Tag: online betting

  • ಆನ್‍ಲೈನ್ ಬೆಟ್ಟಿಂಗ್- ಮಾಧ್ಯಮಗಳಿಗೆ ಕೇಂದ್ರ ಖಡಕ್ ಸೂಚನೆ

    ಆನ್‍ಲೈನ್ ಬೆಟ್ಟಿಂಗ್- ಮಾಧ್ಯಮಗಳಿಗೆ ಕೇಂದ್ರ ಖಡಕ್ ಸೂಚನೆ

    ನವದೆಹಲಿ: ಆನ್‍ಲೈನ್ ಬೆಟ್ಟಿಂಗ್ (Online Betting) ಪ್ಲಾಟ್‍ಫಾರ್ಮ್‍ಗಳ ಕುರಿತಾದ ಜಾಹೀರಾತುಗಳ ವಿಚಾರವಾಗಿ ಕೇಂದ್ರ ಸರ್ಕಾರ (Central Government) ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಮಾಧ್ಯಮಗಳು ತಕ್ಷಣ ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದೆ.

    ಟಿವಿ ಚಾನೆಲ್‍ಗಳು, ಡಿಜಿಟಲ್ ಮೀಡಿಯಾ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಹಾಗೂ ಜೂಜು ಸಂಬಂಧಿತ ಜಾಹೀರಾತುಗಳನ್ನು ತಡೆಯುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಸೂಚಿಸಿದೆ. ಇಂತಹ ಜಾಹೀರಾತುಗಳಿಗೆ ಪಾವತಿಸಲು ಕಪ್ಪು ಹಣ ಬಳಕೆಯಾಗುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಪತ್ನಿ!

    ಇದಲ್ಲದೆ ಪ್ರಮುಖ ಕ್ರೀಡಾಕೂಟಗಳಲ್ಲಿ ವಿಶೇಷವಾಗಿ ಕ್ರಿಕೆಟ್‍ನಲ್ಲಿ ಅಂತಹ ಬೆಟ್ಟಿಂಗ್ ಮತ್ತು ಜೂಜಿನ ವೇದಿಕೆಗಳ ಪ್ರಚಾರವನ್ನು ಹೆಚ್ಚಿಸುವ ಪ್ರವೃತ್ತಿ ಇದೆ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ.

    ಆದೇಶವನ್ನು ಪಾಲಿಸಲು ವಿಫಲವಾದರೆ ಸೂಕ್ತ ಕಾಯಿದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ರೆಸಾರ್ಟ್‌ ತೋರಿಸುತ್ತೇನೆ ಬಾ ಅಂತ ಕರೆದು ಮಹಿಳೆ ಮೇಲೆ ರೇಪ್‌ – ಟೆಕ್ಕಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನ್‍ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ

    ಆನ್‍ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ

    ಬೆಂಗಳೂರು: ನಗರದಲ್ಲಿ ಆನ್‍ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಕರ್ನಾಟಕದಲ್ಲಿ ಆನ್‍ಲೈನ್ ಬೆಟ್ಟಿಂಗ್ ದಂಧೆಯನ್ನು ಸರ್ಕಾರ ನಿಷೇಧ ಮಾಡಿದ ಬಳಿಕ ಆನ್‍ಲೈನ್ ಬೆಟ್ಟಿಂಗ್ ದಂಧೆ ನಡೆಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಆದರು ಎಗ್ಗಿಲ್ಲದೆ ದಂಧೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 59 ಸಾವಿರ ರೂ, ಒಂದು ಕಾರು, ಒಂದು ಬೈಕ್ ಸೇರಿದಂತೆ 3 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಪಟಾಕಿ, ವಾದ್ಯದ ಸದ್ದಿಗೆ ಬೆದರಿದ ಆನೆ – ಜಂಬೂ ಸವಾರಿ ಮೆರವಣಿಗೆ ಸ್ಥಗಿತ

    ಆರೋಪಿಗಳು ಐಪಿಎಲ್ ಮ್ಯಾಚ್ ವೇಳೆ ಬೆಟ್ಟಿಂಗ್‍ನಲ್ಲಿ ತೊಡಗಿದ್ದರು. ಈ ವೇಳೆ ದಾಳಿ ಮಾಡಿದ ಮಡಿವಾಳ ಇನ್ಸ್‌ಪೆಕ್ಟರ್‌ ಸುನೀಲ್ ನಾಯ್ಕ್ ಅ್ಯಂಡ್ ಟೀಂ ಮೂವರನ್ನು ಬಂಧಿಸಿ, ಕರ್ನಾಟಕ ಸ್ಟೇಟ್ ಪೊಲೀಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ

  • ರಾಜ್ಯದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಿಷೇಧ: ಅರಗ ಜ್ಞಾನೇಂದ್ರ

    ರಾಜ್ಯದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಿಷೇಧ: ಅರಗ ಜ್ಞಾನೇಂದ್ರ

    ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ವಿಧಾನಸಭೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಪ್ರತಿಬಂಧಕ ಕಾಯ್ದೆಯ ವಿಧೇಯಕವನ್ನು ಮಂಡಿಸಿದರು.

    ಸಚಿವರು, ವಿಧೇಯಕವನ್ನು ಮಂಡಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಆನ್‍ಲೈನ್ ಗ್ಯಾಂಬಲಿಂಗ್ ನಿಷೇಧದ ನಿಟ್ಟಿನಲ್ಲಿ ಇದೊಂದು ಸರ್ಕಾರದ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದರು.

    ಈ ತಿದ್ದುಪಡಿ ವಿಧೇಯಕ ಲಾಟರಿ, ಕುದುರೆ ರೇಸ್ ಗೆ ಅನ್ವಯವಾಗುವುದಿಲ್ಲ. ಉಳಿದಂತೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಆನ್ ಲೈನ್ ಜೂಜಾಟ, ಬೆಟ್ಟಿಂಗ್ ಗಳಿಗೆ ಅನ್ವಯವಾಗಲಿದೆ.

    ಆನ್ ಲೈನ್ ಗ್ಯಾಂಬ್ಲಿಂಗ್ ತೊಡಗುವವರಿಗೆ ಸಹಾಯ ಮಾಡುವವರಿಗೆ ಹಾಗೂ ಆಶ್ರಯ ನೀಡುವವರಿಗೂ 6 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕತ್ತಿ, ಖಡ್ಗ, ತಲ್ವಾರ್ ಒಂದು ಶಸ್ತ್ರ ಮನೆಯಲ್ಲಿ ಇರಲೇಬೇಕು: ಮುತಾಲಿಕ್

  • ಕ್ರೀಡಾಂಗಣದಲ್ಲೇ ಕುಳಿತು ಆನ್‍ಲೈನ್ ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಅರೆಸ್ಟ್

    ಕ್ರೀಡಾಂಗಣದಲ್ಲೇ ಕುಳಿತು ಆನ್‍ಲೈನ್ ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಅರೆಸ್ಟ್

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯದ ವೇಳೆ ಆನ್‍ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

    ರಿಕಿ ಹಾಗೂ ಮಾಯಾಂಕ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರು ರಾಜಸ್ಥಾನ ಮೂಲದ ಬುಕ್ಕಿಗಳು ಎಂಬ ಮಾಹಿತಿ ಲಭಿಸಿದೆ. ಇಂದು ಭಾರತ `ಎ’ ಹಾಗೂ ದಕ್ಷಿಣ ಆಫ್ರಿಕಾ `ಎ’ ತಂಡಗಳ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಕ್ರೀಡಾಂಗಣದಲ್ಲೇ ಕುಳಿತು ಆರೋಪಿಗಳು ಆನ್ ಲೈನ್ ಬೆಟ್ಟಿಂಗ್ ಆಡುತ್ತಿದ್ದರು.

    ಕ್ರೀಡಾಂಗಣದಲ್ಲೇ ಕುಳಿತು ಬೆಟ್ಟಿಂಗ್ ಆಡುವುದರಿಂದ ಟಿವಿಯಲ್ಲಿ ಪ್ರಸಾರವಾಗುವ ಮೂವತ್ತು ಸೆಕೆಂಡ್ ಮುಂಚೆಯೇ ಪ್ರತಿಯೊಂದು ಬಾಲ್ ನ ಆಪ್‍ಡೇಟ್ ಲಭಿಸುತ್ತಿತ್ತು. ಇದನ್ನೇ ಲಾಭವಾಗಿ ಬಳಸಿಕೊಳ್ಳುತ್ತಿದ್ದ ಆರೋಪಿಗಳು ನಂಬರ್ ಕೋಡ್‍ಗಳ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಬಿಸಿಸಿಐ ಸದಸ್ಯ ಧೀರಜ್ ಮಲ್ಹೋತ್ರಾ ಅವರು ಕಬ್ಬನ್ ಪಾರ್ಕ್ ಪೊಲೀಸರಗೆ ಮಾಹಿತಿ ನೀಡಿದ್ದರು. ಬಳಿಕ ಆರೋಪಿಗಳನ್ನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

    ವಿಚಾರಣೆ ವೇಳೆ ಕಳೆದ ಕೆಲ ವರ್ಷದಿಂದ ಬೆಟ್ಟಿಂಗ್ ನಡೆಸುತ್ತಿದ್ದ ಕುರಿತು ಮಾಹಿತಿ ಬಾಯ್ಬಿಟ್ಟಿರುವ ಆರೋಪಿಗಳು ಇತರೇ ಕೆಲ ಬುಕ್ಕಿಗಳ ಜೊತೆ ಸಂಪರ್ಕ ಇರುವ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳಿಂದ ಬೆಟ್ಟಿಂಗ್ ನಡೆಸಲು ಬಳಸುತ್ತಿದ್ದ ಮೊಬೈಲ್ ಹಾಗೂ ವೈಫೈ ರೂಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv