Tag: omni

  • ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಓಮ್ನಿ

    ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಓಮ್ನಿ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ 5 ಗಂಟೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮಳಿಗೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೈಸೂರು ಮೂಲದ ಲೀಲಾವತಿ(54) ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಗಾಯಗೊಂಡಿದ್ದಾರೆ.

    ಲೀಲಾವತಿ ಅವರ ಕುಟುಂಬ ಮೈಸೂರಿನಿಂದ ಶೃಂಗೇರಿಗೆ ಬಂದಿದ್ದರು. ಶೃಂಗೇರಿಗೆ ಹೋಗುವಾಗ ದಾರಿ ತಿಳಿಯದೇ ಜಯಪುರುದ ಮಾರ್ಗದ ಬಳಿ ಹೋಗಿದ್ದಾರೆ. ಅಲ್ಲಿಂದ ಕೊಪ್ಪಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಂದಕಕ್ಕೆ ಉರುಳಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಗಾಯಾಳುಗಳನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಜಯಪುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆರೆಗೆ ಉರುಳಿ ಬಿತ್ತು ಓಮ್ನಿ- ಈಜಿ ದಡ ಸೇರಿದ ಚಾಲಕ

    ಕೆರೆಗೆ ಉರುಳಿ ಬಿತ್ತು ಓಮ್ನಿ- ಈಜಿ ದಡ ಸೇರಿದ ಚಾಲಕ

    ಹಾವೇರಿ: ಕೆರೆಗೆ ಓಮ್ನಿ ಕಾರೊಂದು ಉರುಳಿ ಬಿದ್ದು, ಚಾಲಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕರೇಕ್ಯಾತನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಓಂಕಾರಯ್ಯ(40) ಈಜಿ ದಡ ಸೇರಿದ ಚಾಲಕ. ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಓಮ್ನಿ ಉರುಳಿ ಬಿದ್ದಿದೆ. ನಂತರ ಜೀವ ಉಳಿಸಿಕೊಳ್ಳಲು ಚಾಲಕ ಈಜಿ ದಡ ಸೇರಿದ್ದಾನೆ. ಕೆರೆಗೆ ತಡೆ ಗೋಡೆ ಇಲ್ಲದ್ದರಿಂದ ಓಮ್ನಿ ಕೆರೆಗೆ ಉರುಳಿದೆ.

    ಮಂಗಳವಾರ ರಾತ್ರಿ ಕೆರೆಯ ಪಕ್ಕದಲ್ಲಿದ್ದ ರಸ್ತೆಯಲ್ಲಿ ಓಂಕಾರಯ್ಯ ಓಮ್ನಿ ಚಲಾಯಿಸಿಕೊಂಡು ಬರುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿಗೆ ದಾರಿ ನೀಡಲು ಹೋಗಿ ನಿಯಂತ್ರಣ ತಪ್ಪಿ ಕೆರೆಗೆ ವಾಹನ ಪಲ್ಟಿಯಾಗಿದೆ. ಓಮ್ನಿಯಲ್ಲಿ ಪ್ರಯಾಣಿಕರು ಇಲ್ಲದ್ದರಿಂದ ಭಾರಿ ದುರಂತ ತಪ್ಪಿದೆ.

    ಕೆರೆಯ ದಂಡೆಯ ಮೇಲೆ ನಿತ್ಯವೂ ನೂರಾರು ವಾಹನಗಳು ಓಡಾಡುತ್ತವೆ. ಆದರೂ ಕೂಡ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲವೆಂದು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಘಟನೆ ಕುರಿತು ಆಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

    ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

    ಯಾದಗಿರಿ: ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸುತ್ತಲೂ ಹೊಗೆ ಆವರಿಸಿದರಿಂದ ಬಸ್ ಮತ್ತು ಓಮನಿ ನಡುವೆ ಡಿಕ್ಕಿ ಸಂಭವಿಸಿದೆ.

    ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಡಗೇರಾ ಕ್ರಾಸ್ ಬಳಿ ಘಟನೆ ನಡೆದಿದೆ. ಓಮ್ನಿ ವಾಹನವು ಯಾದಗಿರಿಯಿಂದ ಹಾಲಿಗೇರಿಗೆ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ವಡಗೇರಾ ಕ್ರಾಸ್ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಹೊಗೆ ತುಂಬಿಕೊಂಡಿದ್ದು, ರಸ್ತೆ ಕಾಣುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಓಮ್ನಿ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

    ಓಮ್ನಿಯಲ್ಲಿದ್ದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದ ಜಮೀನಿಲ್ಲಿ ಬೆಂಕಿ ಬಿದ್ದು ಹೊಗೆಯಾಗಿದ್ದರಿಂದಲೇ ಈ ಅವಘಢ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ವಡಗೇರಾ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೈದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಜೀವಂತ ಸಮಾಧಿ ಮಾಡಲು ಮುಂದಾಗಿದ್ದವರು ಅರೆಸ್ಟ್!

    ಬೈದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಜೀವಂತ ಸಮಾಧಿ ಮಾಡಲು ಮುಂದಾಗಿದ್ದವರು ಅರೆಸ್ಟ್!

    ಬೆಂಗಳೂರು: ಅಪಘಾತ ಮಾಡಿದವನ ಮೇಲೆ ಬಾಯಿಗೆ ಬಂದಂತೆ ಬೈದಿದ್ದಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಪ್ರವೀಣ್ ಅಪಹರಣಕ್ಕೆ ಒಳಗಾದ ಯುವಕ. ಸಂತೋಷ್, ಅರ್ಜುನ್, ಮುತ್ತು, ಜೀವಾ, ಮುರಳಿ ಪ್ರವೀಣ್ ನನ್ನು ಅಪಹರಣ ಮಾಡಿ ಕೊಲೆ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಶುಕ್ರವಾರ ರಾತ್ರಿ ರಸ್ತೆಯಲ್ಲಿ ಓಮ್ನಿ ಕಾರು ಡಿಯೋಗೆ ಡಿಕ್ಕಿ ಹೊಡೆದಿತ್ತು. ಈ ವಿಚಾರದ ಬಗ್ಗೆ ಡಿಯೋ ಓಡಿಸುತ್ತಿದ್ದ ಪ್ರವೀಣ್ ಓಮ್ನಿ ಚಾಲಕನಿಗೆ ಬಾಯಿಗೆ ಬಂದಂತೆ ಬೈದಿದ್ದ. ಎಲ್ಲರ ಎದುರು ಅವಮಾನ ಮಾಡಿದ ಎಂದು ಕಾರನ್ನು ಓಡಿಸ್ತಾ ಇದ್ದವರು ಪ್ರವೀಣ್ ನನ್ನು ಕಿಡ್ನ್ಯಾಪ್ ಮಾಡಿದ್ದರು.

    ಕಿಡ್ನ್ಯಾಪ್ ಮಾಡಿ ಮುನಿಸ್ವಾಮಪ್ಪ ಪಾಳ್ಯದಲ್ಲಿರುವ ಸ್ಮಶಾನಕ್ಕೆ ಹೋಗಿ ಹೊಡೆದು ಗುಂಡಿಯಲ್ಲಿ ಪ್ರವೀಣ್ ನನ್ನು ಜೀವಂತ ಸಮಾಧಿ ಮಾಡಲು ಪ್ಲಾನ್ ಮಾಡಿದ್ದರು. ಅಷ್ಟರಲ್ಲಿ ಸ್ಥಳೀಯರು ಕಿಡ್ನ್ಯಾಪ್ ಮಾಡಿದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳ ಪೈಕಿ ಒಬ್ಬನ ಅಜ್ಜ ಸ್ಮಶಾನವನ್ನು ಕಾಯುತ್ತಿದ್ದರು. ಹೀಗಾಗಿ ಹಲ್ಲೆ ಮಾಡಿ ಹೂತು ಹಾಕುವ ಉದ್ದೇಶದಿಂದ ಪ್ರವೀಣ್ ನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

  • ಆಂಧ್ರ ಬಸ್ ಡಿಕ್ಕಿಯಾಗಿ ಮಗುಚಿ ಬಿದ್ದ ಓಮ್ನಿ: ಓರ್ವನ ಕಾಲು ಮುರಿತ

    ಆಂಧ್ರ ಬಸ್ ಡಿಕ್ಕಿಯಾಗಿ ಮಗುಚಿ ಬಿದ್ದ ಓಮ್ನಿ: ಓರ್ವನ ಕಾಲು ಮುರಿತ

    ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಸ್ ಮತ್ತು ಒಮ್ನಿ ನಡುವೆ ಅಪಘಾತ ಸಂಭವಿಸಿದೆ.

    ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಾರ್ಕೆಟ್ ಕಡೆಯಿಂದ ರಾಮಮೂರ್ತಿನಗರಕ್ಕೆ ಹೊಗುತ್ತಿದ್ದ ಓಮ್ನಿ ಕಾರಿಗೆ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

    ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮಗುಚಿಬಿದ್ದಿದೆ. ಕಾರನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಗೋಪಾಲ್ ಎನ್ನುವವರ ಕಾಲು ಮುರಿದಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

    ಸದ್ಯ ಗಾಯಾಳು ಗೋಪಾಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಜೆಸಿಬಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕಾರಿಗೆ ಡಿಕ್ಕಿ: ದಂಪತಿ ದುರ್ಮರಣ

    ಜೆಸಿಬಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕಾರಿಗೆ ಡಿಕ್ಕಿ: ದಂಪತಿ ದುರ್ಮರಣ

    ಚಿಕ್ಕಬಳ್ಳಾಪುರ: ತಮಿಳುನಾಡು ಮೂಲದ ಆರ್ ಸಿ ಸಿ ಎಲ್ ಕನ್ ಸ್ಟ್ರಕ್ಷನ್ ಕಂಪನಿಗೆ ಸೇರಿದ ಲಾರಿಯೊಂದು ಓಮ್ನಿ ಇಕೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಕಾಪುರ ಗೇಟ್ ಬಳಿ ನಡೆದಿದೆ. ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹುಣೇಸಹಳ್ಳಿ ಗ್ರಾಮದ 50 ವರ್ಷದ ವೇಣುಗೋಪಾಲ ಶರ್ಮಾ ಹಾಗೂ ಅವರ ಪತ್ನಿ ಸ್ವರ್ಣಲತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದಂಪತಿಯ ಮೂವರು ಮಕ್ಕಳಾದ ರಮ್ಯಾ, ಮಾನಸಾ ಮತ್ತೊಂದು ಚಿಕ್ಕ ಮಗು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಮಿಳುನಾಡು ಮೂಲದ ರಾಮಲಿಂಗಂ ಕನ್ ಸ್ಟ್ರಕ್ಷನ್ ಗೌರಿಬಿದನೂರು ಬಳಿ ಹೆದ್ದಾರಿ ಕಾಮಗಾರಿ ನಡೆಸುತ್ತಿದೆ. ಹೀಗಾಗಿ ಕಾಮಗಾರಿಗಾಗಿ ಜೆಸಿಬಿಯನ್ನ ಲಾರಿ ಮುಖಾಂತರ ಮತ್ತೊಂದೆಡೆಗೆ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

    ಘಟನೆ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.