನ ಸಮಯದವರೆಗೂ ಕಾಣಿಸಿಕೊಳ್ಳುತ್ತಿದ್ದ ಮೊಬೈಲ್ ಸಂಸ್ಥೆ ಒಪ್ಪೋ ಲೋಗೋ ಕಾಣೆಯಾಗಲಿದೆ. ಈ ಸ್ಥಳದಲ್ಲಿ ಬೆಂಗಳೂರು ಮೂಲದ ಶಿಕ್ಷಣಕ್ಕೆ ಸಂಬಂಧಿಸಿದ ಬೈಜು’ಸ್ ಲರ್ನಿಂಗ್ ಆ್ಯಪ್ ಲೋಗೋ ಕಾಣಿಸಿಕೊಳ್ಳಲಿದೆ.

    2017 ರಲ್ಲಿ ಟೀಂ ಇಂಡಿಯಾ ಜೆರ್ಸಿ ಮೇಲೆ ಕಾಣುವ ಬ್ರಾಂಡ್ ಹಕ್ಕುಗಳನ್ನು 5 ವರ್ಷಗಳ ಅವಧಿಗೆ ಒಪ್ಪೋ ಸಂಸ್ಥೆ ಭಾರೀ ಬೆಲೆಗೆ ಖರೀದಿ ಮಾಡಿತ್ತು. ಆದರೆ ಒಪ್ಪೋ ಸಂಸ್ಥೆಯ ಒಪ್ಪಂದ ಇನ್ನೂ 2 ವರ್ಷ ಬಾಕಿ ಇರುವ ಸಂದರ್ಭದಲ್ಲೇ ಸಂಸ್ಥೆ ಒಪ್ಪಂದದಿಂದ ಹೊರ ನಡೆಯಲು ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಂದಹಾಗೆ, ಒಪ್ಪೋ ಸಂಸ್ಥೆ 2017 ರಲ್ಲಿ ನಡೆದ ಹರಾಜಿನಲ್ಲಿ ಸುಮಾರು 1,079 ಕೋಟಿ ರೂ. ನೀಡಿ ಈ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಈ ಮೊತ್ತವನ್ನು ಬಿಸಿಸಿಐ ಸಲ್ಲಿಕೆ ಮಾಡುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಸಂಸ್ಥೆ 2 ವರ್ಷಗಳ ಮುನ್ನವೇ ಒಪ್ಪಂದದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

    ಒಪ್ಪೋ ಒಪ್ಪಂದಿಂದ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೂ ಬೈಜು’ಸ್ ಸಂಸ್ಥೆಯ ಲೋಗೋ ಕಾಣಿಸಲಿದೆ. ಸೆಪ್ಟೆಂಬರ್ 15 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಟೂರ್ನಿಯ ವೇಳೆಗೆ ಈ ಬದಲಾವಣೆ ಆಗಲಿದೆ. ಬೈಜುಸ್ ತಂತ್ರಜ್ಞಾನ ಮತ್ತು ಆನ್‍ಲೈನ್ ಬೋಧನಾ ಸಂಸ್ಥೆಯಾಗಿದೆ.

  • ಇನ್ನು ಮುಂದೆ ಕರೆನ್ಸಿ ಇಲ್ಲದೇ ಇದ್ರೂ ಕಾಲ್ ಮಾಡಬಹುದು!

    ಇನ್ನು ಮುಂದೆ ಕರೆನ್ಸಿ ಇಲ್ಲದೇ ಇದ್ರೂ ಕಾಲ್ ಮಾಡಬಹುದು!

    ಬೀಜಿಂಗ್: ಇನ್ನು ಮುಂದೆ ನೀವು ಕರೆನ್ಸಿ ಇಲ್ಲದಿದ್ದರೂ ಮೊಬೈಲ್‍ನಲ್ಲಿ ನಿಮ್ಮ ಆಪ್ತರಿಗೆ ಕರೆ ಮಾಡಬಹುದು.

    ಹೌದು, ಸ್ಮಾರ್ಟ್‍ಫೋನ್ ತಯಾರಕ ಚೀನಾದ ಒಪ್ಪೊ ಕಂಪನಿ ‘ಮೆಶ್‍ಟಾಕ್’ ಹೆಸರಿನ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಯಾವುದೇ ಸಿಮ್, ರೀಚಾರ್ಜ್, ವೈಫೈ, ಬ್ಲೂಟೂತ್ ಸಂಪರ್ಕವಿಲ್ಲದೆ ಕೇವಲ ಮೊಬೈಲ್ ಮೂಲಕ ಮಾತನಾಡುವ ಹಾಗೂ ಸಂದೇಶ ರವಾನಿಸುವ ಕ್ರಾಂತಿಕಾರಕ ತಂತ್ರಜ್ಞಾನವನ್ನು ಬಹಿರಂಗಪಡಿಸಿದೆ.

    ಶಾಂಘೈನಲ್ಲಿ ನಡೆಯುತ್ತಿರುವ ಮೊಬೈಲ್ ವಲ್ರ್ಡ್ ಕಾಂಗ್ರೆಸ್(ಎಂಡಬ್ಲ್ಯೂಸಿ) ನಲ್ಲಿ ಈ ತಂತ್ರಜ್ಞಾನದ ಕುರಿತು ಒಪ್ಪೋ ಮಾಹಿತಿ ನೀಡಿದೆ. ಈ ತಂತ್ರಜ್ಞಾನದ ಸಹಾಯದಿಂದ ಒಂದು ಒಪ್ಪೊ ಮೊಬೈಲ್‍ನಿಂದ ಇನ್ನೊಂದು ಮೊಬೈಲ್‍ಗೆ ಯಾವುದೇ ಸಿಮ್, ರೀಚಾರ್ಜ್, ವೈಫೈ, ಬ್ಲ್ಯೂಟೂತ್ ಸಂಪರ್ಕವಿಲ್ಲದೆ, ಕೇವಲ ಮೆಶ್ ಟಾಕ್ ಆಪ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಈ ಆಪ್ ತೆರೆದ ನಂತರ ಯಾವುದೇ ಶುಲ್ಕವಿಲ್ಲದೆ ಹಾಗೂ ಸಂಪರ್ಕವಿಲ್ಲದೆ ಕರೆ ಅಥವಾ ಸಂದೇಶವನ್ನು ಕಳುಹಿಸಬಹುದಾಗಿದೆ.

    ‘ಮೆಶ್ ಟಾಕ್’ ಕೇವಲ ಮೂರು ಕಿ.ಮೀ.ಯೊಳಗೆ ಕಾರ್ಯ ನಿರ್ವಹಿಸಲಿದ್ದು, ನಗರ ಪ್ರದೇಶದ ಜನರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಲೋಕಲ್ ಏರಿಯಾ ನೆಟ್‍ವರ್ಕ್ (ಲ್ಯಾನ್) ನೆಟ್‍ವರ್ಕ್ ಮತ್ತು ರೀಲೇ ಕಮ್ಯೂನಿಕೇಶನ್ ವ್ಯವಸ್ಥೆ ಹೊಂದಿರುವ ಚಿಪ್ ಅಳವಡಿಸಲಾಗಿದ್ದು, ಕೇವಲ 3 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ತರಂಗಗಳು ಕಾರ್ಯ ನಿರ್ವಹಿಸುತ್ತವೆ. ಇದರ ಸಹಾಯದಿಂದ ಒಂದು ಒಪ್ಪೊ ಮೊಬೈಲ್‍ನಿಂದ ಇನ್ನೊಂದು ಒಪ್ಪೊ ಮೊಬೈಲ್‍ಗೆ ಸಂಪರ್ಕ ಸಾಧಿಸಬಹುದಾಗಿದೆ.

    ಮೆಶ್ ಟಾಕ್‍ಗೆ ಯಾವುದೇ ರೀತಿಯ ಬೇಸ್ ಸ್ಟೇಷನ್ಸ್ ಅಥವಾ ಸರ್ವರ್‍ಗಳ ಅಗತ್ಯವಿಲ್ಲ ಹೀಗಾಗಿ ಗೌಪ್ಯತೆ ಕುರಿತು ಸಂದೇಹ ಬೇಡ ಎಂದು ಒಪ್ಪೊ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಒಪ್ಪೋ ಬಹಿರಂಗ ಪಡಿಸಿಲ್ಲ. ಈ ತಂತ್ರಜ್ಞಾನವು ಭವಿಷ್ಯದ ಒಪ್ಪೊ ಮೊಬೈಲ್‍ಗಳಲ್ಲಿ ಲಭ್ಯವಿರುತ್ತದೆ ಎಂಬುದರ ಕುರಿತು ಸುಳಿವು ನೀಡಿದೆ.

  • ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ.

    ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಿದೆ. ಕ್ಸಿಯೋಮಿ ತನ್ನ 2018ರ ತ್ರೈಮಾಸಿಕ ವರದಿಯಲ್ಲಿ ಶೇ.27ರಷ್ಟು ಶೇರನ್ನು ಹೊಂದುವ ಮೂಲಕ ಭಾರತದ ಟಾಪ್ 5 ಮೊಬೈಲ್ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಂಪನಿಯ ಪಾಲು ಎಷ್ಟು?
    ಕ್ಸಿಯೋಮಿ: 2018ರ ತ್ರೈಮಾಸಿಕ ವರದಿಗಳ ಪ್ರಕಾರ ಕ್ಸಿಯೋಮಿ ಶೇ.27ರಷ್ಟು ಶೇರನ್ನು ಹೊಂದುವುದರ ಮೂಲಕ ಭಾರತದಲ್ಲಿ ಅಧಿಪತ್ಯ ಸಾಧಿಸಿದೆ. ತನ್ನ ಆವೃತ್ತಿಗಳಾದ ರೆಡ್‍ಮಿ 5ಎ ಹಾಗೂ ರೆಡ್‍ಮಿ ನೋಟ್ 5 ಪ್ರೋ ಮುಖಾಂತರ ಈ ಸಾಧನೆಗೇರುವಲ್ಲಿ ಕ್ಸಿಯೋಮಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 50 ಲಕ್ಷ ಫೋನುಗಳನ್ನು ಕ್ಸಿಯೋಮಿ ಮಾರಾಟ ಮಾಡಿದೆ. ಇದರಲ್ಲಿ ಶೇ.48.9ರಷ್ಟನ್ನು ಆನ್‍ಲೈನ್ ಮೂಲಕವೇ ವಹಿವಾಟು ನಡೆಸಿದೆ. ಅಲ್ಲದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ಸ್ಯಾಮಸಂಗ್: 2018ರ ತ್ರೈಮಾಸಿಕ ವರದಿಯಲ್ಲಿ 2ನೇ ಸ್ಥಾನವನ್ನು ಗಳಿಸುವಲ್ಲಿ ಸ್ಯಾಮಸಂಗ್ ಯಶಸ್ವಿಯಾಗಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳ ಪ್ರಕಾರ ಚೀನಾದ ಕ್ಸಿಯೋಮಿ, ವಿವೊ ಹಾಗೂ ಒಪ್ಪೊದ ಹೊಡೆತದಿಂದಾಗಿ, ಭಾರತದ ಮಾರುಕಟ್ಟೆಯ ಹಿಡಿತವನ್ನು ಸಾಧಿಸಲು ವಿಫಲವಾಗಿತ್ತು. ತನ್ನ ನೂತನ ಗೆಲಾಕ್ಸಿ ಜೆ2, ಜೆ8, ಜೆ4 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಗೋ ಮಾದರಿಯ ಗೆಲಾಕ್ಸಿ ಜೆ 2 ಕೋರ್ ಸ್ಮಾರ್ಟ್ ಫೋನ್‍ಗಳ ಮುಖಾಂತರ 4.8ರಷ್ಟು ವಹಿವಾಟನ್ನು ವೃದ್ಧಿಸಿಕೊಂಡು ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

    ವಿವೋ: ಮೂರನೇ ಸ್ಥಾನದಲ್ಲಿರುವ ವಿವೋ ಒಟ್ಟಾರೆಯಾಗಿ 2018ರ ತ್ರೈಮಾಸಿಕ ವರದಿಗಳ ಪ್ರಕಾರ ಶೇ.10.6ರಷ್ಟು ಪಾಲನ್ನು ಭಾರತದಲ್ಲಿ ಸಾಧಿಸಿದೆ. 2017ಕ್ಕೆ ಹೋಲಿಸಿದರೆ ವಿವೋ ಶೇ.35.4ರಷ್ಟು ಪ್ರಾಬಲ್ಯ ಹೊಂದಿದೆ. ವಿವೋ ಹೊಸದಾಗಿ ಬಿಡುಗಡೆಮಾಡಿದ ವೈ 81 ಮತ್ತು ವೈ83 ಪ್ರೋ ಮಾದರಿಗಳಿಂದ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನ ವೈ71 ಹಾಗೂ ವಿ11 ಮತ್ತು ವಿ11 ಪ್ರೋ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿವೋ ಉತ್ತಮ ಪ್ರಚಾರ ಹಾಗೂ ಐಪಿಲ್ ನಂತಹ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು.

    ಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.

    ಒಪ್ಪೋ: ಐದನೇ ಸ್ಥಾನ ಪಡೆದುಕೊಂಡಿರುವ ಒಪ್ಪೋ, ತನ್ನ 2018ರ ತ್ರೈಮಾಸಿಕ ವರದಿಯಲ್ಲಿ 6.7ರಷ್ಟು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಸರಿಯಾದ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಗ್ರಾಹಕರನ್ನು ಸೆಳೆಯುವಲ್ಲಿ ಒಪ್ಪೋ ವಿಫಲವಾಗಿದೆ. ಹೊಸದಾಗಿ ಬಿಡುಗಡೆಯಾದ ಎಫ್9 ಹಾಗೂ ಎಫ್9 ಪ್ರೋ ಸ್ಮಾರ್ಟ್ ಫೋನುಗಳು ಗ್ರಾಹಕರನ್ನು ವಿಫಲವಾಗಿದೆ. ತನ್ನ ಹೈ-ಎಂಡ್ ಮೊಬೈಲ್ ಆದ ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನೂತನ ಫೀಚರ್ ಒಳಗೊಂಡ ಅಗ್ಗದ ರಿಯಲ್‍ಮಿ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನೂತನ ಫೀಚರ್ ಒಳಗೊಂಡ ಅಗ್ಗದ ರಿಯಲ್‍ಮಿ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ ಸ್ಮಾರ್ಟ್‍ಪೋನ್ ಸಂಸ್ಥೆಯು ನೂತನ ಫೀಚರ್ ಗಳನ್ನೊಳಗೊಂಡ ಅಗ್ಗದ ರಿಯಲ್‍ಮೀ ಸಿ1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ರಿಯಲ್‍ಮಿ ಸಿ1 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿ 5 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 13+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಬ್ಲಾಕ್ ಹಾಗೂ ಬ್ಲೂ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಅಕ್ಟೋಬರ್ 11 ರಿಂದ ಕೇವಲ ಫ್ಲಿಪ್‍ಕಾರ್ಟ್ ಆನ್‍ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಮಾತ್ರ ಲಭ್ಯವಿರಲಿದೆ.

    ಬೆಲೆ ಎಷ್ಟು?
    2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 6,990 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ರಿಯಲ್‍ಮಿ ಸಿ 1 ಸ್ಮಾರ್ಟ್ ಫೋನ್ ಸಿಗುತ್ತದೆ.

    ರಿಯಲ್‍ಮಿ ಸಿ1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    156.2 x 75.6 x 8.2 ಮಿ.ಮೀ., 168 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1520 ಪಿಕ್ಸೆಲ್, 19:9 ಅನುಪಾತ 271 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 450, ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 506 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 5 ಎಂಪಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯೆಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ 3, ಫೇಸ್ ಅನ್‍ಲಾಕ್, 4,230 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಒಪ್ಪೊ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 8ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    8ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ 2 ಪ್ರೋ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ರಿಯಲ್‍ಮಿ 2 ಪ್ರೋ ಸ್ಮಾರ್ಟ್ಫ ಫೋನಿನಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 16+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಬ್ಲಾಕ್, ಡಾರ್ಕ್ ಬ್ಲೂ ಹಾಗೂ ಲೈಟ್ ಬ್ಲೂ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಮುಂದಿನ ಅಕ್ಟೋಬರ್ 11 ರಿಂದ ಫ್ಲಿಪ್‍ಕಾರ್ಟ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.

    ಬೆಲೆ ಎಷ್ಟು?
    4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 13,990 ರೂಪಾಯಿ, 6ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,990 ರೂಪಾಯಿ ಹಾಗೂ 8ಜಿಬಿ ರ‍್ಯಾಮ್/128 ಜಿಬಿ ಆಂತರಿಕ ಮೆಮೊರಿಗೆ 17,990 ರೂಪಾಯಿ ನಿಗದಿ ಪಡಿಸಿದೆ.

    ರಿಯಲ್‍ಮಿ 2 ಪ್ರೋ ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    15.7 x 74 x 8.5 ಮಿ.ಮೀ., 174 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2340 ಪಿಕ್ಸೆಲ್, 19.5:9 ಅನುಪಾತ 409 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 660, ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 6ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ ರ‍್ಯಾಮ್/128 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 16 ಎಂಪಿ ಕ್ಯಾಮೆರಾ, ಹಿಂಭಾಗ 16+2 ಎಂಪಿ ಡ್ಯುಯೆಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ 3, ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್‍ಲಾಕ್, 3,500 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಒಪ್ಪೊ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಡುಗಡೆಯಾಯ್ತು ಒಪ್ಪೋದ ರಿಯಲ್‍ಮಿ 2 ಸ್ಮಾರ್ಟ್ ಫೋನ್: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಬಿಡುಗಡೆಯಾಯ್ತು ಒಪ್ಪೋದ ರಿಯಲ್‍ಮಿ 2 ಸ್ಮಾರ್ಟ್ ಫೋನ್: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ 2 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ರಿಯಲ್‍ಮಿ 2 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿ 8 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 13+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಡೈಮಂಡ್ ಬ್ಲಾಕ್, ಡೈಮಂಡ್ ರೆಡ್ ಹಾಗೂ ಡೈಮಂಡ್ ಬ್ಲೂ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಮುಂದಿನ ಸೆಪ್ಟಂಬರ್ 4 ರಿಂದ ಫ್ಲಿಪ್‍ಕಾರ್ಟ್ ಜಾಲತಾಣಗಳಲ್ಲಿ ಮಾತ್ರ ಲಭ್ಯವಿರಲಿದೆ.

    ಬೆಲೆ ಎಷ್ಟು?
    3ಜಿಬಿ ರ‍್ಯಾಮ್​/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 8,990 ರೂ. ಆಗಿದ್ದು, 4ಜಿಬಿ ರ‍್ಯಾಮ್​/64 ಜಿಬಿ ಆಂತರಿಕ ಮೆಮೊರಿಗೆ 10,990 ರೂಪಾಯಿ ನಿಗದಿ ಪಡಿಸಿದೆ.

    ರಿಯಲ್‍ಮಿ 2 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 156.2 x 75.6 x 8.2 ಮಿ.ಮೀ., 151 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.2 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720×1520 ಪಿಕ್ಸೆಲ್, 19:9 ಅನುಪಾತ 271 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 450, ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 509 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 3ಜಿಬಿ ರ‍್ಯಾಮ್​/32 ಜಿಬಿ ಆಂತರಿಕ ಮೆಮೊರಿ ಹಾಗೂ 4ಜಿಬಿ ರ‍್ಯಾಮ್​/64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 8 ಎಂಪಿ ಕ್ಯಾಮೆರಾ, ಹಿಂಭಾಗ 12+2 ಎಂಪಿ ಡ್ಯುಯೆಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ 3, ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್‍ಲಾಕ್, 4,230 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಒಪ್ಪೊ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಪ್ಪೋ ಫೈಂಡ್ ಎಕ್ಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಬ್ಯಾಟರಿ ಎಷ್ಟು ಬೇಗ ಚಾರ್ಜ್ ಆಗುತ್ತೆ?

    ಒಪ್ಪೋ ಫೈಂಡ್ ಎಕ್ಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಬ್ಯಾಟರಿ ಎಷ್ಟು ಬೇಗ ಚಾರ್ಜ್ ಆಗುತ್ತೆ?

    ನವದೆಹಲಿ: ತನ್ನ ಕ್ಯಾಮೆರಾಗಳಿಂದಲೇ ಹೆಸರುವಾಸಿಯಾಗಿರುವ ಒಪ್ಪೋ ಮೊಬೈಲ್ ಕಂಪೆನಿಯು ಭಾರತದಲ್ಲಿ ತನ್ನ ನೂತನ ಒಪ್ಪೋ ಫೈಂಡ್ ಎಕ್ಸ್ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಗುರುವಾರ ಬಿಡುಗಡೆಗೊಳಿಸಿದೆ.

    ಒಪ್ಪೋ ಫೈಂಡ್ ಎಕ್ಸ್ ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 25 ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ 3ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16ಎಂಪಿ+20ಎಂಪಿ ಸ್ಲೈಡಿಂಗ್ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಈ ಫೋನ್ ಜುಲೈ 25 ರಿಂದ ಫ್ಲಿಪ್‍ಕಾರ್ಟ್ ಜಾಲತಾಣದಲ್ಲಿ ಮಾತ್ರ ಲಭ್ಯವಿರಲಿದೆ.

    ಬೆಲೆ ಎಷ್ಟು?
    ಒಪ್ಪೋ ಫೈಂಡ್ ಎಕ್ಸ್ ಫೋನ್ ಕೇವಲ ಒಂದೇ ಮಾದರಿಯಲ್ಲಿ ಲಭ್ಯವಿದ್ದು, 8ಜಿಬಿ RAM/256 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 59,990 ರೂಪಾಯಿ ಬೆಲೆ ನಿಗದಿ ಪಡಿಸಿದೆ.

    ಒಪ್ಪೋ ಫೈಂಡ್ ಎಕ್ಸ್ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 156.7 x 74.2 x 9.6 ಮಿ.ಮೀ., 186 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) 6.4 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಹಾಗೂ ಪ್ಯಾನರೋಮಿಕ್ ಆರ್ಕ್ ಟಚ್ ಸ್ಕ್ರೀನ್(2340×1080 ಪಿಕ್ಸೆಲ್, 19.4:9 ಅನುಪಾತ 401ಪಿಪಿಐ, 93.8% ಸ್ಕ್ರೀನ್ ರೇಷಿಯೋ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 835 2.64 ಗೀಗಾಹಟ್ರ್ಸ್ ಆಕ್ಟಾ ಕೋರ್ ಪ್ರೊಸೆಸರ್, ಅಡ್ರಿನೋ 630 ಗ್ರಾಫಿಕ್ಸ್ ಪ್ರೊಸೆಸರ್ , 8ಜಿಬಿ RAM/256 ಜಿಬಿ ಆಂತರಿಕ ಮೆಮೊರಿ. ಹೆಚ್ಚುವರಿ ಮೆಮೊರಿ ವಿಸ್ತರಣೆಗೆ ಯಾವುದೇ ಕಾರ್ಡ್ ಸ್ಲಾಟ್ ನೀಡಿಲ್ಲ.

    ಕ್ಯಾಮೆರಾ:
    ಮುಂದುಗಡೆ 25ಎಂಪಿ 3ಡಿ ಟೆಕ್ನಾಲಜಿ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 16 ಎಂಪಿ+20ಎಂಪಿ ಸ್ಲೈಡಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್ ಇದೆ.

    ಇತರೆ: ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5.0, ಫೇಸ್ ಡಿಟೆಕ್ಷನ್ ಅನ್‍ಲಾಕ್, 3,730 ಎಂಎಹೆಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. 35 ನಿಮಿಷದಲ್ಲೇ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುವುದು ವಿಶೇಷ.

     

  • ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ ಫೋನ್ ಗಳು: ಈಗ ಈ ಫೋನ್‍ಗಳ ಬೆಲೆ ಎಷ್ಟು?

    ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ ಫೋನ್ ಗಳು: ಈಗ ಈ ಫೋನ್‍ಗಳ ಬೆಲೆ ಎಷ್ಟು?

    ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಇದೆ ಮೊದಲ ಬಾರಿಗೆ ಕ್ಸಿಯೋಮಿಗೆ ಸ್ಥಾನ ಸಿಕ್ಕಿದೆ.

    ಮೊಬೈಲ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಅಧ್ಯಯನ ನಡೆಸಿದ್ದು, ಆಪಲ್ ಐಫೋನ್ ಎಕ್ಸ್ ಫೋನಿಗೆ ಮೊದಲ ಸ್ಥಾನ ಸಿಕ್ಕಿದರೆ ಕ್ಸಿಯೋಮಿ ರೆಡ್‍ಮೀ 5ಎ ಮೂರನೇ ಸ್ಥಾನ, ಸ್ಯಾಮ್ ಸಂಗ್ ಗೆಲಾಕ್ಸಿ ಎಸ್9ಗೆ 5ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಆಪಲ್, ಸ್ಯಾಮ್ ಸಂಗ್, ಕ್ಸಿಯೋಮಿ, ಒಪ್ಪೊ ಕಂಪೆನಿಯ ಫೋನ್‍ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

    ಟಾಪ್ 10 ಫೋನ್ ಗಳ ಪಟ್ಟಿ

    1.ಆಪಲ್ ಐ ಫೋನ್ ಎಕ್ಸ್:

    ಆಪಲ್ ಐ ಫೋನ್ ಎಕ್ಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇ3.5 ಪಾಲನ್ನು ಪಡೆಯುವುದರ ಮೂಲಕ ಮೊದಲ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 76,488 ರೂ. ಇದ್ದರೆ 256 ಜಿಬಿ 92,990 ರೂ. ಇದೆ.

    2.ಆಪಲ್ ಐ ಫೋನ್ 8 ಪ್ಲಸ್


    ಮಾರುಕಟ್ಟೆಯಲ್ಲಿ ಶೇ2.3 ಪಾಲನ್ನು ಪಡೆಯುವುದರ ಮೂಲಕ ಎರಡನೇ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 69,990 ರೂ. ಇದ್ದರೆ 256 ಜಿಬಿ 78,999 ರೂ.

    3.ಕ್ಸಿಯೋಮಿ ರೆಡ್ ಮಿ 5ಎ


    2017 ನವೆಂಬರ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದು ಮೂರನೇ ಸ್ಥಾನದಲ್ಲಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 16 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 5,999 ರೂ. ಇದೆ.

    4. ಒಪ್ಪೊ ಎ83


    ಒಪ್ಪೊ ಎ83 ಶೇ.1.8 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 15,990 ರೂ. ಇದೆ.

    5.ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9
    ಶೇ1.6 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 55,099 ರೂ. ಬೆಲೆ ನಿಗದಿಯಾಗಿದೆ.

    6.ಸ್ಯಾಮ್ ಸಂಗ್ ಎಸ್ 9 ಪ್ಲಸ್
    ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆಗೊಂಡ ಸ್ಯಾಮ್ ಸಂಗ್ ಎಸ್ 9 ಪ್ಲಸ್ ಫೋನಿಗೆ 6 ನೇ ಸ್ಥಾನ ಸಿಕ್ಕಿದ್ದು, ಶೇ1.6 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 64,900 ರೂ. ಬೆಲೆಯಿದೆ.

    7.ಐಪೋನ್ 7
    2016 ಸೆಪ್ಟಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಆಪಲ್ ಐಫೋನ್ 7 ಏಳನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.6 ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 41,499 ರೂ. ಬೆಲೆಯಿದೆ.

    8.ಆಪಲ್ ಐ ಫೋನ್ 8


    ಐ ಫೋನ್ 8 ಎಂಟನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 53,749 ರೂ. ಬೆಲೆಯಲ್ಲಿ 64 ಜಿಬಿ ಆಂತರಿಕ ಮೆಮೊರಿಯ ಫೋನ್ ಖರೀದಿಸಬಹುದು.

    9.ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ
    ಒಂಭತ್ತನೇ ಸ್ಥಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ ಇದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 18,900 ರೂ. ಬೆಲೆಯಿದೆ.

    10. ಆಪಲ್ ಐ ಫೋನ್ 6
    ಆಪಲ್ ಐ ಫೋನ್ 6 ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. 2014 ರಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಶೇ.1.2 ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 23,999 ರೂ. ಬೆಲೆಯಿದೆ.

  • ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

    ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸ್ಯಾಮ್ ಸಂಗ್ 7.82 ಕೋಟಿ ಫೋನ್‍ಗಳನ್ನು ಮಾರಾಟ ಮಾಡಿ, 23.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ 2.4% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಜಾಗತಿಕವಾಗಿ ಮೊದಲ ತ್ರೈಮಾಸಿಕದಲ್ಲಿ 33.43 ಕೋಟಿ ಸ್ಮಾರ್ಟ್ ಫೋನ್‍ಗಳು ಮಾರಾಟಗೊಂಡಿದ್ದರೆ 2017ರ ಈ ಅವಧಿಯಲ್ಲಿ 34.44 ಕೋಟಿ ಫೋನ್‍ಗಳು ಮಾರಾಟಗೊಂಡಿತ್ತು. ಈ ವರ್ಷ 2.4% ಮಾರಾಟ ಕಡಿಮೆಯಾಗಿದೆ ಎಂದು ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ತಿಳಿಸಿದೆ.

    ಸ್ಮಾರ್ಟ್ ಫೋನ್ ಸಾಗಾಟ ಕಡಿಮೆಯಾಗಲು ಚೀನಾ ಮಾರುಕಟ್ಟೆ ಕಾರಣ. ಚೀನಾದ ಜನತೆ ದುಬಾರಿ ಬೆಲೆ ಫೋನ್ ಖರೀದಿಸುತ್ತಿದ್ದಾರೆ. ಈ ಫೋನ್‍ಗಳು ಹೆಚ್ಚು ದಿನಗಳ ಕಾಲ ಬಳಸುತ್ತಿರುವುದರಿಂದ ಸ್ಮಾರ್ಟ್ ಫೋನ್ ಮಾರಾಟ ಇಳಿಕೆಯಾಗಿದೆ ಎಂದು ಐಡಿಸಿ ತಿಳಿಸಿದೆ.

    ಜಾಗತಿಕವಾಗಿ ಹಾಗೂ ಚೈನಾದಲ್ಲಿ ಜನರು ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅವುಗಳು ಹೆಚ್ಚು ಕಾಲ ಬಳಕೆಯಲ್ಲಿರುತ್ತವೆ ಹಾಗಾಗಿ ಸ್ಮಾರ್ಟ್ ಫೋನ್ ಸಾಗಾಟ ಇಳಿಕೆ ಕಂಡಿದೆ ಎಂದು ಐಡಿಸಿ ಸಂಶೋಧಕಿ ಮೆಲಿಸಾ ಚೌ ತಿಳಿಸಿದ್ದಾರೆ. ಡಾಲರ್ ಲೆಕ್ಕದಲ್ಲಿ ನೋಡಿದರೆ ಸ್ಮಾರ್ಟ್ ಫೋನ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಳಕೆದಾರರು ತಮ್ಮ ಬಹುತೇಕ ಕೆಲಸಗಳ ಲೆಕ್ಕಾಚಾರಗಳಿಗೆ ಸ್ಮಾರ್ಟ್ ಫೋನ್ ಅನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಆಪಲ್ 5.22 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 15.6% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಹುವಾವೇ 3.93 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿದ್ದು, 11.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 13.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ.

    ಕ್ಸಿಯೋಮಿ 2.80 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 8.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 87.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಒಪ್ಪೊ 2.39 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 7.1% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 7.5% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಇತರೆ ಕಂಪೆನಿಗಳು ಒಟ್ಟು 11.27 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಸಾಗಾಟ ಮಾಡಿದ್ದು, 33.7% ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 18.5% ಅಷ್ಟು ಮಾರುಕಟ್ಟೆ ಪಾಲು ಕಡಿಮೆಯಾಗಿದೆ.