Tag: operation politics

  • ಕಾಂಗ್ರೆಸ್ ಆಪರೇಷನ್ ಬಗ್ಗೆ ಯಡಿಯೂರಪ್ಪ ವಾರ್ನಿಂಗ್

    ಕಾಂಗ್ರೆಸ್ ಆಪರೇಷನ್ ಬಗ್ಗೆ ಯಡಿಯೂರಪ್ಪ ವಾರ್ನಿಂಗ್

    ಬೆಂಗಳೂರು: ಒಂದೆಡೆ 2023ರ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಶುರು ಮಾಡಿಕೊಂಡಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.

    ಹೌದು. ಕಾಂಗ್ರೆಸ್ ಆಪರೇಷನ್ ಬಗ್ಗೆ ಬಿಎಸ್‍ವೈ ಗರಂ ಆಗಿದ್ದಾರೆ. ವಿಪಕ್ಷಗಳನ್ನು ಹಗುರವಾಗಿ ಕಾಣ್ಬೇಡಿ ಅಂತ ತಮ್ಮ ಪಕ್ಷದ ನಾಯಕರನ್ನು ಎಚ್ಚರಿಸಿದ್ದಾರೆ. ಯಡಿಯೂರಪ್ಪ ಎಚ್ಚರಿಕೆ ಹಿಂದಿನ ಸೀಕ್ರೆಟ್ ಏನು,..? ತಾವಿಲ್ಲದ ಬಿಜೆಪಿ ಹೇಗಿರುತ್ತೆ ಅನ್ನೋ ಟ್ರೇಲರ್ ತೋರಿಸಿದ್ರಾ ಮಾಜಿ ಸಿಎಂ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ಸದ್ದಿಲ್ಲದೇ ಆಪರೇಷನ್ ಹಸ್ತ ಜಾರಿಯಲ್ಲಿದೆ. ಜೆಡಿಎಸ್, ಬಿಜೆಪಿ ಶಾಸಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕೈ ತಂತ್ರಗಾರಿಕೆ ಹೂಡಿದೆ. ಆಪರೇಷನ್ ಕಾಂಗ್ರೆಸ್ ಬೆನ್ನಲ್ಲೇ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ದೊಡ್ಡ ನಷ್ಟ. ತಮ್ಮ ವಿಚಾರದಲ್ಲಿ ಹೈಕಮಾಂಡ್‍ನ ನಡೆ, ಧೋರಣೆಗಳು ಸಕಾಲಿಕ ಅಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ‘ಟಾರ್ಗೆಟ್ 2023’ಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಮಾಡುತ್ತಿದೆ. ಆಪರೇಷನ್ ಎಲೆಕ್ಷನ್‍ಗೆ ‘ಕೈ’ ಹಾಕಿರುವ ಕಾಂಗ್ರೆಸ್ ರಹಸ್ಯ ಏನು..?, ಡಿಕೆಶಿ, ಸಿದ್ದರಾಮಯ್ಯ ಅಂಡರ್ ಸ್ಟ್ಯಾಂಡಿಂಗ್ ಗೇಮ್ ಶುರು ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.

    ಹೌದು. ಬಿಜೆಪಿ, ಜೆಡಿಎಸ್ ಶಾಸಕರ ಸೆಳೆಯಲು ಕಾಂಗ್ರೆಸ್ ರಣತಂತ್ರ ಹೂಡಿದೆ. ಮೈಸೂರು ಜಿಲ್ಲೆಯಲ್ಲಿ ಓರ್ವ ಜೆಡಿಎಸ್, ಓರ್ವ ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಡ್ಯದಲ್ಲಿ ಇಬ್ಬರು ಶಾಸಕರಿಗೆ ಹಸ್ತಲಾಘವಕ್ಕೆ ತೆರೆಮರೆ ಕಸರತ್ತು ನಡೆಯುತ್ತಿದ್ದು, ಹಾಸನದಲ್ಲಿ 2 ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ ಎಂದು ಹೇಳಲಾಗುತ್ತಿದೆ.

    ಇತ್ತ ಚಿತ್ರದುರ್ಗ, ತುಮಕೂರು ಜಿಲ್ಲೆಯ ಇಬ್ಬರು ಶಾಸಕರು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಓರ್ವ ಬಿಜೆಪಿ ಶಾಸಕನ ಸೆಳೆಯಲು ಹಾಗೂ ಬೆಳಗಾವಿಯಲ್ಲೂ 2 ಕ್ಷೇತ್ರಗಳಲ್ಲಿ ಗೆಲ್ಲೋ ಶಾಸಕರ ಆಪರೇಷನ್‍ಗೆ ತಂತ್ರ ಮಾಡಿಕೊಂಡಿದೆ. ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ – ಠಾಣೆ ಬಳಿ ಓಡೋಡಿ ಬಂದಿದ್ದ ಶಾಸಕ ಬೈರತಿ ಸುರೇಶ್

    ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್‍ನ 15-20 ಶಾಸಕರಿಗೆ ಡಿಕೆಶಿ ಗಾಳ ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಬಿಜೆಪಿಯ ಕೆಲ ಪ್ರಭಾವಿ ಸಚಿವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಜೊತೆ ಚರ್ಚಿಸಿಯೇ ಈ ಆಪರೇಷನ್ ನಡೆಯುತ್ತಿದೆ ಎಂಬುದಾಗಿಯೂ ತಿಳಿದುಬಂದಿದೆ.

    ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡ, ಕೋಲಾರದ ಶ್ರೀನಿವಾಸಗೌಡ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಮೂಡಿಗೆರೆಯ ಎಂ.ಪಿ ಕುಮಾರಸ್ವಾಮಿ, ಹಿರಿಯೂರಿನ ಆರ್. ಪೂರ್ಣಿಮಾ ಹಾಗೂ ನಂಜನಗೂಡಿನ ಹರ್ಷವರ್ಧನ್ ಇವರುಗಳನ್ನು ಡಿಕೆಶಿ ಸಂಪರ್ಕಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.