Tag: operation bulldozer

  • ಎಲೆಕ್ಷನ್ ಟೈಂನಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್ ಸುಳಿವು

    ಎಲೆಕ್ಷನ್ ಟೈಂನಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್ ಸುಳಿವು

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಕಾವು ಹೆಚ್ಚಾಗ್ತಾ ಇದೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ದಿನಾಂಕ ಕೂಡ ನಿಗದಿ ಆಗಲಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ (BBMP) ಬೆಂಗಳೂರಿನಲ್ಲಿ (Bengaluru) ಆಪರೇಷನ್ ಬುಲ್ಡೋಜರ್ (Operation Bulldozer) ಸುಳಿವನ್ನು ನೀಡಿದ್ದು ಮತ್ತೆ ರಾಜಕಾಲುವೆ ಒತ್ತುವರಿ ತೆರವು (Encroachments) ಕಾರ್ಯಾಚರಣೆ ಮಾಡಲು ಮುಂದಾಗಿದೆ.

    ಚುನಾವಣಾ ಸಂದರ್ಭದಲ್ಲಿ ಜನವಿರೋಧಿ ಅಥವಾ ಸರ್ಕಾರಕ್ಕೆ ಮುಜುಗರ ಆಗ್ತಾಕ್ಕಂತ ಕೆಲಸಗಳನ್ನು ಮಾಡಲು ಮುಂದಾಗಲ್ಲ. ಏನೇ ನಿಯಮಬಾಹಿರ ಆಗಿದ್ರು ಕ್ರಮಕ್ಕೆ ಮುಂದಾಗಲ್ಲ. ಆದರೆ ಈ ನಡುವೆ ಒತ್ತುವರಿ ತೆರವಿಗೆ ಸರ್ಕಾರ ಅನುಮತಿ ನೀಡುವುದು ಅನುಮಾನವಾಗಿದೆ. ಆದರೂ ಫೆ.10ರ ಒಳಗಡೆ ಒತ್ತುವರಿದಾರರಿಗೆ ನೋಟಿಸ್ ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ಜೊತೆಗೆ ಮಾರ್ಚ್ ತಿಂಗಳ ಒಳಗಡೆ ತೆರವು ಕಾರ್ಯಾಚರಣೆ ಮುಗಿಸುವ ಗುರಿಯನ್ನು ಕೂಡ ನೀಡಲಾಗಿದೆಯಂತೆ. ಇದನ್ನೂ ಓದಿ: ಬಸವ ಕಲ್ಯಾಣದಿಂದ ಸಿದ್ದರಾಮಯ್ಯ, ಕುರಡುಮಲೆಯಿಂದ ಡಿಕೆಶಿ ಬಸ್ ಯಾತ್ರೆ- ಫೆ. 3ರಿಂದ ಆರಂಭ

    ಬೆಂಗಳೂರು ನಗರದಾದ್ಯಂತ 485 ಕಡೆ ತೆರವು ಕಾರ್ಯಾಚರಣೆ ಮಾಡಬೇಕಿದೆ. 257 ಕಡೆ ಸರ್ವೆ ಕಾರ್ಯ ಮಾಡಿ ಕೆಲ ಭೂಮಾಲೀಕರಿಗೆ ನೋಟಿಸ್ ಕೂಡ ನೀಡಲಾಗಿದೆ. ಹೊಸದಾಗಿ 161 ಕಡೆ ಒತ್ತುವರಿ ಆಗಿರೋದನ್ನು ಬಿಬಿಎಂಪಿ ಮತ್ತೆ ಮಾಡಿದೆ. ಅದರಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 32 ಕಡೆ ಒತ್ತುವರಿ, ದಾಸರಹಳ್ಳಿ 125 ಕಡೆ ಒತ್ತುವರಿ, ಪಶ್ಚಿಮ ವಲಯ 06, ಪೂರ್ವ ವಲಯ 90 ಕಡೆ ಒತ್ತುವರಿ ತೆರವು ಸರ್ವೆ ನಡೆಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿಗೆ ಬಂದಿಳಿದ ತಲೈವಾ ರಜನಿಕಾಂತ್ : ಕರಾವಳಿಯಲ್ಲಿ ‘ಜೈಲರ್’ ಶೂಟಿಂಗ್

    ಒಟ್ಟಾರೆ ಚುನಾವಣೆ ಸಮಯದಲ್ಲಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯ ಸುಳಿವು ನೀಡಿದ್ದು, ಸರ್ಕಾರ ಏನು ಮಾಡುತ್ತೆ ಎಂಬುದೇ ಕುತೂಹಲವಾಗಿದೆ. ಸರ್ಕಾರ ತೆರವು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ – ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ

    ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ – ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಪರೇಷನ್ ಬುಲ್ಡೋಜರ್ ಪಾರ್ಟ್-2 ಶುರುಗೆ ಭರದ ಸಿದ್ಧತೆ ನಡೆಯುತ್ತಿದೆ. ದೊಡ್ಡವರ ರಣಬೇಟೆಗೆ ಪಾಲಿಕೆ ಈ ಬಾರಿ ಜಂಟಿ ಸರ್ವೇ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಸೋಮವಾರದಿಂದ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಸಿದ್ಧವಾಗಿದೆ.

    ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತ್ತವಾಗಿತ್ತು. ರಾಜಕಾಲುವೆ ಒತ್ತುವರಿ ನಗರದ ಪರಿಸ್ಥಿತಿಗೆ ಕಾರಣವೆಂದು ಬರೋಬ್ಬರಿ 15 ದಿನ ನಗರದಲ್ಲಿ ಬುಲ್ಡೋಜರ್ ಘರ್ಜಿಸಿತು. 829 ಒತ್ತುವರಿಯಲ್ಲಿ ಮೊದಲ ಹಂತದ ಒತ್ತುವರಿ ತೆರವಿನಲ್ಲಿ ಹಲವೆಡೆ ಬುಲ್ಡೋಜರ್ ಘರ್ಜಿಸಿತು. ಈಗ ಬುಲ್ಡೋಜರ್ ಪಾರ್ಟ್-2ಗೆ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ

    BBMP

    ರಾಜಕಾಲುವೆ ಒತ್ತುವರಿ ತೆರವು ಬುಲ್ಡೋಜರ್ ಪಾರ್ಟ್-2ಗೆ ಮಹದೇವಪುರದಲ್ಲಿ ಬರೋಬ್ಬರಿ 18 ಪ್ರಾಪರ್ಟಿಗಳು ಒತ್ತುವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಈ ಪ್ರಕಾರ ಸ್ಟೇ ಕಾರಣ ನೀಡಿ ತಪ್ಪಿಸಿಕೊಳ್ಳಬಾರದೆಂದು ಲೆಕ್ಕಚಾರ ಮಾಡಿ, ಸ್ಟೇ ಇರುವ ಕಡೆ ಅಧಿಕಾರಿ ಹಾಗೂ ಒತ್ತುವರಿದಾರರು ಜಂಟಿ ಸರ್ವೆ ನಡೆಸಲು ಸೂಚಿಸಲಾಗಿದೆ. ಒತ್ತುವರಿ ಕಂಡು ಬಂದರೆ ಬುಲ್ಡೋಜರ್ ಘರ್ಜನೆ ಪಕ್ಕಾ ಎನ್ನಲಾಗಿದೆ.

    ನಲಪಾಡ್ ಆಕಾಡೆಮಿ, ಸಿಲ್ವರ್ ಸ್ಪ್ರಿಂಗ್ ಪ್ಲಾಟ್ ಓನರ್ಸ್ ಅಸೋಸಿಯೇಷನ್, ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್, ರೈನ್ ಬೋ ಲೇಔಟ್, ಉಮೀಯಾ ಓಲ್ಡಿಂಗ್, ಪ್ರೈವೆಟ್ ಲಿಮಿಟೆಡ್ಚ, ಇಕೋ ಸ್ಪೇಸ್, ದಿವ್ಯ ಶ್ರೀ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್. ಈ ಭಾಗಗಳಿಗೆ ಹೀಗೆ ಬಂದು ಹಾಗೇ ಹೋಗಿದ್ದ ಬುಲ್ಡೋಜರ್‌ಗಳು ಮತ್ತೆ ಆಪರೇಷನ್ ಮಾಡುತ್ತಾವೆಯೇ ಎಂಬುದು ಪ್ರಶ್ನೆಯಾಗಿದೆ. ಜಂಟಿ ಸರ್ವೇ ಮಾಡಿದಾಗ ಒತ್ತುವರಿ ಆಗಿರುವುದು ತಿಳಿದುಬಂದರೆ, ನೋಟಿಸ್ ಕೊಟ್ಟು ಕಾರ್ಯಾಚರಣೆ ಶುರು ಮಾಡಲಾಗುವುದು ಎಂದು ಮುಖ್ಯ ಇಂಜಿನಿಯರ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಇತ್ತ ನಗರದಲ್ಲಿ ಇನ್ನೂ 602 ಪ್ರಾಪರ್ಟಿ ಒತ್ತುವರಿ ತೆರವು ಆಗಬೇಕಿದೆ. ಈ ಕಡೆ ಮಹದೇವಪುರ ವಲಯದಲ್ಲೇ 132 ಒತ್ತುವರಿಗಳಿದ್ದು, 12 ಪ್ರಾಪರ್ಟಿ ಮೇಲೆ ಕೋರ್ಟ್ ಕೇಸ್‌ಗಳಿವೆ. ಹೀಗಾಗಿ ಹಂತ ಹಂತವಾಗಿ ಜಂಟಿ ಸರ್ವೇ ಮೂಲಕ ಮುಂದಿನ ವಾರದಿಂದಲೆ ಎಲ್ಲ ವಲಯಗಳಲ್ಲೂ ಜೆಸಿಬಿ ಘರ್ಜಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ

    ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ

    ಬೆಂಗಳೂರು: ನವರಾತ್ರಿ ಕಳೆದ ಮೇಲೆ ಆಪರೇಷನ್ ಬುಲ್ಡೋಜರ್ (Operation Bulldozer)  ಶುರುವಾಗಲಿದೆ. ಬಡವರ ಮನೆಗೆ ಜೆಸಿಬಿ ನುಗ್ಗಿಸಿ ರಾಜಕಾಲುವೆ ಒತ್ತುವರಿ ಹೈಡ್ರಾಮಾ ನಡೆಸಿದ್ದ ಪಾಲಿಕೆಗೆ ಹೈಕೋರ್ಟ್  (High Court) ಕಿವಿಹಿಂಡಿದ ಬಳಿಕ ಈಗ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ.

    ಬಡವರ ಮನೆಗೆ ಜೆಸಿಬಿ ನುಗ್ಗಿಸಿ ಶ್ರೀಮಂತರ ಅಂಗಳದಲ್ಲಿ ಬರೀ ಗೋಡೆ, ಖಾಲಿ ಜಾಗ ಒಡೆದು ಡ್ರಾಮಾ ಮಾಡಿದ್ದ ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ. ಅಕ್ಟೋಬರ್-25ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದು, ವಿಳಂಬದ ಬಗ್ಗೆ ಹೈಕೋರ್ಟ್ ಕಿಡಿಕಾರಿದೆ. ಇದರ ಬೆನ್ನಲ್ಲೇ ಈಗ ನವರಾತ್ರಿ ಹಬ್ಬ ಕಳೆದ ಮೇಲೆ ತೆರವು ಕಾರ್ಯಚಾರಣೆಗೆ ಬಿಬಿಎಂಪಿ ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ನಾಡಗೀತೆಯೂ ಮೊಳಗಲಿ: ಸಿಎಂ ಗೆ ಮನವಿ ಸಲ್ಲಿಸಿದ ನಟ ಝೈದ್ ಖಾನ್

    ಹಬ್ಬ ಮುಗಿದ ತಕ್ಷಣ ಆಪರೇಷನ್ ಬುಲ್ಡೋಜರ್ ಎಲ್ಲಾ ವಲಯದಲ್ಲಿಯೂ ಶುರುಮಾಡಲಿದ್ದು, ಕಂದಾಯ ಇಲಾಖೆಯ ಮೂಲ ದಾಖಲೆಗಳ ಪರಿಶೀಲನೆ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸದ್ಯ 592 ರಾಜಕಾಲುವೆ ಒತ್ತುವರಿ ತೆರವು ಬಾಕಿ ಇದೆ. ಇನ್ನೂ ಕೆಲವರು ಕೋರ್ಟ್‍ನಿಂದ ಸ್ಟೇ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ ಆಪರೇಷನ್ ಬುಲ್ಡೋಜರ್ ಆರಂಭಿಸಲು ಪಾಲಿಕೆ ಪ್ಲಾನ್ ರೂಪಿಸುತ್ತಿದೆ. ಇದನ್ನೂ ಓದಿ: ಸಹಿ ಮಾಡಲು ಐಸಿಯುನಲ್ಲಿದ್ದ ವೃದ್ಧೆಯನ್ನು ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    ಬೆಂಗಳೂರು: (Bengaluru) ಇಂದಿನಿಂದ ರಾಜಧಾನಿಯಲ್ಲಿ ಮತ್ತೆ ಬಿಬಿಎಂಪಿ (BBMP) ಬುಲ್ಡೋಜರ್‌ಗಳು (Operation Bulldozer) ಘರ್ಜಿಸಲಿವೆ. ಇವತ್ತು ಬಡವರ ಒತ್ತುವರಿ ತೆರವು ಮಾಡುತ್ತಾ ಅಥವಾ ಪ್ರಭಾವಿಗಳ ಒತ್ತುವರಿಗೆ ಜೆಸಿಬಿ ನುಗ್ಗುತ್ತಾ ಎನ್ನುವುದೇ ಎಲ್ಲರ ಪ್ರಶ್ನೆ ಆಗಿದೆ.

    ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದ ರೈನ್ ಬೋ ಲೇಔಟ್ ವಿಲ್ಲಾಗಳಿಗೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿ 7 ದಿನ ಕಳೆದಿದೆ. ಒಂದು ವೇಳೆ ಈ ಅವಧಿಯಲ್ಲಿ ಒತ್ತುವರಿ ಜಾಗವನ್ನು ತೆರವು ಮಾಡದಿದಿದ್ದರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕು ಎಂದು 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದರು. ಇದನ್ನೂ ಓದಿ: ನಾನು ಸುಸ್ತಾಗಿದ್ದೇನೆ, ಜ್ವರ 100 ಡಿಗ್ರಿಗೆ ಬಂದಿದೆ – 11 ದಿನದಿಂದ ಮನೆಗೇ ಹೋಗಿಲ್ಲ ಅಂದ ಡಿಕೆಶಿ

    ಇನ್ನು ರೈನ್ ಬೋ (Rainbow) ಡ್ರೈವ್‌ ಲೇಔಟ್‌ನಲ್ಲಿ ಜಿಲ್ಲಾಡಳಿತ ನಡೆಸಿದ ಸರ್ವೆಯಲ್ಲಿ ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿತ್ತು. ಸೆಪ್ಟೆಂಬರ್ 1 ರಿಂದ ಈವರೆಗೆ 110 ಕಡೆ ಒತ್ತುವರಿಯನ್ನು ತೆರವು ಮಾಡಲಾಗಿದೆ.

    ಇದರ ಮಧ್ಯೆ, ಒತ್ತುವರಿ ಮಾಡಿರುವವರ ಹೆಸರಿನ ಪಟ್ಟಿಯನ್ನು ಕಂದಾಯ ಸಚಿವ ಆರ್‌.ಅಶೋಕ್‌ (R.Ashok) ಅವರು ವಿಧಾನಸೌಧದಲ್ಲಿ (Vidhan Soudha) ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ಪಟ್ಟಿಯಲ್ಲಿ ಯಾರ‍್ಯಾರ ಹೆಸರುಗಳು ಇರುತ್ತವೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ ಮತ್ತೆ ಘರ್ಜಿಸಲಿದೆ ಬುಲ್ಡೋಜರ್; ಮಾರ್ಕಿಂಗ್‌ಗೆ ಪೇಂಟಿಂಗ್ ಮಾಡಿರೋ ಕಿಡಿಗೇಡಿಗಳು

    ನಾಳೆಯಿಂದ ಮತ್ತೆ ಘರ್ಜಿಸಲಿದೆ ಬುಲ್ಡೋಜರ್; ಮಾರ್ಕಿಂಗ್‌ಗೆ ಪೇಂಟಿಂಗ್ ಮಾಡಿರೋ ಕಿಡಿಗೇಡಿಗಳು

    ಬೆಂಗಳೂರು: (Bengaluru) ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಸೋಮವಾರದಿಂದ ಜೆಸಿಬಿ ಘರ್ಜನೆಗೆ (Operation Bulldozer) ಬಿಬಿಎಂಪಿ (BBMP) ಮುಹೂರ್ತ ಫಿಕ್ಸ್ ಮಾಡಿದೆ. ಅದರೆ ಮಾರ್ಕಿಂಗ್ ಮಾಡಿರುವ ಜಾಗದಲ್ಲಿ ಕಿಡಿಗೇಡಿಗಳು ಪೇಂಟಿಂಗ್ ಮಾಡಿದ್ದು, ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಸೋಮವಾರದ ರಾಜಕಾಲುವೆ ತೆರವು ಕಾರ್ಯಾಚರಣೆ ವಿವರ ಇಲ್ಲಿದೆ.

    ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಸಮರ ಸಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿತ್ತು. ಮಹಾದೇವಪುರದಲ್ಲಿ 15 ಕಡೆ ಮಾರ್ಕಿಂಗ್ ಮಾಡಿ 8 ವಲಯದಲ್ಲೂ ಆರಂಭದಲ್ಲಿ ಜೆಸಿಬಿಗಳು ಘರ್ಜಿಸಿ ಠುಸ್ ಪಟಾಕಿಯಾದವು. ಬಿಬಿಎಂಪಿ ಈ ನಡೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಬಡವರ ಮನೆ ಹೊಡೆದು ಶ್ರೀಮಂತರ ಮನೆ ಹೊಡೆಯದೇ ಇರೋದಕ್ಕೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ನಾಳೆಯಿಂದ ಬೆಂಗಳೂರಿನ 8 ವಲಯದಲ್ಲೂ ತೆರವು ಕಾರ್ಯಾಚರಣೆ ಆರಂಭ ಮಾಡುವುದಾಗಿ ಯೋಜನೆ ಮಾಡಲಾಗಿದೆಯಂತೆ. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು

    BBMP

    ಈ ಹಿಂದೆ ಮಹಾದೇವಪುರದ 15 ಕಡೆ ಬಿಬಿಎಂಪಿ ತೆರವು ಕಾರ್ಯ ಮಾಡಲು ಮುಂದಾಗಿತ್ತು. ಅದರಲ್ಲಿ ವಿಪ್ರೋ, ಎಪ್ಸಿಯಾನ್, ಇಕೋಸ್ಪೇಸ್, ಪೂರ್ವಾಂಕರ, ಬಾಗ್ಮನೆ, ಗೋಪಾಲನ್, ನಲಪಾಡ್‌ ಅಕಾಡೆಮಿ ಸೇರಿದಂತೆ ಹಲವು ಕಡೆ ಬಿಬಿಎಂಪಿ ಸುಮ್ಮನೆ ತೆರವು ಮಾಡೋ ಡ್ರಾಮ ಮಾಡಿತು. ಇದಕ್ಕೆ ಕಾರಣ ಮಾರ್ಕಿಂಗ್ ಮಾಡಿದ್ದ ಗುರುತನ್ನು ಅಳಿಸಿ ಹಾಕಿದ್ದಾರಂತೆ. ಜೊತೆಗೆ ಕಂದಾಯ ಅಧಿಕಾರಿಗಳು ವರ್ಗಾವಣೆ ಆಗಿರೋದು ಕೂಡ ಮಾರ್ಕಿಂಗ್ ಮಾಡಿರೋ ಜಾಗ ಗೊತ್ತಾಗದೇ ತೆರವು ಕಾರ್ಯಾಚರಣೆ ನಿಧಾನ ಆಗಿದೆ. ಮತ್ತೆ ಮರು ಸರ್ವೆ ಆಗಿದ್ದು, ಮಾರ್ಕಿಂಗ್ ಮಾಡಲಾಗಿದೆಯಂತೆ.

    ಬೆಂಗಳೂರಿನ 8 ವಲಯದಲ್ಲೂ ಸೋಮವಾರದಿಂದ ಕಾರ್ಯಾಚರಣೆ ನಡೆಯಲಿದೆ. ಮಹಾದೇವಪುರದ ನಾಲ್ಕು ಕಡೆ ಮಾರ್ಕಿಂಗ್ ಮಾಡಿದ್ದು, ತೆರವು ಕಾರ್ಯಾಚರಣೆ ಮಾಡುತ್ತಾರಂತೆ. ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ತೆರವು ಕಾರ್ಯಾಚರಣೆ ಮಾಡುತ್ತೇನೆ ಅಂತಾ ಹೇಳುತ್ತಿದ್ದಾರೆ. ಈ ಬಾರಿ ತೆರವು ಕಾರ್ಯಾಚರಣೆಯಲ್ಲಿ ಬರೀ ಬಡವರ ಮನೆಗಳ ಟಾರ್ಗೆಟ್‌ ಆಗಿರುತ್ತಾ ಅಥವಾ ಶ್ರೀಮಂತರ ಮನೆ ಅಪಾರ್ಟ್‌ಮೆಂಟ್‌ಗಳನ್ನು ತೆರವು ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕೊತ್ವಾಲ್ ರಾಮಚಂದ್ರನ ಶಿಷ್ಯಂದಿರು ಇದ್ದಾರೆಂದು ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಿದ್ದೇವೆ: ಸಿ.ಟಿ ರವಿ ಲೇವಡಿ

    Live Tv
    [brid partner=56869869 player=32851 video=960834 autoplay=true]

  • ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

    ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

    ಬೆಂಗಳೂರು: ರಾಜಕಾಲುವೆ ಒತ್ತುವರಿ (Rajkaluve Occupy) ತೆರವಿಗೆ ಬಿಬಿಎಂಪಿ ಕೈಗೊಂಡಿರುವ `ಆಪರೇಷನ್ ಬುಲ್ಡೋಜರ್’ (Operation Bulldozer)ಆರಂಭದಲ್ಲೇ ವಿಘ್ನ ಉಂಟಾಗಿದೆ. ಚಲ್ಲಘಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಕರಣದಲ್ಲಿ ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅಕಾಡೆಮಿ ತೆರವುಗಳಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.

    ನಲಪಾಡ್ ಅಕಾಡೆಮಿ (Nalapad Academy) ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ವಾರದ ಮಟ್ಟಿಗೆ ಪಡೆದಿದ್ದ ಹೈಕೋರ್ಟ್ ತಡೆಯಾಜ್ಞೆ ಸೆಪ್ಟೆಂಬರ್ 23ರ ವರೆಗೂ ವಿಸ್ತರಣೆಯಾಗಿದೆ. ಹೈಕೋರ್ಟ್ (Karnataka HighCourt) ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರ ವರೆಗೂ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಹಿನ್ನೆಲೆ ಏನು?
    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಂಗಳವಾರ ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ (MLA Haris) ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದನ್ನೂ ಓದಿ: 

    ಕಾರ್ಯಾಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಪ್ರಸಾರ ಮಾಡಿತ್ತು. ಇದಾದ ಬಳಿಕ ಕಾರ್ಯಾಚರಣೆ ಆರಂಭಗೊಂಡಿತ್ತು. ಈ ಕಾರ್ಯಾಚರಣೆಗೆ ಶಾಂತಿನಗದ ಕಾಂಗ್ರೆಸ್ (Congress) ಶಾಸಕ ಹ್ಯಾರಿಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ನಲಪಾಡ್ ಅಕಾಡೆಮಿ ರಾಜಕಾಲುವೆ ಆಪರೇಷನ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಕಾರ್ಯಾಚರಣೆ ನಡೆಸದಂತೆ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದ ಒತ್ತುವರಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸೆಪ್ಟೆಂಬರ್ 23ರ ವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಸ್ತರಿಸಿದ್ದು, ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    ಬೆಂಗಳೂರು: ರಸ್ತೆಯಲ್ಲಿ ನೀರು ನಿಂತಾಗ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ (Protest) ನಡೆಸಿದ್ದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (mohammed haris nalapad) ನಾಟಕ ಒಂದೇ ವಾರದಲ್ಲಿ ಬಯಲಾಗಿದೆ.

    ರಾಜಕಾಲುವೆ (Rajkaluve) ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಪರಿಣಾಮ ಮಹಾದೇವಪುರ ವಿಧಾನ ಸಭಾ ಕ್ಷೇತ್ರದ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಏರಿ ನಲಪಾಡ್ ಪ್ರತಿಭಟನೆ ನಡೆಸಿದ್ದರು. ಬಳಿಕ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕುಳಿತು ಸಂಚರಿಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ ಈಗ ನಲಪಾಡ್ ನಿರ್ದೇಶಕರಾಗಿರುವ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 40percentsarkara ವೆಬ್‌ಸೈಟ್‌ ಓಪನ್‌ – ಬಿಜೆಪಿ ಅಂದ್ರೆ ಭ್ರಷ್ಟಾಚಾರ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ (Nalapad Academy) ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

    ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೇ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಮಾಡಿತ್ತು. ದೊಡ್ಡವರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯ ಸರಿಯೇ ಎಂದು ಕೇಳಿತ್ತು. ನಿರಂತರ ವರದಿಯ ಬಳಿಕ ಬಿಬಿಎಂಪಿ ಜೆಸಿಬಿಗಳು ನಲಪಾಡ್ ಅಕಾಡೆಮಿ ಕಾಂಪೌಂಡ್‌ನ್ನು ಧರೆಗೆ ಉರುಳಿಸಿದೆ. ಇದನ್ನೂ ಓದಿ: ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ವಾರದ ಹಿಂದೆ ಮಳೆ ಬಂದಾಗ ಪ್ರತಿಭಟನೆ ನಡೆಸಿದ್ದ ನಲಪಾಡ್, ʻತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ, ಜೀವವಿದ್ದರೆ ಜೀವನ – ಬಿಜೆಪಿಯಿದ್ದರೆ ದಹನ, ರಾಜಕಾಲುವೆ ನಿರ್ಮಿಸಿ, ಮಳೆಯಿಂದ ಜನರನ್ನು ರಕ್ಷಿಸಿ ಎಂಬಿತ್ಯಾದಿ’ ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆಸಿದ್ದರು. ನಲಪಾಡ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ (BBMP) ಕೈಗೊಂಡಿರುವ ʼಆಪರೇಷನ್‌ ಬುಲ್ಡೋಜರ್‌ʼ (Operation Bulldozer) ಕಾರ್ಯಾಚರಣೆಯಲ್ಲಿ ದೊಡ್ಡವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ಎನ್ನುವಂತಾಗಿದೆ. ನಲಪಾಡ್‌ ಅಕಾಡೆಮಿ (Nalapad Academy) ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮವೇ ನಡೆದಿತ್ತು. ಈ ವಿಚಾರ ʼಪಬ್ಲಿಕ್‌ ಟಿವಿʼ ಭಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

    ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ ಕಾಂಪೌಂಡ್‌ನ್ನು ಧರೆಗೆ ಉರುಳಿಸಲಾಗಿದೆ. ಈ ವೇಳೆ ಹ್ಯಾರಿಸ್ ಪಿಎ ಸ್ಥಳದಲ್ಲಿ ಒತ್ತುವರಿ ಸ್ಥಗಿತಗೊಳಿಸಲು ಹೈಡ್ರಾಮ ನಡೆಸಿದರು. ನೋಟಿಸ್ ಕೊಟ್ಟಿಲ್ಲ, ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್‌ ಹಾಕಿದರು. ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ ಅಧಿಕಾರಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಬೆಂಗಳೂರಿನಲ್ಲಿ ಮಳೆ ಅವಾಂತರ, ಒತ್ತುವರಿ ವಿರುದ್ಧ ಮೊನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಇಂದು ತಮ್ಮ ಅಕಾಡೆಮಿ ಮೇಲಿನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ʻರಾಜಕಾಲುವೆ ಒತ್ತುವರಿ ಆಗಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿʼ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

    ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್‌ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್‌ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?

    Live Tv
    [brid partner=56869869 player=32851 video=960834 autoplay=true]

  • ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಬೆಂಗಳೂರು: ಒತ್ತುವರಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಮಳೆಗಾಲದಲ್ಲಿ (Bengaluru Rain) ನಾನಾ ಅವಾಂತರಗಳನ್ನು ಎದುರಿಸಿತು. ಈ ಬಗ್ಗೆ ವಿಪಕ್ಷಗಳು ಹಾಗೂ ಜನರ ಟೀಕಾಪ್ರಹಾರದಿಂದ ಎಚ್ಚೆತ್ತ ಸರ್ಕಾರ, ಕೊನೆಗೂ ʼಆಪರೇಷನ್‌ ಬುಲ್ಡೋಜರ್‌ʼ (Operation Bulldozer) ಪ್ರಾರಂಭಿಸಿದೆ. ಆದರೆ ಪ್ರಭಾವಿಗಳ ಒತ್ತುವರಿ ಬಿಲ್ಡಿಂಗ್‌ ತೆರವಿಗೆ ಮಾತ್ರ ಮೀನಾಮೇಷ ಎಣಿಸುತ್ತಿದೆ.

    ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ ಬಿಬಿಎಂಪಿ (BBMP) ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್‌ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ (Nalapad Academy) ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್‌ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?

    ನಾವು ಏಳು ಗಂಟೆಯಿಂದ ಸ್ಥಳದಲ್ಲಿ ಕಾಯ್ತಾ ಇದ್ದೀವಿ. ದೊಡ್ಡವರ ಅಖಾಡಕ್ಕೆ ಜೆಸಿಬಿ ಹೋಗೋದೆ ಇಲ್ಲ. ಆದರೆ ಬಡವರ ಮನೆಗೆ ಮಾತ್ರ ಬೇಗ ಹೋಗುತ್ತೆ. ಹ್ಯಾರಿಸ್ ಮಾಲೀಕತ್ವ ಅಂತಾ ಟಚ್ ಮಾಡೋಕೆ ಹಿಂದೇಟು ಹಾಕ್ತಾ ಇದ್ದಾರೆ ಎಂದು ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಚಲ್ಲಘಟ್ಟದ ನಲಪಾಡ್ ಅಕಾಡೆಮಿಯ ಒತ್ತುವರಿ ಜಾಗ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಂತೆ ಎಚ್ಚೆತ್ತು, ಕೊನೆಗೂ ನಲಪಾಡ್ ಅಕಾಡೆಮಿ ಸ್ಥಳಕ್ಕೆ ಅಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿ ಧಾವಿಸಿದೆ. ಇದನ್ನೂ ಓದಿ: ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರಿಗೆ ಸಂಕಷ್ಟ

    Live Tv
    [brid partner=56869869 player=32851 video=960834 autoplay=true]