Tag: OnePlus

  • ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಬರ್ಲಿನ್‌: ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ (OnePlus Phones) ಮಾರಾಟವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಪೇಟೆಂಟ್ ಸಮಸ್ಯೆಗಳ (Patent Dispute) ಕಾನೂನು ವಿವಾದದಿಂದಾಗಿ ಜರ್ಮನ್ (Germany) ಅಧಿಕಾರಿಗಳು ಒನ್‌ಪ್ಲಸ್‌ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.

    ವೈರ್‌ಲೆಸ್ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಇಂಟರ್‌ಡಿಜಿಟ್‌ ಮತ್ತು ಒನ್‌ ಪ್ಲಸ್‌ ಮಧ್ಯೆ 5ಜಿ ಮತ್ತು ಮೊಬೈಲ್‌ ತಂತ್ರಜ್ಞಾನ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ.
    ಇದನ್ನೂ ಓದಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

    5ಜಿಯಲ್ಲಿ ತನ್ನ ಪೇಟೆಂಟ್‌ ಅನ್ನು ಒನ್‌ಪ್ಲಸ್‌ ಉಲ್ಲಂಘಿಸಿದೆ ಎಂದು ಇಂಟರ್‌ಡಿಜಿಟ್‌ ಆರೋಪಿಸಿದೆ. ನಿಷೇಧದಿಂದಾಗಿ ಒನ್‌ಪ್ಲಸ್‌ ಓಪನ್‌, ಒನ್‌ಪ್ಲಸ್‌ 12, ಒನ್‌ ಪ್ಲಸ್‌ 11 ಫೋನ್‌ಗಳ ಮಾರಾಟವನ್ನು ಆನ್‌ಲೈನ್‌ ಸ್ಟೋರ್‌ನಿಂದಲೇ ತೆಗೆಯಲಾಗಿದೆ. ಸದ್ಯ ಜರ್ಮನಿಯಲ್ಲಿ ಒನ್‌ಪ್ಲಸ್‌ ಪ್ಯಾಡ್‌ 2 ಮತ್ತು ಒನ್‌ ಪ್ಲಸ್‌ ವಾಚ್‌ 2 ಮಾತ್ರ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಎರಡೂ ಉತ್ಪನ್ನಗಳಿಗೆ ಸೆಲ್ಯುಲಾರ್ ಬೆಂಬಲದ ಅಗತ್ಯ ಇಲ್ಲದ ಕಾರಣ ಇವುಗಳಿಗೆ ನಿಷೇಧ ಅನ್ವಯವಾಗುವುದಿಲ್ಲ.

    ಈ ಹಿಂದೆ ನೋಕಿಯಾ ಕಂಪನಿಯ ಜೊತೆಗೆ ಒನ್‌ ಪ್ಲಸ್‌ ಸಂಘರ್ಷ ಇತ್ತು.ಇದರಿಂದಾಗಿ ಒನ್‌ಪ್ಲಸ್‌ ಮೇಲೆ ಜರ್ಮನಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ವಿವಾದ ಪರಿಹಾರವಾದ ನಂತರ ಒನ್‌ಪ್ಲಸ್‌ ಜರ್ಮನಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿತ್ತು.

     

  • ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ನವದೆಹಲಿ: ಚೀನಾ (China) ಬ್ರ್ಯಾಂಡ್‍ಗಳ ಮೂಬೈಲ್ ಬಳಸದಂತೆ ಮಿಲಿಟರಿ ಗುಪ್ತಚರ ಸಂಸ್ಥೆಗಳು ಸೈನಿಕರಿಗೆ ಸಲಹೆ ನೀಡಿವೆ. ಆಪ್‍ಗಳು ಮಾತ್ರವಲ್ಲದೇ ಮೂಬೈಲ್ ಮೂಲಕವೂ ಚೀನಾ ಬೇಹುಗಾರಿಕೆ (Spyware) ನಡೆಸುವ ಸಾಧ್ಯತೆ ಹಿನ್ನೆಲೆ ಮಾರ್ಚ್ ಅಂತ್ಯದೊಳಗೆ ಮೂಬೈಲ್ ಬದಲಿಸುವಂತೆ ಸೈನಿಕರಿಗೆ ಸಲಹೆ ನೀಡಲಾಗಿದೆ.

    ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ (India) ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆ ಭಾರತೀಯ ಸೈನಿಕರಿಗೆ ಈ ಮಹತ್ವದ ಸಲಹೆ ನೀಡಲಾಗಿದೆ. ವಿಶೇಷವಾಗಿ ಎಲ್‍ಎಸಿಯಲ್ಲಿ ಕರ್ತವ್ಯದಲ್ಲಿರುವ ಸೈನಿಕರು ಕೂಡಲೇ ಚೀನಾ ಮೂಲದ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ಒನ್‍ಪ್ಲಸ್ (OnePlus), ಒಪ್ಪೋ (Oppo), ರಿಯಲ್ ಮೀ (Realme) ಸೇರಿದಂತೆ ಮಾರುಕಟ್ಟೆಯಲ್ಲಿರುವ 11 ಚೀನಾದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್‍ಗಳ ಬಳಕೆಯಿಂದ ದೂರವಿರಲು ಸೂಚಿಸಿದೆ. ಸೈನಿಕರ ಕುಟುಂಬಸ್ಥರು ಈ ಬ್ರ್ಯಾಂಡ್ ಮೂಬೈಲ್‍ಗಳನ್ನು ಬಳಸದಂತೆ ಕೋರಲಾಗಿದೆ.

    ಗಾಲ್ವಾನ್ ಕಣಿವೆ (Galwan valley) ಘರ್ಷಣೆಯ ನಂತರ, ಭಾರತ ಸರ್ಕಾರವು ಹಲವು ಚೀನೀ ಮೊಬೈಲ್ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಆದರೆ ಅಪಾಯ ಅಪ್ಲಿಕೇಶನ್‍ಗಳಿಗೆ ಸೀಮಿತವಾಗಿಲ್ಲ. ಫೋನ್‌ಗಳಿಂದಲೂ ಅಪಾಯವಿರುವ ಬಗ್ಗೆ ತಜ್ಞರು ಅನುಮಾನಿಸಿದ್ದಾರೆ. ಫೋನ್ ಮೂಲಕ ಬೇಹುಗಾರಿಕೆ ಅಥವಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಬಳಸಬಹುದಾದ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

  • ಒನ್ ಪ್ಲಸ್ ಕಂಪನಿಯಿಂದ ಆಪಲ್ ಟ್ರೋಲ್!

    ಒನ್ ಪ್ಲಸ್ ಕಂಪನಿಯಿಂದ ಆಪಲ್ ಟ್ರೋಲ್!

    ಬೆಂಗಳೂರು: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್ ಪ್ಲಸ್ ಕಂಪನಿ ಟ್ರೋಲ್ ಮಾಡಿದೆ.

    ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿ ಹೆಸರನ್ನು ಬಳಸಿಕೊಂಡು ಒನ್ ಪ್ಲಸ್ ಇಂಡಿಯಾ  ಕಾಲೆಳೆದಿದೆ. ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿದೆ. ಈ ಟ್ವೀಟ್ ಗೆ iDare you ಯೂ ಎಂದು ಬರೆದುಕೊಂಡು ಟ್ವೀಟ್ ಮಾಡಿದೆ.

    ಈ ಟ್ವೀಟ್ ಗೆ ಪೂರಕವಾಗಿ ಮತ್ತೊಂದು ಟ್ವೀಟ್ ಮಾಡಿ, ಒನ್ ಪ್ಲಸ್ ಫೋನ್ ಸಿರಿಯನ್ನು ಬೆಂಬಲಿಸುವುದಿಲ್ಲ, ಗೂಗಲ್ ಅಸಿಸ್ಟೆಂಟ್ ಬೆಂಬಲಿಸುತ್ತದೆ ಎಂದು ಹೇಳಿದೆ.

    ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ 2018ರ ಮಾರುಕಟ್ಟೆಯ ವರದಿಯ ಪ್ರಕಾರ 30 ರಿಂದ 40 ಸಾವಿರ ರೂ. ಒಳಗಿನ ಫೋನ್ ಗಳ ಪೈಕಿ ಒನ್ ಪ್ಲಸ್ 6 ಮತ್ತು ಒನ್ ಪ್ಲಸ್ 6 ಟಿ ಅತಿ ಹೆಚ್ಚು ಮಾರಾಟವಾಗಿದೆ. ಒಟ್ಟು ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಶೇ.34 ಪಾಲನ್ನು ಹೊಂದಿದ್ದರೆ ಒನ್ ಪ್ಲಸ್ ಶೇ.33 ರಷ್ಟು ಪಾಲನ್ನು ಹೊಂದಿದೆ. ಆಪಲ್ ಕಂಪನಿಯ ಐಫೋನ್ ಶೇ.23 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಭಾರತದಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಗೆ ಸಡ್ಡು ಹೊಡೆದ ಒನ್‍ಪ್ಲಸ್

    ಭಾರತದಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಗೆ ಸಡ್ಡು ಹೊಡೆದ ಒನ್‍ಪ್ಲಸ್

    ನವದೆಹಲಿ: ಚೀನಾ ಒನ್‍ಪ್ಲಸ್ ಕಂಪೆನಿಯು ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್‍ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಮೊಬೈಲ್ ಕಂಪೆನಿಗಳಿಗೆ ಸಡ್ಡು ಹೊಡಿದಿದೆ.

    ಪ್ರೀಮಿಯಂ ಫೋನ್ ಸೆಗ್ಮೆಂಟ್ ವಿಭಾಗದ 2018ರ ಏಪ್ರಿಲ್ – ಜೂನ್ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಒನ್‍ಪ್ಲಸ್ ಕಂಪೆನಿಯು ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

    30 ಸಾವಿರ ರೂ. ಮೇಲ್ದರ್ಜೆಯ ಸ್ಮಾರ್ಟ್ ಫೋನ್‍ಗಳ ವಿಭಾಗದಲ್ಲಿ ಒನ್‍ಪ್ಲಸ್ ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದು, ತನ್ನ ನೂತನ ಒನ್‍ಪ್ಲಸ್ 6 ಮಾದರಿಯ ಸ್ಮಾರ್ಟ್ ಫೋನುಗಳ ಮೂಲಕ ಭಾರತದಲ್ಲಿ ವ್ಯಾಪಕವಾಗಿ ಮಾರಾಟಗೊಳ್ಳುತ್ತಿದೆ. ಈ ಮೊದಲು ಈ ಶ್ರೇಣಿಯಲ್ಲಿದ್ದ ಆಪಲ್ ಮತ್ತು ಸ್ಯಾಮ್ ಸಂಗ್ ಕಂಪೆನಿಗಳ ಸ್ಮಾರ್ಟ್ ಫೋನ್‍ಗಳನ್ನು ಹಿಂದಿಕ್ಕಿದೆ ಎಂದು ಕೌಂಟರ್ ಪಾಯಿಂಟ್ ಸಂಸ್ಥೆ ತಿಳಿಸಿದೆ.

    ಒನ್‍ಪ್ಲಸ್ ತನ್ನ ನೂತನ 6 ಆವೃತ್ತಿಯ ಸ್ಮಾರ್ಟ್ ಫೋನಿಂದ 40% ರಷ್ಟು ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದ್ದರೆ, ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಎಸ್ 9 ಹಾಗೂ ಗ್ಯಾಲಕ್ಸಿ ಎಸ್ 8 ಮಾದರಿಗಳಲ್ಲಿ 34% ರಷ್ಟು ಮಾರುಕಟ್ಟೆಯಲ್ಲಿ ಹೊಂದಿದೆ. ಆಪಲ್ ತನ್ನ ಐಫೋನ್ 8 ಹಾಗೂ ಐಫೋನ್ ಎಕ್ಸ್ ಮಾದರಿಗಳ ಮೂಲಕ 14%ರಷ್ಟು ಹೊಂದುವ ಮೂಲಕ ಕುಸಿತ ಕಂಡಿದೆ. ವಿಶೇಷ ಏನೆಂದರೆ 2017ರ ಈ ಅವಧಿಯಲ್ಲಿ ಒನ್‍ಪ್ಲಸ್ ಕಂಪೆನಿ 9% ಮಾರುಕಟ್ಟೆ ಪಾಲನ್ನು ಹೊಂದಿತ್ತು.

    ಭಾರತದ ಒಟ್ಟು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್ ಗಳ ಪಾಲು 3% ಇದ್ದು, ಒಟ್ಟು ಆದಾಯದಲ್ಲಿ ಇವುಗಳ ಪಾಲು 12% ಆಗಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನುಗಳು ವರ್ಷದಿಂದ ವರ್ಷಕ್ಕೆ 19%ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಈಗ ಒನ್‍ಪ್ಲಸ್ ಕಂಪೆನಿ ಆಫ್‍ಲೈನ್ ಸ್ಟೋರ್ ತೆರೆಯಲು ಮುಂದಾಗಿದ್ದು, ಕಳೆದ ವಾರ ಬೆಂಗಳೂರಿನ ಜಯನಗರದಲ್ಲಿ ಆಫ್‍ಲೈನ್ ಸ್ಟೋರ್ ತೆರೆದಿದೆ. ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 10 ಆಫ್‍ಲೈನ್ ಸ್ಟೋರ್ ತೆರೆಯುವ ಯೋಜನೆ ರೂಪಿಸಿದೆ.

    ಪ್ರಸ್ತುತ ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ನಡುವೆ ನೇರ ಸ್ಪರ್ಧೆಯಿದ್ದು, ಏಪ್ರಿಲ್- ಜೂನ್ ಅವಧಿಯ ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್ ಅತಿ ಹೆಚ್ಚು ಮಾರುಕಟ್ಟೆಯ ಪಾಲನ್ನು ಹೊಂದಿದೆ ಎಂದು ಕೌಂಟರ್ ಪಾಯಿಂಟ್ ತಿಳಿಸಿತ್ತು

     ಕೌಂಟರ್ ಪಾಯಿಂಟ್ ಸಂಸ್ಥೆಯ 2018ರ ಎರಡನೇ ವರದಿಗಳು: