Tag: online shopping

  • ಆನ್‍ಲೈನ್ ಶಾಪಿಂಗ್‍ನಲ್ಲಿ ಬೆಂಗಳೂರಿಗರೇ ಮುಂದು – ಸರಾಸರಿ ಖರೀದಿಯಲ್ಲಿ ಮುಂಬೈ ಫಸ್ಟ್

    ಆನ್‍ಲೈನ್ ಶಾಪಿಂಗ್‍ನಲ್ಲಿ ಬೆಂಗಳೂರಿಗರೇ ಮುಂದು – ಸರಾಸರಿ ಖರೀದಿಯಲ್ಲಿ ಮುಂಬೈ ಫಸ್ಟ್

    ನವದೆಹಲಿ: ಅಮೆಜಾನ್, ಪ್ಲಿಪ್‍ಕಾರ್ಟ್, ಮೀಶೋನಂತಹ ಇತರ ಶಾಪಿಂಗ್ ಸೈಟ್‍ಗಳಲ್ಲಿ (Online Shopping) ಬೆಂಗಳೂರಿನ (Bengaluru) ಜನರೇ ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್‍ನ ಅಧ್ಯಯನದ ವರದಿ ಹೇಳಿದೆ. ಬೆಂಗಳೂರಿನ ಜನರು ಆನ್‍ಲೈನ್ ಪ್ಲಾಟ್‍ಫಾರಂಗಳಲ್ಲಿ ವಾರಕ್ಕೆ ಸರಾಸರಿ ನಾಲ್ಕು ಗಂಟೆಗಳ ಸಮಯ ವ್ಯಯ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

    ಬೆಂಗಳೂರಿನ ಬಳಿಕ ಗುವಾಹಟಿ, ಕೊಯಮತ್ತೂರು, ಲಕ್ನೋದ ಜನರು ಆನ್‍ಲೈನ್ ಶಾಪಿಂಗ್ ಗೀಳಿಗೆ ಬಿದ್ದಿದ್ದಾರೆ. ಅಲ್ಲಿನ ಜನ ವಾರಕ್ಕೆ ಸುಮಾರು 2 ಗಂಟೆ 25 ನಿಮಿಷಗಳ ಕಾಲವನ್ನು ಈ ಉದ್ದೇಶಕ್ಕಾಗಿ ಕಳೆದಿದ್ದಾರೆ. ವಿಶೇಷವಾಗಿ ಮಹಿಳೆಯರು ಇ-ಕಾಮರ್ಸ್‍ನಲ್ಲಿ ವರ್ಷಕ್ಕೆ ಸುಮಾರು 149 ಗಂಟೆಗಳನ್ನು ಕಳೆಯುತ್ತಿದ್ದಾರೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

    29% ರಷ್ಟು ಜನರು ಆನ್‍ಲೈನ್‍ನಲ್ಲಿ 15,000 ರೂ. ನಿಂದ 20,000 ರೂ. ಬೆಲೆಯ ಸ್ಮಾರ್ಟ್‌ಫೋನ್‌ಗಳ ಖರೀದಿ ಮಾಡುತ್ತಿದ್ದಾರೆ. ಗುವಾಹಟಿ, ಕೊಯಮತ್ತೂರು, ಲಕ್ನೋ ಖರೀದಿದಾರರು ಕಳೆದ ಆರು ತಿಂಗಳಲ್ಲಿ ಸರಾಸರಿ ಆನ್‍ಲೈನ್‍ನಲ್ಲಿ 20,100 ರೂ. ಖರ್ಚು ಮಾಡಿದ್ದಾರೆ. ಬೆಂಗಳೂರಿಗರು ಸರಾಸರಿ 21,700 ರೂ. ಖರ್ಚು ಮಾಡಿದ್ದಾರೆ.

    ಕಡಿಮೆ ಸಮಯ ಕಳೆದರೂ ಮುಂಬೈ (Mumbai) ಜನರು ಸರಾಸರಿ ಶಾಪಿಂಗ್‍ನಲ್ಲಿ ಮುಂದಿದ್ದಾರೆ. ಅವರು ಕಳೆದ ಆರು ತಿಂಗಳಲ್ಲಿ 24,200 ರೂ. ಖರ್ಚು ಮಾಡಿದ್ದಾರೆ. ನಾಗ್ಪುರ ಮತ್ತು ಕೊಯಮತ್ತೂರು ಜನರಿಂದ ಸರಾಸರಿ 21,600 ರೂ. ಆನ್‍ಲೈನ್ ಶಾಪಿಂಗ್ ಆಗಿದೆ. ಜನ ಆನ್‍ಲೈನ್ ಮೂಲಕ ಬಟ್ಟೆ ಮತ್ತು ಮೊಬೈಲ್, ಟಿವಿ, ವಾಷಿಂಗ್ ಮಷಿನ್ ಸೇರಿದಂತೆ ಹಲವು ಬಗೆಯ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ಖರೀದಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಪಾಕ್ ವಿಶ್ವಕಪ್ ಆಡಲಿರುವ ಸ್ಥಳಗಳಿಗೆ ನಿಯೋಗ ಕಳುಹಿಸಿ ಪರಿಶೀಲನೆಗೆ ಮುಂದಾದ PCB

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ

    ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ

    ಕಾಬೂಲ್: ತಾಲಿಬಾನ್ ವಶಪಡಿಸಿಕೊಂಡ ಬಳಿಕ ಹಾಗೂ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ಆನ್‌ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.

    ಇತ್ತೀಚೆಗೆ ಅಫ್ಘಾನಿಸ್ತಾನದ 2 ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಸೇವೆಗಳಾದ Click.af ಮತ್ತು Baqal ದೇಶದ ಆರ್ಥಿಕ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ಬಹುತೇಕ ಎಲ್ಲಾ ಆನ್‌ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಇದನ್ನೂ ಓದಿ: ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಅಫ್ಘಾನಿಸ್ತಾನ ಈಗ 1 ವರ್ಷದಿಂದ ಸಂಪೂರ್ಣ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ತಾಲಿಬಾನ್ ಲಿಂಗ ಆಧಾರಿತ ಹಿಂಸಾಚಾರವನ್ನು ಪರಿಹರಿಸಲು ವ್ಯವಸ್ಥೆಯನ್ನು ಕಿತ್ತುಹಾಕಿದ್ದು ಮಾತ್ರವಲ್ಲದೇ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೊಸ ಅಡೆತಡೆಗಳನ್ನು ನಿರ್ಮಿಸಿತು. ಮಹಿಳಾ ಹಕ್ಕುಗಳ ಪ್ರತಿಭಟನಾಕಾರರ ಮೇಲೆ ದಾಳಿಯನ್ನೂ ಮಾಡಿತು. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಆಗಿರುವ Click.af ಶನಿವಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಸಂಸ್ಥೆ ತನ್ನ ಫೇಸ್‌ಬುಕ್ ಪುಟದಲ್ಲಿ ಹಣಕಾಸಿನ ಸಮಸ್ಯೆಗಳಿಂದ ಮುಚ್ಚಲಾಗಿದೆ ಎಂದು ಸಂದೇಶವನ್ನು ಪೋಸ್ಟ್ ಮಾಡಿದೆ.

    3 ವರ್ಷಗಳ ಹಳೆಯ Baqal ಕಂಪನಿ ಭಾನುವಾರ ಆರ್ಥಿಕ ತೊಂದರೆಗಳಿಂದಾಗಿ ಸೇವೆಗಳನ್ನು ಮುಚ್ಚುತ್ತಿರುವುದಾಗಿ ಘೋಷಿಸಿತು.

    Live Tv
    [brid partner=56869869 player=32851 video=960834 autoplay=true]

  • ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ತಿರುವನಂತಪುರಂ: ಆನ್‍ಲೈನ್‍ನಲ್ಲಿ ಬುಕ್ ಮಾಡಿರುವ ವಸ್ತುಗಳ ಬದಲಾಗಿ ಬೇರೆ ವಸ್ತುಗಳ ಬಂದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇಲ್ಲೊಬ್ಬರು ವಾಚ್ ಬುಕ್ ಮಾಡಿದರೆ ಬಂದಿದ್ದು ಮಾತ್ರ ಕಾಂಡೋಮ್ ಆಗಿದೆ.

    ಕೇರಳದ ಎರ್ನಾಕುಲಂನ ಥಟ್ಟಂಪಾಡಿ ನಿವಾಸಿ ಅನಿಲ್ ಕುಮಾರ್ ಅವರು 2,200 ಬೆಲೆ ಬಾಳುವ ವಾಚ್‍ನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದಾರೆ. ಡೆಲಿವರಿ ಬಾಯ್ ವಾಚ್ ಕೊಟ್ಟಿದ್ದಾನೆ. ವಾಚ್ ಬಂದಿರುವ ಖುಷಿಯಲ್ಲಿ ಅನಿಲ್ ತಕ್ಷಣ ಅಲ್ಲೇ ಬಾಕ್ಸ್ ಓಪನ್ ಮಾಡಿ ನೋಡಿದ್ದಾರೆ. ಇದನ್ನೂ ಓದಿಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಆದರೆ ಕಾಂಡೋಮ್ ಜೊತೆಗೆ ಕೆಲವು ವಸ್ತುಗಳು ಬಾಕ್ಸ್‌ನಲ್ಲಿ ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ತಕ್ಷಣ ಡೆಲಿವರಿ ಏಜೆಂಟ್‍ಗಳನ್ನು ಮನೆಯ ಆವರಣದಲ್ಲೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇದು ಕಂಪನಿ ಮಾಡಿರುವ ಎಡವಟ್ಟಾ? ಸಂಚು ರೂಪಿಸಿರುವುದಾ? ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ವಾಚ್ ಡೆಲಿವರಿ ಕೊಡಲು ಬಂದಿದ್ದ ಇಬ್ಬರು ಪೊಲೀಸರ ವಶದಲ್ಲಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ

  • ಬುಕ್ ಮಾಡಿದ್ದು 1 ಲಕ್ಷ ರೂ. ಐಫೋನ್ ಆದ್ರೆ ಬಂದಿದ್ದು ಚಾಕೊಲೇಟ್

    ಬುಕ್ ಮಾಡಿದ್ದು 1 ಲಕ್ಷ ರೂ. ಐಫೋನ್ ಆದ್ರೆ ಬಂದಿದ್ದು ಚಾಕೊಲೇಟ್

    ಲಂಡನ್: ಆನ್‍ಲೈನ್ ನಲ್ಲಿ ಹಲವು ಬಾರಿ ನಾವು ಬುಕ್ ಮಾಡುವುದೇ ಒಂದು ಆದರೆ ಬರುವುದೇ ಇನ್ನೊಂದು. ಇಂತಹ ಸಾಕಷ್ಟು ವರದಿಗಳಾಗಿವೆ. ಅಂತೆಯೇ ವ್ಯಕ್ತಿಯೊಬ್ಬರು ಐಫೋನ್ ಬುಕ್ ಮಾಡಿದ್ರೆ, ಆತನಿಗೆ ಆನ್‍ಲೈನ್ ನಲ್ಲಿ ಚಾಕೊಲೇಟ್ ಬಂದಿದೆ. ಇದರಿಂದ ವ್ಯಕ್ತಿ 1 ಲಕ್ಷ ರೂ. ನಷ್ಟವನ್ನು ಅನುಭವಿಸಿದ್ದಾರೆ.

    ಆನ್‍ಲೈನ್ ಶಾಪಿಂಗ್ ನಲ್ಲಿ ಗ್ರಾಹಕರೊಬ್ಬರು ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದಾರೆ. ಆದರೆ ಪೇಪರ್ ನಲ್ಲಿ ಸುತ್ತಿದ ಎರಡು ಚಾಕೊಲೇಟ್ ಗಳು ಬಂದಿದ್ದು, ಅದನ್ನು ನೋಡಿ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಏನಿದು ಘಟನೆ?
    ಇಂಗ್ಲೆಂಡ್‍ನ ಲೀಡ್ಸ್‍ನ ಡೇನಿಯಲ್ ಕ್ಯಾರೊಲ್ ಆನ್‍ಲೈನ್ ನಲ್ಲಿ 1 ಲಕ್ಷ ರೂ. ಮೌಲ್ಯದ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿ ಎರಡು ವಾರಗಳಾದರೂ ಬಂದಿರಲಿಲ್ಲ. ಕೆಲ ದಿನಗಳ ವಿಳಂಬದ ನಂತರ ಬುಕ್ ಮಾಡಿದ್ದ ಬಾಕ್ಸ್ ಬಂದಿತು. ನಂತರ ಖುಷಿಯಿಂದ ಕವರ್ ಓಪನ್ ಮಾಡಿದ್ದಾರೆ. ಆದರೆ ಅದನ್ನು ತೆಗೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು.

    ಡೇನಿಯಲ್‍ಗೆ ಫೋನ್ ಬದಲಾಗಿ ರೋಲ್‍ನಲ್ಲಿ ಸುತ್ತಿದ ಎರಡು ಕ್ಯಾಡ್ಬರಿ ವೈಟ್ ಓರಿಯೊ ಚಾಕೊಲೇಟ್ ಬಂದಿತ್ತು. ಇದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡೇನಿಯಲ್, ನಾನು ಡಿಎಚ್‍ಎಲ್ ವೆಬ್‍ಸೈಟ್ ಮೂಲಕ ಡಿಸೆಂಬರ್ 2 ರಂದು ಫೋನ್ ಅನ್ನು ಆರ್ಡರ್ ಮಾಡಿದ್ದೆ. ಡಿಸೆಂಬರ್ 17 ರಂದು ನನಗೆ ಫೋನ್ ಡೆಲಿವರಿ ಮಾಡಬೇಕಿತ್ತು. ಆದರೆ ಅದು ಬರಲಿಲ್ಲ. ನಂತರ ನಾನೇ ಅಲ್ಲಿಗೆ ಹೋಗಿ ವಿಚಾರಿಸಿದಾಗ ನಿಮ್ಮ ಆರ್ಡರ್ ಶನಿವಾರ ಸಿಗುತ್ತೆ ಎಂದು ಮಾಹಿತಿಯನ್ನು ನೀಡಿದರು.

    ನಾನೇ ಸೋಮವಾರ ಆ ಪಾರ್ಸೆಲ್ ಸಂಗ್ರಹಿಸಲು 24-ಮೈಲಿ ಹೋಗಬೇಕಾಯಿತು. ಆದರೂ ಹೋಗಿ ನನ್ನ ಆರ್ಡರ್ ಅನ್ನು ತೆಗೆದುಕೊಂಡು ಮನೆಗೆ ಬಂದೆ. ಆ ಬಾಕ್ಸ್ ತುಂಬಾ ಹಗುರವಾಗಿತ್ತು. ಆಗ ನಾನು ಅದನ್ನು ತೆಗೆದು ನೋಡಿದಾಗ ಶಾಕ್ ಆಯ್ತು. ಅದರಲ್ಲಿ ನಾನು ಆರ್ಡರ್ ಮಾಡಿದ ಫೋನ್ ಬದಲಿಗೆ ರೋಲ್ ನಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟ್ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    ತಮಗಾದ ಮೋಸವನ್ನು ಡೇನಿಯಲ್ ಟ್ವಿಟ್ಟರ್‌ನಲ್ಲೂ ಹಂಚಿಕೊಂಡಿದ್ದಾರೆ. ಡಿಎಚ್‍ಎಲ್ ಗೆ ಈ ಕುರಿತು ಡೇನಿಯಲ್ ದೂರು ನೀಡಿದ್ದಾರೆ. ಈ ಬಗ್ಗೆ ಡಿಎಚ್‍ಎಲ್ ವಕ್ತಾರರು ಪ್ರತಿಕ್ರಿಯಿಸಿದ್ದು, ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದ್ದು, ನಷ್ಟವಾದ ಆರ್ಡರ್ ಅನ್ನು ಮರುಕಳುಹಿಸುತ್ತೇವೆ. ಅಲ್ಲಿಯವರೆಗೂ ನಾವು ನಿಮ್ಮ ಸಂಪರ್ಕದಲ್ಲೇ ಇರುತ್ತೇವೆ ಎಂದು ತಿಳಿಸಿದ್ದಾರೆ.

  • ಟೋಕನೈಸೇಶನ್ ಜಾರಿ 6 ತಿಂಗಳು ವಿಳಂಬ: RBI

    ಟೋಕನೈಸೇಶನ್ ಜಾರಿ 6 ತಿಂಗಳು ವಿಳಂಬ: RBI

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಹೊಸ ಯೋಜನೆ ಟೋಕನೈಸೇಶನ್ ಜನವರಿ 1ರಂದು ಚಲಾವಣೆಗೆ ತರುವ ಬಗ್ಗೆ ಯೋಜಿಸಿತ್ತು. ಆದರೆ ಇದೀಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಟೋಕನೈಸ್ ಮಾಡುವ ಹೊಸ ಯೋಜನೆ 6 ತಿಂಗಳವರೆಗೆ ವಿಸ್ತರಿಸಿದೆ.

    2022ರ ಜನವರಿ 1 ರಂದು ಜಾರಿಗೆ ಬರಬೇಕಿದ್ದ ಟೋಕನೈಸೇಶನ್ ಆನ್‌ಲೈನ್ ಪಾವತಿಗಳಲ್ಲಿ ಕೆಲವೊಂದು ವಿಷಯಗಳನ್ನು ಅಡ್ಡಿಪಡಿಸುವುದರಿಂದ ಈ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಬ್ಯಾಂಕಿಂಗ್ ವಲಯವು ಆರ್‌ಬಿಐಗೆ ಮನವಿ ಸಲ್ಲಿಸಿದೆ. ಹೀಗಾಗಿ ಆರ್‌ಬಿಐ ಈ ಗಡುವನ್ನು ಎರಡನೇ ಬಾರಿ ವಿಸ್ತರಣೆ ಮಾಡಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

    ಇದರ ಜಾರಿಯಿಂದ ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್‌ಗಳಂತಹ ಸಮಸ್ಯೆಗಳು ದೂರವಾಗುವ ಸಾಧ್ಯತೆಗಳಿದ್ದರೂ ಇದೀಗ ಟೋಕನೈಸೇಶನ್ ಜಾರಿಗೆ ತರುವಲ್ಲಿ ವಿಳಂಬವಾಗಿದೆ.

    ಆರ್‌ಬಿಐ 2022ರ ಜನವರಿ 1ರಂದು ಟೋಕನೈಸೇಶನ್ ಜಾರಿಗೆ ಬರುವುದಿಲ್ಲ. ಬದಲಾಗಿ 2022ರ ಜುಲೈ 1ರಿಂದ ಜಾರಿಗೊಳಿಸಲಾಗುವುದು. 2022ರ ಜೂನ್ 30ರ ನಂತರ ಕಾರ್ಡ್ ವಿವರಗಳನ್ನು ಕೇವಲ ವಿತರಣಾ ಕಂಪನಿಗಳು ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳಲಿದ್ದು, ಬೇರೆಡೆ ಸಂಗ್ರಹಿಸಿ ಇಡಲಾದ ಕಾರ್ಡ್ ವಿವರಗಳನ್ನು ನಾಶಪಡಿಸುವುದಾಗಿ ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ಜನರು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ವಿವರವನ್ನು ನೀಡುವ ಅವಶ್ಯಕತೆ ಇರುತ್ತಿತ್ತು. ಈ ಸಂದರ್ಭದಲ್ಲಿ ಬಳಕೆದಾರರಿಗೆ ತಮ್ಮ ವೈಯಕ್ತಿಕ ವಿವರಗಳು ಸೋರಿಕೆಯಾಗುವ ಭೀತಿಯೂ ಇತ್ತು. ಇದಕ್ಕೆ ಪರಿಹಾರವಾಗಿ ಆರ್‌ಬಿಐ ಟೋಕನೈಸೇಶನ್ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿತ್ತು.

    ಟೋಕನೈಸೇಶನ್ ಬಳಕೆಯಿಂದ ಆನ್‌ಲೈನ್ ಪಾವತಿಗಳಲ್ಲಿ ಕಾರ್ಡ್‌ಗಳ ವಿವರ ನೀಡುವ ಅಗತ್ಯ ಬೀಳುವುದಿಲ್ಲ. ಇದಕ್ಕಾಗಿ ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಟೋಕನ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡುವ ಬಗ್ಗೆ ತಿಳಿಸಿತ್ತು.

  • ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರ, ಬಿಗ್‌ಬಾಸ್ಕೆಟ್‌ಗಳಂತಹ ಆನ್‌ಲೈನ್ ಖರೀದಿಗೆ ಆರ್‌ಬಿಐ ಹೊಸ ಪೇಮೆಂಟ್ ವಿಧಾನವನ್ನು ಪರಿಚಯಿಸುತ್ತಿದೆ. ಅದೇ ಟೋಕನೈಸೇಶನ್.

    ಜನವರಿ 1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ನೀವು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಮತ್ತು ಮುಕ್ತಾಯ ದಿನಾಂಕವನ್ನು ನೀಡುವ ಅಗತ್ಯ ಇರುವುದಿಲ್ಲ. ಸರಳ ವಿಧಾನದ ಟೋಕನೈಸೆಶನ್ ನಿಮ್ಮ ಗೌಪ್ಯ ಮಾಹಿತಿಗಳನ್ನು ರಕ್ಷಿಸಲು ಸಹಕಾರಿಯಾಗಲಿದೆ.

    ಏನಿದು ಟೋಕನೈಸೇಶನ್?
    ಟೋಕನೈಸೇಶನ್ ಎನ್ನುವುದು ಕಾರ್ಡ್ ಮಾಹಿತಿಯನ್ನು ಟೋಕನ್ ನೊಂದಿಗೆ ಬದಲಾವಣೆ ಮಾಡಿಕೊಳ್ಳುವ ತಂತ್ರವಾಗಿದೆ. ಇದು ಗ್ರಾಹಕರ ಮಾಹಿತಿಗಳನ್ನು ಗೌಪ್ಯವಾಗಿಡುವುದರೊಂದಿಗೆ ಖರೀದಿಗಳು ಸುಗಮವಾಗಿ ನಡೆಯಲು ಸಹಕಾರಿಯಾಗಲಿದೆ. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

    ಆರ್‌ಬಿಐ ಈ ಟೋಕನೈಸೇಶನ್ ವಿಧಾನವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿಸಿದೆ. ಇದರ ಪ್ರಕಾರ ನೀವು ನಿಮ್ಮ ಕಾರ್ಡ್ ಹಿಂದುಗಡೆ ಇರುವ ಮೂರು ಡಿಜಿಟ್‌ನ ಸಿವಿವಿ ನಂಬರ್ ಅನ್ನು ಬಳಸುವ ಅಗತ್ಯ ಇರುವುದಿಲ್ಲ.

    ಏನಿದರ ಪ್ರಯೋಜನ?
    ಆನ್‌ಲೈನ್ ಶಾಪಿಂಗ್ ಮಾಡುವಾಗ ಕಾರ್ಡ್ ವಿವರಗಳನ್ನು ನೀಡುವುದರಿಂದ ಹ್ಯಾಕರ್ಸ್‌ಗಳು ಸುಲಭವಾಗಿ ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಟೋಕನೈಸೇಶನ್ ನಿಂದ ಕಾರ್ಡ್ ವಿವರಗಳನ್ನು ಕದಿಯುವುದು ಸುಲಭದ ಕೆಲಸವಲ್ಲ. ಟೋಕನೈಸ್ ಮಾಡಿದ ಕಾರ್ಡ್ಗಳನ್ನು ನಿರ್ವಹಿಸಲು ಬ್ಯಾಂಕ್ ಪ್ರತ್ಯೇಕ ಇಂಟರ್‌ಫೇಸ್ ನೀಡುತ್ತದೆ. ಗ್ರಾಹಕರು ಯಾವುದೇ ಸಮಯದಲ್ಲೂ ಟೋಕನ್ ಅನ್ನು ಅಳಿಸಲೂ ಸಾಧ್ಯವಾಗಲಿದೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ಕಥೆಯಾಧಾರಿತ 83 ಸಿನಿಮಾಗೆ ಟ್ಯಾಕ್ಸ್ ಇಲ್ಲ!

    RBI

    ಟೋಕನ್ ಬಳಕೆ ಹೇಗೆ?
    ಟೋಕನೈಸೇಶನ್ ಸೇವೆ ಸಂಪುರ್ಣ ಉಚಿತವಾಗಿರಲಿದ್ದು, ಬಳಕೆದಾರರು ತಮಗೆ ಬೇಕಾದಷ್ಟು ಸಲ ಕಾರ್ಡ್ಗಳನ್ನು ಟೋಕನೈಸ್ ಮಾಡಬಹುದು. ಈ ನಿಯಮ ದೇಶೀಯ ಕಾರ್ಡ್ಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ವಿದೇಶೀ ಕಾರ್ಡ್ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

    ಆನ್‌ಲೈನ್ ಶಾಪಿಂಗ್ ಮಾಡುವಾಗ ವೆಬ್‌ಸೈಟ್‌ನ ಚೆಕ್‌ಔಟ್ ಪುಟದಲ್ಲಿ ತಮ್ಮ ಕಾರ್ಡ್ ಮಾಹಿತಿಯನ್ನು ಸಲ್ಲಿಸಬೇಕು. ಈ ಸಂದರ್ಭದಲ್ಲಿ ಟೋಕನೈಸೇಶನ್ ಅನ್ನು ಆಯ್ಕೆ ಮಾಡಬಹುದು. ಈ ಟೋಕನ್‌ಗಳು ಆನ್‌ಲೈನ್ ಪಾವತಿ ಮಾಡುವ ಸಂದರ್ಭದಲ್ಲಿ ಅತೀ ಕಡಿಮೆ ಕಾರ್ಡ್ ವಿವರಗಳನ್ನು ಕೇಳುತ್ತದೆ.

  • ರಿಮೋಟ್ ಕಾರ್ ಆರ್ಡರ್ ಮಾಡಿ ಚಹಾ ಮಾಡಲು ಸಿದ್ಧನಾದ ಗ್ರಾಹಕ

    ರಿಮೋಟ್ ಕಾರ್ ಆರ್ಡರ್ ಮಾಡಿ ಚಹಾ ಮಾಡಲು ಸಿದ್ಧನಾದ ಗ್ರಾಹಕ

    ನವದೆಹಲಿ: ಗ್ರಾಹಕರೊಬ್ಬರು ರಿಮೋಟ್ ಕಾರ್ ಆರ್ಡರ್ ಮಾಡಿದ್ದರು. ಆದರೆ ಆನ್‍ಲೈನ್‍ನಲ್ಲಿ ಬಂದಿರುವ ವಸ್ತುವನ್ನು ನೋಡಿ ಈಗ ಚಹ ಮಾಡೋದೇ ಬೆಸ್ಟ್ ಎಂದು ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ದೆಹಲಿಯ ಭಗವಾನ್ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕರೊಬ್ಬರು ಇ-ಕಾಮರ್ಸ್ ತಾಣದಲ್ಲಿ ರಿಮೋಟ್ ಕಂಟ್ರೋಲ್ ಕಾರ್ ಆರ್ಡರ್ ಮಾಡಿದ್ದರು. ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ಆಗಿದೆ. ಇದನ್ನೂ ಓದಿ:  ಶಾಪಿಂಗ್ ತಾಣಗಳಲ್ಲಿ ಫ್ಲ್ಯಾಶ್ ಸೇಲ್ ನಿಷೇಧ?

    ವಿಕ್ರಮ್ ಬುರಗೋಹೈನ್ ಎಂಬುವರಿಗೆ ಆನ್‍ಲೈನ್ ಶಾಪಿಂಗ್‍ನಿಂದ ಕೆಟ್ಟ ಅನುಭವಾಗಿದೆ. ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಅವರು ಪೋಸ್ಟ್  ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು  ರಿಮೋಟ್ ಕಂಟ್ರೋಲ್ ಕಾರು ಆರ್ಡರ್ ಮಾಡಿದ್ದೇನು. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್ ಬಂತು. ಈಗ ಚಹಾ ಮಾಡಲು ಹೋಗೋದೇ ಎಂದು ವಿಕ್ರಮ್ ಪೋಸ್ಟ್ ಹಾಕಿದ್ದಾರೆ.

    ನೀವು ರಿಮೋಟ್ ಕಾರು ಆರ್ಡರ್ ಮಾಡಿದ್ದು ನೋಡಿ ಮಕ್ಕಳಿರುವುದು ಅವರಿಗೆ ಗೊತ್ತಾಯಿತು. ಹಾಗಾಗಿ ಪಾರ್ಲೆ-ಜಿ ಕಳಿಸಿದ್ದಾರೆ ಎಂದು ಫನ್ನಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ದೂರು ನೀಡಿದ್ದೇನೆ. ಅದರಂತೆ ಕಂಪನಿ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದೆ. ಕ್ಷಮೆಯನ್ನೂ ಕೇಳಿದ್ದಾರೆ ಎಂದು ವಿಕ್ರಮ್ ಹೇಳಿದ್ದಾರೆ.

  • ಚೀನಾಗೆ ಹೊಡೆತ ನೀಡಲು ಭಾರತದ ನಡೆಯನ್ನು ಫಾಲೋ ಮಾಡಿದ ಅಮೆರಿಕ

    ಚೀನಾಗೆ ಹೊಡೆತ ನೀಡಲು ಭಾರತದ ನಡೆಯನ್ನು ಫಾಲೋ ಮಾಡಿದ ಅಮೆರಿಕ

    ವಾಷಿಂಗ್ಟನ್‌: ಆನ್‌ಲೈನ್‌ ಶಾಪಿಂಗ್‌ ವಿಚಾರದಲ್ಲಿ ಭಾರತ ಕೈಗೊಂಡ ನಿರ್ಧಾರವನ್ನು ಅಮೆರಿಕ ಈಗ ಅನುಸರಿಸಲು ಮುಂದಾಗುತ್ತಿದೆ. ಇ–ಕಾಮರ್ಸ್‌ ತಾಣಗಳ ಮೂಲಕ ಮಾರಾಟವಾಗುವ ಚೀನಾ ಉತ್ಪನ್ನಗಳು  ‌‌ಗ್ರಾಹಕರಿಗೆ ತಿಳಿಯಲು ಉತ್ಪಾದಕ ರಾಷ್ಟ್ರದ ಹೆಸರನ್ನು ಪ್ರದರ್ಶಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲು ಅಮೆರಿಕ ಮುಂದಾಗುತ್ತಿದೆ.

    ಉತ್ಪನ್ನಗಳು ಚೀನಾದಲ್ಲಿ ತಯಾರಾಗಿದ್ದರೆ ಆನ್‌ಲೈನ್‌ ಶಾಪಿಂಗ್‌ ತಾಣಗಳು ಆ ವಿವರವನ್ನು ಪ್ರದರ್ಶಿಸಬೇಕೆಂದು ಸೂಚಿಸುವ ಮಸೂದೆಯನ್ನು ರಿಪಬ್ಲಿಕನ್‌ ಪಕ್ಷದ ಮಹಿಳಾ ಸೆನೆಟರ್‌ ಮಾರ್ಥಾ ಮೆಕ್ಸಾಲಿ ಸಂಸತ್ತಿನಲ್ಲಿ ಮಂಡಿಸಿದ್ದಾರೆ.

    ಉತ್ಪಾದಕ ರಾಷ್ಟ್ರದ ಹೆಸರನ್ನು ತಿಳಿಸುವ ಸಂಬಂಧ 1930ರ ಸುಂಕ ಕಾಯ್ದೆಗೆ ತಿದ್ದುಪಡಿ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

    ಒಂದು ಉತ್ಪನ್ನದ ಬಹುದೊಡ್ಡ ಭಾಗ ಚೀನಾದಲ್ಲಿ ತಯಾರಾಗಿದ್ದಲ್ಲಿ ಇ–ಕಾಮರ್ಸ್‌ ತಾಣಗಳು ವಿವರ ನೀಡಬೇಕು. ಅಷ್ಟೇ ಅಲ್ಲದಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನ ಮತ್ತು ಅಲ್ಲಿ ಜೋಡಿಸಲ್ಪಟ್ಟ ಉತ್ಪನ್ನದ ಭಾಗಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂಬ ಅಂಶ ಮಸೂದೆಯಲ್ಲಿದೆ.

    ಅಮೆರಿಕದ ಗ್ರಾಹಕರು ನಾವು ಯಾವ ದೇಶದಿಂದ ವಸ್ತುಗಳನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ವಿಶೇಷವಾಗಿ ಚೀನಾದಿಂದ ಕೊರೊನಾ ಹರಡಿದ್ದು ಎಲ್ಲರಿಗೂ ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಪ್ರಜೆಗಳು ಖರೀದಿಸುವ ಉತ್ಪನ್ನ ಎಲ್ಲಿ ತಯಾರಾಗುತ್ತದೆ ಎಂಬುದನ್ನು ತಿಳಿಯಲು ಅರ್ಹರಾಗಿದ್ದಾರೆ ಎಂದು ಮಾರ್ಥಾ ಮೆಕ್ಸಾಲಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಅಮೆರಿಕ ಮತ್ತು ಚೀನಾ ನಡುವೆ ಈಗಾಗಲೇ ವಾಣಿಜ್ಯ ಸಮರ ಆರಂಭಗೊಂಡಿದೆ. ಈಗ ಈ ನಿರ್ಧಾರ ಕೈಗೊಳ್ಳುವ ಮೂಲಕ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

    ಭಾರತ ಏನು ಮಾಡಿದೆ?
    ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಒಂದೊಂದೆ ಮಹತ್ವವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದೆ. ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ gem.gov.in ವೆಬ್‌ಸೈಟಿನಲ್ಲಿ ಕಡ್ಡಾಯವಾಗಿ ಉತ್ಪನ್ನ ತಯಾರದ ಮೂಲ ದೇಶದ ಹೆಸರನ್ನು ಪ್ರದರ್ಶಿಸಬೇಕೆಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ಜನರಿಗೆ ಸುಲಭವಾಗಿ ತಿಳಿಯಲು ʻಮೇಕ್‌ ಇನ್‌ ಇಂಡಿಯಾʼ ವಿಭಾಗವನ್ನು ಸೇರಿಸಬೇಕು ಎಂದು ತಿಳಿಸಿದೆ. ʻಆತ್ಮನಿರ್ಭರ್‌ ಭಾರತ್‌ʼ ಮತ್ತು ʻಮೇಕ್‌ ಇನ್‌ ಇಂಡಿಯಾʼವನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

     

    ಈ ನಿರ್ಧಾರದ ಬಳಿಕ ಕೇಂದ್ರ ವಾಣಿಜ್ಯ ಸಚಿವಾಲಯ, ಇ–ಕಾಮರ್ಸ್‌ ಜಾಲತಾಣಗಳು ತಮ್ಮ ಮೂಲಕ ಮಾರಾಟವಾಗುವ ವಸ್ತುಗಳು ಯಾವ ದೇಶದವು ಎಂಬುದನ್ನು ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆಜಾನ್‌ ಕಂಪನಿಯ ಭಾರತದ ಘಟಕವು ಮಾರಾಟಕ್ಕೆ ಇಟ್ಟಿರುವ ವಸ್ತುಗಳು ಯಾವ ದೇಶದಿಂದ ಬಂದಿದೆ ಎನ್ನುವ ಮಾಹಿತಿ ನೀಡುವ ವ್ಯವಸ್ಥೆಯು ಆಗಸ್ಟ್‌ 10ರೊಳಗೆ ಜಾರಿಗೆ ಬರಬೇಕು ಎಂದು ತನ್ನ ಇ–ಮಾರುಕಟ್ಟೆ ಮೂಲಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸೂಚನೆಯನ್ನು ನೀಡಿದೆ.

  • ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಗ್ರಾಹಕರಿಗೆ ದೋಖಾ

    ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಗ್ರಾಹಕರಿಗೆ ದೋಖಾ

    ಶಿವಮೊಗ್ಗ: ಮಿಲಿಟರಿ ಅಧಿಕಾರಿ ಹೆಸರಿನಲ್ಲಿ 1.17 ಲಕ್ಷ ರೂ. ಆನ್‍ಲೈನ್ ದೋಖಾ ಮಾಡಿರುವ ಪ್ರತ್ಯೇಕ ಎರಡು ಘಟನೆಗಳು ವರದಿಯಾಗಿವೆ.

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರದ ಬೊಮ್ಮನಕಟ್ಟೆ ನಿವಾಸಿಯವರು ಮೋಸ ಹೋಗಿದ್ದು, 92 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಹಳೆಯ ಕಾರು ಖರೀದಿಸುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಗಮನಿಸಿ ಕರೆ ಮಾಡಿದ್ದಾರೆ. ಆರೋಪಿ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ ಆತ ತಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆನ್‍ಲೈನ್‍ನಲ್ಲಿ 92 ಸಾವಿರ ರೂ. ಪಾವತಿ ಮಾಡಿದ್ದಲ್ಲಿ ಕಾರನ್ನು ತಮ್ಮ ವಿಳಾಸಕ್ಕೆ ಕಳುಹಿಸುವ ಭರವಸೆ ನೀಡಿದ್ದ. ಆತನ ಮಾತನನ್ನು ನಂಬಿದ ಗ್ರಾಹಕ ಗೂಗಲ್ ಪೇ ಮೂಲಕ 92 ಸಾವಿರ ರೂ. ಹಾಕಿ ಟೋಪಿ ಹಾಕಿಸಿಕೊಂಡಿದ್ದಾರೆ.

    ಮತ್ತೊಂದು ಪ್ರಕರಣ ನಗರದ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊಸಮನೆ ಬಡಾವಣೆ ನಿವಾಸಿಯೊಬ್ಬರು ಬೈಕ್ ಕೊಳ್ಳುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಅದೇ ವೇಳೆ 25 ಸಾವಿರಕ್ಕೆ ಡಿಯೋ ಬೈಕ್ ಮಾರಾಟಕ್ಕೆ ಇದೆ ಎಂಬ ಜಾಹೀರಾತು ನೋಡಿದ್ದರು. ಆ ಬೈಕ್ ಇಷ್ಟವಾಗಿದ್ದಕ್ಕೆ ಜಾಹೀರಾತಿನಲ್ಲಿದ್ದ ಬೈಕಿನ ಮಾಲೀಕರಿಗೆ ಕರೆ ಮಾಡಿದ್ದರು.

    ಈತ ಕೂಡ ತಾನು ಮಿಲಿಟರಿ ಅಧಿಕಾರಿ ಎಂದು ಗ್ರಾಹಕರ ಜೊತೆ ಪರಿಚಯ ಮಾಡಿಕೊಂಡಿದ್ದ. ಮಿಲಿಟರಿ ಅಧಿಕಾರಿ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಗ್ರಾಹಕ ಗೂಗಲ್ ಪೇ ಮೂಲಕ 25 ಸಾವಿರ ರೂ. ಹಣ ಹಾಕಿದ್ದಾರೆ. ಆದರೆ ಬೈಕ್ ಬೇಕಾದರೆ ಮತ್ತೊಮ್ಮೆ ಹಣ ಪಾವತಿಸುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಹೀಗಾಗಿ ತಾನು ಮೋಸ ಹೋಗಿರುವುದಾಗಿ ಅರಿತ ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದಾನೆ.

    ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಕೆಲವರು ಆನ್‍ಲೈನ್‍ನಲ್ಲಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರು ಆನ್‍ಲೈನ್‍ನಲ್ಲಿ ವಸ್ತುಗಳನ್ನು ಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಹಾಗೂ ಮೋಸ ಹೋಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • 388 ರೂ. ನೈಲ್‍ ಪಾಲಿಶ್‍ಗಾಗಿ 92,446 ರೂ. ಕಳ್ಕೊಂಡ ಟೆಕ್ಕಿ

    388 ರೂ. ನೈಲ್‍ ಪಾಲಿಶ್‍ಗಾಗಿ 92,446 ರೂ. ಕಳ್ಕೊಂಡ ಟೆಕ್ಕಿ

    – ಮೊಬೈಲ್ ನಂಬರ್ ಕೊಟ್ಟಿದ್ದೇ ತಪ್ಪಾಯ್ತು

    ಮುಂಬೈ: ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ನಿಂದ 388 ರೂಪಾಯಿಯ ನೈಲ್‍ ಪಾಲಿಶ್‍ ಆರ್ಡರ್ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್ ಸುಮಾರು 92,446 ರೂ.ಗಳನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಕಳೆದ ವರ್ಷ ಡಿಸೆಂಬರಿನಲ್ಲಿ ನಡೆದಿದೆ. ಶನಿವಾರ ಸಂತ್ರಸ್ತೆ ವಕಾಡ್ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಇಬ್ಬರ ವಿರುದ್ಧ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಸನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಡಿಸೆಂಬರ್ 17 ರಂದು ಟೆಕ್ಕಿ ತನ್ನ ಮೊಬೈಲ್ ಮೂಲಕ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ನಲ್ಲಿ ನೈಲ್‍ ಪಾಲಿಶ್‍ ಆರ್ಡರ್ ಮಾಡಿದ್ದಾರೆ. ಅದಕ್ಕಾಗಿ ಟೆಕ್ಕಿ ತನ್ನ ಬ್ಯಾಂಕ್ ಖಾತೆಯಿಂದ 388 ರೂ. ಮೊತ್ತವನ್ನು ಖಾಸಗಿ ಬ್ಯಾಂಕ್ ಖಾತೆಗೆ ಕಳುಹಿಸಿದ್ದಾರೆ. ಆದರೆ ನೈಲ್‍ ಪಾಲಿಶ್‍ ನಿಗದಿ ಪಡಿಸಿದ್ದ ದಿನದಂದು ಬಂದಿರಲಿಲ್ಲ. ಹೀಗಾಗಿ ಡೆಲಿವರಿ ನಿಧಾನವಾದ ಬಗ್ಗೆ ವಿಚಾರಿಸಲು ಟೆಕ್ಕಿ ಶಾಪಿಂಗ್ ವೆಬ್‍ಸೈಟ್‍ನ ಕಸ್ಟಮರ್ ಕೇರಿಗೆ  ಫೋನ್ ಮಾಡಿದ್ದಾರೆ.

    ಈ ವೇಳೆ ಕಸ್ಟಮರ್ ಕೇರಿನ ಕಾರ್ಯನಿರ್ವಾಹಕರಾಗಿ ಮಾತನಾಡಿದ ವ್ಯಕ್ತಿ, ನಮಗೆ ಯಾವುದೇ ಹಣ ಪಾವತಿಯಾಗಿಲ್ಲ. ಒಂದು ವೇಳೆ ನೀವು ಹಣ ಪಾವತಿಸಿದ್ದರೆ ಅದನ್ನು ಹಿಂದಿರುಗಿಸುತ್ತೇನೆ ಎಂದು ಹೇಳಿ ಆಕೆಯ ಮೊಬೈಲ್ ನಂಬರ್ ಕೇಳಿದ್ದಾನೆ. ಇದನ್ನು ನಂಬಿದ ಟೆಕ್ಕಿ ಆತನಿಗೆ ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೊಬೈಲ್ ನಂಬರ್ ಕೊಟ್ಟ ಕೆಲವು ನಿಮಿಷಗಳಲ್ಲಿ ಟೆಕ್ಕಿಯ ಎರಡೂ ಬ್ಯಾಂಕ್ ಖಾತೆಗಳಿಂದ ಐದು ವಹಿವಾಟುಗಳು ನಡೆದಿದ್ದವು. ಒಟ್ಟು 90,946 ರೂ. ನಂತರ ಅವರ ಸಾರ್ವಜನಿಕ ವಲಯದ ಬ್ಯಾಂಕ್ ಖಾತೆಯಿಂದ 1,500 ರೂ ಹಣ ಕಟ್ ಆಗಿತ್ತು. ಹೀಗಾಗಿ ಟೆಕ್ಕಿ ಖಾತೆಯಿಂದ ಒಟ್ಟಾಗಿ 92,446 ರೂ.ಗಳನ್ನು ಕಟ್ ಆಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಟೆಕ್ಕಿ ತನ್ನ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರಿಗೂ ತಿಳಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.