Tag: ongc

  • ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – 9 ಮಂದಿ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – 9 ಮಂದಿ ರಕ್ಷಣೆ

    ಮುಂಬೈ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ(ಒಎನ್‌ಜಿಸಿ) ಹೆಲಿಕಾಪ್ಟರ್ ಮಂಗಳವಾರ ಅರಬ್ಬೀ ಸಮುದ್ರದ ತೈಲ ರಿಂಗ್ ಬಳಿ ತುರ್ತು ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 9 ಜನರಿದ್ದು ಸದ್ಯ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಒಎನ್‌ಜಿಸಿ ತಿಳಿಸಿದೆ.

    ಹೆಲಿಕಾಪ್ಟರ್ ಇಂದು ಬೆಳಗ್ಗೆ 11:50ರ ವೇಳೆ ಮುಂಬೈಯಿಂದ ಪಶ್ಚಿಮಕ್ಕೆ 60 ಮೈಲುಗಳಷ್ಟು ದೂರದಲ್ಲಿ ಒಎನ್‌ಜಿಸಿಯ ಸಾಗರ್ ಕಿರಣ್ ಆಫ್‌ಶೋರ್ ರಿಂಗ್ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 7 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದ ರಾಯಭಾರಿ ಕಚೇರಿಗಳ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸಿದ ಭಾರತ

    ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ಬಳಿಕ ಮಾಲ್ವಿಯಾ 16 ಸರಬರಾಜು ಹಡಗನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ. ಸದ್ಯ ಎಲ್ಲರೂ ಪ್ರಾನಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಹಾಂಕಾಂಗ್ ತೇಲುವ ಜಂಬೋ ರೆಸ್ಟೋರೆಂಟ್ ಮಗುಚಿದೆ, ಮುಳುಗಿಲ್ಲ: ಸ್ಪಷ್ಟನೆ ಕೊಟ್ಟ ಮಾಲೀಕ

    Live Tv

  • ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    – ಇಬನ್ನೂ 75 ಜನ ನಾಪತ್ತೆ, ಮುಂದುವರಿದ ನೌಕಾಪಡೆ ಕಾರ್ಯಾಚರಣೆ

    ನವದೆಹಲಿ: ಗುಜರಾತ್ ಹಾಗೂ ಮುಂಬೈನಲ್ಲಿ ತೌಕ್ತೆ ಅಬ್ಬರ ಹೆಚ್ಚಾಗಿದ್ದು, ಒಎನ್‍ಜಿಸಿಯ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. 188 ಜನರನ್ನು ರಕ್ಷಣೆ ಮಾಡಲಾಗಿದ್ದು, 75 ಜನ ಸಿಬ್ಬಂದಿ ಕಾಣೆಯಾಗಿದ್ದಾರೆ. ಇತ್ತ ಗುಜರಾತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.

    ಗುಜರಾತ್ ಹಾಗೂ ಪಕ್ಕದ ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಗುಜರಾತ್‍ನ ಗಿರ್-ಸೋಮನಾಥ್, ಭಾವನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಹಾಗೂ ದಿಯುನ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸರ್ವೇ ಬಳಿಕ ಅಹ್ಮದಾಬಾದ್‍ನಲ್ಲಿ ಪರಿಶೀಲನಾ ಸಭೆಯನ್ನು ಸಹ ನಡೆಸಿದ್ದಾರೆ.

    ತೌಕ್ತೆ ಮುಂಬೈನಲ್ಲಿ ಸಹ ಭಾರೀ ಅನಾಹುತ ಸೃಷ್ಟಿಸಿದ್ದು, ಮುಂಬೈನಿಂದ 35 ನಾಟಿಕಲ್ ಮೈಲಿ ದೂರದಲ್ಲಿ 261 ಜನರಿದ್ದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್(ಒಎನ್‍ಜಿಸಿ)ನ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. ಇನ್ನೂ 57 ಜನ ಕಾಣೆಯಾಗಿದ್ದಾರೆ. 188 ಜನರನ್ನು ಈ ವರೆಗೆ ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

    ಇದೀಗ ತೌಕ್ತೆ ಚಂಡಮಾರುತ ದುರ್ಬಲಗೊಂಡಿದ್ದು, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೈ ಪಕ್ಕದ ಗುಜರಾತ್ ಪ್ರದೇಶಗಳಲ್ಲಿ ಅಬ್ಬರಿಸಿತ್ತು. ರಾಜಸ್ಥಾನದ ಉದಯಪುರದ ಪಶ್ಚಿಮ-ನೈಋತ್ಯದಲ್ಲಿ 60.ಕಿ.ಮೀ ಹಾಗೂ ಗುಜರಾತ್‍ನ 110 ಕಿ.ಮೀ.ದೂರದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  • ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ- 5 ಸಾವು, 11 ಮಂದಿಗೆ ಗಂಭೀರ ಗಾಯ

    ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ- 5 ಸಾವು, 11 ಮಂದಿಗೆ ಗಂಭೀರ ಗಾಯ

    ಕೊಚ್ಚಿ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ(ಒಎನ್‍ಜಿಸಿ) ಸಾಗರ್ ಭೂಷಣ್ ನೌಕೆಯಲ್ಲಿ ಸ್ಫೋಟ ಸಂಭವಿಸಿ 5 ಮಂದಿ ಮೃತಪಟ್ಟು 11 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಕೊಚ್ಚಿನ್ ನಲ್ಲಿ ನಡೆದಿದೆ.

    ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಫೋಟಗೊಂಡ ನೌಕೆಯಲ್ಲಿ ಇನ್ನಿಬ್ಬರು ಸಿಕ್ಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಪಡೆಗಳು ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ. ವೆಲ್ಡಿಂಗ್ ನಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.

    ಕೊಚ್ಚಿನ್ ಹಡಗು ನಿರ್ವಹಣಾ ಘಟಕವು ಭಾರತದ ಪ್ರಧಾನ ನಿರ್ಮಾಣ ಮತ್ತು ದುರಸ್ತಿ ಸೌಲಭ್ಯವನ್ನು ಒದಗಿಸುವ ತಾಣವಾಗಿದೆ. ಭಾರತದ ಮೊಟ್ಟಮೊದಲ ದೇಶೀಯವಾಗಿ ನಿರ್ಮಿಸಲಾದ ವಿಮಾನ ವಾಹಕ ನೌಕೆ ಐಎನ್‍ಎಸ್ ವಿಕ್ರಾಂತ್ ಅನ್ನು ಇಲ್ಲಿ ನಿರ್ಮಿಸಲಾಗಿತ್ತು.

    ಈ ಶಿಪ್‍ಯಾರ್ಡ್ 2006ರಲ್ಲಿ ಒಎನ್‍ಜಿಸಿಯ ಮೂರು ತೈಲ ಹಡಗು ರಿಪೇರಿಗೆ ಸಂಬಂಧಿಸಿದಂತೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಇ ಸಾಗರ್ ಭೂಷಣ್, ಸಾಗರ್ ವಿಜಯ್ ಮತ್ತೊಂದು ಸಾಗರ್ ಕಿರಣ್ ನೌಕೆಯ ದುರಸ್ತಿಯನ್ನು ಈ ಘಟಕದಲ್ಲಿ ಮಾಡಲಾಗುತ್ತಿದೆ.