Tag: opeartion kamala

  • ಡಜನ್‍ಗೂ ಹೆಚ್ಚು ಶಾಸಕರನ್ನ ಕರೆತರೋ ಮಾತಾಡಿದ್ದ ಬೆಳಗಾವಿ ಸಾಹುಕಾರನಿಗೆ ಚಿಂತೆ!

    ಡಜನ್‍ಗೂ ಹೆಚ್ಚು ಶಾಸಕರನ್ನ ಕರೆತರೋ ಮಾತಾಡಿದ್ದ ಬೆಳಗಾವಿ ಸಾಹುಕಾರನಿಗೆ ಚಿಂತೆ!

    -ಮತ್ತೆ ಏಕಾಂಗಿಯಾದ್ರಾ ರಮೇಶ್ ಜಾರಕಿಹೊಳಿ!

    ಬೆಂಗಳೂರು: ಶಾಸಕರನ್ನ ಬಿಜೆಪಿ ಕರೆತರುವ ಬಗ್ಗೆ ಮಾತನಾಡಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರಿಗೆ ಇದೀಗ ಹೊಸ ಚಿಂತೆ ಆರಂಭವಾಗಿದೆ.

    ಹೌದು. ಆಪರೇಷನ್ ಸಕ್ಸಸ್ ಅಂದ್ಕೊಂಡಿದ್ದ ಸಾಹುಕಾರ್‍ಗೆ ಈಗ ಟೆನ್ಶನ್ ಶುರುವಾಗಿದ್ದು, ಬರುತ್ತೇವೆ ಎಂದು ನಂಬಿಸಿದ್ದ ಶಾಸಕರೇ ಈಗ ಕೈಕೊಟ್ಟು ದೂರವಾದ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಈ ಮೂಲಕ ರಾಜೀನಾಮೆ ಬಗ್ಗೆ ಮಾತಾಡಿದ್ದ ರಮೇಶ್ ಜಾರಕಿಹೊಳಿ ಈಗ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಬ್ಬೊಬ್ಬ ಶಾಸಕರು ಒಂದೊಂದು ಸಮಸ್ಯೆಗೆ ಸಿಲುಕಿ ಸಾಹುಕಾರ್‍ಗೆ ಚಿಂತೆ ಆರಂಭವಾಗಿದೆಯಂತೆ. ಹಾಗಾದ್ರೆ ರಮೇಶ್ ಜಾರಕಿಹೋಳಿಗೆ ಶಾಸಕರುಗಳು ಏನು ಉತ್ತರ ಕೊಟ್ಟಿದ್ದಾರೆ ಎಂಬ ಒಬ್ಬೊಬ್ಬ ಶಾಸಕರ ಒಂದೊಂದು ಸ್ಟೋರಿ ಏನು ಎಂಬುದು ಇಲ್ಲಿದೆ.

    ಮಹೇಶ್ ಕುಮಟಳ್ಳಿ: ನೀವು ಹೇಗೆ ಹೇಳ್ತಿರೋ ಹಾಗೆ ನಾನು ಕೇಳ್ತೀನಿ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಆಪರೇಷನ್ ವಿಫಲವಾದರೆ ಕಷ್ಟ. ಅಲ್ಲದೆ ಮತ್ತೆ ಚುನಾವಣೆ ಎದುರಿಸೋದು ಕಷ್ಟ. ಇಲ್ಲೇ ಹೊಂದಾಣಿಕೆ ಮಾಡಿಕೊಂಡು ಹೋಗೋಣ ಸಾರ್ ಎಂದು ಹೇಳಿದ್ದಾರೆ.

    ಶಂಕರ್: ನಿಮ್ಮ ಜೊತೆ ಬರುತ್ತೇನೆ. ನನಗೇನು ಸಮಸ್ಯೆ ಇಲ್ಲ. ಆದರೆ, ಎಲ್ಲವೂ ಸರಿಯಾಗಿ ಆಗದಿದ್ದರೆ ಸುಮ್ಮನೆ ಮರ್ಯಾದೆ ಪ್ರೆಶ್ನೆ. ಅಲ್ಲದೆ ನಮ್ಮ ನಾಯಕ ಸಿದ್ದರಾಮಯ್ಯ ಕೂಡ ಎಲ್ಲೂ ಹೋಗದಂತೆ ಸೂಚಿಸಿದ್ದಾರೆ. ಅವರ ಮಾತು ಮೀರಿ ಬರೋದು ಸ್ವಲ್ಪ ಕಷ್ಟವಾಗುತ್ತೆ ಎಂದಿದ್ದಾರೆ.

    ನಾಗೇಶ್: ನಾನು ಪಕ್ಷೇತರ ಶಾಸಕನಾದ್ರೂ ಕೊತ್ತನೂರು ಮಂಜು ನೆರವಿನಿಂದ ಗೆದ್ದವನು. ಅವರ ಮಾತು ಮೀರೋ ಹಾಗಿಲ್ಲ. ಕಾಂಗ್ರೆಸ್ ಬಗ್ಗೆ ಏನೂ ಅಸಮಧಾನವಿಲ್ಲ. ಅಲ್ಲದೆ ನನ್ನ ಗೆಲುವಿಗೆ ಸಚಿವ ಡಿ.ಕೆ ಶಿವಕುಮಾರ್ ಕೂಡ ಸಹಕರಿಸಿದ್ದಾರೆ. ಅವರ ಮಾತು ಮೀರೋದು ಕಷ್ಟ ಎಂದು ಉತ್ತರಿಸಿದ್ದಾರೆ.

    ಬಿ.ಸಿ.ಪಾಟೀಲ್: ಹಾಗೇನಾದರೂ ಪಕ್ಷ ಬಿಟ್ಟು ಬಿಜೆಪಿ ಸೇರಿದರೆ ಅಲ್ಲಿನ ಸಮುದ್ರದಲ್ಲಿ ಸಚಿವನಾಗೋದು ಕಷ್ಟ. ಅದರ ಬದಲು ಇಲ್ಲೇ ಇದ್ದು ಒತ್ತಡ ತಂತ್ರ ಅನುಸರಿಸೋದೆ ಒಳ್ಳೆಯದು ಎಂದಿದ್ದಾರೆ.

    ಡಾ.ಸುಧಾಕರ್: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕೋಪದ ಜೊತೆಗೆ ಈಗಿನ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕರೂ ಸಿಗಲಿ ಎಂಬ ಆಸೆ. ಅದಕ್ಕಾಗಿ ಒತ್ತಡ ತಂತ್ರ ಅನುಸರಿಸುತ್ತಿರುವ ಸುಧಾಕರ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವ ಧೈರ್ಯ ಸಾಲುತ್ತಿಲ್ಲ. ಕಾಂಗ್ರೆಸ್ ಜೆಡಿಎಸ್ ಪ್ರಬಲವಾಗಿರುವ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಅನ್ನೋ ಆತಂಕ. ಅದಕ್ಕೆ ಪಕ್ಷದಲ್ಲೇ ಒತ್ತಡ ತಂತ್ರ ಅನುಸರಿಸಲು ಯತ್ನ.

    ನಾಗೇಂದ್ರ: ಈಗಾಗಲೇ ಬಿಜೆಪಿಗೆ ಜಿಗಿಯುವ ಮನಸ್ಸಿನಲ್ಲಿ ಸಿದ್ಧವಾಗಿದ್ದರು. ಆದರೆ ಸಹೋದರನನ್ನ ಬಿಜೆಪಿಯಿಂದ ಲೋಕಸಭೆಗೆ ಕಳುಹಿಸುವ ಪ್ರಯತ್ನ ಕೈಕೊಟ್ಟಿದೆ. ಮತ್ತೆ ಬಿಜೆಪಿ ನಾಯಕರನ್ನ ನಂಬಿ ಹೋದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತೆ ಎಂಬ ಆತಂಕ ಎದುರಾಗಿದೆ.

    ಗಣೇಶ್: ಕಂಪ್ಲಿ ಶಾಸಕನಿಗೆ ಆಪರೇಷನ್ ಬೇಡ ಕಮಲವೂ ಬೇಡ ಎಂಬಂತಾಗಿದೆ. ಆನಂದ್ ಸಿಂಗ್ ಜೊತೆ ರಾಜಿಯಾಗಿ ಕೇಸು ವಾಪಾಸ್ ಪಡೆದರೆ ಅಷ್ಟೆ ಸಾಕು ಅನ್ನಿಸಿದೆ. ಆದ್ದರಿಂದ ಈ ಬಾರಿ ಆಪರೇಷನ್ ಮಾತಿಗೆ ಗಣೇಶ್ ನೋ ರಿಯಾಕ್ಷನ್.

    ಭೀಮಾನಾಯಕ್: ಕಳೆದ ಬಾರಿ ಅಂದರ್ ಬಾಹರ್ ಆಟ ಆಡಿದ ಶಾಸಕನಿಗೆ ಈಗ ಸಾಕಪ್ಪ ಸಾಕು ಆಪರೇಷನ್ ಆಟ ಅನ್ನಿಸಿದೆ. ಮೂರನೇ ಬಾರಿಗೆ ಪಕ್ಷ ಬದಲಿಸುವ ಬದಲು ಕ್ಷೇತ್ರಕ್ಕೆ ಒಂದಷ್ಟು ಫಂಡ್ ಹಾಕಿಸಿಕೊಂಡು ಕೆಲಸ ಮಾಡೋದೆ ಸೇಫ್ ಅನ್ನಿಸಿದೆ. ಆದ್ದರಿಂದ ಯಾವ ಕಾರಣಕ್ಕೂ ನಾನು ಪಕ್ಷ ಬಿಡಲ್ಲ ಅಣ್ಣ ಎಂದು ನೇರವಾಗಿ ಹೇಳಿದ್ದಾರೆ.

    ಪ್ರತಾಪ್ ಗೌಡ ಪಾಟೀಲ್: ಈ ಹಿಂದೆ ನಡೆದ ಆಪರೇಷನ್ ಅವಾಂತರ ನೋಡಿ ಸುಸ್ತಾಗಿರುವ ಮಸ್ಕಿ ಶಾಸಕರಿಗೆ ಕ್ಷೇತ್ರದಲ್ಲಿ ಕೆಲಸಗಳಾಗಬೇಕಂತೆ. ಸರ್ಕಾರ ಹಣ ಬಿಡುಗಡೆ ಮಾಡಿದೆ ಕೆಲಸ ಶುರು ಮಾಡಬೇಕು. ಅದು ಬಿಟ್ಟು ಚುನಾವಣೆಗೆ ಹೋದರೆ ಕಷ್ಟ ನನ್ನ ಕೈಲಿ ಅದು ಆಗಲ್ಲ ಎನ್ನತೊಡಗಿದ್ದಾರೆ.

    ಬಸವರಾಜ್ ದದ್ದಲ್: ಮೊದಲಿನಿಂದಲೂ ಆಪರೇಷನ್ ಕಮಲದ ಬಗ್ಗೆ ಆತಂಕ ಇಟ್ಟುಕೊಂಡಿದ್ದ ದದ್ದಲ್ ಸಾಹೇಬರಿಗೆ ಈಗ ಚುನಾವಣೆ ಎದುರಿಸುವ ಆಸಕ್ತಿ ಇಲ್ಲ. ಕ್ಷೇತ್ರಕ್ಕೆ ಅನುದಾನ ಕೊಂಡೊಯ್ದು ಕೆಲಸ ಮಾಡಿಸಿಕೊಂಡರೆ ಸಾಕು ಅನ್ನಿಸಿದೆಯಂತೆ.

    ಶಿವರಾಮ ಹೆಬ್ವಾರ್: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ಕೊಟ್ಟಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಹೆಚ್ಚಿನ ಆಸಕ್ತಿ ಇಲ್ಲ. ಆದರೂ ಸಚಿವ ಸ್ಥಾನ ಬೇಕು ಅನ್ನೋ ಆಸೆ. ಆದರೆ ಅದಕ್ಕಾಗಿ ಪಕ್ಷ ಬಿಡೋದು ಬೇಡ. ಬಿಜೆಪಿಗೆ ಹೋದರೂ ಅಲ್ಲಿರುವ ಸ್ಪರ್ಧೆಯಲ್ಲಿ ಸಚಿವ ಸ್ಥಾನ ಪಡೆಯೋದು ಕಷ್ಟ ಅನ್ನೋ ಆತಂಕ ಎದುರಾಗಿದೆಯಂತೆ.

    ಆನಂದ್ ಸಿಂಗ್: ಐಟಿ, ಇಡಿ, ಸಿಬಿಐ ಎಲ್ಲದರ ಭಯಕ್ಕೆ ಬಿಜೆಪಿ ಹೊಸ್ತಿಲಿಗೆ ಹೋಗುವ ನಿರ್ಧಾರ ಮಾಡಿದ್ದು ಹೌದು. ಆದರೆ ಈಗ ಎಲ್ಲವು ಒಂದು ಹಂತಕ್ಕೆ ಬಂದಿದೆ. ಈಗ ಪಕ್ಷ ಬಿಡುವ ಪ್ರಮೆಯ ಇಲ್ಲ ಎಂದಿದ್ದಾರೆ.

  • ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಾ? – ಇಂದು ಅಥವಾ ನಾಳೆ ನಿರ್ಧಾರ ಪ್ರಕಟ

    ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಾ? – ಇಂದು ಅಥವಾ ನಾಳೆ ನಿರ್ಧಾರ ಪ್ರಕಟ

    ಬೆಂಗಳೂರು: ಕಾಂಗ್ರೆಸ್ ಶಾಸಕರ ನಡುವೆ ಕಚ್ಚಾಟ, ಮೈತ್ರಿ ಸರ್ಕಾರದ ವಿರುದ್ಧ ಕೈ ನಾಯಕರಲ್ಲಿ ಕೆಲವರು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಚರ್ಚೆಯಲ್ಲಿದ್ದ ಆಪರೇಷನ್ ಕಮಲ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

    ಹೌದು. ರಾಜ್ಯದಲ್ಲಿ ಆಪರೇಷನ್ ಕಮಲ ಬೇಕಾ? ಬೇಡ್ವೋ? ಈ ವಿಚಾರದ ಬಗ್ಗೆ ಬಿಜೆಪಿಯ ಹೈಕಮಾಂಡ್ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲ. ಆದರೆ ದೆಹಲಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ವಿಚಾರ ಅಂತಿಮವಾಗಲಿದೆ.

    ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖರ ಜತೆ ಇವತ್ತು ಸಂಜೆ ಅಥವಾ ನಾಳೆ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಅನುಮತಿ ನೀಡಿದರೆ ಮಾತ್ರ ರಾಜ್ಯ ನಾಯಕರು ಆಪರೇಷನ್ ಕಮಲ ಮಾಡಲು ಮುಂದಾಗಲಿದ್ದಾರೆ.

    ಜಾರಕಿಹೊಳಿ ಸಹೋದರರ ಜತೆ ಶ್ರೀರಾಮುಲು, ಉಮೇಶ್ ಕತ್ತಿ, ಸಿ.ಎಂ.ಉದಾಸಿ ಸಂಪರ್ಕದಲ್ಲಿದ್ದಾರೆ. ಜಾರಕಿಹೊಳಿ ಸಹೋದರರಿಗೆ ಹಲವು ಉತ್ತರ ಕರ್ನಾಟಕ ಭಾಗದ ಶಾಸಕರ ಬೆಂಬಲ ಇದೆ. ಹೀಗಾಗಿ ಒಂದು ವೇಳೆ ಹೈಕಮಾಂಡ್ ಅನುಮತಿ ಕೊಟ್ಟರೆ ಮಾತ್ರ ಸೆಪ್ಟೆಂಬರ್ ಅಂತ್ಯದಲ್ಲಿ ಆಪರೇಷನ್ ನಡೆಯುವ ಸಾಧ್ಯತೆಯಿದೆ. ಇಲ್ಲದೇ ಇದ್ದರೆ ಬಿಜೆಪಿ ನಾಯಕರು ಸೈಲೆಂಟ್ ಆಗಲಿದ್ದಾರೆ. ಒಟ್ಟಿನಲ್ಲಿ ರಾಜ್ಯಲ್ಲಿ ಆಪರೇಷನ್ ಕಮಲ ಮಾಡಬೇಕೇ? ಬೇಡವೇ ಎನ್ನುವ ನಿರ್ಧಾರ ಇಂದು ಅಥವಾ ನಾಳೆ ಅಂತಿಮವಾಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಅಜ್ಮೇರ್ ಪ್ರವಾಸಕ್ಕೆ ಸಿಕ್ತು ಪೊಲಿಟಿಕಲ್ ಟ್ವಿಸ್ಟ್! ಜಾರಕಿಹೊಳಿ ತಂಡದಲ್ಲಿ ಯಾರೆಲ್ಲ ಇದ್ದಾರೆ?

    ಈ ಕಾರ್ಯಕಾರಣಿಯಲ್ಲಿ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಸಾಧನೆ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ವಿಚಾರದ ಬಗ್ಗೆ ಯಡಿಯೂರಪ್ಪ ಹಿರಿಯ ನಾಯಕರ ಜೊತೆ ಚರ್ಚಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv