Tag: Operation Lotus Rocket

  • ಆಪರೇಷನ್ ಲೋಟಸ್ ಯಶಸ್ಸಿಗೆ `ಗರುಡ’ನ ಮೊರೆ ಹೋದ ಬಿಜೆಪಿ..!

    ಆಪರೇಷನ್ ಲೋಟಸ್ ಯಶಸ್ಸಿಗೆ `ಗರುಡ’ನ ಮೊರೆ ಹೋದ ಬಿಜೆಪಿ..!

    ಬೆಂಗಳೂರು: ಆಪರೇಷನ್ ಕಮಲದ ಬಳಿಕ ಇದೀಗ ಆಪರೇಷನ್ ಲೋಟಸ್ ರಾಕೆಟ್ ಹೆಸರಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಈಗ `ಗರುಡಚಯನ’ ಮಹಾಯಾಗದ ಮೊರೆ ಹೋಗಿದೆ.

    ಹೌದು. ಮೊನ್ನೆಯಿಂದಲೇ ಬಿಇಎಲ್ ವೃತ್ತದ ಬಳಿಯ ಗಣಪತಿ ದೇವಸ್ಥಾನದಲ್ಲಿ ಗರುಡಚಯನ ಯಾಗ ನಡೆಯುತ್ತಿದೆ. ಫೆಬ್ರವರಿ 10ರವರೆಗೆ ಈ ಮಹಾಯಾಗ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಈ ಯಾಗಕ್ಕೆ ಬರೋಬ್ಬರಿ 30 ಲಕ್ಷ ಖರ್ಚಾಗುತ್ತಿದ್ದು, ಕೇಂದ್ರದ ಹಾಲಿ ಸಚಿವರೊಬ್ಬರು ಮತ್ತು ನಗರದ ಬಿಜೆಪಿ ಶಾಸಕರೊಬ್ಬರ ನೇತೃತ್ವದಲ್ಲಿ ಈ ಮಹಾಯಾಗ ನಡೆಯುತ್ತಿದೆ. 60 ವರ್ಷಗಳ ಹಿಂದೆ ಶೃಂಗೇರಿ ಮಠದಲ್ಲಿ ನಡೆದಿದ್ದ ಯಾಗ ಈ ಬಾರಿ ಬೆಂಗಳೂರಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಅಪರೂಪದಲ್ಲೇ ಅಪರೂಪದ ಮಹಾಯಾಗ ನಡೆಸುತ್ತಿರುವ ಬಿಜೆಪಿ ನಾಯಕರ ಸರ್ಕಾರ ರಚಿಸುವ ಪ್ರಯತ್ನ ಕೈಗೂಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಎಚ್‍ಡಿಕೆ ಸ್ಕೆಚ್

    ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಎಚ್‍ಡಿಕೆ ಸ್ಕೆಚ್

    ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಬಿಟ್ಟು, ಈಗ ಆಪರೇಷನ್ ಲೋಟಸ್ ರಾಕೆಟ್ ಮಾಡುತ್ತಿದೆ. ಆದರೆ ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಪ್ಲಾನ್ ಮಾಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ. ಒಂದು ವೇಳೆ ಆಪರೇಷನ್ ಲೋಟಸ್ ರಾಕೆಟ್ ಯಶಸ್ವಿಯಾಗಿ ಕಾಂಗ್ರೆಸ್-ಜೆಡಿಎಸ್ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ, ಆಗ ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ವಿಶ್ವಾಸಮತ ಯಾಚನೆಗೆ ಸೂಚನೆ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಈ ವೇಳೆ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ರಾಜ್ಯಪಾಲರಿಂದ ವಾರಗಳ ಕಾಲ ಸಮಯ ಕೇಳುವ ಸಾಧ್ಯತೆ ಇದೆ. ಇನ್ನು ಸಮಯ ಸಿಕ್ಕಿದರೆ ಬಿಜೆಪಿಯ ನಾಲ್ವರು ಶಾಸಕರಿಗೆ ರಿವರ್ಸ್ ಆಪರೇಷನ್ ಮಾಡುವ ಸಾಧ್ಯತೆಯೂ ಇದೆ. ಇದರ ಜೊತೆಗೆ ರಾಜೀನಾಮೆ ಕೊಟ್ಟ ಸಚಿವರಿಗೆ ಸ್ಪೀಕರ್ ಮುಂದಿಟ್ಟುಕೊಂಡು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸುವ ಅಸ್ತ್ರವನ್ನು ಪ್ರಯೋಗಿಸಬಹುದು ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv