Tag: operation kamala

  • ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

    ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

    ಬೆಂಗಳೂರು: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ಕಾಂಗ್ರೆಸ್ ಶಾಸಕರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ (Renukacharya), ಶಾಸಕ ರವಿ ಗಣಿಗಗೆ (Ravi Ganiga) ಸವಾಲ್ ಹಾಕಿದ್ದಾರೆ.

    ಕಾಂಗ್ರೆಸ್ ಶಾಸಕರ ಆಪರೇಷನ್‌ಗೆ ಬಿಜೆಪಿ 100 ಕೋಟಿ ಅಫರ್ ಮಾಡ್ತಿದೆ ಎಂಬ ರವಿ ಗಣಿಗ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು 50 ಕೋಟಿ ಅಂದ್ರು‌. ಆನಂತರ 100 ಕೋಟಿ ಅಂದ್ರು. ಎಲ್ಲೋ‌ ಒಂದು ಕಡೆ ಕಾಂಗ್ರೆಸ್ ಶಾಸಕರು ಡಿಮ್ಯಾಂಡ್‌ ಕ್ರಿಯೇಟ್ ಮಾಡ್ಕೋತಿದಾರೆ. ಆರೋಪ ಮಾಡೋ ರವಿ ಗಣಿಗ ದಾಖಲೆ ಬಿಡುಗಡೆಗೆ ಆಗ್ರಹಿಸಿದ್ದೇವೆ. ನಿವೃತ್ತ‌ ನ್ಯಾಯಮೂರ್ತಿ ಅವರಿಂದ ತನಿಖೆ ಮಾಡಿಸಬಹುದಿತ್ತು. ಆದ್ರೆ‌ ಸುಳ್ಳು ಸುದ್ದಿ‌ ಹಬ್ಬಿಸಿದ್ದೀರಿ. ರವಿ ಗಣಿಗ ಅವರೇ‌ ಧರ್ಮಸ್ಥಳಕ್ಕೆ‌ ಬರುತ್ತೀರಾ ಆಣೆ ಮಾಡಲು? ಈ ರಾಜ್ಯದ ಜನರ ಕ್ಷಮೆ ಕೇಳಿ ಅಂತಾ ಸಿಎಂ ಮತ್ತು ಕೈ ಸಚಿವರಿಗೆ ಆಗ್ರಹಿಸುತ್ತೇನೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ – ಬಸವರಾಜ ಬೊಮ್ಮಾಯಿ

    ಶಿಕ್ಷಣ ಸಚಿವರಿಗೆ‌ ಕನ್ನಡ‌ ಬರಲ್ಲ ಎಂದಿದ್ದಕ್ಕೆ‌ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಮಧು‌ ಬಂಗಾರಪ್ಪ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಒಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ‌ಅವರ ಮಗನಾಗಿ‌ ಸಮಾಧಾನದಿಂದ ಉತ್ತರಿಸಬೇಕಿತ್ತು. ಬದಲಾಗಿ‌ ವಿದ್ಯಾರ್ಥಿ ಮೇಲೆ ದೌರ್ಜನ್ಯದ ಮಾತಾಡಿದ್ದಾರೆ. ಇದೊಂದು ತೊಘಲಕ್‌ ದರ್ಬಾರ್‌. ಹುಷಾರ್.. ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ. ಹುಷಾರ್ ಎಂದು ಮಧು ಬಂಗಾರಪ್ಪಗೆ ಎಚ್ಚರಿಕೆ ಕೊಟ್ಟರು.

  • ಶಾಸಕರನ್ನು ಖರೀದಿ ಮಾಡೋ ಕೆಪಾಸಿಟಿ ಬಿಜೆಪಿಗರಿಗಿಲ್ಲ: ಶಿವಗಂಗಾ ಬಸವರಾಜ್ ವ್ಯಂಗ್ಯ

    ಶಾಸಕರನ್ನು ಖರೀದಿ ಮಾಡೋ ಕೆಪಾಸಿಟಿ ಬಿಜೆಪಿಗರಿಗಿಲ್ಲ: ಶಿವಗಂಗಾ ಬಸವರಾಜ್ ವ್ಯಂಗ್ಯ

    ದಾವಣಗೆರೆ: ನಮ್ಮ ಪಕ್ಷದ ಶಾಸಕರನ್ನು ಖರೀದಿ (Operation Kamala) ಮಾಡುವ ಕೆಪಾಸಿಟಿ ಬಿಜೆಪಿಗರಿಗೆ  (BJP) ಇಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ವ್ಯಂಗ್ಯವಾಡಿದ್ದಾರೆ.

    ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ನನ್ನ ಹತ್ತಿರ ಇದುವರೆಗೂ ಯಾರು ಕೂಡ ಬಂದು, ಶಾಸಕರ ಖರೀದಿ ವಿಚಾರದ ಬಗ್ಗೆ ಮಾತಾಡಿಲ್ಲ. ಸಿಎಂ ಹೇಳುತ್ತಿದ್ದಾರೆ ಎಂದರೆ ಅವರು ಖಚಿತ ಮಾಹಿತಿ ಪಡೆದುಕೊಂಡೇ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

    ಇದೇ ವಿಚಾರದ ಬಗ್ಗೆ ನಮ್ಮ ಆತ್ಮೀಯ ಸ್ನೇಹಿತ ರವಿ ಹೇಳಿದ್ದಾನೆ ಎಂದರೆ ಸತ್ಯ ಇರುತ್ತದೆ. ದಾವಣಗೆರೆಯಲ್ಲಿಯೇ ಆರೇಳು ತಿಂಗಳ ಹಿಂದೆಯೇ ರವಿ ಗಣಿಗ ಹೇಳಿದ್ದರು ಎಂದಿದ್ದಾರೆ.

    ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮದ ಬಗ್ಗೆ ನಾವೇನು ಪ್ರತಿಕ್ರಿಯೆ ನೀಡೋದಿಲ್ಲ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಕ್ರಮ ವಹಿಸುತ್ತಾರೆ. ಜಮೀರ್ ಅವರು ನಾವು ತುಂಬಾ ಅತ್ಮೀಯರು. ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದಿದ್ದಾರೆ.

  • ಬಿಜೆಪಿಗೆ ಕಾಂಗ್ರೆಸ್‌ ಶಾಸಕರನ್ನು ಕಳುಹಿಸಿದ್ದೇ ಸಿದ್ದರಾಮಯ್ಯ: ಜೋಶಿ ಬಾಂಬ್‌

    ಬಿಜೆಪಿಗೆ ಕಾಂಗ್ರೆಸ್‌ ಶಾಸಕರನ್ನು ಕಳುಹಿಸಿದ್ದೇ ಸಿದ್ದರಾಮಯ್ಯ: ಜೋಶಿ ಬಾಂಬ್‌

    ಧಾರವಾಡ: ಬಿಜೆಪಿ ಸರ್ಕಾರ ರಚನೆಗೆ ಕೆಲ ಶಾಸಕರನ್ನೇ ಸಿದ್ದರಾಮಯ್ಯನವರೇ (Siddaramaiah) ಕಳುಹಿಸಿದ್ದರು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಬಾಂಬ್‌ ಸಿಡಿಸಿದ್ದಾರೆ.

    ಬಿಜೆಪಿ ಆಪರೇಷನ್‌ ಕಮಲ (Operation Kamala) ಮಾಡಲು ಮುಂದಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಬಿಜೆಪಿ ಸರ್ಕಾರ (BJP Government) ರಚನೆ ಮಾಡೋವಾಗ ಶಾಸಕರನ್ನು ಕಳುಹಿಸಿದ್ದೆ ಕಾಂಗ್ರೆಸ್ ಎಂದು ಸ್ಫೋಟಕ ವಿಚಾರ ತಿಳಿಸಿದರು.

    ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳುಹಿಸಿದ್ದರು. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ದೆವು. ಈ ಬಾರಿ ಅವರಿಗೆ ಬಹುಮತ ಇದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ

     

    ಬಿಜೆಪಿ 100 ಕೋಟಿ ನೀಡಿದ ಆಫರ್‌ ಬಗ್ಗೆ ದಾಖಲೆ ಇದ್ದರೆ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ. ವಿಷಯನ್ನು ಬೇರೆ ಕಡೆಗೆ ತಿರುಗಿಸಲು ಸುಮ್ಮನೆ ಮಾತನಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    100 ಕೋಟಿ ಅಲ್ಲ, 500 ಕೋಟಿ ಬಗ್ಗೆ ಮಾತಾಡಲಿ. ದಾಖಲೆ ಇದ್ದರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

  • ನಮ್ಮ ಶಾಸಕರಿಗೆ ಬಿಜೆಪಿ ಅವ್ರು ಆಫರ್ ಮಾಡ್ತಿರೋದು ನಿಜ: ಡಿಕೆ ಶಿವಕುಮಾರ್

    ನಮ್ಮ ಶಾಸಕರಿಗೆ ಬಿಜೆಪಿ ಅವ್ರು ಆಫರ್ ಮಾಡ್ತಿರೋದು ನಿಜ: ಡಿಕೆ ಶಿವಕುಮಾರ್

    ಬೆಂಗಳೂರು: ನಮ್ಮ ಶಾಸಕರಿಗೆ ಬಿಜೆಪಿ ಅವರು ಆಫರ್ ಕೊಡ್ತಿರೋದು ನಿಜ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಆರೋಪವನ್ನು ಸಮರ್ಥನೆ ಮಾಡಿಕೊಂಡರು.

    ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಲು ಬಿಜೆಪಿಯವರು 50 ಕೋಟಿ ಆಮಿಷ ಕೊಟ್ಟಿದ್ದಾರೆ ಎಂಬ ಸಿಎಂ ಹೇಳಿಕೆಗೆ ವಿಧಾನಸೌಧದಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ‌ ಎಂದರು‌.

    ನಮ್ಮ ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ಆಫರ್‌ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಆಪರೇಷನ್‌ ಕಮಲ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ‘ಕೈ’ ನಾಯಕರು ಕಿಡಿಕಾರಿದ್ದಾರೆ.

  • ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯಿಂದ ಆಫರ್: ಬಿ.ಆರ್.ಪಾಟೀಲ್

    ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯಿಂದ ಆಫರ್: ಬಿ.ಆರ್.ಪಾಟೀಲ್

    ಕಲಬುರಗಿ: ನನಗೆ ಆಪರೇಷನ್ ಕಮಲ (Operation Kamala) ಮಾಡಲು ಬಿಜೆಪಿ (BJP) ಪ್ರಭಾವಿ ವ್ಯಕ್ತಿ ಯತ್ನಿಸಿದ್ದಾರೆ ಎಂದು ಕಲಬುರಗಿಯಲ್ಲಿ (Kalaburagi) ಸಿಎಂ ಸಲಹೆಗಾರ ಆಳಂದ ಶಾಸಕ ಬಿ.ಆರ್.ಪಾಟೀಲ್ (B.R.Patil) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಮುನ್ನಲೆಗೆ ಬಂದಿದೆ. ಈ ಕುರಿತು ಮಾತನಾಡಿದ ಬಿ.ಆರ್.ಪಾಟೀಲ್, ಕಳೆದ ಎರಡು ತಿಂಗಳ ಹಿಂದೆ ನನಗೆ ಸಂಪರ್ಕ ಮಾಡಿ ಚುನಾವಣೆ ಖರ್ಚು ಹಾಗು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಆಫರ್ ನೀಡಿದ್ದರು. ನನ್ನಂತೆ ಇತರೆ ಮೂರು ಜನ ಶಾಸಕರಿಗೆ ಸಹ ಆಪರೇಷನ್ ಕಮಲ ಮಾಡಲು ಯತ್ನಿಸಲಾಗುತ್ತಿದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಮುಕ್ಕಾಲು ಗಂಟೆಯಲ್ಲಿ ಬರೋಬ್ಬರಿ 10 ಬಸ್ಸಿನಲ್ಲಿ ಬಾಂಬರ್‌ ಸಂಚಾರ!

    ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದೇವೆ. ನಾನು ಯಾವುದೇ ಕಾರಣಕ್ಕೂ ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ದೇವಾಲಯಗಳ ಮಸೂದೆ ವಿವಾದ; ‘ಕೈ’ ಸರ್ಕಾರದ ಪ್ರಸ್ತಾವನೆಯಲ್ಲೇನಿದೆ? – ಬೇರೆ ರಾಜ್ಯಗಳಲ್ಲಿ ಆದಾಯ ನಿರ್ವಹಣೆ ಹೇಗೆ?

  • ಕೆಲಸವಿಲ್ಲದ ನಿರುದ್ಯೋಗಿ ನಾಯಕರಿಂದ ಚಪಲಕ್ಕೆ ಆಪರೇಷನ್ ಕಮಲದ ಪ್ರಯತ್ನ: ಡಿಕೆಶಿ ವಾಗ್ದಾಳಿ

    ಕೆಲಸವಿಲ್ಲದ ನಿರುದ್ಯೋಗಿ ನಾಯಕರಿಂದ ಚಪಲಕ್ಕೆ ಆಪರೇಷನ್ ಕಮಲದ ಪ್ರಯತ್ನ: ಡಿಕೆಶಿ ವಾಗ್ದಾಳಿ

    ನವದೆಹಲಿ: ಮಾಡಲು ಕೆಲಸವಿಲ್ಲದ ನಿರುದ್ಯೋಗಿ ನಾಯಕರು ಚಪಲಕ್ಕೆ ಆಪರೇಷನ್ ಕಮಲಕ್ಕೆ (Operation Kamala) ಪ್ರಯತ್ನ ಮಾಡುತ್ತಿದ್ದಾರೆ. ಯಾವ ಶಾಸಕರನ್ನು ಸಂಪರ್ಕಿಸಿದ್ದಾರೆ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ಇದೆ. ನಮ್ಮ ಒಬ್ಬ ಶಾಸಕರನ್ನೂ ಸೆಳೆಯುವ ಶಕ್ತಿ ಅವರಿಗಿಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನವದೆಹಲಿಯಲ್ಲಿ (New Delhi) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಬಿಜೆಪಿಯಲ್ಲಿ (BJP) ಸಾಕಷ್ಟು ಸಮಸ್ಯೆಗಳಿದೆ. ಅವುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮೂಲಕ ಗೊಂದಲ ಸೃಷ್ಠಿಸಿ, ಮಾರ್ಕೆಟ್‌ನಲ್ಲಿ ಚಲಾವಣೆಯಲ್ಲಿರುವುದು ಅವರ ಉದ್ದೇಶವಾಗಿದೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ: ಎಸ್‌ಟಿಎಸ್ ಕಿಡಿ

    ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೋಳಿ ಭೇಟಿಯಾದ ಬಗ್ಗೆ ಮಾತನಾಡಿ, ನಾನು ಪಕ್ಷದ ಅಧ್ಯಕ್ಷ, ಹೆಡ್ ಆಫ್ ದಿ ಫ್ಯಾಮಿಲಿ. ಎಲ್ಲಾ ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಮ್ಮ ಮನೆಯಲ್ಲಿ ಕಾರ್ಯಕರ್ತರೇ ತುಂಬಿಕೊಳ್ಳುವುದರಿಂದ ಅಲ್ಲಿ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಸತೀಶ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

    ನಾನು ಬರೀ ಸತೀಶ್ ಜಾರಕಿಹೊಳಿಯನ್ನು ಮಾತ್ರ ಭೇಟಿಯಾಗಿಲ್ಲ. ಜಿ. ಪರಮೇಶ್ವರ್, ರಾಮಲಿಂಗಾ ರೆಡ್ಡಿ ಸೇರಿ ಅನೇಕ ನಾಯಕರ ಮನೆಗೆ ತೆರಳಿ ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅದರಲ್ಲಿ ವಿಶೇಷ ಏನೂ ಇಲ್ಲ. ರಾಜ್ಯದಲ್ಲಿ ಎರಡು ಪವರ್ ಸೆಂಟರ್ ಇಲ್ಲ. ಸಿಎಂ ಅವರ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷದ ಅಧ್ಯಕ್ಷ, ಡಿಸಿಎಂ ಆಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ – ಜೆಡಿಎಸ್‌ ವಿರುದ್ಧ ಕಂದಕೂರು ರೆಬೆಲ್‌

    ಸಂಪುಟ ಪುನಾರಚನೆ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರದ ಮುಂದೆ ಆ ತರಹದ ಆಲೋಚನೆಗಳಿಲ್ಲ. ಯಾರನ್ನು ಸಂಪುಟದಿಂದ ಕೈಬಿಡುವುದಿಲ್ಲ. ಇದು ಊಹಾಪೋಹ ಎಂದರು. ನವಂಬರ್ 15ರ ಬಳಿಕ ನಿಗಮ ಮಂಡಳಿಗಳ ನೇಮಕ ಆಗಲಿದೆ. ಹೈಕಮಾಂಡ್ ನಾಯಕರೇ ಬಂದು ಪಟ್ಟಿ ಫೈನಲ್ ಮಾಡಲಿದ್ದಾರೆ. ಸದಾಶಿವ ವರದಿ ಜಾರಿ ಬಗ್ಗೆ ಈ ಮೊದಲು ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

  • ಬಿಜೆಪಿ ಆಪರೇಷನ್ ಕಮಲದ ಕನಸು ನನಸಾಗಲ್ಲ: ಜಮೀರ್

    ಬಿಜೆಪಿ ಆಪರೇಷನ್ ಕಮಲದ ಕನಸು ನನಸಾಗಲ್ಲ: ಜಮೀರ್

    ಬೆಂಗಳೂರು: ಬಿಜೆಪಿ (BJP)  ಅವರು ಆಪರೇಷನ್ ಕಮಲ (Operation Kamala) ಮಾಡುತ್ತಿರುವುದು ಸತ್ಯ. ಆದರೆ ಅವರು ಅದರಲ್ಲಿ ಯಶಸ್ವಿಯಾಗಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಅವರು ಆಪರೇಷನ್ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನನಗೆ ಮಾಹಿತಿಯೂ ಇದೆ. ಅವರು ಏನೇ ಪ್ರಯತ್ನ ಮಾಡಿದರೂ ಏನೂ ಮಾಡಲು ಆಗಲ್ಲ ಎಂದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರು ಇಡಬೇಕು: ಎಂ.ಬಿ ಪಾಟೀಲ್

    ನಮ್ಮ ಶಾಸಕರಿಗೆ ಅವರು ಆಮಿಷ ಹುಟ್ಟಿಸುತ್ತಿದ್ದಾರೆ. 50 ಕೋಟಿ ಕೊಡುತ್ತೇವೆ, ಮಂತ್ರಿ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿ ಅವರು ಏನೇ ಮಾಡಿದರೂ ನಮ್ಮ ಒಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಷ್ಟೇ ಆಪರೇಷನ್ ಮಾಡಿದರೂ ಅವರು ಯಶಸ್ವಿಯಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತೀವ್ರ ಕೋವಿಡ್‌ ಸಮಸ್ಯೆ ಎದುರಿಸಿದವರು ಹೃದಯಾಘಾತದಿಂದ ಪಾರಾಗಲು ಕಠಿಣ ವ್ಯಾಯಾಮ ಬಿಡಿ: ಮನ್ಸುಖ್ ಮಾಂಡವಿಯಾ

    ನಾವು 140 ಜನ ಇದ್ದೇವೆ. 137 ಕಾಂಗ್ರೆಸ್ ಶಾಸಕರು, 3 ಜನ ಪಕ್ಷೇತರರು ಇದ್ದಾರೆ. ಇವರು ಸರ್ಕಾರ ತೆಗೆಯಬೇಕಾದರೆ 56 ಜನರನ್ನು ಕರೆದುಕೊಂಡು ಹೋಗಬೇಕು. ಇದು ಸಾಧ್ಯನಾ? ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಎಲ್ಲರೂ ರಾತ್ರಿ ಕನಸು ಕಂಡರೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗಿದೆ- ಖರ್ಗೆ ಆಪ್ತ ಶಾಸಕನಿಂದ ಹೊಸ ಬಾಂಬ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಬೆಂಗಳೂರು: ಪವರ್ ಶೇರಿಂಗ್ (Power Sharing) ವಿಚಾರದ ಬಗ್ಗೆ ಏನೇ ಇದ್ದರೂ ಅದು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಮಯ ಬಂದಾಗ ಪಕ್ಷದಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಮ್ಮ ಹಾಗೂ ನಿಮ್ಮ ಗಮನ ಜನರ ಕಲ್ಯಾಣದ ಕಡೆ, ಅಭಿವೃದ್ಧಿ ಕಡೆ ಇರಬೇಕು. ಜನರಿಗೆ ಒಳ್ಳೆದು ಆಗೋದನ್ನು ನೋಡಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ಜನರಿಗೆ ಒಳ್ಳೆದು ಆಗೋದನ್ನ ನೋಡಿಕೊಳ್ಳಬೇಕು. ನೀವು ನಾವು ಸೇರಿ ಒಳ್ಳೆದನ್ನು ಮಾಡೋಣ. ಜನರಿಗೆ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋದು ಮುಖ್ಯ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

    ಶಾಸಕರ ಹೇಳಿಕೆಗಳು ಒಬ್ಬೊಬ್ಬರದ್ದು ಒಂದೊಂದು ರೀತಿ ಇದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಪಕ್ಷ ಎಲ್ಲಾ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲಾ ರೀತಿಯ ಆಗು ಹೋಗುಗಳನ್ನ ಗಮನಿಸಿಸುತ್ತಾರೆ. ಯಾವುದು ಒಳ್ಳೆಯದೋ ಅದನ್ನು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಆಪರೇಷನ್ ಕಮಲ (Operation Kamala) ಅನ್ನೋದು ಬಿಜೆಪಿಯವರ (BJP) ಡಿಎನ್‌ಎಯಲ್ಲೇ ಇದೆ. ಬಿಜೆಪಿ ಒಂದು ಬಾರಿ ಅಲ್ಲ, ಅನೇಕ ಬಾರಿ ಬೇರೆ ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಿದೆ. 2008ರಲ್ಲಿ, 2018ರಲ್ಲಿ ಮಾಡಿತ್ತು. ಅವರ ಜಾಯಮಾನದಲ್ಲೇ ಇದು ನಡೆದಿದೆ. ಮಹಾರಾಷ್ಟ್ರ, ಗೋವಾ, ರಾಜಸ್ಥಾನ ಎಲ್ಲಾ ಕಡೆ ಆಪರೇಷನ್ ಆಗಿದೆ. ಎಲ್ಲಿ ಅಧಿಕಾರದಲ್ಲಿದ್ದಾರೆ ಅಲ್ಲಿ ಆಪರೇಷನ್ ಆಗಿದೆ ಎಂದು ಅವರ ಮುಖ್ಯಸ್ಥರೇ ಹೇಳಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡೋದು ಅವರ ಚಾಳಿ. ಬಿಜೆಪಿ ಅವರು ಸಂವಿಧಾನಕ್ಕೂ ಗೌರವ ಕೊಡಲ್ಲ. ವಾಮಮಾರ್ಗ ಅವರ ರಾಜಮಾರ್ಗ. ಅವರು ಅಸಾಧ್ಯವಾದದ್ದನ್ನು ಮಾಡುತ್ತಾರೆ. ಆಪರೇಷನ್ ಮಾಡುವುದು ಅವರ ಡಿಎನ್‌ಎಯಲ್ಲೇ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಶಾಸಕರನ್ನು ಖರೀದಿಸಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಕೆಲಸ: ಆರ್‌ಬಿ ತಿಮ್ಮಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಬೆಳಗಾವಿ: ಬಿಜೆಪಿಯವರಿಗೆ (BJP) ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಳಗಾವಿಯಲ್ಲಿ (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರಿಗೆ ಆಪರೇಷನ್ ಕಮಲದ (Operation Kamala) ರುಚಿ ಹಿಡಿದಿದೆ. ಈ ಅಸ್ತ್ರ ಪ್ರಯೋಗಿಸಿ ಏಳೆಂಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    ಇದೇ ವೇಳೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ (Siddaramaiah) ನಮ್ಮ ಮುಖ್ಯಮಂತ್ರಿ. ಈಗ ಸರ್ಕಾರ ಸುಭದ್ರವಾಗಿದೆ. ನಾವು ಯಾವುದೇ ವದಂತಿಗಳಿಗೆ ಕಿವಿಗೊಡುವುದಿಲ್ಲ. ಎರಡೂವರೆ ವರ್ಷ ಬಳಿಕ ಸಿಎಂ ಬದಲಾವಣೆ ಆಗುವ ಕುರಿತು ಯಾವುದೇ ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

    ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಂತ್ರಿ ಆಗುವ ಆಸೆಯಿಂದ ಒಂದಿಬ್ಬರು ಶಾಸಕರು ಅಸಮಾಧಾನದಿಂದ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರಬಹುದು. ಅದು ಸರಿಯಲ್ಲ. ಅವರು ಹೇಳಿಕೆ ಕೊಟ್ಟ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾಗುವುದಿಲ್ಲ. ಶಾಸಕರು ಹೀಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯ

    ಬಿಜೆಪಿ ಮತ್ತು ಜೆಡಿಎಸ್ (JDS) ಬಣ್ಣ ಈಗ ಬಯಲಾಗಿದೆ. ತಾವಿಬ್ಬರೂ ಸೇರದಿದ್ದರೆ ಉಳಿಗಾಲವಿಲ್ಲ ಎಂದು ಹೆದರಿ ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ (Congress) ಅನುಕೂಲವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: KEA ಪರೀಕ್ಷೆ- ಉದ್ದ ತೋಳಿನ ಶರ್ಟ್ ಧರಿಸಿದ್ದ ಪರೀಕ್ಷಾರ್ಥಿಗಳಿಗೆ ಶಾಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಸೋತಿದ್ದು ಹೇಗೆ? – ಕೊನೆ ದಿನ ನಡೆದಿದ್ದು ಏನು?

    ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಸೋತಿದ್ದು ಹೇಗೆ? – ಕೊನೆ ದಿನ ನಡೆದಿದ್ದು ಏನು?

    ಚಿಕ್ಕಬಳ್ಳಾಪುರ: ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಸಚಿವ ಸುಧಾಕರ್‌ (Sudhakar) ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದಲ್ಲಿ  ಸೋತಿದ್ದಾರೆ. ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ (Pradeep Eshwar) ಗೆಲುವು ಸಾಧಿಸಿದ್ದಾರೆ. ಸುಧಾಕರ್ 75,582 ಮತಗಳನ್ನ ಪಡೆದರೆ, ಪ್ರದೀಪ್ ಈಶ್ವರ್ 86,224 ಮತಗಳನ್ನ ಪಡೆದು 10,642 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

    ರಾಜಕಾರಣಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿ ತಿಂಗಳ ಕಾಲ ಚುನಾವಣಾ ಪ್ರಚಾರ ಮಾಡಿದ ಪ್ರದೀಪ್ ಈಶ್ವರ್ ಸುಧಾಕರ್ ವಿರುದ್ದ ಅಬ್ಬರದ ಭಾಷಣ ಮಾಡುವ ಮೂಲಕ ಸಿನಿಮಾ ಡೈಲಾಗ್ ಹೊಡೆದು ಜನರ ಮನ ಗೆದ್ದಿದ್ದಾರೆ.

    ಸುಧಾಕರ್ ಸಹ ಅಬ್ಬರದ ಪ್ರಚಾರದ ಮಾಡಿ ಅಭಿವೃದ್ದಿಯ ಕಾರ್ಯಗಳ ಪ್ರಚಾರ ಮಾಡುವ ಮೂಲಕ ಸ್ಟಾರ್ ಸಿನಿ ಪ್ರಚಾರಕರ ಮೂಲಕ ಮತಯಾಚನೆ ಮಾಡಿದ್ದರು. ಆದರೆ ಆ ಎಲ್ಲಾ ಪ್ರಯತ್ನಗಳು ಫಲಪ್ರದವಾಗಲಿಲ್ಲ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಮುನ್ನಡೆ LIVE Updates

     

    ಕೊನೆಗೆ ಚುನಾವಣಾ ದಿನದವರೆಗೂ ಕಾಂಗ್ರೆಸ್-ಬಿಜೆಪಿ-ನೆಕ್ ಟು ನೆಕ್ ಜೆಡಿಎಸ್ ಸಹ ಪೈಪೋಟಿ ಕೊಟ್ಟಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಚುನಾವಣೆ ದಿನದಂದು ಜೆಡಿಎಸ್ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ತಮ್ಮ ಗೆಲುವು ಅಸಾಧ್ಯ ಅಂತ ಅರಿತು ಒಳಗೊಳಗೆ ಕಾಂಗ್ರೆಸ್ ಗೆ ಕೈ ಹಿಡಿದ ಕಾರಣ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಪ್ರದೀಪ್ ಈಶ್ವರ್ ಗೆದ್ದು ಬೀಗಿದ್ದಾರೆ. ಸರಿಸುಮಾರು 45-50 ಸಾವಿರ ಮತಗಳ ನೀರಿಕ್ಷೆ ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ 19 ಸಾವಿರ ಮತಗಳು ಸಿಕ್ಕಿವೆ.

    2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುಧಾಕರ್‌ 82 ಸಾವಿರ ಮತಗಳನ್ನು ಪಡೆದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಪಿ. ಬಚ್ಚೇಗೌಡ 29 ಸಾವಿರ ಮತಗಳನ್ನು ಪಡೆದಿದ್ದರು.