Tag: Open

  • ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ.

    ಕೊರೊನಾ ಲಾಕ್‍ಡೌನ್ ನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ.

    ಪ್ರತಿಯೊಬ್ಬ ಗ್ರಾಹಕನಿಗೆ 2.3 ಲೀ. ಮದ್ಯ ಅಥವಾ 6 ಕ್ವಾಟರ್, 4 ಬಾಟಲ್ ಬೀರ್ ಅಥವಾ 6 ಪಿಂಟ್ ಬಾಟಲಿಗಳನ್ನು ಮಾತ್ರ ಮಾರಾಟ ಮಾಡಬೇಕು ಅದಕ್ಕಿಂತ ಹೆಚ್ಚಿನ ಮದ್ಯವನ್ನು ಒಬ್ಬನೇ ಗ್ರಾಹಕನಿಗೆ ಮಾರಾಟ ಮಾಡುವಂತಿಲ್ಲ. ಅಲ್ಲದೇ ಗ್ರಾಹಕನಿಗೆ ಕೇವಲ ಪಾರ್ಸಲ್ ಮಾತ್ರ ನೀಡಬೇಕು ಕೌಂಟರ್ ನಲ್ಲಿ ಕುಡಿಯುವುದಕ್ಕೆ ಅವಕಾಶ ನೀಡಬಾರದು. ಜೊತೆಗೆ ಮದ್ಯದ ಅಂಗಡಿಯಲ್ಲಿ ಕೇವಲ 5 ಮಂದಿ ಮಾತ್ರ ಇರಬೇಕು. ಇವರು ಮಾಸ್ಕ್, ಕೈಗವಸು, ಸ್ಯಾನಿಟೈಜರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ.

    ಇದರ ಜೊತೆಗೆ ಮದ್ಯದಂಗಡಿಗೆ ಬಂದು ಮದ್ಯಕೊಳ್ಳುವವರು ಗುಂಪಿನಲ್ಲಿ ಬರಬಾರದು. ಸುಮಾರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿ ಮುಂಭಾಗದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಿಸಿ ಕ್ಯಾಮರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಂಗಡಿ ಮಾಲೀಕರೆ ನೇಮಿಸಿಕೊಳ್ಳುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

    ಷರತ್ತುಗಳು ಏನು?
    1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
    2. ವೈನ್‍ಶಾಪ್, ಎಂಆರ್‍ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
    3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
    4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
    5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
    6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
    7. ಮದ್ಯಕೊಂಡು ಕೊಳ್ಳುವವರಿಗೆ ಮಾಸ್ಕ್ ಕಡ್ಡಾಯ
    8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
    9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
    10. 6 ಅಡಿ ಸಾಮಾಜಿಕ ಅಂತರ ಇರಬೇಕು

  • ಇಂದೂ ಬ್ಯಾಂಕುಗಳು ಫುಲ್ ಡೇ ಓಪನ್!

    ಇಂದೂ ಬ್ಯಾಂಕುಗಳು ಫುಲ್ ಡೇ ಓಪನ್!

    ಬೆಂಗಳೂರು: ಸಾಮಾನ್ಯವಾಗಿ ಭಾನುವಾರ ಬಂದರೆ ಬ್ಯಾಂಕ್‍ಗಳು ಕ್ಲೋಸ್ ಆಗಿರುತ್ತವೆ. ಆದರೆ ಇಂದು ದಿನ ಪೂರ್ತಿ ಬ್ಯಾಂಕ್‍ಗಳು ತೆರೆದಿರುತ್ತವೆ.

    2018-19ರ ಹಣಕಾಸು ವರ್ಷದ ಅವಧಿ ಇಂದಿಗೆ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಭಾನುವಾರವಾದರೂ ಬ್ಯಾಂಕ್‍ಗಳು ಎಂದಿನಂತೆ ಕಾರ್ಯಾ ನಿರ್ವಹಿಸಲಿವೆ. ಹೀಗಾಗಿ ಹಣಕಾಸು ವರ್ಷದ ಎಲ್ಲಾ ವ್ಯವಹಾರ (Transaction) ಗಳ ಮೇಲಿನ ಮತ್ತು ಎಲ್ಲಾ ಐಟಿ ರಿಟರ್ನ್ ಗಳನ್ನು ಇವತ್ತು ಕೂಡ ಫೈಲ್ ಮಾಡಬಹುದು.

    ಎಂದಿನಂತೆ ಇವತ್ತು ಕೂಡ ಆದಾಯ ತೆರಿಗೆ ಹಾಗೂ ಜಿಎಸ್‍ಟಿ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ತೆರಿಗೆದಾರರು ತಮ್ಮ ವಹಿವಾಟು ನಡೆಸಬಹುದಾಗಿದೆ. ಬ್ಯಾಂಕುಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

  • ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಇಂದಿನಿಂದ ಆರಂಭ

    ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಇಂದಿನಿಂದ ಆರಂಭ

    ಚಾಮರಾಜನಗರ: ಕಾಡಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬಂಡೀಪುರರ ಹುಲಿರಕ್ಷಿತಾರಣ್ಯದಲ್ಲಿ ಕಳೆದ ಎಂಟು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿ ಇಂದಿನಿಂದ ಪುನರಾರಂಭಗೊಂಡಿದೆ.

    ಒಂದು ವಾರ ಕಾಲ ಧಗಧಗನೆ ಹೊತ್ತಿ ಉರಿದ ಬೆಂಕಿ ಸತತ ಕಾರ್ಯಚರಣೆಯ ಫಲವಾಗಿ ಸಂಪೂರ್ಣವಾಗಿ ನಂದಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದ ಸಫಾರಿ ಮತ್ತೆ ಆರಂಭಿಸಲಾಗಿದೆ. ಇನ್ನೊಂದೆಡೆ ಬಂಡೀಪುರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಟ್ಟದ ತಪ್ಪಲಿನಿಂದ ಎಂದಿನಂತೆ ಕೆಎಸ್‍ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ.

    ಬಂಡೀಪುರ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳೇ ಬೆಂಕಿ ಹಾಕಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿ ವಿದೇಶಗಳಿಂದ ಹಣ ಪಡೆಯಲು ಮುಂದಾಗಿದ್ರು ಎಂಬ ಶಂಕೆ ವ್ಯಕ್ತವಾಗಿದೆ.

    ಬಿದ್ದ ಜಾಗದ ಸ್ಯಾಟಲೈಟ್ ಪಿಕ್ಚರ್ ನಲ್ಲೂ ಕೂಡ ಇದು ಮಾನವನಿರ್ಮಿತ ಎಂದು ಬಯಲಾಗಿದೆ. ಗುಂಪು ಗುಂಪುಗಳಾಗಿ ಅಲ್ಲಲ್ಲಿ ಬೆಂಕಿ ಬಿದ್ದಿರೋದು ನೋಡಿದ್ರೆ ಇದು ಮಾನವ ನಿರ್ಮಿತ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರೋದು ಎಂದು ಅರಣ್ಯ ಇಲಾಖೆಯಿಂದ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಬೆಂಕಿ ಪ್ರಕರಣವನ್ನು ಉನ್ನತ ತನಿಖೆಗಾಗಿ ಆದೇಶಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv