Tag: Online food

  • ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    – ತಂದೆ, ತಾಯಿ ಕೂಡ ಅಸ್ವಸ್ಥ

    ಬೆಂಗಳೂರು: ನಗರದ ಕೆಪಿ ಅಗ್ರಹಾರದಲ್ಲಿ (KP Agrahara) ತಂದೆ, ತಾಯಿ ಅಸ್ವಸ್ಥರಾಗಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು ಈ ಸ್ಥಿತಿಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.

    ವಿನಯ್ (6) ಮೃತ ಮಗು. ಕೇಕ್ ತಿಂದು ಮಂಗಳವಾರ ತೀವ್ರವಾಗಿ ಅಸ್ವಸ್ಥಗೊಂಡು, ಇಂದು ಬೆಳಗ್ಗೆ ಸಾವನ್ನಪ್ಪಿದೆ.ಇದನ್ನೂ ಓದಿ: Uttar Pradesh | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ – ಐವರು ಸಜೀವ ದಹನ

    ಕುಟುಂಬದಲ್ಲಿ ನಾಲ್ವರು ಇದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮನೆಯಲ್ಲಿ ಮೂವರೇ ಇದ್ದ ಕಾರಣ ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ಕೇಕ್ ತರಿಸಿದ್ದರು. ಕೇಕ್ ತಿಂದ ಬಳಿಕ ಮಗು ತೀವ್ರವಾಗಿ ಅಸ್ವಸ್ಥಗೊಂಡು, ಬೆಳಿಗ್ಗೆ ಅಷ್ಟರಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ತಂದೆ, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಕಿಮ್ಸ್ ವೈದ್ಯರು ದೇಹದ ಇತರೆ ಭಾಗಗಳನ್ನು ಪರೀಕ್ಷೆಗೆ ಒಳಪಡಿಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

  • ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಬಂದಿದ್ದು ನಾನ್ ವೆಜ್ ಬಿರಿಯಾನಿ – ರೆಸ್ಟೋರೆಂಟ್ ಮಾಲೀಕ ಅರೆಸ್ಟ್

    ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಬಂದಿದ್ದು ನಾನ್ ವೆಜ್ ಬಿರಿಯಾನಿ – ರೆಸ್ಟೋರೆಂಟ್ ಮಾಲೀಕ ಅರೆಸ್ಟ್

    ನವದೆಹಲಿ: ಆನ್‌ಲೈನ್‌ನಲ್ಲಿ ವೆಜ್ ಬಿರಿಯಾನಿ (Veg Biriyani) ಆರ್ಡರ್ ಮಾಡಿದ್ದಕ್ಕೆ ನಾನ್ ವೆಜ್ ಬಿರಿಯಾನಿ (Non Veg Biriyani) ಬಂದಿರುವ ಘಟನೆ ಉತ್ತರ ಪ್ರದೇಶ (Uttar Pradesh) ಗ್ರೇಟರ್ ನೋಯ್ಡಾದಲ್ಲಿ (Greater Noida) ನಡೆದಿದೆ.

    ಏ.4 ರಂದು ರಾತ್ರಿ ಗ್ರೇಟರ್ ನೋಯ್ಡಾ ವೆಸ್ಟ್‌ನ ಸೆಕ್ಟರ್ 1ರ ಅರಿಹಂತ್ ಆರ್ಡೆನ್ ನಿವಾಸಿ ಛಾಯಾ ಶರ್ಮಾ ಎಂಬವರು ಆನ್‌ಲೈನ್‌ನಲ್ಲಿ ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಆದರೆ ಅವರ ಆರ್ಡರ್‌ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಉಗ್ರ ಕಸಬ್‌ಗೆ ಬಿರಿಯಾನಿ ತಿನ್ನಿಸಿದ್ದನ್ನ ಮರೆತಿಲ್ಲ – ಕಾಂಗ್ರೆಸ್‌ ವಿರುದ್ಧ ಪಿಯೂಷ್‌ ಗೋಯಲ್‌ ವಾಗ್ದಾಳಿ

    ಈ ಕುರಿತು ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತನಗಾಗಿರುವ ಅನುಭವವನ್ನು ತಿಳಿಸಿದ್ದಾರೆ. ನಾನು ಶುದ್ಧ ಸಸ್ಯಾಹಾರಿ ಹಾಗೂ ಇದು ನವರಾತ್ರಿಯ ಸಮಯವಾಗಿದ್ದರಿಂದ ನಾನು ವೆಜ್ ಬಿರಿಯಾನಿ ಆರ್ಡರ್ ಮಾಡಿದೆ. ಆರ್ಡರ್ ಬಂದ ತಕ್ಷಣ ನಾನು ಸ್ವಲ್ಪ ಬಿರಿಯಾನಿಯನ್ನು ತಿಂದೆ. ಬಳಿಕ ತಿನ್ನುವಾಗ ರುಚಿಯಲ್ಲಿ ಏನೋ ಬದಲಾದ ಹಾಗೇ ಅನಿಸಿತು. ಬಿರಿಯಾನಿಯ ಒಳಗೆ ಕೋಳಿ ಮಾಂಸ ಹಾಗೂ ಕೆಲವು ತುಂಡುಗಳಿರುವುದು ಕಾಣಿಸಿದ್ದು, ತಕ್ಷಣವೇ ನಾನು ಹೊರಗೆಸೆದೆ. ಇಲ್ಲಿಯವರೆಗೆ ನಾನು ಮಾಂಸಾಹಾರ ಸೇವಿಸಿಲ್ಲ. ಇದು ನಿಜವಾಗಿಯೂ ನನಗೆ ಕೆಟ್ಟ ಅನುಭವವೆಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಈ ಕುರಿತು ಸೆಂಟ್ರಲ್ ನೋಯ್ಡಾ ಪೊಲೀಸ್ ಉಪ ಆಯುಕ್ತ ಶಕ್ತಿ ಅವಸ್ಥಿ ಮಾತನಾಡಿ, ಯುವತಿ ಆರ್ಡರ್‌ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿರುವುದನ್ನು ನೋಡಿದ ಬಳಿಕ ತಕ್ಷಣ ರೆಸ್ಟೋರೆಂಟ್‌ಗೆ ಕರೆ ಮಾಡಲು ಪ್ರಯತ್ನಿಸಿದ್ದು, ಆದರೆ ಯಾರೂ ಉತ್ತರಿಸಿಲ್ಲ. ರೆಸ್ಟೋರೆಂಟ್ ಮುಚ್ಚಿರಬೇಕೆಂದು ತಿಳಿದು ಸುಮ್ಮನಾಗುತ್ತಾರೆ. ಬಳಿಕ ಅವರು ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಯುವತಿ ರೆಸ್ಟೋರೆಂಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದು, ಇಕೋವಿಲೇಜ್-1ರ ನಿವಾಸಿ ರಾಹುಲ್ ರಾಜವಂಶಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ರೆಸ್ಟೋರೆಂಟ್ ಮಾಲೀಕನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 271 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮಾದರಿಗಳನ್ನು ಸಂಗ್ರಹಿಸಿದ್ದಾರೆ.

    ಈ ಕುರಿತು ನೋಯ್ಡಾದ ಸಹಾಯಕ ಆಹಾರ ಆಯುಕ್ತ ಸರ್ವೇಶ್ ಕುಮಾರ್ ಮಾತನಾಡಿ, ರೆಸ್ಟೋರೆಂಟ್‌ನಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದೇವೆ. ತನಿಖೆ ನಡೆಯುತ್ತಿದೆ. ಪರೀಕ್ಷಾ ಕೇಂದ್ರದಿಂದ ವರದಿ ಹಾಗೂ ಇತರ ಸಂಶೋಧನೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇದನ್ನೂ ಓದಿ: 3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್

     

  • 250 ರೂ. ಊಟ ಆರ್ಡರ್ ಮಾಡಿ 50 ಸಾವಿರ ರೂ. ಕಳ್ಕೊಂಡ್ಳು!

    250 ರೂ. ಊಟ ಆರ್ಡರ್ ಮಾಡಿ 50 ಸಾವಿರ ರೂ. ಕಳ್ಕೊಂಡ್ಳು!

    ಬೆಂಗಳೂರು: ದಿನದಿಂದ ದಿನ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸದ್ಯ ಮಹಿಳೆಯೊಬ್ಬರು ಫೇಸ್‍ಬುಕ್‍ನ ಜಾಹೀರಾತುವೊಂದನ್ನು ನಂಬಿ 50 ಸಾವಿರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ದಕ್ಷಿಣ ವಲಯದ ಯಲಚೇನಹಳ್ಳಿ ನಿವಾಸಿಯಾದ ಸವಿತಾ ಶರ್ಮಾ ಫೇಸ್‍ಬುಕ್‍ನಲ್ಲಿ 250ರೂ ಬೆಲೆಯ ಒಂದು ಥಾಲಿ ಆರ್ಡರ್ ಮಾಡಿದರೆ ಎರಡು ಥಾಲಿ ಉಚಿತವಾಗಿ ನೀಡಲಾಗುತ್ತದೆ ಎಂಬ ಜಾಹೀರಾತನ್ನು ನೋಡಿದ್ದಾರೆ.

     

    ಊಟ ಆರ್ಡರ್ ಮಾಡಲು ಜಾಹೀರಾತಿನಲ್ಲಿ ನಮೂದಿಸಲಾಗಿದ್ದ ಸಂಖ್ಯೆಗೆ ಸವಿತಾ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ ಆರ್ಡರ್ ಮಾಡುವುದಕ್ಕೂ ಮುನ್ನ 10 ರೂ ಪಾವತಿಸಬೇಕಾಗುತ್ತದೆ. ನಂತರ ಆಹಾರವನ್ನು ಮನೆಯ ಬಾಗಿಲಿಗೆ ತಲುಪಿಸಿದ ನಂತರ ಉಳಿದ ಹಣವನ್ನು ನಗದು ರೂಪದಲ್ಲಿ ಪಾವತಿಸಬಹುದು ಎಂದು ಹೇಳಿದ್ದಾನೆ.

    ಬಳಿಕ ಫಾರ್ಮ್‍ವೊಂದನ್ನು ಭರ್ತಿ ಮಾಡಲು ಸವಿತಾ ಮೊಬೈಲ್‍ಗೆ ಲಿಂಕ್ ಕಳುಹಿಸಲಾಗಿದೆ. ಈ ಫಾರ್ಮ್‍ನಲ್ಲಿ ಅವರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಮತ್ತು ಪಿನ್ ಸಂಖ್ಯೆಯನ್ನು ನಮೂದಿಸಿದ್ದಾರೆ. ತಕ್ಷಣ ಕೆಲವೇ ನಿಮಿಷಗಳಲ್ಲಿ 49,996 ರೂ. ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿರುವ ಮೆಸೇಜ್ ಅವರ ಮೊಬೈಲ್‍ಗೆ ಬರುತ್ತದೆ.

    ಗಾಬರಿಗೊಂಡು ಸವಿತಾ ಅದೇ ಸಂಖ್ಯೆಗೆ ಪುನಃ ಕರೆ ಮಾಡಿದಾಗ, ಸೆಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ಮಾಹಿತಿ ಬಂದಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ಮರುದಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಜಾಹೀರಾತಿನಲ್ಲಿ ರೆಸ್ಟೋರೆಂಟ್ ವಿಳಾಸ ಸದಾಶಿವನಗರ ಎಂದು ತಿಳಿದು ಬಂದಿದೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ನೀವು ತರಿಸುವ ಆನ್‍ಲೈನ್ ಫುಡ್ ತಯಾರಿಸುವ ಸ್ಥಳದ ಚಿತ್ರಣ

    ನೀವು ತರಿಸುವ ಆನ್‍ಲೈನ್ ಫುಡ್ ತಯಾರಿಸುವ ಸ್ಥಳದ ಚಿತ್ರಣ

    -ಪಕ್ಕಾ ಸೇರ್ತೀರಿ ಆಸ್ಪತ್ರೆ ಬೆಡ್ಡು!

    ಬೆಂಗಳೂರು: ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಆನ್‍ಲೈನ್ ಫುಡ್ ತಯಾರುಗವ ಸ್ಥಳದ ದೃಶ್ಯಗಳು ಸೆರೆಯಾಗಿವೆ.

     

    ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ ಕಿಚನ್ ಹಾಗೂ ಈಟ್‍ವೆಲ್ ಎಂಬ ಹೋಟೆಲ್ ಪಬ್ಲಿಕ್ ಟಿವಿ ತಂಡ ಪ್ರವೇಶ ಮಾಡಿತ್ತು. ಅಲ್ಲಿ ವರ್ಷಗಟ್ಟಲೇ ಪೇಂಟ್ ಬಳಿಯದ ಗೋಡೆ, ಸಿಕ್ಕಸಿಕ್ಕ ಕಡೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರೋ ಪಾತ್ರೆ ಪಗಡೆ, ಕೊಳಚೆ ನೀರಿನ ನಡುವೆ ಹರಿದಾಡ್ತಿರೋ ಜಿರಳೆ, ಹುಳಹುಪ್ಪಟೆಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿಯೇ ನೀವು ಆರ್ಡರ್ ಮಾಡೋ ವೈರೆಟಿ ವೈರೆಟಿ ಫುಡ್ ತಯಾರಾಗುತ್ತದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

    ಅನರ್ವ್ ಎಂಬವರು ಆನ್‍ಲೈನ್ ಮೂಲಕ ಇಲ್ಲಿಯ ಊಟವನ್ನು ಆರ್ಡರ್ ಮಾಡಿದ್ದರು. ಕೈ ಬಂದ ಪಾರ್ಸೆಲ್ ತೆಗೆದಾಗ ಅನರ್ವರಿಗೆ ಜಿರಳೆ ಕಾಣಿಸಿಕೊಂಡಿದೆ. ಕರಾವಳಿ ಕಿಚ್ಚನ್ ಹೆಸರಿನ ಹೋಟೆಲ್‍ನಿಂದ ತರಿಸಿದ್ದ ಕೊಳಕು ಆಹಾರ ಹಿಡಿದು ಹೋಟೆಲ್ ನತ್ತ ಹೆಜ್ಜೆ ಹಾಕಿದ್ದರು. ತಮ್ಮ ಹಣವನ್ನ ವಾಪಾಸ್ಸು ನೀಡುವಂತೆ ಕೇಳಿ ಹೋಟೆಲ್ ಅಡುಗೆ ಕೋಣೆ ಒಳಗೆ ಹೋದಾಗ ಅನರ್ವ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಕೊಳಕಿನಲ್ಲೇ ಕೊಳಕು ಕೈಯ ಅಡುಗೆ ಭಟ್ಟ ಅಲ್ಲಿಲ್ಲಿ ಮುಟ್ಕೊಂಡು ಪರೋಟದ ಉಂಡೆಯನ್ನ ಕಟ್ಟುತ್ತಿದ್ದ ಎಂದು ಅನರ್ವ್ ಪಬ್ಲಿಕ್ ಟಿವಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

  • ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಚೆನ್ನೈ: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಉಪಯೋಗಿಸಿದ ರಕ್ತದ ಕಲೆಗಳು ಇರುವ ಬ್ಯಾಂಡೇಜ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ತಪ್ಪು ಮಾಡಿರುವ ರೆಸ್ಟೋರೆಂಟ್ ಹೆಸರನ್ನು ತನ್ನ ಆ್ಯಪ್‍ನಿಂದ ಅಮಾನತು ಮಾಡಿದೆ.

    ಭಾನುವಾರದಂದು ಚೆನ್ನೈ ಮೂಲದ ಗ್ರಾಹಕ ಬಾಲಮುರುಘನ್ ಸ್ವಿಗ್ಗಿ ಆಪ್ ಮೂಲಕ ರೆಸ್ಟೋರೆಂಟ್‍ವೊಂದರಿಂದ ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ನೂಡಲ್ಸ್ ನಲ್ಲಿ ರಕ್ತದ ಕಲೆಗಳು ಇದ್ದ ಬಳಕೆಯಾದ ಬ್ಯಾಂಡೇಜ್ ಪತ್ತೆಯಾಗಿತ್ತು. ಈ ವೇಳೆ ಕೋಪಗೊಂಡ ಗ್ರಾಹಕ ಆರ್ಡರ್ ಮಾಡಿದ್ದ ನೂಡಲ್ಸ್ ಫೋಟೋ ತೆಗೆದು ಸ್ವಿಗ್ಗಿ ಗ್ರಾಹಕರ ಸೇವೆಗೆ ದೂರು ನೀಡಿದ್ದಾರೆ.

    ಆರ್ಡರ್ ಮಾಡಿದ್ದ ನೂಡಲ್ಸ್ ನಲ್ಲಿ ಗ್ರಾಹಕ ಅರ್ಧ ತಿಂದು ಮುಗಿಸಿ ಇನ್ನರ್ಧ ತಿನ್ನುವಾಗ ಅದರಲ್ಲಿ ಬ್ಯಾಂಡೇಜ್ ಪತ್ತೆಯಾಗಿತ್ತು. ಆಗ ಗ್ರಾಹಕ ಈ ಕುರಿತು ಸ್ವಿಗ್ಗಿ ಗ್ರಾಹಕರ ಸೇವೆಗೆ ಹಲವು ಬಾರಿ ಮೆಸೆಜ್ ಕಳುಹಿಸಿದ್ದರು. ಆದರೆ ಮೊದಲು ಈ ದೂರಿಗೆ ಸ್ವಿಗ್ಗಿ ಕಡೆಯಿಂದ ಯಾವ ಪ್ರತಿಕ್ರಿಯೆ ದೊರಕಿರಲಿಲ್ಲ. ಬಳಿಕ ನೂಡಲ್ಸ್ ನಲ್ಲಿ ಪತ್ತೆಯಾದ ಬ್ಯಾಂಡೆಜ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕ ಶೇರ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ಗ್ರಾಹಕ ಶೇರ್ ಮಾಡಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ.

    ಬಾಲಮುರುಘನ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಕಂಪನಿ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಬೇಜವಾಬ್ದಾರಿಯಿಂದ ಗ್ರಾಹಕರಿಗೆ ಆಹಾರ ಕಳುಹಿಸಿರುವ ರೆಸ್ಟೋರೆಂಟ್ ಮೇಲೆ ಸ್ವಿಗ್ಗಿ ಕ್ರಮ ತೆಗೆದುಕೊಂಡಿದೆ. ತನ್ನ ರೆಸ್ಟೋರೆಂಟ್ ಪಟ್ಟಿಯಿಂದ ಬೇಜವಾಬ್ದಾರಿ ತೋರಿದ ಆ ರೆಸ್ಟೋರೆಂಟ್ ಅನ್ನು ಅಮಾನತು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನ್‍ಲೈನ್ ಫುಡ್ ಆರ್ಡರ್ ಮಾಡೋ ಮುನ್ನಾ ಈ ವಿಡಿಯೋ ನೋಡಿ

    ಆನ್‍ಲೈನ್ ಫುಡ್ ಆರ್ಡರ್ ಮಾಡೋ ಮುನ್ನಾ ಈ ವಿಡಿಯೋ ನೋಡಿ

    ನವದೆಹಲಿ: ಆನ್‍ಲೈನಲ್ಲಿ ಆರ್ಡರ್ ಮಾಡಿದ ತಿಂಡಿಯನ್ನು ಡೆಲಿವರಿ ಮಾಡುವ ಸಿಬ್ಬಂದಿಯೊಬ್ಬ ಅರ್ಧ ತಿಂದು ಮಿಕ್ಕಾರ್ಧವನ್ನು ಪ್ಯಾಕ್ ಮಾಡಿ ಇಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಾಲ್ ಆಗಿದೆ.

    ಸೋಮವಾರದಂದು ಝೊಮಾಟೊ ಡೆಲಿವರಿ ಸಿಬ್ಬಂದಿಯೋರ್ವ ಗ್ರಾಹಕರಿಗೆ ತಲುಪಿಸಬೇಕಾದ ತಿಂಡಿಯನ್ನು ದಾರಿಯಲ್ಲಿ ಅರ್ಧ ತಿಂದು ಮಿಕ್ಕಾರ್ಧವನ್ನು ಹಾಗೆಯೇ ಪ್ಯಾಕ್ ಮಾಡಿಟ್ಟ ದೃಶ್ಯವನ್ನು ಮಧನ್ ಚಿಕ್ನಾ ಎಂಬವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಝೊಮಾಟೊ ಕಂಪನಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ಮುಂದೆ ಈ ತರಹದ ಘಟನೆಗಳು ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿ ತಿಳಿಸಿದೆ.

    ಈ ವಿಡಿಯೋವನ್ನು ಶೇರ್ ಮಾಡಿ ಜನ ಈಗ ಝೊಮಾಟೊ ಕಂಪನಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv