Tag: OpenAI

  • ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ

    ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ

    ನವದೆಹಲಿ: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ಓಪನ್‌ಎಐ OpenAI ಭಾರತದಲ್ಲಿ (India) ಐದು ಲಕ್ಷ ಉಚಿತ ಚಾಟ್‌ಜಿಪಿಟಿ (ChatGPT) ಪ್ಲಸ್ ಖಾತೆಗಳನ್ನು ವಿತರಿಸುವುದಾಗಿ ಘೋಷಿಸಿದೆ.

    ಓಪನ್‌ಎಐ ಇದುವರೆಗಿನ ತನ್ನ ಅತಿದೊಡ್ಡ ಶಿಕ್ಷಣ-ಕೇಂದ್ರಿತ ಉಪಕ್ರಮಗಳಲ್ಲಿ ಒಂದಾಗಿದ್ದು, ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ ಆರು ತಿಂಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಐದು ಲಕ್ಷ ಉಚಿತ ಚಾಟ್‌ಜಿಪಿಟಿ ಖಾತೆ ಸಿಗಲಿದೆ.

    ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಚಾಟ್‌ಜಿಪಿಟಿಯ ಪಾತ್ರವನ್ನು ವಿಸ್ತರಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ತಾಂತ್ರಿಕ ಸಂಸ್ಥೆಗಳ ಸಹಕಾರಿಂದ ಈ ಉಪಕ್ರಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಓಪನ್‌ಎಐ ಉಪಾಧ್ಯಕ್ಷೆ ಲಿಯಾ ಬೆಲ್ಸ್ಕಿ ಹೇಳಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ಚಾಟ್‌ಜಿಪಿಟಿ ವಿಶ್ವಾದ್ಯಂತ 70 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಅತಿ ಹೆಚ್ಚು ಬಳಕೆ ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ. ಚಾಟ್‌ಜಿಪಿಟಿ ಒಟ್ಟು ಬಳಕೆದಾರರ ಪೈಕಿ 13.5% ಭಾರತದವರಾಗಿದ್ದರೆ 8.9% ಮಂದಿ ಅಮೆರಿಕದವರಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಡೋನೇಷ್ಯಾ (5.7%) ಇದೆ.

    ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಓಪನ್‌ಎಐ ಈ ವರ್ಷವೇ ಭಾರತದಲ್ಲಿ ಕಚೇರಿ ತೆರೆಯುವುದಾಗಿ ಮುಖ್ಯಸ್ಥ ಸ್ಯಾಮ್‌ ಅಲ್ಟ್‌ಮನ್‌ ಹೇಳಿದ್ದಾರೆ.

  • ಏನಿದು ಘಿಬ್ಲಿ? ದಿಢೀರ್‌ ಫೇಮಸ್‌ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?

    ಏನಿದು ಘಿಬ್ಲಿ? ದಿಢೀರ್‌ ಫೇಮಸ್‌ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?

    ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ಕಾರ್ಟೂನ್‌ ಅಥವಾ ಆನಿಮೇಟೆಟ್‌ ಸಿನಿಮಾ ಪಾತ್ರಗಳಂತೆ ಇರುವ ಚಿತ್ರಗಳು ಟ್ರೆಂಡ್‌ ಸೃಷ್ಟಿಸಿದೆ. ನಟ, ನಟಿಯರು, ರಾಜಕಾರಣಿಗಳು ಈ ಟ್ರೆಂಡ್‌ಗೆ ಸೇರ್ಪಡೆಯಾಗಿದ್ದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಟೂನ್‌ಗಳಿಗೆ ಭಾರೀ ಜನಪ್ರಿಯತೆ ಬಂದಿದೆ.

    ಈ ಚಿತ್ರದ ಮೂಲ ಇರುವುದು ಜಪಾನ್‌ನಲ್ಲಿ. ಜಪಾನ್‌ನ (Japan) ಅತ್ಯಂತ ಜನಪ್ರಿಯ ಆನಿಮೇಷನ್‌ ಫಿಲ್ಮ್‌ ಸ್ಟುಡಿಯೋದ ಹೆಸರು ಘಿಬ್ಲಿ. 1985ರಲ್ಲಿ ಮಿಯಾಝಾಕಿ ಹಯಾವೋ, ಸುಜುಕಿ ಟೊಶಿವೊ ಹಾಗೂ ತಕಾಹತ ಇಸಾವೊ ಈ ಸ್ಟುಡಿಯೋವನ್ನು ಸ್ಥಾಪಿಸಿದ್ದರು. ಇದನ್ನೂ ಓದಿ: ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

    ಭಾವನಾತ್ಮಕವಾಗಿ ಆಕರ್ಷಕವಾಗಿರುವ ಕಥೆ ಹೇಳುವಿಕೆಯೊಂದಿಗೆ ಕೈಯಿಂದ ಚಿತ್ರಿಸಿದ ಅನಿಮೇಷನ್‌ಗೆ ಘಿಬ್ಲಿ (Studio Ghibli) ಹೆಸರುವಾಸಿಯಾಗಿದೆ. 90ರ ದಶಕದಲ್ಲಿ ಮೈ ನೇಬರ್‌ ಟೊಟೊರೊ, ಕಿಕಿಸ್‌ ಡೆಲಿವರಿ ಸರ್ವೀಸ್‌, ಸೇರಿದಂತೆ ಹಲವು ಆನಿಮೇಟೆಡ್‌ ಸಿನಿಮಾ/ ಸೀರಿಯಲ್‌ಗಳು ಪ್ರಸಿದ್ಧಿ ಪಡೆದಿದ್ದವು.

    ಈಗ ಫೇಮಸ್‌ ಹೇಗಾಯ್ತು?
    ಓಪನ್‌ ಎಐನ (OpenAI) ಸಿಇಒ ಸ್ಯಾಮ್‌ ಆಲ್ಟ್‌ಮನ್‌ (Sam Altman) ಘಿಬ್ಲಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಚಾಟ್‌ಜಿಪಿಟಿ 4ನೇ ಆವೃತ್ತಿಯಲ್ಲಿ ಘಿಬ್ಲಿ ಚಿತ್ರಗಳನ್ನು ಸೃಷ್ಟಿಸುವ ಆಯ್ಕೆ ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಮ್ಮ ಪ್ರೊಫೈಲಿಗೆ  ಘಿಬ್ಲಿ ಚಿತ್ರವನ್ನೇ ಅಪ್ಲೋಡ್‌ ಮಾಡಿದರು. ಹೇಳಿ ಕೇಳಿ ಈಗ ದೊಡ್ಡವರು ಖ್ಯಾತನಾಮರು ಏನೇ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ. ಆಲ್ಟ್‌ಮನ್‌ ಹೇಳಿದ್ದೇ ತಡ ನೆಟ್ಟಿಗರು ಈಗ ಘಿಬ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮದೇ ಕಾರ್ಟೂನ್‌ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಆಪಲ್‌ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್‌ ಭಾಗಗಳು ರಫ್ತು!

     

    ಸಂಪತ್ತು ಎಷ್ಟಿದೆ?
    ಮಿಯಾಝಾಕಿ ಹಯಾವೋ ಅವರು ಈ ಹಿಂದೆ ಎಐ ರಚಿಸಿದ ಅನಿಮೇಷನ್‌ ಕಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಿಯಾಝಾಕಿಯವರ ಸಂಪತ್ತಿನ ಮೌಲ್ಯ 50 ಮಿಲಿಯನ್ ಡಾಲರ್‌  ಆಗಿದ್ದು, ಅನಿಮೇಶನ್‌ ಕ್ಷೇತ್ರದ ಶ್ರೀಮಂತ ಉದ್ಯಮಿಯಾಗಿದ್ದಾರೆ.

    ಡಿವಿಡಿ, ಸರಕುಗಳ ಮಾರಾಟ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಹಕ್ಕುಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಸ್ಟುಡಿಯೋ ಘಿಬ್ಲಿ ಆದಾಯ ಗಳಿಸುತ್ತದೆ. ಅನೇಕ ಸ್ಟುಡಿಯೋ ಘಿಬ್ಲಿ ಚಲನಚಿತ್ರಗಳು ನೆಟ್‌ಫ್ಲಿಕ್ಸ್‌ನಂತಹ ವೇದಿಕೆಗಳಲ್ಲಿ ಲಭ್ಯವಿದೆ.

     

    ಈಗ ಎಲ್ಲೆಲ್ಲಿ ರಚಿಸಬಹುದು?
    OpenAI ಮಾತ್ರವಲ್ಲದೇ ಘಿಬ್ಲಿ ಚಿತ್ರಗಳನ್ನು ಎಕ್ಸ್‌ನ ಗ್ರಾಕ್‌, ಗೂಗಲ್‌ ಜೆಮಿನಿ ಸೇರಿದಂತೆ ಇತರೇ ಪ್ಲಾಟ್‌ಫಾರ್ಮ್‌ಗಳಲ್ಲೂ ರಚಿಸಬಹುದು.

    ಸ್ನೇಹಿತರು, ಕುಟುಂಬದವರ ಫೋಟೋಗಳನ್ನು ಅಪ್ಲೋಡ್‌ ಮಾಡಿ ಎಐನಿಂದ (Artificial Intelligence) ಸೃಷ್ಟಿಸಿದ ಘಿಬ್ಲಿ ಚಿತ್ರಗಳನ್ನು ಪೋಸ್ಟ್ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಿಗೆ ಘಿಬ್ಲಿ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲು ಆರಂಭಿಸಿವೆ.

     

  • ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಬುಧವಾರ ಹೊಸ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ.

    ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್‌ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

    ಈ ಹಿಂದೆ ಮಸ್ಕ್ ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು ಎಂದು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಇದೀಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಸ್ಪಷ್ಟವಾಗಿ ಪ್ರೋಗ್ರಾಮಿಂಗ್ ಮಡುವ ಬದಲು ಅವರು ಎಕ್ಸ್ಎಐಯಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶವನ್ನು ರಚಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5-6 ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ.

    ಮಸ್ಕ್ ಈ ಹಿಂದೆ 2015ರಲ್ಲಿ ಓಪನ್ ಎಐನ ಸಹ ಸಂಸ್ಥಾಪಕರಾಗಿದ್ದರು. ಆದರೆ 2018ರಲ್ಲಿ ಅವರು ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಓಪನ್ ಎಐನಲ್ಲಿ ಮೈಕ್ರೊಸಾಫ್ಟ್ ಹೂಡಿಕೆ ಮಾಡುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಚಾಟ್‌ಜಿಪಿಟಿ (ChatGPT) ತಯಾರಕ ಓಪನ್‌ಎಐಗೆ (OpenAI) ಟಕ್ಕರ್ ನೀಡಲು ಕೃತಕ ಬುದ್ಧಿಮತ್ತೆಯ (Artificial Intelligence) ಹೊಸ ಸ್ವಂತ ಕಂಪನಿಯನ್ನು (Company)  ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ ಮಸ್ಕ್ ತನ್ನ ಹೊಸ ಎಐ (AI) ಕಂಪನಿಗಾಗಿ ಸಂಶೋಧಕರು ಹಾಗೂ ಎಂಜಿನಿಯರುಗಳ ತಂಡವನ್ನು ಒಟ್ಟುಗೂಡಿಸುತ್ತಿದ್ದಾರೆ. ಈ ಕಂಪನಿಗಾಗಿ ಅವರು ತಮ್ಮ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿಯಲ್ಲಿನ ಕೆಲ ಹೂಡಿಕೆದಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ವರದಿಗಳ ಪ್ರಕಾರ ಮಸ್ಕ್‌ನ ಹೊಸ ಕೃತಕ ಬುದ್ಧಿಮತ್ತೆ ಕಂಪನಿಯ ಹೆಸರು ಎಕ್ಸ್.ಎಐ (X.AI) ಆಗಿದೆ. ಕಳೆದ ತಿಂಗಳು ಮಸ್ಕ್ ಎಕ್ಸ್.ಎಐ ಕಾರ್ಪ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿಕೊಂಡಿದ್ದಾರೆ. ನೆವಾಡಾದಲ್ಲಿ ಈ ಕಂಪನಿ ಓಪನ್ ಆಗುವ ಸಾಧ್ಯತೆಯಿದೆ. ಮಸ್ಕ್ ತಮ್ಮ ಕುಟುಂಬದ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜೇರೆಡ್ ಬಿರ್ಚಾಲಾ ಅವರನ್ನು ಕಂಪನಿಗೆ ಕಾರ್ಯದರ್ಶಿಯಾಗಿ ಪಟ್ಟಿ ಮಾಡಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    2015ರಲ್ಲಿ ಪ್ರಾರಂಭವಾದ ಲಾಭರಹಿತ ಓಪನ್‌ಎಐ ಸಂಸ್ಥೆಗೆ ಮಸ್ಕ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು 2018ರಲ್ಲಿ ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಇದೀಗ ಓಪನ್‌ಎಐಗೆ ಪ್ರತಿಸ್ಪರ್ಧಿಯಾಗಿ ಮಸ್ಕ್ ತಮ್ಮದೇ ಹೊಸ ಕಂಪನಿಯನ್ನು ತೆರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು

  • ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ವಾಷಿಂಗ್ಟನ್: ಅಮೆರಿಕದ (USA) ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ (General Motors) ತನ್ನ ವಾಹನಗಳಲ್ಲಿ ಚಾಟ್‌ಜಿಪಿಟಿ (ChatGPT) ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

    ಮೈಕ್ರೋಸಾಫ್ಟ್ ಕಾರ್ಪ್ (Microsoft Corp) ಸಹಯೋಗದ ಭಾಗವಾಗಿ ಚಾಟ್‌ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ (Scott Miller) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ಸಾಮಾನ್ಯವಾಗಿ ಚಾಟ್‌ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್‌ನಂತಹ ಪ್ರೋಗ್ರಾಮ್‌ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್‌ಜಿಪಿಟಿ ಬಳಸಬಹುದು. ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ನಲ್ಲಿ (ಕೃತಕ ಬುದ್ದಿಮತ್ತೆ) ಬಹು-ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಚಾಟ್‌ಬಾಟ್‌ನ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದೆ. ಹಾಗಾಗಿ ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ವಾಹನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಮುಂದುವರಿಸಿದೆ.