Tag: Online Prasad

  • ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮೈಸೂರು ಚಾಮುಂಡೇಶ್ವರಿ, ಕಟೀಲು ದುರ್ಗಾಪರಮೇಶ್ವರಿಯ ಪ್ರಸಾದ!

    ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮೈಸೂರು ಚಾಮುಂಡೇಶ್ವರಿ, ಕಟೀಲು ದುರ್ಗಾಪರಮೇಶ್ವರಿಯ ಪ್ರಸಾದ!

    – ಮುಜರಾಯಿ ದೇವಸ್ಥಾನಗಳ ಇ-ಪ್ರಸಾದಕ್ಕೆ ಫುಲ್ ಡಿಮ್ಯಾಂಡ್
    – ಮತ್ತಷ್ಟು ದೇವಾಲಯಗಳ ಸೇರ್ಪಡೆಗೆ ನಿರ್ಧಾರ

    ಬೆಂಗಳೂರು: ಮುಜರಾಯಿ ಇಲಾಖೆಯ (Department Of Muzrai) ಇ-ಪ್ರಸಾದ (E-Prasad) ಯೋಜನೆಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಇನ್ನಷ್ಟು ದೇವಾಲಯಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಮನೆಮನೆಗೂ ತಲುಪಿಸಲು ಇಲಾಖೆ ಮುಂದಾಗಿದೆ.

    ಇತ್ತೀಚಿಗಷ್ಟೇ ಮುಜರಾಯಿ ಇಲಾಖೆ ದೇವಸ್ಥಾನಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಎಲ್ಲರ ಮನೆಗೆ ತಲುಪಿಸುವ `ಇ-ಪ್ರಸಾದ’ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದರು. ಈ ಯೋಜನೆಗೆ ರಾಜ್ಯದ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಏಳು ದೇವಸ್ಥಾನಗಳ ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿದೆ.

    ಕಾಮನ್ ಸರ್ವಿಸ್ ಸೆಂಟರ್‌ಗಳಿಂದ ಜನರು ಬುಕ್ ಮಾಡುತ್ತಿದ್ದು, ಯೋಜನೆ ಲೋರ್ಕಾಪಣೆಯಾದ ಬಳಿಕ ಇದುವರೆಗೂ 10 ಸಾವಿರ ಮಂದಿ ಪ್ರಸಾದವನ್ನು ಬುಕ್ ಮಾಡಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದವರು ಕೂಡ ಬುಕ್ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ 14 ದೇವಸ್ಥಾನಗಳಲ್ಲಿ ಜಾರಿ ಮಾಡಲಾಗಿತ್ತು. ಈಗ ಮತ್ತಷ್ಟು ದೇವಸ್ಥಾನಗಳನ್ನು ಈ ಯೋಜನೆಗೆ ಸೇರಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.ಇದನ್ನೂ ಓದಿ: ಡಿವೋರ್ಸ್‌ ಬಳಿಕ ಪತ್ನಿಗೆ ಜೀವನಾಂಶ ಹೊಂದಿಸಲು ದರೋಡೆಗೆ ಯತ್ನ – ಮಾಜಿ ಪತಿ ಸೇರಿ ಮೂವರು ಅರೆಸ್ಟ್‌

    ಯಾವ ದೇವಸ್ಥಾನಗಳ ಪ್ರಸಾದಕ್ಕೆ ಬೇಡಿಕೆ ಹೆಚ್ಚು?
    1. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
    2. ನಂಜನಗೂಡು ದೇವಸ್ಥಾನ
    3 ರೇಣುಕಾ ಯಲ್ಲಮ್ಮ
    4. ದತ್ತಾತ್ರೇಯ ದೇವಸ್ಥಾನ
    5. ಹುಲಿಗೆಮ್ಮ ದೇವಸ್ಥಾನ
    6. ಬೆಂಗಳೂರಿನ ದೊಡ್ಡ ಗಣಪತಿ ಟೆಂಪಲ್
    7. ಕೊಲ್ಲೂರು ಮೂಕಾಂಬಿ ದೇವಸ್ಥಾನ

    ಹೊಸದಾಗಿ ಸೇರ್ಪಡೆಗೊಳ್ಳಲಿರುವ ದೇವಸ್ಥಾನಗಳು:
    1. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ
    2. ಕಟೀಲು ದುರ್ಗಾಪರಮೇಶ್ವರಿ
    3. ಘಾಟಿ ಸುಬ್ರಮಣ್ಯ
    4. ಮಂಗಳೂರಿನ ಸೌತಡ್ಕ ಗಣಪತಿ. ಇದನ್ನೂ ಓದಿ: Breaking | ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ