ದಕ್ಷಿಣದ ಕೆಲವೇ ಕೆಲವು ನಟರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿದೆ. ಮೊನ್ನೆಯಷ್ಟೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಹ್ವಾನ ಬಂದಿತ್ತು. ಇದೀಗ ಮತ್ತೋರ್ವ ನಟ ಯಶ್ (Yash) ಅವರಿಗೂ ಕೂಡ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಿಷಬ್ ಮತ್ತು ಯಶ್ ಉದ್ಘಾಟನೆ ಸಮಾರಂಭಕ್ಕೆ ಹೋಗಲಿದ್ದಾರೆ. ಜೊತೆಗೆ ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂಥದ್ದೊಂದು ಆಹ್ವಾನ ಸಿಕ್ಕಿದೆ.
ಕರ್ನಾಟಕದಿಂದ ಸೇವೆ
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಲೋಕಾರ್ಪಣೆಯಾಗುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜನೆಗೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ (Bengaluru) ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದಾರೆ.
2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ. ಈ ಘಂಟಾದಾನ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.
ಘಂಟಾದಾನ ಮತ್ತು ಪೂಜಾ ಸಾಮಾಗ್ರಿಯನ್ನು ಇಂದು ಅಯೋಧ್ಯೆಗೆ ಕೊಂಡೊಯ್ಯಲಿದ್ದಾರೆ. ತಮಿಳುನಾಡಿನ ನಾಮಕ್ಕಲ್‌ನಲ್ಲಿ ಈ ಘಂಟೆಗಳನ್ನು ತಯಾರು ಮಾಡಲಾಗಿದ್ದು, 2.5 ಟನ್ ತೂಕದ ಘಂಟೆಗಳನ್ನು ದೇವಸ್ಥಾನದ ಒಳಗಡೆ ಬಳಸಲಾಗುತ್ತದೆ. ಈ ಘಂಟೆಗಳನ್ನು ಬನಶಂಕರಿಯ ರಾಜೇಂದ್ರ ನಾಯ್ಡು ಎಂಬುವವರು ಅಯೋಧ್ಯೆಯ ರಾಮಮಂದಿರಕ್ಕೆ ಸಮರ್ಪಣೆ ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 2 ದಿನ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೋದಿಗೆ ಶುಭ ಹಾರೈಸಿದ್ದಾರೆ ಹಾಗೂ ಇದು ಸರ್ಕಾರದ ಹೆಮ್ಮೆಯ ಯೋಜನೆ ಎಂದಿದ್ದಾರೆ.
ಡಾ. ಬಿಆರ್ ಅಂಬೇಡ್ಕರ್ ಅವರ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ ಕಟ್ಟಡದ ಯೋಜನೆಗೆ ತಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಹಾಗೂ ಜಾಗದ ಬಗ್ಗೆ ಪ್ರಸ್ತಾಪಿಸಿ, ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 5 ವರ್ಷಗಳ ಹಿಂದೆ(4-10-2017)ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪು ಎಂದು ಮೆಲುಕು ಹಾಕಿದ್ದಾರೆ.
ವಿಶ್ವ ಕಂಡ ಅಪ್ರತಿಮ ಆರ್ಥಿಕ ತಜ್ಞ ಡಾ.ಬಿಆರ್ ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಎಂದಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್‍ವೈ
Former Prime Minister Dr Manmohan Singh inaugurated our flagship project Babasaheb Dr B R Ambedkar School of Economics in 2017. It gives us immense pleasure to recollect the satisfying memory of dedicating a world class University to the people of Karnataka.#DrBRAmbedkarpic.twitter.com/nqDQtJP4o6
ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಸ್ಥಾಪನೆಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ 350 ಕೋಟಿ ರೂ. ಮಂಜೂರು ಮಾಡಿದ್ದ ನಮ್ಮ ಸರ್ಕಾರ ಬದ್ಧತೆಯಿಂದ ಈ ಯೋಜನೆಯನ್ನು ಸಾಕಾರಗೊಳಿಸಿತ್ತು ಎಂದು ತಿಳಿಸಿದರು.
Former President Late Shri #PranabMukherjee had laid the foundation stone for BASE & our govt completed the construction of the building in just 6 months. Bsc (H) Economics classes were started in June 2017. pic.twitter.com/nUA8zJacfF
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನ ನೂತನ ಆವರಣವನ್ನು ಉದ್ಘಾಟಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಶುಭ ಹಾರೈಸುವೆ ಎಂದು ಬರೆದಿದ್ದಾರೆ.
ಬೆಂಗಳೂರು: ಪಬ್ಲಿಕ್ ಟಿವಿಯ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಯಶಸ್ವಿ ಚಾಲನೆ ಸಿಕ್ಕಿದೆ.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇಂದು ಮತ್ತು ನಾಳೆ ಆಹಾರ ಮೇಳ ನಡೆಯಲಿದ್ದು, ಅತಿಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೆ. ಮಾಧವನ್, ಟೈಟಲ್ ಸ್ಪಾನ್ಸರ್ ನಿತ್ಯಾಮೃತ ನೋನಿಯ ಕಮಲಾಕರ್ ಭಟ್, ಎಂ.ಕೆ ಆಗ್ರೋಟೆಕ್ ಸನ್ ಫ್ಯೂರ್ ಸನ್ ಪ್ಲವರ್ ಆಯಿಲ್ ರಿಜಿನಲ್ ಮ್ಯಾನೇಜರ್ ಸುಹೇಲ್ ಎಂ.ಎನ್, ಕೆಎಂಎಫ್ ಎಂಡಿ ಬಿ.ಸಿ ಸತೀಶ್, ಥ್ಯಾಂಕೋಸ್ ನ್ಯಾಚುರಲ್ ಐಸ್ ಕ್ರೀಮ್ ಎಂಡಿ ರಾಘವೇಂದ್ರ ಥಾಣೆ, ಥಾಟ್ ಬಾಕ್ಸ್ ಡೈರೆಕ್ಟರ್ ಕರಣ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.
ಆಹಾರ ಮೇಳದಲ್ಲಿ 30 ಬಗೆಯ ಆಹಾರ ಮಳಿಗೆಗಳು ಇದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ಪ್ರಸಿದ್ಧ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿದೆ. ಒಂದೇ ಸೂರಿನಡಿ ನೂರಾರು ಆಹಾರ ಖಾದ್ಯಗಳು ದೊರೆಯಲಿದೆ. ಆಹಾರ ಮೇಳಕ್ಕೆ ಬರಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಹಾರ ಮೇಳಕ್ಕೆ ಬಂದು ಹೆಸರು ನೋಂದಾಯಿಸಿದ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಲಕ್ಕಿ ಕೂಪನ್ ಬಹುಮಾನ ನೀಡಲಾಗುತ್ತದೆ. ಜೊತೆಗೆ ಇಂದು ಮಹಿಳೆಯರಿಗೆ ಪಾನಿಪೂರಿ ತಿನ್ನುವ ಸ್ಫರ್ಧೆ ಆಯೋಜಿಸಲಾಗಿದೆ. ಭಾನುವಾರ ಪುರುಷರಿಗೆ ಇಡ್ಲಿ ತಿನ್ನುವ ಸ್ಫರ್ಧೆ ಇರಲಿದ್ದು, ಆಹಾರ ಮೇಳಕ್ಕೆ ಭೇಟಿ ಕೊಟ್ಟು ಇಷ್ಟವಾದ ಖಾದ್ಯವನ್ನ ಸೇವನೆ ಮಾಡಿ, ಸ್ಪರ್ಧೆಗಳಲ್ಲೂ ಗ್ರಾಹಕರು ಭಾಗವಹಿಸಬಹುದು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ ಅವರು ಮಾತನಾಡಿ, ಎಲ್ಲ ರೋಗಗಳು ಆಹಾರದಿಂದಲೇ ಆರಂಭವಾಗುತ್ತದೆ. ಆದರೆ ಸರಿಯಾಗಿ ತಿನ್ನಿ, ಎಂಜಾಯ್ ಮಾಡಿ. ರಂಗೋಲಿ ಸ್ಫರ್ಧೆಗೆ ಬಂದವರಿಗೆ ಧನ್ಯವಾದ, ಚೆನ್ನಾಗಿ ರಂಗೋಲಿ ಬಿಡಿಸಿದ್ದೀರಿ. ಹಾಗೆಯೇ ಭಾಗವಹಿಸಿದ ಎಲ್ಲ ಸ್ಟಾಲ್ ನವರಿಗೆ ಧನ್ಯವಾದ ಎಂದರು.
ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಂಎಫ್ ಎಂಡಿ ಬಿ.ಸಿ ಸತೀಶ್ ಅವರು ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಿದಕ್ಕೆ ಧನ್ಯವಾದ. ಇಪ್ಪತ್ತೈದು ಲಕ್ಷ ರೈತ ಸಮೂದಾಯ ಹಾಗೂ ಐದು ಕೋಟಿಗೂ ಅಧಿಕ ಗ್ರಾಹಕರನ್ನು ಕೆಎಂಎಫ್ ಹೊಂದಿದೆ. ನಾವು ಗ್ರಾಹಕರಿಗೆ ಉತ್ಕೃಷ್ಟ ಉತ್ಪನ್ನ ನೀಡುತ್ತಿದ್ದೇವೆ. ನಮ್ಮನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ರಂಗೋಲಿ ಸ್ಫರ್ಧೆ ಏರ್ಪಡಿಸಿರುವುದು ಉತ್ತಮವಾದದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಈ ರಂಗೋಲಿಯಲ್ಲಿ ಬಿಡಿಸಿದಂತಹ ಎಲ್ಲಾ ಹೆಣ್ಣು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.
ಕಮಲಾಕರ್ ಭಟ್ ಅವರು ಮಾತನಾಡಿ, ಆಹಾರ ಮೇಳ ಬೆಂಗಳೂರು ನಗರಕ್ಕೆ ಹಬ್ಬ. ಆಹಾರಕ್ಕೆ ಮಾತ್ರ ಇಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ. ರಂಗೋಲಿ ಸ್ವರ್ಧೆಯ ಮೂಲಕ ಸಂಸ್ಕಾರ, ಪರಂಪರೆ ನೆನಪಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಗೆಯೇ ಎಂ.ಕೆ ಆಗ್ರೋಟೆಕ್‍ನ ರಿಜಿನಲ್ ಮ್ಯಾನೇಜರ್ ಸೊಹೈಲ್ ಅವರು ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಲಿ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.
ಪ್ರಜ್ವಲ್ ದೇವರಾಜ್ ಅವರು ಪ್ರತಿಕ್ರಿಯಿಸಿ, ಈ ಫುಡ್ ನೋಡಿದರೆ ನಂಗೆ ಡಯೆಟ್ ಮರಿಬೇಕು ಅನಿಸುತ್ತಿದೆ. ದಾರಿಯುದ್ದಕ್ಕೂ ರಂಗೋಲಿ ತುಂಬಾ ಚೆನ್ನಾಗಿತ್ತು. ಶನಿವಾರ, ಭಾನುವಾರ ಡಯೆಟ್ ಮರೆತು ಇಲ್ಲಿ ಬಂದು ಫುಡ್ ತಿಂದು ಎಂಜಾಯ್ ಮಾಡಿ ಎಂದು ಹೇಳಿದರು. ಇತ್ತ ನಟಿ ನಿಶ್ವಿಕಾ ನಾಯ್ಡು ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ಡಯೆಟ್ ಎಲ್ಲಾ ಮರೆತು ಫುಡ್ ಫೆಸ್ಟ್ ನಲ್ಲಿ ಭಾಗಿಯಾಗಿ ಎಂದರು. ಹಾಗೆಯೇ ನಿರ್ದೇಶಕ ಗುರು ದೇಶಪಾಂಡೆ ಅವರು ಮಾತನಾಡಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಹೆಚ್ಚು ಉಪಯೋಗ ಮಾಡಿಕೊಳ್ಳೋಣ. ಇಲ್ಲದೇ ಇರೋರಿಗೆ ಆಹಾರ ಕೊಡೋಣ. ಇದು ಎರಡನೇ ವರ್ಷ ನಾನು ಆಹಾರ ಮೇಳಕ್ಕೆ ಬರುತ್ತಿರೋದು. ಇಲ್ಲಿ ಆಹಾರ ರುಚಿ ಚೆನ್ನಾಗಿ ಇರುತ್ತೆ. ಎಲ್ಲರೂ ಬಂದು ಆಹಾರ ಸವಿಯಿರಿ ಎಂದು ಹೇಳಿದರು.
ಆಹಾರ ಮೇಳಕ್ಕೆ ಚಾಲನೆಗೂ ಮುನ್ನ ರಂಗೋಲಿ ಸ್ಫರ್ಧೆ ನಡೆದಿದ್ದು, 120 ನಿಮಿಷದ ಒಳಗೆ ರಂಗೋಲಿಯನ್ನ ಬಿಡಿಸಿದ್ದಾರೆ. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯ ತೃತೀಯ ಬಹುಮಾನ ವಿಜೇತೆ ಭಾಗ್ಯ, ದ್ವೀತಿಯ ಬಹುಮಾನ ವಿಜೇತೆ ಪ್ರತಿಮಾ ಉಡುಪ, ಪ್ರಥಮ ಬಹುಮಾನ ವಿಜೇತೆ ನಿರ್ಮಲ ಅವರಿಗೆ ಪೆಪ್ಸ್ ಮ್ಯಾಟ್ರಿಸ್ ವತಿಯಿಂದ ಹಾಸಿಗೆ ನೀಡಲಾಯ್ತು. ಇದೇ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ಪೆಪ್ಸ್ ಮ್ಯಾಟ್ರಿಸ್ ದಿಂಬುಗಳನ್ನು ಸಮಾಧಾನಕರ ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.
ಬೆಂಗಳೂರು: ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ನವರ ಹೆಸರನ್ನು ಗಣೇಶ ಮಂದಿರ ವಾರ್ಡ್ -165ರ ರಸ್ತೆಗೆ ಇಡಲಾಗಿದೆ. ರಸ್ತೆಯ ನಾಮಫಲಕ ಉದ್ಘಾಟನೆಯನ್ನು ಕಂದಾಯ ಸಚಿವ ಆರ್. ಅಶೋಕ್, ಗಣೇಶ ಮಂದಿರ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯೆ ಶ್ರೀಮತಿ ಲಕ್ಷ್ಮಿ ಉಮೇಶ್ ಮತ್ತು ಶ್ರೀಮತಿ ಶಾಂತಮ್ಮ ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ, ಬಿ.ಜೆ.ಪಿ ಮುಖಂಡರಾದ ಉಮೇಶ್ ಕಬ್ಬಾಳ್ ರವರು ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ರವರಿಗೆ ಕರ್ನಾಟಕದ ಜನರು ನಟ ರತ್ನಾಕರ ಎಂಬ ಬಿರುದು ನೀಡಿದ್ದರು. ಸಮಾಜದ ಅಂಕುಡೊಂಕುಗಳನ್ನು ತಮ್ಮ ನೇರ ಮಾತುಗಳಿಂದ ಟೀಕಿಸಿ ಸಮಾಜದ ಬದಲಾವಣೆ ತರುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದರು. ರಾಜಕೀಯ ಶುದ್ಧೀಕರಣ ಮಾಡಲು ಅವರ ನಾಟಕಗಳ ಮುಖಾಂತರ ರಾಜಕಾರಣಿಗಳಿಗೆ ಛಾಟಿ ಬೀಸುತ್ತಿದ್ದರು ಎಂದರು.
ಮಾಸ್ಟರ್ ಹಿರಣ್ಣಯ್ಯರ ಜೊತೆಗೆ ಪ್ರೋ.ಜಸ್ಟೋರವರರ ಹೆಸರನ್ನೂ ರಸ್ತೆಗೆ ಇಡಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅದ್ಭುತ ತಂತ್ರಜ್ಞರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿದ ಮತ್ತು ನಮ್ಮ ಕ್ಷೇತ್ರದ ಮಹನೀಯರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಅವರ ಹೆಸರು ಅಜರಾಮರವಾಗಿ ಉಳಿಸಿ, ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಯವಂತೆ ಮಾಡುವುದು ನಮ್ಮ ಉದ್ದೇಶ ಎಂದು ಅಶೋಕ್ ಹೇಳಿದರು.
ಶ್ರೀಮತಿ ಲಕ್ಷ್ಮಿ ಉಮೇಶ್ ಅವರು ಮಾತನಾಡಿ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಮಹನೀಯಗಳನ್ನು ಮರೆಯುತ್ತಿದ್ದಾರೆ. ಅವರ ಸಲ್ಲಿಸಿದ ಸೇವೆ ಮುಂದಿನ ಸಮಾಜಕ್ಕೆ ತಿಳಿಯಬೇಕು. ಅವರ ಸೇವೆ ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇದೇ ವೇಳೆ ಶ್ರೀಮತಿ ಶಾಂತಮ್ಮ ಹಿರಣ್ಣಯ್ಯರವರಿಗೆ, ಸಿಎ 35ನೇ ರ್ಯಾಂಕ್ ಪಡೆದ ಸೌಮ್ಯ ಮತ್ತು ಕೆಎಎಸ್ ಅಧಿಕಾರಿ ಸಂಜನಾ ಅವರನ್ನು ಸನ್ಮಾನಿಸಲಾಯಿತು.
ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಅನ್ನು ಟೇಪ್ ಕತ್ತರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯನವರು ಉದ್ಘಾಟಿಸಿದರು.
ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರ ಸಮಯದಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಅರಂಭವಾಗಿದ್ದು, ಇದೀಗ ಬಿಜೆಯ ಭದ್ರಕೋಟೆಯಾದ ಕೊಡಗು ಜಿಲ್ಲೆಯಲ್ಲಿಯೂ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿರಾಜಪೇಟೆ ಬಳಿಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಅರಂಭಗೊಂಡಿರುವ ನೂತನ ಕ್ಯಾಂಟೀನ್‍ಗೆ ಮಡಿಕೇರಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿದ ಅವರು, ಈ ಒಳ್ಳೆಯ ಯೋಜನೆ ಜನರಿಗೆ ಉಪಯೋಗವಾಗಲಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಆದರೆ ಈಗಾಗಲೇ ನಾನು ಕೆಲವು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದರ ಹೆಸರನ್ನು ಬದಲಾವಣೆ ಮಾಡಬೇಕು ಎನ್ನುವ ಪಿತೂರಿ ಕೂಡಾ ನಡೆಯುತ್ತಿದೆ ಅದು ಆಗಬಾರದು. ಏಕೆಂದರೆ ಅನೇಕ ಯೋಜನೆಗಳು ಬಂದು ಹೋಗುತ್ತೆ. ಆದರೆ ಆ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ವಿನಃ ಆ ಯೋಜನೆಗಳನ್ನೇ ಬದಲಾವಣೆ ಮಾಡಬಾರದು. ಅವರಿಗೂ ಬೇಕಾದಷ್ಟು ಯೋಜನೆಗಳನ್ನು ಮಾಡುವ ಅವಕಾಶವಿದೆ ಅದನ್ನು ಮಾಡಲಿ. ವಿರಾಜಪೇಟೆ ಸುತ್ತಮುತ್ತಲಿನ ಜನರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಪ್ರಯಾಣಿಕರಿಗೆ ಎಲ್ಲರಿಗೂ ಉಪಯೋಗವಾಗಲಿ. ಸರ್ವರಿಗೂ ಉಪಯೋಗವಾಗುವ ಹಾಗೇ ಇಲ್ಲಿನ ಶುಚಿತ್ವ ಕಾಪಾಡಿಕೊಂಡು ಹೋಗಲಿ ಎಂದರು.
ಚಾಮರಾಜನಗರ: ಪ್ರಾಥಮಿಕ, ಪ್ರೌಢ ಶಿಕ್ಷಣ, ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹೆಣ್ಣು ಮಕ್ಕಳ ವಸತಿ ನಿಲಯವನ್ನು ಉದ್ಘಾಟಿಸಿದರು.
ಸುರೇಶ್ ಕುಮಾರ್ ಅವರಿಗೆ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ನಾರಾಯಣರಾವ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ, ಎಸ್ಪಿ ಆನಂದ್ ಕುಮಾರ್ ಸಾಥ್ ನೀಡಿದರು.
ಉದ್ಘಾಟನೆಯ ಬಳಿಕ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಸತಿ ನಿಲಯಕ್ಕೆ ಅಗತ್ಯವಿರುವ ಪರಿಕರಗಳನ್ನು ಶೀಘ್ರವಾಗಿ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ನೂತನ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ನೀವು ಯಾವ ಯಾವ ಊರುಗಳಿಂದ ಆಗಮಿಸಿ ವಸತಿ ನಿಲಯದಲ್ಲಿ ದಾಖಲಾಗಿರುವಿರಿ ಎಂದು ಸಚಿವರು ವಿಚಾರಿಸಿದರು.
ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ, ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಮೂಲಕ ಹಂಪಿ ಉತ್ಸವಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು. ವಿಜಯನಗರ ಪರಂಪರೆಯನ್ನು ಮುಂದುವರಿಸುವ ತುಂಗಾರತಿ ಕಾರ್ಯಕ್ರಮವನ್ನು ನದಿತಟದಲ್ಲಿ ನೋಡಲು ಜನಸಾಗರವೇ ಹರಿದು ಬಂದಿತ್ತು.
ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಉಲ್ಲೇಖಸಿದಂತೆ ಹಂಪಿ ದಸರಾ ಉತ್ಸವದ ವೇಳೆ ಈ ರೀತಿ ತುಂಗಾರತಿ ಮಾಡುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದರಂತೆ ಆ ಪರಂಪರೆಯನ್ನು ಮುಂದುವರಿಸೋ ನಿಟ್ಟಿನಲ್ಲಿ ಇದೀಗ ಹಂಪಿ ಉತ್ಸವದ ವೇಳೆ ತುಂಗಾರತಿ ಮಾಡುವ ಪರಂಪರೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲದೆ ತುಂಗಾರತಿ ಮೂಲಕವೇ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆ.ಶಿವಕುಮಾರ್ ಹಿಂದಿನ ಪರಂಪರೆಯನ್ನು ನಮ್ಮ ಸರ್ಕಾರ ಮುಂದುವರಿಸುತ್ತಿದೆ. ಎಂ.ಪಿ. ಪ್ರಕಾಶ್ ಅವರ ಆಶಯದಂತೆ ಪ್ರತಿ ವರ್ಷ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ ಎಂದರು.
ದಿವಂಗತ ಎಂ.ಪಿ. ಪ್ರಕಾಶ್ ಅವರ ಕನಸಿನ ಕೂಸೆಂದು ಬಿಂಬಿಸಲಾಗುವ ಹಂಪಿ ಉತ್ಸವವನ್ನು ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಉಪಚುನಾವಣೆ ಮತ್ತು ಬರದ ನೆಪವೊಡ್ಡಿ ಉತ್ಸವ ರದ್ದು ಮಾಡಲು ಯೋಚನೆ ಮಾಡಲಾಗಿತ್ತು. ಆದರೆ ಕಲಾವಿದರ ಮತ್ತು ಹೋರಾಟಗಾರರ ಪ್ರತಿಭಟನೆಯಿಂದಾಗಿ ಇದೀಗ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಉತ್ಸವದ ಉದ್ಘಾಟನೆಗೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಬಂದು ಉತ್ಸವವನ್ನು ರಂಗೇರಿಸಿದರೆ, ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗನ್ನು ತರಲಿದ್ದಾರೆ.
ಹಲವು ಅಡ್ಡಿ ಆತಂಕಗಳ ನಿವಾರಣೆ ಬಳಿಕ ಇದೀಗ ಹಂಪಿ ಉತ್ಸವ ನಡೆಯಲು ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಹಂಪಿ ಬೈಸ್ಕೈ, ಪಾರಂಪರಿಕ ನಡಿಗೆ, ಕುಸ್ತಿ, ಕುದುರೆ ಓಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿವೆ.
ಬೆಂಗಳೂರು: ಕಿಚ್ಚ ಸುದೀಪ್ ನಿರೂಪಕರಾಗಿರುವ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್-6 ಕೆಲವೇ ದಿನಗಳಲ್ಲೇ ಶುರುವಾಗಲಿದೆ.
ಬಿಗ್ ಬಾಸ್ ಸೀಸನ್- 6 ಮುಂದಿನ ಅಕ್ಟೋಬರ್ 21ರಂದು ಆರಂಭವಾಗಲಿದೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಅಕ್ಟೋಬರ್ 21ರಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ದಿನಾಂಕದ ಪ್ರೋಮೋವನ್ನು ಖಾಸಗಿ ವಾಹಿನಿ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.
ಈ ಪ್ರೋಮೋದಲ್ಲಿ ಸುದೀಪ್ ಈ ಹಿಂದೆ ಬಿಗ್ ಬಾಸ್‍ನಲ್ಲಿದ್ದ ಹಳೆಯ ಸ್ಪರ್ಧಿಗಳನ್ನು ಅನುಕರಣೆ ಮಾಡಿದ್ದಾರೆ. ನಿಜ ಹೇಳ್ತೀನಿ ಬಿಗ್ ಬಾಸ್ ಇಲ್ಲಿ ನಾನು ನಾನಾಗಿ ಇದ್ದೀನಿ. ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಬಿಗ್‍ಬಾಸ್, ಎಷ್ಟು ನಾಟಕ ಬಿಗ್ ಬಾಸ್ ಎಂದು ಹಳೆಯ ಸ್ಪರ್ಧಿಗಳ ಅನುಕರಣೆ ಮಾಡಿದ್ದಾರೆ.
ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲನೆಯದಾಗಿ ಆರ್.ಜೆ ರ್‍ಯಾಪಿಡ್ ರಶ್ಮಿ, ರ್‍ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ಬಿಗ್‍ಬಾಸ್ ಮನೆ ಅಂದಮೇಲೆ ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೆಬೇಕು. ಹೀಗಾಗಿ ಈ ಬಾರಿ ಕುರಿ ಪ್ರತಾಪ್ ಅವರನ್ನು ಬಿಗ್‍ಬಾಸ್ ಮನೆಗೆ ಕಳುಹಿಸುವ ಯೋಚನೆಯನ್ನು ಬಿಗ್‍ಬಾಸ್ ಮಾಡಿದ್ದಾರಂತೆ. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ – 2 ನೇಹಾಶೆಟ್ಟಿ, ಸಿಲ್ಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.