Tag: online

  • ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    – ಅಂಚೆ ಇಲಾಖೆಯಿಂದ ಆನ್‌ಲೈನ್‌ ಸೇವೆ
    –  ಪ್ರಾಯೋಗಿಕ ಸೇವೆಗೆ ದೇಶದಲ್ಲೇ ಬಾಗಲಕೋಟೆ ಜಿಲ್ಲೆ ಆಯ್ಕೆ

    ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯ (Department of Post) ಹಲವು ಸೇವೆಗಳು ಈಗ ಆನ್‌ಲೈನ್‌ನಲ್ಲಿ (Online) ದೊರೆಯಲಿದ್ದು, ಪ್ರಾಯೋಗಿಕವಾಗಿ ಈ ಸೌಲಭ್ಯ ಒದಗಿಸಲು ದೇಶದಲ್ಲೇ ಬಾಗಲಕೋಟೆ (Bagalkote) ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

    ಅಂಚೆ ಇಲಾಖೆಯಿಂದ ಹೊಸ ತಂತ್ರಾಂಶ ಅಳವಡಿಸಿ ಸರಕು, ಪತ್ರಗಳ ರವಾನೆಯನ್ನು ಆನ್‌ಲೈನ್ ಸೌಲಭ್ಯದಡಿ ಒದಗಿಸಲಾಗುತ್ತಿದೆ. ಮೈಸೂರು ವಿಭಾಗ ಹಾಗೂ ಬಾಗಲಕೋಟೆ ವಿಭಾಗಗಳು ಪ್ರಾಯೋಗಿಕವಾಗಿ ಸೌಲಭ್ಯ ಒದಗಿಸಲು ಆಯ್ಕೆಯಾಗಿವೆ. ಈ ವಿಭಾಗಗಳಲ್ಲಿನ ಯಶಸ್ಸು ನೋಡಿಕೊಂಡು ರಾಷ್ಟ್ರಾದ್ಯಂತ ಸೇವೆ ಒದಗಿಸಲು ಇಲಾಖೆ ಯೋಜನೆ ರೂಪಿಸಿದೆ.

    ಇಲಾಖೆ ಅಡ್ವಾನ್ಸ್‌ಡ್ ಪೋಸ್ಟಲ್ ಟೆಕ್ನಾಲಜಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದಡಿ ಹೊಸ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಬುಕ್ಕಿಂಗ್ ಹಾಗೂ ಡೆಲಿವರಿ ಸೌಲಭ್ಯ ಆನ್‌ಲೈನ್ ಆಗಲಿವೆ. ಗ್ರಾಹಕರು ಅಂಚೆ ಮೂಲಕ ವಸ್ತುವೊಂದನ್ನು ಕಳಿಸಬೇಕಿದ್ದರೆ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ನಿಗದಿತ ಶುಲ್ಕ ಪಡೆದು ಈ ಸೇವೆ ಒದಗಿಸಲಾಗುತ್ತಿದೆ. ಬುಕ್ ಮಾಡಿದ ನಂತರ ಪೋಸ್ಟ್‌ಮನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಈ ಸೌಲಭ್ಯದಡಿ ತಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಇದನ್ನೂ ಓದಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆ ಪಡುತ್ತಾರೆ: ಅಮಿತ್ ಶಾ

    ಪಾರ್ಸೆಲ್‌ ತಲುಪಿಸಿದ ನಂತರ ಪೋಸ್ಟ್‌ಮನ್ ಗ್ರಾಹಕರ ಡಿಜಿಟಲ್ ಸಹಿ ಪಡೆಯಲಿದ್ದಾರೆ. ಪಾರ್ಸೆಲ್‌ ತಲುಪಿದ ಬಗ್ಗೆ ಕಳುಹಿಸಿದವರಿಗೂ ಸಂದೇಶ ರವಾನೆಯಾಗುತ್ತದೆ. ಸಾಮಾನ್ಯ ಪತ್ರಗಳು, ಲಕೋಟೆಗಳನ್ನು ಕಳುಹಿಸಲು ಭವಿಷ್ಯದಲ್ಲಿ ಬಾರ್ ಕೋಡ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಡಿ ತಮ್ಮ ಲಕೋಟೆ, ಪತ್ರ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಗ್ರಾಹಕರು ಆನ್‌ ಲೈನ್ ಮೂಲಕ ಪಡೆಯಬಹುದು. ಇದನ್ನೂ ಓದಿ: ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

    ಜಿಲ್ಲೆಯಲ್ಲಿ ಜೂನ್ 17 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ 46 ಅಂಚೆ ಕಚೇರಿಗಳಲ್ಲಿ ಸೌಲಭ್ಯ ದೊರೆಯಲಿದೆ. ಎಲ್ಲ ಕಚೇರಿಗಳು ಗಣಕೀಕರಣಗೊಂಡಿದ್ದು, ಸೌಲಭ್ಯ ಜಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಉತ್ತಮ ನೆಟ್ವರ್ಕ್, ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಹಾಗೂ ಮೂಲ ಸೌಕರ್ಯವಿರುವ ಕಾರಣ ಜಿಲ್ಲೆ ಪೈಲೆಟ್ ಯೋಜನೆಗೆ ಆಯ್ಕೆಯಾಗಿದೆ.

  • ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

    ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

    ಚಂಡೀಗಢ: ಹುಟ್ಟುಹಬ್ಬ (Birth Day) ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10 ವರ್ಷದ ಬಾಲಕಿ (10-year-old girl) ಮೃತಪಟ್ಟ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ (Punjab’s Patiala) ನಡೆದಿದೆ.

    ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿ ಮಾನ್ವಿ ಹುಟ್ಟುಹಬ್ಬದಂದು ಕೇಕ್ (Cake) ಸೇವಿಸಿದ ಮೃತಪಟ್ಟಿದ್ದಳು. ಈಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    ಆನ್‌ಲೈನ್‌ನಲ್ಲಿ(Online) ಆರ್ಡರ್‌ ಮಾಡಿದ ಕೇಕ್‌ ಸೇವಿಸಿ ಆಕೆ ಮೃತಪಟ್ಟಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ಕೇಕ್‌ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

    ಮೃತ ದೇಹದ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್‌ ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾನ್ವಿ ಅವರ ಕೇಕ್ ಕತ್ತರಿಸುವ ಮತ್ತು ಆಕೆ ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಇದನ್ನೂ ಓದಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು INDIA ಒಕ್ಕೂಟದ ಒಗ್ಗಟ್ಟು ಪ್ರದರ್ಶನ

    ಏನಿದು ಘಟನೆ?
    ಮಾನ್ವಿಯ ಹುಟ್ಟುಹಬ್ಬದ ಆಚರಣೆಗೆ ಆನ್‌ಲೈನ್‌ನಲ್ಲಿ ಕೇಕ್‌ ಆರ್ಡರ್‌ ಮಾಡಲಾಗಿತ್ತು. ಮಾರ್ಚ್ 24 ರಂದು ರಾತ್ರಿ 7 ಗಂಟೆಯ ವೇಳೆ ಮಾನ್ವಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಳು. ಅಂದು ರಾತ್ರಿ 10 ಗಂಟೆಯ ವೇಳೆ ಮಾನ್ವಿಯ ಇಡೀ ಕುಟುಂಬವೇ ಅಸ್ವಸ್ಥಗೊಂಡಿತು.

    ಇಬ್ಬರು ಸಹೋದರಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಆರಂಭಿಸಿದರು. ರಾತ್ರಿ ಮಾನ್ವಿ ನನಗೆ ಬಹಳ ಬಾಯಾರಿಕೆ ಆಗುತ್ತಿದೆ. ಬಾಯಿ ಒಣಗುತ್ತಿದೆ ಎಂದು ಹೇಳಿ ಅನೇಕ ಬಾರಿ ನೀರು ಕೇಳಿ ಮಲಗುತ್ತಿದ್ದಳು.

    ಅಸ್ವಸ್ಥಗೊಂಡಿದ್ದ ಮಾನ್ವಿಯ ಆರೋಗ್ಯ ಮರುದಿನ ಬೆಳಗ್ಗೆ ಏರುಪೇರಾಯ್ತು. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಇಸಿಜಿ ಮಾಡಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ವಿ ಅಂದೇ ಮೃತಪಟ್ಟಳು.

     

  • ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಇನ್ನೂ ಆನ್ ಲೈನ್ (Online) ದೋಖಾಗಳು ನಿಲ್ಲುತ್ತಿಲ್ಲ. ಅದರಲ್ಲೂ ಸುಶಿಕ್ಷಿತರೇ ಈ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥದ್ದೇ ಪರಿಸ್ಥಿತಿಗೆ ಸಿಲುಕಿದ್ದಾರೆ. ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ  ಕೀರ್ತಿ ಭಟ್ (Keerti Bhatt) . ಒಂದೇ ಒಂದು ಕ್ಲಿಕ್ ಮಾಡಿ ಬರೋಬ್ಬರಿ ಎರಡು ಲಕ್ಷ ರೂಪಾಯಿಯನ್ನು ಅವರು ಕಳೆದುಕೊಂಡಿದ್ದಾರೆ.

    ತಮಗೆ ಆದ ಮೋಸವನ್ನು ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಪೊಲೀಸರ ಎದುರು ಕಣ್ಣಿರಿಟ್ಟಿದ್ದಾರೆ. ಕೀರ್ತಿ ಭಟ್ ಅವರಿಗೆ ಕೊರಿಯರ್ ಒಂದು ಬರಬೇಕಿತ್ತು. ವಾರ ಕಳೆದರೂ ಬಂದಿಲ್ಲ. ವಿಚಾರಿಸಲೆಂದೇ ಕೇಂದ್ರ ಕಚೇರಿಕೆ ಕರೆ ಮಾಡಿದ್ದಾರೆ. ಡೆಲಿವರಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಟ್ರ್ಯಾಕ್ ಮಾಡಿದಾಗ ಅದು ಮೆಹದಿಪಟ್ನಂ ಅಲ್ಲಿ ಇರೋದು ಗೊತ್ತಾಗಿದೆ.

    ಕೊರಿಯರ್ ಸರ್ವಿಸ್ ಎಂದುಕೊಂಡು ಕೀರ್ತಿಗೆ ಕಾಲ್ ಮಾಡಿದ್ದಾರೆ. ನಿಮ್ಮ ಅಡ್ರೆಸ್ ಟ್ರ್ಯಾಕ್ ಆಗದೇ ಇರುವ ಕಾರಣಕ್ಕಾಗಿ ಪಾರ್ಸಲ್ ತಲುಪಿಲ್ಲ ಎಂದು ಹೇಳಲಿದ್ದಾರೆ. ಸರಿಯಾದ ಅಡ್ರೆಸ್ ವಾಟ್ಸಪ್ ಮಾಡಿ ಅಂದಿದ್ದಾರೆ. ಅವರು ಹೇಳಿದಂತೆ ಕೀರ್ತಿ ವಿಳಾಸ ನೀಡಿದ್ದಾರೆ. ಆದರೆ, ವಾಟ್ಸಪ್ ನಲ್ಲೂ ಅದು ತೋರಿಸ್ತಿಲ್ಲ. ನಾರ್ಮಲ್ ಮಸೇಜ್ ಕಳುಹಿಸುತ್ತೇವೆ. ಅಲ್ಲಿ ಕ್ಲಿಕ್ ಮಾಡಿ ಅಂದಿದ್ದಾರೆ. ನಾರ್ಮಲ್ ಮಸೇಜ್ ‍ಕ್ಲಿಕ್ ಮಾಡಿದಾಗ ಹಣ ಕ್ರಿಮಿನಲ್ ಖಾತೆ ಸೇರಿದೆ.

     

    ಪೊಲೀಸರಿಗೇನೂ ದೂರು ನೀಡಿದ್ದಾರೆ. ವಾಪಸ್ಸು ನಿಮ್ಮ ಹಣ ಬರುತ್ತದೆ ಎಂದು ಪೊಲೀಸರು ಸಮಾಧಾನಿಸಿದ್ದಾರೆ. ಆದರೆ, ಈವರೆಗೂ ಅವರಿಗೆ ಹಣ ವಾಪಸ್ಸು ಬಂದಿಲ್ಲ. ಕೇವಲ ಒಂದು ಕ್ಲಿಕ್ ಮಾಡಿರೋ ತಪ್ಪಿಗೆ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ ಕೀರ್ತಿ.

  • ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ – ಅಪ್ಲೈ ಮಾಡುವ ಮುನ್ನ ಎಚ್ಚರ!

    ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ – ಅಪ್ಲೈ ಮಾಡುವ ಮುನ್ನ ಎಚ್ಚರ!

    ಬೆಂಗಳೂರು: ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್  (Cyber) ಖದೀಮರು  ದೋಖಾ ನಡೆಸುತ್ತಿದ್ದು, ಅರ್ಜಿ ಸಲ್ಲಿಸುವ ಮೊದಲು ಜನರು ಎಚ್ಚರವಹಿಸಬೇಕು ಎಂದು ಪೊಲೀಸರು (Police)  ತಿಳಿಸಿದ್ದಾರೆ.

    ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕುವಂತೆ ಸೂಚನೆ ನೀಡಿದ ಬೆನ್ನಲ್ಲೇ ಹೆಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಅನ್‌ಲೈನ್‌ನಲ್ಲಿ ನಕಲಿ ಕ್ಯೂ ಆರ್ ಕೋಡ್‌ಗಳು ಮತ್ತು ಲಿಂಕ್‌ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ – 3 ಸಾವು, 6 ಮಂದಿ ಗಂಭೀರ ಗಾಯ

    ಮೊದಲು ನಕಲಿ ಲಿಂಕ್‌ಗಳನ್ನು ಹರಿಬಿಟ್ಟು ಖದೀಮರು ನೋಂದಣಿ ಮಾಡಿಸುತ್ತಾರೆ. ಆ ಲಿಂಕ್‌ಗಳಲ್ಲಿ ನೋಂದಣಿ ಮಾಡಿದ ಬಳಿಕ ಒಂದು ಕ್ಯೂ ಆರ್ ಕೋಡ್ ಸಿಗುತ್ತೆ. ಒಂದು ವೇಳೆ ಬಂದಿರುವ ಕ್ಯೂ ಆರ್ ಕೋಡ್‌ನನ್ನು ಟಚ್ ಮಾಡಿದರೆ ಅಪರಿಚಿತರ ಖಾತೆಗೆ ನಿಮ್ಮ ಖಾತೆ ಲಿಂಕ್ ಆಗುತ್ತದೆ. ಸ್ವಲ್ಪ ಎಮಾರಿದ್ರು ನಿಮ್ಮ ಖಾತೆಯಲ್ಲಿರುವ ಹಣ ಖದೀಮರ ಪಾಲಾಗುತ್ತದೆ. ಇದನ್ನೂ ಓದಿ: ಕಾಂತಾರ-2ನಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಉಗ್ರ ಹೋರಾಟ – ರಿಷಬ್ ಶೆಟ್ಟಿಗೆ ವಿಹೆಚ್‌ಪಿ, ಬಜರಂಗ ದಳ ಎಚ್ಚರಿಕೆ

    ಈ ಬಗ್ಗೆ ವ್ಯಕ್ತಿ ಒಬ್ಬರು ಎಕ್ಸ್ ಮೂಲಕ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಶೆಟ್ಟರ್‌ಗೆ ತಟ್ಟಿತು ಕೈ ಕಾರ್ಯಕರ್ತರ ಪ್ರತಿಭಟನೆ ಬಿಸಿ

    ಏನಿದು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್?
    ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ಕಾರಿನ ಅಥವಾ ದ್ವಿಚಕ್ರ ವಾಹನದ ಸಂಪೂರ್ಣ ಮಾಹಿತಿ ಇರುತ್ತೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ ಇಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್‌ನಲ್ಲಿ ಸಂಗ್ರಹವಾಗಿರುತ್ತದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ – ಮೋದಿ, ನಡ್ಡಾ ನೇತೃತ್ವದಲ್ಲಿ 2 ದಿನ ಹೈವೋಲ್ಟೇಜ್ ಸಭೆ

    ಒಂದು ವೇಳೆ ವಾಹನ ಕಳ್ಳತನವಾದ್ರೆ ಈ ಮಾಹಿತಿಯನ್ನ ಬಳಸಿಕೊಂಡು ಬೇಗ ಹುಡುಕಬಹುದು. ವಾಹನಕ್ಕೆ ನಾವು ಹಾಕಿರುವ ನಂಬರ್ ಪ್ಲೇಟ್‌ಅನ್ನು ಅನಧಿಕೃತವಾಗಿ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಇನ್ನು ಕಳ್ಳರ ಕೈಗೆ ಸಿಕ್ಕರೆ ಅದನ್ನು ಕೂಡಲೇ ತೆಗೆಯೋದಕ್ಕೂ ಸಾಧ್ಯವಿಲ್ಲ. ಇನ್ನು ಈ ಪ್ಲೇಟ್‌ನಲ್ಲಿ ಇರುವ ಮಾಹಿತಿಯನ್ನು ತಿದ್ದಲು ಕೂಡಾ ಸಾಧ್ಯವಿಲ್ಲ. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ

  • ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್ – ಪಡೆಯೋದು ಹೇಗೆ?

    ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್ – ಪಡೆಯೋದು ಹೇಗೆ?

    ಬೆಂಗಳೂರು: ಇನ್ಮುಂದೆ ವಿವಾಹ ನೋಂದಣಿ ಪ್ರಮಾಣಪತ್ರಕ್ಕಾಗಿ ಸಬ್‌ ರಿಜಿಸ್ಟ್ರಾರ್ (Sub Register) ಕಚೇರಿಗೆ ಅಲೆದಾಡಬೇಕಾಗಿಲ್ಲ ಮನೆಯಲ್ಲಿಯೇ ಕೂತು ವಿವಾಹ ಪ್ರಮಾಣ (Marriage Certificate) ಪತ್ರಗಳನ್ನು ಪಡೆಯಬಹು.

    ವಿವಹಾದ ಪ್ರಮಾಣ ಪತ್ರ ಪಡೆಯಬೇಕಾದ್ರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಾಗಿತ್ತು. ಒಂದಿಷ್ಟು ಪ್ರಕ್ರಿಯೆಗಳು ಕೂಡ ನಡೆಯಬೇಕು. ಆದರೆ ಇನ್ಮುಂದೆ ಫಟಾಫಟ್ ಅಂತಾ ಪತ್ರ ಸಿಗಲಿದೆ. ಇನ್ಮುಂದೆ `ಕಾವೇರಿ’ ತಂತ್ರಾಂಶದಲ್ಲಿ ಹಿಂದೂ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು.‌ ಇದನ್ನೂ ಓದಿ: Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    ಸರ್ಕಾರ ಪರಿಚಯಿಸಿರುವ ಕಾವೇರಿ ತಂತ್ರಾಂಶದ ಮೂಲಕ ವೆಬ್‌ಸೈಟ್‌ನಲ್ಲಿ ದಂಪತಿಗಳು ತಮ್ಮ ಮದುವೆ ಫೋಟೋ, ಆಧಾರ್ ಸಂಖ್ಯೆ, ಮದುವೆ ಆಮಂತ್ರಣ ಪತ್ರಿಕೆಯ ದಾಖಲಾತಿಯನ್ನು ಮನೆಯಲ್ಲಿ ಕೂತೇ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಿ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?

    ಈ ಕುರಿತು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಮಾತನಾಡಿ, ಇವರೆಗೆ 100 ಮದುವೆ ನಡೆದರೆ ಅದ್ರಲ್ಲಿ 30 ದಂಪತಿಗಳು ಮಾತ್ರ ವಿವಾಹ ಪ್ರಮಾಣ ಪತ್ರ ಪಡೆಯುತ್ತಿದ್ದರು. ಹೀಗಾಗಿ ವ್ಯಾಜ್ಯ ಅಥವಾ ಕಾನೂನಾತ್ಮಕ ಸಮಸ್ಯೆ ಬರುತ್ತಿತ್ತು. ಜನರಿಗೆ ಸರಳೀಕರಣದ ಸೇವೆ ನೀಡುವ ಸಲುವಾಗಿ ಈ ಯೋಜನೆ ಜಾರಿಯಾಗಿದೆ. ವಿವಾಹ ಪ್ರಮಾಣ ಪತ್ರದ ಜೊತೆಗೆ ಸದ್ಯ ಸಬ್‌ರಿಜಿಸ್ಟ್ರಾರ್ ಕಚೇರಿಯ ಅನೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಜನರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ

  • ಆನ್‌ಲೈನ್‌ಲೂ ಸಿಗಲಿದೆ ಭಾರತ್ ಬ್ರ್ಯಾಂಡ್ ಅಕ್ಕಿ – ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ?

    ಆನ್‌ಲೈನ್‌ಲೂ ಸಿಗಲಿದೆ ಭಾರತ್ ಬ್ರ್ಯಾಂಡ್ ಅಕ್ಕಿ – ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ?

    ಬೆಂಗಳೂರು: ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರ್ಯಾಂಡ್‌‌ (Bharath Brand) ಅಕ್ಕಿ ಗ್ರಾಹಕರಿಗೆ ಆನ್‌ಲೈನ್‌ಲೂ (Online) ಸಹ ಸಿಗಲ್ಲಿದ್ದು, ನಗರದಲ್ಲಿಯೂ ಅಕ್ಕಿ ಸಿಗಲಿದೆ

    ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್‌ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದಿಂದ ತಂದತಹ ಭಾರತ್ ಅಟ್ಟಾ ಹಾಗೂ ಕಡಲೆ ಬೇಳೆಗೆ ಸಿಲಿಕಾನ್ ಸಿಟಿಯ ಜನರಿಂದ ಭರ್ಜರಿ ಪ್ರಿತಿಕ್ರಿಯೆ ಬಂದಿತ್ತು. ನಗರದಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಗೋಧಿ ವ್ಯಾಪಾರವಾಗಿತ್ತು. ಇದನ್ನೂ ಓದಿ: ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ: ರಾಮಲಿಂಗಾರೆಡ್ಡಿ

    ಇದೀಗ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮೂಲಕ ಮಾರಾಟ ಮಾಡಲು ಪ್ಲಾನ್ ಮಾಡಿದೆ. ಈ ಅಕ್ಕಿಯ ವಿತರಣೆ ಮಂಗಳವಾರ (ಫೆ.6) ಆರಂಭವಾಗುವ ಸಾಧ್ಯತೆಯಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ತಲುಪಿಸುವ ಪ್ಲಾನ್ ಮಾಡಿಕೊಂಡಿದೆ.ಇದನ್ನೂ ಓದಿ: ನಮ್ಮ ಗ್ಯಾರಂಟಿಗಳನ್ನು ನೋಡಿಕೊಂಡು ಬಿಜೆಪಿ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತಾರೆ: ಸಿದ್ದರಾಮಯ್ಯ

    ಪ್ರಮುಕವಾಗಿ ಭಾರತ್ ಬ್ರಾಂಡ್‌ನ ಅಕ್ಕಿ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ಆನ್‌ಲೈನ್ ಶಾಪಿಂಗ್ ಆಪ್ಲಿಕೇಶನಲ್ಲೂ ಸಹ ಖರೀದಿಸಬಹುದು. ಇದರಿಂದ ಜನ ಸಾಮಾನ್ಯರಿಗೆ ಇನಷ್ಟು ಸುಲಭವಾಗಲಿದೆ. ಇದನ್ನೂ ಓದಿ:KSRTCಗೆ 800 ʻಅಶ್ವಮೇಧʼ ಕ್ಲಾಸಿಕ್ ಬಸ್‌ಗಳ ಬಲ – 100 ಬಸ್‌ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ

    ನಗರದ ಯಾವ ಪ್ರಮುಖ ಪ್ರದೇಶಗಳಲ್ಲಿ ಅಕ್ಕಿ ಸಿಗಲ್ಲಿದೆ ಎಂಬುದರ ಪಟ್ಟಿ ಹೀಗಿದೆ.
    ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಣ್ಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವ್ಯಾನ್ ಮೂಲಕ ಅಕ್ಕಿ ಪೂರೈಸಿ ಮನೆ ಮನೆಗೆ ತಲುಪಿಸಲಾಗುತ್ತೆ.  ಇದನ್ನೂ ಓದಿ:ಪತಿಯೊಂದಿಗೆ ಅಕ್ರಮ ಸಂಬಂಧ – ಗೆಳತಿಯ ಮನೆಗೆ ನುಗ್ಗಿ ಪತ್ನಿಯಿಂದ ದಾಂಧಲೆ

  • ಇಬ್ಬರು ಅಲ್‌ ಖೈದಾ ಉಗ್ರರಿಗೆ 7 ವರ್ಷ ಜೈಲು ಶಿಕ್ಷೆ

    ಇಬ್ಬರು ಅಲ್‌ ಖೈದಾ ಉಗ್ರರಿಗೆ 7 ವರ್ಷ ಜೈಲು ಶಿಕ್ಷೆ

    ಬೆಂಗಳೂರು: ಇಬ್ಬರು ಅಲ್‌ ಖೈದಾ (Al-Qaeda) ಉಗ್ರರಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ (NIA Special Court) 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಅಖ್ತರ್ ಹುಸೇನ್ ಲಷ್ಕರ್ ಮತ್ತು ಅಬ್ದುಲ್ ಅಲೀಂ ಮೊಂಡಲ್‌ಗೆ ಕೋರ್ಟ್‌ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. 2022ರ ಆಗಸ್ಟ್ 30ರಂದು ಪ್ರಕರಣ ದಾಖಲಾಗಿತ್ತು.

    ಇಬ್ಬರು ಉಗ್ರರು ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳಿಂದ ಆನ್‌ಲೈನ್ ಮೂಲಕ ಮನ ಪರಿವರ್ತನೆಗೊಂಡು ಅಲ್‌ ಖೈದಾಗೆ ಹೊಸ ಯುವಕರನ್ನು ಸೇರ್ಪಡೆಗೊಳಿಸುತ್ತಿದ್ದರು. ಬಳಿಕ ಟೆಲಿಗ್ರಾಂ ಗ್ರೂಪ್‌ಗಳಿಗೆ ಸೇರಿಸಿ ಅಫ್ಘಾನಿಸ್ತಾನಕ್ಕೆ ತೆರಳಲು ಪ್ಲಾನ್ ಮಾಡುತ್ತಿದ್ದರು. ಇದನ್ನೂ ಓದಿ: ಮಂತ್ರಾಲಯದಲ್ಲಿ 2.95 ಕೋಟಿ ರೂ. ಕಾಣಿಕೆ ಸಂಗ್ರಹ

     

    ಅಸ್ಸಾಂ (Assam) ಮೂಲದ ಅಖ್ತರ್ ಹುಸೇನ್‍ನ್ನು ಸಿಸಿಬಿ ಪೊಲೀಸರು ಮೊದಲು ಬಂಧಿಸಿದ್ದರು. ಈತ ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿ ಕೋಣೆಯಲ್ಲಿ ಕೆಲ ಯುವಕರೊಂದಿಗೆ ವಾಸ್ತವ್ಯ ಹೂಡಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.   ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    10ನೇ ತರಗತಿ ಓದಿದ್ದ ಹುಸೇನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ ನೀಡುತ್ತಿದ್ದ. ಸೋಷಿಯಲ್ ಮೀಡಿಯಾ ಬಳಸಿಕೊಂಡು ಭಾರತದಲ್ಲಿ ಗಲಭೆ ಎಬ್ಬಿಸುವುದು, ಬೆಂಗಳೂರಿನಲ್ಲಿ ಶಾಂತಿ ಹದಗೆಡಿಸುವುದೇ ಇವನ ಕೆಲಸವಾಗಿತ್ತು. ಬೆಂಗಳೂರು ಮತ್ತು ಬೇರೆ ಬೇರೆ ಜಿಲ್ಲೆಯ ಮಾಹಿತಿಯನ್ನು ಬೇರೆ ಸಂಘಟನೆಯ ಜೊತೆ ಹಂಚಿಕೊಳ್ಳುತ್ತಿದ್ದ.

    ಬೆಂಗಳೂರಿನ ಪ್ರಮುಖ ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಶಂಕಿತ ಸಂಚು ರೂಪಿಸುತ್ತಿದ್ದ. ವಿಧಾನಸೌಧದ ಬಳಿ ಇರುವ ಅತಿ ಹೆಚ್ಚು ವಿಐಪಿಗಳ ಬಂದು ಹೋಗುವ ಹೋಟೆಲ್ ಟಾರ್ಗೆಟ್ ಮಾಡಿದ್ದ ಈತ ಹಲವು ಬಾರಿ ಆ ಹೋಟೆಲ್ ಬಳಿ ಬಂದು ಹೋಗಿದ್ದ. ಶಂಕಿತ ಉಗ್ರನ ಚಲನವಲನದ ಬಗ್ಗೆ ಸಿಸಿಟಿವಿ ಹಾಗೂ ಟೆಕ್ನಿಕಲ್ ಸಾಕ್ಷ್ಯವನ್ನು ಪೊಲೀಸರು ಸಂಗ್ರಹಿಸಿದ್ದರು.

    ಅಲ್ ಖೈದಾ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಈತ ದೊಡ್ಡ ಪ್ಲ್ಯಾನ್ ಮಾಡಿದ್ದ. ಈ ಬಗ್ಗೆ ತೆಲಂಗಾಣ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಐಬಿ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಎನ್‌ಐಎ ಹಸ್ತಾಂತರವಾಗಿತ್ತು.

     

  • ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಜಿಯೋಮಾರ್ಟ್ (Jio Mart) ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 8 ರಿಂದ ಲೈವ್ ಆಗಲಿದೆ.

    ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್‌ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಪ್ರಾದೇಶಿಕ ಕಲಾಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜಿಯೋಮಾರ್ಟ್ ಎಂದಿಗೂ ಮಾಡುತ್ತಿದೆ. ಪ್ಲಾಟ್‌ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಷ್ಟಕ್ಕೂ, ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದರು. ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವುದಷ್ಟೇ ಅಲ್ಲ, ಸರಾಗವಾಗಿ ಉದ್ಯಮವನ್ನು ನಡೆಸಲು ಲಕ್ಷಾಂತರ ಕಲಾಕಾರರು ಮತ್ತು ಎಸ್‌ಎಂಬಿಗಳಿಗೆ ಅನುವು ಮಾಡಿಕೊಡುತ್ತಿದೆ.

    ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯಿಸಿ, ಜಿಯೋಮಾರ್ಟ್‌ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಭಾರತದು ವೈವಿಧ್ಯಮ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ. ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್‌ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

     

    ಜಿಯೋಮಾರ್ಟ್‌ನ ವಿಭಿನ್ನ ವಿಭಾಗೀಯ ಪರಿಣಿತಿ, ಹಬ್ಬದ ಉತ್ಸಾಹ ಮತ್ತು ಅದ್ಭುತ ಶಾಪಿಂಗ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಹೈಲೈಟ್ ಮಾಡುವಂತೆ ಫಿಲಂ ಅನ್ನು ರೂಪಿಸಲಾಗಿದೆ.

    ಕಳೆದ ವರ್ಷ ಜಿಯೋಮಾರ್ಟ್ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಪ್ರಚಾರ ಮಾಡುವ ವಿಧಾನವನ್ನು ಅಳವಡಿಸಿಕೊಂಡಿತ್ತು. ಎಲೆಕ್ಟಾನಿಕ್ಸ್, ಫ್ಯಾಷನ್, ಬ್ಯೂಟಿ, ಮನೆ ಅಲಂಕಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಿಲಯನ್ಸ್ ಮಾಲೀಕತ್ವದ ಬ್ರಾಂಡ್‌ಗಳನ್ನು ಜಿಯೋಮಾರ್ಟ್ ಸೇರಿಸಿಕೊಂಡಿದೆ. ಇದರಲ್ಲಿ ಅರ್ಬನ್ ಲ್ಯಾಡರ್, ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಜ್ಯೂವೆಲ್ಸ್, ಹ್ಯಾಮ್ಲೇಸ್ ಸೇರಿದಂತೆ ಇತರೆ ಇವೆ. ಭಾರತದ ಅತಿದೊಡ್ಡ ದೇಶೀಯ ಇ-ಮಾರ್ಕೆಟ್‌ಪ್ಲೇಸ್ ಆಗುವ ಜಿಯೋಮಾರ್ಟ್ ಈಗ ತ್ವರಿತವಾಗಿ ವಿಸ್ತರಣೆಯಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು

    ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು

    ತಿರುವನಂತಪುರ: ಸ್ಥಳೀಯ ಹೋಟೆಲ್‌ನಿಂದ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ (Biriyani) ತಿಂದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

    ಕಾಸರಗೋಡು (Kasaragodu) ಸಮೀಪದ ಪೆರುಂಬಳದ ಅಂಜು ಶ್ರೀಪಾರ್ವತಿ ಅವರು ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ‘ಕುಜಿಮಂತಿ’ ಬಿರಿಯಾನಿಯನ್ನು ಸೇವಿಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ

    ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಮುಂಜಾನೆ ಬಾಲಕಿ ಸಾವನ್ನಪ್ಪಿದ್ದಾಳೆ. ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲು ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಕರ್ನಾಟಕದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಜೋಶಿಮಠದ ಬಳಿಕ ಕರ್ಣಪ್ರಯಾಗದಲ್ಲಿ ಭೂಮಿ, ಮನೆಯ ಗೋಡೆ ಬಿರುಕು – ಮುಳುಗಡೆ ಭೀತಿ, ಆತಂಕದಲ್ಲಿ ಜನ

    ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೇ ಇದೇ ರೀತಿ ಕೋಝಿಕ್ಕೋಡ್‌ನ ಉಪಾಹಾರ ಗೃಹದಲ್ಲಿ ತಯಾರಿಸಿದ್ದ ಆಹಾರ ಸೇವಿಸಿ ನರ್ಸ್‌ವೊಬ್ಬರು ಸಾವಿಗೀಡಾಗಿದ್ದರು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ‌ ಈ ನರ್ಸ್‌ ಕರ್ತವ್ಯ ನಿರ್ವಹಿಸುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆನ್‍ಲೈನ್ ವಂಚನೆ – ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೀಚರ್

    ಆನ್‍ಲೈನ್ ವಂಚನೆ – ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೀಚರ್

    ಬೀದರ್: ಉದ್ಯೋಗಕ್ಕಾಗಿ ಆನ್‍ಲೈನ್‍ನಲ್ಲಿ (Online) ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಉಪನ್ಯಾಸಕಿ (Teacher)  ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

    ಆರತಿ ಕನಾಟೆ (28) ಆತ್ಮಹತ್ಯೆ ಮಾಡಿಕೊಂಡ ಟೀಚರ್. ಆನ್‍ಲೈನ್‍ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‍ಲೈನ್‍ನಲ್ಲಿ ಮನೆಯಲ್ಲೇ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದ ವ್ಯಕ್ತಿಯನ್ನು ನಂಬಿದ ಉಪನ್ಯಾಸಕಿ ಬರೋಬ್ಬರಿ 2.50 ಲಕ್ಷ ವರೆಗೆ ಹಣ ಕಳುಹಿಸಿದ್ದಾರೆ. ಬಳಿಕ ಇನ್ನೂ 82 ಸಾವಿರ ಹಣ ಕಳಿಸಿದ್ರೆ ಉದ್ಯೋಗದ ಜೊತೆಗೆ ಹೂಡಿಕೆ ಮಾಡಿದ ಎಲ್ಲಾ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ತನ್ನ ಲವರ್ ಜೊತೆ ಮಗಳಿಗೆ ಮದುವೆ ಮಾಡಿಸಿದ ತಾಯಿ – ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ

    ಮನೆಯವರ ಗಮನಕ್ಕೆ ತಾರದೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಹಣ ಹೂಡಿಕೆ ಮಾಡಿದ್ದ ಏಜೆನ್ಸಿ ಬಗ್ಗೆ ಡೆತ್‍ನೋಟ್‍ನಲ್ಲಿ ಉಲ್ಲೇಖ ಮಾಡಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನ್ಯಾಸಕಿ ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ (Collage) ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್- ಮಠದ ಅಡುಗೆ ಸಹಾಯಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]