Tag: One Nation One Ration

  • ಜೂನ್ ಒಂದರೊಳಗೆ ದೇಶದ್ಯಾಂತ ಒನ್ ನೇಷನ್, ಒನ್ ರೇಷನ್ ಕಾರ್ಡ್

    ಜೂನ್ ಒಂದರೊಳಗೆ ದೇಶದ್ಯಾಂತ ಒನ್ ನೇಷನ್, ಒನ್ ರೇಷನ್ ಕಾರ್ಡ್

    ನವದೆಹಲಿ: ಜೂನ್ ಒಂದರೊಳಗೆ ದೇಶಾದ್ಯಂತ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

    ಪಾಟ್ನಾದಲ್ಲಿ ಮಾತಾನಾಡಿದ ಅವರು, ಒಂದೇ ರೇಷನ್ ಕಾರ್ಡ್ ಮೂಲಕ ದೇಶದ ಬೇರೆ ಪ್ರದೇಶಗಳಲ್ಲಿ ಅದರ ಲಾಭ ಪಡೆಯಬಹುದು. ಹೊಸ ವರ್ಷದಿಂದ ದೇಶದ 12 ರಾಜ್ಯಗಳಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಈ 12 ರಾಜ್ಯಗಳಲ್ಲಿ ಒಂದೇ ರೇಷನ್ ಕಾರ್ಡ್ ಮೂಲಕ ಪಡಿತರ ಸೌಲಭ್ಯ ಪಡೆಯವ ಅವಕಾಶ ಮಾಡಿಕೊಟ್ಟಿದೆ. ಜೂನ್ ಒಂದರೊಳಗೆ ದೇಶದ್ಯಾಂತ ಇದನ್ನು ವಿಸ್ತರಿಸುತ್ತೇವೆ ಎಂದರು.

    ಈ ಸೌಲಭ್ಯದಡಿ ಸಾರ್ವಜನಿಕ ವಿತರಣಾ ಫಲಾನುಭವಿಗಳು ತಾವಿರುವ ಪ್ರದೇಶದಲ್ಲಿ ಪಡಿತರ ಪಡೆಯಬಹುದು. 2020 ಜೂನ್ 30 ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.

    ಒನ್ ನೇಷನ್ ಒನ್ ರೇಷನ್ ಕಾರ್ಡ್ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಒಂದೇ ರೇಷನ್ ಕಾರ್ಡ್ ಮೂಲಕ ದೇಶದ ಎಲ್ಲ ರಾಜ್ಯದಲ್ಲೂ ಪಡಿತರ ಪಡೆಯುವ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.