ನವದೆಹಲಿ: ಸ್ವಿಚ್ ಆಫ್ ಮಾಡಿ ಹತ್ತಿರವಿಟ್ಟುಕೊಂಡು ಮಲಗಿದಾಗ ಒನ್ ಪ್ಲಸ್ ಮೊಬೈಲ್‍ಗೆ ಬೆಂಕಿ ಹತ್ತಿಕೊಂಡಿರುವ ಘಟನೆ ವರದಿಯಾಗಿದೆ.
ಈ ಘಟನೆ ಜುಲೈ 3ರಂದು ನಡೆದಿದ್ದು, ನಾನು ಸ್ವಿಚ್ ಆಫ್ ಮಾಡಿ ಮಲಗಿದ್ದಾಗ ಕೊಠಡಿಯಲ್ಲಿ ಸುಟ್ಟ ವಾಸನೆ ಬಂದಿತ್ತು. ಕೂಡಲೇ ಎಚ್ಚರಗೊಂಡು ನೋಡಿದಾಗ ಫೋನಿಗೆ ಬೆಂಕಿ ಹೊತ್ತಿಕೊಂಡಿತ್ತು. ಎಸಿ ಇದ್ದ ಕೋಣೆಯಲ್ಲಿ ಕೇವಲ 19 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಇದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಮೊಬೈಲ್ ಬಳಕೆದಾರ ರಾಹುಲ್ ಹಿಮಾಲಯನ್ ತಿಳಿಸಿದ್ದಾರೆ.
https://twitter.com/Chaiti/status/1146424809506713600?
ಇವರ ಸ್ನೇಹಿತೆ ಆಂಗ್ಲ ಮಾಧ್ಯಮದಲ್ಲಿ ಉದ್ಯೋಗದಲ್ಲಿರುವ ಚೈತಿ ನರುಲಂ ಎಂಬವರು ಈ ಬಗ್ಗೆ ಸುಟ್ಟ ಮೊಬೈಲಿನ ಫೋಟೋ ಹಾಕಿ ಒನ್ ಪ್ಲಸ್ ಒನ್ ಕಂಪನಿಗೆ ದೂರು ನೀಡಿ ಸ್ವಿಚ್ ಆಫ್ ಮಾಡಿದ್ದ ಫೋನ್ ಸುಟ್ಟು ಹೋಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ದೂರಿನಲ್ಲಿ ರಾಹುಲ್ ಹಿಮಾಲಯನ್ ವಿವರಿಸಿದ್ದು, ಮಲಗಿದ್ದ ನನಗೆ ಪ್ಲಾಸ್ಟಿಕ್ ಸುಟ್ಟ ವಾಸನೆಯಿಂದ ಎಚ್ಚರವಾಯಿತು. ಎದ್ದು ನೋಡಿದರೆ ರೂಂ ತುಂಬೆಲ್ಲ ಹೊಗೆ ಮತ್ತು ಮೊಬೈಲ್‍ಗೆ ಬೆಂಕಿ ಹತ್ತಿರುವುದು ಕಂಡಿತು. ತಕ್ಷಣವೇ ನಾನು ನೀರು ಹಾಕಿ ಬೆಂಕಿ ನಂದಿಸಿದೆ. ನನಗೆ ಎಚ್ಚರವಾಗದಿದ್ದರೆ ಕೆಲ ಹೊತ್ತಿನಲ್ಲಿ ಮೊಬೈಲ್ ಸ್ಫೋಟಗೊಂಡು ಗಂಭೀರ ಗಾಯವಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾನೆ.

ಒನ್ ಪ್ಲಸ್ ಒನ್ ಐದು ವರ್ಷದ ಹಿಂದಿನ ಮೊಬೈಲ್ ಮಾಡಲ್ ಆಗಿದೆ. ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡರೆ ಮಾರಣಾಂತಿಕ ಗಾಯಗಳಾಗುತ್ತವೆ. ಈ ಕುರಿತು ಒನ್ ಪ್ಲಸ್ ಹಾಗೂ ಅಮೇಜಾನ್ ಜವಾಬ್ದಾರಿಯುತರಾಗಿರಬೇಕು. ತೊಂದರೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಹಿಮಾಲಯನ್ ತಿಳಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ದೂರಿಗೆ ಒನ್ ಪ್ಲಸ್ ಪ್ರತಿಕ್ರಿಯಿಸಿದ್ದು, ಇಂತಹ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿತ್ತೇವೆ. ನಮ್ಮ ತಂಡ ಈಗಾಗಲೇ ಬಳಕೆದಾರರ ಬಳಿ ತೆರಳಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಒನ್‍ಪ್ಲಸ್ ಮೊಬೈಲ್ ಸ್ಫೋಟಗೊಂಡಿರುವುದು ಇದೇ ಮೊದಲಲ್ಲ, 2016ರಲ್ಲಿ ಚಂಡೀಗಢದಲ್ಲಿ ಬಳೆಕೆದಾರರೊಬ್ಬರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು.
