Tag: Onion Rings

  • ಚಹಾದೊಂದಿಗೆ ಆನಂದಿಸಿ ಕ್ರಿಸ್ಪಿ ಈರುಳ್ಳಿ ರಿಂಗ್ಸ್

    ಚಹಾದೊಂದಿಗೆ ಆನಂದಿಸಿ ಕ್ರಿಸ್ಪಿ ಈರುಳ್ಳಿ ರಿಂಗ್ಸ್

    ಹಾದೊಂದಿಗೆ ಹೊಸ ಹೊಸ ಸ್ನ್ಯಾಕ್ಸ್‌ಗಳನ್ನೇ (Snacks) ಸವಿಯಲು ನಾಲಿಗೆ ಯಾವಾಗಲೂ ಬಯಸುತ್ತದೆ. ಮಕ್ಕಳು ಕೂಡಾ ತುಂಬಾ ಇಷ್ಟ ಪಟ್ಟು ತಿನ್ನುವ ಈರುಳ್ಳಿ ರಿಂಗ್ಸ್ (Onion Rings) ಒಮ್ಮೆ ನೀವೂ ಮಾಡಿ ನೋಡಿ. ಚಹಾದೊಂದಿಗೆ ಮಾತ್ರವಲ್ಲದೇ ಇದನ್ನು ಊಟದೊಂದಿಗೂ ಸೈಡ್ ಡಿಶ್ ಆಗಿ ಬಡಿಸಬಹುದು. ಕ್ರಿಸ್ಪಿ ಈರುಳ್ಳಿ ರಿಂಗ್ಸ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಈರುಳ್ಳಿ – 1
    ಮೈದಾ – ಅರ್ಧ ಕಪ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಮಿಕ್ಸ್ಡ್ ಹರ್ಬ್ಸ್ – ಅರ್ಧ ಟೀಸ್ಪೂನ್
    ಚಿಲ್ಲಿ ಫ್ಲೇಕ್ಸ್ – ಅರ್ಧ ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ನೀರು – ಅರ್ಧ ಕಪ್
    ಪುಡಿಮಾಡಿದ ಕಾರ್ನ್ ಫ್ಲೇಕ್ಸ್ – 1 ಕಪ್
    ಎಣ್ಣೆ – ಹುರಿಯಲು ಇದನ್ನೂ ಓದಿ: ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ, ಈರುಳ್ಳಿಯನ್ನು ಅಡ್ಡಕ್ಕೆ ಸ್ವಲ್ಪ ದಪ್ಪವಾಗಿ ಕತ್ತರಿಸಿ, ಬಳೆಗಳಂತೆ ಅದರ ಪದರಗಳನ್ನು ಪ್ರತ್ಯೇಕಿಸಿ.
    * ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಮಿಕ್ಸ್ಡ್ ಹರ್ಬ್ಸ್, ಚಿಲ್ಲಿ ಫ್ಲೇಕ್ಸ್ ಮತ್ತು ಉಪ್ಪು ಸೇರಿಸಿ. ಅಗತ್ಯವಿದ್ದಂತೆ ನೀರನ್ನು ಸೇರಿಸಿ ಮೃದುವಾದ ಬ್ಯಾಟರ್ ತಯಾರಿಸಿ.
    * ಇನ್ನೊಂದು ಬಟ್ಟಲಿನಲ್ಲಿ ಪುಡಿಮಾಡಿದ ಕಾರ್ನ್ ಫ್ಲೇಕ್ಸ್ ಅನ್ನು ಇರಿಸಿ.
    * ಈಗ ಮೈದಾ ಬ್ಯಾಟರ್‌ಗೆ ಈರುಳ್ಳಿ ಬಳೆಗಳನ್ನು ಅದ್ದಿ, ಸಂಪೂರ್ಣವಾಗಿ ಕೋಟ್ ಆದ ಬಳಿಕ ಪುಡಿ ಮಾಡಿದ ಕಾರ್ನ್ ಫ್ಲೇಕ್ಸ್ ಮೇಲೆ ರೋಲ್ ಮಾಡಿ.

    * ಡಬಲ್ ಕೋಟ್ ಬೇಕೆಂದರೆ ಮತ್ತೊಮ್ಮೆ ಅದನ್ನು ಮೈದಾ ಬ್ಯಾಟರ್‌ನಲ್ಲಿ ಅದ್ದಿ, ಕಾರ್ನ್ ಫ್ಲೇಕ್ಸ್ನಿಂದ ಕೋಟ್ ಮಾಡಿಕೊಳ್ಳಿ.
    * ಈಗ ಬಿಸಿ ಎಣ್ಣೆಯಲ್ಲಿ ಈರುಳ್ಳಿ ಬಳೆಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
    * ಈರುಳ್ಳಿ ರಿಂಗ್ಸ್ ಎರಡೂ ಬದಿಯಲ್ಲಿ ತಿರುಗಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಹುರಿಯಿರಿ.
    * ಈಗ ಈರುಳ್ಳಿ ರಿಂಗ್ಸ್ ಅನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್‌ನಲ್ಲಿ ಇರಿಸಿ.
    * ಇದೀಗ ಈರುಳ್ಳಿ ರಿಂಗ್ಸ್ ತಯಾರಾಗಿದ್ದು, ಟೀ ಟೈಮ್‌ನಲ್ಲಿ ಸಾಸ್ ಜೊತೆ ಆನಂದಿಸಿ. ಇದನ್ನೂ ಓದಿ: ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ

    Live Tv
    [brid partner=56869869 player=32851 video=960834 autoplay=true]

  • ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದು  ಆನಿಯನ್ ರಿಂಗ್ಸ್ ಬಂದಿದ್ದು ಹಸಿ ಈರುಳ್ಳಿ

    ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದು ಆನಿಯನ್ ರಿಂಗ್ಸ್ ಬಂದಿದ್ದು ಹಸಿ ಈರುಳ್ಳಿ

    ನವದೆಹಲಿ: ಆನ್‍ಲೈನ್‍ನಲ್ಲಿ ನಾವು ಬುಕ್ ಮಾಡುವುದು ಒಂದು, ಬರುವುದು ಮತ್ತೊಂದು ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವೀಡಿಯೋ ಉದಾಹರಣೆಯಾಗಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬುಕ್ ಮಾಡಿದ್ದು ಆನಿಯನ್ ರಿಂಗ್ಸ್, ಆದರೆ ಆತನಿಗೆ ಬಂದಿದ್ದು ಹಸಿ ಈರುಳ್ಳಿ. ಈ ಹಿನ್ನೆಲೆ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಆನ್‍ಲೈನ್ ಫುಡ್ ಆರ್ಡರ್ ಮಾಡಿದ ಉಬೈದು ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಸಂಕಟವನ್ನು ಯಾವುದೇ ಪದಗಳನ್ನು ಬಳಸದೆ ವಿವರಿಸಿದ್ದಾನೆ. ಇನ್‍ಸ್ಟಾದಲ್ಲಿ ವೀಡಿಯೋ ಶೇರ್ ಮಾಡಿದ ಉಬೈದು, ನಾನು ಆನಿಯನ್ ರಿಂಗ್ಸ್ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದೆ. ಆದರೆ ನನಗೆ ಸಿಕ್ಕಿದ್ದು, ಇದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ನಾಳೆ ಫಸ್ಟ್ ಡೇ ಕೆಲಸಕ್ಕೆ ಹೋಗಬೇಕಿದ್ದವ ಮಸಣಕ್ಕೆ – ಅಪಘಾತದಲ್ಲಿ ತಂದೆ, ಮಗ ಸ್ಥಳದಲ್ಲೇ ಸಾವು

     

    View this post on Instagram

     

    A post shared by UbaidU (@ubaidu_15)

    ವೀಡಿಯೋದಲ್ಲಿ, ಉಬೈದು ಕ್ಯಾಮೆರಾವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ನಂತರ ಆತ ಆನ್‍ಲೈನ್ ಬುಕ್ ಮಾಡಿದ ನಂತರ ತನಗೆ ಬಂದ ಹಸಿ ಈರುಳ್ಳಿಯನ್ನು ತೋರಿಸುತ್ತಾನೆ. ನಂತರ ಆತ ತನ್ನ ಕೈ ಬೆರಳುಗಳಿಗೆ ಉಂಗುರಗಳ ರೀತಿ ಕತ್ತರಿಸಿದ ಹಸಿ ಈರುಳ್ಳಿಯನ್ನು ಹಾಕಿಕೊಳ್ಳುತ್ತಾನೆ.

    ಉಬೈದು ವೀಡಿಯೋದಲ್ಲಿ ರೆಸ್ಟೋರೆಂಟ್‍ನ ಹೆಸರನ್ನು ಶೇರ್ ಮಾಡಿಕೊಂಡಿಲ್ಲ. ನಾನು ಈ ಆನಿಯನ್ ರಿಂಗ್ಸ್‌ನ್ನು 59 ರೂ. ಗೆ ಆರ್ಡರ್ ಮಾಡಿದ್ದೆ ಎಂದು ವೀಡಿಯೋ ಮೂಲಕ ತೋರಿಸುತ್ತಾನೆ.

    ವೀಡಿಯೋ ನೋಡಿದ ನೆಟ್ಟಿಗರು, ಅದಕ್ಕಾಗಿಯೇ ನಾನು ಯಾವುದನ್ನು ನಂಬುವುದಿಲ್ಲ. ಮತ್ತೊಬ್ಬರು, ನಾನು ಅವನ ನಗುವಿನ ಹಿಂದಿನ ನೋವನ್ನು ಅನುಭವಿಸಬಲ್ಲೆ ಎಂದು ಕಾಮೆಂಟ್‍ಗಳ ಸುರಿಮಳೆಯೇ ಬರುತ್ತಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದು, ಆನ್‍ಲೈನ್ ಆರ್ಡರ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದ ಹಿರಿಯ ಸರ್ಕಾರಿ ಅಧಿಕಾರಿ ಅರೆಸ್ಟ್

    Live Tv