ಗಾಂಧಿನಗರ: ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿರುವ ಐಪಿಎಲ್ ಸಮಾರೋಪ ಕಾರ್ಯಕ್ರಮಕ್ಕೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಈ ವರ್ಷದ ಐಪಿಎಲ್ ಕೊನೆಯ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಹಾಗೂ ಖ್ಯಾತ ಗಾಯಕ ಎಆರ್ ರೆಹಮಾನ್ ಮಿಂಚಲಿದ್ದಾರೆ.
ಹೌದು, ಐಪಿಎಲ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಖ್ಯಾತ ಬಾಲಿವುಡ್ ನಟ ಹಾಗೂ ಗಾಯಕ ರಂಜಿಸುತ್ತಿರುವುದು ಖುಷಿಯ ವಿಚಾರ. ಇದರೊಂದಿಗೆ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ‘ಚೌ’ ನೃತ್ಯವನ್ನೂ ಪ್ರದರ್ಶಿಸಲಾಗುತ್ತಿದ್ದು, ಇದಕ್ಕಾಗಿ 11 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.

ವೇಳಾಪಟ್ಟಿಯಲ್ಲಿ ಏನಿದೆ?
ಐಪಿಎಲ್ ಸಮಾರೋಪ ಕಾರ್ಯಕ್ರಮ ಭಾನುವಾರ ಸಂಜೆ 6:30ರ ವೇಳೆ ಪ್ರಾರಂಭವಾಗಲಿದ್ದು, 50 ನಿಮಿಷಗಳ ಕಾಲ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. 7:30ರ ವೇಳೆ ಟಾಸ್ ನಡೆಯಲಿದ್ದು, 30 ನಿಮಿಷಗಳ ಬಳಿಕ ಪಂದ್ಯ ಆರಂಭವಾಗಲಿದೆ. ಇದನ್ನೂ ಓದಿ: ಕೊಹ್ಲಿಯ ರನ್ ಮೆಷಿನ್ ಬಿರುದು ಕಿತ್ತುಕೊಂಡ ಸಿರಾಜ್

ಐಪಿಎಲ್ ಪ್ರಾರಂಭವಾದ ಮೊದಲ ದಶಕದಲ್ಲಿ ಆರಂಭ ಹಾಗೂ ಸಮಾರೋಪ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತಿತ್ತು. ಆದರೆ ಸುಪ್ರಿಂ ಕೋರ್ಟ್ ನೇಮಕದ ಆಡಳಿತಾಧಿಕಾರಿಗಳ ಸಮಿತಿಯ ಅಡಿಯಲ್ಲಿ ಅದನ್ನು 3 ವರ್ಷಗಳ ವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ 2 ವರ್ಷಗಳಿಂದ ಐಪಿಎಲ್ ಆರಂಭ ಹಾಗೂ ಸಮಾರೋಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದನ್ನೂ ಓದಿ: ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

ಈ ಬಾರಿ ಮಾರ್ಚ್ 26ರಂದು ಐಪಿಎಲ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಾರಂಭವಾದಾಗ ಉದ್ಘಾಟನಾ ಸಮಾರಂಭ ನಡೆದಿರಲಿಲ್ಲ. ಬಳಿಕ ಸಭೆ ನಡೆಸಿದ ಐಪಿಎಲ್ ಆಡಳಿತ ಮಂಡಳಿ ಸಮಾರೋಪ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದೆ. ಈ ಬಾರಿ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲು ಬಿಸಿಸಿಐ ಟೆಂಡರ್ ಪ್ರಕ್ರಿಯೆ ಮೂಲಕ ಪ್ರತಿಷ್ಠಿತ ಸಂಸ್ಥೆಗಳಿAದ ಬಿಡ್‌ಗಳನ್ನು ಆಹ್ವಾನಿಸಿತ್ತು.

































