Tag: Operation Kamal

  • BJP ಮಾಡಿದ್ದು ಆಪರೇಷನ್, ನಮ್ಮದು ಕೋಆಪರೇಷನ್: ಸಚಿವ ಬೋಸರಾಜು

    BJP ಮಾಡಿದ್ದು ಆಪರೇಷನ್, ನಮ್ಮದು ಕೋಆಪರೇಷನ್: ಸಚಿವ ಬೋಸರಾಜು

    ರಾಯಚೂರು: ನಮ್ಮ ಪಕ್ಷಕ್ಕೆ ಬರುವವರು ಬಹಳ ಜನ ಇದ್ದಾರೆ, ಆಪರೇಷನ್ ಅನ್ನೋದು ಕೆಟ್ಟ ಶಬ್ದ ದೇಶದಲ್ಲಿ ಅದನ್ನ ಮಾಡಿದ್ದು ಬಿಜೆಪಿ. ನಮ್ಮದು ಆಪರೇಷನ್ (Operation) ಅಲ್ಲ, ಕೋಆಪರೇಷನ್ ಅಂತ ಸಚಿವ ಎನ್.ಎಸ್ ಬೋಸರಾಜು (NS Boseraju) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷದ ಶಾಸಕರು ಮುಖ್ಯಮಂತ್ರಿಗಳನ್ನ ಭೇಟಿಯಾಗ್ತಿದ್ದಾರೆ. ಅದು ಅವರ ಕ್ಷೇತ್ರಗಳ ಬಗ್ಗೆಯೂ ಇದೆ, ರಾಜಕೀಯವಾಗಿಯೂ (Politics) ಭೇಟಿಯಾಗ್ತಿದ್ದಾರೆ. ಎರಡು ನಡೆಯುತ್ತಲೇ ಇರುತ್ತವೆ, ನಾವು ಏನು ಹೇಳುವಂತಹದಿಲ್ಲ. ಅದಕ್ಕೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಹಂತದಲ್ಲಿ ಎಲ್ಲವೂ ನಡೀತಿದೆ. ನಾವು ಆಪರೇಷನ್ ಅನ್ನೋ ಪದ ಬಳಸಲ್ಲ, ಅದು ಕೆಟ್ಟ ಶಬ್ದ. ಇಡೀ ದೇಶದ ಇತಿಹಾಸದಲ್ಲಿ ಆಪರೇಷನ್ ಮಾಡಿದ್ದು ಬಿಜೆಪಿ. ಆ ಕೆಟ್ಟ ಶಬ್ದ ಉಪಯೋಗ ಮಾಡೋದಕ್ಕೆ ನಮ್ಮ ಪಕ್ಷ ತಯಾರಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ 1 ಗಂಟೆಗೂ ಹೆಚ್ಚು ಕಾಲ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಬಿಜೆಪಿ ಮಧ್ಯಪ್ರದೇಶ (Madhya Pradesh), ಗೋವಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಪರೇಷನ್ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಇಲ್ಲದಿರುವ ಹಾಗೆ ಮಾಡಿದೆ. ಸಂವಿಧಾನಕ್ಕೆ‌ ಕೆಟ್ಟ ಹೆಸರು ತಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಪಕ್ಷ ನಮ್ಮದು. ಪಕ್ಷಕ್ಕೆ ಬರುವವರು ಅನೇಕರಿದ್ದಾರೆ. ನಮ್ಮ ಪಕ್ಷದಲ್ಲಿ ಸ್ಥಳೀಯ ಪರಿಸ್ಥಿತಿ ನೋಡಿಕೊಂಡು, ಜೊತೆಗೆ ಬರುವವರಿಂದ ಸಂಘಟನೆಗೆ ಅನುಕೂಲ ಆಗುತ್ತದೆಯೇ ಅನ್ನೋದನ್ನ ನೋಡಿಕೊಂಡು ನಮ್ಮರಿಗೂ ಅದರಿಂದ ತೊಂದರೆ ಆಗದಂತೆ ಮಾಡಲಾಗುತ್ತಿದೆ. ಯಾವ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸೇರಲು ಮುಖಂಡರು ಬರುತ್ತಿದ್ದಾರೋ ಆಯಾ ಜಿಲ್ಲಾ ಹಂತದಲ್ಲಿಯೇ ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ

    ಸಿಟ್ಟಿಂಗ್‌ ಎಂಎಲ್‌ಎ ಮತ್ತು ಸಿಟ್ಟಿಂಗ್‌ ಎಂಪಿ ಅನ್ನೋರದ್ದು ರಾಜ್ಯಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಮುಖಂಡರು ಕಾಂಗ್ರೆಸ್‌ಗೆ ಬರುವವರು ಇದ್ದರೆ ಅವರಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ಅನುಕೂಲವಾದ್ರೆ, ನಿಮ್ಮ ಹಂತದಲ್ಲಿಯೇ ಮಾತನಾಡಿ ಅಂತಾ ಪಕ್ಷ ಸೂಚಿಸಿರುವುದಾಗಿ ಬೋಸರಾಜು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರಪತಿ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಸದ್ದು

    ರಾಷ್ಟ್ರಪತಿ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಸದ್ದು

    ನವದೆಹಲಿ: ನಾಳೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಈ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಆರೋಪ ಕೇಳಿಬಂದಿದೆ.

    ಬಿಜೆಪಿ ನೇತೃತ್ವದ ಎನ್‍ಡಿಎ ಬಳಿ ಶೇ.60ಕ್ಕೂ ಹೆಚ್ಚು ಅಂದರೆ 6.67 ಲಕ್ಷಕ್ಕೂ ಹೆಚ್ಚು ಮತಗಳು ಇವೆ. ಮೂರು ಲಕ್ಷ ಚಿಲ್ಲರೆ ಮತಗಳನ್ನು ವಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣ ಯಶವಂತ್ ಸಿನ್ಹಾ ಸೋಲು ಬಹುತೇಕ ಖಚಿತವಾಗಿದೆ. ಅವರ ಬಳಿ ಮೂರು ಲಕ್ಷ ಚಿಲ್ಲರೇ ಮತಗಳಷ್ಟೇ ಇವೆ.

    ಪ್ರಮುಖವಾಗಿ ವಿಪಕ್ಷಗಳಲ್ಲಿನ ಬುಡಕಟ್ಟು ಸಮುದಾಯದ ಶಾಸಕರು, ಸಂಸದರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ.  ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಯಶವಂತ್‌ ಸಿನ್ಹಾ ಬಿಜೆಪಿ ಹಣ ಆಮಿಷವನ್ನು ಒಡ್ಡಿದೆ ಎಂಬ ಆರೋಪ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಗೆಲ್ಲುವುದು ಪಕ್ಕಾ ಆಗಿರುವುದರಿಂದ ಬಿಜೆಪಿಯವರು ಫುಲ್ ಜೋಷ್‍ನಲ್ಲಿ ಇದ್ದಾರೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕ್‍ನಲ್ಲಿರುವ ಪೂರ್ವಜರ ಮನೆಗೆ ಭೇಟಿ ನೀಡಿದ ಭಾರತೀಯ ಮಹಿಳೆ

    ಇದೇ ಜೋಷ್‍ನಲ್ಲಿ ಎನ್‍ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್‌ ಅವರನ್ನು ಕಣಕ್ಕಿಳಿಸಿದೆ. ವಿಪಕ್ಷಗಳು ಇಂದು ಅಭ್ಯರ್ಥಿಯನ್ನು ಪ್ರಕಟಿಸುವ ಸಂಭವ ಇದೆ.

    Live Tv
    [brid partner=56869869 player=32851 video=960834 autoplay=true]

  • ಮಧ್ಯಪ್ರದೇಶದ ವೈರಸ್‍ಗೆ ಮಹಾರಾಷ್ಟ್ರಕ್ಕೆ ಪ್ರವೇಶವಿಲ್ಲ: ಶಿವಸೇನೆ

    ಮಧ್ಯಪ್ರದೇಶದ ವೈರಸ್‍ಗೆ ಮಹಾರಾಷ್ಟ್ರಕ್ಕೆ ಪ್ರವೇಶವಿಲ್ಲ: ಶಿವಸೇನೆ

    -ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಎಂದ ರಾವತ್

    ಮುಂಬೈ: ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

    ಶಿವಸೇನೆಯ ಮುಖ್ಯಸ್ಥ, ಸಿಎಂ ಉದ್ಧವ್ ಠಾಕ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಂದಲೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಕೆಲವರು ನಮ್ಮ ಮೈತ್ರಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ)ಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ನಾವು ತಡೆಯಲ್ಲ ಎಂದು ಪರೋಕ್ಷವಾಗಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.

    ಮಧ್ಯಪ್ರದೇಶದ ಸಿಎಂ ಕಮಲನಾಥ್ ವಿಶ್ವಾಸಮತ ಸಾಬೀತು ಪಡಿಸಬಹುದು. ವಿಶ್ವಾಸಮತ ಯಾಚನೆಗೂ ಮುನ್ನ ಸರ್ಕಾರ ಇರುತ್ತಾ ಅಥವಾ ಇಲ್ವಾ ಎಂಬುದರ ಬಗ್ಗೆ ಹೇಳಲಾರೆ. ಮೊದಲು ವಿಶ್ವಾಸಮತ ಸಾಬೀತು ಆಗಲಿ ಎಂದರು.

    ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಅದು ಕಾಂಗ್ರೆಸ್ ಆಂತರಿಕ ವಿಷಯ. ಸಿಂಧಿಯಾ ರಾಜೀನಾಮೆಯನ್ನು ಬಿಜೆಪಿ ಸಾಧನೆ ಎಂದು ತೆಗೆದುಕೊಳ್ಳಬಾರದು. ಸಿಂಧಿಯಾ ರಾಜೀನಾಮೆ ಹಿಂಪಡೆದುಕೊಳ್ಳುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇನ್ನು ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ. 100 ದಿನಗಳ ಹಿಂದೆ ಬಿಜೆಪಿ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮಾಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಯಾವುದೇ ಬೈಪಾಸ್ ಸರ್ಜರಿಯೂ ನಡೆಯಲ್ಲ. ಮಹಾರಾಷ್ಟ್ರದ ಜನತೆ ನಮ್ಮ ಸರ್ಕಾರವನ್ನು ರಕ್ಷಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಆಪರೇಷನ್ 2 ಇಲ್ಲ, ತಾವಾಗಿಯೇ ಹಲವರು ಪಕ್ಷಕ್ಕೆ ಬರ್ತಿದ್ದಾರೆ- ಉಮೇಶ್ ಜಾಧವ್

    ಆಪರೇಷನ್ 2 ಇಲ್ಲ, ತಾವಾಗಿಯೇ ಹಲವರು ಪಕ್ಷಕ್ಕೆ ಬರ್ತಿದ್ದಾರೆ- ಉಮೇಶ್ ಜಾಧವ್

    ಕಲಬುರಗಿ: ರಾಜ್ಯದಲ್ಲಿ ಆಪರೇಷನ್ ಕಮಲ ಪಾರ್ಟ್-2 ಇಲ್ಲ, ತಾವಾಗಿಯೇ ಇನ್ನೂ ಹಲವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಸಂಸದ ಉಮೇಶ್ ಜಾಧವ್ ಇನ್ನೂ ಹಲವು ಶಾಸಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಬರುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಎಲ್ಲಾ ಪಾರ್ಟಿ ಕ್ಲೀನ್ ಆಗಿದೆ. ಬಹುತೇಕರು ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಾಜ್ಯ ರಾಜಕೀಯದ ಕುರಿತು ಜಾಧವ್ ಭವಿಷ್ಯ ನುಡಿದಿದ್ದಾರೆ.

    ಅಮಿತ್ ಶಾ ಅವರ ಒಂದು ದೇಶ ಒಂದೇ ಭಾಷೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಯಾವುದೇ ಭಾಷೆಯನ್ನು ಯಾರ ಮೇಲು ಹೇರಬಾರದು. ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡುತ್ತೇವೆ. ಅವರ ನಿಲುವು ಏನು ಎಂದು ಸಹ ತಿಳಿದುಕೊಳ್ಳುತ್ತೆವೆ. ಅಮಿತ್ ಶಾ ಅವರು ಒಂದು ರಾಷ್ಟ್ರೀಯ ಭಾಷೆ ಇರಬೇಕೆಂದು ಹೇಳಿರುತ್ತಾರೆ. ಆದರೆ, ಬೇರೆ ಭಾಷೆ ಬೇಡ ಎಂದು ಹೇಳಿಲ್ಲ. ಅವರ ಒಂದು ದೇಶ ಒಂದು ಭಾಷೆಯ ಹೇಳಿಕೆ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿಲ್ಲ. ಅದನ್ನು ಪೂರ್ತಿ ನೋಡಿಲ್ಲ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ ಎಂದರು.

  • ಎನ್‍ಸಿಪಿಯ 3, ಕಾಂಗ್ರೆಸ್ಸಿನ ಓರ್ವ ಶಾಸಕ ರಾಜೀನಾಮೆ – ನಾಳೆ ಬಿಜೆಪಿಗೆ ಸೇರ್ಪಡೆ

    ಎನ್‍ಸಿಪಿಯ 3, ಕಾಂಗ್ರೆಸ್ಸಿನ ಓರ್ವ ಶಾಸಕ ರಾಜೀನಾಮೆ – ನಾಳೆ ಬಿಜೆಪಿಗೆ ಸೇರ್ಪಡೆ

    ಮುಂಬೈ: ರಾಜ್ಯದ ಗಾಳಿ ಮಹಾರಾಷ್ಟ್ರಕ್ಕೂ ಬೀಸಿದ್ದು, ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ.

    ಇತ್ತೀಚೆಗಷ್ಟೇ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥರೊಬ್ಬರು ಶಿವಸೇನೆ ಪಕ್ಷಕ್ಕೆ ಸೇರಿದ್ದರು. ಇದೀಗ ಮೂವರು ಎನ್‍ಸಿಪಿ ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಎನ್‍ಸಿಪಿ ಶಾಸಕರಾದ ಶಿವೇಂದ್ರಸಿನ್ಹಾರಾಜೆ ಭೋಸ್ಲೆ(ಸತಾರಾ), ವೈಭವ್ ಪಿಚದ್(ಅಕೋಲೆ), ಸಂದೀಪ್ ನಾಯ್ಕ್(ಐರೋಲಿ) ಹಾಗೂ ಕಾಂಗ್ರೆಸ್ ಶಾಸಕ ಕಲಿದಾಸ್ ಕೋಲಂಬ್ಕರ್(ನೈಗಾನ್) ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಹರಿಭಾವ್ ಬಗಾಡೆ ಅವರಿಗೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ರಾಜೀನಾಮೆ ನೀಡಿದ ಶಾಸಕರು ಬುಧವಾರ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ನನ್ನ ಕ್ಷೇತ್ರದ ಹಿತಾಸಕ್ತಿ ಕಾಪಾಡಲು ಹೆಚ್ಚು ಆಸಕ್ತಿ ವಹಿಸಿದ್ದು ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಎನ್‍ಸಿಪಿ ಸಂಸದ ಉದಯನ್‍ರಾಜೆ ಭೋಸ್ಲೆ ಅವರ ಸಂಬಂಧಿಕ ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು ತಿಳಿಸಿದ್ದಾರೆ.

    ಮುಂಬೈನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೊಲಂಬ್ಕರ್ ಅವರನ್ನು ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ 47,813 ಮತಗಳ ಅಂತರದಲ್ಲಿ ಸೋಲಿಸಿದ್ದರು. ಹೀಗಾಗಿ ಬಿಜೆಪಿ ಇವರಿಗೆ ಗಾಳ ಹಾಕಿದೆ.

    ಎನ್‍ಸಿಪಿಯ ಮಾಜಿ ಸಚಿವ ಮಧುಕರ್ ಪಿಚಾದ್ ಅವರ ಪುತ್ರ, ಅಹ್ಮದ್‍ನಗರ ಜಿಲ್ಲೆಯ ಅಕೋಲೆ ಕ್ಷೇತ್ರದ ವೈಭವ್ ಪಿಚಾದ್ ಅವರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ನೂತನ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರತ್ ಅವರ ಕ್ಷೇತ್ರದ ಪಕ್ಕದಲ್ಲೇ ಇದ್ದು, ಇವರನ್ನು ಅಲ್ಲಿಯ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸುತ್ತಲಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಸ್ಥಾನಗಳಲ್ಲಿ ಜಯಗಳಿಸುವ ಪಕ್ಷದ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸನ್ನದ್ಧರಾಗುತ್ತಿದ್ದು, ಇದರ ಭಾಗವಾಗಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಇತ್ತೀಚೆಗೆ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥ ಸಚಿನ್ ಅಹಿರ್ ಅವರು ಎನ್‍ಸಿಪಿ ಬಿಟ್ಟು ಶಿವಸೇನೆ ಸೇರಿದ್ದರು. ಅಲ್ಲದೆ, ಮೇ ತಿಂಗಳಲ್ಲಿ ಎನ್‍ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಯ್‍ದತ್ ಕ್ಷೀರ್‍ಸಾಗರ್ ಅವರು ಸಹ ಶಿವಸೇನೆ ಸೇರಿದ್ದರು.

    ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್, ಕಾಂಗ್ರೆಸ್ ಮತ್ತು ಎನ್‍ಸಿಪಿ 50 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

  • ರೆಬೆಲ್ ಶಾಸಕರಿಂದ ಸಿಎಂ ಭೇಟಿ – ರಾಜೀನಾಮೆ ನೀಡದಂತೆ ಮನವಿ

    ರೆಬೆಲ್ ಶಾಸಕರಿಂದ ಸಿಎಂ ಭೇಟಿ – ರಾಜೀನಾಮೆ ನೀಡದಂತೆ ಮನವಿ

    ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ರೆಬೆಲ್ ಗಳೆಂದೇ ಗುರುತಿಸಲಾಗಿದ್ದ ಶಾಸಕರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ರಾಜೀನಾಮೆ ನೀಡದಂತೆ ಸಿಎಂ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ನಡೆಸುತ್ತಿದ್ದ ವೇಳೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅತೃಪ್ತರ ಪಟ್ಟಿಯಲ್ಲಿದ್ದ ಶಾಸಕರಾದ ಕಂಪ್ಲಿ ಗಣೇಶ್, ಭೀಮಾನಾಯಕ್, ಸುಬ್ಬಾರೆಡ್ಡಿ ಅವರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ ನಂತರ ಮೂವರು ಅತೃಪ್ತ ಶಾಸಕರು ಭೇಟಿ ಮಾಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಟ್ಟು, ಬಿಜೆಪಿಗೆ ಹೋಗದಂತೆ ಮನವೊಲಿಸಿದ್ದಾರೆ. ಇದಕ್ಕೆ ಅತೃಪ್ತ ಶಾಸಕರು ಪ್ರತಿಕ್ರಿಯಿಸಿ, ನಾವು ರಾಜೀನಾಮೆ ನೀಡುವುದಿಲ್ಲ. ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಂಪ್ಲಿ ಶಾಸಕ ಗಣೇಶ್, ಅಧಿಕಾರ ಶಾಶ್ವತ ಅಲ್ಲ, ಪಕ್ಷದ ಚಿಹ್ನೆಯಿಂದ ಗೆದ್ದು ಬಂದಿರುವುದು ಮುಖ್ಯ. ಅಧಿಕಾರ ಇರುತ್ತದೆ ಹೋಗುತ್ತದೆ. ಒಂದು ಪಕ್ಷದ ಚಿಹ್ನೆ ಮೇಲೆ ಗೆದ್ದು ಬಂದ ಮೇಲೆ ನಿಯತ್ತಾಗಿರಬೇಕು, ಲಾಯಕ್ಕಾಗಿರಬೇಕು ಎಂದು ಪರೋಕ್ಷವಾಗಿ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಕುಟುಕಿದ್ದಾರೆ.

    ಈ ಹಿಂದಿಗಿಂತಲೂ ಕ್ಷೇತ್ರಗಳು ಚೆನ್ನಾಗಿ ಅಭಿವೃದ್ಧಿಯಾಗಿವೆ. ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಸಿಎಂ 75 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ, ಸಂಪರ್ಕ ಮಾಡಿದರೂ ನಾನು ಬಿಟ್ಟು ಹೋಗುವುದಿಲ್ಲ ಎಂದು ಕಂಪ್ಲಿ ಗಣೇಶ್ ಸ್ಪಷ್ಟಪಡಿಸಿದರು.

  • ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿ: ಪರಮೇಶ್ವರ್

    ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿ: ಪರಮೇಶ್ವರ್

    ಬೆಂಗಳೂರು: ರಾಜ್ಯಪಾಲರೂ ಸೇರಿದಂತೆ ಎಲ್ಲ ನಾಯಕರೂ ಆಪರೇಷನ್ ಕಮಲ ನಡೆಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಭಯ ಇದೆ ರಕ್ಷಣೆ ಕೊಡಿ ಎಂದು ಬರವಣಿಗೆಯಲ್ಲಿ ಕೊಟ್ಟಿದ್ದರೆ ಡಿಜಿ ಅವರಿಗೆ ಸೂಚನೆ ನೀಡಬಹುದಿತ್ತು. ಅದನ್ನು ಬಿಟ್ಟು ಪೊಲೀಸ್ ಆಯುಕ್ತರನ್ನು ಕರೆಸಿಕೊಂಡು ಅವರ ಜೊತೆಯಲ್ಲೇ ಕೂರಿಸಿಕೊಂಡು ಶಾಸಕರೊಂದಿಗೆ ಮಾತನಾಡುತ್ತೀರಿ ಎನ್ನುವುದಾದರೆ, ಕುದುರೆ ವ್ಯಾಪಾರಕ್ಕೆ ನೀವೇ ಕಾರಣೀಭೂತರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ರಾಜ್ಯಪಾಲರೂ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನದ ಮೂಲಕ ಶಾಸಕರನ್ನು ಮುಂಬೈನ ರೆಸಾರ್ಟ್ ಗೆ ಕಳುಹಿಸಲಾಗಿದೆ. ಇದರ ಅರ್ಥ ಏನು, ಇಷ್ಟೆಲ್ಲ ಆದರೂ ಸಹ ನಮಗೆ ಸಂಬಂಧವಿಲ್ಲ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಹೇಗೆ ಸಾಧ್ಯ, ಅವರೇ ಆಪರೇಷನ್ ಮಾಡುತ್ತಿರುವುದು. ಬಿಜೆಪಿಯವರೇ ಸರ್ಕಾರವನ್ನು ಅಸ್ಥಿರ ಹಾಗೂ ಕುದುರೆ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ರಿವರ್ಸ್ ಆಪರೇಷನ್ ಮಾಡುವ ಅಗತ್ಯ ಬಿದ್ದರೆ ಮಾಡಲೇಬೇಕಾಗುತ್ತದೆ. ಆದರೆ, ಈಗ ರಿವರ್ಸ್ ಆಪರೇಷನ್ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ಸದ್ಯ ಈ ಕುರಿತು ಚಿಂತನೆ ನಡೆಸಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರು ಶಾಸಕರು ರಾಜೀನಾಮೆ ನೀಡಿರುವುದು ನನ್ನ ಬಗ್ಗೆ ಅಸಮಾಧಾನದಿಂದಲ್ಲ, ನಾನು ಎರಡು ಬಾರಿ ಬೆಂಗಳೂರು ಶಾಸಕರ ಸಭೆ ಕರೆದಿದ್ದೇನೆ. ಬಂದಿರುವ ಕುರಿತು ಹಾಜರಾತಿ ಇದೆ. ಯಾರು ಭಾಗವಹಿಸಿದ್ದಾರೆ, ಯಾರು ಭಾಗವಹಿಸಿಲ್ಲ, ಏನು ಮಾತನಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅಲ್ಲದೆ, ಹಿಂದೆಂದಿಗಿಂತಲೂ ಈ ಬಾರಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ 8 ಸಾವಿರ ಕೋಟಿ ರೂ. ಕಳೆದ ಬಾರಿ ಈ ಬಾರಿ 11 ಸಾವಿರ ಕೋಟಿ ರೂ. ಅನುದಾನ ಕೊಡಿಸಿದ್ದೇನೆ. ಆದರೂ ರಾಜೀನಾಮೆ ನೀಡಿದ್ದಾರೆ. ನನ್ನ ಮೇಲಿನ ಅಸಮಾಧಾನದಿಂದ ರಾಜೀನಾಮೆ ನೀಡಿಲ್ಲ. ಬದಲಿಗೆ ಬಿಜೆಪಿಯವರ ಆಪರೇಷನ್‍ನಿಂದ ಈ ರೀತಿ ಮಾಡಿದ್ದಾರೆ.

    ಇಂದು ನಡೆದ ಈ ಉಪಹಾರ ಕೂಟ ಕೇವಲ ಇಡ್ಲಿ ದೋಸೆಗೆ ಸೀಮಿತವಾಗುವುದಿಲ್ಲ. ಸರ್ಕಾರ ಸ್ಥಿರಗೊಳಿಸುವ ಸಭೆಯಾಗಿದೆ. ಎಲ್ಲ ಹಿರಿಯ ನಾಯಕರು ಚರ್ಚಿಸಿ ಸೂಕ್ತ ತೀರ್ಮಾನ ಕೂಗೊಳ್ಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

  • ಆಪರೇಷನ್ ಕಮಲ ಸುಳಿವು ಕೊಟ್ಟ ಮುರಳಿಧರ್ ರಾವ್

    ಆಪರೇಷನ್ ಕಮಲ ಸುಳಿವು ಕೊಟ್ಟ ಮುರಳಿಧರ್ ರಾವ್

    ಬೆಂಗಳೂರು: ಸಂಸತ್ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಾ ಎಂಬುದರ ಕುರಿತು ರಾಜಕೀಯ ಅಂಗಳದಲ್ಲಿ ಚರ್ಚೆಗಳು ನಡೆದಿವೆ. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ನೀಡಿರುವ ಹೇಳಿಕೆ ಇಂತಹ ಅನುಮಾನಕ್ಕೆ ಕಾರಣವಾಗಿದೆ.

    ನಗರದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತ ಈಗ ಬಿಜೆಪಿ ರಾಡಾರ್ ವ್ಯಾಪ್ತಿಯಲ್ಲಿದೆ. ಕರ್ನಾಟಕದಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳಿಸಬೇಕಾಗಿದೆ. ಆದಷ್ಟು ಬೇಗ ಸರ್ಕಾರ ಕಿತ್ತೊಗೆಯಬೇಕಿದೆ ಎಂದು ಹೇಳಿದ್ದಾರೆ.

    ಈ ಮಧ್ಯೆ ಮಗ ಗ್ರಾಮ ವಾಸ್ತವ್ಯಕ್ಕೆ ಹೋದರೆ, ಅಪ್ಪ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುತ್ತಿದ್ದಾರೆ. ಯೋಗ್ಯತೆ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಅಂತಾ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಧ್ಯಂತರ ಚುನಾವಣೆಗೆ ಅವಕಾಶ ಕೊಡಲ್ಲ ಎಂದು ಮುರಳಿಧರ್ ರಾವ್ ಕೂಡ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರ್.ಅಶೋಕ್ ಅವರು, ರಾಜ್ಯಗಳಲ್ಲೂ ಕಾಂಗ್ರೆಸ್ ಜಗಳವಾಡುತ್ತಿದೆ. ಚುನಾವಣೆ ಸೋಲಿನ ವಿಚಾರವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ತಾನಾಗಿಯೇ ಮೈತ್ರಿ ಸರ್ಕಾರ ಪತನವಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]