Tag: Operation Theater

  • ಮದ್ವೆಗೂ ಮುನ್ನ ಮಗುವಿಗೆ ಜನ್ಮ – ಆಪರೇಷನ್ ಥಿಯೇಟರ್‌ನಲ್ಲೇ ಅಪ್ರಾಪ್ತೆ ಆತ್ಮಹತ್ಯೆ

    ಮದ್ವೆಗೂ ಮುನ್ನ ಮಗುವಿಗೆ ಜನ್ಮ – ಆಪರೇಷನ್ ಥಿಯೇಟರ್‌ನಲ್ಲೇ ಅಪ್ರಾಪ್ತೆ ಆತ್ಮಹತ್ಯೆ

    – ರಾತ್ರಿ ಒಬ್ಬಳೇ ಆಸ್ಪತ್ರೆಗೆ ಬಂದ 17ರ ಹುಡುಗಿ
    – ಅಪ್ರಾಪ್ತೆ ಗರ್ಭಿಣಿ ಎಂದು ಮನೆಯವರಿಗೂ ಗೊತ್ತಿಲ್ಲ

    ಭೋಪಾಲ್: 17ರ ಅಪ್ರಾಪ್ತೆಯೊಬ್ಬಳು ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು, ಆಪರೇಷನ್ ಥಿಯೇಟರ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮಂಗಳವಾರ ರಾತ್ರಿ ಹುಡುಗಿ ಖಾಸಗಿ ಆಸ್ಪತ್ರೆಗೆ ಒಬ್ಬಳೆ ಬಂದಿದ್ದಾಳೆ. ನಂತರ ವೈದ್ಯರು ಹುಡುಗಿಯನ್ನು ದಾಖಲಿಸಿಕೊಂಡು ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಅಪ್ರಾಪ್ತೆ ಆರೋಗ್ಯಕರವಾದ ಮಗುವಿಗೆ ಜನ್ಮ ನೀಡಿದ್ದಾಳೆ.

    ಸ್ವಲ್ಪ ಸಮಯದ ನಂತರ ಹುಡುಗಿಯನ್ನು ಸಣ್ಣ ಆಪರೇಷನ್ ಥಿಯೇಟರ್‌ಗೆ ಶಿಫ್ಟ್ ಮಾಡಿದ್ದಾರೆ. ಈಕೆಯ ಜೊತೆ ನರ್ಸ್ ಇದ್ದರು. ಆದರೆ ಅಪ್ರಾಪ್ತೆ ನರ್ಸ್ ಗೆ ಕುಡಿಯಲು ನೀರು ಕೇಳಿದ್ದಾಳೆ. ನೀರು ತರಲು ನರ್ಸ್ ಹೋಗುತ್ತಿದ್ದಂತೆ ಅಪ್ರಾಪ್ತೆ ಆಪರೇಷನ್ ಥಿಯೇಟರ್ ರೂಮಿನ ಬಾಗಿಲು ಹಾಕಿಕೊಂಡು ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ನರ್ಸ್ ಬರುವಷ್ಟರಲ್ಲಿ ಹುಡುಗಿ ಮೃತಪಟ್ಟಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಆಕೆಯ ಕುಟುಂಬದವರನ್ನು ಪತ್ತೆ ಮಾಡಿ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಆದರೆ ಕುಟುಂಬದವರಿಗೆ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಚಾರ ಗೊತ್ತಿರಲಿಲ್ಲ ಎಂದು ವರದಿಯಾಗಿದೆ.

    ಮೃತ ಹುಡುಗಿ ತಮ್ಮ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ತಮ್ಮ ಪ್ರೀತಿ ವಿಚಾರವೂ ಮನೆಯವರಿಗೆ ಗೊತ್ತಿರಲಿಲ್ಲ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಯುವಕನಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದಿಢೀರ್ ಕುಸಿದು ಬಿದ್ದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ಛಾವಣಿ

    ದಿಢೀರ್ ಕುಸಿದು ಬಿದ್ದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ಛಾವಣಿ

    ಬಳ್ಳಾರಿ: ನಗರದ ವಿಜಯನಗರ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ವಿಮ್ಸ್) ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ಛಾವಣಿ ಇಂದು ಬೆಳಗ್ಗೆ ಏಕಾಏಕಿ ಕುಸಿದು ಬಿದ್ದಿದೆ.

    ಅದೃಷ್ಟವಶಾತ್ ಇಂದು ಆಪರೇಷನ್ ಥಿಯೇಟರ್ ನಲ್ಲಿ ಯಾವುದೇ ಆಪರೇಷನ್ ನಡೆಯುತ್ತಿರಲಿಲ್ಲ. ಒಂದು ವೇಳೆ ಆಪರೇಷನ್ ನಡೆಯುತ್ತಿದ್ದಲ್ಲಿ ದುರಂತವೊಂದು ಸಂಭವಿಸುವ ಸಾಧ್ಯತೆಗಳಿದ್ದವು. ಛಾವಣಿ ಕುಸಿದು ಬಿದ್ದ ಪರಿಣಾಮ ಇಂದು ನಡೆಯಬೇಕಿದ್ದ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ರದ್ದು ಮಾಡಲಾಗಿದೆ.

    ಆಸ್ಪತ್ರೆಯ ಆಪರೇಷನ್ ಥಿಯೇಟರ್‍ನಲ್ಲಿಯ ಎಲ್ಲ ಶಸ್ತ್ರಚಿಕಿತ್ಸಾ ಉಪಕರಣಗಳು ನಜ್ಜುಗುಜ್ಜಾಗಿದ್ದು, ಕೋಣೆಗೆ ಬೀಗ ಹಾಕಲಾಗಿದೆ. ಇನ್ನೂ ಕೋಣೆಯ ಕಡೆಗೆ ಯಾರು ತೆರಳದಂತೆ ನಿರ್ಬಂಧ ಹಾಕಲಾಗಿದೆ.

    ಈಗಾಗಲೇ ಅವ್ಯವಸ್ಥೆಗಳಿಂದ ಸುದ್ದಿಯಾಗುತ್ತಿರುವ ಬಳ್ಳಾರಿಯ ವಿಮ್ಸ್ ಮತ್ತೊಮ್ಮೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುತ್ತಿವೆ. ಆಸ್ಪತ್ರೆಯ ಕಟ್ಟಡ ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದರೂ, ಸರ್ಕಾರ ಮಾತ್ರ ಯಾವುದೇ ಮುನ್ನೇಚರಿಕೆ ಕ್ರಮವನ್ನು ಕೈಗೊಂಡಿಲ್ಲ.

    ಈ ಹಿಂದೆ ಆಸ್ಪತ್ರೆಯಲ್ಲಿ ಬೆಂಕಿ  ಕಾಣಿಸಿಕೊಂಡಾಗಿನ ದೃಶ್ಯ:

    https://www.youtube.com/watch?v=AQ6i_sNxAXQ