Tag: Online Order

  • ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಬೆಂಗಳೂರು: ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದ ಹಿಡಿದು ಎಲ್ಲವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುವವರಿಗೆ ಡೆಲಿವರಿ ಆ್ಯಪ್‌ಗಳು (Delivery App) ಶಾಕ್ ನೀಡೋಕೆ ಮುಂದಾಗಿವೆ.

    ಹೌದು, ಬೆಳಿಗ್ಗೆ ತಿಂಡಿಗೆ ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದಿಡಿದು ರಾತ್ರಿ ಸೌತ್, ನಾರ್ಥ್ ಮೀಲ್ಸ್, ಚಿಕನ್, ಮಟನ್ ಸೇರಿದಂತೆ ಬೇಕಾದ ಎಲವನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡ್ಕೊಂಡು ಸವಿಯುತ್ತಿದ್ದಾರೆ. ಅಂತಹ ಸಿಲಿಕಾನ್ ಸಿಟಿ ಜನರಿಗೆ ಆನ್‌ಲೈನ್ ಕಂಪನಿಗಳು ಶಾಕ್ ನೀಡಲು ಮುಂದಾಗಿವೆ. ಅದಲ್ಲದೇ ಹೋಟೆಲ್ ಮಾಲೀಕರು ಕೂಡ ಆನ್‌ಲೈನ್ ಸಂಸ್ಥೆಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ – 20 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

    ಡೆಲಿವರಿ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡಲು ಸಜ್ಜಾಗಿದೆ. ಸ್ವಿಗ್ಗಿ, ಜೊಮೊಟೊ ಸೇರಿದಂತೆ ಫುಡ್ ಡೆಲಿವರಿ ಆಪ್‌ಗಳು ಫ್ಲಾಟ್‌ಫಾರಂ ಚಾರ್ಜ್ ಹೆಚ್ಚು ಮಾಡಲು ಮುಂದಾಗಿದೆ. ಈಗಾಗಲೇ ಆನ್‌ಲೈನ್ ಡೆಲಿವರಿ ಆಪ್‌ಗಳು ಡೆಲಿವರಿ ಚಾರ್ಜ್ ಎಂದು ಹಣವನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ವರ್ಷದಿಂದ ಫ್ಲಾಟ್ ಫಾರಂ ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದರು. 2 ರಿಂದ 3 ರೂ. ಇದ್ದ ದರ ಇದೀಗ 12 ರಿಂದ 15 ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಸ್ವಿಗ್ಗಿ ಫ್ಲಾಟ್‌ಫಾರಂ ಚಾರ್ಜ್ 12 ರೂ., ಜೊಮಾಟೊ 15 ರು.ಗೆ ಏರಿಕೆ ಆಗಲಿದೆ.

    ಇನ್ನೂ ಹಬ್ಬಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ. ಅಲ್ಲದೆ ಈ ಕಂಪನಿಗಳು ಊಟ, ತಿಂಡಿಯನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ, ಶೇಕಡ 18ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ ಅದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ. ಜೊತೆಗೆ ಸಂಸ್ಥೆಗಳ ಪ್ಲಾಟ್‌ಫಾರಂ ಚಾರ್ಜ್ ಕೂಡ ಹೆಚ್ಚು ಮಾಡ್ತಿದೆ. ಇದಕ್ಕೆ ಹೋಟೆಲ್ ಮಾಲೀಕರು ನಾವು ಆನ್‌ಲೈನ್ ಸಂಸ್ಥೆಗೆ ಮನವಿ ಮಾಡಿದರೂ ಉಪಯೋಗ ಆಗ್ತಿಲ್ಲ, ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಹೋಂ ಡೆಲಿವರಿ ತೆಗೆದುಕೊಳ್ಳಬೇಕಾಗಿತ್ತು. ಈಗ ಅಂತಹ ಸ್ಥಿತಿ ಕೂಡ ಇಲ್ಲ, ಹೋಮ್ ಡೆಲಿವರಿ ಮಾಡಿಸಿಕೊಳ್ಳೊದ್ರಿಂದ ಊಟದ ತಾಜತನ, ಬಿಸಿ ಕೂಡ ಇರೋಲ್ಲ, ಹೋಟೆಲ್‌ಗೆ ಬನ್ನಿ, ಅಲ್ಲೇ ಊಟ ಮಾಡಿ, ಹಣ ಕೂಡ ಉಳಿಸಿಕೊಳ್ಳಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಫ್ಲಾಟ್‌ಫಾರಂ ಚಾರ್ಜ್ ಹೆಸರಲ್ಲಿ ಕಳೆದ ವರ್ಷದಿಂದ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಹೊರೆ ಹಾಕಲು ಮುಂದಾಗಿದ್ದ ಈ ಆನ್‌ಲೈನ್ ಕಂಪನಿಗಳು, ಇದೀಗ ದೊಡ್ಡಮಟ್ಟದಲ್ಲಿ ಹೊರೆ ಹಾಕಲು ಮುಂದಾಗಿವೆ. ಇದರಿಂದ ಗ್ರಾಹಕರು ಮಾತ್ರವಲ್ಲ, ಹೋಟೆಲ್ ಮಾಲೀಕರು ಕೂಡ ಆಕ್ರೋಶ ವ್ಯಕ್ತಪಡಸ್ತಿದ್ದಾರೆ.ಇದನ್ನೂ ಓದಿ: ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

  • ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

    ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

    ಬೆಂಗಳೂರು: ಗೇಮಿಂಗ್ ಆಡಲು ಬಳಕೆ ಮಾಡುವ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದ ಯುವತಿ, ಬಾಕ್ಸ್‌ ಓಪನ್‌ ಮಾಡುತ್ತಿದ್ದಂತೆ ಶಾಕ್‌ ಆಗಿದ್ದಾರೆ. ತಾವು ಮಾಡಿದ್ದ ಆರ್ಡರ್‌ ಬಾಕ್ಸ್‌ನಲ್ಲಿ ಹಾವು ನೋಡಿ ಯುವತಿ ಬೆಚ್ಚಿಬಿದ್ದ ಘಟನೆ ನಗರದಲ್ಲಿ ನಡೆದಿದೆ.

    ಸರ್ಜಾಪುರದಲ್ಲಿ ವಾಸವಾಗಿರುವ ಯುವತಿ ಎರಡು ದಿನದ ಹಿಂದೆ ಎಕ್ಸ್‌ಬಾಕ್ಸ್‌ ಕಂಟ್ರೋಲರ್‌ (Xbox Controller) ಆರ್ಡರ್‌ ಮಾಡಿದ್ದರು. ಆರ್ಡರ್ ತಲುಪಿದ ಕೆಲ ನಿಮಿಷದಲ್ಲಿ ಬಾಕ್ಸ್ ಓಪನ್ ಮಾಡಿದ್ದಾರೆ. ತಕ್ಷಣ ಒಳಗಡೆ ಇದ್ದ ಹಾವು ಹೊರಬಂದಿದೆ. ಇದರಿಂದ ಯುವತಿ ಬೆಚ್ಚಿಬಿದ್ದಿದ್ದಾರೆ. ಆನ್‌ಲೈನ್‌ ಡೆಲಿವರಿ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!

    ಅದೃಷ್ಟವಶಾತ್, ವಿಷಪೂರಿತ ಹಾವು ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿತ್ತು. ಇದರಿಂದ ಬಾಕ್ಸ್‌ ಓಪನ್‌ ಮಾಡಿದ ಯುವತಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆಘಾತದ ಹೊರತಾಗಿಯೂ, ಅವರು ಘಟನೆಯ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    ಅರ್ಧ ತೆರೆದಿರುವ ಆನ್‌ಲೈನ್‌ ಡೆಲಿವರಿ ಪ್ಯಾಕೇಜ್ ಅನ್ನು ಬಕೆಟ್‌ನಲ್ಲಿ ಇರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಬಕೆಟ್‌ ಒಳಗೆ ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಇದನ್ನೂ ಓದಿ: ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ – ಆ ಒಂದು ಕ್ಷಣ ಮಿಸ್ ಆಗಿದ್ರೆ ಏನಾಗ್ತಿತ್ತು?

    ಈ ಹಾವು ಸ್ಪೆಕ್ಟಾಕಲ್ಡ್ ಕೋಬ್ರಾ ಎಂದು ಗುರುತಿಸಲಾಗಿದೆ. ಇದು ಕರ್ನಾಟಕಕ್ಕೆ ಸ್ಥಳೀಯವಾಗಿರುವ ಅತ್ಯಂತ ವಿಷಕಾರಿ ಹಾವಿನ ಜಾತಿಯಾಗಿದೆ. ಅದನ್ನು ಸೆರೆಹಿಡಿದು ನಂತರ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.

  • ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ನ್ಯೂಯಾರ್ಕ್: ಆನ್‌ಲೈನ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್‌ ಆಗಿದ್ದಾರೆ.

    ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಶನ್ ಸೈಟ್ ಡೆಪಾಪ್‌ನಲ್ಲಿ ಮಹಿಳೆ ಜೀನ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಬ್ಯಾಗ್‌ ತುಂಬಾ ಈರುಳ್ಳಿ ಪಾರ್ಸೆಲ್‌ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹಿಳೆ, ಮಾರಾಟಗಾರರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾರೆ. ಅವರು ಕೂಡ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ. ಈರುಳ್ಳಿ ಹೇಗೆ ಬಂತು ಎಂಬುದು ನಮಗೂ ಗೊತ್ತಿಲ್ಲ ಎಂದು ಮಹಿಳೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ

    ಘಟನೆ ಕುರಿತು ಮಹಿಳೆ ಮಾರಾಟಗಾರರೊಂದಿಗೆ ತನ್ನ ಚಾಟ್‌ನ ತುಣುಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನಾನು ಆರ್ಡರ್ ಮಾಡಿದ ಜೀನ್ಸ್‌ ಬದಲಿಗೆ ಈರುಳ್ಳಿ ಇರುವ ಪಾರ್ಸೆಲ್ ಏಕೆ ಬಂದಿದೆ?” ಎಂದು ಮಾರಾಟಗಾರರನ್ನು ಮಹಿಳೆ ಪ್ರಶ್ನಿಸಿದ್ದಾರೆ. “ಈ ಬಗ್ಗೆ ನಮಗೂ ಗೊಂದಲವಿದೆ. ತಪ್ಪಾದ ಆರ್ಡರ್‌ ಬಂದಿರುವುದಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ಮಾರಾಟಗಾರ ಪ್ರತಿಕ್ರಿಯಿಸಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ಪೋಸ್ಟ್‌ಗೆ ಕೆಲವರು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇದು ತುಂಬಾ ತಮಾಷೆಯಾಗಿದೆ” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. “ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್‌” ಎಂದು ಮತ್ತೊಬ್ಬರು ಕಾಮೆಂಟ್‌ ಹಾಕಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    Live Tv
    [brid partner=56869869 player=32851 video=960834 autoplay=true]

  • ಅಗ್ಗದ ಐಫೋನ್‍ಗೆ ಮರುಳಾಗಿ 20 ಸಾವಿರ ಹಣ ಕಳೆದುಕೊಂಡ

    ಅಗ್ಗದ ಐಫೋನ್‍ಗೆ ಮರುಳಾಗಿ 20 ಸಾವಿರ ಹಣ ಕಳೆದುಕೊಂಡ

    ಹುಬ್ಬಳ್ಳಿ: ಫೇಸ್‍ಬುಕ್ ನಲ್ಲಿ ಅಗ್ಗದ ಐಫೋನ್ ಜಾಹೀರಾತು ನೋಡಿ ವ್ಯಕ್ತಿಯೊಬ್ಬ ಆರ್ಡರ್ ಮಾಡುವ ಮೂಲಕ 20 ಸಾವಿರ ವಂಚನೆಗೆ ಒಳಗಾಗಿದ್ದಾನೆ. ಆನ್‍ಲೈನ್‍ನಲ್ಲಿ ಐಪ್ಯಾಡ್, ಐವಾಚ್, ಐಫೋನ್ ಆರ್ಡರ್ ಮಾಡಿದ ವ್ಯಕ್ತಿಗೆ ಕೊರಿಯರ್ ಹಾಗೂ ರಿಜಿಸ್ಟ್ರೇಷನ್ ಶುಲ್ಕದ ನೆಪದಲ್ಲಿ ಆನ್‍ಲೈನ್ ಕಳ್ಳ 20 ಸಾವಿರ ಪಡೆದು ವಂಚಿಸಿದ್ದಾನೆ.

    ಧಾರವಾಡದ ಪವನಕುಮಾರ್ ವಂಚನೆಗೆ ಒಳಗಾಗಿದ್ದು, ಪವನಕುಮಾರ್ ಅವರು ಮೊಬೈಲ್ ನಲ್ಲಿ ಫೇಸ್‍ಬುಕ್ ನೋಡುತ್ತಿದ್ದಾಗ ಬ್ಲಿಂಕ್ ಆಗುತ್ತಿದ್ದ, `ಐ ಫೋನ್ ಅಟ್ ಚೀಪೆಸ್ಟ್ ಪ್ರೈಸ್’ ಎಂಬ ಜಾಹೀರಾತು ಲಿಂಕ್ ಓಪನ್ ಮಾಡಿದ್ದಾರೆ. ಅಲ್ಲಿದ್ದ ಮೊಬೈಲ್ ಸಂಖ್ಯೆ ಪಡೆದು ವಾಟ್ಸಪ್ ಮೂಲಕ ಅಪರಿಚಿತನೊಂದಿಗೆ ಚಾಟ್ ಮಾಡಿ ಐಪ್ಯಾಡ್, ಐವಾಚ್, ಐಫೋನ್ ಹಾಗೂ ಇಯರ್ ಫೋನ್‍ಗೆ ಆರ್ಡರ್ ಮಾಡಿದ್ದಾರೆ.

    ಆರ್ಡರ್ ಬಳಿಕ, ಉತ್ಪನ್ನಗಳ ಕೊರಿಯರ್ ಹಾಗೂ ನೋಂದಣಿ ಶುಲ್ಕವಾಗಿ ಪಾವತಿಸಬೇಕು ಎಂದು ಅಪರಿಚಿತ ಹೇಳಿದ್ದಾನೆ. ಪವನಕುಮಾರ್ ನೀಡಿದ ಮಾಹಿತಿ ಮೇರೆಗೆ, ಅವರ ಕೆನರಾ ಮತ್ತು ಎಸ್‍ಬಿಐ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 5 ಸಾವಿರ ಮತ್ತು 15 ಸಾವಿರ ಸೇರಿ, ಒಟ್ಟು 20 ಸಾವಿರವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ನಂತರ ಉತ್ಪನ್ನಗಳನ್ನು ಡೆಲಿವರಿ ಮಾಡದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    – ವೀಕೆಂಡ್ ಪಾರ್ಟಿಗೆ ಮದ್ಯಕ್ಕೆ ಆರ್ಡರ್
    – ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದ ಟೆಕ್ಕಿ
    – ಮದ್ಯ ನಿಷೇಧದಂದೇ ಪೇಚಿಗೆ ಸಿಲುಕಿದ ಮಹಿಳೆ

    ಪುಣೆ: ಅಯೋಧ್ಯೆ ತೀರ್ಪಿನಂದು ದೇಶಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಮಹಿಳಾ ಟೆಕ್ಕಿಯೊಬ್ಬರು ಮದ್ಯವನ್ನು ಆನ್ ಲೈನ್‍ನಲ್ಲಿ ಆರ್ಡರ್ ಮಾಡಿ ಸುಮಾರು 51 ಸಾವಿರ ಕಳೆದುಕೊಂಡಿದ್ದಾರೆ.

    ಹೌದು. ಕೋಲ್ಕತ್ತಾದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 32 ವರ್ಷದ ಮಹಿಳೆ 50,778 ರೂ. ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದರು. ಆ ದಿನ ಮಾಮೂಲಿ ದಿನಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಇದ್ದರೂ ಮಹಿಳೆ ಆರ್ಡರ್ ಮಾಡಿಯೇ ಬಿಟ್ಟಿದ್ದಾರೆ.

    ಸುಮಾರು 4 ದಿನಗಳ ಹಿಂದೆ ಟೆಕ್ಕಿ ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದರು. ಈ ವೇಳೆ ಗೆಳೆಯ-ಗೆಳತಿಯನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಇದೆ ಪಾರ್ಟಿ ಮಾಡೋಣವೆಂದು ನಿರ್ಧಾರ ಮಾಡಿದರು. ಆದರೆ ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪುಣೆಯ ಜಿಲ್ಲಾಧಿಕಾರಿ ಶನಿವಾರ ಹಾಗೂ ಭಾನುವಾರ ಮದ್ಯ ಮಾರಾಟ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು.

    ಇದರಿಂದ ಏನು ಮಾಡುವುದೆಂದು ಯೋಚನೆ ಮಾಡಿದ ಟೆಕ್ಕಿಗೆ ಒಂದು ಉಪಾಯ ಹೊಳೆದಿದೆ. ಅದೇ ಆನ್ ಲೈನ್ ಆರ್ಡರ್. ಕೂಡಲೇ ಟಿಕ್ಕಿ, ಹಲವು ಮದ್ಯದಂಗಡಿಗಳಿಗೆ ಕರೆ ಮಾಡಿದ್ದಾರೆ. ಆದರೆ ಎಲ್ಲರೂ ಟೆಕ್ಕಿಗೆ ಮದ್ಯ ನೀಡಲು ನಿರಾಕರಿಸಿದರು. ಇದರಿಂದ ಟೆಕ್ಕಿ ಬೇಸರಗೊಂಡಿದ್ದರು. ಇದೇ ವೇಳೆ ಶನಿವಾರ ಟೆಕ್ಕಿಗೆ ಇಂಟರ್ನೆಟ್ ನಲ್ಲಿ ಒಂದು ಫೋನ್ ನಂಬರ್ ಸಿಕ್ಕಿದೆ. ಕೂಡಲೇ ಆಕೆ ಆ ನಂಬರಿಗೆ ಕರೆ ಮಾಡಿದರು. ಆ ಕಡೆ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ, ಮನೆಗೆ ಮದ್ಯ ತಂದು ಕೊಡಲು ಒಪ್ಪಿಕೊಂಡಿದ್ದಾನೆ.

    ಅಂತೆಯೇ ವ್ಯಕ್ತಿಯು ಟೆಕ್ಕಿ ಬಳಿ ಓಟಿಪಿ ಕಳುಹಿಸುವಂತೆ ಹೇಳಿದ್ದಾನೆ. ಟೆಕ್ಕಿಯೂ ಆತನನ್ನು ನಂಬಿ ತನಗೆ ಬಂದ ಒಟಿಪಿ ನಂಬರ್ ಕಳುಹಿಸಿದ್ದಾರೆ. ಇದಾದ ಕೆಲಸ ನಿಮಿಷಗಳಲ್ಲಿ ಮಹಿಳೆಯ ಬ್ಯಾಂಕ್ ಅಕೌಂಟಿನಿಂದ 31,777 ರೂ. ವಿಥ್‍ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಟೆಕ್ಕಿ, ಕೂಡಲೇ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆಗ ಆತ ಗಾಬರಿಯಾಗಬೇಡಿ ನಿಮ್ಮ ಹಣ ಮತ್ತೆ ನಿಮಗೆ ಕ್ರೆಡಿಟ್ ಆಗುತ್ತೆ. ಅದಕ್ಕಾಗಿ ನೀವು ಮತ್ತೊಮ್ಮೆ ಓಟಿಪಿ ನಂಬರ್ ಕಳುಹಿಸಿ ಎಂದಿದ್ದಾನೆ.

    ಟೆಕ್ಕಿ ಮತ್ತೆ ಓಟಿಪಿ ನಂಬರ್ ಕಳುಹಿಸಿದ್ದಾರೆ. ಈ ವೇಳೆ ಟೆಕ್ಕಿ ಮತ್ತೆ ತನ್ನ ಅಕೌಂಟಿನಿಂದ 19,001 ರೂ. ಕಳೆದುಕೊಂಡರು. ಇದರಿಂದ ಮತ್ತೆ ಗಾಬರಿಗೊಂಡ ಟೆಕ್ಕಿ, ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಆತನನ್ನು ಸಂಪರ್ಕಿಸಲು ಟೆಕ್ಕಿಗೆ ಸಾಧ್ಯವಾಗಲಿಲ್ಲ.

    ಈ ಹಿನ್ನೆಲೆಯಲ್ಲಿ ಮಹಿಳಾ ಟೆಕ್ಕಿ ಕೂಡಲೇ ಹಿಂಜೇವಾಡಿ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

  • ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಕೋಲ್ಕತ್ತಾ: ದೀಪಾವಳಿ ಹಬ್ಬದ ಪ್ರಯುಕ್ತ ಫೋನ್ ಆರ್ಡರ್ ಮಾಡಿದ ಸಂಸದರೊಬ್ಬರಿಗೆ ಆನ್‍ಲೈನ್ ಸಂಸ್ಥೆ ಎರಡು ಕಲ್ಲನ್ನು ಕಳುಹಿಸಿದೆ.

    ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರು ದೀಪಾವಳಿ ಹಬ್ಬಕ್ಕೆಂದು ಇ-ಕಾಮರ್ಸ್ ಎಂಬ ಆನ್‍ಲೈನ್ ಕಂಪನಿಯ ಮೂಲಕ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಫೋನಿನ ಬದಲು ಅವರಿಗೆ ಎರಡು ಕಲ್ಲನ್ನು ಪಾರ್ಸೆಲ್ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುರ್ಮು ಅವರು ಸೋಮವಾರ ಬೆಳಗ್ಗೆ ಪಾರ್ಸೆಲ್ ಬಂದಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಹೆಂಡತಿ ಪಾರ್ಸೆಲ್ ಪಡೆದು 11,999 ರೂ ಕ್ಯಾಶ್ ನೀಡಿದ್ದಾಳೆ. ನಂತರ ನಾನು ಮನೆಗೆ ಬಂದು ಬಾಕ್ಸ್ ತರೆದು ನೋಡಿದಾಗ ಅಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು. ವಿಶೇಷವೆಂದರೆ ನಾವು ಸ್ಯಾಮ್ಸಂಗ್ ಮೊಬೈಲ್ ಬುಕ್ ಮಾಡಿದರೆ ಅವರು ರೆಡ್‍ಮಿ ಮೊಬೈಲ್ ಬಾಕ್ಸ್ ನಲ್ಲಿ ಕಲ್ಲನ್ನು ಪಾರ್ಸೆಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ನಾನು ಯಾವತ್ತು ಆನ್‍ಲೈನ್ ಅಲ್ಲಿ ವ್ಯಾಪಾರ ಮಾಡಿದ ವ್ಯಕ್ತಿ ಅಲ್ಲ. ಆದರೆ ಇದನ್ನು ನನ್ನ ಮಗ ನನಗಾಗಿ ಬುಕ್ ಮಾಡಿದ್ದ. ಆದರೆ ನಾವು ತೆಗೆಯುವ ಮುಂಚೆಯೇ ಯಾರೋ ಬಾಕ್ಸ್ ಓಪನ್ ಮಾಡಿದ್ದಾರೆ. ಬೇಕೆಂದೆ ಎರಡು ಕಲ್ಲು ಇಟ್ಟುಕೊಟ್ಟಿದ್ದಾರೆ. ಈ ಸಂಬಂಧ ನಾನು ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ವಿಷಯವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ವರದಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮಾಲ್ಡಾ ಠಾಣೆಯ ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ, ಇದು ಸಂಸ್ಥೆಯಿಂದ ಆಗಿರುವ ಸಮಸ್ಯೆ ಅಲ್ಲ. ಇದರ ಮಧ್ಯೆ ಯಾರೋ ಬೇಕಂತಲೇ ಹೀಗೆ ಮಾಡಿದ್ದಾರೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.