Tag: oneday match

  • ಓಪನರ್ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುತ್ತೇನೆ: ಕೆಎಲ್ ರಾಹುಲ್

    ಓಪನರ್ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುತ್ತೇನೆ: ಕೆಎಲ್ ರಾಹುಲ್

    ಕೇಪ್‍ಟೌನ್: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಓಪನರ್ ಬ್ಯಾಟ್ಸ್​ಮನ್ ಆಗಿ ನಾನೇ ಕಣಕ್ಕೆ ಇಳಿಯುವುದಾಗಿ ಟೀಂ ಇಂಡಿಯಾ ತಂಡದ ನಾಯಕ ಕೆ.ಎಲ್. ರಾಹುಲ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದ ಒಳಿತಿಗಾಗಿ ನಾನು ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ್ದೇನೆ. ಆದರೆ ರೋಹಿತ್ ಶರ್ಮಾ ಇಲ್ಲದ ಕಾರಣ ಈ ಬಾರಿ ನಾನೇ ಓಪನರ್ ಆಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದರು.

    ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಪ್ರಥಮ ಬಾರಿಗೆ ಮುನ್ನಡೆಸಿದ್ದೆ. ಆದರೆ ನಿರಿಕ್ಷಿತ ಮಟ್ಟದಲ್ಲಿ ತಂಡ ಫಲಿತಾಂಶ ಕಾಣಲಿಲ್ಲ. ಇದರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ ಮತ್ತು ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದರು.

    ತಂಡವನ್ನು ಮುನ್ನಡೆಸುವುದು ಎಂದರೆ ಎಲ್ಲರಿಗೂ ವಿಶೇಷ ಜವಾಬ್ದಾರಿಯಾಗಿದೆ. ಅದಕ್ಕೆ ನಾನೇನು ಭಿನ್ನನಲ್ಲ. ನನಗೆ ಟೆಸ್ಟ್ ನಾಯಕನಾಗಿ ಅವಕಾಶ ನೀಡಿದರೆ ಅದು ದೊಡ್ಡ ಜವಾಬ್ದಾರಿಯಾಗಿದೆ. ಅದನ್ನು ಮುನ್ನಡೆಸುತ್ತೇನೆ. ಆದರೆ ನಾನು ಈಗ ನಡೆಯುತ್ತಿರುವ ಪಂದ್ಯಕ್ಕಷ್ಟೇ ಹೆಚ್ಚು ಗಮನವನ್ನು ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ: ಗೌತಮ್ ಗಂಭೀರ್

    ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಏಕದಿನ ಪಂದ್ಯ ಪ್ರಾರಂಭವಾಗಲಿದೆ. ಏಕದಿನ ಸರಣಿಯ ನಾಯಕ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದ್ದಾರೆ. ರೋಹಿತ್ ಅನುಪಸ್ಥಿತಿಯಿಂದ ತಂಡವನ್ನು ಮುನ್ನಡೆಸಲು ಕೆಎಲ್ ರಾಹುಲ್ ತಂಡದ ನಾಯಕರಾಗಿ ಸಿದ್ಧರಾಗಿದ್ದಾರೆ. ಈ ಸರಣಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ರಾಹುಲ್ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಟೆಸ್ಟ್ ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನುವುದಿಲ್ಲ: ಜಸ್‍ಪ್ರೀತ್ ಬೂಮ್ರಾ

    ಟೀಂ ಇಂಡಿಯಾ ಆಟಗಾರರು: ಕೆಎಲ್ ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್, ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

  • ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ  ಒಲಿದ ಅದೃಷ್ಟ

    ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ

    ನವದೆಹಲಿ: ವಾಷಿಂಗ್ಟನ್ ಸುಂದರ್ ಅವರಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಜಯಂತ್ ಯಾದವ್ ಅವರಿಗೆ ದಕ್ಷಿಣ ಆಫ್ರಿಕಾದಲ್ಲೇ ಇರುವಂತೆ ಬಿಸಿಸಿಐ ಸೂಚಿಸಿದೆ.

    ಭಾರತದ ಏಕದಿನ ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮುಂಬರುವ ಏಕದಿನ ಸರಣಿಯಲ್ಲಿ ಸುಂದರ್ ಪಾಲ್ಗೊಳ್ಳುವುದು ಅನುಮಾನವಾಗಿದೆ. ಇದರಿಂದಾಗಿ ಸದ್ಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಆಫ್ ಸ್ಪಿನ್ನರ್ ಜಯಂತ್ ಯಾದವ್ ಏಕದಿನ ಸರಣಿ ಮುಗಿಯುವರೆಗೂ ದಕ್ಷಿಣ ಆಫ್ರಿಕಾದಲ್ಲೇ ಇರುವಂತೆ ಸೂಚಿಸಿದೆ.

    ಏಕದಿನ ಪಂದ್ಯವನ್ನು ಆಡಲು ಇಂದು ಮುಂಬೈನಿಂದ ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್, ರುತುರಾಜ್ ಗಾಯಕ್ವಾಡ್, ದೀಪಕ್ ಚಾಹರ್, ಪ್ರಸಿದ್ಧ್ ಕೃಷ್ಣ, ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್ ಮತ್ತು ಯುಜುವೇಂದ್ರ ಚಾಹಲ್ ಸೇರಿದಂತೆ ಇತರ ಆಟಗಾರರರೊಂದಿಗೆ ವಾಷಿಂಗ್ಟನ್ ಸುಂದರ್ ಅವರು ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಿತ್ತು.

    ದಕ್ಷಿಣ ಆಫ್ರಿಕಾಕ್ಕೆ ತೆರಳುವವರನ್ನು ಮೂರು ದಿನ ಕ್ವಾರಂಟೈನ್ ಮಾಡಿ ಕೊರೊನಾ ಟೆಸ್ಟ್ ಮಾಡಲಾಗಿದೆ. ಆಗ 22 ವರ್ಷದ ಸುಂದರ್ ಅವರಿಗೆ ಕೊರೊನಾ ದೃಢಪಟ್ಟಿದ್ದು, ಸದ್ಯ ಕ್ವಾರಂಟೈನ್ ಆಗಿದ್ದಾರೆ. ಕ್ವಾರಂಟೈನ್‍ಲ್ಲಿದ್ದ ಉಳಿದ ಎಲ್ಲಾ ಇತರ ಆಟಗಾರರ ವರದಿಗಳು ನೆಗೆಟಿವ್ ಬಂದಿವೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಈಗಾಗಲೇ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಇಬ್ಬರೂ ಗಾಯಗೊಂಡು ತಂಡದಿಂದ ಹೊರ ಉಳಿದಿದ್ದಾರೆ. ಜಯಂತ್ ಯಾದವ್ ಅಲ್ಲದೇ ಅಶ್ವಿನ್ ಸಹ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಇಬ್ಬರ ಪೈಕಿ ಒಬ್ಬರಿಗೆ ಅವಕಾಶ ಸಿಗಲಿದೆ. ಯಾದವ್ ಅವರು 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಇದನ್ನೂ ಓದಿ: ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

  • ಐಸಿಸಿ ರ‍್ಯಾಂಕಿಂಗ್‌ನಲ್ಲೂ ಕಿಂಗ್ ಆದ ವಿರಾಟ್ ಕೊಹ್ಲಿ

    ಐಸಿಸಿ ರ‍್ಯಾಂಕಿಂಗ್‌ನಲ್ಲೂ ಕಿಂಗ್ ಆದ ವಿರಾಟ್ ಕೊಹ್ಲಿ

    ದುಬೈ: ವಾರ್ಷಂತ್ಯದಲ್ಲಿ ಐಸಿಸಿ ರ‍್ಯಾಂಕಿಂಗ್‌ ಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್‍ನಲ್ಲಿ ನಂಬರ್ 1 ಪಟ್ಟದಲ್ಲಿ ಮುಂದುವರಿದಿದ್ದಾರೆ. ಸೋಮವಾರ ಪ್ರಕಟವಾದ ಬ್ಯಾಟ್ಸ್ ಮನ್‍ಗಳ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕೆಳಗಿಳಿದಿರುವ ಚೇತೇಶ್ವರ ಪೂಜಾರ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

    ವಿರಾಟ್ ಕೊಹ್ಲಿ 928 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದಾರೆ, 911 ಅಂಕ ಹೊಂದಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ (822) ಹಾಗೂ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್(805) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    ಒನ್ ಡೇ ಕ್ರಿಕೆಟಿನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೊದಲ ಎರಡು ಸ್ಥಾನದಲ್ಲಿ ಭದ್ರವಾಗಿದ್ದಾರೆ. ಕೊಹ್ಲಿ 887 ಅಂಕದಿಂದ ಮೊದಲ ಸ್ಥಾನದಲ್ಲಿದ್ದರೆ, ಹಿಟ್ ಮ್ಯಾನ್ ರೋಹಿತ್ ಶರ್ಮ 884 ಅಂಕದಿಂದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

    ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ವೇಗಿ ಜಸ್‍ಪ್ರೀತ್ ಬೂಮ್ರಾ 794 ಅಂಕ ಪಡೆದು ಆರನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ಕ್ರಮವಾಗಿ 9ನೇ ಮತ್ತು 10ನೇ ಕ್ರಮಾಂಕದಲ್ಲಿದರೆ, ಏಕದಿನ ಪಂದ್ಯದ ಪಟ್ಟಿಯಲ್ಲಿ ಬೂಮ್ರಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

    ಟೀಂ ಇಂಡಿಯ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದರೆ, ಏಕದಿನ ಪಟ್ಟಿಯಲ್ಲಿ ಎರಡನೇ ರ‌್ಯಾಂಕ್‌ನಲ್ಲಿದ್ದು, ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.