Tag: Onion chutney

  • ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಪ್ರತಿ ಬಾರಿಯೂ ದೋಸೆ, ಇಡ್ಲಿಯೊಂದಿಗೆ ಶೇಂಗಾ, ತೆಂಗಿಕಾಯಿ ಚಟ್ನಿ ತಿಂದು ಬೋರ್ ಆಗಿ ಹೋಗಿದ್ದರೆ, ಈರುಳ್ಳಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ. ಸೂಪರ್ ಸುವಾಸನೆಯುಕ್ತ ಟ್ಯಾಂಗಿ ಈರುಳ್ಳಿ ಚಟ್ನಿಯ ರುಚಿ ಒಮ್ಮೆ ನೋಡಿದರೆ, ಮತ್ತೆ ಮತ್ತೆ ಸವಿಯುವ ಮನಸಾಗುವುದಂತೂ ಖಂಡಿತಾ. ಸಿಂಪಲ್ ಆದ ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಎಣ್ಣೆ – 2 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಒಣ ಕಾಶ್ಮೀರಿ ಕೆಂಪು ಮೆಣಸು – 4
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಹುಣಿಸೇಹಣ್ಣು – ಸಣ್ಣ ತುಂಡು
    ಬೆಲ್ಲ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಕಾಲು ಕಪ್

    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಇಂಗ್ – ಚಿಟಿಕೆ
    ಒಣ ಕೆಂಪು ಮೆಣಸಿನಕಾಯಿ – 1
    ಕರಿಬೇವಿನ ಎಲೆಗಳು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣ ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
    * ಅದನ್ನು ಪಕ್ಕಕ್ಕಿಟ್ಟು, ಸಂಪೂರ್ಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ. ಹುಣಿಸೇಹಣ್ಣು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರು ಹಾಕಿ ನಯವಾಗಿ ಬ್ಲೆಂಡ್ ಮಾಡಿ.
    * ಒಗ್ಗರಣೆಗೆ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಹಿಂಗ್, ಒಣ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆ ಸಿಡಿಯಲು ಬಿಡಿ.
    * ಕೊನೆಯದಾಗಿ ಈರುಳ್ಳಿ ಚಟ್ನಿ ಮೇಲೆ ಒಗ್ಗರಣೆ ಹಾಕಿ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಈರುಳ್ಳಿ ಚಟ್ನಿಗೆ, ಬೆಲ್ಲ ಹಾಕಿ ಮಾಡಿದ್ರೆ ಹೇಗಿರುತ್ತೆ ಗೊತ್ತಾ?

    ಈರುಳ್ಳಿ ಚಟ್ನಿಗೆ, ಬೆಲ್ಲ ಹಾಕಿ ಮಾಡಿದ್ರೆ ಹೇಗಿರುತ್ತೆ ಗೊತ್ತಾ?

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ತೆಂಗಿನಕಾಯಿ ತುರಿ- 1 ಕಪ್
    * ಈರುಳ್ಳಿ- 2
    * ಹಸಿಮೆಣಸು- 5
    * ರುಚಿಗೆ ತಕ್ಕಷ್ಟು ಉಪ್ಪು
    * ಹುಣಸೆಹಣ್ಣು- ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬೆಲ್ಲ- ಸ್ವಲ್ಪ
    * ಅಡುಗೆ ಎಣ್ಣೆ- 2 ಚಮಚ
    * ಸಾಸಿವೆ- ಅರ್ಧ ಚಮಚ
    * ಇಂಗು- ಸ್ವಲ್ಪ
    * ಕರಿ ಬೇವು- ಸ್ವಲ್ಪ

    ಮಾಡುವ ವಿಧಾನ:
    * ಮಿಕ್ಸರಿಗೆ ಕಾಯಿ, ಈರುಳ್ಳಿ, ಉಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಹಾಗೂ ಸ್ವಲ್ಪ ನೀರನ್ನು ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ತಿರುವಿದರೆ ಚಟ್ನಿ ಈಗ ರೆಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಒಂದು ಸೌಟಿಗೆ ಚಮಚ ಅಡುಗೆ ಎಣ್ಣೆ, ಸಾಸಿವೆ, ಇಂಗು ಹಾಕಿ. ಸಾಸಿವೆ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ ಒಗ್ಗರಣೆ ಮಾಡಿದರೆ ರುಚಿಯಾದ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ಶೇಂಗಾ, ಹಸಿಮೆಣಸು, ಟೊಮೆಟೊ ಚಟ್ನಿಯೆಂದು ಹಲವು ಬಗೆಯ ಚಟ್ನಿಯನ್ನು ತಯಾರಿಸಲಾಗುತ್ತದೆ. ಆದರೆ ನಾವು ಇಂದು ಹೇಳುತ್ತೀರುವ ಚಟ್ನಿ ಅತ್ಯಂತ ಸರಳ ಮತ್ತು ರುಚಿಯಾಗಿರುತ್ತದೆ. ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಅಡುಗೆ ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ -2
    * ತೆಂಗಿನತುರಿ- 1ಕಪ್
    * ಹಸಿಮೆಣಸು 2 – 3
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 4 ಟೀ ಸ್ಪೂನ್
    * ಸಾಸಿವೆ- 1 ಟೀ ಸ್ಪೂನ್
    * ಬೆಳ್ಳುಳ್ಳಿ-1
    * ಜೀರಿಗೆ- ಅರ್ಧ ಟೀ ಸ್ಪೂನ್
    * ಕರೀಬೇವು- ಸ್ವಲ್ಪ
    * ಹುಣಸೆಹಣ್ಣು- ಸ್ವಲ್ಪ
    * ಕೊತ್ತಂಬರಿ ಸೊಪ್ಪು
    * ಕೆಂಪು ಮೆಣಸು-2

    ಮಾಡುವ ವಿಧಾನ:
    * ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಕಾಯುತ್ತಿದ್ದಂತೆ, ಜೀರಿಗೆ, ಕರೀಬೇವು, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ. ಹಸಿ ಮೆಣಸು, ಕೆಂಪು ಮೆಣಸು, ತೆಂಗಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ:  ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ

    * ಈಗ ಫ್ರೈ ಮಾಡಿರುವ ಮಸಾಲೆಯನ್ನು ಮಿಕ್ಸಿಗೆ ಹಾಕಿ ಜೊತೆಗೆ ಕೊತ್ತಂಬರಿಯನ್ನು ಹಾಕಿ ರುಬ್ಬಿಕೊಳ್ಳಬೇಕು.

    * ಇದೀಗ ಬಾಣಲೆಗೆ ಅಡುಗೆ ಎಣ್ಣೆ, ಸಾಸಿವೆ, ಕೊತ್ತಂಬರಿ ಹಾಕಿ ಒಗ್ಗರಣೆಗೆ ತಯಾರಿಸಿಕೊಂಡು ರುಬ್ಬಿಕೊಂಡಿರುವ ಚಟ್ನಿ,ಉಪ್ಪು, ಹುಣಸೆಹಣ್ಣು  ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಈರುಳ್ಳಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ.