Tag: One Day Match

  • ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ – 104 ಬಾಲಲ್ಲಿ 176 ರನ್ ಬಾರಿಸಿದ ಎಬಿ!

    ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ – 104 ಬಾಲಲ್ಲಿ 176 ರನ್ ಬಾರಿಸಿದ ಎಬಿ!

    ಪಾರ್ಲ್: ಬಾಂಗ್ಲಾದೇಶದ ವಿರುದ್ಧದ 2ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. 104 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 15 ಬೌಂಡರಿಗಳ ನೆರವಿನಿಂದ 176 ರನ್ ಗಳಿಸಿ ಔಟಾದರು.

    ಒಂದು ಹಂತದಲ್ಲಿ ಡಿವಿಲಿಯರ್ಸ್ ದ್ವಿಶತಕ ಬಾರಿಸುತ್ತಾರೆ ಎಂಬಂತೆ ಆಟವಾಡುತ್ತಿದ್ದರು. ಆದರೆ ಪಂದ್ಯದಲ್ಲಿ ಇನ್ನೂ 14 ಎಸೆತ ಬಾಕಿ ಇರುವಂತೆಯೇ ರುಬೆಲ್ ಹೊಸೈನ್ ಎಸೆತದಲ್ಲಿ ಶಬ್ಬೀರ್ ರಹಮಾನ್ ಕೈಗೆ ಕ್ಯಾಚ್ ನೀಡಿ ಇನ್ನಿಂಗ್ಸ್ ಅಂತ್ಯಗೊಳಿಸಿದರು. 174 ರನ್ ಏಕದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಗಳಿಸಿದ ಗರಿಷ್ಠ ಮೊತ್ತ.

    43ನೇ ಓವರ್ ನಿಂದ 47ನೇ ಓವರ್ ವರೆಗೆ ತಾನು ಎದುರಿಸಿದ ಒಟ್ಟು 17 ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ್ದು ಡಿವಿಲಿಯರ್ಸ್ ಈ ಇನ್ನಿಂಗ್ಸ್ ನ ವಿಶೇಷತೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ತ್ಯಜಿಸಿದ್ದ ಡಿವಿಲಿಯರ್ಸ್ ಇದೇ ಮೊದಲ ಬಾರಿಗೆ ಆಟವಾಡಲು ಮೈದಾನಕ್ಕಿಳಿದಿದ್ದರು.

    ಹಶೀಂ ಆಮ್ಲ 85 ರನ್ ಗಳಿಸಿ ಔಟಾಗುತ್ತಿದ್ದಂತೆ ವೇಗದ ಆಟಕ್ಕೆ ಒತ್ತು ನೀಡಿದ ಡಿವಿಲಿಯರ್ಸ್ ಒಂದು ಹಂತದಲ್ಲಿ ದ್ವಿಶತಕ ಗಳಿಸುತ್ತಾರೆ ಎಂಬ ಭಾವನೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಮೂಡಿಸಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ 400 ರನ್ ಗಡಿ ದಾಟಲಿದೆ ಎಂಬಂತಿತ್ತು. ಆದರೆ ನಿಗದಿತ 50 ಓವರ್ ಮುಗಿದಾಗ ದಕ್ಷಿಣ ಆಫ್ರಿಕಾ 353 ರನ್ ಗಳಿಸಿತ್ತು.

    354 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ 249 ರನ್ ಗಳಿಸಿ 104 ರನ್ ಗಳಿಂದ ಸೋಲನ್ನೊಪ್ಪಿತು. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಫಿಲುಕ್ವಾಯೋ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. 3 ಪಂದ್ಯಗಳ ಸರಣಿಯಲ್ಲಿ ಆರಂಭದ 2 ಪಂದ್ಯಗಳನ್ನು ಗೆದ್ದು ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.

  • ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಬೆಂಗಳೂರು: ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 21 ರನ್ ಗಳಿಂದ ಸೋಲಿಸಿತು. ಈ ಮೂಲಕ ಸತತ 10 ಗೆಲುವಿನ ಸವಿಯ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಕನಸು ಕನಸಾಗಿಯೇ ಉಳಿಯಿತು.

    50 ಓವರ್ ಗಳಲ್ಲಿ ಗೆಲ್ಲಲು 335 ಟಾರ್ಗೆಟ್ ಬೆನ್ನತ್ತಿದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮಹೇಂದ್ರ ಸಿಂಗ್ ಧೋನಿ ಔಟಾಗುವವರೆಗೆ ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿತ್ತು.

    ಅಜಿಂಕ್ಯಾ ರಹಾನೆ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನೀಡಿದರು. ಮಧ್ಯದಲ್ಲಿ ಬಂದ ಹಾರ್ದಿಕ್ ಪಾಂಡ್ಯ 3 ಸಿಕ್ಸರ್ ಗಳನ್ನು ಸಿಡಿಸಿದರೂ ಭಾರತದ ಗೆಲುವಿಗೆ ಇದು ಸಾಕಾಗಲಿಲ್ಲ. ರಹಾನೆ 53, ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 21, ಪಾಂಡ್ಯ 41, ಕೇದಾರ್ ಜಾಧವ್ 67, ಮನೀಷ್ ಪಾಂಡೆ 33, ಧೋನಿ 13, ಅಕ್ಷರ್ ಪಟೇಲ್ 5, ಮೊಹಮ್ಮದ್ ಶಮಿ 6 ಹಾಗೂ ಉಮೇಶ್ ಯಾದವ್ 2 ರನ್ ಗಳಿಸಿದರು.

    ಆಸ್ಟ್ರೇಲಿಯಾ ಪರವಾಗಿ ರಿಚಡ್ರ್ಸನ್ 3, ಕಾಲ್ಟರ್‍ನೈಲ್2, ಕಮಿನ್ಸ್ ಹಾಗೂ ಝಂಪಾ ತಲಾ 1 ವಿಕೆಟ್ ಗಳಿಸಿದರು.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿಯಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಬಾರಿಸಿದರು. 119 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 124 ರನ್ ಗಳಿಸಿದರು. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟ ಎಷ್ಟಿತ್ತೆಂದರೆ ತಂಡದ ಮೊದಲ ವಿಕೆಟ್ ಪತನವಾಗಿದ್ದತ 35ನೇ ಓವರ್ ನಲ್ಲಿ. 35ನೇ ಓವರ್ ನ ಕೊನೆಯ ಎಸೆತದಲ್ಲಿ ತಂಡದ ಮೊತ್ತ 231 ರನ್ ಆಗಿದ್ದಾಗ ಡೇವಿಡ್ ವಾರ್ನರ್ ಔಟಾದರು. ವಾರ್ನರ್ ಗೆ ಫಿಂಚ್ ಉತ್ತಮ ಜೊತೆಯಾಟ ನೀಡಿದರೂ ಶತಕ ವಂಚಿತರಾದರು. 96 ಎಸೆತಗಳಲ್ಲಿ ಫಿಂಚ್ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 94 ರನ್ ಗಳಿಸಿ ಔಟಾದರು. ಹೆಡ್ 29, ಸ್ಮಿತ್ 3, ಹ್ಯಾಂಡ್ಸ್ ಕಾಂಬ್ 43, ಸ್ಟಾಯ್ನಿಸ್ 15, ವೇಡ್ 3 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್ 4 ಹಾಗೂ ಕೇದಾರ್ ಜಾಧವ್ 1 ವಿಕೆಟ್ ಪಡೆದರು. ನಿಗದಿತ 50 ಓವರ್ ಗಳು ಮುಗಿದಾಗ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತ್ತು.

    https://twitter.com/BCCI_Tv/status/913429402817613824

  • ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಟೀಂ ಇಂಡಿಯಾ ದಾಖಲೆ ಮಾಡುತ್ತಾ..? ಅಥವಾ ಮಳೆರಾಯ ಭಾರತದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕ್ತಾನಾ..?

    ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿ ಪಡೆ ಸತತ 4 ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಹಿಂದೆ ಭಾರತ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನು ಗೆದ್ದಿತ್ತು. 1986ರಲ್ಲಿ 6 ಪಂದ್ಯಗಳ ಸರಣಿಯನ್ನು 3-2 ಹಾಗೂ 2013ರಲ್ಲಿ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು.

    ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯವನ್ನು ಭಾರತ ಗೆದ್ದರೆ ಸತತ 10ನೇ ಜಯ ಗಳಿಸಿದರೆ ಮತ್ತೊಂದು ದಾಖಲೆಯೂ ಭಾರತ ತಂಡಕ್ಕೆ ಸಿಗಲಿದೆ. ಟೀಂ ಇಂಡಿಯಾ ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸತತ 9 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ 2008ರ ನವೆಂಬರ್ ನಿಂದ 2009ರ ಫೆಬ್ರವರಿವರೆಗೆ ನಡೆದ 9 ಪಂದ್ಯಗಳನ್ನು ಸತತವಾಗಿ ಭಾರತ ಗೆದ್ದಿತ್ತು. ಇದೇ ಜುಲೈ 24ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಹಳೆಯ ದಾಖಲೆಯನ್ನು ಸರಿಗಟ್ಟಿದೆ.

    ಈ ವರ್ಷ ಜುಲೈನಲ್ಲಿ ಆಂಟಿಗಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 11 ರನ್ ಗಳಿಗೆ ಸೋತ ಬಳಿಕ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆದರೆ ಆಸ್ಟ್ರೇಲಿಯಾ ಜನವರಿ 26ರಂದು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಂತರ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ 5 ಹಾಗೂ ಆಸ್ಟ್ರೇಲಿಯಾ 6 ಬಾರಿ ಸತತ 10 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. ಸತತ 10 ಏಕದಿನ ಪಂದ್ಯವನ್ನು ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಎರಡೆರಡು ಬಾರಿ ಗೆದ್ದ ದಾಖಲೆ ಮಾಡಿದ್ದರೆ ನ್ಯೂಜಿಲೆಂಡ್ 1 ಬಾರಿ 10 ಪಂದ್ಯವನ್ನು ನಿರಂತರವಾಗಿ ಗೆದ್ದಿದೆ.

     

    ಬೆಂಗಳೂರಿನಲ್ಲಿ ಇಂದಿ ಬೆಳಗ್ಗಿನಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಂಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಾ ಎನ್ನುವುದು ಸದ್ಯದ ಕುತೂಹಲಕಾರಿ ಪ್ರಶ್ನೆ.

     

  • ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಬೆಂಗಳೂರು: ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಆಕ್ರಮಣಕಾರಿ ಆಟವಾಡಿ ವಿಶ್ವದಾಖಲೆ ಮಾಡಿದ್ದಾರೆ.

    ಮೊಯೀನ್ ಅಲಿ ಆಟದ ತೀವ್ರತೆ ಎಷ್ಟಿತ್ತೆಂದರೆ ಕೇವಲ 10 ನಿಮಿಷದಲ್ಲಿ 14 ಬಾಲಲ್ಲಿ 61 ರನ್ ಗಳಿಸಿದ್ದರು.

    45ನೇ ಓವರ್ ನಿಂದ ಆಕ್ರಮಣಕಾರಿ ಆಟಕ್ಕಿಳಿದ ಕಮಿನ್ಸ್ ಹಾಗೂ ಹೋಲ್ಡರ್ ಎಸೆತಗಳನ್ನು ಮನಸೋಇಚ್ಛೆ ಥಳಿಸಿದರು. ಅದರಲ್ಲೂ ಕೊನೆಯ 8 ಬಾಲ್ ನಲ್ಲಿ 6-6-2-4-6-6-6-6 ಬಾರಿಸಿ 42 ರನ್ ಗಳಿಸಿದರು.

    ಈ ಆಟದ ಮೂಲಕ ಮೊಯೀನ್ ಅಲಿ ಇಂಗ್ಲೆಂಡ್ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ವಿಂಡೀಸ್ ವಿರುದ್ಧದ ಈ ಪಂದ್ಯವನ್ನು ಇಂಗ್ಲೆಂಡ್ 124 ರನ್ ಗಳಿಂದ ಗೆದ್ದಿತ್ತು. 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ.

  • 39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಇಂದೋರ್ ನಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದರೆ ಅತ್ತ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಕೂಡಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆರಂಭದ 39 ಎಸೆತಗಳಲ್ಲಿ 39 ರನ್ ಗಳಿಸಿದ್ದ ಮೊಯೀನ್ ಅಲಿ ನಂತರದ 14 ಎಸೆತಗಳಲ್ಲಿ 61 ರನ್ ಗಳಿಸಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 7ನೇ ಕ್ರಮಾಂಕದಲ್ಲಿ ಬಂದು 57 ಎಸೆತಗಳಲ್ಲಿ ಒಟ್ಟು 102 ರನ್ ಗಳಿಸಿದರು. ಈ ಮೊದಲು ಈ ದಾಖಲೆ ಜೇಮ್ಸ್ ಫೌಲ್ಕನರ್ ಹೆಸರಿನಲ್ಲಿತ್ತು.

    44ನೇ ಓವರ್ ಮುಗಿಯುವವರೆಗೆ ಶಾಂತವಾಗಿ ಆಡುತ್ತಿದ್ದ ಅಲಿ 45ನೇ ಓವರ್ ನಲ್ಲಿ ಆಕ್ರಮಣಕಾರಿ ಆಟಕ್ಕಿಳಿದರು. ಈ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ ಅಲಿ 8 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. ಅಲಿ ಆಟದಿಂದಾಗಿ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿತು.

    ಕೊನೆಯ 8 ಎಸೆತಗಳಲ್ಲಿ ಮೊಯೀನ್ 42 ರನ್ ಗಳಿಸಿದರು. ಈ 8 ಎಸೆತಗಳಲ್ಲಿ ಅವರು ಕ್ರಮವಾಗಿ 6-6-2-4-6-6-6-6 ರನ್ ಗಳಿಸಿದರು.

    ಮೊಯೀನ್ ದಾಖಲಿಸಿದ ಶತಕ ಇಂಗ್ಲೆಂಡ್ ಪರ 2ನೇ ಆತಿ ವೇಗದ ಶತಕ ಎಂಬ ದಾಖಲೆಗೆ ಪಾತ್ರವಾಯಿತು. ಇಂಗ್ಲೆಂಡ್ ನ ಜೋಸ್ ಬಟ್ಲರ್ 2005ರ ನವೆಂಬರ್ ನಲ್ಲಿ 46 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.

  • ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಆಟ – ಟೀಂ ಇಂಡಿಯಾಗೆ 9 ವಿಕೆಟ್ ಗೆಲುವು

    ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಆಟ – ಟೀಂ ಇಂಡಿಯಾಗೆ 9 ವಿಕೆಟ್ ಗೆಲುವು

    ಡಂಬುಲ್ಲಾ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ದಾಖಲಿಸಿ ಭಾರತದ ಗೆಲುವಿನ ರೂವಾರಿಯಾದರು.

    ಶಿಖರ್ ಧವನ್ 90 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 20 ಬೌಂಡರಿಗಳ ನೆರವಿನಿಂದ 132 ರನ್ ಗಳಿಸಿದರು. ವಿರಾಟ್ ಕೊಹ್ಲಿ 70 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು. ಟೀಂ ಇಂಡಿಯಾ ಕೇವಲ 28.5 ಓವರ್ ಗಳಲ್ಲಿ 220 ರನ್ ಗಳಿಸಿ ಏಕದಿನ ಪಂದ್ಯದ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು.

    ಗೆಲ್ಲಲು 216 ರನ್ ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಭಾರತ ಮೊದಲ ವಿಕೆಟನ್ನು 5ನೇ ಓವರ್ ನಲ್ಲಿ ಕಳೆದುಕೊಂಡಿತು. ರನ್ ಗಳಿಸಲು ಓಡುತ್ತಿದ್ದ ರೋಹಿತ್ ಶರ್ಮಾ ಸ್ಟಂಪ್ ತಲುಪುವ ವೇಳೆ ಬ್ಯಾಟ್ ಕೈತಪ್ಪಿದ್ದರಿಂದ ಶರ್ಮಾ ರನೌಟ್ ಆಗಬೇಕಾಯಿತು.

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ಆರಂಭಿಕ ಆಟಗಾರರು ಮೊದಲ ವಿಕೆಟ್ ಗೆ 74 ರನ್ ಗಳ ಜೊತೆಯಾಟ ನೀಡಿದರು. ಆದರೆ 14ನೇ ಓವರ್ ನಲ್ಲಿ ಚಹಲ್ ಎಸೆತಕ್ಕೆ ಶ್ರೀಲಂಕಾದ ಆರಂಭಿಕ ಆಟಗಾರ ಗುಣತಿಲಕ 35 ರನ್ ಗಳಿಸಿ ಔಟಾದರು. 25ನೇ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ್ದ ಶ್ರೀಲಂಕಾ 43.2 ಓವರ್ ಗಳಲ್ಲಿ ಕೇವಲ 216 ರನ್ ಗಳಿಗೆ ಆಲೌಟಾಯ್ತು.

    ಟೀಂ ಇಂಡಿಯಾ ಪರವಾಗಿ ಅಕ್ಷರ್ ಪಟೇಲ್ 3, ಕೇದಾರ್ ಜಾಧವ್, ಚಾಹಲ್ ಹಾಗೂ ಬೂಮ್ರಾ ತಲಾ 2 ವಿಕೆಟ್ ಗಳಿಸಿದರು.